ಮಂಗಳವಾರ, ಜುಲೈ 3, 2018

ಭತ್ತದ ಬೀಜೋಪಚಾರ ಏಕೆ- ಹೇಗೆ ?

ಕೃಷಿ ಲೋಕ

                            ಭತ್ತದ ಬೀಜೋಪಚಾರ ಏಕೆ- ಹೇಗೆ ?


               ಬರಹ: ಕೂಡಂಡ ರವಿ, ಹೊದ್ದೂರು. 



ಭತ್ತವು ಕೊಡಗು ಜಿಲ್ಲೆಯ ಮುಖ್ಯ ಆಹಾರ ಬೆಳೆ. ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆಗಳಲ್ಲಿ ಮುಂಗಾರಿನಲ್ಲಿ ಬೀಳುವ ಮಳೆಯಾಶ್ರಯದಲ್ಲಿ ಬೆಳೆಯನ್ನು ತಗ್ಗು (ಬಯಲು) ಮಧ್ಯಮ (ಮಜಲು ಪ್ರದೇಶ) ಹಾಗೂ ತಗ್ಗಿನ   ಕಣಿವೆ ಪ್ರದೇಶದ ಗದ್ದೆಗಳಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಭತ್ತದ ಪ್ರದೇಶವು ಕಡಿಮೆಯಾಗುತ್ತಿದೆ.  ಭತ್ತದ ಇಳುವರಿಯಲ್ಲಿ ಕೂಡ ಇಳಿಮುಖವಾಗುತ್ತಿದೆ. ಭತ್ತವನ್ನು ಸಮಗ್ರ ಬೇಸಾಯ ಪದ್ಧತಿಯಡಿಯಲ್ಲಿ ಉತ್ಪಾದಕತೆyaನ್ನು ಹೆಚ್ಚಿಸುವುದರೊಂದಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.


ಪ್ರಸ್ತುತ ವರ್ಷ ಜಿಲ್ಲೆಯಾದ್ಯಂತ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಈಗಾಗಲೇ   ತೊಡಗಿಸಿಕೊಂಡಿದ್ದಾರೆ. ಭತ್ತದ ಕೃಷಿ ಸೇರಿದಂತೆ ವಿವಿಧ ಕೃಷಿಗಳಲ್ಲಿ ಬೀಜೋಪಚಾರವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಸರಿಯಾದ ಕ್ರಮವರಿತು ಬೀಜೋಪಚಾರ ಮಾಡುವುದರಿಂದ ಹಲವಾರು ರೋಗಗಳನ್ನು ಯಶಸ್ವಿಯಾಗಿ ತಡೆಯಲು ಸಾಧ್ಯವಿದೆ.

 ರೋಗಗಳಿಂದ ರಕ್ಷಣೆ 

ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದುಬತ್ತಿ ರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ, ಬಿತ್ತನೆ ಬೀಜ ಮತ್ತು ಇತರೆ ಮಾಧ್ಯಮಗಳಿಂದ ಬೀಜದ ಮುಖಾಂತರ ಪ್ರಸಾರವಾಗುತ್ತವೆ.  ರೈತರಿಗೆ ಅಪಾರ ಆರ್ಥಿಕ ಹಾನಿಯನ್ನು ಉಂಟುಮಾಡುತ್ತವೆ. ರೈತರು ಅತಿ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಬೀಜದಿಂದ ಪ್ರಸಾರವಾಗುವ ಈ ರೋಗಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೀಜಗಳಿಗೆ, ಮೊಳಕೆಯೊಡೆಯುವ ಸಸಿಗಳಿಗೆ ಹಾಗೂ ಮುಂದಿನ ಸಸ್ಯ ಬೆಳವಣಿಗೆ ಹಂತದಲ್ಲಿ ಬರುವ ಅನೇಕ ರೋಗಗಳಿಂದ ರಕ್ಷಣೆ ಒದಗಿಸಬಹುದಾಗಿದೆ.

ಬೀಜದಿಂದ ಪ್ರಸಾರವಾಗುವ ಅನೇಕ ರೋಗಗಳಲ್ಲಿ ಹಾನಿಕಾರಕ ರೋಗಾಣುಗಳಾದ ಶಿಲೀಂದ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜೊತೆಯಲ್ಲಿ ಇರುತ್ತವೆ.  ಬೆಳೆಯ ವಿವಿಧ ಬೆಳವಣಿಗೆಯ ಹಂತಗಳÀಲ್ಲಿ ರೋಗವು ಉಲ್ಬಣಿಸಿ,  ಬೆಳೆಯ ಹಾನಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು  ರೈತರಿಗೆ ಭತ್ತದಲ್ಲಿ ಬೀಜೋಪಚಾರ ಕ್ರಮದ ಬಗ್ಗೆ  ಮಾಹಿತಿ ನೀಡಿರುವರು. ಆದ್ದರಿಂದ ಜಿಲ್ಲೆಯ ರೈತರು ಈ ಕೆಳಗೆ ಸೂಚಿಸಿದ ವಿಧಾನವನ್ನು ಅನುಸರಿಸಿ, ಖರ್ಚನ್ನು ಕಡಿಮೆ ಮಾಡಬಹುದಾಗಿದೆ. ಬೆಳೆಯಲ್ಲಿ ಬರುವ ಅನೇಕ ರೋಗಗÀಳನ್ನು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಬಹುದು. 

 ಬೀಜೋಪಚಾರ  ವಿಧಾನ

ಪ್ರತೀ ಎಕರೆಗೆ ಶಿPAರಸ್ಸು ಮಾಡಿದ 25 ರಿಂದ 30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೊಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಿ.
ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2 ರಿಂದ 3 ಬಾರಿ ತಣ್ಣೀರಿನಲ್ಲಿ ತೊಳೆದು 24 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಿ. 
ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25 ರಿಂದ 30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂದ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ,  ನೆರಳಿನಲ್ಲಿ ಒಣಗಿಸಿ.
ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ,  ಮೊಳಕೆಯೊಡೆಯಲು ಇಟ್ಟು,  ನಂತರ ಸಸಿಮಡಿಗೆ ಉಪಯೋಗಿಸಿ.
ಗಮನಿಸಬೇಕಾದ ಅಂಶಗಳು
ಶಿPÁರಸ್ಸು ಮಾಡಿದ ಶಿಲೀಂದ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ.
ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಿ.
ಎರಡು ಮೂರು ಶಿಲೀಂದ್ರನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡದಿರಿ.
ಬೀಜೋಪಚಾರ ಮಾಡುವ ಸಂದರ್ಭ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್‍ಗಳನ್ನು ಬಳಸಿ .

ಹೆಚ್ಚಿನ ವಿವರಗಳಿಗೆ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ: 08274-247274 ಇವರನ್ನು ಸಂಪರ್ಕಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ