ಕಾಳು ಮೆಣಸು - ಪೊದೆ ಸಸಿಗಳ ಅಭಿವೃದ್ಧಿ
Bush Pepper Plants- Produce
ಬರಹ : ಕೂಡಂಡ ರವಿ, ಹೊದ್ದೂರು. ಕೊಡಗು
ಇತ್ತೀಚೆಗೆ ಹೆಚ್ಚು ಜನಪ್ರಿಯ ಗೊಳ್ಳುತ್ತಿರುವ ಕಾಳುಮೆಣಸು ಕೃಷಿ ಪದ್ಧತಿ. ಪಟ್ಟಣ - ನಗರ ಪ್ರದೇಶಗಳ ಆಸಕ್ತರು ಅಲಂಕಾರಕ್ಕಾಗಿ ಇದನ್ನು ಬೆಳೆಸುವತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಮನಕ್ಕೆ ಮುದ ನೀಡುವ ಹವ್ಯಾಸವಾಗಿದ್ದು, ಮನೆಯ ಬಳಕೆಗಲ್ಲದೆ, ಗೃಹಿಣಿಯರ ಮೇಲುಸಂಪಾದನೆಯ ಅತ್ಯತ್ತಮ ಮಾರ್ಗಗಳಲ್ಲಿ ಒಂದಾಗಿದೆ.
ಇವುಗಳನ್ನು ಮನೆಯ ಆವರಣ, ಹಿತ್ತಲುವಿನಲ್ಲಿ , ಕುಂಡಗಳಲ್ಲಿ, ನೆಲದಲ್ಲಿಯೂ ಸಹಾ ಬೆಳೆಸಬಹುದಾಗಿದೆ. ಇದಕ್ಕೆ ಆಶ್ರಮ ಮರ ಬೇಕೆಂದೇನೂ ಇಲ್ಲ. ಆದರೆ, ಬಯಲು ಪ್ರದೇಶಗಳಲ್ಲಿ ನೆಟ್ಟ ಸಸಿಗಳು ಅಧಿಕ ಇಳುವರಿ ನೀಡಬಲ್ಲವು.
ಸಸಿಗಳ ಉತ್ಪಾದನೆ
ಇತರ ಕಾಳು ಮೆಣಸಿನ ಬಳ್ಳಿಗಳಂತೆ ಈ ಸಸಿಗಳನ್ನು ಧಾರಾಳವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ಇದರಲ್ಲಿನ ಪ್ರಮುಖ ಮತ್ತು ಏಕೈಕ ವ್ಯತ್ಯಾಸವೆಂದರೆ, ಮರಗಳ ಮೇಲೆ ಹಬ್ಬಿದ , ಹಿಂದಿನ ವರ್ಷ ಫಸಲು ಕೊಯ್ಲು ಮಾಡಿದ ಕವಲು ಬಳ್ಳಿಗಳನ್ನು ಸಸಿಗಳ ಉತ್ಪಾದನೆಗಾಗಿ ಬಳಸಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಪೊದೆ ಕಾಳು ಮೆಣಸಿನ ಬಳ್ಳಿಗಳ ಉತ್ಪಾದನೆ ಬಗ್ಗೆ ಹಲವಾರು ಕುತೂಹಲದಿಂದ ಪ್ರಶ್ನಿಸಿದ್ದರು.
ಇದರಿಂದಾಗಿ ಈ ಬರಹವನ್ನು ಬರೆಯಬೇಕಾಯಿತು.
. ಹೆಚ್ಚಿನ ವಿವರಗಳು
ನನ್ನ ಬ್ಲಾಗ್ನಲ್ಲಿವೆ. ಕಾಳು ಮೆಣಸಿನ ಸಸ್ಯಾಭಿವೃದ್ಧಿಯ ಬಗ್ಗೆ ವಿವರಗಳಿವೆ. ಓದಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ