ಶುಕ್ರವಾರ, ಜುಲೈ 6, 2018

ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ-ಬಳಕೆ

ವೈಜ್ಞಾನಿಕ  ಬೋರ್ಡೊ ದ್ರಾವಣ ತಯಾರಿಕೆ-ಬಳಕೆ  


 ಬರಹ: ಕೂಡಂಡ ರವಿ, ಹೊದ್ದೂರು. 

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com





ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗುತ್ತದೆ. ಆದರೆ, ಬಹುತೇಕ ಬೆಳೆಗಾರು ಮತ್ತು ಕೂಲಿ ಕಾರ್ಮಿಕರು ಬೋಡೋ ದ್ರಾವಣವನ್ನು ತಯಾರಿಸುವಲ್ಲಿ ಎಡುವುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ.  ಬೋಡೋ ದ್ರಾವಣವನ್ನು  ಸಮರ್ಪಕವಾಗಿ ತಯಾರಿಸಿದ್ದಲ್ಲಿ ಅದನ್ನು ಸಿಂಪಡಿಸುವುದು ವ್ಯರ್ಥವಾಗುತ್ತದೆ.

ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ್ರನಾಶಕ. ಆದರೆ , ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ  ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪರಣೆ ಕೈಗೂಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.
ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತ್ತ, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪರಣೆ ಮಾಡುವುದುಂಟು. ಪರಿಣಾಮ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿ.
ಮೈಲುತುತ್ತ ಅಂದರೆ ಶುದ್ದ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ,  ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ಧವಾಗಿ ಕೆಲಸ ಮಡುತ್ತದೆ. ಘನಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣವನ್ನು ಸೇರಿಸಿ, ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಲಾಗುತ್ತದೆ. ಅದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೋ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೆÇೀಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜೊತೆಗೆ ಏಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಾಗ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬೋಡೋ ದ್ರಾವಣವನ್ನು ಅತ್ಯಂತ ಸಮರ್ಪಕವಾಗಿ ತಯಾರಿಸುವುದೂ ಪ್ರಮುಖ ಅಂಶ.
ಈ ಹಿನ್ನೆಲೆಯಲ್ಲಿ ಬೋರ್ಡೋ ದ್ರಾವಣದ ವೈಜ್ಞಾನಿಕ ತಯಾರಿಕೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಸಲಹೆಗಳನ್ನು ನೀಡಿದ್ದಾರೆ.



ಅನುಕೂಲಗಳು
ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು ಹತೋಟಿ ಮಾಡಬಹುದು.
ಈ ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೂರ ಮೈಯಲ್ಲಿ ಅಂಟಿಕೊಳ್ಳುವುದರಿಂದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು.
ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು.
ಸಿಂಪರಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ದುûಷ್ಪರಿಣಾಮಗಳು ತುಂಬಾ ಕಡಿಮೆ.


ತಯಾರಿಸಲು ಬೇಕಾದ ವಸ್ತುಗಳು
1. ಮೈಲುತುತ್ತ 1 ಕೆ.ಜಿ.
2. ಸುಣ್ಣ 1 ಕೆ.ಜಿ.
3. ನೀರು 100 ಲೀಟರ್
4. ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್.ಪೇಪರ್
5. 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್
6. 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್/ಬ್ಯಾರಲ್


ತಯಾರಿಕಾ ವಿಧಾನ :
ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.
ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‍ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು.
ಕರಗಿದ 10 ಲೀಟರ್ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‍ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ಈಗ ಈ ಮಿಶ್ರಣವು ಶೇ. 1 ರ ಬೋರ್ಡೊ ದ್ರಾವಣವಾಗುತ್ತದೆ. ಇಂತಹ ಮಿಶ್ರಣ ತಿಳಿ ನೀಲಿ  ಬಣ್ಣದಾಗಿರುತ್ತದೆ.
ದ್ರಾವಣದ ಪರೀಕ್ಷೆ
ತಯಾರು ಮಾಡಿದ ಮಿಶ್ರಣವು ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುುಕ್ತವಾಗಿದ್ದು ಅದನ್ನು ಸಿಂಪರಣೆ ಮಾಡಿದ್ದಲ್ಲಿ ಬೆಳೆಗಳಿಗೆ ಹಾನಿಕಾರಕ. ಆದುದರಿಂದ ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದ್ದು ಸಿಂಪಡಣೆಗೆ ಸೂಕ್ತ  ಎಂದು ತಿಳಿಯಬಹುದು.
ಕೆಂಪು ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್‍ಮಸ್ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.

ಗಮನದಲ್ಲಿಡಬೇಕಾದ  ಅಂಶಗಳು
ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಮರದ  ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು.
ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು  ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಾದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು.
ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆ (ಕೀಟ) ನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು.
ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು.
ಹೆಚ್ಚು ಸುಣ್ಣ ಸೇರಿಸಿದರೆ ದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7 ಕ್ಕಿಂತ ಹೆಚ್ಚಾಗುವುದು ಹಾಗು ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂದ್ರನಾಶಕದ ಗುಣ ಕಡಿಮೆಯಾಗುತ್ತದೆ.
ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು.
ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪ್ರೇ ಸುಣ್ಣವನ್ನು ಉಪಯೋಗಿಸಬೇಕು.
ಸಿಂಪರಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.

ದ್ರಾವಣದ ಬಳಕೆ 

ಬೆಳೆಗಳು              ಪ್ರಮುಖವಾದ ರೋಗಗಳು 

ಅಡಿಕೆ - ಕೊಳೆರೋಗ, ಸುಳಿಕೊಳೆರೋಗ
ತೆಂಗು - ಸುಳಿ ಕೊಳೆರೋಗ, ಕಾಂಡದಿಂದ ರಸಸೋರುವ ರೋಗ
ಕಾಳು ಮೆಣಸು - ಶೀಘ್ರ ಸೊರಗು ರೋಗ, ಚಿಬ್ಬು ರೋಗ (ಕೊತ್ತು ಉದುರುವುದು)
ಶುಂಠಿ - ಗೆಡ್ಡೆ ಕೊಳೆರೋಗ, ಎಲೆ ಚುಕ್ಕೆ ರೋಗ
ಈ ರೀತಿ ವೈಜ್ಞಾನಿಕ ವಿಧಾನದಿಂದ ಬೋರ್ಡೊ ದ್ರಾವಣವನ್ನು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ರ ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು.

ಮಾಹಿತಿಗಾಗಿ ಸಂಪರ್ಕಿಸಿ

ಹಿರಿಯ ವಿಜ್ಞಾನಿ ಮತ್ತು ಮುಖ್ಯಸüರು, ಕೃಷಿ ವಿಜ್ಞಾನ ಕೇಂದ್ರ , ಗೋಣಿಕೊಪ್ಪಲು, ದೂರವಾಣಿ: 08274-247274

ಮಂಗಳವಾರ, ಜುಲೈ 3, 2018

ಭತ್ತದ ಬೀಜೋಪಚಾರ ಏಕೆ- ಹೇಗೆ ?

ಕೃಷಿ ಲೋಕ

                            ಭತ್ತದ ಬೀಜೋಪಚಾರ ಏಕೆ- ಹೇಗೆ ?


               ಬರಹ: ಕೂಡಂಡ ರವಿ, ಹೊದ್ದೂರು. 



ಭತ್ತವು ಕೊಡಗು ಜಿಲ್ಲೆಯ ಮುಖ್ಯ ಆಹಾರ ಬೆಳೆ. ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆಗಳಲ್ಲಿ ಮುಂಗಾರಿನಲ್ಲಿ ಬೀಳುವ ಮಳೆಯಾಶ್ರಯದಲ್ಲಿ ಬೆಳೆಯನ್ನು ತಗ್ಗು (ಬಯಲು) ಮಧ್ಯಮ (ಮಜಲು ಪ್ರದೇಶ) ಹಾಗೂ ತಗ್ಗಿನ   ಕಣಿವೆ ಪ್ರದೇಶದ ಗದ್ದೆಗಳಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಭತ್ತದ ಪ್ರದೇಶವು ಕಡಿಮೆಯಾಗುತ್ತಿದೆ.  ಭತ್ತದ ಇಳುವರಿಯಲ್ಲಿ ಕೂಡ ಇಳಿಮುಖವಾಗುತ್ತಿದೆ. ಭತ್ತವನ್ನು ಸಮಗ್ರ ಬೇಸಾಯ ಪದ್ಧತಿಯಡಿಯಲ್ಲಿ ಉತ್ಪಾದಕತೆyaನ್ನು ಹೆಚ್ಚಿಸುವುದರೊಂದಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.


ಪ್ರಸ್ತುತ ವರ್ಷ ಜಿಲ್ಲೆಯಾದ್ಯಂತ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಈಗಾಗಲೇ   ತೊಡಗಿಸಿಕೊಂಡಿದ್ದಾರೆ. ಭತ್ತದ ಕೃಷಿ ಸೇರಿದಂತೆ ವಿವಿಧ ಕೃಷಿಗಳಲ್ಲಿ ಬೀಜೋಪಚಾರವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಸರಿಯಾದ ಕ್ರಮವರಿತು ಬೀಜೋಪಚಾರ ಮಾಡುವುದರಿಂದ ಹಲವಾರು ರೋಗಗಳನ್ನು ಯಶಸ್ವಿಯಾಗಿ ತಡೆಯಲು ಸಾಧ್ಯವಿದೆ.

 ರೋಗಗಳಿಂದ ರಕ್ಷಣೆ 

ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದುಬತ್ತಿ ರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ, ಬಿತ್ತನೆ ಬೀಜ ಮತ್ತು ಇತರೆ ಮಾಧ್ಯಮಗಳಿಂದ ಬೀಜದ ಮುಖಾಂತರ ಪ್ರಸಾರವಾಗುತ್ತವೆ.  ರೈತರಿಗೆ ಅಪಾರ ಆರ್ಥಿಕ ಹಾನಿಯನ್ನು ಉಂಟುಮಾಡುತ್ತವೆ. ರೈತರು ಅತಿ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಬೀಜದಿಂದ ಪ್ರಸಾರವಾಗುವ ಈ ರೋಗಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೀಜಗಳಿಗೆ, ಮೊಳಕೆಯೊಡೆಯುವ ಸಸಿಗಳಿಗೆ ಹಾಗೂ ಮುಂದಿನ ಸಸ್ಯ ಬೆಳವಣಿಗೆ ಹಂತದಲ್ಲಿ ಬರುವ ಅನೇಕ ರೋಗಗಳಿಂದ ರಕ್ಷಣೆ ಒದಗಿಸಬಹುದಾಗಿದೆ.

ಬೀಜದಿಂದ ಪ್ರಸಾರವಾಗುವ ಅನೇಕ ರೋಗಗಳಲ್ಲಿ ಹಾನಿಕಾರಕ ರೋಗಾಣುಗಳಾದ ಶಿಲೀಂದ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜೊತೆಯಲ್ಲಿ ಇರುತ್ತವೆ.  ಬೆಳೆಯ ವಿವಿಧ ಬೆಳವಣಿಗೆಯ ಹಂತಗಳÀಲ್ಲಿ ರೋಗವು ಉಲ್ಬಣಿಸಿ,  ಬೆಳೆಯ ಹಾನಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು  ರೈತರಿಗೆ ಭತ್ತದಲ್ಲಿ ಬೀಜೋಪಚಾರ ಕ್ರಮದ ಬಗ್ಗೆ  ಮಾಹಿತಿ ನೀಡಿರುವರು. ಆದ್ದರಿಂದ ಜಿಲ್ಲೆಯ ರೈತರು ಈ ಕೆಳಗೆ ಸೂಚಿಸಿದ ವಿಧಾನವನ್ನು ಅನುಸರಿಸಿ, ಖರ್ಚನ್ನು ಕಡಿಮೆ ಮಾಡಬಹುದಾಗಿದೆ. ಬೆಳೆಯಲ್ಲಿ ಬರುವ ಅನೇಕ ರೋಗಗÀಳನ್ನು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಬಹುದು. 

 ಬೀಜೋಪಚಾರ  ವಿಧಾನ

ಪ್ರತೀ ಎಕರೆಗೆ ಶಿPAರಸ್ಸು ಮಾಡಿದ 25 ರಿಂದ 30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೊಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಿ.
ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2 ರಿಂದ 3 ಬಾರಿ ತಣ್ಣೀರಿನಲ್ಲಿ ತೊಳೆದು 24 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಿ. 
ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25 ರಿಂದ 30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂದ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ,  ನೆರಳಿನಲ್ಲಿ ಒಣಗಿಸಿ.
ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ,  ಮೊಳಕೆಯೊಡೆಯಲು ಇಟ್ಟು,  ನಂತರ ಸಸಿಮಡಿಗೆ ಉಪಯೋಗಿಸಿ.
ಗಮನಿಸಬೇಕಾದ ಅಂಶಗಳು
ಶಿPÁರಸ್ಸು ಮಾಡಿದ ಶಿಲೀಂದ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ.
ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಿ.
ಎರಡು ಮೂರು ಶಿಲೀಂದ್ರನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡದಿರಿ.
ಬೀಜೋಪಚಾರ ಮಾಡುವ ಸಂದರ್ಭ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್‍ಗಳನ್ನು ಬಳಸಿ .

ಹೆಚ್ಚಿನ ವಿವರಗಳಿಗೆ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ: 08274-247274 ಇವರನ್ನು ಸಂಪರ್ಕಿಸಬಹುದು.