ಸೋಮವಾರ, ಏಪ್ರಿಲ್ 30, 2018

ಕಾಳು ಮೆಣಸಿನಲ್ಲಿ ಗೆದ್ದಲಿನ ನಿರ್ವಹಣೆ

                       ಕಾಳು ಮೆಣಸಿನಲ್ಲಿ ಗೆದ್ದಲಿನ ನಿರ್ವಹಣೆ ? 


ಪ್ರಪಂಚದಲ್ಲಿ ಸಾಂಬಾರು ಬೆಳೆಗಳನ್ನು ಬೆಳೆಯುವ ರಾಷ್ಟ್ರಗಳಲ್ಲಿ ಭಾರತವು ಪ್ರಮುಖವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಭಾರತದಲ್ಲಿ ಬೆಳೆಯುವ ಕಾಳುಮೆಣಸಿಗೆ ವಿಶಿಷ್ಟವಾದ ಸ್ಥಾನಮಾನವಿದೆ. ಕಾಳು ಮೆಣಸನ್ನು ನಾವು “ಮಸಾಲೆ ಬೆಳೆಗಳ ರಾಜ” ಎಂದೂ ಕೂಡ ಕರೆಯುತ್ತೇವೆ.




ಈ ಕಾಳು ಮೆಣಸು ಬೆಳೆಯನ್ನು ಮಿಶ್ರಬೆಳೆಯಾಗಿ ಕೊಡಗು, ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಕಾಫಿû, ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಹೆಚ್ಚು ಆದ್ರ್ರತೆ ಮತ್ತು ತೇವಾಂಶದಿಂದ ಕೂಡಿರುವ ಬೆಟ್ಟ ಮತ್ತು ಸಮತಟ್ಟಾದ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ಕಾಳುಮೆಣಸನ್ನು ನೆರಳನ್ನು ಉಪಯೋಗಿಸಿಕೊಂಡು ಬೆಳೆಯಲಾಗುತ್ತದೆ.  ಇದರಿಂದ ಬರುವ ಉತ್ಪನ್ನವು ಉತ್ತಮ ಗುಣಮಟ್ಟದ್ದಾಗಿದ್ದು,  ಭಾರತದ ಕಾಳುಮೆಣಸಿಗೆ ಹೆಚ್ಚಿನ ಬೇಡಿಕೆಯಿದೆ.

ಕಾಳುಮೆಣಸನ್ನು ಬೆಳೆಯಲು ಆಶ್ರಯಮರಗಳ ಅವಶ್ಯಕವಿರುವುದರಿಂದ ಹಾಲುವಾಣ, ಗೊಬ್ಬರದ ಗಿಡ, ಸಿಲ್ವರ್ ಓಕ್ ಮತ್ತು ಕಾಫಿ ತೋಟಗಳಲ್ಲಿ ಬೆಳೆಯುವ ಇತರೆ ಕಾಡು ಮರಗಳಿಗೆ ಬಳ್ಳಿಯನ್ನು ಹಬ್ಬಿಸಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಳುಮೆಣಸನ್ನು ಸಿಮೆಂಟ್ ಕಂಬಗಳು, ಕಲ್ಲು ಕಂಬಗಳನ್ನು ಉಪಯೋಗಿಸಿ ಕಾಳುಮೆಣಸನ್ನು ಅಲ್ಲಲ್ಲಿ ಬೆಳೆಸಲಾಗುತ್ತಿದೆ. ಈ ವಿಧಾನದಿಂದ ಕಾಳುಮೆಣಸನ್ನು ಬೆಳೆಸಲು ಪ್ರಾಥಮಿಕ ಬಂಡವಾಳದ ಅವಶ್ಯಕತೆಯಿರುವುದರಿಂದ ಹೆಚ್ಚಿನ ರೈತರು ಆಸಕ್ತಿಯನ್ನು ತೋರುತ್ತಿಲ್ಲ.  ನಮ್ಮ ಮೂಲ ಸಂಪ್ರದಾಯದಂತೆ ಆಶ್ರಯ ಮರಗಳನ್ನು ಬಳಸಿಕೊಂಡು ಕಾಫಿû ಮತ್ತು ಇತರೆ ತೋಟಗಳಲ್ಲಿ ಬೆಳೆಸಲಾಗುತ್ತಿದೆ.


 ಆದರೆ ಇತ್ತೀಚೆಗೆ ರೋಬಸ್ಟಾ ಕಾಫಿ ತೋಟದಲ್ಲಿ ಬೆಳೆಸುತ್ತಿರುವ ಕಾಳುಮೆಣಸಿನಲ್ಲಿ ಗೆದ್ದಲಿನ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ರೋಬಸ್ಟಾ ಕಾಫಿû ತೋಟಗಳಲ್ಲಿ ಹೆಚ್ಚಾಗಿ ನೆರಳನ್ನು ಇಟ್ಟುಕೊಂಡರೆ ಕಾಫಿಯ ಇಳುವರಿ ಕಡಿಮೆಯಾಗಿತ್ತದೆ ಎಂದು ತಿಳಿದು ತಮ್ಮ ತೋಟಗಳಲ್ಲಿರುವ ಕಾಳುಮೆಣಸನ್ನು ಹಬ್ಬಿಸಿರುವ ಆಶ್ರಯ ಮರಗಳ ರೆಂಬೆಗಳನ್ನು ಕಡಿದು ಬಿಸಿಲು ಕಾಫಿ ಗಿಡಗಳ ಮೇಲೆ ಬೀಳುವಂತೆ ರೈತರು ಮಾಡುತ್ತಿದ್ದಾರೆ. ಇದರಿಂದ ಸೂರ್ಯನ ಕಿರಣಗಳು ಆಶ್ರಯ ಮರಗಳ ಮೇಲೆ ನೇರವಾಗಿ ಬಿದ್ದು ಅವುಗಳ ತೊಗಟೆ ಒಣಗುತ್ತಿರುತ್ತವೆ. ಈ ಆಶ್ರಯ ಮರಗಳ ತೊಗಟೆ ಒಣಗುತ್ತಿದ್ದರೆ ಅಥವಾ ಒಣಗುವಂತಾಗಿದ್ದರೆ,  ಆ ಮರಗಳ ತೊಗಟೆಯಲ್ಲಿ ಗೆದ್ದಿಲು ತಿನ್ನುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಗೆದ್ದಿಲುಗಳು ಆಶ್ರಯ ಮರಗಳ ತೊಗಟೆಯನ್ನು ತಿನ್ನುವುದರಿಂದ ಮರಗಳು ಸಂಪೂರ್ಣವಾಗಿ ಹಾಳಾಗಿ ಅದರಲ್ಲಿ ಹಬ್ಬಿಸಿರುವ ಕಾಳುಮೆಣಸು ಬಳ್ಳಿಗಳು ಜಾರಿಬಿದ್ದು ಹಾಳಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.




 4 ಸಾವಿರ ಪ್ರಭೇಧಗಳು  

ಗೆದ್ದಿಲು ಒಂದು ಜಾತಿಯ ಇರುವೆಯನ್ನು ಹೋಲುವ ಜೀವಿ. ಇದು ಮಳೆ ಕಡಿಮೆ ಬೀಳುವ ಮತ್ತು ನೆರಳು ಕಡಿಮೆ ಇರುವ ಪ್ರದೇಶಗಳಲ್ಲಿ ತುಂಬಾ ಹೆಚ್ಚಾಗಿ ಕಾಣಿಸುತ್ತದೆ. ಇದು ಸತ್ತ ಸಸ್ಯ ಜನ್ಯವಸ್ತುಗಳನ್ನು ತಿಂದು ಜೀವಿಸುತ್ತದೆ. ಗೆದ್ದಲಿನಲ್ಲಿ ಸರಿ ಸುಮಾರು 4000 ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಗೆದ್ದಲುಗಳು  ಸುಮಾರು 50 ದಶಲಕ್ಷ ವರ್ಷಗಳಿಂದಲೂ ಭೂಮಿಯ ಮೇಲೆ ವಾಸಿಸುತ್ತೀರುವ ಕೀಟಗಳು. ಇವುಗಳು ವಿಶಿಷ್ಟವಾದ ಹುತ್ತ ಎಂಬ ಒಂದು ರೀತಿಯ ಮಣ್ಣಿನ ಗೂಡನ್ನು ನಿರ್ಮಿಸಿಕೊಂಡು ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟಿಗೆ ವಾಸಿಸುವ ಸಂಘ ಜೀವಿಗಳು. ಒಂದು ಗುಂಪಿನಲ್ಲಿ ಮುಖ್ಯವಾಗಿ ರಾಣಿ, ಕೆಲಸಗಾರ ಮತ್ತು ಸೈನಿಕ ಎಂಬ ಮೂರು ಜಾತಿಯ ಗೆದ್ದಲುಗಳು ಇರುತ್ತವೆ. ಸಂತಾನೋತ್ಪತ್ತಿ ನಡೆಸುವುದು ರಾಜ ರಾಣಿಯರಿಗೆ ಸೇರಿದ ಕೆಲಸ. ಕೆಲಸಗಾರ ಗೆದ್ದಲುಗಳು ಆಹಾರ ಸಂಗ್ರಹಣೆ, ಗೂಡಿನ ಸ್ವಚ್ಚತೆ, ಮರಿಗಳ ಪಾಲನೆ ಮೊದಲಾದ  ಕೆಲಸಗಳನ್ನು ನಿರ್ವಹಿಸುತ್ತವೆ . ಸೈನಿಕ ಗೆದ್ದಲುಗಳು ಗೂಡಿನ ರಕ್ಷಣೆಯ ಕೆಲಸವನ್ನು ಮಾಡುತ್ತವೆ.

ಹವಾ ನಿಯಂತ್ರಿತ ಗೂಡು ! 

 ಈ ಎಲ್ಲ ಜಾತಿಯ ಗೆದ್ದಲುಗಳನ್ನು ನಿಯಂತ್ರಿಸುವುದು ರಾಣಿ ಹುಳು ಸ್ರವಿಸುವ ಹಾರ್ಮೋನುಗಳು, ಮಣ್ಣು, ಜೊಲ್ಲು,  ಜೀರ್ಣವಾಗದ  ಆಹಾರ ವಸ್ತುಗಳು ಮೊದಲಾದವುಗಳನ್ನು ಬಳಸಿಕೊಂಡು ಇವು ನಿರ್ಮಿಸುವ ಗೂಡು ಅಥವಾ ಹುತ್ತ ತುಂಬಾ ತಣ್ಣಗಿದ್ದು (ಹವಾನಿಯಂತ್ರಣ),  ಒಳಗೆ ಪ್ರತಿಯೊಂದು ಕೆಲಸಗಳಿಗೂ ಪ್ರತ್ಯೇಕ ಕೋಣೆಗಳಿದ್ದು ಪರಿಸರ ಸಮತೋಲನ ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರವಹಿಸುತ್ತವೆ.



ಪ್ರತಿ ದಿನ 20 ಸಾವಿರಕ್ಕೂ ಅಧಿಕ ಮೊಟ್ಟೆ !

ಗೆದ್ದಿಲು ಒಂದು ಸಾಮೂಹಿಕ ಕೀಟವಾಗಿದ್ದು,ಇದನ್ನು ಸಾಮಾನ್ಯವಾಗಿ ಬಿಳಿಗೆದ್ದಿಲು ಹುಳುಗಳೆಂದು ಕರೆಯುತ್ತಾರೆ. ಇರುವೆ ಮತ್ತು ಜೇನು ಗೂಡಿನ ತರಹ ಸಾಮೂಹಿಕ ಜೀವನವನ್ನು ನಡೆಸುವ ಈ ಈ ಹುಳುಗಳು ಸತ್ತಿರುವ ಸಸ್ಯ ಅವಶೇಷಗಳಾದ ಮರ,ಏಲೆ ಹಾಗೂ ಮಣ್ಣು ಪ್ರಾಣಿಗಳನ್ನು ತಿನ್ನುತ್ತವೆ. ಸಾಮಾಜಿಕ ಕೀಟವಾದ ಗೆದ್ದಿಲು ಹುಳುಗಳು ನೂರರಿಂದ ಸಾವಿರಗಟ್ಟಲೆ ಜೊತೆಯಲ್ಲಿ ಬಾಳುತ್ತವೆ. ಈ ಬಳಗದಲ್ಲಿ ಚಿಕ್ಕ ಹುಳುಗಳು ಕೆಲಸ ಮಾಡುವ ಸೈನಿಕರಂತೆ ಮತ್ತು ವಂಶಾಭಿವೃದ್ದಿ ಮಾಡುವ ರಾಣಿ ಹುಳುಗಳು ಮತ್ತು ಗಂಡು ಹುಳುಗಳು ಇರುತ್ತವೆ. ಒಂದೇ ಬಳಗದಲ್ಲಿ ಸುಮಾರು ಮೊಟ್ಟೆಗಳನ್ನಿಡುವ ರಾಣಿಗಳು ಇರುತ್ತವೆ. ಪ್ರೌಢಾವಸ್ಥೆಗೆ ಬಂದಂತಹ ರಾಣಿಗಳು ಪ್ರತಿ ದಿನ 20000 ರಿಂದ 30000 ಮೊಟ್ಟೆಗಳನ್ನಿಡುತ್ತವೆ.
ಗೆದ್ದಿಲುಗಳನ್ನು ಅವುಗಳನ್ನು ತಿನ್ನುವ ಆಹಾರದ ಮೇಲೆ ವರ್ಗೀಕರಣ ಮಾಡಿದ್ದಾರೆ. ಅದರಲ್ಲಿ ಮುಖ್ಯವಾದವುಗಳೆಂದರೆ ಸಾಮಾನ್ಯವಾಗಿ ಭೂಮಿಯ ಮೇಲ್ಭಾಗದಲ್ಲಿ ಮಣ್ಣು ತಿನ್ನುವ, ಒಣಗಿದ ಮರ ತಿನ್ನುವ, ಕೊಳೆತ ಮರ ತಿನ್ನುವ ಹಾಗೂ ಹುಲ್ಲು ತಿನ್ನುವ ಪ್ರಭೇಧಗಳಿರುತ್ತವೆ. ಗೆದ್ದಿಲುಗಳು ಅವುಗಳ ಕರುಳುಗಳಲ್ಲಿ ಪೆÇ್ರಟೋಜೊವ ಮತ್ತು ಸೂಕ್ಷ್ಮ ಜೀವಿಗಳ ಬೆಳವಣಿಗೆಯಿಂದ ಮರ ತಿಂದಾಗ ಬರುವ ಸೆಲುಲೋಸ್‍ನ್ನು ಉಪಯೋಗಿಸಿಕೊಳ್ಳುತ್ತವೆ.


                           ಗೆದ್ದಲಿನ ಸಮಗ್ರ ನಿರ್ವಹಣೆ

ಗೆದ್ದಿಲನ್ನು ನಾವು ರಾಸಾಯನಿಕ ಮತ್ತು ಸಾವಯವ ಪದ್ದತಿಯನ್ನು ಅನುಸರಿಸಿ ನಿರ್ವಹಣೆಯನ್ನು ಮಾಡಬಹುದು.
ತೋಟಗಳಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಬೇಕು
ಬೇಸಿಗೆ ಕಾಲದಲ್ಲಿ ಗೆದ್ದಲುಗಳು ಮರ ಹತ್ತುವುದನ್ನು ಪರಿಶೋಧಿಸುತ್ತಿರಬೇಕು. ಈ ಹುಳುಗಳು ಮರವನ್ನು ಹತ್ತಲು ಮಣ್ಣಿನ ಒಳಗೆ ದಾರಿಯನ್ನು ಮಾಡಿಕೊಂಡಿರುತ್ತದೆ. ಆ ಸಮಯದಲ್ಲಿ  ಕ್ಲೋರೊಪೈರಿPAಸ್  ಎಂಬ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ 3.0 ಮಿ.ಲಿಯಂತೆ ಬೆರಸಿ ಸಿಂಪರಣೆ ಮಾಡಿದರೆ ಗೆದ್ದಲು ಮೇಲೆ ಹತ್ತುವುದನ್ನು ತಡೆಯಬಹುದಾಗಿದೆ.
ಸುಣ್ಣದ ತಿಳಿಯನ್ನು ಮಾಡಿಕೊಂಡು ಮರದ ಬುಡದ ಭಾಗದಿಂದ 3 ರಿಂದ 4 ಅಡಿ ಎತ್ತರದವರೆಗೆ ಹಚ್ಚುವುದರಿಂದಲೂ ಕೂಡ ಗೆದ್ದಿಲು ಮರಗಳನ್ನು ಹತ್ತುವುದನ್ನು ತಡೆಗಟ್ಟಬಹುದು.
ಗೆದ್ದಿಲಿನ ಭಾದೆ ಹೆಚ್ಚಾಗಿದ್ದರೆ ತೋಟದಲ್ಲಿರುವ ಹುತ್ತ ಮತ್ತು ಸಮೀಪವಿರುವ ಮರಗಳ ಸುತ್ತ ಕ್ಲೋರೊಪೈರಿ¥sóÁಸ್ (3.0 ಮಿ.ಲಿ) ಅಥವಾ ಇಮೀಡಾಕ್ಲೋಪ್ರಿಡ್ (0.3 ಮಿ.ಲಿ) ಅಥವಾ ಪಿಪೆÇ್ರೀನಿಲ್ (2.0 ಮಿ.ಲಿ) ಎಂಬ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರಸಿ ಬುಡಕ್ಕೆ ಸುರಿಯಬೇಕು.


ವಿಶೇಷ ಸೂಚನೆ: ಗೆದ್ದಿಲುಗಳನ್ನು ಮಣ್ಣಿನ ಅಭ್ಯಂತರರು ಎಂದು ಕರೆಯುತಾರೆ. ಏಕೆಂದರೆ ಗೆದ್ದಿಲುಗಳು  ಒಣಗಿದ ಮರದಿಂದ ಸೆಲುಲೋಸ್ ಮತ್ತು ಲಿಗ್ನಿನ್‍ನ್ನು ತಿಂದು ಮಣ್ಣಿಗೆ ಸೇರಿಸಿ, ಮಣ್ಣಿನ ಸಾವಯವ ಅಂಶ ಉತ್ತಮವಾಗುವಂತೆ ನೋಡಿಕೊಳ್ಳುತ್ತವೆ. ಇವುಗಳು ರೈತನ ಮಿತ್ರನಾಗಿ ಕೆಲಸವನ್ನು ಮಾಡುತ್ತವೆ. ಆದ್ದರಿಂದ ಗೆದ್ದಿಲುಗಳನ್ನು ಸಾಯಿಸುವುದರ ಬದಲು ಅವುಗಳು ಕಾಳು ಮೆಣಸು ಬಳ್ಳಿ ಇರುವ ಮರಗಳ ಹತ್ತಿರ ಸುಳಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.


  ಬರಹ: ವೀರೇಂದ್ರ ಕುಮಾರ್. ಕೆ.ವಿ, ವಿಷಯ ತಜ್ಞರು (ಸಸ್ಯ ಸಂರಕ್ಷಣೆ) ಮತ್ತು ಡಾ.ಸಾಜೂ ಜಾರ್ಜ್, ಮುಖ್ಯಸ್ಥರು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು

 ವಿವರಗಳು ಬೇಕಾದಲ್ಲಿ ಸಂಪರ್ಕಿಸಬೇಕಾದ ವಿಳಾಸ
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
ಐ.ಸಿ.ಎ.ಆರ್ -ಕೃಷಿ ವಿಜ್ಞಾನ ಕೇಂದ್ರ
ಗೋಣಿಕೊಪ್ಪಲು, ಕೊಡಗು, ಕರ್ನಾಟಕ
ದೂರವಾಣಿ : 08274-247274


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ