ಗುರುವಾರ, ಜೂನ್ 7, 2018

ಯೂರಿಯಾದ ಬದಲು ಹಸಿರೆಲೆ ! Insted of Ureya We use Green Leaves.


              

                            ಯೂರಿಯಾ ಬದಲು   ಹಸಿರೆಲೆ ....! 


                         ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು.  

 Please watch and subscribe my Youtube channal: https://www.youtube.com/channel/UCw4dehXSFlG4sS9xYiRkjPA?view_as=subscriber


Pl watch my  these blogs. 

Kodagu Darshini : https://koodanda.blogspot.com/


Kodagu Darshini (Kodagina Antaranga):https://koodagudarshini.blogspot.com/



ಬಹುತೇಕ ಮಂದಿ ಗೊಬ್ಬರ ಬಳಸದೇ ಕೃಷಿ ಸಾಧ್ಯವಿಲ್ಲ   ಎಂದು ಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿ, ಸಾವಿರಾರು ರೂಪಾಯಿ ಪೋಲು ಮಾಡುತ್ತಾರೆ. ಇದರ ಬದಲು ಮಣ್ಣಿನ  ಆರೋಗ್ಯ ಕಾಪಾಡಲು ನಿರಂತರವಾಗಿ ಉತ್ತಮ ಬೆಳೆ ತೆಗೆಯಲು ಹಸಿರೆಲೆ ಗೊಬ್ಬರ ಬಳಸಬಹುದು. ಈ ಬಗ್ಗೆ ಸಂಕ್ಷ ಪ್ತ ವಿವರ  ಇಲ್ಲಿದೆ. 


                                           ಹಾಲುವಾಣದ ಹೂವು 
 ಲಭ್ಯವಿರುವ ಎಲ್ಲಾ ಮೂಲಗಳಿಂದ ಸಂಗ್ರಹಿಸಲಾದ ಎಲೆಗಳಿಂದ ತಯಾರಿಸಿದ ಜೈವಿಕ ಗೊಬ್ಬರಗಳು ಮತ್ತು ಮಣ್ಣಿನ ಅಗತ್ಯ ಸಸ್ಯ ಪೋಷಕಾಂಶಗಳನ್ನು ಪೂರೈಸಲು ಮತ್ತು ಆರೋಗ್ಯಕರ ರೀತಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಬೆಳೆಗಳನ್ನು ಬೆಳೆಸಲು   ಬಳಸುವುದು ಇತ್ತೀಚಿನ ಪರಿಕಲ್ಪನೆ ಅಲ್ಲ .
                                             ಹಾಲುವಾಣದ  ಎಲೆ 
ಶತಮಾನಗಳಿಂದ ಅನೇಕ ದಕ್ಷಿಣ ಏಷ್ಯಾದ ದೇಶಗಳಲ್ಲಿ ಬಳಸಲ್ಪಟ್ಟಿದೆ.  ಹಸಿರೆಲೆ ಗೊಬ್ಬರವನ್ನು ವಿವಿಧ ಮರ, ಗಿಡಮೂಲಿಕೆಗಳು ಮತ್ತು ಪೊದೆಸಸ್ಯಗಳಿಂದ ಹಸಿರು ಎಲೆಗಳು ಮತ್ತು ಕೊಂಬೆಗಳ ಸಮರುವಿಕೆಯನ್ನು ಮತ್ತು ಸಂಗ್ರಹಣೆ ಎಂದು ವ್ಯಾಖ್ಯಾನಿಸಬಹುದು. ಅವುಗಳನ್ನು ಬೇರೆಡೆ ರಸಗೊಬ್ಬರಗಳಾಗಿ ಆಯಾ   ಪ್ರದೇಶಗಳಲ್ಲಿ ಬೆಳೆಯುವ ಗಿಡಮೂಲಿಕೆಗಳು ಮತ್ತು ಪೊದೆಗಳು ಇತ್ಯಾದಿ.  ಎಲೆಯ ಗೊಬ್ಬರವನ್ನು ಬಳಸುವುದು ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ  ಹೆಚ್ಚಾಗಿ ಕಂಡುಬರುತ್ತದೆ.


                                                ಆಡುಸೋಗೆ ಗಿಡ 

 ಹಸಿರೆಲೆ ಗೊಬ್ಬರ ಏಕೆ  ?

ರಾಸಾಯನಿಕ ಗೊಬ್ಬರಗಳನ್ನು ಸಸ್ಯ ಬೆಳವಣಿಗೆಯ  ಪೋಷಕಾಂಶವಾಗಿ ಬಳಸುವುದು ಮಣ್ಣಿನ ಚಿಕಿತ್ಸೆಗೆ ಉತ್ತಮವಾದ ಮಾರ್ಗವಲ್ಲ. ವಿಶ್ವದಾದ್ಯಂತ, ವಿಶೇಷವಾಗಿ ಮೂರನೇ ವಿಶ್ವ ರಾಷ್ಟ್ರಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿವೆ.  ಬೃಹತ್ ಜಾಗತಿಕ ಜನಸಂಖ್ಯೆಯ ಹೆಚ್ಚುವರಿ ಆಹಾರ ಅವಶ್ಯಕತೆಗಳನ್ನು  ಪೂರೈಸಲು ಇದನ್ನು ಬಳಸಲಾಗುವುದು.

ವಿವಿಧ ರಾಸಾಯನಿಕ ರಸಗೊಬ್ಬರಗಳ ಈ ವಿವೇಚನಾರಹಿತ ಬಳಕೆ ಅನೇಕ ಪರಿಸರ ಮತ್ತು ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ . ಅತ್ಯಂತ ಅಮೂಲ್ಯ ನೈಸರ್ಗಿಕ ಸಂಪನ್ಮೂಲ 'ಮಣ್ಣಿನ' ಶಾಶ್ವತ ಹಾನಿಯನ್ನು ಉಂಟುಮಾಡುತ್ತದೆ. ಈ ಭಯಾನಕ ರಾಸಾಯನಿಕವನ್ನು ಬಳಸದೆ ನಿಯಂತ್ರಿಸದಿದ್ದರೆ, ಒಂದು ನಿರ್ದಿಷ್ಟ ಅವಧಿಯ ನಂತರ ಮಣ್ಣಿನ ಉತ್ಪಾದನೆಯು ಲಭ್ಯವಾಗುವುದಿಲ್ಲ ಎಂದೂ ಹೇಳಲಾಗುತ್ತದೆ.

                                        ಹೊಂಗೆಯ ಗಿಡ ಮತ್ತು ಕಾಯಿ 

ಮುಂಬರುವ ಪೀಳಿಗೆಗೆ ಆರೋಗ್ಯಕರ ಮಣ್ಣಿನ ನಿರ್ವಹಣೆಗಾಗಿ ರಾಸಾಯನಿಕ ವ್ಯವಸ್ಥೆಗಳಿಂದ ಜೈವಿಕ ಗೊಬ್ಬರಗಳಿಗೆ ಕೃಷಿ ವ್ಯವಸ್ಥೆಯನ್ನು ಬದಲಾಯಿಸುವ ಸಮಯವಿದು.
ಹಸಿರು ಎಲೆಗಳ ಗೊಬ್ಬರವು ಉತ್ತಮವಾದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿರುವ ಸಸ್ಯ ಪೋಷಕಾಂಶಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.  
 ಹಸಿರೆಲೆ ಗೊಬ್ಬರವು ರಾಸಾಯನಿಕ ರಸಗೊಬ್ಬರಗಳನ್ನು ಬದಲಿಸಬಹುದು ಮತ್ತು ರಾಸಾಯನಿಕಗಳನ್ನು ತರಲು ಹಲವಾರು ಅಪಾಯಗಳಿಂದ ಜಗತ್ತನ್ನು ರಕ್ಷಿಸಬಹುದು.

ಅನುಕೂಲಗಳು

ರಾಸಾಯನಿಕ ರಸಗೊಬ್ಬರಗಳ ಬದಲಿಗೆ  ಹಸಿರೆಲೆ ಗೊಬ್ಬರಗಳನ್ನು ಬಳಸುವುದರಿಂದ  ಅನೇಕ  ಲಾಭಗಳಿವೆ.
• ಸಸ್ಯಗಳಿಗೆ ಸಮತೋಲಿತ ಪೌಷ್ಟಿಕಾಂಶವನ್ನು ಖಚಿತಪಡಿಸುತ್ತವೆ ಮತ್ತು ಮಣ್ಣಿನ ಫಲವತ್ತತೆಯನ್ನು ಉತ್ತಮ ಮಟ್ಟದಲ್ಲಿ ಸುಧಾರಿಸುತ್ತವೆ.
 ಇವು ನಿಧಾನಗತಿಯ ಬಿಡುಗಡೆ ಗೊಬ್ಬರವಾಗಿದ್ದು, ಅವುಗಳ ಬಳಿಕ ದೀರ್ಘಕಾಲದವರೆಗೆ ಸಸ್ಯ ಪೌಷ್ಟಿಕ ಮೂಲವಾಗಿ ವರ್ತಿಸುತ್ತವೆ.
•  ಹಸಿರೆಲೆ ಗೊಬ್ಬರ ಬಳಸುವುದರಿಂದ ಮಣ್ಣಿನ ರಚನೆಯು ಮಹತ್ತರವಾಗಿ ಸುಧಾರಣೆಯಾಗಲಿದೆ.
                                                        ಬೇವಿನ ಗಿಡ 
•  ಹಸಿರೆಲೆ ಗೊಬ್ಬರವು ವಿವಿಧ ಮಣ್ಣಿನಲ್ಲಿರುವ ಹುಳ – ಹುಪ್ಪಟೆಗಳಿಗೆ ಆಹಾರ ಪದಾರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಮಣ್ಣಿನ ಹುಳುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.
•  ಇವು ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳನ್ನು ಉತ್ಪಾದಿಸುತ್ತವೆ.
•  ಇವುಗಳು ನೀರು ಮತ್ತು ವಾಯುವಿನ  ಗುಣಮಟ್ಟಕ್ಕೆ ಅಪಾಯ ಮಾಡಲಾರವು.
• ಹಸಿರೆಲೆ ಗೊಬ್ಬರವು  ಮಣ್ಣಿನಲ್ಲಿ ವಿವಿಧ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಮಣ್ಣಿನ ಜೀವವೈವಿಧ್ಯತೆಯನ್ನು ಸುಧಾರಿಸುತ್ತದೆ.
• ಲವಣಯುಕ್ತ ಮಣ್ಣಿಗೆ ಮರು ಜೀವ ಪಡೆಯಲು  ಇವು  ಉಪಯುಕ್ತವಾಗಿವೆ.
•  ಹಸಿರೆಲೆಯಾಗಿ ಬಳಸಿದ ಮರಗಳ  ಕಾಂಡಗಳನ್ನು  ಇಂಧನವಾಗಿ ಬಳಸಲಾಗುತ್ತದೆ.
•  ಇದರ ಬಳಕೆ  ತೀರಾ ಸುಲಭ, ಸರಳ  ಅಗ್ಗವೂ ಹೌದು.

ಇದು ಸವೆತದಿಂದಾಗಿ ಮಣ್ಣಿನ ನಷ್ಟವನ್ನು ಕಡಿಮೆ ಮಾಡುತ್ತದೆ.
ಹಸಿರು ಗೊಬ್ಬರ ಬೆಳೆಗಳನ್ನು ಬೆಳೆಯುವುದರಿಂದ  ಕಳೆ ಬೆಳವಣಿಗೆ ಮತ್ತು ಅವುಗಳ ಪ್ರಸರಣವನ್ನು ಕಡಿಮೆ . ಇದು ಬೆಳೆಗಳಿಗೆ ಬೇಕಾದ  ಸಮತೋಲಿತ ಪೌಷ್ಟಿಕಾಂಶವನ್ನು ನೀಡುತ್ತವೆ


                                            ಗ್ಲಿರೀಸಿಡಿಯಾ ಗಿಡ 

ಮಣ್ಣಿನಲ್ಲಿ ಹಸಿರು ಗೊಬ್ಬರವನ್ನು ಸೇರಿಸುವ ಸಾವಯವ ರೈತರು ಸಾರಜನಕ, ಪೊಟ್ಯಾಸಿಯಮ್, ಫಾಸ್ಪರಸ್ ಮತ್ತು ಮಣ್ಣಿನ ಖನಿಜಗಳಂತಹ ಅಗತ್ಯ ಪೋಷಕಾಂಶಗಳ ಪೂರೈಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಹಸಿರು ಗೊಬ್ಬರಗಳು ಈ ಸಸ್ಯ ಪೋಷಕಾಂಶಗಳನ್ನು ಮಣ್ಣಿನಲ್ಲಿ ಸ್ವಯಂಚಾಲಿತವಾಗಿ ಬಿಡುಗಡೆ ಮಾಡುತ್ತವೆ.

                                           ಗ್ಲಿರೀಸಿಡಿಯಾ ಗಿಡ 

ಹಸಿರು ಎಲೆಯ ಗೊಬ್ಬರವನ್ನು ಉತ್ಪಾದಿಸಲು ಹಲವಾರು ಮರಗಳು ಮತ್ತು ಸಸ್ಯಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ   ಆಡುಸೋಗೆ,  ಹಾಲುವಾಣ ( ಪಾಲುವಾಣ ) ( ಹೊಂಗಾರೆ, ಪೊಂಗರೆ )  ಗ್ಲಿರಿಸಿಡಿಯಾ,  ಹೊಂಗೆ , ಸುಬಾಬುಲ್,  ಬೇವು ವೆಲ್ವೇಟ್ ಬೀನ್ಸ್  ಮತ್ತು  ಕಳೆ ಸಸ್ಯಗಳಾದ ಪಾರ್ಥೆನಿಯಮ್ , ಲಂಟಾನಾ ......... ವ್ಯಾಪಕವಾಗಿ ಬಳಸಲಾಗುತ್ತದೆ. ಕೃಷಿ ಭೂಮಿಯಲ್ಲಿ ಸೆಣಬು, ಡಯಾಂಚ, ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆದು ಅದನ್ನು ಮಣ್ಣಿಗೆ ನೇರವಾಗಿ ಸೇರಿಸಬಹುದಾಗಿದೆ. ಇದನ್ನು ಕೊಳೆಯಿಸುವ ಅವಶ್ಯಕತೆ ಇಲ್ಲ. ಸೊಪ್ಪನ್ನು ನೇರವಾಗಿ ಜಮೀನಿನಲ್ಲಿ ಹರಡಿದರೆ ಸಾಕು. ಮಳೆಗಾಲ ಅರಂಭಕ್ಕೆ ಮುನ್ನಾ ಈ ಕಾರ್ಯ ಮಾಡುವುದು ಉತ್ತಮ.

ವಿವಿಧ ಮರಗಳು ಮತ್ತು ಸಸ್ಯಗಳನ್ನು  ಜೀವಂತ  ಬೇಲಿಗಳು ಅಥವಾ ಬಂಜರು ಭೂಮಿಯಲ್ಲಿ  ಮರ ಗಿಡಗಳನ್ನು ಬೆಳೆಸಿ ಬಳಸಬಹುದು.
ಮಣ್ಣಿನಿಂದ ಹಸಿರು ಎಲೆಯ ಗೊಬ್ಬರಗಳ ಬಳಕೆಯು ಮಣ್ಣಿನ ತೇವಾಂಶವನ್ನು ಅವಲಂಬಿಸಿರುತ್ತದೆ. ಮಣ್ಣಿನಲ್ಲಿ ಈ ಗೊಬ್ಬರ ಬಳಸಲು ಸಾಕಷ್ಟು ತೇವಾಂಶವು ಅಗತ್ಯ.



 ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಲಾಗ್ ಇನ್ ಆಗಿ. 


https://koodagudarshini.blogspot.com/2018/03/blog-post_24.html



---------------------------------------------------------





ಬುಧವಾರ, ಜೂನ್ 6, 2018

ಬೆಳೆಗಳಲ್ಲಿ ಮುಂಜಾಗರೂಕತೆ - ಸಲಹೆ

                  ಬೆಳೆಗಳಲ್ಲಿ ಮುಂಜಾಗರೂಕತೆ  - ಸಲಹೆ


ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಇನ್ನೇನು ಪ್ರಾರಂಭವಾಗಲಿದ್ದು, ರೈತರು ತಮ್ಮ ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಸಂಧರ್ಭದಲ್ಲಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ರೈತರಿಗೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮಗಳನ್ನು ಸೂಚಿಸಿದ್ದಾರೆ.


                                               ಭತ್ತ



ರೋಗ ರಹಿತ ಬಿತ್ತನೆ ಬೀಜಗಳನ್ನು ಮಾತ್ರ ನಾಟಿಗೆ ಉಪಯೋಗಿಸಬೇಕು ಮತ್ತು ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರವನ್ನು ಉಪಯೋಗಿಸಬೇಕು
ಪ್ರತೀ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 4 ಗ್ರಾಂ ಕಾಬರ್ೆಂಡೆಜಿಮ್ (ಬ್ಯಾವಿಸ್ಟೀನ್) ಅಥವಾ ಕಾಬರ್ೆಂಡೆಜಿಮ್ + ಮ್ಯಾಂಕೋಜೆಬ್ (ಸಾಫé್ 2 ಗ್ರಾಂ) ಎಂಬ ಶಿಲೀಂದ್ರನಾಶಕದಿಂದ ಕಡ್ಡ್ದಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆಗೆ ಉಪಯೋಗಿಸಬೇಕು.
ಬೀಜದ ಆಯ್ಕೆ ಮತ್ತು ಬೀಜೋಪಚಾರ
ಪ್ರತೀ ಎಕರೆಗೆ ಶಿಫéಾರಸ್ಸು ಮಾಡಿದ 25-30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೂಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು.
ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2-3 ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು 8-12 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಬೇಕು.
ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25-30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾಬರ್ೆಂಡೆಜಿಮ್ (ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂದ್ರನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು.
ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು.
ದೀಘರ್ಾವಧಿ ತಳಿಗಳ ನಾಟಿಯನ್ನು ಜುಲೈ ತಿಂಗಳ ಎರಡನೆ ವಾರದೊಳಗೆ ಕಡ್ಡಾಯವಾಗಿ ಮಾಡಲೇಬೇಕು. ದೀಘರ್ಾವಧಿ ತಳಿಗಳನ್ನು ತಡವಾಗಿ ನಾಟಿಮಾಡಿದರೆ ಬೆಂಕಿ ರೋಗದ ಭಾದೆ ತೀವ್ರವಾಗುತ್ತದೆ.
ಸಸಿಯನ್ನು ನಾಟಿ ಮಾಡುವುದಕ್ಕಿಂತ ಮುಂಚಿತವಾಗಿ ಸಸಿ ಮಡಿಯ ಪೈರುಗಳ ತುದಿ ಭಾಗವನ್ನು ಕತ್ತರಿಸಿ ನಂತರ ನಾಟಿಗೆ ಉಪಯೋಗಿಸಬೇಕು. ಇದರಿಂದ ಕಾಂಡಕೊರೆಯುವ ಹುಳುವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಶಿಫéಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಎಕರೆಗೆ 65 ಕೆ.ಜಿ ಯೂರಿಯ, 150 ಕೆ.ಜಿ ಶಿಲಾರಂಜಕ ಮತ್ತು 60 ಕೆ.ಜಿ ಮ್ಯೂರೇಟ್ ಆಪ್ ಪೋಟ್ಯಾಷ್ ಮಾತ್ರ ಕೊಡಬೇಕು.  ಶಿಫéಾರಸ್ಸಿಗಿಂತ ಹೆಚ್ಚಿನ ಪ್ರಮಾಣದ ಯೂರಿಯವನ್ನು ಕೊಡಬಾರದು. ಶಿಫéಾರಸ್ಸಿಗಿಂತ ಹೆಚ್ಚಿನ ಪ್ರಮಾಣದ ಯೂರಿಯವನ್ನು ಕೊಟ್ಟರೆ ಬೆಂಕಿ ರೋಗ ಬರುವ ಸಂಭವವುಂಟು. ಶಿಫಾರಸ್ಸಿನ 1/3 ಭಾಗ ಯೂರಿಯ, ಪೂತರ್ಿ ಶಿಲಾರಂಜಕ ಮತ್ತು ಅರ್ಧ ಭಾಗ ಪೊಟ್ಯಾಷನ್ನು ನಾಟಿ ಸಮಯದಲ್ಲಿ ಭೂಮಿಗೆ ಸೇರಿಸಬೇಕು. ನಾಟಿ ಮಾಡಿದ 30 ದಿನಗಳ ಮತ್ತೊಮ್ಮೆ ಯೂರಿಯ ಹಾಗೂ ಪೊಟ್ಯಾಷ್ ಗೊಬ್ಬರವನ್ನು ಕೊಡಬೇಕು.
ನಾಟಿಗೆ 21 ರಿಂದ 28 ದಿನಗಳ ಸಸಿಗಳನ್ನೆ ಉಪಯೋಗಿಸಬೇಕು. 
ಪ್ರತೀ ಮೂರು ಬೆಳೆಗೆ ಒಂದು ಸಾರಿಯಂತೆ ಎಕರೆಗೆ 8 ಕೆ.ಜಿ. ಸತುವಿನ ಸಲ್ಫೇಟನ್ನು 25 ಕೆ.ಜಿ ಮರಳಿನ ಜೊತೆಯಲ್ಲಿ ಮಿಶ್ರಣಮಾಡಿ ನಾಟಿ ಮಾಡುವ ಸಂದರ್ಭದಲ್ಲಿ ಮಣ್ಣಿಗೆ ಸೇರಿಸಬೇಕು ಮತ್ತು 2.0 ಕೆ.ಜಿ ಬೋರಾಕ್ಸ್ನ್ನು 5 ಕೆ.ಜಿ ಕೊಟ್ಟಿಗೆ ಗೊಬ್ಬರದ ಜೊತೆಯಲ್ಲಿ ಮಿಶ್ರಣಮಾಡಿ ನಾಟಿಗೆ ಮುನ್ನ, ಇತರೆ ರಸಗೊಬ್ಬರಗಳ ಜೊತೆ ಬೆರೆಸದಂತೆ ಪ್ರತ್ಯೇಕವಾಗಿ ಮಣ್ಣಿಗೆ ಸೇರಿಸಿ. ಇದರಿಂದ ಭತ್ತದಲ್ಲಿ ಜಳ್ಳಿನ ಪ್ರಮಾಣ ಕಡಿಮೆಯಾಗುತ್ತದೆ.


                                             ಕಾಳುಮೆಣಸು



ಚಿಬ್ಬು ರೋಗವನ್ನು ಹತೋಟಿ ಮಾಡಲು 1 ಗ್ರಾಂ ಕಾಬರ್ೆಂಡೆಜಿಮ್ನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು.
ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು.
ಪ್ರತೀ ಬಳ್ಳಿಗೆ 50 ರಿಂದ 60 ಗ್ರಾಂ ಟ್ರೈಕೋಡರ್ಮ ಎಂಬ ಜೈವಿಕ ಶಿಲೀಂದ್ರವನ್ನು 1 ಕೆ.ಜಿ ಬೇವಿನ ಹಿಂಡಿ ಅಥವಾ 5 ಕೆ.ಜಿ ಕೊಟ್ಟಿಗೆ ಗೊಬ್ಬರದಲ್ಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು ಅಥವಾ 4 ಕೆ.ಜಿ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹ ಮತ್ತು ಅರ್ಧ ಕೆ.ಜಿ ಬೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್ನಷ್ಟು) ಸುರಿಯಬೇಕು.
ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿಯ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು.
ಮುನ್ನೆಚ್ಚರಿಕೆಯಾಗಿ ಮುಂಗಾರಿಗೆ ಮುನ್ನ ಬಳ್ಳಿ, ಎಲೆ ಮತ್ತು ಕಾಂಡ ಪೂರ್ಣ ತೊಯ್ಯುವಂತೆ ಶೇ. 1 ರ ಬೋಡರ್ೊ ದ್ರಾವಣವನ್ನು ಸಿಂಪರಣೆ ಮಾಡಬೇಕು.
ಟ್ರೈಕೋಡರ್ಮ ಅಥವಾ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬುಡಕ್ಕೆ ಹಾಕದಿದ್ದರೆ ಪ್ರತಿ ಬಳ್ಳಿಗೆ 3 ರಿಂದ 5 ಲೀಟರ್ ಕಾಪರ್ ಆಕ್ಸಿಕ್ಲೋರೈಡ್ (ಬ್ಯಾರಲ್ಗೆ 500 ಗ್ರಾಂ) ದ್ರಾವಣದಿಂದ ಬಳ್ಳಿಯ ಬುಡದ ಭಾಗವನ್ನು ನೆನೆಸಬೇಕು ಮತ್ತು ಶೇ. 1 ರ ಬೋಡರ್ೊ ದ್ರಾವಣ ಅಥವಾ 3.0 ಮಿ. ಲಿ. ಪೊಟ್ಯಾಸಿಯಂ ಪಾಸ್ಪೋನೇಟ್ನ್ನು ಪ್ರತಿ ಲೀಟರ್ ನೀರಿಗೆ ಬೆರಸಿದ ದ್ರಾವಣವನ್ನು ಎಲೆಗಳಿಗೆ ಸಿಂಪರಣೆೆ ಮಾಡಬೇಕು.
ಶಿಫéಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಗಿಡಕ್ಕೆ 300 ಗ್ರಾಂ ಯೂರಿಯಾ, 275 ಗ್ರಾಂ ಶಿಲಾರಂಜಕ ಮತ್ತು 450 ಗ್ರಾಂ ಎಂ.ಓ.ಪಿನ್ನು ಕೊಡಬೇಕು.ಮೇಲೆ ತಿಳಿಸಿರುವ ಪ್ರಮಾಣದ ಗೊಬ್ಬರವು ಒಂದು ಬಳ್ಳಿಗೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೆ ಕಂತನ್ನು ಜೂನ್ ತಿಂಗಳಿನಲ್ಲಿ ಎರಡನೆ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು.

ನೆಲದ ಮೇಲೆ ಹರಡಿರುವ ಹಾಗೂ ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿಗೆ ಮುನ್ನ ಕತ್ತರಿಸಿ ತೆಗೆಯಬೇಕು. ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆ ಕಟ್ಟಿ ಬೆಳೆಯಲು ಬೀಡಬೇಕು.ಕತ್ತರಿಸಿದ ಭಾಗಕ್ಕೆ ಕಾಪರ್ ಆಕ್ಸಿಕ್ಲೋರೈಡ್ ಪೇಸ್ಟನಿಂದ ಲೇಪನ ಮಾಡಬೇಕು.
ಕಾಫéಿ ಮತ್ತು ಅಡಿಕೆ ತೋಟಗಳಲ್ಲಿ ಒಂದಕ್ಕಿಂತ ಹೆಚ್ಚು ತಳಿಗಳಿರುವಂತೆ ಕಾಳುಮೆಣಸು ಬಳ್ಳಿಗಳನ್ನು ನಾಟಿ ಮಾಡಬೇಕು.ಬಳ್ಳಿಯ ಗಾತ್ರ ಹೆಚ್ಚಿಸಲು 5-8 ಬಳ್ಳಿಗಳನ್ನು ನಾಟಿಮಾಡುವುದು
ಜಂತುಹುಳುಗಳ ಬಾಧೆಯನ್ನು ತಪ್ಪಿಸಲು (ನಿಧಾನ ಸೊರಗು ರೋಗ) ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ಪ್ರತೀ ಬಳ್ಳಿಗೆ 1 ಕಿ. ಗ್ರಾಂ ಬೇವಿನ ಹಿಂಡಿ ಮತ್ತು  10 ಗ್ರಾಂ ಪೋರೆಟ್ ಹರಳುಗಳನ್ನು ಗಿಡದ ಬುಡಕ್ಕೆ ಹಾಕಬೇಕು.

                                                           ಅಡಿಕೆ


ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ತೋಟದಲ್ಲಿರುವ ರೋಗ ಪೀಡಿತ ಗೊಂಚಲು ಮತ್ತು ಅಡಿಕೆ ಕಾಯಿಗಳನ್ನು ಆರಿಸಿ ತೆಗೆದು ನಾಶಗೊಳಿಸಬೇಕು.
ಕೊಳೆ ರೋಗವನ್ನು ಹತೋಟಿ ಮಾಡಲು ರೈತರು ಶೇ. 1 ರ ಬೋಡರ್ೊ ದ್ರಾವಣವನ್ನು ಸರಿಯಾಗಿ ತಯಾರಿಸಿ ಮೊದಲನೆ ಸಿಂಪರಣೆಯನ್ನು ಜೂನ್ ತಿಂಗಳ ಮೊದಲನೆ ವಾರದೊಳಗೆ ಕಡ್ಡಾಯವಾಗಿ ಸಿಂಪರಣೆ ಮಾಡಲೇಬೇಕು.
ಬೋಡರ್ೊ ದ್ರಾವಣವನ್ನು ಸಿಂಪರಣೆ ಮಾಡುವುದಕ್ಕಿಂತ ಮೊದಲು ಕಡ್ಡಾಯವಾಗಿ ದ್ರಾವಣದ ರಸಸಾರವನ್ನು ಪರೀಕ್ಷಿಸಿ ನಂತರ ಸಿಂಪರಣೆಗೆ ಉಪಯೋಗಿಸಬೇಕು.
ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ನಿಮರ್ಿಸಬೇಕು.
ಅಡಿಕೆ ಕಾಯಿ ಹೊಡೆದು ಬೀಳುವ /ಸೀಳುವ ಸಮಸ್ಯೆ ಇದ್ದಲ್ಲಿ ಪ್ರತಿ ಅಡಿಕೆ ಗಿಡಕ್ಕೆ 25 ರಿಂದ 30 ಗ್ರಾಂ ಬೋರಾಕ್ಸ್ನ್ನು ಕೊಡಬೇಕು.
ಪ್ರತಿ ಮರವೊಂದಕ್ಕೆ ವರ್ಷಕ್ಕೆ 20 ಕಿ. ಗ್ರಾಂ ನಂತೆ ಕೊಟ್ಟಿಗೆ ಗೊಭ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ಕೊಡಬೇಕು.
ಪ್ರತಿ ಗಿಡಕ್ಕೆ 220 ಗ್ರಾಂ ಯೂರಿಯಾ, 200 ಗ್ರಾಂ ಶಿಲಾರಂಜಕ ಮತ್ತು 230 ಗ್ರಾಂ ಎಂ.ಓ.ಪಿನ್ನು ಕೊಡಬೇಕು.ಮೇಲೆ ತಿಳಿಸಿರುವ ಪ್ರಮಾಣದ ಗೊಬ್ಬರವು ಒಂದು ಗಿಡಕ್ಕೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೆ ಕಂತನ್ನು ಜೂನ್ ತಿಂಗಳಿನಲ್ಲಿ ಎರಡನೆ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು.
ಬೇರು ಹುಳುವಿನ ಬಾಧೆಯಿರುವ ಪ್ರದೇಶದಲ್ಲಿ ರೈತರು ಇದರ ಹತೋಟಿ ಕ್ರಮಗಳನ್ನು ಅನುಸರಿಸಲು ಇದು ಸೂಕ್ತ ಸಮಯವಾಗಿರುವುದರಿಂದ ಮೇ ಅಥವಾ ಜೂನ್ ತಿಂಗಳ ಒಳಗೆ ಅಡಿಕೆ ಮರದ ಸುತ್ತಲೂ ಹಗುರವಾಗಿ ಅಗೆತ ಮಾಡಿ ಪ್ರತೀ ಮರಕ್ಕೆ 20 ಗ್ರಾಂ ಪೋರೆಟ್ ಹರಳನ್ನು ಹಾಕಿ ಮಣ್ಣಿನಿಂದ ಮುಚ್ಚಬೇಕು ಅಥವಾ ಕ್ಲೋರೋಪೈರಿಫಾಸ್ 20 ಇ.ಸಿ. (5 ಮಿ.ಲೀ) ಅಥವಾ ಇಮಿಡಾಕ್ಲೋಪ್ರಿಡ್ 200 ಎಸ್. ಎಲ್ (0.5 ಮಿ.ಲೀ) ಎಂಬ ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ ಮಿಶ್ರಣ ಮಾಡಿ ಪ್ರತಿಯೊಂದು ಮರಕ್ಕೆ ಸುಮಾರು 2 ರಿಂದ 3 ಲೀಟರ್ ದ್ರಾವಣವನ್ನು ಮರದ ಬುಡದ ಸುತ್ತಲೂ ಸುರಿಯಬೇಕು.


ಮಾಹಿತಿಗಾಗಿ ಸಂಪಕರ್ಿಸಿ
ಕಾರ್ಯಕ್ರಮ ಸಂಯೋಜಕರು
 ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ
ಗೋಣಿಕೊಪ್ಪಲು, ಕೊಡಗು ಜಿಲ್ಲೆ,   
ದೂರವಾಣಿ: 08274-247274

ಭಾನುವಾರ, ಜೂನ್ 3, 2018

ಕೀಟಗಳ ಸಂಹಾರಿ.... ಕೃಷಿಕನಿಗೆ ಸಹಕಾರಿ....! Solar Insects Trap

           ಕೀಟಗಳ ಸಂಹಾರಿ.... ಕೃಷಿಕನಿಗೆ ಸಹಕಾರಿ....!

                               ರಾಸಾಯನಿಕ ರಹಿತ ಕೀಟ ನಿಯಂತ್ರಣ


ಬರಹ: ಕೂಡಂಡ ರವಿ, ಹೊದ್ದೂರು. ಕೊಡಗು

ಮೊಬೈಲ್ : 9482021202



ಪ್ರಸ್ತುತ ದಿನಗಳಲ್ಲಿ ಬಹುತೇಕ ಎಲ್ಲಾ ಬೆಳೆಗಳನ್ನು ಬೆಳೆಯುವುದೇ ರೈತಾಪಿ ವರ್ಗದವರಿಗೆ ಸವಾಲಿನ ಕೆಲಸವಾಗಿದೆ. ಕೃಷಿ ಹಿಂದಿನಂತೆ ಖುಷಿ  ನೀಡುತ್ತಿಲ್ಲ. ಕೃಷಿಯಲ್ಲಿ ಹತ್ತಾರು ಸವಾಲುಗಳನ್ನು ಬೆಳೆಗಾರರು  ಎದುರಿಸುತ್ತಿದ್ದಾರೆ. ಇವುಗಳಲ್ಲಿ ಬೆಳೆಗಳನ್ನು ಕಾಡುವ ಕೀಟಗಳು ಕೃಷಿಕರನ್ನು ಹೈರಾಣಾಗಿಸಿವೆ. ಇಂತಹ ವಿವಿಧ ಬಗೆಯ ಕೀಟಗಳು ಫಸಲಿನ ಇಳುವರಿ ಗುಣಮಟ್ಟದ ಪ್ರಮಾಣವನ್ನು ಕನಿಷ್ಠ ಪ್ರಮಾಣಕ್ಕಿಳಿಸಿ, ರೈತ ಬಂಧುಗಳಿಗೆ ಆಥರ್ಿಕ ಮತ್ತು ಮಾನಸಿಕ ಆಘಾತವನ್ನು ನೀಡುತ್ತವೆ. 




ರಾಸಾಯನಿಕ ರಹಿತ ಕೀಟ ನಿಯಂತ್ರಣ

ಇಂತಹ ಹಲವು ಸಮಸ್ಯೆಗಳ ಸಂಕೋಲೆಗಳ ನಡುವೆ ಕೃಷಿ ಮಾಡುತ್ತಿದ್ದ ಕೃಷಿಕ ದಾವಣಗೆರೆಯ ಮಲೆಬೆನ್ನೂರಿನ ಕರಿಬಸಪ್ಪ ವಿನೂತನ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಇದರಲ್ಲಿ ರಾಸಾಯನಿಕ ರಹಿತವಾಗಿ ಹಲವಾರು ಬೆಳೆಗಳನ್ನು ಕಾಡುವ ಕೀಟಗಳು ನಿಯಂತ್ರಣಕ್ಕೆ ಬರುತ್ತಿವೆ. ಪರಿಣಾಮ ಬೆಳೆಗಾರರು ಮಾನಸಿಕ, ಆಥರ್ಿಕ ಆಘಾತದಿಂದ ಪಾರಾಗಿ ಮುಗುಳ್ನಗೆ ಬೀರುತ್ತಿದ್ದಾರೆ.
ಮೂಲತಃ ಕೃಷಿಕರಾಗಿದ್ದ ಕರಿಬಸಪ್ಪ  ತಮ್ಮ ದಾಳಿಂಬೆ ತೋಟದಲ್ಲಿ ಬೆಳಕು ಬೀರಲು ಅಳವಡಿಸಿದ್ದ  ಸೋಲಾರ್ ದೀಪವೇ ಕೀಟ ನಿಯಂತ್ರಕ ಅನ್ವೇಷಣೆಗೆ ಪ್ರೇರಪಣೆಯಾಯಿತು. ತೋಟದಲ್ಲಿ  ಅಳವಡಿಸಿದ್ದ ಸೋಲಾರ್ ದೀಪದ ಬೆಳಕಿಗೆ ಸಾವಿರಾರು ವೈವಿಧ್ಯಮಯ ಕೀಟಗಳು ಆಕಷರ್ಿತವಾಗಿ ಪಕ್ಕದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಸಾಯುತ್ತಿದ್ದವು. ಇದೇ ಆಧಾರದಲ್ಲಿ ಕರಿಬಸಪ್ಪ ಅವರು, ವಿನೂತನ  ಸೋಲಾರ್ ಕೀಟನಾಶಕ ಯಂತ್ರ ವನ್ನು ಅನ್ವೇಷಣೆ ಮಾಡಿದರು. ಇದು ಮಾದರಿ ಯಂತ್ರವಾಗಿ ರೂಪುಗೊಳ್ಳಲು 5ವರ್ಷಗಳ ಅಧ್ಯಯನ ನಡೆಸಿದ್ದಾರೆ. 



ಸೋಲಾರ್ ಕೀಟನಾಶಕ ಯಂತ್ರ

ಇದು ಅತ್ಯಂತ ಸರಳ ಯಂತ್ರವಾಗಿದೆ. 5 ಅಡಿಯಷ್ಟು ಎತ್ತರದ ಕಬ್ಬಿಣದ ಗೂಟದ ಮೇಲ್ಭಾಗದಲ್ಲಿ ಮಂದವಾದ ನೀಲಿ ಬೆಳಕು ಬೀರುವ ಸೋಲಾರ್ ದೀಪವನ್ನು ಅಳವಡಿಸಲಾಗುತ್ತದೆ. ದೀಪದ ಕೆಳಭಾಗದಲ್ಲಿ ಅರ್ಧ ಅಡಿ ವ್ಯಾಸದ ಫೈಬರ್ ಬೇಸಿನ್ ಅನ್ನು ಕಬ್ಬಿಣದ ರಿಂಗ್ ಮೇಲೆ ಇಡಲಾಗುತ್ತದೆ. ಈ ಕೀಟನಾಶಕ ಯಂತ್ರವು ಒಂದು ಏಕರೆ ವಿಸ್ತೀರ್ಣದ ಪ್ರದೇಶಕ್ಕೆ ಸಾಕಾಗುತ್ತದೆ. ಇದರಲ್ಲಿ ಇದೀಗ ಅಂತರ್ ರಾಷ್ಟೀಯ ಗುಣಮಟ್ಟದ ಎಲ್ ಇಡಿ ಬಲ್ಬ್ಗಳನ್ನು ಬಳಸಲಾಗುತ್ತಿದೆ. ಇದು ಸಂಜೆ ಮಬ್ಬುಗತ್ತಲು ಆವರಿಸಿದ ನಂತರ ಸ್ವಯಂಚಾಲಿತವಾಗಿ ಚಾಲನೆಗೊಳ್ಳುತ್ತದೆ. ಇದರಲ್ಲಿ ಆಧುನಿಕ ಟೈಮರ್ ಅಳವಡಿಕೆಯಾಗಿರುವುದರಿಂದ ಬೆಳಕು ಪಸರಿಸಲು ಆರಂಭವಾದ ಮೂರುವರೆ ಘಂಟೆಗಳ ನಂತರ ಸ್ವಯಂಚಾಲಿತವಾಗಿ ಆರುತ್ತದೆ.
Trap Attracted Incets


ಸಹಸ್ರಾರು ಸಂಖ್ಯೆಯ ಕೀಟಗಳು 

ಇದು ಕಾರ್ಯ ನಿರತವಾಗಿದ್ದ ವೇಳೆಯಲ್ಲಿ ಬೆಳಕಿನ ಕಿರಣಗಳಿಗೆ ಆಕಷರ್ಿತವಾಗುವ ಸಹಸ್ರಾರು ಕೀಟಗಳು ನೀರು ತುಂಬಿದ ಬೇಸನ್ನಲ್ಲಿ ಬಿದ್ದು ಸಾಯುತ್ತವೆ. ನೀರಿಗೆ ಬಿದ್ದ ಸಹಸಾರು ಸಂಖ್ಯೆಯ ಕೀಟಗಳು ಮತ್ತೆ ಹಾರಿಹೋಗಿ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದನ್ನು  ತಪ್ಪಿಸುವ ಸಲುವಾಗಿ ಬೇಸಿನ್ ನಲ್ಲಿ ಹಾಕುವ ನೀರಿಗೆ ಶಾಂಪೂ ಅಥವಾ ಸೋಪಿನ ದ್ರಾವಣ ಅಥವಾ ಒಂದೆರಡು ಹನಿ ಬ್ರಾಂಡಿ ಮಿಶ್ರಣ ಮಾಡಬೇಕು.
ಪ್ರತಿದಿನವೂ ಬೇಸಿನ್ನಲ್ಲಿರುವ ನೀರನ್ನು ಬದಲಾಯಿಸುತ್ತಿರಬೇಕು.  ಇದು ಉತ್ತಮಗುಣಮಟ್ಟದ ಸೋಲಾರ್ ಪ್ಯಾನಲ್,  ವಿದೇಶದಿಂದ ಆಮದು ಮಾಡಿಕೊಳ್ಳಲಾದ ಬಲ್ಬ್ಗಳು 25 ಸಾವಿರ ಘಂಟೆ ಉರಿಯಬಲ್ಲವು. .  ಇದು ಸಂಪೂರ್ಣವಾಗಿ ನೀರು ನಿರೋಧಕವಾಗಿದೆ. ಇದನ್ನು ಒಮ್ಮೆ ಅಳವಡಿಸಿದ್ದಲ್ಲಿ ನಿರಂತರವಾಗಿ 6 ವರ್ಷ ಬಳಸಬಹುದು. ಸೋಲಾರ್  ಪ್ಯಾನಲ್ 10ವರ್ಷ, ಬ್ಯಾಟರಿ 3 ವರ್ಷ ಬಾಳಿಕೆ ಬರುವುದು. ಈ ಕೀಟನಾಶಕ ಬಳಕೆಯಿಂದ ಹಲವಾರು ಕೃಷಿಕರ ಬದುಕಿನ ಚಿತ್ರಣವೇ ಬದಲಾಗಿದೆ. ಕೀಟನಾಶಕ ಸಿಂಪಡಣೆಯ ಬಳಕೆಯು ತೀರಾ ಕಡಿಮೆಯಾಗಿದೆ. ಇಲ್ಲಿ ಸತ್ತು ಬಿದ್ದ ಕೀಟಗಳು ಸಾಕು ಪ್ರಾಣಿಗಳಾದ ಕೋಳಿ ಮತ್ತು ಮೀನುಗಳ ಆಹಾರವಾಗಿ ಬಳಕೆಯಾಗುತ್ತಿದೆ. 



ವಿವಿಧ ಬೆಳೆಗಳಿಗೆ ಪ್ರಯೋಜನಕಾರಿ

ಸೋಲಾರ್ ಕೀಟನಾಶಕವು ಅಡಿಕೆ, ತೆಂಗು, ಬಾಳೆ, ಭತ್ತ, ಜೋಳ, ರಾಗಿ, ಹಲವಾರು ವಿಧದ ಹೂವಿನ ಮತ್ತು ತರಕಾರಿ, ಹಣ್ಣಿನ ಬೆಳೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ರಾಜ್ಯದ ವಿವಿಧೆಡೆಗಳ ರೈತಾಪಿ ವರ್ಗದವರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅವುಗಳನ್ನು ತಮ್ಮ ಹೊಲ- ಗದ್ದೆಗಳಲ್ಲಿ ಸ್ಥಾಪಿಸಿದ್ದಾರೆ. ಸಣ್ಣ ಮೊತ್ತದಲ್ಲಿ ಅವರ ಬೆಳೆಗಳನ್ನು ಕಾಡುತ್ತಿದ್ದ  ಕೀಟಗಳು ನಿಯಂತ್ರಣವಾಗಿರುವುದರಿಂದ ರೈತಾಪಿ ವರ್ಗದವರ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ. ಈ ಕೀಟನಾಶಕಕ್ಕೆ ಆಂಧ್ರ, ತಮಿಳುನಾಡು, ತೆಲಂಗಾಣ, ಮಹರಾಷ್ಟ್ರ, ಗುಜರಾತ್ ಮುಂತಾದೆಡೆಗಳಿಂದ ಬೇಡಿಕೆಯು ಬರುತ್ತಿದೆ.
ಅಡಿಕೆ ಬೆಳೆಗೆ ಕಾಡುತ್ತಿರುವ ಬೇರು ತಿನ್ನುವ ಹುಳಗಳು, ಕಾಯಿಗಳ ರಸಹೀರುವ ಕೀಟಗಳ ನಿಯಂತ್ರಣಕ್ಕಾಗಿ ಹಲವರು ಇದನ್ನು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಪುತ್ತೂರು, ಸುಳ್ಯ, ತೀರ್ಥಹಳ್ಳಿ, ಕುಂದಾಪುರ, ಉಡುಪಿ ಮುಂತಾದ ಪ್ರದೇಶದ ಬೆಳೆಗಾರರು ಇದರಲ್ಲಿ ಸೇರಿದ್ದಾರೆ. 



ಕೃಷಿ ಇಲಾಖೆಯ ಸಾಥ್ 

ರೈತರ ಸಹಾಯಕ್ಕೆ  ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ  ಕೃಷಿ  ಇಲಾಖೆಯೂ ಸಾಥ್ ನೀಡಿದೆ. ಇಲಾಖೆಯ  ಆತ್ಮ  ಯೋಜನೆಯ ಮೂಲಕ ಕೃಷಿಕರಿಗೆ ಸಹಾಯಧನದ ಮೂಲಕ ಈ ಯಂತ್ರವನ್ನು ವಿತರಿಸುತ್ತಿದೆ. ಸೋಲಾರ್ ಕೀಟ ನಾಶಕವು ಸುಮಾರು 185 ಬೆಳೆಗಳನ್ನು ಕಾಡುವ ಕಾಯಿ  ಮತ್ತು  ಕಾಂಡ ಕೊರಕಗಳನ್ನು ನಿಯಂತ್ರಣ ಮಾಡಲಿದೆ ಎಂದು ಬಿಜಾಪುರದ ತೋಟಗಾರಿಕಾ ಇಲಾಖಾ ಅಧಿಕಾರಿ ಸಿ. ಬಿ. ಪಾಟೀಲ್ ಅಭಿಪ್ರಾಯಿಸಿದ್ದಾರೆ. 

ಆಸಕ್ತರು ಅಧಿಕ ಮಾಹಿತಿಗಾಗಿ ಮೊಬೈಲ್ : 9880973218 ಕರಿಬಸಪ್ಪ.