ಗುರುವಾರ, ಅಕ್ಟೋಬರ್ 4, 2018

'ಕರುಣೆಯ ಗೋಡೆ '. . . !


 'ಕರುಣೆಯ ಗೋಡೆ '. . . ! 

   ನಿಮಗೆ ಅಗತ್ಯವಿಲ್ಲವಾದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ


  ಸಚಿತ್ರ ಬರಹ: ಕೂಡಂಡ ರವಿ, ಹೊದ್ದೂರು. 


ಕೆಲವರಿಗೆ ದೇವರು ಸಾಕಷ್ಟು ಕೊಟ್ಟಿದ್ದಾನೆ-ಕೊಡುತ್ತಿದ್ದಾನೆ.  ಇನ್ನೂ ಕೆಲವರಿಗೆ ಬೇಕಾದದನ್ನು ಕೊಡದೇ ಬಡವರನ್ನಾಗಿ ಮಾಡಿದ್ದಾನೆ. ಉಳ್ಳವರು ವಿವಿಧ ರೀತಿಯ ಬಟ್ಟೆ ಬರೆ ತೊಡುತ್ತಾರೆ. ವೈವಿಧ್ಯಮಯ ನಮೂನೆಗಳ ಚಪ್ಪಲಿ, ಶೂ ಧರಿಸುತ್ತಾರೆ. ಕೆಲವೇ ದಿನಗಳಲ್ಲಿ ಇಂತಹ ವಸ್ತು ವಗೈರೆಗಳ ಬದಲು ಹೊಸ ನಮೂನೆಗಳು ಮಾರುಕಟ್ಟೆಗೆ ಕಾಲಿಡುತ್ತವೆ.  ಪರಿಣಾಮ ಆಗ ತಾನೇ ಅತ್ಯಾಸೆಯಿಂದ  ಕೊಂಡು ತಂದ ಬಟ್ಟೆ ಬರೆ, ಚಪ್ಪಲಿ, ಶೂಗಳು ಬಳಕೆಯಾಗದೇ ಮೂಲೆಗುಂಪಾಗುತ್ತವೆ.  ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ಬಟ್ಟೆ ಬರೆಗಳು ತೀರಾ ಕಿರಿದಾಗಿ ಬಳಕೆಗೆ ಅನರ್ಹವಾಗುತ್ತವೆ. ಇಂತಹ ವಸ್ತುಗಳನ್ನು ಬಡವರಿಗೆ ವಿತರಿಸಿದರೆ ಹೇಗೆ ? ಎಂಬ ಮುಂದಾಲೋಚನೆಯಿಂದ ಮೂನರ್ಾಡಿನಲ್ಲಿ ವಿನೂತನ ಮಳಿಗೆಯು ಸದ್ದಿಲ್ಲದೆ ಕಾಯರ್ಾರಂಭ ಮಾಡಿದೆ.
ಘೋಷವಾಕ್ಯವೇನು ?
ನಿಮಗೆ ಅಗತ್ಯವಿಲ್ಲವಾದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ ಎಂಬುದು  ಈ ಸಂಸ್ಥೆಯ ಘೋಷ ವಾಕ್ಯವಾಗಿದೆ. ಮೂನರ್ಾಡಿನ ಉದ್ಯಮಿ, ಬೆಳೆಗಾರ ಬಡುವಂಡ ಕನ್ನು ಅರುಣ್ ಈ ಜನಸ್ನೇಹಿ ಕಾರ್ಯಕ್ಕೆ ಕೈಹಾಕಿದ ಛಲಗಾತಿ. ಬಡವರಿಗಾಗಿ ಏನಾದರೂ ಹೊಸತನ್ನು ಮಾಡಬೇಕು ಎಂದು ಸದಾ ಚಿಂತನೆಯಲ್ಲಿರುವ ಅವರಿಗೆ ಈ ಆಲೋಚನೆ ಮೂಡಿದ್ದೇ ತಡ, ತಕ್ಷಣ ಕಾರ್ಯ ಪ್ರವೃತ್ತರಾದರು.  ಮೈಸೂರಿನಲ್ಲಿರುವ ಈ ಮಾದರಿಯ ಕೇಂದ್ರವೇ  ಮೂನರ್ಾಡಿನಲ್ಲಿ  ಕರುಣೆಯ ಗೋಡೆ ೆ ಎಂಬ ಸಂಸ್ಥೆ ಸ್ಥಾಪಿಸಲು ಪ್ರೇರಣೆಯಾಯಿತು ಎಂದು  ಕನ್ನು ವಿವರವಿತ್ತರು.  ಈ ಬಗ್ಗೆ ತಮ್ಮ  ವಲಯದ ಗೆಳೆಯ-ಗೆಳತಿಯರಲ್ಲಿ ತಮ್ಮ ವಿಭಿನ್ನ ಆಲೋಚನೆಗಳನ್ನು ಅರುಹಿದರು.  ತಮ್ಮ ಬಳಿ ಇರುವ  ಆಪ್ತರಿಗೆ ಈ ಬಗ್ಗೆ ತಿಳಿಸಿದಾಗ ಅವರಿಂದಲೂ ಅಪಾರ ಪ್ರಶಂಸೆಗಳು ವ್ಯಕ್ತವಾದವಂತೆ . ಅವರು ಸಹಾ ಕರುಣೆಯ ಗೋಡೆಗೆ ತಮ್ಮ ಸಹಕಾರ ನೀಡುವ ಇಂಗಿತ ವ್ಯಕ್ತಪಡಿಸಿದಂತೆ. ಅದರಂತೆಯೇ, ಮೂನರ್ಾಡಿನ ಅಯ್ಯಪ್ಪ ದೇಗುಲದ ಬಳಿ ಇರುವ ಪೆಟ್ರೋಲಿಯಂ ಪಂಪ್ನ ಆವರಣದಲ್ಲಿ ಪುಟ್ಟ ಗೂಡಂಗಡಿಯನ್ನು ನಿಮರ್ಿಸಿದರು. ತರಾತುರಿಯಲ್ಲಿ ಈ ವಿನೂತನ ಶೈಲಿಯ ಮಳಿಗೆಯನ್ನು ಆರಂಭಿಸಿಯೇ ಬಿಟ್ಟರು. ಜಿಲ್ಲಾ ವಿಕಲ ಚೇತನರ ಸಂಘದ  ಅಧ್ಯಕ್ಷ ಜೆ. ಎ. ಮಹೇಶ್ವರ ಸಂಸ್ಥೆಯನ್ನು ಉದ್ಘಾಟಿಸಿದರು.
 ನೀವೂ ಸಹಾಯ ಹಸ್ತ ಚಾಚಿ
ಸದ್ಯಕ್ಕೆ ಈ ಮಳಿಗೆಯಲ್ಲಿ ಬಡವರಿಗಾಗಿ ಉತ್ತಮ ಗುಣಮಟ್ಟದ ಒಗೆದು ಇಸ್ತ್ರಿ ಮಾಡಿದ ಶುಭ್ರವಾದ ಬಟ್ಟೆಬರೆಗಳನ್ನು ಮತ್ತು ಚೆನ್ನಾಗಿರುವ (ಇನ್ನೂ ಸ್ವಲ್ಪ ಸಮಯ ಬಡವರು ಬಳಸಲು ಯೋಗ್ಯವಾದ )ಪಾದರಕ್ಷೆಗಳನ್ನು ಸಂಗ್ರಹಿಸಲಾಗುತ್ತಿದೆ. ಬಳಸದೇ ಇರುವ, ಮನೆಗಳಲ್ಲಿ ಮೂಲೆ ಸೇರಿದ ಉತ್ತಮ ಗುಣಮಟ್ಟದ  ಸ್ವೆಟ್ಟರ್, ಕಂಬಳಿ, ಕಾಲುಡುಗೆ,  ಶಾಲಾ ಸಮವಸ್ತ್ರಗಳು,  ಬಟ್ಟೆ ಬರೆ, ಚಪ್ಪಲಿ, ಶೂಗಳನ್ನು ತಂದು ಕೊಡಲು ಮನವಿ ಮಾಡಿದರು. ಅವರ ಮನವಿಗೆ ಸಕಾಲಿಕವಾಗಿ ಸ್ಪಂದಿಸಿದ ಸಹೃದಯಿಗಳು ಬಡವರಿಗಾಗಿ ತಾವು ಬಳಸಿದ, ವಸ್ತುಗಳನ್ನು ಉದಾರವಾಗಿ ನೀಡುತ್ತಿದ್ದಾರೆ.  ಇಲ್ಲಿಗೆ ಜಾತಿ, ಧರ್ಮ, ಮತ ಲಿಂಗ ಬೇಧವಿಲ್ಲದೆ ಎಲ್ಲರೂ ವಸ್ತು ವಗೈರೆಗಳನ್ನು ತಂದು ಕೊಡಬಹುದು. ಅದರಂತೆ,  ನೈಜ ಅವಶ್ಯಕತೆ ಇರುವವರು (ಸೀಮಿತ ಪ್ರಮಾಣದಲಿ)್ಲ  ಇಲ್ಲಿಂದ ತಮಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ.  ಬೇರೆಯವರು  ಸಂತೋಷದಿಂದ ಧರಿಸಲು ಯೋಗ್ಯವಿರುವಂತಹ  ಗುಣಮಟ್ಟದ ವಸ್ತುಗಳನ್ನೇ ಇಲ್ಲಿಗೆ ನೀಡಬಹುದು.  ಹರಿದ, ತೇಪೆ ಹಾಕಿದ , ಬಣ್ಣಗೆಟ್ಟ, ಕಳೆಗುಂದಿದ ವಸ್ತು ವಗೈರೆಗಳನ್ನು ಇಲ್ಲಿ ಸ್ವೀಕರಿಸಲಾಗುವುದಿಲ್ಲ.  ದಾನಿಗಳು ಅಪೇಕ್ಷೆ ಪಟ್ಟಲ್ಲಿ ತಮ್ಮ ಹೆಸರನ್ನು ಸಂಸ್ಥೆಯಲ್ಲಿರುವ ಪುಸ್ತಕದಲ್ಲಿ ನಮೂದಿಸಬಹುದು. ಇದರಿಂದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಅನುಕೂಲವಾಗಲಿದೆ ಎಂಬುದು ಸಂಸ್ಥೆ ಸ್ಥಾಪಕರ ಅಭಿಪ್ರಾಯ.  ಬಟ್ಟೆ ಬರೆ ಮತ್ತು ಇತರ ವಸ್ತುಗಳು ಅಪಾರ ಪ್ರಮಾಣದಲ್ಲಿ ಸಂಗ್ರಹವಾದಲ್ಲಿ  ಜಿಲ್ಲೆಯ ಇತರ ಸ್ವಯಂ ಸೇವಾಸಂಸ್ಥೆಗಳಿಗೆ ಅವುಗಳನ್ನು ನೀಡುವ ಮನೋಭಿಲಾಶೆಯನ್ನು ಕನ್ನು ವ್ಯಕ್ತಪಡಿಸಿದ್ದಾರೆ. ವಿನೂತನ ಪರಿಕಲ್ಪನೆಯ ಸಂಸ್ಥೆಗೆ ಜಿಲ್ಲೆಯ ದಾನಿಗಳು ಸಂಸ್ಥೆಗೆ ತಮ್ಮ ಕೈಲಾದ ನೆರವು ನೀಡಿದಲ್ಲಿ ಇವರ ಪರಿಶ್ರಮ ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ.
 ಮುಗುಳ್ನಗೆಯೇ ಪ್ರೇರಣೆ
ಇದರೊಂದಿಗೆ, ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ಕನ್ನು ಅಪ್ಪಚ್ಚು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಇವರು ತಮ್ಮಲ್ಲಿ ದುಡಿಯುತ್ತಿರುವ ಕಾಮರ್ಿಕರ ಮಕ್ಕಳಿಗೆ ಪ್ರತಿ ದಿನವೂ ಉಚಿತವಾಗಿ ಮನೆಪಾಠವನ್ನು ಹೇಳಿಕೊಡುತ್ತಾರೆ. ಹಲವರು ಇವರ ಬಳಿ  ಬಡವರು ಮಕ್ಕಳ ವಿದ್ಯಾಭ್ಯಾಸಕ್ಕೆ, ಅನಾರೋಗ್ಯ ಪೀಡಿತರು ಚಿಕಿತ್ಸೆಗಾಗಿ ಹಣವನ್ನು ಪಡೆದು ಕೊಳ್ಳುತ್ತಾರೆ. ತಾವು ಧನ ಸಹಾಯ ಮಾಡಿ ತನ್ಮೂಲಕ ವಿದ್ಯಾಭ್ಯಾಸ ಅತ್ಯುತ್ತಮ ಸಾಧನೆ ಮಾಡಿ, ಉದ್ಯೋಗ ಪಡೆದವರ ವಿವರ ನೀಡುವಾಗ ಕನ್ನು ಅವರು ಭಾವುಕರಾಗುತ್ತಾರೆ. ಬಡವರು ಸಹಾಯ ಪಡೆದ ಬಳಿಕ ಅವರ ಮೊಗದಲ್ಲಿ ಮೂಡುವ ಮುಗುಳ್ನಗುವೇ ಇವರ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಮೂಲ ಪ್ರೇರಣೆಯಂತೆ !  ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಿಬೇಕು. ಸ್ಥಳೀಯ ಬಡವರನ್ನು ಮೊದಲು ಬಡತನದಿಂದ ಮೇಲೆತ್ತಲು ಸಂಘಸಂಸ್ಥೆಗಳೊಂದಿಗೆ ಉಳ್ಳವರು ಶ್ರಮಿಸಿದರೆ ಸಮಾಜದ ಸುದಾರಣೆ ಸಾಧ್ಯ.  ಎಲ್ಲದಕ್ಕೂ ಸರಕಾರವನ್ನು ಕಾಯುತ್ತಾ ಕೂಡುವ ಬದಲು ಸ್ವಸ್ಥ ಸಮಾಜಕ್ಕಾಗಿ ನಮ್ಮ ಕಿರು ಕಾಣಿಕೆ ನೀಡಬೇಕು.  ಸಹಾಯ ಮಾಡುವ ಹಸ್ತಗಳು ಪೂಜಿಸುವ ತುಟಿಗಳಿಗಂತಲೂ ಶ್ರೇಷ್ಠ ಎಂಬುವುದು ಇವರ  ದೃಡ ನಿಲುವು. ಬಡಬಗ್ಗರ ನೆರವಿನ ಮಹತ್ವಾಕಾಂಕ್ಷೆ ಹೊತ್ತ ಇವರ ಸೇವೆ ಅನುಕರಣನೀಯ, ಅಭಿನಂದನೀಯ. ಇವರ ಸಮಾಜ ಸೇವಾ ಕಾರ್ಯಕ್ಕೆ ಪತಿ ಅರುಣ್ ಅಪ್ಪಚ್ಚು ಅವರ ಪ್ರೋತ್ಸಾಹವೂ ಇದೆ.

 ನಮ್ಮ ದೇಶ ಸೇರಿದಂತೆ ವಿದೇಶಗಳಲ್ಲಿ ಅಂತರಾಷ್ಟ್ರೀಯ ವ್ಯಾಪ್ತಿಂ ಸೇವಾಸಂಘಗಳಿವೆ. ಇವುಗಳಲ್ಲಿ ರೋಟರಿ ಮತ್ತು ಲಯನ್ಸ್ ಕ್ಲಬ್ಗಳು ಪ್ರಮುಖ ಸ್ಥಾನ ಪಡೆದಿವೆ.
ಆದರೆ, ಇವು ತಮ್ಮ ಸದಸ್ಯತ್ವ ಹೊಂದಿರುವ ಅತೀ ಬಡತನದ ಹೊಂದಿರುವ ದೇಶಗಳಿಗೆ ಸಹಾಯ ಹಸ್ತ ಚಾಚುತ್ತದೆ. ನಿಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಬಡವರು ಇದ್ದಾರೆ. ಅವರು ನಮ್ಮ ನೆರೆಹೊರೆಗಳಲ್ಲಿ, ನಮ್ಮ ಊರಿನಲ್ಲಿ ಇದ್ದಾರೆ.  ನಾವು ಅವರಿಗೆ ಮೊದಲು ಸಹಾಯ ಮಾಡೋಣ. ಬಳಿಕ ದೂರದ ದೇಶಗಳಲ್ಲಿರುವ ಬಡವರಿಗೆ ಸಹಾಯ ಮಾಡೋಣ ಅಲ್ಲವೇ ? ಅದು ಬಿಟ್ಟು ನಮ್ಮ ನೆರೆಹೊರೆಯವರು ಹರಿದ , ಮೈಕೈ ಕಾಣುವಂತಹ ಬಟ್ಟೆ ಧರಿಸುತ್ತಿರುವರು,. ಅವರಿಗೆ ನಾವು ಸಹಾಯ ಮಾಡದೇ ದೂರದ ದೇಶಗಲ್ಲಿ ಇರುವ ಬಡವರಿಗೆ ಸಹಾಯ ಮಾಡುವ ಔಚಿತ್ಯವಾದರೂ ಏನು ? ನಮ್ಮ ಸುತ್ತಮುತ್ತಲಿರುವ ಬಡವರು ನಿಮ್ಮ ಬಳಿ ಬಂದು ನಮ್ಮಲ್ಲಿ ಬಟ್ಟೆ ಇಲ್ಲ. ಧರಿಸಲು ಹಳೆ ಬಟ್ಟೆ ಕೊಡಿ. ಹೊಸ ಬಟ್ಟೆ ಖರೀದಿಸಿ ಕೊಡಿ ಎಂದು ಕೇಳುವುದೇನೂ ಇಲ್ಲ. ನಮ್ಮಲ್ಲಿ ಬಹುತೇಕ ಮಂದಿಗೆ ವಿಪರೀತ ಸ್ವಾಭಿಮಾನ.
ಅಂತಹ ಬಡವರಿಗೆ ಈ ರೀತಿಯ ಕೇಂದ್ರಗಳು ಉಪಯೋಗವಾಗಲಿದೆ. ನೀವು ಸಿರವಂತರಾಗಿದ್ದು, ನಿಮಗೆ ಬಡವರಿಗೆ, ಬಟ್ಟೆ ಬರೆ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುವುದಾದಲ್ಲಿ ಈ ಯೋಜನೆ ಉತ್ತಮವೆನಿಸಲಿದೆ.

ನೀವು ಮುಕ್ತವಾಗಿ ಮನಸ್ಸು ಮಾಡಿ. ಬಡವರಿಗೆ ಸಹಾಯ ಹಸ್ತ ಚಾಚಿ. ಕೊಟ್ಟದ್ದು ತನಗೆ, ಮುಚ್ಚಿಟ್ಟದ್ದು ಪರರಿಗೆ. ಕೊಟ್ಟಿದ್ದು ಕೆಟ್ಟಿತೆನ್ನೆಬೇಡ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ