'ಗೋಲ್ಡನ್ ಚಾರಿಯೇಟ್'
ಬರಹ- ಕೂಡಂಡ ರವಿ
ನಾವು ಸರ್ವೆ ಸಾಮಾನ್ಯ ರೈಲುಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಹಲವಾರು ಮಂದಿ ರೈಲಿನಲ್ಲಿ ಪ್ರಯಾಣ ಮಾಡಿರುತ್ತೇವೆ. ಬಹುಶ್ಯ ಕೊಡಗಿನ ಬಹುತೇಕ ಮಂದಿಗೆ ಇನ್ನೂ ರೈಲು ಪ್ರಯಾಣ ಗಗನ ಕುಸುಮವೇ ಸರಿ. ನಾವು ಮಡಿಕೇರಿ ರಾಜಾಸೀಟ್ ಬಳಿಯ ಪುಟಾಣಿ ರೈಲಿನಲ್ಲಿ ಮಕ್ಕಳೊಡನೆ ಮಕ್ಕಳಾಗಿ ಒಂದೆರಡು ಸುತ್ತು ಸಾಗಿದ್ದೆ- ಸಾಗಿದ್ದು. ಮಡಿಕೇರಿ ಆಕಾಶವಾಣಿಯಲ್ಲಿ ಶೋತೃಗಳ ಮನೆಗೆ ಮನಕ್ಕೆ ಲಗ್ಗೆಯಿಡುವ ಮತ್ತೊಂದು ವಿಶಿಷ್ಟವಾದ ರೈಲಿದೆ. ಅದೇ ರೀತಿ ವಿಭಿನ್ನವಾದ ಮತ್ತೊಂದು ರೈಲಿದೆ. ಅದೇ ಗೋಲ್ಡನ್ ಚಾರಿಯೇಟ್ !
ಐಷಾರಾಮಿ ರೈಲು
ಈ ವಿಶಿಷ್ಟಮಯ ರೈಲು ಕರ್ನಾಟಕ -ಗೋವಾ, ಸಂಪರ್ಕಿಸುತ್ತದೆ. . ರೈಲು ಕನ್ನೇರಳೆ ಮತ್ತು ಬಂಗಾರದ ಬಣ್ಣದಿಂದ ಕೂಡಿದೆ. ಇದು ಆನೆಯ ತಲೆ ಸಿಂಹದ ಶರೀರ ಹೊಂದಿರುವ ಅಪೂರ್ವ ಲಾಂಛನವನ್ನು ಹೊಂದಿದೆ. ಅತ್ಯಂತ ಉತ್ಕೃಷ್ಟ ಗುಣಮಟ್ಟದ ಅರಮನೆ ಸಾಲುಗಳ ಸುಂದರ ವಸತಿ, ವಿಶಿಷ್ಟಮಯ ಚಿಕಿತ್ಸಾ ಸೌಲಭ್ಯಗಳು, ಜೊತೆಗೆ ಊಟೋಪಚಾರವನ್ನೂ ಕೂಡ ಹಳಿಯ ಮೇಲೆಇದು ತನ್ನ ವಿಭಿನ್ನತೆಯಿಂದಾಗಿ ಏಷ್ಯಾದಲ್ಲಿಯೇ ಪ್ರಮುಖ ಐಷಾರಾಮಿ ರೈಲು ಎಂಬ ಕೀತರ್ಿಗೆ ಭಾಜನವಾಗಿದೆ.ಇದು ಕನರ್ಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಮತ್ತು ಮ್ಯಾಪಲ್ ಸಮೂಹ ಸಂಸ್ಥೆಗಳು ಸೇರಿ ನಿರ್ವಹಿಸುತ್ತಿವೆ
.
ವೈಶಿಷ್ಟ್ಯಮಯ ಹೆಸರುಗಳು
ಈ ರೈಲಿನಲ್ಲಿ ಕೇವಲ 11 ಬೋಗಿಗಳು ಮಾತ್ರ ಇವೆ. ಇವುಗಳಿಗೆ ಕನರ್ಾಟಕವನ್ನು ಪುರಾತನ ಕಾದಲ್ಲಿ ಆಳಿ-ಅಳಿದ ರಾಜಮನೆತನಗಳಾದ ಕದಂಬ, ಹೊಯ್ಸಳ, ರಾಷ್ಟ್ರಕೂಟ, ಗಂಗಾ, ಚಾಲುಕ್ಯ, ಬಹಮನಿ, ಸಂಗಮು, ಶಾತವಾಹನ, ಯದುಕುಲ ಮತ್ತು ವಿಜಯನಗರ ಎಂಬ ಹೆಸರನ್ನಿಡಲಾಗಿದೆ. ಇದರಲ್ಲಿ ಬರೇ 44 ಕೋಣೆಗಳು ಮಾತ್ರ ಇವೆ.
ರೈಲಿನಲ್ಲಿ ಎರಡು ಹೊಟೇಲ್ಗಳು, ಲೌಂಜ್ ಬಾರ್, ಸಭಾಂಗಣ, ಜಿಮ್ ಮತ್ತು ಸ್ಪಾ ಸೌಲಭ್ಯಗಳನ್ನು ಒಳಗೊಂಡಿದೆ. ರೈಲಿನ ಪ್ರಯಾಣಿಕರಿಗೆ ಅಂತರ್ಜಾಲ, ಉಪಗ್ರಹ ಆಧಾರಿತ ಮೊಬೈಲ್ ಸೇವೆ, ಟಿವಿ ಸೇವೆಗಳು ಲಭ್ಯವಿದೆ.
ಇದು ಅತ್ಯಂತ ಅಪೂರ್ವ ಸೌಂದರ್ಯದ ಒಳಾಂಗಣವನ್ನು ಹೊಂದಿದೆ. ಈ ರೈಲು ಕರ್ನಾಟಕದ ಪ್ರಾಗೈತಿಹಾಸಿಕ ಸ್ಥಳಗಳು ಸೇರಿದಂತೆ ಕಬಿನಿ, ಮೈಸೂರು, ಬೇಲೂರು, ಹಳೆಬೀಡು, ಹಂಪೆ, ಐಹೊಳೆ ಪಟ್ಟದ ಕಲ್ಲು, ಬಾದಾಮಿ, ಗೋವಾ, ಬೆಂಗಳೂರಿನವರೆಗೆ ಪಯಣ.
ಇದರಲ್ಲಿ ಕೊಡಗಿನ ಸಾಂಪ್ರಾದಾಯಿಕ ಉಡುಪು(ಕುಪ್ಯಚೇಲೆ) ಯನ್ನು ಹೋಲುವ ಧಿರಸು ತೊಟ್ಟ ಸೇವಕರು ತಮ್ಮ ಸೇವೆ ಮಾಡಲು ಸಿದ್ಧರಿರುತ್ತಾರೆ.
ಇದರಲ್ಲಿ ಬಹುತೇಕವಾಗಿ ವಿದೇಶಿ ಪ್ರವಾಸಿಗರು ಪ್ರಯಾಣಿಸುತ್ತಾರೆ. ಇದರಲ್ಲಿ ಪಯಣಿಸುವವರಿಗೆ ಅಪ್ಪಟ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು, ವಿವಿಧ ಭಕ್ಷ್ಯಭೋಜನಗಳು ಸಹಾ ದೊರೆಯುತ್ತದೆ.
ಇದರಲ್ಲಿ ಪಯಣಿಸುವವರು ರಾಜ ವೈಭೋಗದಂತಹ ಸೇವೆಯನ್ನು ಪಡೆಯುವರು. ಅಂದಹಾಗೆ ಇದರಲ್ಲಿ ಏಳುದಿನಗಳ ಪ್ರವಾಸಕ್ಕೆ ಒಬ್ಬರಿಗೆ 82 ಸಾವಿರ, ಇಬ್ಬರಿಗೆ 3ಲಕ್ಷದ 8 ಸಾವಿರ, ಮೂವರಿಗೆ 3ಲಕ್ಷದ 36 ಸಾವಿರ ಪ್ರಯಾಣ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಇದರಲ್ಲಿ ಪ್ರಯಾಣ ಮಾಡಿ " ಸಗ್ಗದ ಸುಖ" ಪಡೆಯ ಬಯಸುವರು ಸಾಕಷ್ಟು ಮುಂಚಿತವಾಗಿಯೇ ತಮ್ಮ ಸೀಟ್ಗಳನ್ನು ಕಾದಿರಿಸಬೇಕು.