ಶನಿವಾರ, ಅಕ್ಟೋಬರ್ 6, 2018

ಉಚಿತ ಸಿರಿಧಾನ್ಯಗಳ ಬೀಜ ವಿತರಣೆ

ಪ್ರಕೃತಿ ಪರಿಸರ 

ಉಚಿತ  ಸಿರಿಧಾನ್ಯಗಳ ಬೀಜ ವಿತರಣೆ

 ಬರಹ: ಕೂಡಂಡ ರವಿ, ಹೊದ್ದೂರು. 


ಸಿರಿಧಾನ್ಯದ ಬೀಜಗಳನ್ನು ಉಚಿತವಾಗಿ  ಆಸಕ್ತರಿಗೆ  ನೀಡಲು ಹಾಸನ ಜಿಲ್ಲೆಯ ಅರಕಲಗೋಡಿನ  ಕಾರಂಜಿ ಟ್ರಸ್ಟ್ ಸಂಸ್ಥೆಯು ಮುಂದೆ ಬಂದಿದೆ.   ಸಂಸ್ಥೆಯು ಪ್ರೀತಿ'ಸಿರಿ' ಕಾರ್ಯಕ್ರಮದ ಮೂಲಕ ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರಲೆ, ರೊಟ್ಟಿ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ ಮುಂತಾದ ಬೀಜಗಳನ್ನು ನೀಡಲಿರುವರು. ಅವುಗಳನ್ನು ಬೆಳೆದು ಸಿರಿಧಾನ್ಯಗಳ ಪರಿಚಯದ ಜೊತೆಗೆ ಅವುಗಳ ಮಹತ್ವಗಳ ಬಗ್ಗೆ ಮಾಹಿತಿ,  ಅವುಗಳನ್ನು ಹಕ್ಕಿಗಳಿಗೆ ಆಹಾರವಾಗಿ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ಧೇಶವಾಗಿದೆ.

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com




ಪಕ್ಷಿಗಳ ಪ್ರೀತಿ
ನಮ್ಮ ಪರಿಸರದಲ್ಲಿ ಹಕ್ಕಿಗಳು ಅವಿಭಾಜ್ಯ ಅಂಗವಾಗಿವೆ. ಅವುಗಳು ಪರಿಸರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಸಮೀಕ್ಷಾ ಮಾಹಿತಿಯ ಪ್ರಕಾರ  ಸದ್ಯ ಭೂಮಿಯ ಮೇಲಿರುವ ಪಕ್ಷಿಗಳಲ್ಲಿ 70%ದಷ್ಟು ತಿನ್ನಲು ಸಾಕಿರುವ ಕೋಳಿಗಳೇ ! ಇನ್ನುಳಿದ 30%ದಷ್ಟು ಮಾತ್ರ ಹತ್ತು ಸಾವಿರಕ್ಕೂ ಮಿಗಿಲಾಪಕ್ಷಿಗಳ ಮಹತ್ವ ನೋಡಿದರೆ ನಮಗೆ ಜೀವ ವೈವಿಧ್ಯತೆಯ ಮಹತ್ವ ಅರಿವಾಗುವುದು !  ಪಕ್ಷಿಗಳು ಬೀಜ ಪ್ರಸರಣೆ ಮಾಡುತ್ತವೆ. ಬೆಳೆಗಳಲ್ಲಿ ಕೀಟ ನಿಯಂತ್ರಿಸುತ್ತವೆ.  ಪರಾಗಸ್ಪರ್ಶ ಮಾಡುತ್ತವೆ.  ಪಕ್ಷಿಗಳ ಹಿಕ್ಕೆ ಒಳ್ಳೆಯ ಗೊಬ್ಬರ, ಪ್ರಕೃತಿಯಲ್ಲಿ ಸಮತೋಲನ ಕಾಪಾಡುತ್ತವೆ, ಮನುಷ್ಯನ ಎಷ್ಟೋ ಸಂಶೋಧನೆಗಳಿಗೆ ಪಕ್ಷಿಗಳೇ ಪ್ರೇರಣೆಯಾಗಿವೆಯಂತೆ !
ಕೈಗಾರೀಕರಣ, ನಗರೀಕರಣ, ಅರಣ್ಯನಾಶ, ರಾಸಾಯನಿಕ ಕೃಷಿ, ನೀರಿನ ಮೂಲಗಳ ನಾಶ, ಆಹಾರದ ಕೊರತೆ, ಆಧುನಿಕ ತಂತ್ರಜ್ಞಾನ, ಕಾಡ್ಗಿಚ್ಚು, ಅಕ್ರಮ ಬೇಟೆಗಾರಿಕೆ,  ಪ್ರಾಕೃತಿಕ ವಿಕೋಪಗಳು ನಮ್ಮ ಅಮೂಲ್ಯ ಪಕ್ಷಿ ಸಂಪತ್ತನ್ನು ನಾಶ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎನ್ನಬಹುದು. ನಿಧಾನವಾಗಿ ಪಕ್ಷಿ ಸಂಕುಲ ಕರಗುತ್ತಿರುವುದು ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಗಿವೆ.
ಇಂಪಾದ  ಹಕ್ಕಿಗಳ ಚಿಲಿಪಿಲಿ ಕಲರವ ಮನಸ್ಸಿಗೂ, ಹೃದಯಕೂ ಹಿತವೆನಿಸುತ್ತಿದೆ. ಹಲವಾರು ಕಣ್ಣುಗಳು ಹಕ್ಕಿಗಳನ್ನು ನೋಡಲು  ಕಾತರಿಸಿವೆ..! ನಮ್ಮಗಳ 'ಪ್ರಕೃತಿ ಇರುವುದೇ ಮನುಷ್ಯನ ಸುಖ ಜೀವನಕ್ಕಾಗಿ' ಎಂಬ ಅಹಂನಿಂದ  ಪರಿಸರವು ತನ್ನ ಸಮತೋಲನವನ್ನು ಕಳೆದು ಕೊಳ್ಳುತ್ತಿದೆ. ಇದಕ್ಕೆ ಹಕ್ಕಿಗಳ ನಾಶವೂ ಪ್ರಬಲ ಕಾರಣವಾಗಿರಲೂಬಹುದು.
 ಧಾನ್ಯಗಳ ಬಿತ್ತೋಣ ಬನ್ನಿ
ಸರಿ ! ಈಗ ಚಿಂತೆ, ವ್ಯಥೆ, ಆರೋಪಗಳನ್ನು ಬದಿಗಿಡೋಣ! ಹಕ್ಕಿಗಳಿಗಾಗಿ ನಾವೆಲ್ಲರೂ ಸೇರಿ ಏನಾದರೂ ಮಾಡೋಣ. ಈಗಾಗಲೇ ಬಿಸಿಲಿನ  ಝಳ  ಜೋರಾಗಿದೆ. ಮುಂದೆ ಭೀಕರ ಬೇಸಿಗೆ ದಿನಗಳಿವೆ. ನಾವು ಈಗ ಸ್ವಲ್ಪ ಎಚ್ಚರಗೊಂಡು ನಮ್ಮ ಮನೆಯಂಗಳದಲ್ಲಿ ಪಕ್ಷಿಗಳಿಗೆಂದು ನವಣೆ, ಸಾಮೆ, ಸಜ್ಜೆ, ಕೊರಲೆ ಮೊದಲಾದ ಸಿರಿಧಾನ್ಯಗಳನ್ನ, ಸೂರ್ಯಕಾಂತಿಯನ್ನ ಬಿತ್ತೋಣ ! ಕುಡಿಯಲು ನೀರಿಡೋಣ ! ಹೀಗೇ ಮಾಡುವುದರಿಂದ ಹಸಿವು ಮತ್ತು ಬಾಯಾರಿಕೆಯಿಂದ ಸಾಯೋ ಎಷ್ಟೊ ಪಕ್ಷಿಗಳ ಪ್ರಾಣ ಉಳಿಸಬಹುದು !  ಈ ಉದ್ಧೇಶದಿಂದಲೇ ಸಿರಿಧಾನ್ಯದ ಬೀಜಗಳನ್ನು ಉಚಿತವಾಗಿ  ಆಸಕ್ತರಿಗೆ  ನೀಡಲು ಹಾಸನ ಜಿಲ್ಲೆಯ ಅರಕಲಗೋಡಿನ  ಕಾರಂಜಿ ಟ್ರಸ್ಟ್ ಸಂಸ್ಥೆಯು ಮುಂದೆ ಬಂದಿದೆ !  ಸಂಸ್ಥೆಯು ಪ್ರೀತಿ'ಸಿರಿ'ಯ ಮೂಲಕ ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರಲೆ, ರೊಟ್ಟಿ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ ಮುಂತಾದ ಬೀಜಗಳನ್ನು ನೀಡಲಿರುವರು.
ಸಿರಿಧಾನ್ಯದಿಂದ ಲಾಭ 
ಸಿರಿಧಾನ್ಯ ಬಿತ್ತುವುದರಿಂದ ಅವುಗಳ ಮಹತ್ವವು ಮಕ್ಕಳಿಗೆ,  ಹಿರಿಯರಿಗೆ ತಿಳಿಯಲಿದೆ. ಈ ಧಾನ್ಯಗಳು ಹಲವಾರು ಕಾಯಿಲೆಗಳಿಗೆ ದಿವ್ಯೌಷಧಿಯೂ ಹೌದು. ಅತ್ಯಂತ ಕಡಿಮೆ ನೀರಿನಲ್ಲಿ ಮನೆಯಂಗಳವನ್ನು ಹಸಿರಾಗಿಸಬಹುದು. ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಬೇಸಿಗೆಯಲ್ಲಿ ಮನೆಯಂಗಳವು ಹಸಿರಾಗಿದ್ದು, ಮನೆಯ ತಂಪಾಗಿರುವುದು. ಸೂರ್ಯಕಾಂತಿ ಹೂವು ಅರಳಿ ಮನಕ್ಕೆ ಮುದ ನೀಡಲಿದೆ. ಮಿಗಿಲಾಗಿ ಮನೆಯಂಗಳದಲ್ಲಿ ಗುಬ್ಬಚ್ಚಿ, ಗಿಜುಗ, ಗಿಳಿ, ಪಾರಿವಾಳ ಮೊದಲಾದ ನಿಸರ್ಗ ಸಂಗೀತ ವಿದ್ವಾಂಸರಿಂದ ಮನಮೋಹಕ ಸಂಗೀತ ಕಛೇರಿಯನ್ನು ಮನೆಯಂಗಳದಲ್ಲಿ ಕಾಣಬಹುದು. ಕೇಳಬಹುದು.
ಬನ್ನಿ, ಪ್ರಕೃತಿ ಪ್ರೀತಿ ಸಿರಿಯನ್ನು ಪುಟಾಣಿ ಮಕ್ಕಳ  ಮನದಲ್ಲಿ ಬಿತ್ತಲು ಇದು ಸುವಣರ್ಾವಕಾಶ. ನಮ್ಮ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿ. ಅವರಿಗೂ ಹಕ್ಕಿಗಳ ಮಹತ್ವದ ಅರಿವು ಅನ್ನು ನೀಡಬಹುದು. ಹಕ್ಕಿಗಳಿಗೆ ಆಹಾರವಾಗುವ ಸಿರಿಧಾನ್ಯಗಳನ್ನು ಶಾಲಾ ಕಾಲೇಜು, ಮನೆ, ಮಠ, ಮಂದಿರ, ಮಸೀದಿ ಚಚರ್್ಗಳ ಅಂಗಳದಲ್ಲಿ ಬೆಳೆಯೋಣ ಬನ್ನಿ.  ಈ ಮಹತ್ಕಾರ್ಯಕ್ಕೆ ಪುಟಾಣಿಗಳನ್ನೂ ಪ್ರೇರೇಪಿಸೋಣ, ಹಕ್ಕಿಗಳ ಚಿಲಿಪಿಲಿ ದನಿಗೆ ಕಿವಿಯಾಗೋಣ ಬನ್ನಿ. ಇದು ವೈಶಿಷ್ಟ್ಯಪೂರ್ಣ ಕಾರ್ಯವಾಗಿದ್ದು, ಸಂಸ್ಥೆಯು ಫಲಾಪೇಕ್ಷೆಯಿಲ್ಲದೇ ಇದಕ್ಕೆ ಮುಂದಾಗಿದೆ. ಈ ಕೆಲಸವು ಅನುಕರಣನೀಯ, ಅಭಿನಂದನೀಯ ಎಂಬುವುದರಲ್ಲಿ ಎರಡು ಮಾತಿಲ್ಲ. ಇಂತಹ ಕಾರ್ಯಗಳಿಗೆ ನಾವು-ನೀವು ಕೈಜೋಡಿಸೋಣ. ಮುಂದಿನ ಪೀಳಿಗೆಗೆ ಹಕ್ಕಿಗಳ ಮಹತ್ವವನ್ನು ಸಾರಿ ಹೇಳೋಣ. ಅವುಗಳನ್ನು ಉಳಿಸಲು ಕೈಲಾದ ಪ್ರಯತ್ನ ಮಾಡೋಣ. 

ಸಿರಿಧಾನ್ಯಗಳನ್ನು ತಮ್ಮ ಶಾಲಾ ಕಾಲೇಜುಗಳ ವಿದ್ಯಾಥರ್ಿಗಳಿಗೆ, ಸಾರ್ವಜನಿಕರಿಗೆ ಪರಿಚಯಿಸಿ, ಅವುಗಳನ್ನು ಬಿತ್ತಿ ಬೆಳೆಯಲು ಬಯಸುವವರು, ಸಂಘ-ಸಂಸ್ಥೆಗಳು ತಮ್ಮ ವಿಳಾಸವನ್ನು 8792605846, 9591066583 ವಾಟ್ಸಾಪ್ ಸಂಖ್ಯೆಗಳಿಗೆ ಸಂದೇಶ ರವಾನಿಸಬಹುದು. 








ೆ.

ಗುರುವಾರ, ಅಕ್ಟೋಬರ್ 4, 2018

'ಕರುಣೆಯ ಗೋಡೆ '. . . !


 'ಕರುಣೆಯ ಗೋಡೆ '. . . ! 

   ನಿಮಗೆ ಅಗತ್ಯವಿಲ್ಲವಾದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ


  ಸಚಿತ್ರ ಬರಹ: ಕೂಡಂಡ ರವಿ, ಹೊದ್ದೂರು. 


ಕೆಲವರಿಗೆ ದೇವರು ಸಾಕಷ್ಟು ಕೊಟ್ಟಿದ್ದಾನೆ-ಕೊಡುತ್ತಿದ್ದಾನೆ.  ಇನ್ನೂ ಕೆಲವರಿಗೆ ಬೇಕಾದದನ್ನು ಕೊಡದೇ ಬಡವರನ್ನಾಗಿ ಮಾಡಿದ್ದಾನೆ. ಉಳ್ಳವರು ವಿವಿಧ ರೀತಿಯ ಬಟ್ಟೆ ಬರೆ ತೊಡುತ್ತಾರೆ. ವೈವಿಧ್ಯಮಯ ನಮೂನೆಗಳ ಚಪ್ಪಲಿ, ಶೂ ಧರಿಸುತ್ತಾರೆ. ಕೆಲವೇ ದಿನಗಳಲ್ಲಿ ಇಂತಹ ವಸ್ತು ವಗೈರೆಗಳ ಬದಲು ಹೊಸ ನಮೂನೆಗಳು ಮಾರುಕಟ್ಟೆಗೆ ಕಾಲಿಡುತ್ತವೆ.  ಪರಿಣಾಮ ಆಗ ತಾನೇ ಅತ್ಯಾಸೆಯಿಂದ  ಕೊಂಡು ತಂದ ಬಟ್ಟೆ ಬರೆ, ಚಪ್ಪಲಿ, ಶೂಗಳು ಬಳಕೆಯಾಗದೇ ಮೂಲೆಗುಂಪಾಗುತ್ತವೆ.  ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ಬಟ್ಟೆ ಬರೆಗಳು ತೀರಾ ಕಿರಿದಾಗಿ ಬಳಕೆಗೆ ಅನರ್ಹವಾಗುತ್ತವೆ. ಇಂತಹ ವಸ್ತುಗಳನ್ನು ಬಡವರಿಗೆ ವಿತರಿಸಿದರೆ ಹೇಗೆ ? ಎಂಬ ಮುಂದಾಲೋಚನೆಯಿಂದ ಮೂನರ್ಾಡಿನಲ್ಲಿ ವಿನೂತನ ಮಳಿಗೆಯು ಸದ್ದಿಲ್ಲದೆ ಕಾಯರ್ಾರಂಭ ಮಾಡಿದೆ.
ಘೋಷವಾಕ್ಯವೇನು ?
ನಿಮಗೆ ಅಗತ್ಯವಿಲ್ಲವಾದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ ಎಂಬುದು  ಈ ಸಂಸ್ಥೆಯ ಘೋಷ ವಾಕ್ಯವಾಗಿದೆ. ಮೂನರ್ಾಡಿನ ಉದ್ಯಮಿ, ಬೆಳೆಗಾರ ಬಡುವಂಡ ಕನ್ನು ಅರುಣ್ ಈ ಜನಸ್ನೇಹಿ ಕಾರ್ಯಕ್ಕೆ ಕೈಹಾಕಿದ ಛಲಗಾತಿ. ಬಡವರಿಗಾಗಿ ಏನಾದರೂ ಹೊಸತನ್ನು ಮಾಡಬೇಕು ಎಂದು ಸದಾ ಚಿಂತನೆಯಲ್ಲಿರುವ ಅವರಿಗೆ ಈ ಆಲೋಚನೆ ಮೂಡಿದ್ದೇ ತಡ, ತಕ್ಷಣ ಕಾರ್ಯ ಪ್ರವೃತ್ತರಾದರು.  ಮೈಸೂರಿನಲ್ಲಿರುವ ಈ ಮಾದರಿಯ ಕೇಂದ್ರವೇ  ಮೂನರ್ಾಡಿನಲ್ಲಿ  ಕರುಣೆಯ ಗೋಡೆ ೆ ಎಂಬ ಸಂಸ್ಥೆ ಸ್ಥಾಪಿಸಲು ಪ್ರೇರಣೆಯಾಯಿತು ಎಂದು  ಕನ್ನು ವಿವರವಿತ್ತರು.  ಈ ಬಗ್ಗೆ ತಮ್ಮ  ವಲಯದ ಗೆಳೆಯ-ಗೆಳತಿಯರಲ್ಲಿ ತಮ್ಮ ವಿಭಿನ್ನ ಆಲೋಚನೆಗಳನ್ನು ಅರುಹಿದರು.  ತಮ್ಮ ಬಳಿ ಇರುವ  ಆಪ್ತರಿಗೆ ಈ ಬಗ್ಗೆ ತಿಳಿಸಿದಾಗ ಅವರಿಂದಲೂ ಅಪಾರ ಪ್ರಶಂಸೆಗಳು ವ್ಯಕ್ತವಾದವಂತೆ . ಅವರು ಸಹಾ ಕರುಣೆಯ ಗೋಡೆಗೆ ತಮ್ಮ ಸಹಕಾರ ನೀಡುವ ಇಂಗಿತ ವ್ಯಕ್ತಪಡಿಸಿದಂತೆ. ಅದರಂತೆಯೇ, ಮೂನರ್ಾಡಿನ ಅಯ್ಯಪ್ಪ ದೇಗುಲದ ಬಳಿ ಇರುವ ಪೆಟ್ರೋಲಿಯಂ ಪಂಪ್ನ ಆವರಣದಲ್ಲಿ ಪುಟ್ಟ ಗೂಡಂಗಡಿಯನ್ನು ನಿಮರ್ಿಸಿದರು. ತರಾತುರಿಯಲ್ಲಿ ಈ ವಿನೂತನ ಶೈಲಿಯ ಮಳಿಗೆಯನ್ನು ಆರಂಭಿಸಿಯೇ ಬಿಟ್ಟರು. ಜಿಲ್ಲಾ ವಿಕಲ ಚೇತನರ ಸಂಘದ  ಅಧ್ಯಕ್ಷ ಜೆ. ಎ. ಮಹೇಶ್ವರ ಸಂಸ್ಥೆಯನ್ನು ಉದ್ಘಾಟಿಸಿದರು.
 ನೀವೂ ಸಹಾಯ ಹಸ್ತ ಚಾಚಿ
ಸದ್ಯಕ್ಕೆ ಈ ಮಳಿಗೆಯಲ್ಲಿ ಬಡವರಿಗಾಗಿ ಉತ್ತಮ ಗುಣಮಟ್ಟದ ಒಗೆದು ಇಸ್ತ್ರಿ ಮಾಡಿದ ಶುಭ್ರವಾದ ಬಟ್ಟೆಬರೆಗಳನ್ನು ಮತ್ತು ಚೆನ್ನಾಗಿರುವ (ಇನ್ನೂ ಸ್ವಲ್ಪ ಸಮಯ ಬಡವರು ಬಳಸಲು ಯೋಗ್ಯವಾದ )ಪಾದರಕ್ಷೆಗಳನ್ನು ಸಂಗ್ರಹಿಸಲಾಗುತ್ತಿದೆ. ಬಳಸದೇ ಇರುವ, ಮನೆಗಳಲ್ಲಿ ಮೂಲೆ ಸೇರಿದ ಉತ್ತಮ ಗುಣಮಟ್ಟದ  ಸ್ವೆಟ್ಟರ್, ಕಂಬಳಿ, ಕಾಲುಡುಗೆ,  ಶಾಲಾ ಸಮವಸ್ತ್ರಗಳು,  ಬಟ್ಟೆ ಬರೆ, ಚಪ್ಪಲಿ, ಶೂಗಳನ್ನು ತಂದು ಕೊಡಲು ಮನವಿ ಮಾಡಿದರು. ಅವರ ಮನವಿಗೆ ಸಕಾಲಿಕವಾಗಿ ಸ್ಪಂದಿಸಿದ ಸಹೃದಯಿಗಳು ಬಡವರಿಗಾಗಿ ತಾವು ಬಳಸಿದ, ವಸ್ತುಗಳನ್ನು ಉದಾರವಾಗಿ ನೀಡುತ್ತಿದ್ದಾರೆ.  ಇಲ್ಲಿಗೆ ಜಾತಿ, ಧರ್ಮ, ಮತ ಲಿಂಗ ಬೇಧವಿಲ್ಲದೆ ಎಲ್ಲರೂ ವಸ್ತು ವಗೈರೆಗಳನ್ನು ತಂದು ಕೊಡಬಹುದು. ಅದರಂತೆ,  ನೈಜ ಅವಶ್ಯಕತೆ ಇರುವವರು (ಸೀಮಿತ ಪ್ರಮಾಣದಲಿ)್ಲ  ಇಲ್ಲಿಂದ ತಮಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ.  ಬೇರೆಯವರು  ಸಂತೋಷದಿಂದ ಧರಿಸಲು ಯೋಗ್ಯವಿರುವಂತಹ  ಗುಣಮಟ್ಟದ ವಸ್ತುಗಳನ್ನೇ ಇಲ್ಲಿಗೆ ನೀಡಬಹುದು.  ಹರಿದ, ತೇಪೆ ಹಾಕಿದ , ಬಣ್ಣಗೆಟ್ಟ, ಕಳೆಗುಂದಿದ ವಸ್ತು ವಗೈರೆಗಳನ್ನು ಇಲ್ಲಿ ಸ್ವೀಕರಿಸಲಾಗುವುದಿಲ್ಲ.  ದಾನಿಗಳು ಅಪೇಕ್ಷೆ ಪಟ್ಟಲ್ಲಿ ತಮ್ಮ ಹೆಸರನ್ನು ಸಂಸ್ಥೆಯಲ್ಲಿರುವ ಪುಸ್ತಕದಲ್ಲಿ ನಮೂದಿಸಬಹುದು. ಇದರಿಂದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಅನುಕೂಲವಾಗಲಿದೆ ಎಂಬುದು ಸಂಸ್ಥೆ ಸ್ಥಾಪಕರ ಅಭಿಪ್ರಾಯ.  ಬಟ್ಟೆ ಬರೆ ಮತ್ತು ಇತರ ವಸ್ತುಗಳು ಅಪಾರ ಪ್ರಮಾಣದಲ್ಲಿ ಸಂಗ್ರಹವಾದಲ್ಲಿ  ಜಿಲ್ಲೆಯ ಇತರ ಸ್ವಯಂ ಸೇವಾಸಂಸ್ಥೆಗಳಿಗೆ ಅವುಗಳನ್ನು ನೀಡುವ ಮನೋಭಿಲಾಶೆಯನ್ನು ಕನ್ನು ವ್ಯಕ್ತಪಡಿಸಿದ್ದಾರೆ. ವಿನೂತನ ಪರಿಕಲ್ಪನೆಯ ಸಂಸ್ಥೆಗೆ ಜಿಲ್ಲೆಯ ದಾನಿಗಳು ಸಂಸ್ಥೆಗೆ ತಮ್ಮ ಕೈಲಾದ ನೆರವು ನೀಡಿದಲ್ಲಿ ಇವರ ಪರಿಶ್ರಮ ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ.
 ಮುಗುಳ್ನಗೆಯೇ ಪ್ರೇರಣೆ
ಇದರೊಂದಿಗೆ, ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ಕನ್ನು ಅಪ್ಪಚ್ಚು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಇವರು ತಮ್ಮಲ್ಲಿ ದುಡಿಯುತ್ತಿರುವ ಕಾಮರ್ಿಕರ ಮಕ್ಕಳಿಗೆ ಪ್ರತಿ ದಿನವೂ ಉಚಿತವಾಗಿ ಮನೆಪಾಠವನ್ನು ಹೇಳಿಕೊಡುತ್ತಾರೆ. ಹಲವರು ಇವರ ಬಳಿ  ಬಡವರು ಮಕ್ಕಳ ವಿದ್ಯಾಭ್ಯಾಸಕ್ಕೆ, ಅನಾರೋಗ್ಯ ಪೀಡಿತರು ಚಿಕಿತ್ಸೆಗಾಗಿ ಹಣವನ್ನು ಪಡೆದು ಕೊಳ್ಳುತ್ತಾರೆ. ತಾವು ಧನ ಸಹಾಯ ಮಾಡಿ ತನ್ಮೂಲಕ ವಿದ್ಯಾಭ್ಯಾಸ ಅತ್ಯುತ್ತಮ ಸಾಧನೆ ಮಾಡಿ, ಉದ್ಯೋಗ ಪಡೆದವರ ವಿವರ ನೀಡುವಾಗ ಕನ್ನು ಅವರು ಭಾವುಕರಾಗುತ್ತಾರೆ. ಬಡವರು ಸಹಾಯ ಪಡೆದ ಬಳಿಕ ಅವರ ಮೊಗದಲ್ಲಿ ಮೂಡುವ ಮುಗುಳ್ನಗುವೇ ಇವರ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಮೂಲ ಪ್ರೇರಣೆಯಂತೆ !  ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಿಬೇಕು. ಸ್ಥಳೀಯ ಬಡವರನ್ನು ಮೊದಲು ಬಡತನದಿಂದ ಮೇಲೆತ್ತಲು ಸಂಘಸಂಸ್ಥೆಗಳೊಂದಿಗೆ ಉಳ್ಳವರು ಶ್ರಮಿಸಿದರೆ ಸಮಾಜದ ಸುದಾರಣೆ ಸಾಧ್ಯ.  ಎಲ್ಲದಕ್ಕೂ ಸರಕಾರವನ್ನು ಕಾಯುತ್ತಾ ಕೂಡುವ ಬದಲು ಸ್ವಸ್ಥ ಸಮಾಜಕ್ಕಾಗಿ ನಮ್ಮ ಕಿರು ಕಾಣಿಕೆ ನೀಡಬೇಕು.  ಸಹಾಯ ಮಾಡುವ ಹಸ್ತಗಳು ಪೂಜಿಸುವ ತುಟಿಗಳಿಗಂತಲೂ ಶ್ರೇಷ್ಠ ಎಂಬುವುದು ಇವರ  ದೃಡ ನಿಲುವು. ಬಡಬಗ್ಗರ ನೆರವಿನ ಮಹತ್ವಾಕಾಂಕ್ಷೆ ಹೊತ್ತ ಇವರ ಸೇವೆ ಅನುಕರಣನೀಯ, ಅಭಿನಂದನೀಯ. ಇವರ ಸಮಾಜ ಸೇವಾ ಕಾರ್ಯಕ್ಕೆ ಪತಿ ಅರುಣ್ ಅಪ್ಪಚ್ಚು ಅವರ ಪ್ರೋತ್ಸಾಹವೂ ಇದೆ.

 ನಮ್ಮ ದೇಶ ಸೇರಿದಂತೆ ವಿದೇಶಗಳಲ್ಲಿ ಅಂತರಾಷ್ಟ್ರೀಯ ವ್ಯಾಪ್ತಿಂ ಸೇವಾಸಂಘಗಳಿವೆ. ಇವುಗಳಲ್ಲಿ ರೋಟರಿ ಮತ್ತು ಲಯನ್ಸ್ ಕ್ಲಬ್ಗಳು ಪ್ರಮುಖ ಸ್ಥಾನ ಪಡೆದಿವೆ.
ಆದರೆ, ಇವು ತಮ್ಮ ಸದಸ್ಯತ್ವ ಹೊಂದಿರುವ ಅತೀ ಬಡತನದ ಹೊಂದಿರುವ ದೇಶಗಳಿಗೆ ಸಹಾಯ ಹಸ್ತ ಚಾಚುತ್ತದೆ. ನಿಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಬಡವರು ಇದ್ದಾರೆ. ಅವರು ನಮ್ಮ ನೆರೆಹೊರೆಗಳಲ್ಲಿ, ನಮ್ಮ ಊರಿನಲ್ಲಿ ಇದ್ದಾರೆ.  ನಾವು ಅವರಿಗೆ ಮೊದಲು ಸಹಾಯ ಮಾಡೋಣ. ಬಳಿಕ ದೂರದ ದೇಶಗಳಲ್ಲಿರುವ ಬಡವರಿಗೆ ಸಹಾಯ ಮಾಡೋಣ ಅಲ್ಲವೇ ? ಅದು ಬಿಟ್ಟು ನಮ್ಮ ನೆರೆಹೊರೆಯವರು ಹರಿದ , ಮೈಕೈ ಕಾಣುವಂತಹ ಬಟ್ಟೆ ಧರಿಸುತ್ತಿರುವರು,. ಅವರಿಗೆ ನಾವು ಸಹಾಯ ಮಾಡದೇ ದೂರದ ದೇಶಗಲ್ಲಿ ಇರುವ ಬಡವರಿಗೆ ಸಹಾಯ ಮಾಡುವ ಔಚಿತ್ಯವಾದರೂ ಏನು ? ನಮ್ಮ ಸುತ್ತಮುತ್ತಲಿರುವ ಬಡವರು ನಿಮ್ಮ ಬಳಿ ಬಂದು ನಮ್ಮಲ್ಲಿ ಬಟ್ಟೆ ಇಲ್ಲ. ಧರಿಸಲು ಹಳೆ ಬಟ್ಟೆ ಕೊಡಿ. ಹೊಸ ಬಟ್ಟೆ ಖರೀದಿಸಿ ಕೊಡಿ ಎಂದು ಕೇಳುವುದೇನೂ ಇಲ್ಲ. ನಮ್ಮಲ್ಲಿ ಬಹುತೇಕ ಮಂದಿಗೆ ವಿಪರೀತ ಸ್ವಾಭಿಮಾನ.
ಅಂತಹ ಬಡವರಿಗೆ ಈ ರೀತಿಯ ಕೇಂದ್ರಗಳು ಉಪಯೋಗವಾಗಲಿದೆ. ನೀವು ಸಿರವಂತರಾಗಿದ್ದು, ನಿಮಗೆ ಬಡವರಿಗೆ, ಬಟ್ಟೆ ಬರೆ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುವುದಾದಲ್ಲಿ ಈ ಯೋಜನೆ ಉತ್ತಮವೆನಿಸಲಿದೆ.

ನೀವು ಮುಕ್ತವಾಗಿ ಮನಸ್ಸು ಮಾಡಿ. ಬಡವರಿಗೆ ಸಹಾಯ ಹಸ್ತ ಚಾಚಿ. ಕೊಟ್ಟದ್ದು ತನಗೆ, ಮುಚ್ಚಿಟ್ಟದ್ದು ಪರರಿಗೆ. ಕೊಟ್ಟಿದ್ದು ಕೆಟ್ಟಿತೆನ್ನೆಬೇಡ...