ಭಾನುವಾರ, ಜೂನ್ 3, 2018

ಕೀಟಗಳ ಸಂಹಾರಿ.... ಕೃಷಿಕನಿಗೆ ಸಹಕಾರಿ....! Solar Insects Trap

           ಕೀಟಗಳ ಸಂಹಾರಿ.... ಕೃಷಿಕನಿಗೆ ಸಹಕಾರಿ....!

                               ರಾಸಾಯನಿಕ ರಹಿತ ಕೀಟ ನಿಯಂತ್ರಣ


ಬರಹ: ಕೂಡಂಡ ರವಿ, ಹೊದ್ದೂರು. ಕೊಡಗು

ಮೊಬೈಲ್ : 9482021202



ಪ್ರಸ್ತುತ ದಿನಗಳಲ್ಲಿ ಬಹುತೇಕ ಎಲ್ಲಾ ಬೆಳೆಗಳನ್ನು ಬೆಳೆಯುವುದೇ ರೈತಾಪಿ ವರ್ಗದವರಿಗೆ ಸವಾಲಿನ ಕೆಲಸವಾಗಿದೆ. ಕೃಷಿ ಹಿಂದಿನಂತೆ ಖುಷಿ  ನೀಡುತ್ತಿಲ್ಲ. ಕೃಷಿಯಲ್ಲಿ ಹತ್ತಾರು ಸವಾಲುಗಳನ್ನು ಬೆಳೆಗಾರರು  ಎದುರಿಸುತ್ತಿದ್ದಾರೆ. ಇವುಗಳಲ್ಲಿ ಬೆಳೆಗಳನ್ನು ಕಾಡುವ ಕೀಟಗಳು ಕೃಷಿಕರನ್ನು ಹೈರಾಣಾಗಿಸಿವೆ. ಇಂತಹ ವಿವಿಧ ಬಗೆಯ ಕೀಟಗಳು ಫಸಲಿನ ಇಳುವರಿ ಗುಣಮಟ್ಟದ ಪ್ರಮಾಣವನ್ನು ಕನಿಷ್ಠ ಪ್ರಮಾಣಕ್ಕಿಳಿಸಿ, ರೈತ ಬಂಧುಗಳಿಗೆ ಆಥರ್ಿಕ ಮತ್ತು ಮಾನಸಿಕ ಆಘಾತವನ್ನು ನೀಡುತ್ತವೆ. 




ರಾಸಾಯನಿಕ ರಹಿತ ಕೀಟ ನಿಯಂತ್ರಣ

ಇಂತಹ ಹಲವು ಸಮಸ್ಯೆಗಳ ಸಂಕೋಲೆಗಳ ನಡುವೆ ಕೃಷಿ ಮಾಡುತ್ತಿದ್ದ ಕೃಷಿಕ ದಾವಣಗೆರೆಯ ಮಲೆಬೆನ್ನೂರಿನ ಕರಿಬಸಪ್ಪ ವಿನೂತನ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಇದರಲ್ಲಿ ರಾಸಾಯನಿಕ ರಹಿತವಾಗಿ ಹಲವಾರು ಬೆಳೆಗಳನ್ನು ಕಾಡುವ ಕೀಟಗಳು ನಿಯಂತ್ರಣಕ್ಕೆ ಬರುತ್ತಿವೆ. ಪರಿಣಾಮ ಬೆಳೆಗಾರರು ಮಾನಸಿಕ, ಆಥರ್ಿಕ ಆಘಾತದಿಂದ ಪಾರಾಗಿ ಮುಗುಳ್ನಗೆ ಬೀರುತ್ತಿದ್ದಾರೆ.
ಮೂಲತಃ ಕೃಷಿಕರಾಗಿದ್ದ ಕರಿಬಸಪ್ಪ  ತಮ್ಮ ದಾಳಿಂಬೆ ತೋಟದಲ್ಲಿ ಬೆಳಕು ಬೀರಲು ಅಳವಡಿಸಿದ್ದ  ಸೋಲಾರ್ ದೀಪವೇ ಕೀಟ ನಿಯಂತ್ರಕ ಅನ್ವೇಷಣೆಗೆ ಪ್ರೇರಪಣೆಯಾಯಿತು. ತೋಟದಲ್ಲಿ  ಅಳವಡಿಸಿದ್ದ ಸೋಲಾರ್ ದೀಪದ ಬೆಳಕಿಗೆ ಸಾವಿರಾರು ವೈವಿಧ್ಯಮಯ ಕೀಟಗಳು ಆಕಷರ್ಿತವಾಗಿ ಪಕ್ಕದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಸಾಯುತ್ತಿದ್ದವು. ಇದೇ ಆಧಾರದಲ್ಲಿ ಕರಿಬಸಪ್ಪ ಅವರು, ವಿನೂತನ  ಸೋಲಾರ್ ಕೀಟನಾಶಕ ಯಂತ್ರ ವನ್ನು ಅನ್ವೇಷಣೆ ಮಾಡಿದರು. ಇದು ಮಾದರಿ ಯಂತ್ರವಾಗಿ ರೂಪುಗೊಳ್ಳಲು 5ವರ್ಷಗಳ ಅಧ್ಯಯನ ನಡೆಸಿದ್ದಾರೆ. 



ಸೋಲಾರ್ ಕೀಟನಾಶಕ ಯಂತ್ರ

ಇದು ಅತ್ಯಂತ ಸರಳ ಯಂತ್ರವಾಗಿದೆ. 5 ಅಡಿಯಷ್ಟು ಎತ್ತರದ ಕಬ್ಬಿಣದ ಗೂಟದ ಮೇಲ್ಭಾಗದಲ್ಲಿ ಮಂದವಾದ ನೀಲಿ ಬೆಳಕು ಬೀರುವ ಸೋಲಾರ್ ದೀಪವನ್ನು ಅಳವಡಿಸಲಾಗುತ್ತದೆ. ದೀಪದ ಕೆಳಭಾಗದಲ್ಲಿ ಅರ್ಧ ಅಡಿ ವ್ಯಾಸದ ಫೈಬರ್ ಬೇಸಿನ್ ಅನ್ನು ಕಬ್ಬಿಣದ ರಿಂಗ್ ಮೇಲೆ ಇಡಲಾಗುತ್ತದೆ. ಈ ಕೀಟನಾಶಕ ಯಂತ್ರವು ಒಂದು ಏಕರೆ ವಿಸ್ತೀರ್ಣದ ಪ್ರದೇಶಕ್ಕೆ ಸಾಕಾಗುತ್ತದೆ. ಇದರಲ್ಲಿ ಇದೀಗ ಅಂತರ್ ರಾಷ್ಟೀಯ ಗುಣಮಟ್ಟದ ಎಲ್ ಇಡಿ ಬಲ್ಬ್ಗಳನ್ನು ಬಳಸಲಾಗುತ್ತಿದೆ. ಇದು ಸಂಜೆ ಮಬ್ಬುಗತ್ತಲು ಆವರಿಸಿದ ನಂತರ ಸ್ವಯಂಚಾಲಿತವಾಗಿ ಚಾಲನೆಗೊಳ್ಳುತ್ತದೆ. ಇದರಲ್ಲಿ ಆಧುನಿಕ ಟೈಮರ್ ಅಳವಡಿಕೆಯಾಗಿರುವುದರಿಂದ ಬೆಳಕು ಪಸರಿಸಲು ಆರಂಭವಾದ ಮೂರುವರೆ ಘಂಟೆಗಳ ನಂತರ ಸ್ವಯಂಚಾಲಿತವಾಗಿ ಆರುತ್ತದೆ.
Trap Attracted Incets


ಸಹಸ್ರಾರು ಸಂಖ್ಯೆಯ ಕೀಟಗಳು 

ಇದು ಕಾರ್ಯ ನಿರತವಾಗಿದ್ದ ವೇಳೆಯಲ್ಲಿ ಬೆಳಕಿನ ಕಿರಣಗಳಿಗೆ ಆಕಷರ್ಿತವಾಗುವ ಸಹಸ್ರಾರು ಕೀಟಗಳು ನೀರು ತುಂಬಿದ ಬೇಸನ್ನಲ್ಲಿ ಬಿದ್ದು ಸಾಯುತ್ತವೆ. ನೀರಿಗೆ ಬಿದ್ದ ಸಹಸಾರು ಸಂಖ್ಯೆಯ ಕೀಟಗಳು ಮತ್ತೆ ಹಾರಿಹೋಗಿ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದನ್ನು  ತಪ್ಪಿಸುವ ಸಲುವಾಗಿ ಬೇಸಿನ್ ನಲ್ಲಿ ಹಾಕುವ ನೀರಿಗೆ ಶಾಂಪೂ ಅಥವಾ ಸೋಪಿನ ದ್ರಾವಣ ಅಥವಾ ಒಂದೆರಡು ಹನಿ ಬ್ರಾಂಡಿ ಮಿಶ್ರಣ ಮಾಡಬೇಕು.
ಪ್ರತಿದಿನವೂ ಬೇಸಿನ್ನಲ್ಲಿರುವ ನೀರನ್ನು ಬದಲಾಯಿಸುತ್ತಿರಬೇಕು.  ಇದು ಉತ್ತಮಗುಣಮಟ್ಟದ ಸೋಲಾರ್ ಪ್ಯಾನಲ್,  ವಿದೇಶದಿಂದ ಆಮದು ಮಾಡಿಕೊಳ್ಳಲಾದ ಬಲ್ಬ್ಗಳು 25 ಸಾವಿರ ಘಂಟೆ ಉರಿಯಬಲ್ಲವು. .  ಇದು ಸಂಪೂರ್ಣವಾಗಿ ನೀರು ನಿರೋಧಕವಾಗಿದೆ. ಇದನ್ನು ಒಮ್ಮೆ ಅಳವಡಿಸಿದ್ದಲ್ಲಿ ನಿರಂತರವಾಗಿ 6 ವರ್ಷ ಬಳಸಬಹುದು. ಸೋಲಾರ್  ಪ್ಯಾನಲ್ 10ವರ್ಷ, ಬ್ಯಾಟರಿ 3 ವರ್ಷ ಬಾಳಿಕೆ ಬರುವುದು. ಈ ಕೀಟನಾಶಕ ಬಳಕೆಯಿಂದ ಹಲವಾರು ಕೃಷಿಕರ ಬದುಕಿನ ಚಿತ್ರಣವೇ ಬದಲಾಗಿದೆ. ಕೀಟನಾಶಕ ಸಿಂಪಡಣೆಯ ಬಳಕೆಯು ತೀರಾ ಕಡಿಮೆಯಾಗಿದೆ. ಇಲ್ಲಿ ಸತ್ತು ಬಿದ್ದ ಕೀಟಗಳು ಸಾಕು ಪ್ರಾಣಿಗಳಾದ ಕೋಳಿ ಮತ್ತು ಮೀನುಗಳ ಆಹಾರವಾಗಿ ಬಳಕೆಯಾಗುತ್ತಿದೆ. 



ವಿವಿಧ ಬೆಳೆಗಳಿಗೆ ಪ್ರಯೋಜನಕಾರಿ

ಸೋಲಾರ್ ಕೀಟನಾಶಕವು ಅಡಿಕೆ, ತೆಂಗು, ಬಾಳೆ, ಭತ್ತ, ಜೋಳ, ರಾಗಿ, ಹಲವಾರು ವಿಧದ ಹೂವಿನ ಮತ್ತು ತರಕಾರಿ, ಹಣ್ಣಿನ ಬೆಳೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ರಾಜ್ಯದ ವಿವಿಧೆಡೆಗಳ ರೈತಾಪಿ ವರ್ಗದವರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅವುಗಳನ್ನು ತಮ್ಮ ಹೊಲ- ಗದ್ದೆಗಳಲ್ಲಿ ಸ್ಥಾಪಿಸಿದ್ದಾರೆ. ಸಣ್ಣ ಮೊತ್ತದಲ್ಲಿ ಅವರ ಬೆಳೆಗಳನ್ನು ಕಾಡುತ್ತಿದ್ದ  ಕೀಟಗಳು ನಿಯಂತ್ರಣವಾಗಿರುವುದರಿಂದ ರೈತಾಪಿ ವರ್ಗದವರ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ. ಈ ಕೀಟನಾಶಕಕ್ಕೆ ಆಂಧ್ರ, ತಮಿಳುನಾಡು, ತೆಲಂಗಾಣ, ಮಹರಾಷ್ಟ್ರ, ಗುಜರಾತ್ ಮುಂತಾದೆಡೆಗಳಿಂದ ಬೇಡಿಕೆಯು ಬರುತ್ತಿದೆ.
ಅಡಿಕೆ ಬೆಳೆಗೆ ಕಾಡುತ್ತಿರುವ ಬೇರು ತಿನ್ನುವ ಹುಳಗಳು, ಕಾಯಿಗಳ ರಸಹೀರುವ ಕೀಟಗಳ ನಿಯಂತ್ರಣಕ್ಕಾಗಿ ಹಲವರು ಇದನ್ನು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಪುತ್ತೂರು, ಸುಳ್ಯ, ತೀರ್ಥಹಳ್ಳಿ, ಕುಂದಾಪುರ, ಉಡುಪಿ ಮುಂತಾದ ಪ್ರದೇಶದ ಬೆಳೆಗಾರರು ಇದರಲ್ಲಿ ಸೇರಿದ್ದಾರೆ. 



ಕೃಷಿ ಇಲಾಖೆಯ ಸಾಥ್ 

ರೈತರ ಸಹಾಯಕ್ಕೆ  ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ  ಕೃಷಿ  ಇಲಾಖೆಯೂ ಸಾಥ್ ನೀಡಿದೆ. ಇಲಾಖೆಯ  ಆತ್ಮ  ಯೋಜನೆಯ ಮೂಲಕ ಕೃಷಿಕರಿಗೆ ಸಹಾಯಧನದ ಮೂಲಕ ಈ ಯಂತ್ರವನ್ನು ವಿತರಿಸುತ್ತಿದೆ. ಸೋಲಾರ್ ಕೀಟ ನಾಶಕವು ಸುಮಾರು 185 ಬೆಳೆಗಳನ್ನು ಕಾಡುವ ಕಾಯಿ  ಮತ್ತು  ಕಾಂಡ ಕೊರಕಗಳನ್ನು ನಿಯಂತ್ರಣ ಮಾಡಲಿದೆ ಎಂದು ಬಿಜಾಪುರದ ತೋಟಗಾರಿಕಾ ಇಲಾಖಾ ಅಧಿಕಾರಿ ಸಿ. ಬಿ. ಪಾಟೀಲ್ ಅಭಿಪ್ರಾಯಿಸಿದ್ದಾರೆ. 

ಆಸಕ್ತರು ಅಧಿಕ ಮಾಹಿತಿಗಾಗಿ ಮೊಬೈಲ್ : 9880973218 ಕರಿಬಸಪ್ಪ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ