ಸೋಮವಾರ, ಡಿಸೆಂಬರ್ 28, 2020
ಗುರುವಾರ, ಡಿಸೆಂಬರ್ 3, 2020
ಮಂಗಳವಾರ, ಡಿಸೆಂಬರ್ 1, 2020
ಶನಿವಾರ, ಮೇ 9, 2020
ಕೊಡಗಿನ ಮೂಲನಿವಾಸಿ An Appel for Package
ಕೊಡಗಿನ ಮೂಲನಿವಾಸಿಗಳ ಸಂಸ್ಕೃತಿ- ಪರಂಪರೆಗಳ
ಶ್ರೇಯೋಭಿವೃದ್ಧಿಗಾಗಿ
ಈ ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಗಂಭೀರ ವಿಚಾರಗಳನ್ನು
ತಮ್ಮ ಪರಾಂಬರೆಗೆ ತರಲು ಇಚ್ಛಿಸುತ್ತೇನೆ.
ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ,
ಬಡವನಯ್ಯ ಎನ್ನ ಕಾಲೇ ಕಂಬ,
ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ
ಕೂಡಲ ಸಂಗಮ ದೇವ ಕೇಳಯ್ಯ...!

Pl watch my blogs
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...
Kaveri Dharshini : https://kaveridarashin.blogspot.com
ಇದು 12 ನೇ ಶತಮಾನದ ಜಗಜ್ಯೋತಿ, ಸಮಾಜ ಸುಧಾರಕ ಬಸವಣ್ಣನವರ ಮಾತು. ಕೊಡವರು, ಕೊಡವ ಭಾಷಿಕ ಜನಾಂಗದವರು, ಕೊಡಗು ಅರೆ ಭಾಷಿಕ ಗೌಡರು ಇವರಿಗೆಲ್ಲಾ ಐನ್ಮನೆ ಪವಿತ್ರ ವಾಸಸ್ಥಾನ. ಪೂರ್ವದಲ್ಲಿ ಐನ್ ಮನೆಯಲ್ಲಿ ಕುಟುಂಬದ ಸದಸ್ಯರು ವಾಸಿಸುತ್ತಿದ್ದರು. ಆಯಾಯ ಒಕ್ಕ (ಕುಟುಂಬ)ದವರು, ಐನ್ಮನೆಯಲ್ಲಿ ಬೆಳಿಗ್ಗೆ ಸೂಯರ್ೋದಯ ಮತ್ತು ಮುಸ್ಸಂಜೆ - ಗೋಧೂಳಿ ಸಮಯದಲ್ಲಿ ದೇವರಿಗೆ ದೀಪ ಹಚ್ಚುವ ಪದ್ಧತಿಯನ್ನು ಚಾಚೂ ತಪ್ಪದೇ ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ. ಕೊಡವ ಪದ್ಧತಿ-ಪರಂಪರೆ, ವಿಶಿಷ್ಟ-ವಿಭಿನ್ನವೆನ್ನಲು 'ಕೊಡವ' ಜನಾಂಗ ಆದಿಯಾಗಿ, 18 ಕೊಡವ ಭಾಷಿಕ ಜನಾಂಗದವರ ಕೊಡುಗೆ ಅನನ್ಯವಾಗಿದೆ. ಕೊಡಗಿನಲ್ಲಿ ಯಾವುದೇ ಹಬ್ಬ ಹರಿದಿನಗಳ ಜಾತ್ರೆ, ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡ ಪ್ರಕಾರಗಳನ್ನು ಗಮನಿಸಿದಾಗ ಆಯಾಯ ಊರು-ಕೇರಿ ಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿರುವ ಮೂಲ ನಿವಾಸಿಗಳ ಒತ್ತೋಮರ್ೆ-ಸಹಬಾಳ್ವೆಯ ಸಂಕೇತವಾಗಿ ಎಲ್ಲಾ ಶುಭ ಕಾರ್ಯಗಳು ನಾಡಿನ ಹಿತಬಯಸಿ ಸತ್ಕಾರ್ಯಗಳು ನಡೆದು ಬರುತ್ತಿರುವುದನ್ನು ಇತಿಹಾಸವು ಸಾರಿ ಹೇಳುತ್ತಿದೆ. ಬಹುತೇಕ ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಇತಿಹಾಸ ಅರಿತಾಗ ಅಲ್ಲಲ್ಲಿ ಐನ್ಮನೆ-ಮುಂದ್ಮನೆ - ಕೈಮಡಗಳ ಅವಶೇಷ - ಕುರುಹುಗಳು, ಜೀಣರ್ೋದ್ಧಾರವಾಗಿ ನವೀಕರಣಗೊಂಡಿದ್ದು, ಪುರಾತನ ಮನೆಗಳನ್ನು ಉಳಿಸಿಕೊಂಡು ಬಂದಂತಹ ಎಲ್ಲಾ ಅಂಶಗಳ ವಾಸ್ತವತೆಯನ್ನು ಅರಿಯಬಹುದಾಗಿದೆ. ಇಲ್ಲಿ ಅವಿಭಕ್ತ ಕುಟುಂಬದ ನೆಲೆಯಲ್ಲಿ ಪೂವರ್ಿಕರು ಬದುಕಿ ಬಾಳಿದ ಅಂಶಗಳು ತಿಳಿದುಬರುತ್ತದೆ. ಈ ಮೇಲೆ ಹೇಳಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಐನ್ಮನೆ- ಮುಂದ್ಮನೆ-ಕೈಮಡಗಳು ಶಿಥಿಲಾವಸ್ಥೆಯಲ್ಲಿದ್ದು, ಅದರ ತುತರ್ು ನವೀಕರಣದ ಅಗತ್ಯತೆಗಳು ಕಂಡುಬರುತ್ತಿವೆ. ಜೊತೆಗೆ ಕೊಡಗಿನ ವಿಶಿಷ್ಟ ಸಂಸ್ಕೃತಿ ಮತ್ತು ಪ್ರಕೃತಿಯ ಆರಾಧನೆಗೆ ಒತ್ತು ನೀಡಬಲ್ಲ ನಾಡ್ ಮಂದ್ ಊರ್ ಮಂದ್ಗಳು ಅತಿಕ್ರಮಣಗೊಳ್ಳುತ್ತಿವೆ. ಕೊಡವ ಸಂಸ್ಕೃತಿ ಸಂಸ್ಕಾರಗಳು ಮೂಲನೆಲೆ. ಈ 'ಐನ್ಮನೆ' ಇಂದು ತಾಯಿ ಬೇರು ಇದ್ದ ಹಾಗೆ. ಇವುಗಳನ್ನು ನಾವು ಉಳಿಸಿಕೊಳ್ಳದಿದ್ದರೆ, ಉಜ್ವಲ ಸಂಸ್ಕೃತಿ ನಾಶವಾದ ಹಾಗೆಂದೇ ಭಾವಿಸಬೇಕಾಗುತ್ತದೆ. ಹಾಗೆಯೇ, ಮುಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕಾಬೇಕಿದ್ದ ಈ 'ಗರ್ಭಗುಡಿ' ಅಧಃಪತನ ಪ್ರಜ್ಞೆ ಕಾಡುವುದು ಎಷ್ಟರಮಟ್ಟಿಗೆ ಸರಿ. ? ! ಇದು ಇತಿಹಾಸದಲ್ಲಿ ಶಾಶ್ವತವಾಗಿ ಕಪ್ಪುಚುಕ್ಕಿಯಾಗಿ ಉಳಿದು ಬಿಡುತ್ತದೆ. ಕೊಡಗಿನಲ್ಲಿ ಇದನ್ನು ಬಹುತೇಕ 'ಮಧ್ಯಮವರ್ಗ' ಮೂಲನಿವಾಸಿಗಳ ಕೂಗು - ಅಳಲು ನಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರದ ಗಮನ ಸೆಳೆಯಲು (ತಜ್ಞರ ನಿಯೋಗ) ಭೇಟಿ ಮಾಡಿ ಪರಿಹಾರ ಮಾಡಿಕೊಳ್ಳುವ ಕಾಲ ಸನ್ನಿಹಿತ-ಇದು ಸಕಾಲ ಕೂಡವೂ ಆಗಿದೆ. ನಮ್ಮ ಪೂವರ್ಿಕರು ಕೊಡಗಿನಲ್ಲಿ ವಿಶೇಷವೆನಿಸಿದ ಐನ್ಮನೆಗಳನ್ನು ನಿಮರ್ಿಸಿದ್ದರು. ಅವು ಕೊಡಗಿನ ಈ ಜನಾಂಗಗಳಲ್ಲಿ ಕಂಡುಬರುತ್ತದೆ. 1. ಕೊಡವರು 2.ಅರೆಭಾಷೆ ಗೌಡರು 3 ಹೆಗ್ಗಡೆ ಸಮುದಾಯ 4. ಅಮ್ಮ ಕೊಡವರು 5. ಐರಿ ಜನಾಂಗ 6. ಜಮ್ಮಾ ಮಾಪಿಳ್ಳೆ 7. ಕೆಂಬಟ್ಟಿ ಜನಾಂಗ 8. ಕೊಡವ ಹಜಾಮ 9. ಗೊಲ್ಲ ಜನಾಂಗ 10. ಮಡಿವಾಳ 12. ಬಂಟ 13. ಜಾಗೀರ್ ತುರ್ಕರು 14. ಜೈನ 15. ಕೋಯವ ಜನಾಂಗ 16. ಬೂಣೆ ಪಟ್ಟ 17. ಬಳೆಗಾರ 18. ಕೊಡವ ನಾಯರ್ 19. ಬಣ್ಣ ಜನಾಂಗ 20. ಕೋಲೆಯ ಜನಾಂಗ (ಮಾಹಿತಿ ಕೃಪೆ: ಬೊವ್ವೇರಂಡ ನಂಜಮ್ಮ-ಚಿಣ್ಣಪ್ಪ ಪುಸ್ತಕ) ತಜ್ಞರ ಸಮಿತಿ ರಚಿಸಿ ಶಿಥಿಲಾವಸ್ಥೆಯಲ್ಲಿರುವ ಐನ್ಮನೆಗಳಿಗೆ ಕಾಯಕಲ್ಪ ನೀಡಿ ಸಂರಕ್ಷಿಸಿ ಪೋಷಿಸುವುದು ನಾಡ ಪ್ರಭುಗಳ ಜವಾಬ್ಧಾರಿ ಕೂಡ ಆಗಿದೆ. ಒಂದು ವಿಶೇಷ - ವಿಭಿನ್ನ ಸಂಸ್ಕೃತಿಯನ್ನು ಸಾರುವ ಪ್ರಕೃತಿಯ ಆರಾಧಕರಾದ 'ಕೊಡವ ಹಾಗೂ ಕೊಡವ ಭಾಷಾ ಸಮುದಾಯ ವರ್ಗವು ಮತ್ತು ಅರೆಭಾಷೆಯನ್ನಾಡುವ ಗೌಡ ಜನಾಂಗವು ಯಾವುದೇ ರೀತಿಯಲ್ಲೂ ಇಂದು ಏಳಿಗೆ ಕಾಣದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ವಿಷಾದನೀಯವೆನಿಸುತ್ತದೆ. ಕೊಡಗು ಕಾವೇರಿ ನದಿಯ ಉಗಮ ಸ್ಥಾನವಾದರೂ 'ದೀಪದ ಕೆಳಗೆ ಕತ್ತಲೆ ಎನ್ನುವ ನುಡಿಗಟ್ಟಿನಂತೆ ಮಾತು ವಾಸ್ತವ. ಇಂದು ' ಆತ್ಮಾವಲೋಕನ ' ಕಾಲ ಒದಗಿ ಬಂದಿದೆ ಎನ್ನಲು ಯಾವುದೇ ಹಿಂಜರಿಕೆ ಇಲ್ಲ. ಕೊಡಗಿನವರ ಐನ್ಮನೆ- ಮುಂದ್ಮನೆ- ಕೈಮಾಡಗಳು ಇವರ ಮೂಲಸಂಸ್ಕೃತಿಯ ಪ್ರತೀಕವೂ ಹೌದು. ಪ್ರಕೃತಿ ಆರಾಧಕರ ಉಸಿರೂ ಹೌದು ! ಮೂಲ ಕೃಷಿಕರಾಗಿ ಬದುಕು ಕಟ್ಟಿಕೊಂಡಿರೋ ಅದೆಷ್ಟೋ ಮದ್ಯಮವರ್ಗ ಕುಟುಂಬದವರು 'ಐನ್ಮನೆಗಳನ್ನು ಉಳಿಸಿಕೊಳ್ಳಲು ' ಅಥರ್ಿಕ ಅಡಚಣೆ' ಎದುರಿಸುತ್ತಿರುವುದು ನೋವಿನ ವಿಚಾರ. ಕೊಡಗಿನ ಜನರು ಹೃದಯವಂತರು, ಸ್ನೇಹ ಜೀವಿಗಳು, ಸಹಬಾಳ್ವೆಯ ಜೀವನಕ್ಕೆ ಹೊಂದಿಕೊಂಡು ಸಹನಾಶೀಲರೂ ಹೌದು! ಏನೇ ಎಷ್ಟೇ ಸಮಸ್ಯೆಗಳಿದ್ದರೂ, ಸವಾಲೊಡ್ಡಿ, ಜೀವಿಸುವ ಪ್ರಾಮಾಣಿಕ ಸ್ವಾಭಿಮಾನಿಗಳು ಹೌದು ! ಇವರ ಜೀವನ ಸಂಸ್ಕಾರ, ಶಿಷ್ಟಾಚಾರ ಎಲ್ಲವೂ ಅನುಕರಣನೀಯವಾಗಿದೆ. ಹಬ್ಬ ಹರಿದಿನಗಳಾದ ತುಲಾ ಸಂಕ್ರಾಂತಿ(ಚಂಗ್ರಾಂದಿ), ಕೈಲ್ಪೊಳ್ದ್, ಪುತ್ತರಿ ಹಬ್ಬ, ಗುರುಕಾರೋಣಾದಿ ಪೂಜಾ ಕೈಂಕರ್ಯಗಳಲ್ಲಿ ಆ ಮನೆತನದ ಕುಟುಂಬ ವರ್ಗದವರು ಊರು-ದೂರದೂರಿನಿಂದ ಬಂದು ಸಂಭ್ರಮಿಸಿ, ಆಚರಣೆಗಳಲ್ಲಿ ಭಾಗಿಯಾಗಿ ಎಳೆಯಾಗಿ ಆಸ್ವಾದಿಸಿ, ಅನುಭವಿಸುವುದು ರಸಕ್ಷಣಗಳಲ್ಲೊಂದಾಗಿದೆ. ಇಂದು ದೇವರ ಕಾಡು, ಅಯ್ಯಪ್ಪ ಕಾಡು, ಅರಣ್ಯ ಭೂ ಪ್ರದೇಶ ಸುಸ್ಥಿತಿಯಲ್ಲಿ ಹಚ್ಚಹಸಿರು-ಸಿರಿವನಗಳಾಗಿ ಕಂಗೊಳಿಸುವುದರಲ್ಲಿ, ಅಂದು ಪ್ರಕೃತಿಯ ಆರಾಧಕರಾಗಿದ್ದ ಮೂಲನಿವಾಸಿಗಳ ಶ್ರಮ-ಶ್ರಮಿಕಜೀವಿಗಳು ಹೆಮ್ಮೆಯಿಂದ ಸಾರಿ ಹೇಳುವ ಸಂದೇಶ ಅಡಗಿದೆ. ಅರಣ್ಯ ಸರಹದ್ದು ಎಂದು ಬೇಲಿ ಹಾಕಿದ ಮಾತ್ರಕ್ಕೆ ಎಲ್ಲವೂ ಕ್ಷೇಮವೆಂದು ಗ್ರಹಿಸಲು ಸಾಧ್ಯವೇ ? ಖಂಡಿತಾ ಸಾಧ್ಯವಾಗದು. ಮೂಲ ನಿವಾಸಿಗಳ ಅನನ್ಯ ಕೊಡುಗೆ ಈ ಪ್ರಕೃತಿ ಮಾತೆಯ ಮಡಿಲಿನಲ್ಲಿ ಅಡಗಿದೆ. ಅದನ್ನು ನಾವೆಲ್ಲರೂ, ಸ್ಮರಿಸಿ, ಗೌರವಿಸಲೇಬೇಕು. ಸೈನಿಕ ಪರಂಪರೆಯನ್ನು ಕಾಯಾ ಮನಸಾ ಗೌರವಿಸಿ, ಗಡಿ ಸೈನ್ಯ ಸೇವೆಗೆ ಅಣಿಯಾಗುವ ಬಹಳ ಕುಟುಂಬಗಳು ಈ ಮೂಲ ನಿವಾಸಿಗಳಲ್ಲಿವೆ. ಇವರೆಲ್ಲರೂ, ಇದೇ ಮಣ್ಣೀನ ಮಕ್ಳಾಗಿದ್ದಾರೆ. ಕೊಡಗಿನ ಸಹೃದಯಿಗಳು ಯಾವಾಗಲೂ 'ಒತ್ತಾಯ - ಧರಣಿ ಕುಳಿತು' ಎಂದೂ ಕಷ್ಟ ಕಾಪರ್ಾಣ್ಯಗಳನ್ನು ತೋರ್ಪಡಿಸಿದವರಲ್ಲ. ರಕ್ತಗತವಾಗಿ ಪಾರಂಪಾರಿಕವಾಗಿ ಬಂದಿರುವ ಸ್ವಾಭಿಮಾನವು ಇಂತಹ ಚಟುವಟಿಕೆಗಳಲ್ಲಿಒ ಅವರನ್ನು ತೊಡಗಲು ಬಿಡುವುದಿಲಲ್ ಎನ್ನುವುದು ಖಂಡಿತಾ ಅತಿಶಯೋಕ್ತಿಯಲ್ಲ. ಕಾವೇರಿ ಪುಣ್ಯಕ್ಷೇತ್ರದಲ್ಲಿ ಕೊಡವ ಭಾಷಿಕ 18 ಸಮುದಾಯದವರು ಕೊಡಗು ಗೌಡ ಜನಾಂಗ ಬಾಂಧವರು ಸೇರಿ ಸೇರಿ ಅಲ್ಲಿನ ಧಾಮರ್ಿಕ ವಿಧಿ ವಿಧಾನಗಳನ್ನು ಪೂರ್ವಕಾಲದಿಂದಲೇ ಆಚರಿಸುತ್ತಾ ಬರುತ್ತಿದ್ಧಾರೆ. ಇಂತಹ ವಿಶೇಷಗಳನ್ನು ಹೊಂದಿರುವ ಕೊಡಗಿಗೆ ವಿಶೇಷ ಪ್ಯಾಕೇಜ್ ತುತರ್ಾಗಿ ಕಾರ್ಯರೂಪಕ್ಕೆ ತರಲು ಶ್ರಮಿಸಬೇಕೆಂದೇ ಕೊಡಗಿನ ಎಲಲಾ ಮೂಲ ನಿವಾಸಿಗಳ ಒಕ್ಕೊರಲಿನ ಮನವಿ. ಕೊಡಗಿನ ಮೂಲ ನಿವಾಸಿಗಳಿಗೆ ಕಲ್ಯಾಣ ನಿಧಿ ಸ್ಥಾಪನೆ ಆಗಬೇಕಿದೆ. ಜಿಲ್ಲೆಯ ಮೂಲನಿವಾಸಿಗಳಾದ ಕೊಡವ ಭಾಷಿಕರು, ಅರೆ ಭಾಷಿಕರು, ಬ್ರಾಹ್ಮಣರು, ಒಕ್ಕಲಿಗರು ಇತ್ಯಾದಿ. ದುರ್ಬಲ ಸಮುದಾಯ ಕುಟುಂಬಗಳ ಮೂಲಭೂತ ಸೌಲಭ್ಯಗಳಿಗೆ ಇತ್ತು ಕೊಡಬೇಕಿದೆ. ಉದಾಹರಣೆಗಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಶಿಷ್ಯವೇತನ ಉನ್ನತ ವ್ಯಾಸಂಗಕ್ಕೆ ಧನಸಹಾಯ, ಕಂಕಣ ಭಾಗ್ಯ ಯೋಜನೆ, ವಸತಿ ಹೀನರಿಗೆ ನಿವೇಶನ ಇತ್ಯಾದಿ. ಕೊಡಗಿನ ಮೂರು ತಾಲೂಕುಗಳಲ್ಲಿ ಮೂಲ ನಿವಾಸಿಗಳಿಗೆ ಸಾಂಸ್ಕೃತಿಕ ಭವನ ನಿಮರ್ಾಣವಾಗಬೇಕು. ಕೊಡಗಿನ ಮೂಲ ನಿವಾಸಿಗಳು ಹಾಗೂ ನೆಲೆಸಿರುವ ಎಲ್ಲಾ ಸ್ಥಳೀಯ ಗ್ರಾಮ ನಿವಾಸಿಗಳು ಭಾರತೀಯ ಸೈನ್ಯ, ಗಡಿಸೇವೆಯಲ್ಲಿ ನಿರತರಾಗಿ ನಿವೃತ್ತರಾದ ಬಡ ಕುಟುಂಬಗಳಿಗೆ ವಿಶೇಷವಾಗಿ ಆಥರ್ಿಕವಾಗಿ ದುರ್ಬಲರಿಗೆ ಸರಕಾರವು ಕೊಡಗಿನಲ್ಲಿರುವ ಎಲ್ಲಾ ಪೈಸಾರಿ ಜಾಗವನ್ನು ಗುರುತಿಸಿ, ಮೂರು ತಾಲೂಕಿನಲ್ಲಿ ನಿವೇಶನ- ಬಡಾವಣೆ ನೀಡಿ ಗೌರವಿಸಬೇಕು. ಇದಕ್ಕೆ ವಿಶೇಷವಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರುಗಳ ಜ್ಞಾಪಕಾರ್ಥವಾಗಿ ಕಲ್ಯಾಣ ನಿಧಿ ಸ್ಥಾಪಿಸುವಂತಾಗಬೇಕು. ಅಲ್ಲದೆ, ಕೊಡಗಿನಾದ್ಯಂತ ಉಳಿದುಕೊಂಡಿರುವ ಕೃಷಿ ಪ್ರಧಾನ ಪೈಸಾರಿ ಭೂಪ್ರದೇಶವನ್ನು ಗುರುತಿಸಿ, ಇಲ್ಲಿನ (ಸ್ಥಳೀಯ) ನಿರ್ಗತಿಕ ರೈತಾಪಿ ವರ್ಗದ ಮೂಲನಿವಾಸಿಗಳು ಪ್ರಥಮ ಆದ್ಯತೆ ನೀಡಬೇಕೆಂದು ಆಗ್ರಹಿಸುತ್ತೇನೆ. ಹಲವು ವೈಶಿಷ್ಟ್ಯತೆಗಳಿಂದಾಗಿ ಜಗತ್ತಿನಲ್ಲಿಯೇ ತನ್ನತನವನ್ನು ಗುರುತಿಸಿಕೊಂಡಿರುವ ಕೊಡಗಿನ ಮೂಲನಿವಾಸಿಗಳ ಪರಂಪರೆಯು ಇನ್ನಷ್ಟು ಉಚ್ರಾಯಕ್ಕೇರೆಬೇಕಾಗಿತ್ತು ! ಆದರೆ, ಆಥರ್ಿಕ ಆಡಚಣೆಗಳಿಂದಾಗಿ ಅದೀಗ ಅಳಿವಿನಂಚಿನಲ್ಲಿದೆ. ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗುವ ಸಾಧ್ಯತೆಗಳಿದೆ. ಹಾಗಾಗಿ ಪರಿಸ್ಥಿತಿಯ ಗಂಭೀರತೆಯನ್ನರಿತು ಈ ವಿಶಿಷ್ಟ ಪರಂಪರೆಯನ್ನು ಉಳಿಸಿ, ರಕ್ಷಿಸಿ, ಬೆಳೆಸುವುದು ಅಧಿಕಾರರೂಢರಾದ ತಮ್ಮ ಪರಿಮಿತಿಯಲ್ಲಿದೆ. ಅದುದರಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ಮಣ್ಣಿನ ಋಣ ತೀರಿಸಿ, ಕಾವೇರಿ ಮಾತೆಯ ಕೃಪಾಕಟಾಕ್ಷಕ್ಕೆ ಸರ್ವರನ್ನು ಒಳಗಾಗಿಬೇಕೆಂಬ ಕಳಕಳಿಯ ಮನವಿ ನಮ್ಮದು.
ಇಂತಿ ತಮ್ಮ ವಿಶ್ವಾಸಿ,
ಭಾನುವಾರ, ಮಾರ್ಚ್ 29, 2020
Ground water Just in A Feet (Water Magic) ಒಂದೇ ಅಡಿಯಲ್ಲಿ ಸಮೃದ್ಧ ನೀರು... !
ಸ್ವಾನುಭವ
ಹೊಸದಾಗಿ ಕಟ್ಟಿಸಿದ್ದ ಗೂಡಿಗೆ 2019ರ ಫೆಬ್ರವರಿ ಮಾಸದಲ್ಲಿ ಆಗಮಿಸಿದ್ದೆವು. ನಮಗೊ, ತರಕಾರಿ, ಹೂವು ಹಣ್ಣು ಇತ್ಯಾದಿಗಳನ್ನು ಬೆಳೆದು ತಿನ್ನುವ ಹೆಬ್ಬಯಕೆ. ವಿಷ ತರಕಾರಿ, ಆಹಾರದಿಂದ, ವೈದ್ಯರಿಂದ ದೂರ ಉಳಿಯುವಾಸೆ. ಅದನ್ನು ಇತರಿಗೂ ಹಂಚುವ ಮಹಾದಾಸೆ. ಡಾಂಬರು ರಸ್ತೆಯಂಚಿನಲ್ಲಿಯೇ ಪುಟ್ಟ ಗೂಡು. ಮನೆ ಎಂಬಂತೇನೂ ಇರಲಿಲ್ಲ. ಆದರೂ, ಮನೆಗೆ ಬೇಕಾಗುವ ಮೂಲ ಸೌಕರ್ಯಗಳಿಗೇನೂ ಬರವಿರಲಿಲ್ಲ.
ಜೀವಾಮೃತದ ಬಳಕೆ
ಸಂಪೂರ್ಣ ಸಾವಯವ ಕೃಷಿ ಅಳವಡಿಕೆ(ಕೃಷಿಗೆ ಜೀವಾಮೃತ ಬಳಕೆ)ಯಿಂದಾಗಿ ಇರುವ ಸಣ್ಣ ತೋಟವಿಡೀ ಎರೆಹುಳಗಳ ದಬರ್ಾರು ಜೋರಾಗಿ ನಡೆಯುತ್ತಿತ್ತು. ಅವು ನಮ್ಮ ಜೀವಂತ ಟ್ರ್ಯಾಕ್ಟರ್ಗಳು. ಸಂಬಳವಿಲ್ಲದೆ, ಹಗಲಿರುಳೂ ಜಮೀನಿನ ಉಳುಮೆ ಆರಂಭಿಸಿದ್ದವು. ಭೂಮಿ ನೈಸಗರ್ಿಕವಾಗಿ ಹಸನಾಗಿತ್ತು. ಎರೆಹುಳಗಳ ಉಳುಮೆಯ ಪರಿಣಾಮ, ಭೂಮಿಯು ಜರಡಿಯಂತೆ ತೂತಾಗಿತ್ತು. ಅಲ್ಲೆಲ್ಲ ನೀರು ಧರೆಯನ್ನು ಸೇರಲಾರಂಭವಾಯಿತು. ನೀರಿನಿಂದಾಗಿ, ಸಾವಯುವ ಗೊಬ್ಬರ ಬಳಕೆಯಿಂದ ಅವು ಕ್ರಿಯಾಶೀಲವಾಗಿದ್ದವು. ತೋಟದ ಎಲ್ಲೆಡೆಯೂ ಎರೆಮಣ್ಣು ಕಾಣಿಸಲಾರಂಭಿಸಿತ್ತು. ತೋಟಕ್ಕೆ ಜೀವಾಮೃತ ಕೊಡುವುದು ಈಗ ಸುಲಭವೆನಿಸಿತ್ತು. ಚರಂಡಿಗಳೆಲ್ಲಾ ಭತರ್ಿಯಾಗಿದ್ದವಲ್ಲ ! ಇದರ ಪರಿಣಾಮ ಇಡೀ ತೋಟವೇ ಇಂಗು ಗುಂಡಿಯಾಗಿ ಬದಲಾಗಿತ್ತು. ಬಾವಿ ಸೇರಿದಂತೆ ಪುಟ್ಟ ತೋಟವು ಭೂಮಿಗೆ 'ಜಲಮರುಪೂರಣ' ಮಾಡಲಾರಂಭಿಸಿತ್ತು. ನಮ್ಮ ಮನೆಯ ಕೆಳಭಾಗದಲ್ಲಿರುವ ಗದ್ದೆಗಳಲ್ಲಿಯೂ ನೀರು ಶೇಖರಣೆಯಾಗಲಾರಂಭಿಸಿತ್ತು. ಕೇವಲ ಒಂದೆರಡೇ ದಿನಗಳಲ್ಲಿ ಬಾವಿಯ ನೀರಿನ ಮಟ್ಟದಲ್ಲಿ ಬಾರೀ ಬದಲಾವಣೆಯಾಗಿತ್ತು. ನೀರು ಕೊಯ್ಲುವಿಗೂ ಮುನ್ನಾ ಸುಮಾರು 7.5-8 ಅಡಿ ಆಳದಲ್ಲಿದ್ದ ನೀರು ಒಂದೇ ಸಮನೆ ಏರಲಾರಂಭವಾಯಿತು. ಜನವರಿ ಮಾಸದ ಎರಡನೇ ವಾರದಲ್ಲಿ ಬಾವಿಯ ಸುತ್ತಲೂ 4-5 ಅಡಿ ಆಳಕ್ಕೆ ಎರಡು ಗುಂಡಿಗಳನ್ನು ತೋಡಿದೆವು. ನೀರಿನ ಒಳ ಹರಿವು ಹೆಚ್ಚಾಗಿದ್ದ ಕಾರಣ ಅಧಿಕ ಆಳ ತೋಡಲಾಗಲಿಲ್ಲ !
ನೀರು ಕೊಯ್ಲು ಆರಂಭ
ಸಂಜೆ ವೇಳೆಗಾಗಲೇ ಗುಂಡಿ ತೋಡುವ ಕಾರ್ಯ ಮುಗಿದಿತ್ತು. ಅರ್ಧ ಘಂಟೆಯಲ್ಲೇ ನೀರು ಕೊಯ್ಲು ಮಾಡಲು ಮಾಡಿದ್ದ ಗುಂಡಿಯಲ್ಲಿ ನೀರು ತುಂಬಿತ್ತು. ಮಾರನೇ ದಿನ ಮುಂಜಾನೆಯೇ ಎದ್ದು ಬಾವಿಯನ್ನು ಇಣುಕಿದೆವು. ನಾವು ನಿರೀಕ್ಷಿಸಿದ್ದಕ್ಕಿಂತಲೂ ಮೇಲೆ ಬಂದಿತ್ತು ನೀರು. ನೆಲಮಟ್ಟದಿಂದ ಕೇವಲ ಒಂದೇ ಅಡಿ ಆಳದಲ್ಲಿ ನೀರಿತ್ತು ! ನೆಲಮಟ್ಟದಿಂದ. ( ಮೂರು ಬಳೆಗಳು( ರಿಂಗ್) ನೆಲಮಟ್ಟದ ಮೇಲಿವೆ.
ಬೆಳಿಗ್ಗೆಯೇ ಮಗ ಪ್ರಣವ್ ಹಲವಾರು ಚಿತ್ರ ತೆಗೆದ. ನೀರು-ನೀರೆಂದು ಹಾಹಾಕಾರ ಕೇಳಿ ಬರುತ್ತಿದ್ದ ದೂರದೂರಿನಲ್ಲಿರುವ ಬಂಧು-ಬಳಗದವರಿಗೂ ಸ್ನೇಹಿತರಿಗೂ ಸಾಮಾಜಿಕ ಜಾಲತಾಣದ ಮೂಲಕ ಕಳುಹಿಸಿದೆವು. ನೆರೆಹೊರೆಯ ಕೆಲವರು ಅಂದು ಸಂಜೆಯೇ ಮನೆಗೆ ಬಂದರು. ಬಾವಿಯಲ್ಲಿ ಇಣುಕಿದರು. ಆಗಲೇ ನಾನು ಬಾವಿಗೆ ಅಡಿಕೋಲು(ಸ್ಕೇಲ್) ಅನ್ನು ಹಗ್ಗದ ಮೂಲಕ ಇಳಿಯ ಬಿಟ್ಟಿದ್ದೆ. ನೀರಿನಾಳ ಎಲ್ಲರಿಗೂ ಅತ್ಯಂತ ನಿಖರವಾಗಿ, ಕರಾರುವಕ್ಕಾಗಿ ತಿಳಿಯುವ ಪ್ರಯತ್ನ ಮಾಡಿದ್ದೆ. ನೀರು ಅಡಿಕೋಲನ್ನು ಮೆತ್ತನೆ ಸ್ಪಶರ್ಿಸುತ್ತಿತ್ತು. ( ಚಿತ್ರ ನೋಡಿ). ಅಕ್ಕ-ಪಕ್ಕದ ಮನೆಗಳವರು ಮನೆಗೆ ಬಂದರು. ನೀರನ್ನು ನೋಡಿದ ಹಲವರು ಸಂತೋಷಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಚಿತ್ರಗಳಿಗೆ ವಾವ್, ಅದೃಷ್ಟವಂತರು, ಭಾಗ್ಯಶಾಲಿಗಳು, ವಂದನೆಗಳು... ಹೀಗೆ ಹತ್ತು ಹಲವಾರು ಸಂತೋಷದ ಮುಕ್ತ ನುಡಿಗಳು.
ಮಹನೀಯರ ಅತ್ಯಮೂಲ್ಯ ಸಲಹೆಗಳು
ಈ ಪ್ರಯತ್ನಕ್ಕೆ ಆನ್ಲೈನ್ ಮೂಲಕ ಅಮೂಲ್ಯ ಸಲಹೆಗಳನ್ನಿತ್ತು ಪ್ರೇರಪಣೆ ನೀಡಿದ ಪುತ್ತೂರಿನ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ,, ಚಿತ್ರದುರ್ಗದ ಜಲತಜ್ಞ ಎಂ. ದೇವರಾಜ ರೆಡ್ಡಿ, ತುಮಕೂರಿನ ಸಾವಯವ ಕೃಷಿಕ ಶಿವನಂಜಯ್ಯ ಬಾಳೇಕಾಯಿ ಅವರುಗಳಿಗೆ ನಾನು ಅಭಾರಿ. ನೀರು ಅದೇ ಮಟ್ಟವನ್ನು ಎಷ್ಟು ದಿನ ಕಾದುಕೊಳ್ಳುತ್ತದೋ ತಿಳಿದಿಲ್ಲ. ಈಗಂತೂ ನೆಲಮಟ್ಟದಿಂದ ಒಂದು-ಒಂದೂವರೆ ಅಡಿಯವರೆಗೆ ನೀರಿನ ಮಟ್ಟ ಏರಿಳಿಯುತ್ತಿರುತ್ತದೆ ! ಬೆಳಿಗ್ಗೆ ನೀರಿನ ಮಟ್ಟ ಏರಿಕೆಯಾಗಿರುತ್ತದೆ. ಹೊತ್ತು ಏರಿದಂತೆ ನೀರಿನ ಮಟ್ಟ ನಿಧಾನಕ್ಕೆ ಇಳಿಯುತ್ತದೆ.
ನಿಮ್ಮ ಕೆಲಸ-ಸರಕಾರಿ ಸಂಬಳ !
ನೀವು ಇಂತಹ ಪ್ರಯತ್ನದಿಂದ ನೀರ ಸಮಸ್ಯೆಯಿಂದ ಪಾರಾಗಬಹುದು. ಉದ್ಯೋಗಖಾತ್ರಿ ಯೋಜನೆಯಡಿ ಇದಕ್ಕೆ ಸರಕಾರದ ಸಹಾಯಧನವೂ ಲಭ್ಯ. ನಿಮ್ಮ ಕೆಲಸಕ್ಕೆ ಸರಕಾರ ಸಂಬಳ ನೀಡುತ್ತದೆ ! ಬಳಸಿಕೊಳ್ಳಿ. ನೀರಿನ ವಿಚಾರದಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗಿ. ನಾಳಿನ ನೀರಿನ ನೆಮ್ಮದಿಗಾಗಿ ಇಂದೇ ಕಾರ್ಯ ತತ್ಪರರಾಗಿ. ವಿವರಗಳಿಗೆ ಸಮೀಪದ ಗ್ರಾಮ ಪಂಚಾಯಿತಿ ಕಛೇರಿಯನ್ನು ಸಂಪಕರ್ಿಸಿರಿ.
ಒಂದೇ ಅಡಿಯಲ್ಲಿ ಸಮೃದ್ಧ ನೀರು... !
Please watch and subscribe my Youtube channal: https://www.youtube.com/channel/UCw4dehXSFlG4sS9xYiRkjPA?view_as=subscriber
Pl watch my these blogs.
Kodagu Darshini : https://koodanda.blogspot.com/
Kodagu Darshini (Kodagina Antaranga):https://koodagudarshini.blogspot.com/
Kodagu a Wonder land :https://kodaguawonderland.blogspot.com/
ಹೊಸದಾಗಿ ಕಟ್ಟಿಸಿದ್ದ ಗೂಡಿಗೆ 2019ರ ಫೆಬ್ರವರಿ ಮಾಸದಲ್ಲಿ ಆಗಮಿಸಿದ್ದೆವು. ನಮಗೊ, ತರಕಾರಿ, ಹೂವು ಹಣ್ಣು ಇತ್ಯಾದಿಗಳನ್ನು ಬೆಳೆದು ತಿನ್ನುವ ಹೆಬ್ಬಯಕೆ. ವಿಷ ತರಕಾರಿ, ಆಹಾರದಿಂದ, ವೈದ್ಯರಿಂದ ದೂರ ಉಳಿಯುವಾಸೆ. ಅದನ್ನು ಇತರಿಗೂ ಹಂಚುವ ಮಹಾದಾಸೆ. ಡಾಂಬರು ರಸ್ತೆಯಂಚಿನಲ್ಲಿಯೇ ಪುಟ್ಟ ಗೂಡು. ಮನೆ ಎಂಬಂತೇನೂ ಇರಲಿಲ್ಲ. ಆದರೂ, ಮನೆಗೆ ಬೇಕಾಗುವ ಮೂಲ ಸೌಕರ್ಯಗಳಿಗೇನೂ ಬರವಿರಲಿಲ್ಲ.
20 ಅಡಿ ಆಳದ ಬಾವಿ
ಮನೆಯಿಂದ 20 ಅಡಿ ದೂರದಲ್ಲಿ ಸರ್ವಋತು ಡಾಂಬರು ರಸ್ತೆ, ವಿದ್ಯುತ್, ಮೂರಡಿ(!) ದೂರದಲ್ಲಿ ಕುಡಿಯುವ ನೀರಿನ ಸೇದು ಬಾವಿ, ಕಂಪ್ಯೂಟರ್, ಇನ್ವರ್ಟರ್ .. .. ಇತ್ಯಾದಿಗಳಿದ್ದವು. ಆದರೆ, ಫೆಬ್ರವರಿ ಮಾಸಾಂತ್ಯದಲ್ಲಿ ತರಕಾರಿ ಹೂವಿನ ಗಿಡ, ಮನೆ ಬಳಕೆಗೆ ನೀರಿನ ಸಮಸ್ಯೆ ಎದುರಾಗಲು ಆರಂಭವಾಯಿತು. ಹೂಗಿಡ-ತರಕಾರಿ ಗಿಡಗಳಿಗೆ ಹಿತಮಿತ, ಅನುಕ್ರಮವಾಗಿ ಎರಡು-ಮೂರು ದಿನಗಳಿಗೊಮ್ಮೆ ನೀರು ಎಂಬಂತಾಯಿತು. 20 ಅಡಿ ಆಳವಿರುವ ಬಾವಿಯಲ್ಲಿ ಜಲಮಟ್ಟವು 18.5-19 ಅಡಿಗಳಿಗೆ ತಲುಪಿ ನಮ್ಮನೆ ಸದಸ್ಯರುಗಳನ್ನು ಬೆಚ್ಚಿ ಬೀಳಿಸಿತ್ತು. ಅಕ್ಕ-ಪಕ್ಕದಲ್ಲಿ ನೀರಿನ ಮೂಲಗಳೇ ಇರಲಿಲ್ಲ. ಹನಿ ಕುಡಿಯುವ ನೀರಿಗೂ ಫಲರ್ಾಂಗ್ ದೂರ ಸಾಗಬೇಕಾಬೇಕಾಗಬಹುದೆಂಬ ಶಂಕೆ ಮನದಲ್ಲಿ ತಂದಿತ್ತು- ಅಳುಕು ! ಹಲವರು ಕಾಫಿ ತೋಟಗಳಿಗೆ ತುಂತುರು ನೀರು ಹನಿಸಲು ಆರಂಭಿಸಿದ್ದರು. ಪರಿಣಾಮ, ಹಳ್ಳ-ಕೊಳ್ಳಗಳು ಬರಿದಾಗಿದ್ದವು-ಬಣಗುಟ್ಟುತ್ತಿದ್ದವು. ಕೆಲ ದಿನ ನೀರಿನ ಮಿತ ಬಳಕೆಯ ಕಸರತ್ತು ಮುಂದುವರಿದಿತ್ತು.ಇಂಗುವ ನೀರು
ನಮ್ಮ ಅದೃಷ್ಟವೋ, ಕಾಫಿಯ ಹೂಮಳೆ ಜನತೆಯ ನಿರೀಕ್ಷೆಗೂ ಮುನ್ನಾ ನಮ್ಮೂರ ಧರೆಯನ್ನು ಮುತ್ತಿಕ್ಕಿತ್ತು. ಬಳಿಕ ಹಂತ-ಹಂತವಾಗಿ ನಮ್ಮ ಬಾವಿಯ ನೀರಿನ ಮಟ್ಟ ಕ್ರಮೇಣ ಏರುತ್ತಾ ಬಂತು. ಹಿಂದಿನ ವರ್ಷದಂತೆ 2019ರಲ್ಲಿಯೂ ಕೊಡಗು ಜಿಲ್ಲೆಯಲ್ಲಿ ಮಳೆ ಮುಸಲಧಾರೆಯಾಗಿ ಸುರಿದು ನದಿ, ಹಳ್ಳ-ಕೊಳ್ಳಗಳೆನ್ನೆಲ್ಲಾ ಏಕಮಯ ಮಾಡಿತ್ತು. ನೀರಿಗೆ ಬರವೇನೂ ಇರಲಿಲ್ಲ. ಆದರೂ, ಮುಂಬರುವ ದಿನಗಳಲ್ಲಿ ನೀರಿಗೆ ಬರ ಬರಬಹುದೇನೋ ಎಂಬ ಆತಂಕ ಅನುದಿನವೂ ಮನದ ಮೂಲೆಯಲ್ಲಿ. ಡಿಸೆಂಬರ್ ಮಾಹೆಯಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ನೆಲಮಟ್ಟದಿಂದ 7-8 ಅಡಿಗಳ ಆಳದಲ್ಲಿ ನೀರಿತ್ತು. ತೋಟದಿಂದ ಮಳೆಗಾಲದಲ್ಲಿ ನೀರು ಹೊರಹೋಗಲು ನಿಮರ್ಿಸಿದ್ದ ಎಲ್ಲಾ ಚರಂಡಿಗಳನ್ನು ಅಡ್ಡ ಕಟ್ಟೆ ಕಟ್ಟಿದೆವು. ಹರಿದು ಹೋಗುವ ನೀರನ್ನು ಇಂಗಿಸಲು ಆರಂಭಿಸಿದೆವು. ಹಳ್ಳ-ನದಿ ಸೇರುತ್ತಿದ್ದ ನೀರು ನಿಧಾನಕ್ಕೆ ಚರಂಡಿಗಳಲ್ಲಿ ಶೇಖರಣೆಗೊಳ್ಳಲಾರಂಭಿಸಿತ್ತು.ತೇವಾಂಶದ ಪರಿಣಾಮ ಕಾಫಿ ತೋಟದಲ್ಲಿ ನೆರಳಿನ ಮರಗಳು, ಕಾಡುಜಾತಿಯ ಮರಗಳು, ಹಣ್ಣು ಹೂವಿನ ಗಿಡ-ಮರಗಳು, ಕಾಫಿ ಗಿಡಗಳು ಜನವರಿ ಮಾಸದಲ್ಲಿ ಚಿಗುರಲಾರಂಭಿಸಿದವು. ಎಲ್ಲೆಡೆಯೂ ಹಸಿರೇ ಹಸಿರು ! ಒಂದೆರಡೇ ದಿನಗಳಲ್ಲಿ ಎಲ್ಲಾ ಚರಂಡಿಗಳು ಭತರ್ಿಯಾದವು. ಮಣ್ಣು ಸಂಪೂರ್ಣ ಸಡಿಲಗೊಂಡಿತ್ತು.ಜೀವಾಮೃತದ ಬಳಕೆ
ಸಂಪೂರ್ಣ ಸಾವಯವ ಕೃಷಿ ಅಳವಡಿಕೆ(ಕೃಷಿಗೆ ಜೀವಾಮೃತ ಬಳಕೆ)ಯಿಂದಾಗಿ ಇರುವ ಸಣ್ಣ ತೋಟವಿಡೀ ಎರೆಹುಳಗಳ ದಬರ್ಾರು ಜೋರಾಗಿ ನಡೆಯುತ್ತಿತ್ತು. ಅವು ನಮ್ಮ ಜೀವಂತ ಟ್ರ್ಯಾಕ್ಟರ್ಗಳು. ಸಂಬಳವಿಲ್ಲದೆ, ಹಗಲಿರುಳೂ ಜಮೀನಿನ ಉಳುಮೆ ಆರಂಭಿಸಿದ್ದವು. ಭೂಮಿ ನೈಸಗರ್ಿಕವಾಗಿ ಹಸನಾಗಿತ್ತು. ಎರೆಹುಳಗಳ ಉಳುಮೆಯ ಪರಿಣಾಮ, ಭೂಮಿಯು ಜರಡಿಯಂತೆ ತೂತಾಗಿತ್ತು. ಅಲ್ಲೆಲ್ಲ ನೀರು ಧರೆಯನ್ನು ಸೇರಲಾರಂಭವಾಯಿತು. ನೀರಿನಿಂದಾಗಿ, ಸಾವಯುವ ಗೊಬ್ಬರ ಬಳಕೆಯಿಂದ ಅವು ಕ್ರಿಯಾಶೀಲವಾಗಿದ್ದವು. ತೋಟದ ಎಲ್ಲೆಡೆಯೂ ಎರೆಮಣ್ಣು ಕಾಣಿಸಲಾರಂಭಿಸಿತ್ತು. ತೋಟಕ್ಕೆ ಜೀವಾಮೃತ ಕೊಡುವುದು ಈಗ ಸುಲಭವೆನಿಸಿತ್ತು. ಚರಂಡಿಗಳೆಲ್ಲಾ ಭತರ್ಿಯಾಗಿದ್ದವಲ್ಲ ! ಇದರ ಪರಿಣಾಮ ಇಡೀ ತೋಟವೇ ಇಂಗು ಗುಂಡಿಯಾಗಿ ಬದಲಾಗಿತ್ತು. ಬಾವಿ ಸೇರಿದಂತೆ ಪುಟ್ಟ ತೋಟವು ಭೂಮಿಗೆ 'ಜಲಮರುಪೂರಣ' ಮಾಡಲಾರಂಭಿಸಿತ್ತು. ನಮ್ಮ ಮನೆಯ ಕೆಳಭಾಗದಲ್ಲಿರುವ ಗದ್ದೆಗಳಲ್ಲಿಯೂ ನೀರು ಶೇಖರಣೆಯಾಗಲಾರಂಭಿಸಿತ್ತು. ಕೇವಲ ಒಂದೆರಡೇ ದಿನಗಳಲ್ಲಿ ಬಾವಿಯ ನೀರಿನ ಮಟ್ಟದಲ್ಲಿ ಬಾರೀ ಬದಲಾವಣೆಯಾಗಿತ್ತು. ನೀರು ಕೊಯ್ಲುವಿಗೂ ಮುನ್ನಾ ಸುಮಾರು 7.5-8 ಅಡಿ ಆಳದಲ್ಲಿದ್ದ ನೀರು ಒಂದೇ ಸಮನೆ ಏರಲಾರಂಭವಾಯಿತು. ಜನವರಿ ಮಾಸದ ಎರಡನೇ ವಾರದಲ್ಲಿ ಬಾವಿಯ ಸುತ್ತಲೂ 4-5 ಅಡಿ ಆಳಕ್ಕೆ ಎರಡು ಗುಂಡಿಗಳನ್ನು ತೋಡಿದೆವು. ನೀರಿನ ಒಳ ಹರಿವು ಹೆಚ್ಚಾಗಿದ್ದ ಕಾರಣ ಅಧಿಕ ಆಳ ತೋಡಲಾಗಲಿಲ್ಲ !
ನೀರು ಕೊಯ್ಲು ಆರಂಭ
ಸಂಜೆ ವೇಳೆಗಾಗಲೇ ಗುಂಡಿ ತೋಡುವ ಕಾರ್ಯ ಮುಗಿದಿತ್ತು. ಅರ್ಧ ಘಂಟೆಯಲ್ಲೇ ನೀರು ಕೊಯ್ಲು ಮಾಡಲು ಮಾಡಿದ್ದ ಗುಂಡಿಯಲ್ಲಿ ನೀರು ತುಂಬಿತ್ತು. ಮಾರನೇ ದಿನ ಮುಂಜಾನೆಯೇ ಎದ್ದು ಬಾವಿಯನ್ನು ಇಣುಕಿದೆವು. ನಾವು ನಿರೀಕ್ಷಿಸಿದ್ದಕ್ಕಿಂತಲೂ ಮೇಲೆ ಬಂದಿತ್ತು ನೀರು. ನೆಲಮಟ್ಟದಿಂದ ಕೇವಲ ಒಂದೇ ಅಡಿ ಆಳದಲ್ಲಿ ನೀರಿತ್ತು ! ನೆಲಮಟ್ಟದಿಂದ. ( ಮೂರು ಬಳೆಗಳು( ರಿಂಗ್) ನೆಲಮಟ್ಟದ ಮೇಲಿವೆ.
ಬೆಳಿಗ್ಗೆಯೇ ಮಗ ಪ್ರಣವ್ ಹಲವಾರು ಚಿತ್ರ ತೆಗೆದ. ನೀರು-ನೀರೆಂದು ಹಾಹಾಕಾರ ಕೇಳಿ ಬರುತ್ತಿದ್ದ ದೂರದೂರಿನಲ್ಲಿರುವ ಬಂಧು-ಬಳಗದವರಿಗೂ ಸ್ನೇಹಿತರಿಗೂ ಸಾಮಾಜಿಕ ಜಾಲತಾಣದ ಮೂಲಕ ಕಳುಹಿಸಿದೆವು. ನೆರೆಹೊರೆಯ ಕೆಲವರು ಅಂದು ಸಂಜೆಯೇ ಮನೆಗೆ ಬಂದರು. ಬಾವಿಯಲ್ಲಿ ಇಣುಕಿದರು. ಆಗಲೇ ನಾನು ಬಾವಿಗೆ ಅಡಿಕೋಲು(ಸ್ಕೇಲ್) ಅನ್ನು ಹಗ್ಗದ ಮೂಲಕ ಇಳಿಯ ಬಿಟ್ಟಿದ್ದೆ. ನೀರಿನಾಳ ಎಲ್ಲರಿಗೂ ಅತ್ಯಂತ ನಿಖರವಾಗಿ, ಕರಾರುವಕ್ಕಾಗಿ ತಿಳಿಯುವ ಪ್ರಯತ್ನ ಮಾಡಿದ್ದೆ. ನೀರು ಅಡಿಕೋಲನ್ನು ಮೆತ್ತನೆ ಸ್ಪಶರ್ಿಸುತ್ತಿತ್ತು. ( ಚಿತ್ರ ನೋಡಿ). ಅಕ್ಕ-ಪಕ್ಕದ ಮನೆಗಳವರು ಮನೆಗೆ ಬಂದರು. ನೀರನ್ನು ನೋಡಿದ ಹಲವರು ಸಂತೋಷಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಚಿತ್ರಗಳಿಗೆ ವಾವ್, ಅದೃಷ್ಟವಂತರು, ಭಾಗ್ಯಶಾಲಿಗಳು, ವಂದನೆಗಳು... ಹೀಗೆ ಹತ್ತು ಹಲವಾರು ಸಂತೋಷದ ಮುಕ್ತ ನುಡಿಗಳು.
ಮಹನೀಯರ ಅತ್ಯಮೂಲ್ಯ ಸಲಹೆಗಳು
ಈ ಪ್ರಯತ್ನಕ್ಕೆ ಆನ್ಲೈನ್ ಮೂಲಕ ಅಮೂಲ್ಯ ಸಲಹೆಗಳನ್ನಿತ್ತು ಪ್ರೇರಪಣೆ ನೀಡಿದ ಪುತ್ತೂರಿನ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ,, ಚಿತ್ರದುರ್ಗದ ಜಲತಜ್ಞ ಎಂ. ದೇವರಾಜ ರೆಡ್ಡಿ, ತುಮಕೂರಿನ ಸಾವಯವ ಕೃಷಿಕ ಶಿವನಂಜಯ್ಯ ಬಾಳೇಕಾಯಿ ಅವರುಗಳಿಗೆ ನಾನು ಅಭಾರಿ. ನೀರು ಅದೇ ಮಟ್ಟವನ್ನು ಎಷ್ಟು ದಿನ ಕಾದುಕೊಳ್ಳುತ್ತದೋ ತಿಳಿದಿಲ್ಲ. ಈಗಂತೂ ನೆಲಮಟ್ಟದಿಂದ ಒಂದು-ಒಂದೂವರೆ ಅಡಿಯವರೆಗೆ ನೀರಿನ ಮಟ್ಟ ಏರಿಳಿಯುತ್ತಿರುತ್ತದೆ ! ಬೆಳಿಗ್ಗೆ ನೀರಿನ ಮಟ್ಟ ಏರಿಕೆಯಾಗಿರುತ್ತದೆ. ಹೊತ್ತು ಏರಿದಂತೆ ನೀರಿನ ಮಟ್ಟ ನಿಧಾನಕ್ಕೆ ಇಳಿಯುತ್ತದೆ.
ನಿಮ್ಮ ಕೆಲಸ-ಸರಕಾರಿ ಸಂಬಳ !
ನೀವು ಇಂತಹ ಪ್ರಯತ್ನದಿಂದ ನೀರ ಸಮಸ್ಯೆಯಿಂದ ಪಾರಾಗಬಹುದು. ಉದ್ಯೋಗಖಾತ್ರಿ ಯೋಜನೆಯಡಿ ಇದಕ್ಕೆ ಸರಕಾರದ ಸಹಾಯಧನವೂ ಲಭ್ಯ. ನಿಮ್ಮ ಕೆಲಸಕ್ಕೆ ಸರಕಾರ ಸಂಬಳ ನೀಡುತ್ತದೆ ! ಬಳಸಿಕೊಳ್ಳಿ. ನೀರಿನ ವಿಚಾರದಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗಿ. ನಾಳಿನ ನೀರಿನ ನೆಮ್ಮದಿಗಾಗಿ ಇಂದೇ ಕಾರ್ಯ ತತ್ಪರರಾಗಿ. ವಿವರಗಳಿಗೆ ಸಮೀಪದ ಗ್ರಾಮ ಪಂಚಾಯಿತಿ ಕಛೇರಿಯನ್ನು ಸಂಪಕರ್ಿಸಿರಿ.
ಸೋಮವಾರ, ಮಾರ್ಚ್ 23, 2020
ಶಾಸ್ತ ಈಶ್ವರ ದೇಗುಲದ ನವೀಕರಣ-ಪುನಃಪ್ರತಿಷ್ಠಾಪನೆ . Sasthave Temple , Hoddur.
ಶಾಸ್ತ ಈಶ್ವರ ದೇಗುಲದ ನವೀಕರಣ-ಪುನಃಪ್ರತಿಷ್ಠಾಪನೆ
ಮೂರ್ನಾಡು ಸನಿಹದ ಹೊದ್ದೂರುವಿನ ಶ್ರೀಶಾಸ್ತ ಈಶ್ವರ ದೇವಳದ ನವೀಕರಣ ಕಾರ್ಯ ಭರದಿಂದ ಸಾಗಿದೆ. ಹಲವಾರು ವರ್ಷಗಳಿಂದ ಈ ಕೆಲಸ ನಡೆಯುತ್ತಿದ್ದು, ಅಂತಿಮ ಘಟ್ಟದತ್ತ ಸಾಗುತ್ತಿದೆ.Please watch and subscribe my Youtube channal: https://www.youtube.com/channel/UCw4dehXSFlG4sS9xYiRkjPA?view_as=subscriber
Pl watch my these blogs.
Kodagu Darshini : https://koodanda.blogspot.com/
Kodagu Darshini (Kodagina Antaranga):https://koodagudarshini.blogspot.com/
ಸ್ಥಳ ಮಹಿಮೆ: ಪೂರ್ವಕಾಲದಲ್ಲಿ ದುಷ್ಟಜನರು ಗ್ರಾಮದ ಮೇಲೆ ದಾಳಿ ಮಾಡಿದ್ದರು. ಆನತೆ ಜೀವ ಉಳಿದರೆ ಸಾಕೆಂದು ಪಲಾಯನ ಮಾಡಲು ಆರಂಭಿಸಿದ್ದರು. ಆ ಸಮಯದಲ್ಲಿ ಗೋಪಾಕನ ಮೈಮೇಲೆ ಬಂದ ದೇವಶಕ್ತಿ ಪಲಾಯನ ಮಾಡುವುದು ಬೇಡ. ನಿಮ್ಮೊಂದಿಗೆ ನಾನೀರುವೆ. ಎನ್ನುವ ಅಭಯ ನೀಡಿತಂತೆ ! ಜೊತೆಯಾಗಿ ಬಂದ ಅಪೂರ್ವ ಶಕ್ತಿ ಕೆಂದುಂಬಿಯಾಗಿ ಪರಿವರ್ತನೆಗೊಂಡು, ದುಷ್ಟರ ಮೇಲೆರಗಿ ಅವರನ್ನು ಸಂಹಾರ ಮಾಡಿತೆಂದು ಪುರಾಣ ಕಥೆಯು ಸಾರುತ್ತಿದೆ. ಅದೇ ಸ್ಥಳವು ಇಂದಿನ ಚೋರಂಗೆ ಮಂದ್ ಎಂದು ಪ್ರಖ್ಯಾತವಾಗಿದೆ. ದೇವರನ್ನು ಆರಾಧಿಸಿ, ಪುತ್ತರಿ ಕೋಲಾಟ ನಡೆಸುವದು ಆಚರಣೆಯಲ್ಲಿದೆ.
ಅಪೂರ್ವ ಬಾವಿ: ದೇವಳದ ಆವರಣದಲ್ಲಿ ಪುರಾತನ ಕಾಲದ ಬಾವಿ ಇದೆ. ವರ್ಷ ಪೂರ್ತಿ ಸಮೃದ್ಧ
ನೀರಿರುವ ಇದು ಜೂನ್ ತಿಂಗಳಲ್ಲಿ ಸಂಪೂರ್ಣ ಬತ್ತಿ ಹೋಗುತ್ತದೆ !
ದೇವಳದ ಆವರಣದಲ್ಲಿ ದೇವರ ರಕ್ಷಕರಾಗಿ, ಮಹಾಗಣಪತಿ, ಬೇಟೆ ಅಯ್ಯಪ್ಪ, ಚಾಮುಂಡಿ ದೇವ-ದೈವಗಳ ಗುಡಿಗಳಿವೆ.
180 ಲಕ್ಷ ವೆಚ್ಚ : ಈ ದೇವಸ್ಥಾನವು ಹಲವಾರು ವರ್ಷಗಳಿಂದ ಮೂಲೆಗುಂಪಾಗುವ ಸ್ಥಿತಿಗೆ ಬಂದಿತ್ತು. ಇದೀಗ ದೇಗುಲವನ್ನು ದಾನಿಗಳ ನೆರವಿನಿಂದ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ದೇವಾಲಯದ ಪುನಃ ನಿರ್ಮಾಣ ಕಾರ್ಯವು ಪ್ರಮುಖ ದಾನಿ ಹೊದ್ದೂರಿನ ಕೂಡಂಡ ರಾಜೇಂದ್ರ ಅಯ್ಯಮ್ಮ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

ಸುಮಾರು 180ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಈ ಕಾರ್ಯವು ಭರದಿಂದ ನಡೆಯುತ್ತಿದೆ. ಈ ದೇಗುಲದ ನವೀಕರಣಕ್ಕೆ ದಾನಿಗಳಿಂದ ತನುಮನಧನದ ಸಹಾಯವನ್ನು ಕೋರಲಾಗಿದೆ. ಧನ ಸಹಾಯ ನೀಡುವ ದಾನಿಗಳು, ಮೂರ್ನಾಡಿನ
ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ: 11042200029212, ( ಐಎಫ್ಎಸ್ ಕೋಡ್ - 0001104) ಗೆ ಕಳುಹಿಸಿ ಕೊಡಬಹುದು.
ಪುನರ್ ಪ್ರತಿಷ್ಠಾಪನೆ: ನೂತನ ದೇಗುಲದ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಫೆಬ್ರವರಿ 12 ರಿಂದ 17ರವರೆಗೆ ನಡೆಯಲಿದೆ.
ಪುನರ್ ಪ್ರತಿಷ್ಠಾಪನೆ: ನೂತನ ದೇಗುಲದ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಫೆಬ್ರವರಿ 12 ರಿಂದ 17ರವರೆಗೆ ನಡೆಯಲಿದೆ.
ವಾರ ಕಾಲ ನಡೆಯುವ ವಿವಿಧ ಪೂಜಾ ಕೈಂಕರ್ಯಗಳಿಗೆ ವಸ್ತು ವಗೈರೆಗಳ ಆಗತ್ಯವಿದೆ. ಅಕ್ಕಿ, ಎಣ್ಣೆ, ತೆಂಗಿನಕಾಯಿ, ತರಕಾರಿ, ಹೂವು, ಹಣ್ಣುಗಳನ್ನು ಯಥೋಚಿತವಾಗಿ ದಾನಿಗಳು ನೀಡುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)