ಮಂಗಳವಾರ, ಡಿಸೆಂಬರ್ 20, 2016

                      ಮರೆಯಾಗುತ್ತಿರುವ ಮರ ಡೇಲಿಯಾ...!?

                         ಸಚಿತ್ರ ಬರಹ: ಕೂಡಂಡ ರವಿ,  ಹೊದ್ದೂರು. 





ನಮ್ಮ ಪೂರ್ವಜರ ಮನೆಯನ್ನು, ಮನವನ್ನು ಬೆಳೆಗುತ್ತಿದ್ದ ಅಪೂರ್ವ ಪುಷ್ಪಗಳಲ್ಲಿ ಡೇಲಿಯಾವೂ ಒಂದಾಗಿತ್ತು. ಮಳೆಗಾಲದಲ್ಲಿ ಮಾತ್ರ ಹೂ"ನ ರಾಣಿಯಾಗಿ ಮೆರೆಯುತ್ತಿದ್ದ ಈ ಹೂ"ವಿನ ವೈವಿಧ್ಯಗಳಲ್ಲೊಂದಾದ ಮರಡೇಲಿಯಾವು ಇದೀಗ ಅವನತಿಯ ಅಂಚಿಗೆ ಸಾಗಿ ಹೋಗಿರುವುದು ಪುಷ್ಪ ಪ್ರಿಯರನ್ನು ಕಂಗೆಡುವಂತೆ ಮಾಡಿದೆ.
ಹೂವುಗಳ ಗೊಂಚಲಿನ ಶೋಭೆ
ನಮ್ಮೂರಿನಲ್ಲಿ  ಸತತವಾಗಿ ಆರು ತಿಂಗಳು  ಮಳೆ ಬರುತ್ತಿದ್ದ ದಿನಗಳಲ್ಲಿಯೂ ಮರ ಡೇಲಿಯಾವೆಂಬ ಸುಂದರ ಹೂ"ನ ಗಿಡ ಸಲೀಸಾಗಿ ಬೆಳೆಯುತ್ತಿತ್ತು. ಅದೂ  ಕವಲು ರ"ತವಾಗಿ  ಸರಿ ಸುಮಾರು 20 ರಿಂದ 30 ಅಡಿ ಎತ್ತರ !  ಅದರ ತುಟ್ಟ ತುದಿಯಲ್ಲಿ  ಸುಮಾರು 30 ರಿಂದ 40 ಹೂ ಮೊಗ್ಗುಗಳ ಗೊಂಚಲು ! ಸರ್ವೆ ಸಾಮಾನ್ಯವಾಗಿ  ಡೇಲಿಯಾ ಜಾತಿಯ ಗಿಡಗಳಲ್ಲಿ ಗೊಂಚಲಾಗಿ ಹೂವು ಅರಳುವುದು ತೀರಾ "ವಿರಳ. ಆದರೆ, ಮರ ಡೇಲಿಯಾವು ಅ"ಭಕ್ತ ಕುಟುಂಬದಂತೆ.  ಹೂವುಗಳು ಅರಳಲು ಆರಂಭವಾದರೆ, ಗೊಂಚಲಿನಲ್ಲಿ ಸರಾಸರಿ ಪ್ರತಿದಿನವೂ ಐದಾರು ಹೂವುಗಳು ತಿಂಗಳಾನುಗಟ್ಟಲೆ ಅರಳುತ್ತಿರುತ್ತವೆ. ಇದು ನಿತ್ಯಪುಷ್ಪವೆಂದರೂ ತಪ್ಪಾಗಲಿಕ್ಕಿಲ್ಲ.
ಚಳಿಗಾಲದಲ್ಲಿ ಅರಳುವ ಹೂವು
ಮೆಜೆಂಟಾ ( ಹೊಸ 2000 ನೋಟಿನ ) ಬಣ್ಣದ ಹೂವು ಸವರ್ೇ ಸಾಮಾನ್ಯವಾಗಿ ಅಕ್ಟೋಬರ್ ದ್ವಿತೀಯ ವಾರದಿಂದ ಡಿಸೆಂಬರ್ ಮಧ್ಯಭಾಗದವರೆಗೆ ಅರಳುತ್ತವೆ. ಹೂ"ನಲ್ಲಿ ಐದು ಎಸಳುಗಳಿದ್ದು, ಹೂ"ನ ಮಧ್ಯಭಾಗವು ಅರಸಿನ ಬಣ್ಣದಿಂದ ಕೂಡಿರುತ್ತದೆ. ಇದರ ಕಾಂಡವು ಟೊಳ್ಳಾಗಿದ್ದರೂ ಮಳೆಯೊಡನೆ ಬರುವ ಬಿರುಗಾಳಿಗೂ ಮುರಿಯುವುದಿಲ್ಲ. ಗೆಡ್ಡೆಯ ರೂಪದಲ್ಲಿರುವ ಇದು ಮಳೆಗಾಲ ಆರಂಭವಾದಾಗ ಚಿಗುರುತ್ತದೆ. ಗೆಡ್ಡೆಗಳ ಮುಖಾಂತರ ಸಂತಾನಾಭಿವೃದ್ಧಿ ಮಾಡಬಹುದಾಗಿದೆ. ಬೇಲಿಯ ಅಂಚಿನಲ್ಲಿ ನೆಟ್ಟು  ಸುರಕ್ಷಿತವಾಗಿ ಕಾಪಾಡಿದರೇ ಹತ್ತಾರು ವರ್ಷ ನಿಮ್ಮ  ಮನವನ್ನು ಸೆಳೆಯಬಲ್ಲದು- ಮನಕ್ಕೆ ಮುದ ನೀಡಬಲ್ಲದು.
ನಾಪತ್ತೆಯಾಗುವ ಭಯ..!
ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ಅಪೂರ್ವ ಪುಷ್ಪ ನಳ ನಳಿಸಿ ನಗುವನ್ನು ಬೀರುತ್ತಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಪುಷ್ಪ ಪ್ರಿಯರ ಗಮನವೂ ಬದಲಾಗುತ್ತಾ ಸಾಗಿತು. ಆಧುನಿಕತೆಗೆ ತಕ್ಕಂತೆ ಮನೆಯಂಗಳಲ್ಲಿ ಅರಳಿ ನಗುವ ಹೂ ಬದಲಾಗುತ್ತಾ ಸಾಗಿತು. ಡೇಲಿಯಾ ಹೂವು ಕೆಲವರ ಮನೆಯಂಗಳಕ್ಕೆ   ಮೀಸಲಾಯಿತು.  ನಮ್ಮ ಊರಿನ, ರಾಜ್ಯದ ದೇಶದ ಹೂವುಗಳನ್ನು ಸಹಸ್ರಾರು ರೂಪಾಯಿ  ನೀಡಿ, ಖರೀದಿಸಿ ತಂದು ಬೆಳೆಸಲು ಆರಂಭಿಸಿದರು. ಅವುಗಳಲ್ಲಿ ಬಹುತೇಕವು ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲಾರದೇ ಗಿಡ ತಂದು ಒಂದೆರಡು ವಾರದಲ್ಲಿ ಒಣಗಿ ಹೋಗುತ್ತಿತ್ತು. ಆದರೂ, ಛಲ ಬಿಡದ ತ್ರಿ"ಕ್ರಮರಂತೆ ಹೂವು ಪ್ರಿಯರು ಅಲ್ಲಿ- ಇಲ್ಲಿ ಅರಳಿ ನಗುತ್ತಿದ್ದ ಹೂವನ್ನು ನೆಡಲಾರಂಭಿಸಿದರು. ಇದರ ಪರಿಣಾಮ ನಮ್ಮ ಸಾಂಪ್ರಾದಾುಕ ಹೂ"ವಿನ ತಳಿಗಳು ತಮ್ಮ ಇರುವನ್ನು ಸಾಬೀತು ಪಡಿಸಲು ಹರ ಸಾಹಸ ಪಡಬೇಕಾಗಿ ಬಂತು. ಅದೇ ರೀತಿಯ ದುರ್ದೆಶೆ  ಮರ ಡೇಲಿಯಾಕ್ಕೂ ಬಂದಿದೆ ಎಂದು ಖೇದದಿಂದ  ಬರೆಯಬೇಕಾಗಿ ಬಂದಿರುವುದು ವಿಪರ್ಯಾಸವೇ  ಸರಿ.

ಶನಿವಾರ, ಡಿಸೆಂಬರ್ 17, 2016

      'ಕುದುರೆ ಬಾಲ'ದಿಂದ ಸ್ವಾವಲಂಬಿ

           ಬರಹ: ಕೂಡಂಡ ರವಿ


ಬಹುತೇಕ ಕೃಷಿಕರು ವಿವಿಧ ಕರಿಮೆಣಸಿನ ತಳಿಯನ್ನು ಬೆಳೆಸಿದ್ದಾರೆ. ಅಕ್ಕಪಕ್ಕದವರ ಮನೆ- ತೋಟಗಳಲ್ಲಿ ನೋಡಿದ್ದಾರೆ. ವಿಯಾಟ್ನಾಂ, ಕಾಂಬೋಡಿಯಾಗಳಲ್ಲಿ ಪೊದರು ಕಾಳುಮೆಣಸು ಬಳ್ಳಿಗಳು ಬಹು ಜನಪ್ರಿಯ. ನಮ್ಮಲ್ಲಿ ಈ ರೀತಿಯ ಪ್ರಯೋಗಗಳು ನಡೆದೇ ಇಲ್ಲ. ಅಥವಾ ತೀರಾ ಕಡಿಮೆ ಎನ್ನಬಹುದು. ಕೇವಲ ಮುಕ್ಕಾಲು ಎಕರೆ ಪ್ರದೇಶದಲ್ಲಿ ಬರೇ ಕಾಳುಮೆಣಸು ಬಳ್ಳಿಯಿಂದಲೇ ಸ್ವಾವಲಂಬಿಯಾಗಿ ಜೀವಿಸುತ್ತಿರುವ ಕೇರಳದ ಪ್ರಗತಿಪರ ಕೃಷಿಕರ ಯಶೋಗಾಥೆ ಇಲ್ಲಿದೆ. ಓದಿ.



ಇವು ಅವೆಲ್ಲಕ್ಕಿಂತ ವಿಭಿನ್ನ ತಳಿ ಕುದುರೆ ಬಾಲ ಎಂಬ ಹೆಸರಿನ ಕರಿಮೆಣಸಿನ ತಳಿ. ನೆರೆಯ ರಾಜ್ಯ ಕೇರಳದ ಇಡುಕ್ಕಿ ಜಿಲ್ಲೆಯ ಸಣ್ಣ ಹಿಡುವಳಿದಾರ ಜೋಸ್ ಅವರು  ಈ ಅಪೂರ್ವ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ವೈಶಿಷ್ಟ್ಯಮಯ ತಳಿಗೆ ಅವರು ಇಟ್ಟ ಅಪೂರ್ವ ಹೆಸರು ಕುದುರೆವಾಲ್ ಹಾಗಂದರೆ, ಮಲೆಯಾಳ ಭಾಷೆಯಲ್ಲಿ ಕುದುರೆಯ ಬಾಲ ಎಂಬ ಅರ್ಥವಿದೆ.
ಆ  ತಳಿಯ ಮೂಲ  ಪೂರ್ವಜರ ಕಾಲದಿಂದಲೇ ಅವರ ಜಮೀನಿನಲ್ಲೇ ಇತ್ತಂತೆೆ ! ಇದು ಇತರ ತಳಿಗಿಂತ ಉದ್ದವಾಗಿರುತ್ತದೆ. ಜಳ್ಳಿನ ಪ್ರಮಾಣ ತೀರಾ ಕಡಿಮೆ. ಆದರೇ, ಒಂದೇ ಮೈನಸ್ ಪಾಯಿಂಟ್ ಇದಕ್ಕೆ ಕಾಯಿಲೆಗಳನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಅಥವಾ ಇಲ್ಲವೇ ಇಲ್ಲ. ಈ ತಳಿಯ ಈ ಗುಣದಿಂದಾಗಿ ಈ ವೈಶಿಷ್ಟ್ಯಮಯ ತಳಿಯನ್ನು ಅಭಿವೃದ್ಧಿ ಪಡಿಸಲು ಅವರಿಗೆ ಮನಸ್ಸೇ ಬರಲಿಲ್ಲವಂತೆ!



ಕೆಲವರ್ಷಗಳ ಹಿಂದೆ ಅವರು ಈ ತಳಿಯನ್ನು ಕಾಡುಹಿಪ್ಪಲಿ ಗಿಡಕ್ಕೆ ಕಸಿ ಮಾಡಿ ಅಭಿವೃದ್ಧಿಪಡಿಸಿದರು. ಮೊದಮೊದಲು ಅದರಲ್ಲಿ ಯಶಸ್ಸು ಸಾಧಿಸದಿದ್ದರೂ, ಅವರ ಪ್ರಯತ್ನಕ್ಕೆ ಫಲ ನಂತರ ಸಿಕ್ಕಿತು. ನಂತರದ ದಿನಗಳಲ್ಲಿ ಇದನ್ನು ಛಲವಾಗಿ ಸ್ವೀಕರಿಸಿದ ಅವರು, ಅದನ್ನು ವಾಣಿಜ್ಯ ಉದ್ಧೇಶಕ್ಕಾಗಿ ಪರಿವ.ರ್ತಿಸದರು.  ಈ ತಳಿಯ ಬಳ್ಳಿಗಳನ್ನು ಪೊದರು ಗಿಡವಾಗಿ ಮಾರ್ಪಡಿಸಿದರು. ಅಕ್ಕ ಪಕ್ಕದ ಜನತೆ ಇದನ್ನು ಕಂಡು ಆಶ್ಚರ್ಯಚಕಿತರಾಗುವುದರ ಜೊತೆಗೆ ಖರೀದಿಸಿ ತಾವು ನೆಟ್ಟರು. ಜೋಸ್ ಅವರ ಬಳಿ ಈ ತಳಿಯ ಸುಮಾರು 100ಕ್ಕೂ ಅಧಿಕ ಮರವೇರುವ ಬಳ್ಳಿಗಳಿವೆ. ಇದರಲ್ಲಿ ಸುಮಾರು 200ಕೆ.ಜಿ. ಮೆಣಸು ಕೊಯ್ಲು ಮಾಡಿದ್ದಾರೆ. ಪ್ರತಿ ಬಳ್ಳಿಯಿಂದ ಇವರಿಗೆ ಸರಾಸರಿ 2-3 ಕೆ.ಜಿ. ಒಣ ಕರಿಮೆಣಸು ಸಿಗುತ್ತದೆ. ಹಲವಾರು ಕರಿಮೆಣಸಿನ ತಳಿಗಳು ವರ್ಷವೂ ಸರಾಸರಿ ಮೆಣಸನ್ನು ಕೊಡುವುದಿಲ್ಲ. ಆದರೆ, ಈ ಬಳ್ಳಿ ಹಾಗಲ್ಲ. ಇದು ವಾರ್ಷಿಕ ಎರಡು ಬಾರಿ ಇಳುವರಿ ನೀಡುತ್ತದೆ ! . ಒಂದು ಬಾರಿ ಕಡಿಮೆ ಇಳುವರಿ ನೀಡಿದರೆ, ಮತ್ತೊಮ್ಮೆ ಅಧಿಕ. ಇಡುಕ್ಕಿ ಜಿಲ್ಲೆಯ ತಡಿಯಂಪಾರ್ ಅಲ್ಲಿನ ಜನತೆ ಹೆಚ್ಚು ಪರಿಚಿತ. ಅಲ್ಲಿಗೆ ಸಮೀಪದಲ್ಲಿಯೇ ಜೋಸ್ ಅವರ ಮನೆ ಇದೆ. ಅವರು ಕೇವಲ ಮುಕ್ಕಾಲು ಎಕರೆ ಜಮೀನು ಮಾತ್ರ ಹೊಂದಿದ್ದಾರೆ. ಅಲ್ಲಿಯೇ ಅವರು ವೈಶಿಷ್ಟ್ಯಮಯ ಕುದುರೆವಾಲ್ ತಳಿಯ ಕರಿಮೆಣಸಿನ ಬಳ್ಳಿಗಳನ್ನು ಮಾರುತ್ತಿದ್ದಾರೆ. ನೇರವಾಗಿ ಮರಕ್ಕೆ ಹಬ್ಬಿಸುವ ಬಳ್ಳಿಯ ಪೊಟ್ಟಣಕ್ಕೆ ನೂರು ರೂಪಾಯಿ. ಕಸಿ ಕಟ್ಟಿದ ಪೊದೆ (ಬುಶ್) ಕಾಳುಮೆಣಸಿನ ಬಳ್ಳಿಗೆ 200 ರೂಪಾಯಿಗಳು.
ನಮ್ಮ ಜಿಲ್ಲೆಯಲ್ಲಿಯೂ ಪೊದರು ಕಾಳು ಮೆಣಸು ಬೆಳೆಯುವುದರಿಂದ  ಅಪಾರ ವರಮಾನ ಗಳಿಸುವ ಹೇರಳ ಅವಕಾಶಗಳಿವೆ. ಇಂತಹ ಕೃಷಿ ಅನುಭವಗಳನ್ನು ನಾವು ಬಳಸಿಕೊಂಡಲ್ಲಿ ನಾವು ಸ್ವಾವಲಂಬಿಗಳಾಗಬಹುದಾಗಿದೆ. ಆದರೆ, ನಮ್ಮ ಕೃಷಿಕರು ಈ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ.
(ಆಧಾರಿತ ಬರಹ)
                                                    ಜೋಸ್ ಅವರ ದೂರವಾಣಿ ಸಂಖ್ಯೆ- 8547405132