ಗುರುವಾರ, ನವೆಂಬರ್ 7, 2019

Farmers still entangled by British --! ಬ್ರಿಟಿಷ್ ಉರುಳಲ್ಲಿ ರೈತರು ...! --

                          ಬ್ರಿಟಿಷ್  ಉರುಳಲ್ಲಿ   ರೈತರು ...!

                                      ವೈಯುಕ್ತಿಕ ಪಹಣಿ ಬಡ ರೈತಾಪಿ ವರ್ಗದವರ ಕನಸು !

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com

ರೈತ ಸಾಮ್ರಾಟನಾಗುವುದೆಂದು ?
ಬರಹ: ಕೂಡಂಡ ರವಿ, ಹೊದ್ದೂರು-ಮೂನರ್ಾಡು. 
ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, 7 ದಶಕಗಳೇ ಕಳೆದಿವೆ. ಆದರೆ, ಕೊಡಗಿನ ರೈತಾಪಿ ವರ್ಗದವರ ಪಾಲಿಗೆ ಇನ್ನೂ ಸ್ವಾತಂತ್ರ್ಯವೇ ಬಂದಿಲ್ಲ. ಇಲ್ಲಿನ ರೈತಾಪಿ ವರ್ಗದವರನ್ನು ಪುರಾತನ ಬ್ರಿಟಿಷ್ ಕಾನೂನು ಸರಪಳಿ ಬಂಧಿಸಿದೆ. ಬ್ರಿಟಿಷರ ಕಾನೂನು ಇನ್ನೂ ಕೊಡಗಿನ ರೈತಾಪಿ ವರ್ಗದವರ ಪಾಲಿಗೆ ಜಾರಿಯಲ್ಲಿದೆ. ನೀವು ನಂಬಲ್ಲ ! ಆದರೆ, ಕಟು ವಾಸ್ತವ ! ಇದು ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿ ಜನತೆಯನ್ನು ಕಾಡಿದೆ, ಕಾಡುತ್ತಿದೆ. 
ಕನರ್ಾಟಕ ಭೂ ಕಂದಾಯ ಅಧಿ ನಿಯಮ-1965 ಜಾರಿಯಾಗಿ ಭತರ್ಿ 55 ವರ್ಷಗಳೇ ಸಂದಿವೆ. ಆದರೂ, ಈ ಕಾನೂನು ಕೊಡಗಿನಲ್ಲಿ ಇನ್ನೂ ಜಾರಿಯಾಗಿಲ್ಲ. ಬದಲಾಗಿ 1947ರವರೆಗೆ ಆಡಳಿತ ನಡೆಸಿದ್ದ ಬ್ರಿಟಿಷರ ಕಂದಾಯ ಇಲಾಖೆಯ ಕಾನೂನು ಅಘೋಷಿತವಾಗಿ ಜಾರಿಯಲ್ಲಿದೆ. ಹಿಂದಿನ ಕಾನೂನನ್ನು ಯಥಾವತ್ತಾಗಿ ಪಾಲಿಸುತ್ತಿದೆ. ಇದರ ಪರಿಣಾಮ ಕೃಷಿಕ ಬಾಂಧವರು ಹಳೇ ಕಾನೂನಿನ ಉರುಳಿಗೆ ಸಿಲುಕಿ ವಿಲವಿಲನೇ ಒದ್ದಾಡುತ್ತಿದ್ದಾರೆ. ಅಧಿಕಾರಶಾಹಿಗಳ ಈ ಕೃತ್ಯಕ್ಕೆ ಹಲವರ ಬೆಂಬಲವೂ ಇದೆಯಂತೆ ! ಬಹುತೇಕ ಮಾಧ್ಯಮ ಮಿತ್ರರಿಗೆ ಈ ವಿಚಾರ ತಿಳಿದಂತಿಲ್ಲ. ತಿಳಿದ ಕೆಲವರು ಚಕಾರ ವೆತ್ತುತ್ತಿಲ್ಲ ! ಇದೇ ರೈತಾಪಿ ವರ್ಗದವರ ದುರಾದೃಷ್ಟ... ..  .. ... ...!  ಕೆಲ ಕಿಡಿಗೇಡಿಗಳು ಕಾನೂನು ಜಾರಿಗೆ ತಡೆಯೊಡ್ಡುತ್ತಿರುವರಂತೆ !? 

ಮುಂಬರುವ ದಿನಗಳಲ್ಲಾದರೂ, ಮಾಧ್ಯಮ ಮಿತ್ರರು ಕೊಡಗು ಜಿಲ್ಲೆಯ ಸಣ್ಣ-ಅತೀ ಸಣ್ಣ ರೈತರ ಪರವಾಗಿ ಧ್ವನಿ ಎತ್ತಲು ಸಕಲ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡುವೆ. 

ಸರಕಾರಗಳ ಪ್ರತಿಯೊಂದು ಯೋಜನೆಯೂ ತಳಮಟ್ಟದ ಫಲಾನುಭವಿಗೆ ತಲುಪಬೇಕು ಎಂಬುದು ಸರಕಾರಗಳ ಸದಾಶಯ. ಆದರೆ, ಅದು ಹಾಗಾಗುತ್ತಿದೆಯೇ ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ಎಲ್ಲಾ ಕಡೆಗಳಿಂದ ಇದಕ್ಕೆ ಕೇಳಿ ಬರುವ ಉತ್ತರ ಇಲ್ಲ ಎಂಬುದಾಗಿದೆ. ಸರಕಾರದ ಯೋಜನೆಗಳು ಸಕಾಲಿಕವಾಗಿ ಜನತೆಯ ಬಳಿ ತಲುಪಲು ಅದಕ್ಕೆ ಸೂಕ್ತ ದಾಖಲಾತಿ ಪತ್ರಗಳ ಅಗತ್ಯವಿದೆ. ಅದು ಜನತೆಯ ಬಳಿ ಲಭ್ಯವಿಲ್ಲ. ಬಹುತೇಕ ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ವೈಯುಕ್ತಿಕ ಪಹಣಿ (ಆರ್ಟಿಸಿ) ಬೇಕೇ ಬೇಕು. 
ರೈತರಿಗೆ 'ವೈಯುಕ್ತಿಕ ಪಹಣಿ' ಕೊಡಿಸಿ
1965ನೇ ಭೂ ಕಂದಾಯ ಅಧಿ ನಿಯಮದ ಪ್ರಕಾರ ರಾಜ್ಯ ಸರಕಾರವೇ ಇದನ್ನು ಮಾಡಿ ಕೊಡಬೇಕು. ಈ ಕುರಿತಾದ ಕಾನೂನು ಪುಸ್ತಕಕ್ಕೆ ಸೀಮಿತವಾಗಿವೆ. 
ಇದರ ಪ್ರಕಾರ ಸರಕಾರವೇ ರೈತರ ಜಮೀನನ್ನು ಅಳತೆ (ಮೋಜಣಿ- ಸವರ್ೆ) ಮಾಡಿಸಬೇಕು. ಜಮೀನಿನಲ್ಲಿರುವ ಬೆಳೆ-ವಿಸ್ತೀರ್ಣಕ್ಕೆ ತಕ್ಕಂತೆ ಕಂದಾಯ ನಿಗದಿ ಪಡಿಸಬೇಕು. ಅದರಲ್ಲಿರುವ ಮರಗಳನ್ನು ಗುರುತಿಸಬೇಕು. ಪ್ರತಿಯೋರ್ವ ರೈತನಿಗೂ ವೈಯುಕ್ತಿಕ ಪಹಣಿ(ಆರ್ಟಿಸಿ) ಮಾಡಿಕೊಡಬೇಕು. (ವಿವರಗಳಿಗೆ ಭೂ ಕಂದಾಯ ಅಧಿ ನಿಯಮ-1965 ಅನ್ನು ಓದಿ. ಈ ವಿವರಗಳು ಆನ್ಲೈನ್ನಲ್ಲಿಯೂ ಲಭ್ಯ. ಮುಖ್ಯಾಂಶಗಳು ನನ್ನ ಬ್ಲಾಗ್ಗಳಲ್ಲಿವೆ).
 ವೈಯುಕ್ತಿಕ ಪಹಣಿ ಲಾಭಗಳೇನು ?
ವೈಯುಕ್ತಿಕ ಪಹಣಿ ಲಭ್ಯತೆಯಿಂದ ರೈತರು ಸರಕಾರಿ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಲು ಸಾಧ್ಯ. 
್ಡ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕಿಸಾನ್ ಸಮ್ಮಾನ್ನ ಫಲಾನುಭವಿಯಾಗಲು ವೈಯುಕ್ತಿಕ ಪಹಣಿ ಬೇಕಿದೆ.  
್ಡ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ಕೃಷಿ ಸಂಬಂಧಿತ ಸಾಲ ಪಡೆಯಲು ವೈಯುಕ್ತಿಕ  ಪಹಣಿ ಬೇಕು. ಇಲ್ಲವಾದಲ್ಲಿ ಸಾಲವೇ ದೊರೆಯದು. ಇನ್ನು ಸಾಲಮನ್ನಾದ ಲಾಭವು ದೊರೆಯುವುದಾದರೂ ಹೇಗೆ ? 
್ಡ  ವೈಯುಕ್ತಿಕ ಪಹಣಿ ಇದ್ದಲ್ಲಿ ಕೃಷಿ ಸಾಲವು 0-5 ಶೇಕಡ ವಾಷರ್ಿಕ ಬಡ್ಡಿಯ ದರದಲ್ಲಿ ದೊರೆಯುತ್ತದೆ. ಪಹಣಿ ಇಲ್ಲವಾದಲ್ಲಿ ರೈತರು ಸಾಲಕ್ಕೆ 12-15 ಶೇಕಡ ವಾಷರ್ಿಕ ಬಡ್ಡಿ ತೆರಬೇಕಾಗುತ್ತದೆ. ಚಿನ್ನ-ವಜ್ರ ಅಡಮಾನ ಸಾಲಕ್ಕೂ ಬ್ಯಾಂಕ್ಗಳು ಭಾರೀ ಬಡ್ಡಿ ತೆರಬೇಕಾಗುತ್ತದೆ. ಈ ನಿಯಮಾವಳಿಗಳು ಸಹಕಾರಿ ಕ್ಷೇತ್ರ ಮತ್ತು ವಾಣಿಜ್ಯ ಕ್ಷೇತ್ರದ ಬ್ಯಾಂಕ್ಗಳಿಗೂ ಅನ್ವಯವಾಗುತ್ತದೆ. 
್ಡ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಫಲಾನುಭವಿಯಾಗಲು ವೈಯುಕ್ತಿ ಪಹಣಿ ಕಡ್ಡಾಯ. ಅದೇ ರೀತಿ ಅರಣ್ಯ ಇಲಾಖೆಯು ಸಹಾಯಧನ ಸಮೇತ ನೀಡುವ ಗಿಡಗಳನ್ನು ಪಡೆಯಲು, ಗಿಡಗಳ ಪೋಷಣಾ ವೆಚ್ಚ ಪಡೆಯಲೂ ಸಹಾ ವೈಯುಕ್ತಿಕ ಪಹಣಿ ಬೇಕಿದೆ. 
್ಡ  ಕೊಡಗಿನಲ್ಲಿ ಆನೆ ಹಾವಳಿ ನಿರಂತರ (ವರ್ಷದ ಎಲ್ಲಾ ದಿನಗಳಲ್ಲಿಯೂ) ! ಅದು ರೈತ ಬೆಳೆದ ಬೆಳೆಗಳನ್ನು ಹಾಳು ಮಾಡುತ್ತದೆ. ಅದರ ಪರಿಹಾರವೆಂದು ಸರಕಾರ ನಾಲ್ಕು ಕಾಸು ಕೊಡುತ್ತದೆ. ಅದನ್ನು ಪಡೆಯಲು ವೈಯುಕ್ತಿಕ ಪಹಣಿ ಬೇಕು. ಅದೇ ರೀತಿ ಸರಕಾರ ರೈತರಿಗೆ ನೀಡುವ ನೆರೆ ಪರಿಹಾರ, ಬರ ಪರಿಹಾರ, ಅತಿವೃಷ್ಠಿ ಪರಿಹಾರ, ಮನೆ ನಷ್ಟ ಪರಿಹಾರ.. ... ... ಪಡೆಯಲು ವೈಯುಕ್ತಿಕ ಪಹಣಿಯು ಬೇಕೇ ಬೇಕು. 
್ಡ  ಬಡವರಿಗೆಂದು ಸರಕಾರವು ವಿವಿಧ ಮನೆ ಯೋಜನೆಗಳನ್ನು ನೀಡುತ್ತಿದೆ. ಉದಾಹರಣೆಗಾಗಿ ಇಂದಿರಾ ಆವಾಸ್, ಅಂಬೇಡ್ಕರ್ ಆವಾಸ್...... ಮುಂತಾದವು. ಇವುಗಳ ಅನುಷ್ಠಾನಕ್ಕೂ ವೈಯುಕ್ತಿಕ ಪಹಣಿಯ ಅಗತ್ಯವಿದೆ. 
್ಡ ಪಶು ಸಂಗೋಪನಾ ಇಲಾಖೆಯಿಂದ ದೊರೆಯುವ ಪಶುಭಾಗ್ಯ ಯೋಜನೆಯ(ಆಡು-ಕುರಿ, ಪಶು, ಕೋಳಿ ಸಾಕಾಣಿಕೆಗಾಗಿ) ಫಲಾನುಭವಿಯಾಗಲು ವೈಯುಕ್ತಿಕ ಆರ್ಟಿಸಿ ಬೇಕು.
್ಡ  ಅಣಬೆಯನ್ನು ಬೆಳೆದು ಸಹಾಯಧನ ಪಡೆಯಲು, ಕೃಷಿ ಇಲಾಖೆಯಿಂದ ಪ್ಲಾಸ್ಟಿಕ್ ನೆರಳು ಮನೆ ನಿಮರ್ಾಣಕ್ಕೆ ಸಹಾಯಧನ ಪಡೆಯಲೂ ವೈಯುಕ್ತಿಕ ಪಹಣಿ ಅಗತ್ಯ. 
್ಡ ಹಲವಾರು ಬ್ಯಾಂಕ್ಗಳಲ್ಲಿ ಕೃಷಿ ಸಂಬಂಧಿತ ಸಾಲ ಪಡೆಯಲು ಹಿಡುವಳಿದಾರ ಪತ್ರ ಬೇಕು. ಪಹಣಿ ಇದ್ದಲ್ಲಿ ಇದರ ಅಗತ್ಯವೇ ಇಲ್ಲ. ಹಾಗಿದ್ದರೂ ಇದು ಬೇಕು ಎಂಬುದು ಬ್ಯಾಂಕಿನವರ ವಾದ. ಹಿಡುವಳಿದಾರ ಪತ್ರ ಪಡೆಯಲು ವೈಯುಕ್ತಿಕ ಪಹಣಿ ಬೇಕು.
್ಡ ಒಟ್ಟಿನಲ್ಲಿ ಕೊಡಗಿನ (ಕನರ್ಾಟಕ ರಾಜ್ಯದ)ಬಡ ರೈತನ ಶ್ರೇಯೋಭಿವೃದ್ಧಿಗೆ ವೈಯುಕ್ತಿಕ ಪಹಣಿಿಯ ಅಗತ್ಯವಿದೆ.
್ಡ ಸರಕಾರ ಬಡವರಿಗೆ, ವಲಸೆ ಕಾಮರ್ಿಕರಿಗೆ ನಿವೇಶನ, ಜಮೀನು ನೀಡಿದ್ದಲ್ಲಿ ಅವರಿಗೆ ಹಕ್ಕು ಪತ್ರ, ಪಹಣಿ ಮಾಡಿಕೊಡುತ್ತದೆ. ಆದರೆ, ಪುರಾತನ ಕಾಲದಿಂದಲೇ ವಂಶಪಾರಂಪಾರ್ಯವಾಗಿ ಬಂದ ಜಮೀನಿಗೆ ಮಾತ್ರ ಕಾನೂನು ಪ್ರಕಾರ ದಾಖಲೆ ಮಾಡಿ ಕೊಡುತ್ತಿಲ್ಲ !  
ಇಲ್ಲಿರುವುದು ಕೆಲವು ಮಾದರಿಗಳು ಮಾತ್ರ. ಇಂತಹವು ನೂರಾರು, ಸಾವಿರಾರು ಉದಾಹರಣೆಗಳಿವೆ.

ಅಭಿವೃದ್ಧಿಯಿಂದ ವಂಚನೆ

ಒಟ್ಟಿನಲ್ಲಿ ರೈತಾಪಿ ವರ್ಗದವರಿಗೆ ಸರಕಾರಿ ಸೌಲಭ್ಯಗಳು ಸಿಗಬೇಕಾದಲ್ಲಿ ವೈಯುಕ್ತಿಕ ಪಹಣಿಯ ಅಗತ್ಯವಿದೆ. ಶೇಕಡಾ 95 ಭಾಗ ರೈತಾಪಿ ವರ್ಗದವರಿಗೆ 'ವೈಯುಕ್ತಿಕ ಪಹಣಿ'ಯೇ ಇಲ್ಲ. ಇದರಿಂದಾಗಿ ಕೊಡಗು ಜಿಲ್ಲೆ (ಸೇರಿದಂತೆ ರಾಜ್ಯದಲ್ಲಿ) ರೈತರಿಗೆಂದು ಮೀಸಲಾಗಿರುವ ಅನುದಾನದ ಬಳಕೆಯಾಗುತ್ತಿಲ್ಲ. ಫಲಾನುಭವಿಗಳು ದೊರೆಯದೇ ಹಲವಾರು ಯೋಜನೆಗಳನ್ನು ಪಡೆದವರೇ ಮತ್ತೇ, ಮತ್ತೇ  ಪಡೆಯುತ್ತಿದ್ದಾರೆ. ಇಂತಹವರಲ್ಲಿ ಧನಿಕ ರೈತರದ್ದೇ ಸಿಂಹಪಾಲು ! ಇದನ್ನು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಅಧಿಕಾರಿ ವೃಂದದವರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರುವರು. ಪರಿಣಾಮ ರೈತಾಪಿ ವರ್ಗ ಅಭಿವೃದ್ಧಿಯಿಂದ ವಂಚಿತರಾಗುತ್ತಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಫಲಾನುಭವಿಗಳ ಅಲಭ್ಯತೆಯಿಂದ ಸರಕಾರದ ಅನುದಾನ ಬಳಕೆಯಾಗದೇ ವಾಪಾಸ್ಸು ಹೋಗುತ್ತಿದೆ. (ಇದರಲ್ಲಿ ಪರಿಶಿಷ್ಟ ಜಾತಿ ಜನಾಂಗದವರ ಫಲಾನುಭವಿಗಳೇ ಲಭ್ಯವಾಗುತ್ತಿಲ್ಲ !) 
ಅಧಿಕಾರಿಗಳಿಂದಲೇ ಕಾನೂನಿನ ಉಲ್ಲಂಘನೆ !
ಪ್ರತಿ ರೈತರಿಗೂ ವೈಯುಕ್ತಿಕ ಪಹಣಿ(ಆರ್ಟಿಸಿ) ಇಲ್ಲದಿರುವುದರಿಂದ ಬಡವರು ಸಂಕಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಈ ಜ್ವಲಂತ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲೆಯ ಪ್ರತೀ ರೈತರಿಗೂ ವೈಯುಕ್ತಿಕ ಪಹಣಿ ನೀಡಬೇಕು. ಸರಕಾರ ಮಾಡಿದ ಕಾನೂನು ಅನುಷ್ಠಾನ ಮಾಡದೇ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾನೂನನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಬಹುತೇಕ ಅಧಿಕಾರಿ- ಸಿಬ್ಬಂದಿ ವರ್ಗದವರು ಕಾನೂನು ಬಾಹಿರವಾಗಿ (ಬ್ರಿಟಿಷ್ ಕಾನೂನಿನಂತೆ)ಪ್ರತ್ಯೇಕ ಪಹಣಿ ನೀಡುತ್ತಿದ್ದಾರೆ. (ಆದರೂ, 1965ರ ಭೂ ಕಂದಾಯದ ಅಧಿ ನಿಯಮದಡಿ ಪಹಣಿ ನೀಡುತ್ತಿಲ್ಲ.) ಇಂತಹ ಕಾನೂನು ಬಾಹಿರ ಕುಕೃತ್ಯಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಸಹಾ ಶಾಮೀಲಾಗಿದ್ದಾರೆ ಎಂಬ ಆರೋಪ ಜನವಲಯದಲ್ಲಿ ಕೇಳಿ ಬರುತ್ತಿದೆ. 

ಹೊದ್ದೂರು ಗ್ರಾಮ ಸಭೆಯಲ್ಲಿ ಆಗ್ರಹ 


                                       1965ರ ಕಂದಾಯ ಅಧಿ ನಿಯಮ

1965ರ ಭೂ ಕಂದಾಯ ಅಧಿ ನಿಯಮದ ಪ್ರಕಾರ ಪ್ರತಿ ರೈತರಿಗೂ ವೈಯುಕ್ತಿಕ ಪಹಣಿಯನ್ನು ಸರಕಾರ ನೀಡಬೇಕು. ಅಧಿ ನಿಯಮ ಜಾರಿಗೆ ಬಂದು 55 ವರ್ಷಗಳು ಕಳೆದರೂ, ಜನತೆಗೆ ಇದರ ಲಾಭ ಸಿಕ್ಕಿಲ್ಲ. ಸರಕಾರ ಕಾನೂನನ್ನು ಸಕಾಲಿಕವಾಗಿ ಅನುಷಾನ ಮಾಡದೆ ರೈತಾಪಿ ವರ್ಗದವರನ್ನು ಸತಾಯಿಸುತ್ತಿದೆ. ರೈತಾಪಿ ವರ್ಗದವರ ಬಗ್ಗೆ ಮಲತಾಯಿ ಧೋರಣೆ ತಳೆದಿದೆ ಎಂಬ ಆರೋಪವನ್ನು ಜಿಲ್ಲೆಯ ರೈತಾಪಿ ವರ್ಗದವರು ಮಾಡುತ್ತಿರುವರು. ಎಂಬ ವಿಚಾರವನ್ನು ಕೂಡಂಡ ರವಿ(ನಾನು) ಹೊದ್ದೂರು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದರು.
ಸಾಲಮನ್ನಾ ಗಗನ ಕುಸುಮ 
ಕೇಂದ್ರ-ರಾಜ್ಯ ಸರಕಾರಗಳ ಜನಪ್ರಿಯ ಯೋಜನೆಗಳಿಂದ ಜಿಲ್ಲೆಯ ಬಹುತೇಕ ರೈತಾಪಿ ವರ್ಗದವರು ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಪರದಾಡುವಂತಾಗಿದೆ. ಸರಕಾರದ ಪ್ರತಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ವೈಯುಕ್ತಿಕ ಪಹಣಿಯ ಅಗತ್ಯವಿದೆ. ಆದರೆ, ಜಿಲ್ಲೆಯ ಬಹುತೇಕ ಬೆಳೆಗಾರರು ಜಂಟಿ ಪಹಣಿ ಪತ್ರ ಹೊಂದಿದ್ದಾರೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಸರಕಾರ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದರು. ವೈಯುಕ್ತಿಕ ಪಹಣಿ ಲಭ್ಯವಾಗದ ಹಿನ್ನೆಲೆಯಲ್ಲಿ ಬಡ ರೈತಾಪಿ ವರ್ಗದವರಿಗೆ ಸಹಕಾರಿ ಕ್ಷೇತ್ರದಲ್ಲಿ ಸಾಲವೇ ಸಿಗುತ್ತಿಲ್ಲ. ಇನ್ನು ಸಾಲ ಮನ್ನಾದ ಮಾತೆಲ್ಲಿ  ? ಹಲವಾರು ಬ್ಯಾಂಕುಗಳು ಅಗತ್ಯವೇ ಇಲ್ಲದಿದ್ದರೂ, ಶಿಕ್ಷಣ ಸಾಲಕ್ಕೆ ವೈಯುಕ್ತಿಕ ಆರ್ಟಿಸಿ ಕೇಳುತ್ತಿದ್ದಾರೆ. ಅದೇ ರೀತಿ ಅಗತ್ಯವೇ ಇಲ್ಲದಿದ್ದರೂ, ಸಹಕಾರಿ ಕ್ಷೇತ್ರದ ಬ್ಯಾಂಕ್ಗಳಲ್ಲಿ ಹಿಡುವಳಿ ಪತ್ರ ಕೇಳಲಾಗುತ್ತದೆ ಎಂಬ ವಿಚಾರವನ್ನು ನಾನು ಸಭೆಗೆ ತಿಳಿಸಿದ್ದೆ.
ಎಲ್ಲೆಡೆ ಪ್ರಸ್ತಾಪಿಸಿ-ಮನವಿ
ಸಮಸ್ಯೆಯು ಜಿಲ್ಲಾ ವ್ಯಾಪಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯ ಸಕರಾತ್ಮಕವಾಗಿ ಪರಿಹರಿಸಲು ವಿಚಾರವನ್ನು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿಯೂ ಪ್ರಸ್ತಾಪಿಸಬೇಕು. ಜಿಲ್ಲೆಯ ರೈತಾಪಿ ವರ್ಗದವರ ಪರವಾಗಿ ಮಡಿಕೇರಿ ತಾಲೂಕು ಪಂಚಾಯಿತಿಯಲ್ಲಿ ಶೋಭಾ ಮೋಹನ್ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಮುರುಳಿ ಕರುಂಬಮಯ್ಯ ವೈಯುಕ್ತಿಕ ಆರ್ಟಿಸಿ ವಿಚಾರವನ್ನು ಪ್ರಸ್ತಾಪಿಸಿ ಎಂದು  ಕೂಡಂಡ ರವಿ ಅವರು(ನಾನು) ಸಭೆಯ ಪರವಾಗಿ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಮನವಿ ಮಾಡಿದೆ. ಈ ಬಗ್ಗೆಗಿನ ಸಭಾ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಸಭೆ ಆಗ್ರಹಿಸಿತು. 
ಕಾನೂನು ಬಾಹಿರವಾಗಿ ವೈಯುಕ್ತಿಕ ಪಹಣಿ
ಆರ್ಟಿಸಿಯೇ ಹಿಡುವಳಿ ಪತ್ರ.(ಹಾಗೆಂದು ಪಹಣಿಯ ಮೇಲ್ಭಾಗದಲ್ಲಿ ನಮೂದಾಗಿದೆ.) ಅರ್ಟಿಸಿ ಇರುವವರಿಗೆ ಹಿಡುವಳಿ ಪತ್ರದ ಅವಶ್ಯಕತೆಯೇ ಇಲ್ಲ. ಅದರೂ ಕೆಲ ಬ್ಯಾಂಕ್ಗಳಲ್ಲಿ ರೈತಾಪಿ ವರ್ಗದವರ ಶೋಷಣೆ ನಡೆಯುತ್ತಿದೆ ! ಇದನ್ನು ಪಡೆಯಲೂ ವೈಯುಕ್ತಿಕ ಆರ್ಟಿಸಿ ಬೇಕಿದೆ. ಆದರೂ, ಸರಕಾರ ವೈಯುಕ್ತಿಕ ಆರ್ಟಿಸಿ ನೀಡದೇ ಜನತೆಯನ್ನು ಹಿಂಸಿಸುತ್ತಿರುವುದು, ಕಾನೂನನ್ನು ಜಾರಿ ಮಾಡದಿರುವುದು ನ್ಯಾಯಾಂಗ ನಿಂದನೆಗೆ ಸಮವಾಗಿದೆ. ಆದರೂ, ಬಹುತೇಕ ಮಂದಿ ರೈತರಿಗೆ ಕಾನೂನಿನ ಅರಿವು ಇಲ್ಲದೆ ವೃಥಾ ಕಛೇರಿ ಅಲೆದಲೆದು ಕಾಲಹರಣ ಮಾಡುತ್ತಿರುವರು. ಸ್ಥಿತಿವಂತರು 100 ಕೊಡುವಲ್ಲಿ ಸಾವಿರ ರೂಪಾಯಿ(ಎಂಜಿಲು ಕಾಸು-ಲಂಚ) ಕೊಟ್ಟು ಹಳೇ ಬ್ರಿಟಿಷ್ ಕಾಲದ ಕಾನೂನಿನ ಪ್ರಕಾರ ಪಹಣಿಯನ್ನು ವೈಯುಕ್ತಿಕ ಖಾತೆಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇದು 1965 ರಿಂದಲೂ ನಡೆದು ಕೊಂಡು ಬಂದಿರುವ ಕಾನೂನು ಉಲ್ಲಂಘನೆ. ಲಂಚದ ರುಚಿ ಹತ್ತಿದ ಅಧಿಕಾರಿ ಸಿಬ್ಬಂದಿಗಳ ವರ್ಗ ಜನತೆಯನ್ನು ಮನಸೋ ಇಚ್ಛೆ ಸುಲಿಯುತ್ತಿದ್ದಾರೆ. ದಲ್ಲಾಳಿಗಳು ಕೂಡಾ ! ಆದರೆ, ಬಡವರ ಪಾಡೇನು ?
ಕುಟುಂಬಗಳ ವಿಘಟನೆ
 ಬಹುತೇಕ ಸಿಬ್ಬಂದಿ ವರ್ಗಕ್ಕೆ 1965ರ ಭೂ ಕಂದಾಯ ಅಧಿ ನಿಯಮದ ಮಾಹಿತಿಯೇ ಇಲ್ಲ. ನನ್ನ ಜಮೀನಿನ ಸವರ್ೆ ನಂಬರ್ ಕೊಡಿ, ಕಂದಾಯ ಕಟ್ಟಬೇಕು ಎಂದು ಗ್ರಾಮ ಲೆಕ್ಕಿಗರನ್ನು ಕೇಳಿದಲ್ಲಿ, ಕುಳ ನಂಬರ್ಗೆ ಕಂದಾಯ ಪಾವತಿಸಿ ಎನ್ನುತ್ತಿದ್ದಾರೆ. ಅಸಲಿಗೆ ಕುಳ ನಂಬರ್ ಈಗ ಅಸ್ತಿತ್ವದಲ್ಲಿಯೇ ಇಲ್ಲ ! ಕುಟುಂಬಗಳೇ ವಿಘಟನೆ( ಚೂರು-ಚೂರು) ಆಗುತ್ತಿರುವ ದಿನಗಳಲ್ಲಿ ಕುಳ ನಂಬರ್ ಪಟ್ಟೇದಾರರಿಗೆ ಅಧಿಕಾರ-ಅಸ್ತಿತ್ವವೇ ಕಾನೂನಿನಲ್ಲಿ ಇಲ್ಲ.   
ಗ್ರಾಮದಲ್ಲಿ ಗ್ರಾಮಲೆಕ್ಕಿಗರು 
ಜನತೆಯ ಸೇವೆಗಾಗಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಲೆಕ್ಕಿಗರು ಲಭ್ಯರಿರಬೇಕು. ಹಾಗೆಂದು ಕಾನೂನು ಹೇಳುತ್ತದೆ. ಗ್ರಾಮ ಲೆಕ್ಕಿಗರು ಎಂಬ ಪದನಾಮ(ಡಿಸಿಗ್ನೇಶನ್) ಇದನ್ನು ಸಾರಿ ಹೇಳುತ್ತದೆ. ಆದರೆ, ಈ ಸಿಬ್ಬಂದಿಗಳು ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ಇರುತ್ತಾರೆ. ಗ್ರಾಮಗಳಲ್ಲಿ ಸೇವೆಗೆ ಲಭ್ಯರಿಲ್ಲ. ಅವರನ್ನು ಗ್ರಾಮಗಳಲ್ಲಿ ಸೇವೆ ಲಭಿಸುವಂತೆ ಮಾಡಬೇಕು. ಹಾಗಾದಲ್ಲಿ ಮಾತ್ರ ಜನತೆ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗಬಹುದು. ಎಲ್ಲದಕ್ಕೂ ಜನತೆಯ ಬೆಂಬಲ-ಒಗ್ಗಟ್ಟು ಅಗತ್ಯ. 
ರೈತ ಸಾಮ್ರಾಟ !(ಕಿಸಾನ್ ಸಾಮ್ರಾಟ್)
ಕೊಡಗಿನ ಪ್ರತೀ ರೈತ ಬಂಧುವಿಗೂ 1965ರ ಭೂ ಕಂದಾಯ ಅಧಿ ನಿಯಮವಾಳಿಯಂತೆ ವೈಯುಕ್ತಿಕ ಪಹಣಿ ದೊರೆಯಬೇಕು. ತನ್ಮೂಲಕ ರೈತ ಬಂಧುವು ಸಾಮ್ರಾಟನಾಗಿ ಮೆರೆಯಬೇಕು ಎಂಬುದೇ ನನ್ನ ಮಹದಾಸೆ. ಅದಕ್ಕಾಗಿ ನನ್ನ ಪುಟ್ಟ ಪ್ರಯತ್ನವಿದು. ಬಹುತೇಕ ಮಾಧ್ಯಮಗಳು ಈ ವಿಚಾರಗಳನ್ನು ಮುಚ್ಚಿಟ್ಟಿರುವುದರಿಂದ ಆನ್ಲೈನ್ ಮುಖಾಂತರದ ಮಾಡಬೇಕಾಗಿದೆ.