ಶನಿವಾರ, ಮೇ 9, 2020

ಕೊಡಗಿನ ಮೂಲನಿವಾಸಿ An Appel for Package

ಕೊಡಗಿನ ಮೂಲನಿವಾಸಿಗಳ ಸಂಸ್ಕೃತಿ- ಪರಂಪರೆಗಳ
 ಶ್ರೇಯೋಭಿವೃದ್ಧಿಗಾಗಿ 
 ಈ ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಗಂಭೀರ ವಿಚಾರಗಳನ್ನು
 ತಮ್ಮ ಪರಾಂಬರೆಗೆ ತರಲು ಇಚ್ಛಿಸುತ್ತೇನೆ.

 ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ, 
ಬಡವನಯ್ಯ ಎನ್ನ ಕಾಲೇ ಕಂಬ, 
ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ 
ಕೂಡಲ ಸಂಗಮ ದೇವ ಕೇಳಯ್ಯ...!

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com


 ಇದು 12 ನೇ ಶತಮಾನದ ಜಗಜ್ಯೋತಿ, ಸಮಾಜ ಸುಧಾರಕ ಬಸವಣ್ಣನವರ ಮಾತು. ಕೊಡವರು, ಕೊಡವ ಭಾಷಿಕ ಜನಾಂಗದವರು, ಕೊಡಗು ಅರೆ ಭಾಷಿಕ ಗೌಡರು ಇವರಿಗೆಲ್ಲಾ ಐನ್ಮನೆ ಪವಿತ್ರ ವಾಸಸ್ಥಾನ. ಪೂರ್ವದಲ್ಲಿ ಐನ್ ಮನೆಯಲ್ಲಿ ಕುಟುಂಬದ ಸದಸ್ಯರು ವಾಸಿಸುತ್ತಿದ್ದರು. ಆಯಾಯ ಒಕ್ಕ (ಕುಟುಂಬ)ದವರು, ಐನ್ಮನೆಯಲ್ಲಿ ಬೆಳಿಗ್ಗೆ ಸೂಯರ್ೋದಯ ಮತ್ತು ಮುಸ್ಸಂಜೆ - ಗೋಧೂಳಿ ಸಮಯದಲ್ಲಿ ದೇವರಿಗೆ ದೀಪ ಹಚ್ಚುವ ಪದ್ಧತಿಯನ್ನು ಚಾಚೂ ತಪ್ಪದೇ ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ. ಕೊಡವ ಪದ್ಧತಿ-ಪರಂಪರೆ, ವಿಶಿಷ್ಟ-ವಿಭಿನ್ನವೆನ್ನಲು 'ಕೊಡವ' ಜನಾಂಗ ಆದಿಯಾಗಿ, 18 ಕೊಡವ ಭಾಷಿಕ ಜನಾಂಗದವರ ಕೊಡುಗೆ ಅನನ್ಯವಾಗಿದೆ. ಕೊಡಗಿನಲ್ಲಿ ಯಾವುದೇ ಹಬ್ಬ ಹರಿದಿನಗಳ ಜಾತ್ರೆ, ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡ ಪ್ರಕಾರಗಳನ್ನು ಗಮನಿಸಿದಾಗ ಆಯಾಯ ಊರು-ಕೇರಿ ಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿರುವ ಮೂಲ ನಿವಾಸಿಗಳ ಒತ್ತೋಮರ್ೆ-ಸಹಬಾಳ್ವೆಯ ಸಂಕೇತವಾಗಿ ಎಲ್ಲಾ ಶುಭ ಕಾರ್ಯಗಳು ನಾಡಿನ ಹಿತಬಯಸಿ ಸತ್ಕಾರ್ಯಗಳು ನಡೆದು ಬರುತ್ತಿರುವುದನ್ನು ಇತಿಹಾಸವು ಸಾರಿ ಹೇಳುತ್ತಿದೆ. ಬಹುತೇಕ ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಇತಿಹಾಸ ಅರಿತಾಗ ಅಲ್ಲಲ್ಲಿ ಐನ್ಮನೆ-ಮುಂದ್ಮನೆ - ಕೈಮಡಗಳ ಅವಶೇಷ - ಕುರುಹುಗಳು, ಜೀಣರ್ೋದ್ಧಾರವಾಗಿ ನವೀಕರಣಗೊಂಡಿದ್ದು, ಪುರಾತನ ಮನೆಗಳನ್ನು ಉಳಿಸಿಕೊಂಡು ಬಂದಂತಹ ಎಲ್ಲಾ ಅಂಶಗಳ ವಾಸ್ತವತೆಯನ್ನು ಅರಿಯಬಹುದಾಗಿದೆ. ಇಲ್ಲಿ ಅವಿಭಕ್ತ ಕುಟುಂಬದ ನೆಲೆಯಲ್ಲಿ ಪೂವರ್ಿಕರು ಬದುಕಿ ಬಾಳಿದ ಅಂಶಗಳು ತಿಳಿದುಬರುತ್ತದೆ. ಈ ಮೇಲೆ ಹೇಳಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಐನ್ಮನೆ- ಮುಂದ್ಮನೆ-ಕೈಮಡಗಳು ಶಿಥಿಲಾವಸ್ಥೆಯಲ್ಲಿದ್ದು, ಅದರ ತುತರ್ು ನವೀಕರಣದ ಅಗತ್ಯತೆಗಳು ಕಂಡುಬರುತ್ತಿವೆ. ಜೊತೆಗೆ ಕೊಡಗಿನ ವಿಶಿಷ್ಟ ಸಂಸ್ಕೃತಿ ಮತ್ತು ಪ್ರಕೃತಿಯ ಆರಾಧನೆಗೆ ಒತ್ತು ನೀಡಬಲ್ಲ ನಾಡ್ ಮಂದ್ ಊರ್ ಮಂದ್ಗಳು ಅತಿಕ್ರಮಣಗೊಳ್ಳುತ್ತಿವೆ. ಕೊಡವ ಸಂಸ್ಕೃತಿ ಸಂಸ್ಕಾರಗಳು ಮೂಲನೆಲೆ. ಈ 'ಐನ್ಮನೆ' ಇಂದು ತಾಯಿ ಬೇರು ಇದ್ದ ಹಾಗೆ. ಇವುಗಳನ್ನು ನಾವು ಉಳಿಸಿಕೊಳ್ಳದಿದ್ದರೆ, ಉಜ್ವಲ ಸಂಸ್ಕೃತಿ ನಾಶವಾದ ಹಾಗೆಂದೇ ಭಾವಿಸಬೇಕಾಗುತ್ತದೆ. ಹಾಗೆಯೇ, ಮುಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕಾಬೇಕಿದ್ದ ಈ 'ಗರ್ಭಗುಡಿ' ಅಧಃಪತನ ಪ್ರಜ್ಞೆ ಕಾಡುವುದು ಎಷ್ಟರಮಟ್ಟಿಗೆ ಸರಿ. ? ! ಇದು ಇತಿಹಾಸದಲ್ಲಿ ಶಾಶ್ವತವಾಗಿ ಕಪ್ಪುಚುಕ್ಕಿಯಾಗಿ ಉಳಿದು ಬಿಡುತ್ತದೆ. ಕೊಡಗಿನಲ್ಲಿ ಇದನ್ನು ಬಹುತೇಕ 'ಮಧ್ಯಮವರ್ಗ' ಮೂಲನಿವಾಸಿಗಳ ಕೂಗು - ಅಳಲು ನಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರದ ಗಮನ ಸೆಳೆಯಲು (ತಜ್ಞರ ನಿಯೋಗ) ಭೇಟಿ ಮಾಡಿ ಪರಿಹಾರ ಮಾಡಿಕೊಳ್ಳುವ ಕಾಲ ಸನ್ನಿಹಿತ-ಇದು ಸಕಾಲ ಕೂಡವೂ ಆಗಿದೆ. ನಮ್ಮ ಪೂವರ್ಿಕರು ಕೊಡಗಿನಲ್ಲಿ ವಿಶೇಷವೆನಿಸಿದ ಐನ್ಮನೆಗಳನ್ನು ನಿಮರ್ಿಸಿದ್ದರು. ಅವು ಕೊಡಗಿನ ಈ ಜನಾಂಗಗಳಲ್ಲಿ ಕಂಡುಬರುತ್ತದೆ. 1. ಕೊಡವರು 2.ಅರೆಭಾಷೆ ಗೌಡರು 3 ಹೆಗ್ಗಡೆ ಸಮುದಾಯ 4. ಅಮ್ಮ ಕೊಡವರು 5. ಐರಿ ಜನಾಂಗ 6. ಜಮ್ಮಾ ಮಾಪಿಳ್ಳೆ 7. ಕೆಂಬಟ್ಟಿ ಜನಾಂಗ 8. ಕೊಡವ ಹಜಾಮ 9. ಗೊಲ್ಲ ಜನಾಂಗ 10. ಮಡಿವಾಳ 12. ಬಂಟ 13. ಜಾಗೀರ್ ತುರ್ಕರು 14. ಜೈನ 15. ಕೋಯವ ಜನಾಂಗ 16. ಬೂಣೆ ಪಟ್ಟ 17. ಬಳೆಗಾರ 18. ಕೊಡವ ನಾಯರ್ 19. ಬಣ್ಣ ಜನಾಂಗ 20. ಕೋಲೆಯ ಜನಾಂಗ (ಮಾಹಿತಿ ಕೃಪೆ: ಬೊವ್ವೇರಂಡ ನಂಜಮ್ಮ-ಚಿಣ್ಣಪ್ಪ ಪುಸ್ತಕ) ತಜ್ಞರ ಸಮಿತಿ ರಚಿಸಿ ಶಿಥಿಲಾವಸ್ಥೆಯಲ್ಲಿರುವ ಐನ್ಮನೆಗಳಿಗೆ ಕಾಯಕಲ್ಪ ನೀಡಿ ಸಂರಕ್ಷಿಸಿ ಪೋಷಿಸುವುದು ನಾಡ ಪ್ರಭುಗಳ ಜವಾಬ್ಧಾರಿ ಕೂಡ ಆಗಿದೆ. ಒಂದು ವಿಶೇಷ - ವಿಭಿನ್ನ ಸಂಸ್ಕೃತಿಯನ್ನು ಸಾರುವ ಪ್ರಕೃತಿಯ ಆರಾಧಕರಾದ 'ಕೊಡವ ಹಾಗೂ ಕೊಡವ ಭಾಷಾ ಸಮುದಾಯ ವರ್ಗವು ಮತ್ತು ಅರೆಭಾಷೆಯನ್ನಾಡುವ ಗೌಡ ಜನಾಂಗವು ಯಾವುದೇ ರೀತಿಯಲ್ಲೂ ಇಂದು ಏಳಿಗೆ ಕಾಣದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ವಿಷಾದನೀಯವೆನಿಸುತ್ತದೆ. ಕೊಡಗು ಕಾವೇರಿ ನದಿಯ ಉಗಮ ಸ್ಥಾನವಾದರೂ 'ದೀಪದ ಕೆಳಗೆ ಕತ್ತಲೆ ಎನ್ನುವ ನುಡಿಗಟ್ಟಿನಂತೆ ಮಾತು ವಾಸ್ತವ. ಇಂದು ' ಆತ್ಮಾವಲೋಕನ ' ಕಾಲ ಒದಗಿ ಬಂದಿದೆ ಎನ್ನಲು ಯಾವುದೇ ಹಿಂಜರಿಕೆ ಇಲ್ಲ. ಕೊಡಗಿನವರ ಐನ್ಮನೆ- ಮುಂದ್ಮನೆ- ಕೈಮಾಡಗಳು ಇವರ ಮೂಲಸಂಸ್ಕೃತಿಯ ಪ್ರತೀಕವೂ ಹೌದು. ಪ್ರಕೃತಿ ಆರಾಧಕರ ಉಸಿರೂ ಹೌದು ! ಮೂಲ ಕೃಷಿಕರಾಗಿ ಬದುಕು ಕಟ್ಟಿಕೊಂಡಿರೋ ಅದೆಷ್ಟೋ ಮದ್ಯಮವರ್ಗ ಕುಟುಂಬದವರು 'ಐನ್ಮನೆಗಳನ್ನು ಉಳಿಸಿಕೊಳ್ಳಲು ' ಅಥರ್ಿಕ ಅಡಚಣೆ' ಎದುರಿಸುತ್ತಿರುವುದು ನೋವಿನ ವಿಚಾರ. ಕೊಡಗಿನ ಜನರು ಹೃದಯವಂತರು, ಸ್ನೇಹ ಜೀವಿಗಳು, ಸಹಬಾಳ್ವೆಯ ಜೀವನಕ್ಕೆ ಹೊಂದಿಕೊಂಡು ಸಹನಾಶೀಲರೂ ಹೌದು! ಏನೇ ಎಷ್ಟೇ ಸಮಸ್ಯೆಗಳಿದ್ದರೂ, ಸವಾಲೊಡ್ಡಿ, ಜೀವಿಸುವ ಪ್ರಾಮಾಣಿಕ ಸ್ವಾಭಿಮಾನಿಗಳು ಹೌದು ! ಇವರ ಜೀವನ ಸಂಸ್ಕಾರ, ಶಿಷ್ಟಾಚಾರ ಎಲ್ಲವೂ ಅನುಕರಣನೀಯವಾಗಿದೆ. ಹಬ್ಬ ಹರಿದಿನಗಳಾದ ತುಲಾ ಸಂಕ್ರಾಂತಿ(ಚಂಗ್ರಾಂದಿ), ಕೈಲ್ಪೊಳ್ದ್, ಪುತ್ತರಿ ಹಬ್ಬ, ಗುರುಕಾರೋಣಾದಿ ಪೂಜಾ ಕೈಂಕರ್ಯಗಳಲ್ಲಿ ಆ ಮನೆತನದ ಕುಟುಂಬ ವರ್ಗದವರು ಊರು-ದೂರದೂರಿನಿಂದ ಬಂದು ಸಂಭ್ರಮಿಸಿ, ಆಚರಣೆಗಳಲ್ಲಿ ಭಾಗಿಯಾಗಿ ಎಳೆಯಾಗಿ ಆಸ್ವಾದಿಸಿ, ಅನುಭವಿಸುವುದು ರಸಕ್ಷಣಗಳಲ್ಲೊಂದಾಗಿದೆ. ಇಂದು ದೇವರ ಕಾಡು, ಅಯ್ಯಪ್ಪ ಕಾಡು, ಅರಣ್ಯ ಭೂ ಪ್ರದೇಶ ಸುಸ್ಥಿತಿಯಲ್ಲಿ ಹಚ್ಚಹಸಿರು-ಸಿರಿವನಗಳಾಗಿ ಕಂಗೊಳಿಸುವುದರಲ್ಲಿ, ಅಂದು ಪ್ರಕೃತಿಯ ಆರಾಧಕರಾಗಿದ್ದ ಮೂಲನಿವಾಸಿಗಳ ಶ್ರಮ-ಶ್ರಮಿಕಜೀವಿಗಳು ಹೆಮ್ಮೆಯಿಂದ ಸಾರಿ ಹೇಳುವ ಸಂದೇಶ ಅಡಗಿದೆ. ಅರಣ್ಯ ಸರಹದ್ದು ಎಂದು ಬೇಲಿ ಹಾಕಿದ ಮಾತ್ರಕ್ಕೆ ಎಲ್ಲವೂ ಕ್ಷೇಮವೆಂದು ಗ್ರಹಿಸಲು ಸಾಧ್ಯವೇ ? ಖಂಡಿತಾ ಸಾಧ್ಯವಾಗದು. ಮೂಲ ನಿವಾಸಿಗಳ ಅನನ್ಯ ಕೊಡುಗೆ ಈ ಪ್ರಕೃತಿ ಮಾತೆಯ ಮಡಿಲಿನಲ್ಲಿ ಅಡಗಿದೆ. ಅದನ್ನು ನಾವೆಲ್ಲರೂ, ಸ್ಮರಿಸಿ, ಗೌರವಿಸಲೇಬೇಕು. ಸೈನಿಕ ಪರಂಪರೆಯನ್ನು ಕಾಯಾ ಮನಸಾ ಗೌರವಿಸಿ, ಗಡಿ ಸೈನ್ಯ ಸೇವೆಗೆ ಅಣಿಯಾಗುವ ಬಹಳ ಕುಟುಂಬಗಳು ಈ ಮೂಲ ನಿವಾಸಿಗಳಲ್ಲಿವೆ. ಇವರೆಲ್ಲರೂ, ಇದೇ ಮಣ್ಣೀನ ಮಕ್ಳಾಗಿದ್ದಾರೆ. ಕೊಡಗಿನ ಸಹೃದಯಿಗಳು ಯಾವಾಗಲೂ 'ಒತ್ತಾಯ - ಧರಣಿ ಕುಳಿತು' ಎಂದೂ ಕಷ್ಟ ಕಾಪರ್ಾಣ್ಯಗಳನ್ನು ತೋರ್ಪಡಿಸಿದವರಲ್ಲ. ರಕ್ತಗತವಾಗಿ ಪಾರಂಪಾರಿಕವಾಗಿ ಬಂದಿರುವ ಸ್ವಾಭಿಮಾನವು ಇಂತಹ ಚಟುವಟಿಕೆಗಳಲ್ಲಿಒ ಅವರನ್ನು ತೊಡಗಲು ಬಿಡುವುದಿಲಲ್ ಎನ್ನುವುದು ಖಂಡಿತಾ ಅತಿಶಯೋಕ್ತಿಯಲ್ಲ. ಕಾವೇರಿ ಪುಣ್ಯಕ್ಷೇತ್ರದಲ್ಲಿ ಕೊಡವ ಭಾಷಿಕ 18 ಸಮುದಾಯದವರು ಕೊಡಗು ಗೌಡ ಜನಾಂಗ ಬಾಂಧವರು ಸೇರಿ ಸೇರಿ ಅಲ್ಲಿನ ಧಾಮರ್ಿಕ ವಿಧಿ ವಿಧಾನಗಳನ್ನು ಪೂರ್ವಕಾಲದಿಂದಲೇ ಆಚರಿಸುತ್ತಾ ಬರುತ್ತಿದ್ಧಾರೆ. ಇಂತಹ ವಿಶೇಷಗಳನ್ನು ಹೊಂದಿರುವ ಕೊಡಗಿಗೆ ವಿಶೇಷ ಪ್ಯಾಕೇಜ್ ತುತರ್ಾಗಿ ಕಾರ್ಯರೂಪಕ್ಕೆ ತರಲು ಶ್ರಮಿಸಬೇಕೆಂದೇ ಕೊಡಗಿನ ಎಲಲಾ ಮೂಲ ನಿವಾಸಿಗಳ ಒಕ್ಕೊರಲಿನ ಮನವಿ. ಕೊಡಗಿನ ಮೂಲ ನಿವಾಸಿಗಳಿಗೆ ಕಲ್ಯಾಣ ನಿಧಿ ಸ್ಥಾಪನೆ ಆಗಬೇಕಿದೆ. ಜಿಲ್ಲೆಯ ಮೂಲನಿವಾಸಿಗಳಾದ ಕೊಡವ ಭಾಷಿಕರು, ಅರೆ ಭಾಷಿಕರು, ಬ್ರಾಹ್ಮಣರು, ಒಕ್ಕಲಿಗರು ಇತ್ಯಾದಿ. ದುರ್ಬಲ ಸಮುದಾಯ ಕುಟುಂಬಗಳ ಮೂಲಭೂತ ಸೌಲಭ್ಯಗಳಿಗೆ ಇತ್ತು ಕೊಡಬೇಕಿದೆ. ಉದಾಹರಣೆಗಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಶಿಷ್ಯವೇತನ ಉನ್ನತ ವ್ಯಾಸಂಗಕ್ಕೆ ಧನಸಹಾಯ, ಕಂಕಣ ಭಾಗ್ಯ ಯೋಜನೆ, ವಸತಿ ಹೀನರಿಗೆ ನಿವೇಶನ ಇತ್ಯಾದಿ. ಕೊಡಗಿನ ಮೂರು ತಾಲೂಕುಗಳಲ್ಲಿ ಮೂಲ ನಿವಾಸಿಗಳಿಗೆ ಸಾಂಸ್ಕೃತಿಕ ಭವನ ನಿಮರ್ಾಣವಾಗಬೇಕು. ಕೊಡಗಿನ ಮೂಲ ನಿವಾಸಿಗಳು ಹಾಗೂ ನೆಲೆಸಿರುವ ಎಲ್ಲಾ ಸ್ಥಳೀಯ ಗ್ರಾಮ ನಿವಾಸಿಗಳು ಭಾರತೀಯ ಸೈನ್ಯ, ಗಡಿಸೇವೆಯಲ್ಲಿ ನಿರತರಾಗಿ ನಿವೃತ್ತರಾದ ಬಡ ಕುಟುಂಬಗಳಿಗೆ ವಿಶೇಷವಾಗಿ ಆಥರ್ಿಕವಾಗಿ ದುರ್ಬಲರಿಗೆ ಸರಕಾರವು ಕೊಡಗಿನಲ್ಲಿರುವ ಎಲ್ಲಾ ಪೈಸಾರಿ ಜಾಗವನ್ನು ಗುರುತಿಸಿ, ಮೂರು ತಾಲೂಕಿನಲ್ಲಿ ನಿವೇಶನ- ಬಡಾವಣೆ ನೀಡಿ ಗೌರವಿಸಬೇಕು. ಇದಕ್ಕೆ ವಿಶೇಷವಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರುಗಳ ಜ್ಞಾಪಕಾರ್ಥವಾಗಿ ಕಲ್ಯಾಣ ನಿಧಿ ಸ್ಥಾಪಿಸುವಂತಾಗಬೇಕು. ಅಲ್ಲದೆ, ಕೊಡಗಿನಾದ್ಯಂತ ಉಳಿದುಕೊಂಡಿರುವ ಕೃಷಿ ಪ್ರಧಾನ ಪೈಸಾರಿ ಭೂಪ್ರದೇಶವನ್ನು ಗುರುತಿಸಿ, ಇಲ್ಲಿನ (ಸ್ಥಳೀಯ) ನಿರ್ಗತಿಕ ರೈತಾಪಿ ವರ್ಗದ ಮೂಲನಿವಾಸಿಗಳು ಪ್ರಥಮ ಆದ್ಯತೆ ನೀಡಬೇಕೆಂದು ಆಗ್ರಹಿಸುತ್ತೇನೆ. ಹಲವು ವೈಶಿಷ್ಟ್ಯತೆಗಳಿಂದಾಗಿ ಜಗತ್ತಿನಲ್ಲಿಯೇ ತನ್ನತನವನ್ನು ಗುರುತಿಸಿಕೊಂಡಿರುವ ಕೊಡಗಿನ ಮೂಲನಿವಾಸಿಗಳ ಪರಂಪರೆಯು ಇನ್ನಷ್ಟು ಉಚ್ರಾಯಕ್ಕೇರೆಬೇಕಾಗಿತ್ತು ! ಆದರೆ, ಆಥರ್ಿಕ ಆಡಚಣೆಗಳಿಂದಾಗಿ ಅದೀಗ ಅಳಿವಿನಂಚಿನಲ್ಲಿದೆ. ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗುವ ಸಾಧ್ಯತೆಗಳಿದೆ. ಹಾಗಾಗಿ ಪರಿಸ್ಥಿತಿಯ ಗಂಭೀರತೆಯನ್ನರಿತು ಈ ವಿಶಿಷ್ಟ ಪರಂಪರೆಯನ್ನು ಉಳಿಸಿ, ರಕ್ಷಿಸಿ, ಬೆಳೆಸುವುದು ಅಧಿಕಾರರೂಢರಾದ ತಮ್ಮ ಪರಿಮಿತಿಯಲ್ಲಿದೆ. ಅದುದರಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ಮಣ್ಣಿನ ಋಣ ತೀರಿಸಿ, ಕಾವೇರಿ ಮಾತೆಯ ಕೃಪಾಕಟಾಕ್ಷಕ್ಕೆ ಸರ್ವರನ್ನು ಒಳಗಾಗಿಬೇಕೆಂಬ ಕಳಕಳಿಯ ಮನವಿ ನಮ್ಮದು.
 ಇಂತಿ ತಮ್ಮ ವಿಶ್ವಾಸಿ,