ನೀರಿಲ್ಲ, ನೆರಳಿಲ್ಲ...!
ಒಣಗಿ ಕರಕಲಾಗುತ್ತಿರುವ ಪ್ರಯಾಣಿಕರು !
ಕೇಳುವವರಾರಯ್ಯ ನಮ್ಮ ಗೋಳು ?
ಈ ದೃಶ್ಯವನ್ನು ಕಂಡೂ ಕಾಣದಂತೆ ಸಾಗುವವರು ಬಹುತೇಕ ಮಂದಿ. ಕೆಲವರು ಅವರ ದಯನೀಯ ಸ್ಥಿತಿಗೆ ಮರುಗುವವರು. ಖಾಸಗಿ ಬಸ್ಸ್ ನಿಲ್ದಾಣದ ಗೋಳನ್ನು ಹೇಳಲೂ ಆಗದೇ ಅನುಭವಿಸಲೂ ಆಗದೇ ತಮ್ಮ ಕಾಯಕವನ್ನು ಮಾಡುತ್ತಿರುವ ಸಿಬ್ಬಂದಿ ವರ್ಗ !
ಇದು ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಸದ್ಯದ ಪರಿಸ್ಥಿತಿ. ಯಾರಿಗೂ ಇಲ್ಲಿ ಬಿಸಿಲಿನ ಝಳದಲ್ಲಿ ಒಣಗಿ ಕರಕಲಾಗುತ್ತಿರುವ ಪ್ರಯಾಣಿಕರ ಗೋಳನ್ನಂತೂ ನೋಡುವುದು ಅಸಾಧ್ಯ. ಖಾಸಗಿ ಬಸ್ ನಿಲ್ದಾಣದಲ್ಲಿ ಭೂ ಕುಸಿತ ನಡೆದು ಹಲವಾರು ತಿಂಗಳುಗಳೇ ಕಳೆದವು. ಕಟ್ಟಡದ ತೆರವು, ಭೂ ಕುಸಿತದಿಂದ ಬಿದ್ದ ಮಣ್ಣನ್ನು ತೆರವು ಮಾಡಲಾಗಿದೆ. ಖಾಸಗಿ ಬಸ್ಸುಗಳು ಇಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿವೆ. ಇಲ್ಲಿಂದಲೇ ಬಹುತೇಕ ಪ್ರಯಾಣಿಕರು ಬಸ್ಸನ್ನೇರುತ್ತಾರೆ. ಆದರೆ,...
ಕನಿಷ್ಠ ಮೂಲಭೂತ ಸೌಕರ್ಯವಿಲ್ಲ !
ಜಿಲ್ಲಾ ಕೇಂದ್ರವಾದ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದಲ್ಲಿ ಕನಿಷ್ಠಪಕ್ಷ ಇರಬೇಕಾದ ಮೂಲಭೂತ ಸೌಕರ್ಯಗಳೇ ಇಲ್ಲ ! ? ಪ್ರಯಾಣಿಕರಿಗೆ ಕುಡಿಯಲು ಶುದ್ಧ ನೀರು, ನೆರಳು, ಶೌಚಾಲಯ ಮುಂತಾದ ವ್ಯವಸ್ಥೆ ಕಲ್ಪಿಸುವುದು ನಗರ ಸಭೆಯ ಮತ್ತು ಜಿಲ್ಲಾಡಳಿತದ ಹೊಣೆ. ಇದಾವುದನ್ನು ಮಾಡದೆ ಸರಕಾರವು ಬಸ್ಗೆ ತೆರಿಗೆ ಕಟ್ಟಿಸಿಕೊಳ್ಳುತ್ತಿದೆ. ಜಿಲ್ಲೆಯ ಹಲವಾರು ಸ್ಥಳಗಳಲ್ಲಿ (ಮೂನರ್ಾಡು, ನಾಪೋಕ್ಲು) ರಸ್ತೆಯಲ್ಲಿಯೇ ಬಸ್ಸುಗಳು ನಿಲ್ಲುತ್ತವೆ. ಇದಕ್ಕೆ ಬಸ್ಸು ನಿಲ್ದಾಣವೆಂಬ ಹೆಸರಿದೆ. ಈಗ ಈ ಸಾಲಿಗೆ ಮಡಿಕೇರಿ ಜಿಲ್ಲಾ ಕೇಂದ್ರವು ವಿನೂತನ ಸೇರ್ಪಡೆ. ಪ್ರತೀ ದಿನವೂ ಈ ನಿಲ್ಧಾಣಕ್ಕೆ ಸಾವಿರಾರು ಪ್ರಯಾಣಿಕರು ಬರುತ್ತಾರೆ, ಹೋಗುತ್ತಾರೆ. ಅದೇ ರೀತಿ ಸಾವಿರಾರು ವಿದ್ಯಾಥರ್ಿಗಳು. ಇವರಿಗೆಲ್ಲಾ ಕನಿಷ್ಠ ಸೌಕರ್ಯ ಒದಗಿಸಬೇಕೆಂಬ ಕಾಳಜಿಯೂ ನಮ್ಮ ಜನಪ್ರತಿನಿಧಿಗಳಿಗೆ , ಅಧಿಕಾರಿ ವರ್ಗದವರಿಗೂ ಇಲ್ಲ. ಕೆಲ ಮಾಧ್ಯಮಗಳಲ್ಲಿ ಈ ವಿಚಾರ ಪ್ರಸ್ತಾಪವಾದರೂ ಇವರ ದಪ್ಪ ಚರ್ಮಕ್ಕೆ ಅದು ನಾಟಿದಂತೆ ಇಲ್ಲ.ಆಟಕ್ಕುಂಟು, ಲೆಕ್ಕಕ್ಕಿಲ್ಲ !
ನಮಗೆ ಎಷ್ಟೊಂದು ಜನಪ್ರತಿನಿಧಿಗಳು , ಅಧಿಕಾರಿಗಳು...!?ಸಂಸದರು, ಶಾಸಕರು, ಜಿಲ್ಲಾಡಳಿತ, ನಗರಸಭೆ, ಮಡಿಕೇರಿ ಅಭಿವೃದ್ಧಿ ಪ್ರಾಧಿಕಾರ... ಎಲ್ಲರೂ ಇದ್ದಾರೆ. ಸಾಕಷ್ಟು ಸಂಖ್ಯೆಯ ಅಧಿಕಾರಿಗಳೂ ಇದ್ದಾರೆ. ಇವರಿಗೆಲ್ಲಾ ಏನಾಗಿದೆ ? ತೀವ್ರ ನಿರ್ಲಕ್ಷ್ಯ ? ಇವರೆಲ್ಲಾ ಇರುವುದೇ ಜನತೆಯ ಸೇವೆ ಮಾಡಲು. ಜನತೆ ಆರಿಸಿದ ಕೆಲಸಗಾರರು ಇವರು . ಆದರೆ, ಎಲ್ಲರಿಗೂ ಅಧಿಕಾರ ಬೇಕು. ಕೆಲಸ ಮಾಡಲು ಮಾಡಿಸಲು ಬಹುತೇಕ ಮಂದಿಗೆ ಆಸಕ್ತಿ ಇಲ್ಲ. ಕಾಳಜಿ ಇಲ್ಲ. ಇಚ್ಛಾಶಕ್ತಿಯಂತೂ ಮೊದಲೇ ಇಲ್ಲ.
ಸ್ಥಳೀಯ ಆಡಳಿತವು , ಅಂದರೆ, ಮಡಿಕೇರಿ ನಗರಸಭೆ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ, ಅದು ಜಾಣಮೌನಕ್ಕೆ ಶರಣಾಗಿದೆ.
ಇದೇ ವಿಚಾರವನ್ನು ಕೆಲ ಮಾಧ್ಯಮದವರು ಪ್ರಸ್ತಾಪಿಸಿದ್ದರೂ, ಅದನ್ನು ಪರಿಗಣಿಸದೇ ಜಾಣ ಮೌನಕ್ಕೆ ಶರಣಾಗಿರುವುದು ಖಂಡನೀಯ.
ಅನುಮತಿ ನೀಡುತ್ತಿಲ್ಲ.
ಜನತೆಯ ಸಂಕಟ ಕಂಡು ಕೆಲವು ಖಾಸಗಿ ಸಂಘ- ಸಂಸ್ಥೆಗಳು ಇಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿಮರ್ಾಣಕ್ಕೆ ಮುಂದಾಗಿವೆಯಂತೆ. ಆದರೂ, ನಮ್ಮ ಆಡಳಿತ ಮತ್ತು ಆಧಿಕಾರಿ ವರ್ಗ ಇದಕ್ಕೆ ಅನುಮತಿಯನ್ನೇ ನೀಡಲು ನಿರಾಕರಿಸಿವೆಯಂತೆ. ಹಾಗಾದಲ್ಲಿ ಇವರೆಲ್ಲಾ ಇರುವುದು ಜನತೆಯ ಒಳಿತಿಗಾಗಿಯೋ, ಅವರನ್ನು ಹಿಂಸೆಗೆ ಸಿಲುಕಿಸಲೇ ಎಂಬ ಸಂಶಯ ಯಾರಾಗಿದರೂ ಬರಲೇ ಬೇಕಲ್ಲ !?ತಮಗೂ ಈ ಕಾರ್ಯ ಮಾಡುವ ಯೋಗ್ಯತೆ ಇಲ್ಲ. ಮಾಡುವವರಿಗೂ ಬಿಡುವುದಿಲ್ಲ ಅಂದರೆ, ಏನರ್ಥ !
ಹವಾನಿಯಂತ್ರಿತ ಕಛೇರಿಯಲ್ಲಿ ಕುಳಿತು ಎದ್ದು ದಿನದೂಡೀ ಸಂಬಳ, ದಿನಭತ್ಯೆ ಎಣಿಸುವ ಜನಪ್ರತಿನಿಧಿಗಳೇ, ಅಧಿಕಾರಿಗಳೇ ನೀವು ನಿಮ್ಮ ಕುಟುಂಬದ ಸದಸ್ಯರೊಡನೆ ಬಂದು ಖಾಸಗಿ ಬಸ್ ನಿಲ್ಧಾಣದಲ್ಲಿ ಒಂದೆರಡು ಘಂಟೆ ಕಾಲ ಬಸ್ಗಾಗಿ ಕಾಯಿರಿ. ಆಗ ನಿಮಗೂ ಅರಿವಾದೀತು ಜನತೆ ಸಂಕಟ ಏನೆಂದು ? ಕುಡಿಯುಲು ನೀರಿಲ್ಲದೇ, ಬಿಸಿಲನ್ನು ಎದುರಿಸುವುದು ಹೇಗೆಂದು ತಿಳಿಯಲಿ ನಿಮಗೆ.
https://www.youtube.com/watch?v=zIoZ8hwAZxA