ಸೋಮವಾರ, ಮಾರ್ಚ್ 23, 2020

ಶಾಸ್ತ ಈಶ್ವರ ದೇಗುಲದ ನವೀಕರಣ-ಪುನಃಪ್ರತಿಷ್ಠಾಪನೆ . Sasthave Temple , Hoddur.

ಶಾಸ್ತ ಈಶ್ವರ ದೇಗುಲದ ನವೀಕರಣ-ಪುನಃಪ್ರತಿಷ್ಠಾಪನೆ 

ಮೂರ್ನಾಡು ಸನಿಹದ ಹೊದ್ದೂರುವಿನ ಶ್ರೀಶಾಸ್ತ ಈಶ್ವರ ದೇವಳದ ನವೀಕರಣ ಕಾರ್ಯ ಭರದಿಂದ ಸಾಗಿದೆ. ಹಲವಾರು ವರ್ಷಗಳಿಂದ ಈ ಕೆಲಸ ನಡೆಯುತ್ತಿದ್ದು, ಅಂತಿಮ ಘಟ್ಟದತ್ತ  ಸಾಗುತ್ತಿದೆ. 

Please watch and subscribe my Youtube channal: https://www.youtube.com/channel/UCw4dehXSFlG4sS9xYiRkjPA?view_as=subscriber

Pl watch my  these blogs. 

Kodagu Darshini : https://koodanda.blogspot.com/

Kodagu Darshini (Kodagina Antaranga):https://koodagudarshini.blogspot.com/

Kodagu a Wonder land :https://kodaguawonderland.blogspot.com/


ಹಿನ್ನೆಲೆ-ಸ್ಥಳ ಮಹಿಮೆ
ಸುಮಾರು ಐನೂರು ವರ್ಷಗಳ ಹಿಂದೆ ನೆರೆಯ ಕೇರಳ ರಾಜ್ಯದಿಂದ ಹೊದ್ದೂರು ಗ್ರಾಮಕ್ಕೆ ಆಗಮಿಸಿದ ಈಶ್ವರ ದೇವನು ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದನೆಂಬ ಐತಿಹ್ಯವಿದೆ. ಈ ಮಂದಿರವಿರುವುದು, ಅಯಿರನಾಡ್, ಹಿಂದಿನ ಕುಯ್ಯಂಗೇರಿನಾಡ್ಗೆ ಸೇರಿದ ಹೊದ್ದೂರು ಗ್ರಾಮದಲ್ಲಿ. ಹಿಂದಿನಕಾಲದಲ್ಲಿ ಋಷಿಮುನಿಗಳು ತಪಸ್ಸು ಮಾಡಿದ ಪುಣ್ಯ ಭೂಮಿಯಲ್ಲಿ. ಶತಮಾನಗಳ ಹಿಂದೆ ಸ್ಥಾಪನೆಯಾದ ವಿಶೇಷ ದೇವ ನೆಲೆ, ಇಂದಿನ ಜನತೆ ಆರಾಧಿಸುತ್ತಿರುವ ದೈವ ಕೇಂದ್ರ. 
ಸ್ಥಳ ಮಹಿಮೆ: ಪೂರ್ವಕಾಲದಲ್ಲಿ ದುಷ್ಟಜನರು ಗ್ರಾಮದ ಮೇಲೆ ದಾಳಿ ಮಾಡಿದ್ದರು. ಆನತೆ ಜೀವ ಉಳಿದರೆ ಸಾಕೆಂದು ಪಲಾಯನ ಮಾಡಲು ಆರಂಭಿಸಿದ್ದರು. ಆ ಸಮಯದಲ್ಲಿ ಗೋಪಾಕನ ಮೈಮೇಲೆ ಬಂದ ದೇವಶಕ್ತಿ ಪಲಾಯನ ಮಾಡುವುದು ಬೇಡ. ನಿಮ್ಮೊಂದಿಗೆ ನಾನೀರುವೆ. ಎನ್ನುವ ಅಭಯ ನೀಡಿತಂತೆ ! ಜೊತೆಯಾಗಿ ಬಂದ ಅಪೂರ್ವ ಶಕ್ತಿ ಕೆಂದುಂಬಿಯಾಗಿ ಪರಿವರ್ತನೆಗೊಂಡು, ದುಷ್ಟರ ಮೇಲೆರಗಿ ಅವರನ್ನು ಸಂಹಾರ ಮಾಡಿತೆಂದು ಪುರಾಣ ಕಥೆಯು ಸಾರುತ್ತಿದೆ. ಅದೇ ಸ್ಥಳವು ಇಂದಿನ ಚೋರಂಗೆ ಮಂದ್ ಎಂದು ಪ್ರಖ್ಯಾತವಾಗಿದೆ. ದೇವರನ್ನು ಆರಾಧಿಸಿ, ಪುತ್ತರಿ ಕೋಲಾಟ ನಡೆಸುವದು ಆಚರಣೆಯಲ್ಲಿದೆ. 



 ಅಪೂರ್ವ ಬಾವಿ: ದೇವಳದ ಆವರಣದಲ್ಲಿ ಪುರಾತನ ಕಾಲದ ಬಾವಿ ಇದೆ.  ವರ್ಷ ಪೂರ್ತಿ ಸಮೃದ್ಧ

ನೀರಿರುವ ಇದು ಜೂನ್ ತಿಂಗಳಲ್ಲಿ  ಸಂಪೂರ್ಣ ಬತ್ತಿ ಹೋಗುತ್ತದೆ ! 
ದೇವಳದ ಆವರಣದಲ್ಲಿ ದೇವರ ರಕ್ಷಕರಾಗಿ, ಮಹಾಗಣಪತಿ, ಬೇಟೆ ಅಯ್ಯಪ್ಪ, ಚಾಮುಂಡಿ ದೇವ-ದೈವಗಳ ಗುಡಿಗಳಿವೆ. 
180 ಲಕ್ಷ ವೆಚ್ಚ : ಈ ದೇವಸ್ಥಾನವು ಹಲವಾರು ವರ್ಷಗಳಿಂದ ಮೂಲೆಗುಂಪಾಗುವ ಸ್ಥಿತಿಗೆ ಬಂದಿತ್ತು. ಇದೀಗ ದೇಗುಲವನ್ನು ದಾನಿಗಳ ನೆರವಿನಿಂದ ಪುನರ್  ನಿರ್ಮಾಣ ಮಾಡಲಾಗುತ್ತಿದೆ.  ದೇವಾಲಯದ ಪುನಃ ನಿರ್ಮಾಣ ಕಾರ್ಯವು ಪ್ರಮುಖ ದಾನಿ ಹೊದ್ದೂರಿನ ಕೂಡಂಡ ರಾಜೇಂದ್ರ  ಅಯ್ಯಮ್ಮ  ಅವರ ನೇತೃತ್ವದಲ್ಲಿ ನಡೆಯುತ್ತಿದೆ. 






ಸುಮಾರು 180ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಈ ಕಾರ್ಯವು ಭರದಿಂದ ನಡೆಯುತ್ತಿದೆ. ಈ ದೇಗುಲದ ನವೀಕರಣಕ್ಕೆ ದಾನಿಗಳಿಂದ ತನುಮನಧನದ ಸಹಾಯವನ್ನು ಕೋರಲಾಗಿದೆ. ಧನ ಸಹಾಯ ನೀಡುವ ದಾನಿಗಳು,   ಮೂರ್ನಾಡಿನ 

  ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ: 11042200029212, ( ಐಎಫ್ಎಸ್ ಕೋಡ್ - 0001104) ಗೆ ಕಳುಹಿಸಿ ಕೊಡಬಹುದು.
ಪುನರ್ ಪ್ರತಿಷ್ಠಾಪನೆ:  ನೂತನ ದೇಗುಲದ ಪುನರ್ ಪ್ರತಿಷ್ಠಾಪನಾ ಮಹೋತ್ಸವವು  ಫೆಬ್ರವರಿ 12 ರಿಂದ 17ರವರೆಗೆ   ನಡೆಯಲಿದೆ. 
ವಾರ ಕಾಲ ನಡೆಯುವ  ವಿವಿಧ ಪೂಜಾ ಕೈಂಕರ್ಯಗಳಿಗೆ ವಸ್ತು ವಗೈರೆಗಳ ಆಗತ್ಯವಿದೆ. ಅಕ್ಕಿ, ಎಣ್ಣೆ, ತೆಂಗಿನಕಾಯಿ, ತರಕಾರಿ, ಹೂವು, ಹಣ್ಣುಗಳನ್ನು ಯಥೋಚಿತವಾಗಿ ದಾನಿಗಳು ನೀಡುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.