ಭಾನುವಾರ, ಮಾರ್ಚ್ 29, 2020

Ground water Just in A Feet (Water Magic) ಒಂದೇ ಅಡಿಯಲ್ಲಿ ಸಮೃದ್ಧ ನೀರು... !

ಸ್ವಾನುಭವ

 ಒಂದೇ ಅಡಿಯಲ್ಲಿ ಸಮೃದ್ಧ ನೀರು... !


Please watch and subscribe my Youtube channal: https://www.youtube.com/channel/UCw4dehXSFlG4sS9xYiRkjPA?view_as=subscriber


Pl watch my  these blogs. 

Kodagu Darshini : https://koodanda.blogspot.com/


Kodagu Darshini (Kodagina Antaranga):https://koodagudarshini.blogspot.com/



ಹೊಸದಾಗಿ ಕಟ್ಟಿಸಿದ್ದ ಗೂಡಿಗೆ 2019ರ ಫೆಬ್ರವರಿ ಮಾಸದಲ್ಲಿ ಆಗಮಿಸಿದ್ದೆವು. ನಮಗೊ, ತರಕಾರಿ, ಹೂವು ಹಣ್ಣು ಇತ್ಯಾದಿಗಳನ್ನು ಬೆಳೆದು ತಿನ್ನುವ ಹೆಬ್ಬಯಕೆ. ವಿಷ ತರಕಾರಿ, ಆಹಾರದಿಂದ, ವೈದ್ಯರಿಂದ ದೂರ ಉಳಿಯುವಾಸೆ. ಅದನ್ನು ಇತರಿಗೂ ಹಂಚುವ ಮಹಾದಾಸೆ. ಡಾಂಬರು ರಸ್ತೆಯಂಚಿನಲ್ಲಿಯೇ ಪುಟ್ಟ ಗೂಡು. ಮನೆ ಎಂಬಂತೇನೂ ಇರಲಿಲ್ಲ. ಆದರೂ, ಮನೆಗೆ ಬೇಕಾಗುವ ಮೂಲ ಸೌಕರ್ಯಗಳಿಗೇನೂ ಬರವಿರಲಿಲ್ಲ.

20 ಅಡಿ ಆಳದ ಬಾವಿ

 ಮನೆಯಿಂದ 20 ಅಡಿ ದೂರದಲ್ಲಿ ಸರ್ವಋತು  ಡಾಂಬರು ರಸ್ತೆ, ವಿದ್ಯುತ್, ಮೂರಡಿ(!) ದೂರದಲ್ಲಿ ಕುಡಿಯುವ ನೀರಿನ ಸೇದು ಬಾವಿ, ಕಂಪ್ಯೂಟರ್, ಇನ್ವರ್ಟರ್ .. .. ಇತ್ಯಾದಿಗಳಿದ್ದವು. ಆದರೆ, ಫೆಬ್ರವರಿ ಮಾಸಾಂತ್ಯದಲ್ಲಿ ತರಕಾರಿ ಹೂವಿನ ಗಿಡ, ಮನೆ ಬಳಕೆಗೆ ನೀರಿನ ಸಮಸ್ಯೆ ಎದುರಾಗಲು ಆರಂಭವಾಯಿತು. ಹೂಗಿಡ-ತರಕಾರಿ ಗಿಡಗಳಿಗೆ ಹಿತಮಿತ, ಅನುಕ್ರಮವಾಗಿ ಎರಡು-ಮೂರು ದಿನಗಳಿಗೊಮ್ಮೆ ನೀರು ಎಂಬಂತಾಯಿತು. 20 ಅಡಿ ಆಳವಿರುವ ಬಾವಿಯಲ್ಲಿ ಜಲಮಟ್ಟವು 18.5-19  ಅಡಿಗಳಿಗೆ ತಲುಪಿ ನಮ್ಮನೆ ಸದಸ್ಯರುಗಳನ್ನು ಬೆಚ್ಚಿ ಬೀಳಿಸಿತ್ತು. ಅಕ್ಕ-ಪಕ್ಕದಲ್ಲಿ ನೀರಿನ ಮೂಲಗಳೇ ಇರಲಿಲ್ಲ.  ಹನಿ ಕುಡಿಯುವ ನೀರಿಗೂ ಫಲರ್ಾಂಗ್ ದೂರ ಸಾಗಬೇಕಾಬೇಕಾಗಬಹುದೆಂಬ ಶಂಕೆ ಮನದಲ್ಲಿ ತಂದಿತ್ತು- ಅಳುಕು ! ಹಲವರು ಕಾಫಿ ತೋಟಗಳಿಗೆ ತುಂತುರು ನೀರು ಹನಿಸಲು ಆರಂಭಿಸಿದ್ದರು. ಪರಿಣಾಮ, ಹಳ್ಳ-ಕೊಳ್ಳಗಳು ಬರಿದಾಗಿದ್ದವು-ಬಣಗುಟ್ಟುತ್ತಿದ್ದವು. ಕೆಲ ದಿನ ನೀರಿನ ಮಿತ ಬಳಕೆಯ ಕಸರತ್ತು ಮುಂದುವರಿದಿತ್ತು.

 ಇಂಗುವ ನೀರು

ನಮ್ಮ ಅದೃಷ್ಟವೋ, ಕಾಫಿಯ ಹೂಮಳೆ ಜನತೆಯ ನಿರೀಕ್ಷೆಗೂ ಮುನ್ನಾ ನಮ್ಮೂರ ಧರೆಯನ್ನು ಮುತ್ತಿಕ್ಕಿತ್ತು. ಬಳಿಕ ಹಂತ-ಹಂತವಾಗಿ ನಮ್ಮ ಬಾವಿಯ ನೀರಿನ ಮಟ್ಟ ಕ್ರಮೇಣ ಏರುತ್ತಾ ಬಂತು. ಹಿಂದಿನ ವರ್ಷದಂತೆ 2019ರಲ್ಲಿಯೂ ಕೊಡಗು ಜಿಲ್ಲೆಯಲ್ಲಿ ಮಳೆ ಮುಸಲಧಾರೆಯಾಗಿ ಸುರಿದು ನದಿ, ಹಳ್ಳ-ಕೊಳ್ಳಗಳೆನ್ನೆಲ್ಲಾ  ಏಕಮಯ  ಮಾಡಿತ್ತು. ನೀರಿಗೆ ಬರವೇನೂ ಇರಲಿಲ್ಲ. ಆದರೂ, ಮುಂಬರುವ ದಿನಗಳಲ್ಲಿ ನೀರಿಗೆ ಬರ ಬರಬಹುದೇನೋ ಎಂಬ ಆತಂಕ ಅನುದಿನವೂ ಮನದ ಮೂಲೆಯಲ್ಲಿ. ಡಿಸೆಂಬರ್ ಮಾಹೆಯಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ನೆಲಮಟ್ಟದಿಂದ 7-8 ಅಡಿಗಳ ಆಳದಲ್ಲಿ ನೀರಿತ್ತು. ತೋಟದಿಂದ ಮಳೆಗಾಲದಲ್ಲಿ ನೀರು ಹೊರಹೋಗಲು ನಿಮರ್ಿಸಿದ್ದ ಎಲ್ಲಾ ಚರಂಡಿಗಳನ್ನು ಅಡ್ಡ ಕಟ್ಟೆ ಕಟ್ಟಿದೆವು. ಹರಿದು ಹೋಗುವ ನೀರನ್ನು ಇಂಗಿಸಲು ಆರಂಭಿಸಿದೆವು. ಹಳ್ಳ-ನದಿ ಸೇರುತ್ತಿದ್ದ ನೀರು ನಿಧಾನಕ್ಕೆ ಚರಂಡಿಗಳಲ್ಲಿ ಶೇಖರಣೆಗೊಳ್ಳಲಾರಂಭಿಸಿತ್ತು.ತೇವಾಂಶದ ಪರಿಣಾಮ ಕಾಫಿ ತೋಟದಲ್ಲಿ ನೆರಳಿನ ಮರಗಳು, ಕಾಡುಜಾತಿಯ ಮರಗಳು, ಹಣ್ಣು ಹೂವಿನ ಗಿಡ-ಮರಗಳು, ಕಾಫಿ ಗಿಡಗಳು ಜನವರಿ ಮಾಸದಲ್ಲಿ ಚಿಗುರಲಾರಂಭಿಸಿದವು. ಎಲ್ಲೆಡೆಯೂ ಹಸಿರೇ ಹಸಿರು ! ಒಂದೆರಡೇ ದಿನಗಳಲ್ಲಿ ಎಲ್ಲಾ ಚರಂಡಿಗಳು ಭತರ್ಿಯಾದವು. ಮಣ್ಣು ಸಂಪೂರ್ಣ ಸಡಿಲಗೊಂಡಿತ್ತು.

ಜೀವಾಮೃತದ ಬಳಕೆ
ಸಂಪೂರ್ಣ ಸಾವಯವ ಕೃಷಿ ಅಳವಡಿಕೆ(ಕೃಷಿಗೆ ಜೀವಾಮೃತ ಬಳಕೆ)ಯಿಂದಾಗಿ ಇರುವ ಸಣ್ಣ ತೋಟವಿಡೀ ಎರೆಹುಳಗಳ ದಬರ್ಾರು ಜೋರಾಗಿ ನಡೆಯುತ್ತಿತ್ತು. ಅವು ನಮ್ಮ ಜೀವಂತ ಟ್ರ್ಯಾಕ್ಟರ್ಗಳು. ಸಂಬಳವಿಲ್ಲದೆ, ಹಗಲಿರುಳೂ ಜಮೀನಿನ ಉಳುಮೆ ಆರಂಭಿಸಿದ್ದವು. ಭೂಮಿ ನೈಸಗರ್ಿಕವಾಗಿ ಹಸನಾಗಿತ್ತು. ಎರೆಹುಳಗಳ ಉಳುಮೆಯ ಪರಿಣಾಮ, ಭೂಮಿಯು ಜರಡಿಯಂತೆ ತೂತಾಗಿತ್ತು. ಅಲ್ಲೆಲ್ಲ ನೀರು ಧರೆಯನ್ನು ಸೇರಲಾರಂಭವಾಯಿತು. ನೀರಿನಿಂದಾಗಿ, ಸಾವಯುವ ಗೊಬ್ಬರ ಬಳಕೆಯಿಂದ ಅವು ಕ್ರಿಯಾಶೀಲವಾಗಿದ್ದವು. ತೋಟದ ಎಲ್ಲೆಡೆಯೂ ಎರೆಮಣ್ಣು ಕಾಣಿಸಲಾರಂಭಿಸಿತ್ತು. ತೋಟಕ್ಕೆ ಜೀವಾಮೃತ ಕೊಡುವುದು ಈಗ ಸುಲಭವೆನಿಸಿತ್ತು. ಚರಂಡಿಗಳೆಲ್ಲಾ ಭತರ್ಿಯಾಗಿದ್ದವಲ್ಲ ! ಇದರ ಪರಿಣಾಮ ಇಡೀ ತೋಟವೇ ಇಂಗು ಗುಂಡಿಯಾಗಿ ಬದಲಾಗಿತ್ತು. ಬಾವಿ ಸೇರಿದಂತೆ ಪುಟ್ಟ ತೋಟವು ಭೂಮಿಗೆ 'ಜಲಮರುಪೂರಣ' ಮಾಡಲಾರಂಭಿಸಿತ್ತು. ನಮ್ಮ ಮನೆಯ ಕೆಳಭಾಗದಲ್ಲಿರುವ ಗದ್ದೆಗಳಲ್ಲಿಯೂ ನೀರು ಶೇಖರಣೆಯಾಗಲಾರಂಭಿಸಿತ್ತು. ಕೇವಲ ಒಂದೆರಡೇ ದಿನಗಳಲ್ಲಿ ಬಾವಿಯ ನೀರಿನ ಮಟ್ಟದಲ್ಲಿ ಬಾರೀ ಬದಲಾವಣೆಯಾಗಿತ್ತು. ನೀರು ಕೊಯ್ಲುವಿಗೂ ಮುನ್ನಾ ಸುಮಾರು 7.5-8 ಅಡಿ ಆಳದಲ್ಲಿದ್ದ ನೀರು ಒಂದೇ ಸಮನೆ ಏರಲಾರಂಭವಾಯಿತು. ಜನವರಿ ಮಾಸದ ಎರಡನೇ ವಾರದಲ್ಲಿ ಬಾವಿಯ ಸುತ್ತಲೂ 4-5 ಅಡಿ ಆಳಕ್ಕೆ ಎರಡು ಗುಂಡಿಗಳನ್ನು ತೋಡಿದೆವು. ನೀರಿನ ಒಳ ಹರಿವು ಹೆಚ್ಚಾಗಿದ್ದ ಕಾರಣ ಅಧಿಕ ಆಳ ತೋಡಲಾಗಲಿಲ್ಲ !

ನೀರು ಕೊಯ್ಲು ಆರಂಭ
ಸಂಜೆ ವೇಳೆಗಾಗಲೇ ಗುಂಡಿ ತೋಡುವ ಕಾರ್ಯ ಮುಗಿದಿತ್ತು. ಅರ್ಧ ಘಂಟೆಯಲ್ಲೇ ನೀರು ಕೊಯ್ಲು ಮಾಡಲು ಮಾಡಿದ್ದ ಗುಂಡಿಯಲ್ಲಿ ನೀರು ತುಂಬಿತ್ತು. ಮಾರನೇ ದಿನ ಮುಂಜಾನೆಯೇ ಎದ್ದು ಬಾವಿಯನ್ನು ಇಣುಕಿದೆವು. ನಾವು ನಿರೀಕ್ಷಿಸಿದ್ದಕ್ಕಿಂತಲೂ ಮೇಲೆ ಬಂದಿತ್ತು ನೀರು. ನೆಲಮಟ್ಟದಿಂದ ಕೇವಲ ಒಂದೇ ಅಡಿ ಆಳದಲ್ಲಿ ನೀರಿತ್ತು ! ನೆಲಮಟ್ಟದಿಂದ. ( ಮೂರು ಬಳೆಗಳು( ರಿಂಗ್) ನೆಲಮಟ್ಟದ ಮೇಲಿವೆ.
 ಬೆಳಿಗ್ಗೆಯೇ ಮಗ ಪ್ರಣವ್ ಹಲವಾರು ಚಿತ್ರ ತೆಗೆದ. ನೀರು-ನೀರೆಂದು ಹಾಹಾಕಾರ ಕೇಳಿ ಬರುತ್ತಿದ್ದ ದೂರದೂರಿನಲ್ಲಿರುವ ಬಂಧು-ಬಳಗದವರಿಗೂ ಸ್ನೇಹಿತರಿಗೂ ಸಾಮಾಜಿಕ ಜಾಲತಾಣದ ಮೂಲಕ ಕಳುಹಿಸಿದೆವು. ನೆರೆಹೊರೆಯ ಕೆಲವರು ಅಂದು ಸಂಜೆಯೇ ಮನೆಗೆ ಬಂದರು. ಬಾವಿಯಲ್ಲಿ ಇಣುಕಿದರು. ಆಗಲೇ ನಾನು ಬಾವಿಗೆ ಅಡಿಕೋಲು(ಸ್ಕೇಲ್) ಅನ್ನು ಹಗ್ಗದ ಮೂಲಕ ಇಳಿಯ ಬಿಟ್ಟಿದ್ದೆ. ನೀರಿನಾಳ ಎಲ್ಲರಿಗೂ ಅತ್ಯಂತ ನಿಖರವಾಗಿ, ಕರಾರುವಕ್ಕಾಗಿ ತಿಳಿಯುವ ಪ್ರಯತ್ನ ಮಾಡಿದ್ದೆ. ನೀರು ಅಡಿಕೋಲನ್ನು ಮೆತ್ತನೆ ಸ್ಪಶರ್ಿಸುತ್ತಿತ್ತು.  ( ಚಿತ್ರ ನೋಡಿ). ಅಕ್ಕ-ಪಕ್ಕದ ಮನೆಗಳವರು ಮನೆಗೆ ಬಂದರು. ನೀರನ್ನು ನೋಡಿದ ಹಲವರು ಸಂತೋಷಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಚಿತ್ರಗಳಿಗೆ ವಾವ್, ಅದೃಷ್ಟವಂತರು, ಭಾಗ್ಯಶಾಲಿಗಳು, ವಂದನೆಗಳು... ಹೀಗೆ ಹತ್ತು ಹಲವಾರು ಸಂತೋಷದ ಮುಕ್ತ ನುಡಿಗಳು.

 ಮಹನೀಯರ ಅತ್ಯಮೂಲ್ಯ ಸಲಹೆಗಳು

ಈ ಪ್ರಯತ್ನಕ್ಕೆ ಆನ್ಲೈನ್ ಮೂಲಕ ಅಮೂಲ್ಯ ಸಲಹೆಗಳನ್ನಿತ್ತು ಪ್ರೇರಪಣೆ ನೀಡಿದ ಪುತ್ತೂರಿನ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ,, ಚಿತ್ರದುರ್ಗದ ಜಲತಜ್ಞ ಎಂ. ದೇವರಾಜ ರೆಡ್ಡಿ, ತುಮಕೂರಿನ ಸಾವಯವ ಕೃಷಿಕ ಶಿವನಂಜಯ್ಯ ಬಾಳೇಕಾಯಿ ಅವರುಗಳಿಗೆ ನಾನು ಅಭಾರಿ.  ನೀರು ಅದೇ ಮಟ್ಟವನ್ನು ಎಷ್ಟು ದಿನ ಕಾದುಕೊಳ್ಳುತ್ತದೋ ತಿಳಿದಿಲ್ಲ. ಈಗಂತೂ ನೆಲಮಟ್ಟದಿಂದ ಒಂದು-ಒಂದೂವರೆ ಅಡಿಯವರೆಗೆ ನೀರಿನ ಮಟ್ಟ ಏರಿಳಿಯುತ್ತಿರುತ್ತದೆ ! ಬೆಳಿಗ್ಗೆ ನೀರಿನ ಮಟ್ಟ ಏರಿಕೆಯಾಗಿರುತ್ತದೆ. ಹೊತ್ತು ಏರಿದಂತೆ ನೀರಿನ ಮಟ್ಟ ನಿಧಾನಕ್ಕೆ ಇಳಿಯುತ್ತದೆ.

ನಿಮ್ಮ ಕೆಲಸ-ಸರಕಾರಿ ಸಂಬಳ !
ನೀವು ಇಂತಹ ಪ್ರಯತ್ನದಿಂದ ನೀರ ಸಮಸ್ಯೆಯಿಂದ ಪಾರಾಗಬಹುದು. ಉದ್ಯೋಗಖಾತ್ರಿ ಯೋಜನೆಯಡಿ ಇದಕ್ಕೆ ಸರಕಾರದ ಸಹಾಯಧನವೂ ಲಭ್ಯ. ನಿಮ್ಮ ಕೆಲಸಕ್ಕೆ ಸರಕಾರ ಸಂಬಳ ನೀಡುತ್ತದೆ !  ಬಳಸಿಕೊಳ್ಳಿ. ನೀರಿನ ವಿಚಾರದಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗಿ. ನಾಳಿನ ನೀರಿನ ನೆಮ್ಮದಿಗಾಗಿ ಇಂದೇ ಕಾರ್ಯ ತತ್ಪರರಾಗಿ. ವಿವರಗಳಿಗೆ ಸಮೀಪದ ಗ್ರಾಮ ಪಂಚಾಯಿತಿ ಕಛೇರಿಯನ್ನು  ಸಂಪಕರ್ಿಸಿರಿ.