ಶನಿವಾರ, ಮಾರ್ಚ್ 24, 2018

“ ಗೊಬ್ಬರದ” ಮರ Manure Tree........! Gliricidia maculata





 

ಗ್ಲಿರಿಸಿಡಿಯಾ ಎಂಬ “ಗೊಬ್ಬರದ” ಮರ 


     ಬರಹ: ಕೂಡಂಡ ರವಿ., ಹೊದ್ದೂರು. ಕೊಡಗು.



ಇದು ಬಹುವಾರ್ಷಿಕ, ಮಧ್ಯಮ ಗಾತ್ರದ (2-15 ಮೀಟರ್ ) ಎತ್ತರದ ಮರವಾಗಿದೆ. ಇದು ಶುಷ್ಕ ಋತುವಿನಲ್ಲಿ ಹೆಚ್ಚಾಗಿ ಮತ್ತು ಚೆನ್ನಾಗಿಯೂ  ಬೆಳೆಯುತ್ತದೆ. . ಆದರೆ,  ಆರ್ದ್ರ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣವಾಗಿ ಉಳಿಯುತ್ತದೆ.
ಗ್ಲಿರಿಸಿಡಿಯಾ ಎಂಬುದು ಪ್ರೋಟೀನ್-ಸಮೃದ್ಧ ಮೇವು ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಪ್ರಮುಖ ಉಷ್ಣವಲಯದ ಮೇವು ಮರಗಳಲ್ಲಿ ಒಂದಾಗಿದೆ.. ಕತ್ತರಿಸಿದ ದಂಟು ಮತ್ತು ಎಲೆಗಳಿಂದ   ರಾಸುಗಳಿಗೆ ಮೇವು ತಯಾರಿಸಲು ಸಹ ಸಾಧ್ಯವಿದೆ, ಇದನ್ನು ಹುಲ್ಲು ಅಥವಾ ಮೆಕ್ಕೆ ಜೋಳದೊಂದಿಗೆ ಬೆರೆಸಬಹುದು.
ನಾಟಿ ವಿಧಾನ
ಗ್ಲಿರಿಸಿಡಿಯಾವನ್ನು ಬೀಜಗಳು ಅಥವಾ ಕಾಂಡದ ಕತ್ತರಿಸಿದ ಮೂಲಕ ನೆಡಬಹುದು. ಬೀಜಗಳನ್ನು ಬಳಸುವಾಗ, ಬೀಜಗಳನ್ನು ಪಾಲಿ ಚೀಲಗಳಲ್ಲಿ ಹೆಚ್ಚಿಸುವುದು ಉತ್ತಮ. ಬೀಜಗಳನ್ನು  ಬಿತ್ತುವ ಮೊದಲು ರಾತ್ರಿ ಬೀಜಗಳನ್ನು ನೆನೆಸಿ. ಬಹುತೇಕ ಎಲ್ಲಾ ಬೀಜಗಳು ವಾರದಲ್ಲಿ ಮೊಳಕೆಯೊಡೆಯುತ್ತವೆ. 6 ರಿಂದ 8 ವಾರಗಳ ನಂತರ ಸಸ್ಯಕ್ಷೇತ್ರಗಳಲ್ಲಿ ನೆಡಬಹುದು.


ಕಾಂಡದಿಂದ ಸಸ್ಯಾಭಿವೃದ್ಧಿ
ಗ್ಲಿರಿಸಿಡಿಯಾವನ್ನು ಕತ್ತರಿಸಿದಿಂದ ಕಾಂಡದಿಂದ  ಕೂಡಾ ಬೆಳೆಯಬಹುದು. ಕತ್ತರಿಸಿದ  ಕೊಂಬೆಗಳು  7 ಸೆಂಟಿ ಮೀಟರ್  ವ್ಯಾಸದಲ್ಲಿರಬೇಕು, ಅವುಗಳನ್ನು 45 ಡಿಗ್ರಿ ಕೋನದಲ್ಲಿ ವಾರೆಯಾಗಿ,  ತುದಿ ಚೂಪಾಗಿರುವಂತೆ ಕತ್ತರಿಸಬೇಕು.  ತೊಗಟೆ ಕಿತ್ತು ಹೋಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ಬೇರೆ ಮರದ ಹಾರೆಯಂತಹ ಸಾಧನ ಬಳಸಿ ಗುಣಿ ಮಾಡಿ ಅದರಲ್ಲಿ ಈ ಕಾಂಡವನ್ನು ನೆಡಬೇಕು. 2 ಅಡಿಯಿಂದ 5 ಅಡಿ ಅಳತೆಯ ದಪ್ಪನೆಯ ಕಾಂಡವನ್ನು ನಾಟಿಗಾಗಿ ಬಳಸಿ. ಪ್ರತಿ ಕಾಂಡದಿಂದ ಕಾಂಡಕ್ಕೆ 2 ರಿಂದ 5 ಅಡಿಯವರೆಗೂ ನೆಡಬಹುದು. ಇವುಗಳು ಚೆನ್ನಾಗಿ ಚಿಗುರಿದ ಮೇಲೆ ಇದಕ್ಕೆ ತಂತಿಯನ್ನು ಮುಳ್ಳು ತಂತಿ ಸುತ್ತಿ ಬೇಲಿ ನಿರ್ಮಾಣ ಮಾಡಬಹುದು.


ಗಿಡಗಳ ನಾಟಿ
ಬೆಳೆದ ಸಸ್ಯಗಳ  ಕಡ್ಡಿಗಳನ್ನು ನಾಟಿಗಾಗಿ ಬಳಸಬಹುದು. ಆದರೆ, ಈ ಕಡ್ಡಿಗಳು ಚೆನ್ನಾಗಿ ಬಲಿತಿರಬೇಕು. ಮಳೆಗಾಲದ ಆರಂಭದಲ್ಲಿಯೇ ನಾಟಿ ಮಾಡಿ. ಬೀಜಗಳಿಂದಲೂ ಸಸ್ಯಾಭಿವೃದ್ಧಿ ಸಾಧ್ಯವಿದೆ. ಆದರೇ, ಇವು ಬೆಳೆಯಲು ಸಾಕಷ್ಟು ಸಮಯವಕಾಶ ಬೇಕು. ಸಾದ್ಯವಾದಷ್ಟು ಹಸಿರು ಬೇಲಿಗೆ ಇದನ್ನು ಬಳಸಬಹುದು. ಖಾಲಿ ಜಾಗ, ಕಲ್ಲು ಬಂಡಗಳಿರುವ ಪ್ರದೇಶಗಳಲ್ಲಿ , ರಸ್ತೆಯ ಅಂಚಿನಲ್ಲಿಯೂ ಇದನ್ನು ಧಾರಾಳವಾಗಿ ಬೆಳೆಸಬಹುದು..

ಇದು ಬಹಳಷ್ಟು ಹಸಿರು ಸೊಪ್ಪನ್ನು ವೇಗವಾಗಿ ಉತ್ಪಾದಿಸುತ್ತದೆ. ಈ ಎಲೆಯು ಬೇಗನೆ ಕೊಳೆಯುತ್ತದೆ. ಗ್ಲಿರಿಸಿಡಿಯಾ ಎಲೆಗಳ ಅರ್ಧ-ಜೀವಿತಾವಧಿಯು ಸುಮಾರು 20 ದಿನಗಳು. ಸಸ್ಯವನ್ನು ಮಣ್ಣಿನ  ಗುಣಮಟ್ಟದ ಸುಧಾರಣೆಗಾಗಿ ಬೆಳೆಸಬಹುದು. ಇದರಿಂದಾಗಿ ಇದನ್ನು ಹಲವಾರು ಕಡೆಗಳಲ್ಲಿ ಗೊಬ್ಬರದ ಮರಬ ಹೆಸರಿನಿಂದ ಕರೆಯಲಾಗುತ್ತದೆ. !



ಆಳವಾದ ಬೇರುಗಳು ಮತ್ತು ತ್ವರಿತ ಬೆಳವಣಿಗೆಯ ಕಾರಣ, ಇದನ್ನು ಗಾಳಿಯ ವೇಗ ತಡೆಗಾಗಿ  ಬಳಸಲಾಗುತ್ತದೆ. ಕಡಿದಾದ ಇಳಿಜಾರುಗಳಲ್ಲಿ ಅದು ಹುಲುಸಾಗಿ ಬೆಳೆಯುತ್ತದೆ . ಗ್ರಿರಿಸಿಡಿಯಾವನ್ನು ಸಾಮಾನ್ಯವಾಗಿ ಕಾಫಿ, ಚಹಾ, ಕೊಕೊ ನೆರಳು ಮರವಾಗಿ ಬಳಸಲಾಗುತ್ತದೆ, ಹಲವಾರು ಕಡೆ ಇದಕ್ಕೆ ಕಾಳು ಮೆಣಸಿನ ಗಿಡಗಳನ್ನು ಹಬ್ಬಲು ಆಶ್ರಯ ಮರವಾಗಿ ಬೆಳೆಲಾಗುತ್ತಿದೆ.  ಇದು ಮಣ್ಣಿನ ತಾಪಮಾನವನ್ನು ಕಡಿಮೆಗೊಳಿಸುತ್ತದೆ

ಮೂಲತಃ ಇದು ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕಾದ ಮರ;  ತೊಗಟೆ ನಯವಾದ ಆದರೆ ಬಿಳಿ ಬೂದು ಬಣ್ಣದಿಂದ ಆಳವಾದ ಕೆಂಪು-ಕಂದು ಬಣ್ಣಕ್ಕೆ ಬದಲಾಗಬಹುದು. ಅಮೆರಿಕದ ವಿವಿಧ ಭಾಗಗಳಲ್ಲಿ, ತೊಗಟೆಯನ್ನು ಇಲಿ ವಿಷವಾಗಿ ಬಳಸಲಾಗುತ್ತದೆ ಫ್ಯಾಬೇಸಿಯ ಕುಟುಂಬಕ್ಕೆ ಸೇರಿದ ಮರವಾಗಿದೆ. ಗ್ಲಿರಿಸಿಡಿಯಾ ಸೆಪಿಯಮ್ ಮಧ್ಯಮ ಗಾತ್ರದ ಮರ.  ಅದು 10 ರಿಂದ 12 ಮೀಟರ್ ಎತ್ತರದಲ್ಲಿ ಬೆಳೆಯುತ್ತದೆ. ತೊಗಟೆ ನಯವಾಗಿರುತ್ತದೆ, ಮತ್ತು ಅದರ ಬಣ್ಣವು ಬಿಳಿ ಬೂದು ಬಣ್ಣದಿಂದ ಆಳವಾದ ಕೆಂಪು-ಕಂದು ಬಣ್ಣದಲ್ಲಿರುತ್ತದೆ. ಇದು 30 ಸೆಂ ಉದ್ದವಿರುವ ಸಂಯುಕ್ತ ಎಲೆಗಳನ್ನು ಹೊಂದಿದೆ. ಕಂದು ಬೀಜಗಳನ್ನು ಉತ್ಪಾದಿಸುತ್ತದೆ.

ಅದರ ಸ್ಥಳೀಯ ವ್ಯಾಪ್ತಿಯ ಜೊತೆಗೆ, ಕೆರಿಬಿಯನ್, ದಕ್ಷಿಣ ಅಮೆರಿಕಾದ ಉತ್ತರ ಭಾಗಗಳು, ಮಧ್ಯ ಆಫ್ರಿಕಾ, ಭಾರತದ ಭಾಗಗಳು, ಮತ್ತು ಆಗ್ನೇಯ ಏಶಿಯಾ ಸೇರಿದಂತೆ ಅನೇಕ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತದೆ.

ಮರದ 4.5-6.2  ಪಿ ಹೆಚ್ ಹೊಂದಿರುವ ಆಮ್ಲೀಯ ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಮರವು ಜ್ವಾಲಾಮುಖಿ ಮಣ್ಣುಗಳನ್ನು ಮಧ್ಯ ಅಮೇರಿಕ ಮತ್ತು ಮೆಕ್ಸಿಕೊದಲ್ಲಿನ ತನ್ನ ಸ್ಥಳೀಯ ವ್ಯಾಪ್ತಿಯಲ್ಲಿ ಕಂಡುಬರುತ್ತದೆ. ಆದಾಗ್ಯೂ, ಇದು ಮರಳು, ಮಣ್ಣಿನ ಮತ್ತು ಸುಣ್ಣದ ಮಣ್ಣುಗಳ ಮೇಲೆ ಸಹ ಬೆಳೆಯುತ್ತದೆ.

ಉಪಯೋಗಗಳು
 ಇಂದು ಇದನ್ನು  ಜೀವಂತ ಬೇಲಿಗಾಗಿ ( ಲೈವ್ ಫೆನ್ಸಿಂಗ್)  ಮೇವು, ಉರುವಲು, ಹಸಿರು ಗೊಬ್ಬರ ಮುಂತಾದವುಗಳಿಗೆ ಬಳಸುವರು. ಮಧ್ಯಕಾಲೀನ ಮತ್ತು ಇಲಿ ವಿಷ ಸೇರಿದಂತೆ ಹಲವು ಇತರ ಉದ್ದೇಶಗಳಿಗೆ ಬಳಸಲಾಗುತ್ತದೆ.   1980ರ ದಶಕದಲ್ಲಿ ಸೈಯೆಸೀಡ್ನಿಂದ ವ್ಯಾಪಕವಾಗಿ ವಿಘಟನೆಯಾಗುವಿಕೆಯ ನಂತರ ಇದರ ಬಳಕೆಯು ಅಪಾರವಾಗಿ ವಿಸ್ತರಿಸಿತು


ಜಾನುವಾರುಗಳ  ಮೇವಾಗಿ ಬಳಕೆ
ಮೇವು ಗ್ಲಿರಿಸಿಡಿಯಾ ಎಲೆಗಳು 25 ರಿಂದ 30% ರಷ್ಟು ಕಚ್ಚಾ ಪ್ರೋಟೀನ್ಗಳನ್ನು ಹೊಂದಿರುತ್ತವೆ. ಎಮ್ಮೆ, ಹಸುಗಳು ಮತ್ತು ಮೇಕೆ ಮುಂತಾದ ಮೆಲುಕು ಹಾಕುವವರಿಗೆ ಹೆಚ್ಚು ಜೀರ್ಣವಾಗಬಲ್ಲವು. ಕೆಲವು ಪ್ರಾಣಿಗಳು ವಾಸನೆಯ ಆಧಾರದ ಮೇಲೆ ಎಲೆಗಳನ್ನು ತಿರಸ್ಕರಿಸುತ್ತವೆ, ಅವುಗಳು ಸಾಮಾನ್ಯವಾಗಿ ರುಚಿ ಇಲ್ಲದೆ ತಿರಸ್ಕರಿಸುವುದುಂಟು.  ಅಂತಹ ಸಂದರ್ಭಗಳಲ್ಲಿ ಗ್ಲಿರಿಸಿಡಿಯಾದ ಸಣ್ಣ ಭಾಗಗಳನ್ನು ಇತರ ಮೇವುಗಳೊಂದಿಗೆ ಮಿಶ್ರಣ ಮಾಡಿ ಮತ್ತು ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಕೊಡಲು ಪ್ರಯತ್ನಿಸಬಹುದು.  ಇದನ್ನು ಜಾನುವಾರು, ಕುರಿ ಮತ್ತು ಮೇಕೆಗಳಿಗೆ ಕತ್ತರಿಸಿ ಮೇವುಗಳ ಜೊತೆ ಮಿಶ್ರಣ ಮಾಡಿ ಬಳಸಲೂಬಹುದು..  ಹವಾಗುಣವನ್ನು ಅವಲಂಬಿಸಿ ಪ್ರತಿ 2 ರಿಂದ 4 ತಿಂಗಳುಗಳಲ್ಲಿ ಎಲೆಗಳನ್ನು ಕತ್ತರಿಸಿ ಬಳಸಬಹುದು.   
ರಾಸಾಯನಿಕ ಗೊಬ್ಬರಕ್ಕೆ ಬದಲಿ
ಮರಗಳನ್ನು ಭಾಗದಲ್ಲಿ ಅಂತರ್ ಬೆಳೆಗೆ ಬಳಸಲಾಗುತ್ತದೆ ಏಕೆಂದರೆ ಅವು ಮಣ್ಣಿನಲ್ಲಿ ಸಾರಜನಕವನ್ನು ಸರಿಪಡಿಸಿ ಕಡಿಮೆ ಮಣ್ಣಿನ ಫಲವತ್ತತೆಯನ್ನು ಸಹಿಸಿಕೊಳ್ಳುತ್ತವೆ, ಆದ್ದರಿಂದ ಅವು ಬೆಳೆಗಳೊಂದಿಗೆ ಅಂತರ್ಗತವಾಗಿರುತ್ತದೆಯಾದ್ದರಿಂದ ರಾಸಾಯನಿಕ ರಸಗೊಬ್ಬರಗಳ ಅಗತ್ಯವಿಲ್ಲದೆ ಬೆಳೆ ಇಳುವರಿಯನ್ನು ಗಣನೀಯವಾಗಿ ಹೆಚ್ಚಿಸಬಹುದು.

ಮಣ್ಣಿನ ಮೇಲ್ಮೈನ ಸವೆತವನ್ನು ತಡೆಗಟ್ಟಲು ಇದನ್ನು ಬೆಳೆಸಲಾಗುತ್ತದೆ.  ಕೃಷಿಯನ್ನು ರಕ್ಷಿಸಲು ಸಾಂಪ್ರದಾಯಿಕ ಲೈವ್ ಫೆನ್ಸಿಂಗ್ಗಾಗಿ ಬಳಸಲಾಗುವ ಅತ್ಯುತ್ತಮ ಸಸ್ಯಗಳಲ್ಲಿ ಇದೂ ಒಂದಾಗಿದೆ. ಹಲವರು ಇದರೊಂದಿಗೆ ಆಡುಸೋಗೆಯನ್ನು ಬೇಲಿಗಾಗಿ ಬೆಳೆಸುವರು.  


ಮಣ್ಣು ಮತ್ತು ವಾತಾವರಣದ ಸವಲತ್ತು
ಇದು  ವಿವಿಧ ಮಣ್ಣಿನ ಮತ್ತು ಹವಾಮಾನ ಪರಿಸ್ಥಿತಿಗಳು ಸಹಿಸಿಕೊಳ್ಳುತ್ತದೆ. ವಾರ್ಷಿಕ ಮಳೆ 900 ಮಿಲಿಮೀಟರ್  ಮೀರಿದ ಪ್ರದೇಶಗಳಲ್ಲಿ ಬೆಳವಣಿಗೆಯು ಹೆಚ್ಚು ವೇಗವಾಗಿರುತ್ತದೆ, ಆದರೆ ವಾರ್ಷಿಕವಾಗಿ 400 ಮಿಲಿ ಮೀಟರ್ ಮಳೆ ಬೀಳುವ ಕಡೆ ಇದರ ಬೆಳವಣಿಗೆ ಕೊಂಚ ನಿಧಾನ.
ಗ್ಲಿರಿಸಿಡಿಯಾ ಮಣ್ಣಿನ ಸವೆತ ಮತ್ತು ನೀರಿನ  ಓಡುವಿಕೆಯನ್ನು ನಿಲ್ಲಿಸುತ್ತದೆ. ಇದು ದ್ವಿದಳ  ಸಸ್ಯ - ಇದು ಸಾರಜನಕ ಉತ್ಪಾದಿಸುತ್ತದೆ ಮತ್ತು ಮಣ್ಣಿನ ಸಮೃದ್ಧಗೊಳಿಸುತ್ತದೆ ಮತ್ತು ಇದರಿಂದಾಗಿ ಇತರ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಇತರ ಉದ್ದೇಶಗಳು
ಗ್ಲಿಸಿರಿಡಿಯಾವನ್ನು ಹಸಿರು ಗೊಬ್ಬರವಾಗಿ ಬಳಸಬಹುದು. ಒಂದು ಎಕರೆಯ ಬೇಲಿಯಲ್ಲಿ ಬೆಳೆದರೆ, 2 ಎಕರೆ ಭೂಮಿಗೆ ಬೇಕಾದಷ್ಟು ಹಸಿರು ಎಲೆಗೊಬ್ಬರವನ್ನು ಪೂರೈಸುತ್ತದೆ. ಇದನ್ನು ಎರೆಹುಳದ ಗೊಬ್ಬರ ತಯಾರಿಕೆಗಾಗಿಯೂ ಸಹ ಬಳಸಬಹುದು. ಹೆಚ್ಚಿನ ಪ್ರೋಟೀನ್ ಅಂಶದ ಕಾರಣ ಗ್ಲಿರಿಸಿಡಿಯಾವನ್ನು ಪೂರಕ ಮೇವಾಗಿ ಬಳಸಿದಾಗ  ಹಾಲು ಮತ್ತು ಮಾಂಸ ಉತ್ಪಾದನೆಯು ಹೆಚ್ಚಿದ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ಸಾರಿ ಹೇಳಿವೆ.  









ಶುಕ್ರವಾರ, ಮಾರ್ಚ್ 23, 2018

                          ಕಾಳು ಮೆಣಸು - ಪೊದೆ ಸಸಿಗಳ ಅಭಿವೃದ್ಧಿ 

                          Bush Pepper Plants- Produce 





                                       ಬರಹ : ಕೂಡಂಡ ರವಿ, ಹೊದ್ದೂರು. ಕೊಡಗು 








ಇತ್ತೀಚೆಗೆ ಹೆಚ್ಚು ಜನಪ್ರಿಯ ಗೊಳ್ಳುತ್ತಿರುವ ಕಾಳುಮೆಣಸು ಕೃಷಿ ಪದ್ಧತಿ. ಪಟ್ಟಣ - ನಗರ ಪ್ರದೇಶಗಳ ಆಸಕ್ತರು ಅಲಂಕಾರಕ್ಕಾಗಿ ಇದನ್ನು ಬೆಳೆಸುವತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಮನಕ್ಕೆ ಮುದ ನೀಡುವ ಹವ್ಯಾಸವಾಗಿದ್ದು, ಮನೆಯ ಬಳಕೆಗಲ್ಲದೆ, ಗೃಹಿಣಿಯರ  ಮೇಲುಸಂಪಾದನೆಯ ಅತ್ಯತ್ತಮ ಮಾರ್ಗಗಳಲ್ಲಿ ಒಂದಾಗಿದೆ. 

ಇವುಗಳನ್ನು ಮನೆಯ ಆವರಣ, ಹಿತ್ತಲುವಿನಲ್ಲಿ , ಕುಂಡಗಳಲ್ಲಿ, ನೆಲದಲ್ಲಿಯೂ ಸಹಾ ಬೆಳೆಸಬಹುದಾಗಿದೆ. ಇದಕ್ಕೆ ಆಶ್ರಮ ಮರ ಬೇಕೆಂದೇನೂ ಇಲ್ಲ. ಆದರೆ, ಬಯಲು ಪ್ರದೇಶಗಳಲ್ಲಿ ನೆಟ್ಟ ಸಸಿಗಳು ಅಧಿಕ ಇಳುವರಿ ನೀಡಬಲ್ಲವು.







ಸಸಿಗಳ ಉತ್ಪಾದನೆ

ಇತರ ಕಾಳು ಮೆಣಸಿನ ಬಳ್ಳಿಗಳಂತೆ ಈ ಸಸಿಗಳನ್ನು ಧಾರಾಳವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ಇದರಲ್ಲಿನ ಪ್ರಮುಖ ಮತ್ತು ಏಕೈಕ ವ್ಯತ್ಯಾಸವೆಂದರೆ, ಮರಗಳ ಮೇಲೆ ಹಬ್ಬಿದ , ಹಿಂದಿನ ವರ್ಷ ಫಸಲು ಕೊಯ್ಲು ಮಾಡಿದ ಕವಲು ಬಳ್ಳಿಗಳನ್ನು ಸಸಿಗಳ ಉತ್ಪಾದನೆಗಾಗಿ ಬಳಸಲಾಗುತ್ತದೆ.   ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಪೊದೆ ಕಾಳು ಮೆಣಸಿನ ಬಳ್ಳಿಗಳ ಉತ್ಪಾದನೆ ಬಗ್ಗೆ ಹಲವಾರು ಕುತೂಹಲದಿಂದ ಪ್ರಶ್ನಿಸಿದ್ದರು

ಇದರಿಂದಾಗಿ ಈ ಬರಹವನ್ನು ಬರೆಯಬೇಕಾಯಿತು.   

.            ಹೆಚ್ಚಿನ ವಿವರಗಳು ನನ್ನ ಬ್ಲಾಗ್ನಲ್ಲಿವೆ. ಕಾಳು ಮೆಣಸಿನ ಸಸ್ಯಾಭಿವೃದ್ಧಿಯ ಬಗ್ಗೆ ವಿವರಗಳಿವೆ. ಓದಿ. 


Our Water is Our's........... ನಮ್ಮ ನೀರಿದು ನಮ್ಮದು ....!

                          ನಮ್ಮ ನೀರಿದು ನಮ್ಮದು ....!  Our Water !



                             ಬರಹ: ಕೂಡಂಡ ರವಿ, ಹೊದ್ದೂರು. 









ಮಳೆಯ ಬಗ್ಗೆ ವಿಚಾರ ವಿನಿಮಯ – ಚರ್ಚೆಯು ಬಂದಾಗ ಬಹುತೇಕ ಮಂದಿ  ಮಳೆ ಕಡಿಮೆಯಾಗುತ್ತಿದೆ, ಕಡಿಮೆಯಾಗಿದೆ ಎಂಬ ಉದ್ಘಾರ ತೆಗೆಯುವುದು ನಮ್ಮ-ನಿಮ್ಮ ಅನುಭವಗಳಿಗೆ ಬಂದ ವಿಚಾರ. 
ಆದರೆ, ಅದಂತೂ ಪೂರ್ಣ ಸತ್ಯವಲ್ಲ ? ನೂರಾರು ವರ್ಷಗಳ ಮಳೆಯ ಲೆಕ್ಕಾಚಾರವನ್ನು ಪರಿಗಣನೆಗೆ ತೆಗೆದುಕೊಂಡಾಗ ಸರಿಸುಮಾರು 60 ವರ್ಷಗಳಲ್ಲಿ ಸರಾಸರಿ ಮಳೆ ಬರಬಹುದು. ಉಳಿದ 40 ವರ್ಷಗಳಲ್ಲಿ ಕೊಂಚ ಇಲ್ಲವೇ ಅಧಿಕ ಏರಿಳಿತಗಳು ಕಾಣಬಹುದಾಗಿದೆ. 

ವೈಜ್ಞಾನಿಕ ಸಂರಕ್ಷಣೆ 

ಚಿತ್ರದುರ್ಗವು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೊಂದು. ಅಲ್ಲಿ ವಾರ್ಷಿಕ ಸುಮಾರು 500 ಮಿಲಿ ಮೀಟರ್ ಮಳೆಯಾಗಬಹುದು. ಇಲ್ಲಿಗೆ ಬೀಳುವ ಮಳೆಯ ನೀರನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಬಹುದು. ಇದರಿಂದಾಗಿ ಆಯಾ ಪ್ರದೇಶದ ಜನತೆಗೆ ಕುಡಿಯುವ ನೀರಿಗೆ ಕೊರತೆ ಕಾಣಿಸದು. ಈ ಪ್ರದೇಶಗಳ  30 ರ 40 ಮನೆಯ ನಿವೇಶನದಲ್ಲಿ ವಾರ್ಷಿಕ ಸುಮಾರು 60 ಸಾವಿರ ಲೀಟರ್ ಮಳೆ ನೀರು ಸಂಗ್ರಹಿಸಬಹುದು. ಚಿತ್ರದುರ್ಗ ಜಿಲ್ಲೆಯ ಒಂದು ಸಾವಿರ ಮನೆಗಳಲ್ಲಿ ಮಳೆಯ ನೀರನ್ನೇ ಕುಡಿಯಲು ಬಳಸಲಾಗುತ್ತಿದೆ. ಇದು ಕಲೆದ 20 ವರ್ಷಗಳಿಂದ ನಿರಂತರವಾಗಿ ಜಾರಿಯಲ್ಲಿದೆ.  ಆ ಪ್ರದೇಶದ ಒಂದು ಏಕರೆ ಕೃಷಿ ಭೂಮಿಯಲ್ಲಿ ವಾರ್ಷಿಕ 20 ಲಕ್ಷ ಲೀಟರ್ ನೀರು ಸಂಗ್ರಹ ಸಾಧ್ಯ. ಕೃಷಿ ಹೊಂಡ ನಿರ್ಮಾಣ ಮಾಡಿ, ನೀರನ್ನು ಆ ಹೊಂಡಗಳಲ್ಲಿ ಸಂಗ್ರಹಿಸಬಹುದು. ಹೆಚ್ಚುವರಿ ನೀರನ್ನು ಕೊಳವೆ  ಮತ್ತು ತೆರೆದ ಬಾವಿಗಳಿಗೆ ಮರು ಪೂರಣ ಮಾಡಲಾಗುತ್ತದೆ. 








ಇಸ್ರೇಲ್ ಅನ್ನು ಮೀರಿಸಿ

ನಾವು ಮಳೆಯ ನೀರನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಲ್ಲಿ ಇಸ್ರೇಲ್ ಅನ್ನು ಮೀರಿಸಬಹುದಾಗಿದೆ. ಆ ದೇಶದಲ್ಲಿ ವಾರ್ಷೀಕ ಸರಾಸರಿ 100 ರಿಂದ 150 ಮಿಲಿ ಮೀಟರ್ ಮಳೆ ಮಾತ್ರ ಬೀಳುತ್ತದೆ. ನಮ್ಮಲ್ಲಿ ಅದಕ್ಕೂ ಎಷ್ಟೋ ಪಾಲು ಹೆಚ್ಚು ಬೀಳುತ್ತದೆ. ನಾವು ಮಳೆಯ ನೀರನ್ನೇ ನಂಬಿ ಕಡಿಮೆ ಬೀಳುವ ಪ್ರದೇಶಗಳಲ್ಲಿಯೂ ಸಮೃದ್ಧ ಕೃಷಿ ಮಾಡಬಹುದು. ಆದರೆ, ಇದಕ್ಕೆ ಪೂರ್ವ ಭಾವಿಯಾಗಿ ರೈತಾಪಿ ವರ್ಗದವರು ನಮ್ಮ ವಾತಾವರಣ, ಮಿತ ನೀರು ಬಳಕೆಯ ವಾತಾವರಣಕ್ಕೆ ತಕ್ಕ  ಬೆಳೆಗಳನ್ನು ಆರಿಸಿಕೊಳ್ಳಬೇಕು. ನೀರನ್ನು ಭೂಮಿಯ ಮೇಲೆ ಹರಿಸುವುದನ್ನು ಬಿಟ್ಟು ಹನಿ ನೀರಾವರಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ವಿಧಾನವನ್ನು ಪ್ರಗತಿ ಪರ ರೈತರು ಅಳವಡಿಸಿ, ಇತರರಿಗೂ ಮಾದರಿಯಾಗಬೇಕಿದೆ. 

ನಮ್ಮ ನೀರಿದು ನಮ್ಮದು !

 ಆಮೀನಿಗೆ ಬೀಳುವ ಮಳೆಯ ನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ಇಂಗಿಸಲು ಪ್ರಯತ್ನಿಸಬೇಕು. ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ಇಂಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಧ್ಯವಾದೆಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು. ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡೆಬೇಕು. ನಮ್ಮ ಜಮೀನಿನ ನೀರನ್ನು ಹೊರ ಹರಿಯಲು ಬಿಡಬಾರದು. ಇದರ ಪರಿಣಾಮ ಸುಸ್ಥಿರ ಕೃಷಿ ಮಾಡಲು ಸಾಧ್ಯ. 







 ಮಲ್ಲೇಶಪ್ಪ ಎಂಬ ಸಾಹಸಿ

ಚಿತ್ರದುರ್ಗದ ಸಮೀಪವಿರುವ ಹುಣಸೇಕಟ್ಟೆಯ ರೈತ ಅಡಿಕೆ ಬೆಳೆಗಾರರು. ಬೋರ್ವೆಲ್ ನೀರಿನಲ್ಲಿ ಅಡಿಕೆ ಬೆಳೆಯುತ್ತಿದ್ದರು. 2001ರಲ್ಲಿ ಕಾಣಿಸಿಕೊಂಡ ಭೀಕರ ಬರಗಾಲ ಅವರ ಬೋರ್ವೆಲ್ ಅನ್ನು ಸಂಪೂರ್ಣ ಒಣಗಿಸಿ ಬಿಟ್ಟಿತು !
 ಹಲವಾರು ನೀರು ಹುಡುಕುವ ಮಂದಿ ಸಾಲು ಸಾಲಾಗಿ ಬಂದರು.  ಜಮೀನಿನಲ್ಲಿ ಅಲೆದರು. ಅವರು ಹೇಳಿದ ಕಡೆಗಳಲ್ಲಿ ಮಲ್ಲೇಶಪ್ಪ ಸತತವಾಗಿ ಏಳು ಬೋರ್‍ವೆಲ್‍ಗಳನ್ನು ಕೊರೆಸಿದರು. ಆದರೆ, ಎಲ್ಲೂ ಗಂಗಾದೇವಿ ದರ್ಶನ ನೀಡಲೇ ಇಲ್ಲ. !
ಅಂತಿಮ ಪ್ರಯತ್ನವೇನೋ ಎಂಬಂತೆ ಕೊರೆದ ಎಲ್ಲಾ ಎಂಟು ಬೋರ್ ವೆಲ್ ಗಳಿಗೂ ಮಳೆಕೊಯ್ಲ ಮೂಲಕ ಜಲ ಮರುಪೂರಣ ವ್ಯವಸ್ಥೆ ಮಾಡಿದರು.ಅವರ ಪ್ರಯತ್ನ ಫಲಿಸಿತು. ಹಲವಾರು ಬೋರ್‍ವೆಲ್‍ಗಳಲ್ಲಿ ನೀರು ಕಾಣಿಸಿಕೊಂಡಿತು. ಹನಿ ನೀರಾವರಿ ಮೂಲಕ ಮೂರು ಏಕರೆ ಪ್ರದೇಶಗಳಲ್ಲಿ ಈಗ 20ಕ್ಕೂ ಅಧಿಕ ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆಕೊಯ್ಲಿನ ಪ್ರತಿಫಲವಾಗಿ ಇಂದು ಕೊಳವೆ ಬಾವಿಯಲ್ಲಿ 2 ಇಂಚು ನೀರು ನಿರಂತರವಾಗಿ ದೊರೆಯುತ್ತಿದೆ. ಹೈನುಗಾರಿಕೆ, ಜೇನು ಸಾಕಾಣೆಯನ್ನೂ ಮಾಡುತ್ತಿದ್ದಾರೆ. ಅವರ ನಿರಂತರ ಶ್ರಮಕ್ಕೆ “ಕೃಷಿ ಪಂಡಿತ“ ಪ್ರಶಸ್ತಿಯೂ ಅವರಿಗೆ ದೊರೆತಿದೆ.



 ಕೊನೆ ಹನಿ : ನಾವು ಈ ರೀತಿ ನೀರನ್ನು ಗೆಲ್ಲಬೇಕು. ಹಾಗಾದಲ್ಲಿ ಮಾತ್ರ ರೈತ ಗೆಲ್ಲಲು ಸಾಧ್ಯ . ಚಿತ್ರದುರ್ಗ ಜಿಲ್ಲೆಯಲ್ಲಿ 3 ತಿಂಗಳ ಸಮಯದಲ್ಲಿ 5 ಸಾವಿರ ಬೋರ್‍ವೆಲ್‍ಗಳಿಗೆ ಈ ಹಿಂದೆ ಮರುಪೂರಣ ವ್ಯವಸ್ಥೆ ಮಾಡಲಾಗಿದೆ. ಅವರ ಈ ಸಾಧನೆಗಾಗಿ ಕೇಂದ್ರ ಸರಕಾರದ ಪ್ರಶಸ್ತಿಯೂ ಲಭಿಸಿದೆ.





ಪೂರಕ ಮಾಹಿತಿ: ಎಂ. ದೇವರಾಜ ರೆಡ್ಡಿ, ಜಲತಜ್ಞ, ಚಿತ್ರದುರ್ಗ. ಮೊಬೈಲ್: 9448125498