ಬುಧವಾರ, ಏಪ್ರಿಲ್ 26, 2017

Bhoothada kola in Kodagu

Kodagu - Beerale bhothada kola

Chamundi Festival, Hoddur, Kodagu- 2017

Pudiyodi Thyam (Bhoothada kola ) In KODAGU.

Historical God Pudiyodi festival (DANCE)

ಬುಧವಾರ, ಮಾರ್ಚ್ 1, 2017

ಗಾಲಿಗಳ ಮೇಲೆ ಚಿನ್ನದ ರಥ-

                             'ಗೋಲ್ಡನ್ ಚಾರಿಯೇಟ್' 

                                            ಬರಹ- ಕೂಡಂಡ ರವಿ



ನಾವು ಸರ್ವೆ ಸಾಮಾನ್ಯ ರೈಲುಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಹಲವಾರು ಮಂದಿ ರೈಲಿನಲ್ಲಿ ಪ್ರಯಾಣ ಮಾಡಿರುತ್ತೇವೆ. ಬಹುಶ್ಯ ಕೊಡಗಿನ ಬಹುತೇಕ ಮಂದಿಗೆ ಇನ್ನೂ ರೈಲು ಪ್ರಯಾಣ ಗಗನ ಕುಸುಮವೇ ಸರಿ. ನಾವು ಮಡಿಕೇರಿ ರಾಜಾಸೀಟ್ ಬಳಿಯ ಪುಟಾಣಿ ರೈಲಿನಲ್ಲಿ ಮಕ್ಕಳೊಡನೆ ಮಕ್ಕಳಾಗಿ ಒಂದೆರಡು ಸುತ್ತು ಸಾಗಿದ್ದೆ- ಸಾಗಿದ್ದು.  ಮಡಿಕೇರಿ ಆಕಾಶವಾಣಿಯಲ್ಲಿ  ಶೋತೃಗಳ ಮನೆಗೆ ಮನಕ್ಕೆ ಲಗ್ಗೆಯಿಡುವ ಮತ್ತೊಂದು ವಿಶಿಷ್ಟವಾದ ರೈಲಿದೆ. ಅದೇ ರೀತಿ ವಿಭಿನ್ನವಾದ ಮತ್ತೊಂದು ರೈಲಿದೆ. ಅದೇ ಗೋಲ್ಡನ್ ಚಾರಿಯೇಟ್ !



ಐಷಾರಾಮಿ ರೈಲು
ಈ ವಿಶಿಷ್ಟಮಯ ರೈಲು ಕರ್ನಾಟಕ -ಗೋವಾ, ಸಂಪರ್ಕಿಸುತ್ತದೆ. . ರೈಲು ಕನ್ನೇರಳೆ ಮತ್ತು ಬಂಗಾರದ ಬಣ್ಣದಿಂದ ಕೂಡಿದೆ. ಇದು ಆನೆಯ ತಲೆ ಸಿಂಹದ ಶರೀರ ಹೊಂದಿರುವ ಅಪೂರ್ವ ಲಾಂಛನವನ್ನು ಹೊಂದಿದೆ. ಅತ್ಯಂತ ಉತ್ಕೃಷ್ಟ ಗುಣಮಟ್ಟದ ಅರಮನೆ ಸಾಲುಗಳ ಸುಂದರ ವಸತಿ, ವಿಶಿಷ್ಟಮಯ ಚಿಕಿತ್ಸಾ ಸೌಲಭ್ಯಗಳು, ಜೊತೆಗೆ ಊಟೋಪಚಾರವನ್ನೂ ಕೂಡ ಹಳಿಯ ಮೇಲೆ
ಇದು ತನ್ನ ವಿಭಿನ್ನತೆಯಿಂದಾಗಿ ಏಷ್ಯಾದಲ್ಲಿಯೇ ಪ್ರಮುಖ ಐಷಾರಾಮಿ ರೈಲು ಎಂಬ ಕೀತರ್ಿಗೆ ಭಾಜನವಾಗಿದೆ.ಇದು ಕನರ್ಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಮತ್ತು ಮ್ಯಾಪಲ್ ಸಮೂಹ ಸಂಸ್ಥೆಗಳು ಸೇರಿ ನಿರ್ವಹಿಸುತ್ತಿವೆ
.



ವೈಶಿಷ್ಟ್ಯಮಯ ಹೆಸರುಗಳು
ಈ ರೈಲಿನಲ್ಲಿ ಕೇವಲ 11 ಬೋಗಿಗಳು ಮಾತ್ರ ಇವೆ. ಇವುಗಳಿಗೆ ಕನರ್ಾಟಕವನ್ನು ಪುರಾತನ ಕಾದಲ್ಲಿ ಆಳಿ-ಅಳಿದ ರಾಜಮನೆತನಗಳಾದ ಕದಂಬ, ಹೊಯ್ಸಳ, ರಾಷ್ಟ್ರಕೂಟ, ಗಂಗಾ, ಚಾಲುಕ್ಯ, ಬಹಮನಿ, ಸಂಗಮು, ಶಾತವಾಹನ, ಯದುಕುಲ ಮತ್ತು ವಿಜಯನಗರ ಎಂಬ ಹೆಸರನ್ನಿಡಲಾಗಿದೆ. ಇದರಲ್ಲಿ ಬರೇ 44 ಕೋಣೆಗಳು ಮಾತ್ರ ಇವೆ.
ರೈಲಿನಲ್ಲಿ ಎರಡು ಹೊಟೇಲ್ಗಳು, ಲೌಂಜ್ ಬಾರ್, ಸಭಾಂಗಣ, ಜಿಮ್ ಮತ್ತು ಸ್ಪಾ ಸೌಲಭ್ಯಗಳನ್ನು ಒಳಗೊಂಡಿದೆ. ರೈಲಿನ ಪ್ರಯಾಣಿಕರಿಗೆ ಅಂತರ್ಜಾಲ, ಉಪಗ್ರಹ ಆಧಾರಿತ ಮೊಬೈಲ್ ಸೇವೆ, ಟಿವಿ ಸೇವೆಗಳು ಲಭ್ಯವಿದೆ.
ಇದು ಅತ್ಯಂತ ಅಪೂರ್ವ ಸೌಂದರ್ಯದ ಒಳಾಂಗಣವನ್ನು ಹೊಂದಿದೆ. ಈ ರೈಲು ಕರ್ನಾಟಕದ  ಪ್ರಾಗೈತಿಹಾಸಿಕ ಸ್ಥಳಗಳು ಸೇರಿದಂತೆ ಕಬಿನಿ, ಮೈಸೂರು, ಬೇಲೂರು, ಹಳೆಬೀಡು, ಹಂಪೆ, ಐಹೊಳೆ ಪಟ್ಟದ ಕಲ್ಲು, ಬಾದಾಮಿ, ಗೋವಾ, ಬೆಂಗಳೂರಿನವರೆಗೆ ಪಯಣ.


ಇದರಲ್ಲಿ ಕೊಡಗಿನ ಸಾಂಪ್ರಾದಾಯಿಕ ಉಡುಪು(ಕುಪ್ಯಚೇಲೆ) ಯನ್ನು ಹೋಲುವ ಧಿರಸು ತೊಟ್ಟ ಸೇವಕರು ತಮ್ಮ ಸೇವೆ ಮಾಡಲು ಸಿದ್ಧರಿರುತ್ತಾರೆ.



ಇದರಲ್ಲಿ ಬಹುತೇಕವಾಗಿ ವಿದೇಶಿ ಪ್ರವಾಸಿಗರು ಪ್ರಯಾಣಿಸುತ್ತಾರೆ. ಇದರಲ್ಲಿ ಪಯಣಿಸುವವರಿಗೆ ಅಪ್ಪಟ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು, ವಿವಿಧ ಭಕ್ಷ್ಯಭೋಜನಗಳು ಸಹಾ ದೊರೆಯುತ್ತದೆ.
ಇದರಲ್ಲಿ ಪಯಣಿಸುವವರು ರಾಜ ವೈಭೋಗದಂತಹ ಸೇವೆಯನ್ನು ಪಡೆಯುವರು. ಅಂದಹಾಗೆ ಇದರಲ್ಲಿ ಏಳುದಿನಗಳ ಪ್ರವಾಸಕ್ಕೆ ಒಬ್ಬರಿಗೆ 82 ಸಾವಿರ, ಇಬ್ಬರಿಗೆ 3ಲಕ್ಷದ  8 ಸಾವಿರ, ಮೂವರಿಗೆ 3ಲಕ್ಷದ 36 ಸಾವಿರ ಪ್ರಯಾಣ ಶುಲ್ಕವನ್ನು ನಿಗದಿಪಡಿಸಲಾಗಿದೆ.
 ಇದರಲ್ಲಿ ಪ್ರಯಾಣ ಮಾಡಿ " ಸಗ್ಗದ ಸುಖ" ಪಡೆಯ ಬಯಸುವರು ಸಾಕಷ್ಟು ಮುಂಚಿತವಾಗಿಯೇ ತಮ್ಮ ಸೀಟ್ಗಳನ್ನು ಕಾದಿರಿಸಬೇಕು.



ಮಂಗಳವಾರ, ಫೆಬ್ರವರಿ 28, 2017

ಬಾರೋ ಬಾರೋ ಮಳೆರಾಯ ಎಂದು ಕರೆಯುವ ಕೃಷಿಕ

                            ಹೂ ಅರಳಿದರೂ ಮುದುಡಿದ ಮನ. . .!


                                              ವಿಶೇಷ ವರದಿ_ ಕೂಡಂಡ ರವಿ










ಭಾರತದ ಕೃಷಿಕನ ಜೊತೆ ಮಳೆರಾಯ ಜೂಜಾಡುತ್ತಿದ್ದಾನೆ ಎಂಬ ಮಾತು ಜಿಲ್ಲೆಯ ಕಾಫಿ ಬೆಳೆಗಾರರ ಪಾಲಿಗೆ ಅಕ್ಷರಶಃ ನಿಜವಾಗಿದೆ. ವಾಡಿಕೆಯ ಮಳೆ ಈ ಬಾರಿ  ಸಾಕಷ್ಟು ಮುಂಚಿತವಾಗಿ ಸುರಿದಿದೆ. ಒಂದೆಡೆ ಬಂದ ಫಸಲನ್ನು ಕೊಯ್ಲು ಮಾಡುವುದೋ  ಎಂಬ ಗೊಂದಲದಲ್ಲಿಯೇ  ಮುಂದಿನ ಫಸಲಿನ ನಿರೀಕ್ಷೆಗಾಗಿ  ಭರ್ಜರಿ  ಸಿದ್ಧತೆ ಮಾಡಿಕೊಳ್ಳುವುದೋ ಎಂಬ  ತ್ರಿಶಂಕು ಸ್ಥಿತಿಯಲ್ಲಿ ಬೆಳೆಗಾರನಿದ್ದಾನೆ. ಇತ್ತೀಚೆಗೆ  ಬಿದ್ದ ಅಕಾಲಿಕ ಮಳೆಯ ಪರಿಣಾಮ ಬೆಳೆಗಾರರು ಅಡಕತ್ತರಿಗೆ ಸಿಲುಕಿದ್ದಾರೆ. ಒಂದು ಕಡೆ ಕಾಫಿ ಕೊಯ್ಲಿನ ಪರದಾಟ ಮತ್ತೊಂದು ಆಕಾಶದೆಡೆ ನಿರಂತರ ವೀಕ್ಷಣೆಯ ಮಧ್ಯೆ ಕೊಡಗಿನ ಬೆಳೆಗಾರಿದ್ದಾರೆ.


ಇನ್ನೂ ಬಾರದ ಹಿಮ್ಮಳೆ
ವಾಡಿಕೆಯ ಮಳೆಯು ಮುಂದಾಗಿ ಆಗಮಿಸಿರುವುದರಿಂದ ಸಕಾಲಿಕವಾಗಿ ಹಿಮ್ಮಳೆ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.  ಅದರಂತೆ ಈವರೆಗೂ ಮತ್ತೆ ಮಳೆಯಾಗಿಲ್ಲ. ಅರೆಬರೆ ಮಳೆಯಾದ ಕಡೆ ಬೆಳೆಗಾರರು ತುಂತುರು ನೀರಾವರಿ ಮಾಡುತ್ತಿರುವುದು ಜಿಲ್ಲೆಯ ಕೆಲವೆಡೆಗಳಲ್ಲಿ ಗೋಚರವಾಗಿದೆ. ಹೂಮಳೆ ಬಿದ್ದು ಸುಮಾರು ಒಂದು ತಿಂಗಳು ಸಮೀಪಿಸುತ್ತಿದ್ದರೂ, ಹಿಮ್ಮಳೆಯೇ ಇನ್ನೂ ಗೋಚರವಾಗದಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮಳೆಯ ಪರಿಣಾಮ ಹೂ  ಮುಂದುವರಿದಿರುವುದರಿಂದ ಕಾಫಿ  ಕೊಯ್ಲಿಗೆ ತೀವ್ರ ಹಿನ್ನಡೆಯಾಗಿತ್ತು.
ನೀರಾವರಿಗೆ ಸಕಲ ರೀತಿಯಲ್ಲಿ ಸಿದ್ಧರಾದ ಬೆಳೆಗಾರರು ಈಗಾಗಲೇ ಹಲವೆಡೆಗಳಲ್ಲಿ ತುಂತುರು ನೀರಾವರಿ ಹನಿಸಲು ಆರಂಭಿಸಿದ್ದಾರೆ.  ಕಾಫಿ ಕೊಯ್ಲು ಮುಗಿಯದ ಕಾರಣ ಹಲವಾರು ಬೆಳೆಗಾರರು ನೀರಾವರಿ ಮಾಡುತ್ತಿರುವ ಕೃಷಿಕರನ್ನು ಕಂಡು ಕೈಹಿಸುಕಿಕೊಳ್ಳಲಾರಂಭಿಸಿದ್ದಾರೆ



ಧರಾಶಾಹಿಯಾಗುತ್ತಿರುವ ಕಾಫಿ
ಹೆಚ್ಚು ಬಿಸಿಲು ಬೀಳುವ ಕಡೆಗಳಲ್ಲಿ ಕಾಫಿ ಹಣ್ಣು ಮಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು.  ಆ ಸಮಯಕ್ಕೆ ಸರಿಯಾಗಿ ಮಳೆ ಬಂತು. ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಮಳೆ ಬಂದು ಒಂದೆರಡು ದಿನಗಳ ತರುವಾಯ ಉದುರಲಾರಂಭವಾಯಿತು. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯ ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಸಂಪೂರ್ಣ ಧರಾಶಾಹಿಯಾಗುತ್ತಿದೆ. ಇನ್ನೂ ಹೆಚ್ಚಾಗಿ ಹಣ್ಣಾಗಿರುವ ಕಾಫಿ ಅಕಾಲಿಕ ಮಳೆಯ ಪರಿಣಾಮ ಒಣಗಿ ನೆಲಕ್ಕೆ ಉರುಳುತ್ತಿರುವುದು ಗೋಚರವಾಗಿದೆ. ಪರಿಣಾಮ ಕಾಫಿ ಗಿಡದಲ್ಲಿರುವುದಕ್ಕಿಂತ ಹೆಚ್ಚು ಕಾಫಿ ನೆಲದಲ್ಲಿಯೂ ಗೋಚರವಾಗುತ್ತಿದೆ.



ಶೇ. 10-20 ಹೂ ಬಾಕಿ
 ಅಕಾಲಿಕ ಮಳೆಯ ಪರಿಣಾಮ ಕಾಫಿ ತೋಟದಲ್ಲಿನ ಶೇ. 50 ಭಾಗ ಹೂ ಅರಳಿದ್ದು, ಅಷ್ಟೇ ಪ್ರಮಾಣದ ಹೂ ಅರಳಲು ಬಾಕಿ ಇದೆ. ಅರಳಿದ ಹೂವಿಗೆ ಕಾಯಿ ಕಟ್ಟಲು ಸಕಾಲಿಕ ಮಳೆ ಬೇಕಾಗಿದೆ. ನೆಲಕ್ಕುರುಳಿದ ಕಾಫಿಯನ್ನು ಆರಿಸುವುದು ಬೆಳೆಗಾರರಿಗೆ ತ್ರಾಸದಾಯವೆನಿಸಲಿದೆ. ಒಂದೆಡೆ ನೆಲಕ್ಕುರುಳಿರುವ ಕಾಫಿ ಆರಿಸುವುದೋ, ಮತ್ತೊಂದೆಡೆ ಮುಂದಿನ ವರ್ಷದ ಕಾಫಿ ಫಸಲಿಗಾಗಿ ತುಂತುರು ನೀರು ಹಾಯಿಸುವುದೋ ಎಂದು ಕೆಲವರು ಗೊಂದಲದಲ್ಲಿದ್ದಾರೆ. ಮತ್ತೆ ಕೆಲವರು ನೀರು, ಯಂತ್ರೋಪಕರಣ, ಆಳು-ಕಾಳು ಇದ್ದವರು ನೀರಾವರಿ ಮಾಡುವಲ್ಲಿ ತಲ್ಲೀನರಾಗಿರುವರು.


ಮಳೆ ಬೇಗನೇ ಬಂದಿದ್ದು ಕೆಲವರಿಗೆ ಅನಾನುಕೂಲವಾದರೂ, ಬಹುತೇಕ ಮಂದಿಗೆ ಪ್ರಯೋಜನವಾಗಿದೆ. ನೀರಿನಾಶ್ರಯವಿರುವವರು ಮತ್ತೆ ತುಂತುರು ನೀರಾವರಿ ಮಾಡಿದ್ದಲ್ಲಿ ಕಾಫಿ ಕಾಯಿ ಕಟ್ಟಲು ಸಹಕಾರಿಯಾದೀತು. ಮತ್ತೇ ಮಳೆ ಬಂದರೆ ಎಲ್ಲರಿಗೂ ಅನುಕೂಲ.
 ನೆರವಂಡ ರವಿ, ಕಾಫಿ ಬೆಳೆಗಾರ, ಹೊದ್ದೂರು


ಮಳೆಯು ಯಾವಾಗ ಮತ್ತೆ ಬರುವುದೆಂದು ಕಾಯುವುದು ಕಷ್ಟ. ನಮ್ಮ ಬಳಿ ನೀರಿದೆ, ಯಂತ್ರವೂ ಇದೆ.  ಆಳು ಕಾಳುಗಳಿದ್ದಾರೆ. ಅದುದರಿಂದ ತುಂತುರು ನೀರಾವರಿ ಆರಂಭಿಸಿದ್ದೇವೆ. ಮಳೆ ಮತ್ತೊಮ್ಮೆ  ಜನತೆಯ ಅಪಾರ ಹಣ ಉಳಿಯುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳು ಆರಂಭವಾಗಿರುವುದರಿಂದ ಮಳೆಯ ನಿರೀಕ್ಷೆಯಲ್ಲಿರುವೆವು
ಚೌರೀರ ಸಿ ದೇವಯ್ಯ,  ಕಾಫಿ ಬೆಳೆಗಾರ, ಹೊದ್ದೂರು.


ಮಳೆಯನ್ನೇ ಕಾಯದೇ ಬೇಗನೇ ತುಂತುರು ನೀರಾವರಿ ಕೆಲಸ ಮುಗಿಸಬೇಕೆಂದು ನಮ್ಮ ತೋಟದ ಮಾಲೀಕರು ನಿರ್ದೇಶನ ನೀಡಿದ್ದಾರೆ. . ಅದರಂತೆ ಕಳೆದ ಕೆಲವು ದಿನಗಳಿಂದ ಹಗಲಿರಳೂ ನಿರಂತರವಾಗಿ ನೀರಾವರಿ ಕೆಲಸದಲ್ಲಿ ತೊಡಗಿದ್ಧೇವೆ.


ಕಾಫಿ ತೋಟದ ಮೇಲ್ವಿಚ್ಛಾರಕ, ಮೂರ್ನಾಡು. 

ಮಂಗಳವಾರ, ಫೆಬ್ರವರಿ 21, 2017

              ಪೀಠೋಪಕರಣಗಳಾಗುತ್ತಿರುವ ಬಿದಿರು ...!


                                          ಬರಹ: ಕೂಡಂಡ ರವಿ, ಹೊದ್ದೂರು. 




ಬೆಂಕಿಗೆ ಆಹುತಿಯಾಗುತ್ತಿರುವ ಅಮೂಲ್ಯ ಮರ ..! 
ಕೊಡಗು ಜಿಲ್ಲೆ ಸೇರಿದಂತೆ  ಮಲೆನಾಡ ಬಹುತೇಕ ಕಡೆ ತೇಗ-ಬೀಟೆ ಮರಗಳು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಗಾರರ ತೋಟದಲ್ಲಿ ಇವೆ. ಹಲವು ಕಡೆ ಬಿದ್ದ ಮತ್ತು ಸತ್ತ ಬೀಟೆ ಮತ್ತು ತೇಗ ವಿವಿಧ ಕಾಡುಜಾತಿಯ  ಮರಗಳನ್ನು ಅರಣ್ಯ ಇಲಾಖಾ  ಸಿಬ್ಬಂದಿ - ಅಧಿಕಾರಿ ವರ್ಗದವರ ಕಿರುಕುಳದಿಂದಾಗಿ ಬಹುತೇಕ ಬೆಳೆಗಾರರು ಅಮೂಲ್ಯ ಮರಗಳನ್ನು ಬೆಂಕಿಗೆ ಆಹುತಿ  ನೀಡುತ್ತಿದ್ಧಾರೆ. ನಮ್ಮ  ಜಿಲ್ಲೆಯ ಬಹುತೇಕ ಬೆಳೆಗಾರರಿಗೆ ಅರಣ್ಯ ಇಲಾಖೆಯವರೊಡನೆ ಕಛೇರಿಯಲಿ  ಬೇಕಾದವರಿಗೆ ಬೇಕಾದಷ್ಟು"  ಕೊಟ್ಟು ಕದನ" ಮಾಡುವ ಸಮಯ-ಆಸಕ್ತಿ ಎರಡೂ ಇಲ್ಲ. ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಮರದಿಂದ ಮಾಡಿದ ಬೆಲೆಬಾಳುವ ಮರಗಳಿಂದ ಮಾಡಿದ ಪೀಠೋಪಕರಣಗಳನ್ನು ಸಾಮಾನ್ಯರು ಖರೀದಿಸುವಂತಿಲ್ಲ ! ಇಂತಹವರು ತಮ್ಮ ಹಿತ್ತಲಲ್ಲಿ ಬೆಳೆದ ಬಿದಿರನ್ನು ಮನೆಯ ಒಳ ಮತ್ತು ಹೊರಭಾಗಗಳಿಗೆ ಶೋಭೆ ತರಬಲ್ಲಂತಹ  ಪೀಠೋಪಕರಣ-ಮಂಚ, ದಿವಾನ್ ಸೋಫಾ  ಮಾಡಲು ಉಪಯೋಗಿಸಿಕೊಳ್ಳಬಹುದಾಗಿದೆ.


ಪೀಠೋಪಕರಣದಿಂದ ಅಪಾರ ಲಾಭ 

ನಮ್ಮ ಜಿಲ್ಲೆಯಲ್ಲಿಯೂ ಸಹಾ ವಿವಿಧ ಬಿದಿರನ್ನು ಅಲ್ಲಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ ಸಣ್ಣ ಪ್ರಮಾಣದ ಬಿದಿರು ಮಾತ್ರ ಸದುಪಯೋಗವಾಗುತ್ತಿದೆ. ಕೆಲವು ಬಿದಿರು ಕಾಳು ಮೆಣಸಿನ ಕೊಯ್ಲಿಗೆ ಏಣಿಯಾಗಿ ಬಳಕೆಯಾಗುತ್ತಿದೆ. ಇನ್ನೂ ಕೆಲವು ಬಿದಿರು ಆರ್ ಸಿಸಿ  ಹಾಕುವಲ್ಲಿ ಕಂಬಗಳಾಗಿ ಬಳಕೆಯಾಗುತ್ತಿದೆ. ಇದರಿಂದಾಗಿ ಬಿದಿರು ಬೆಳೆದ ಬೆಳೆಗಾರರಾಗಿ ತೀರಾ ಕಡಿಮೆ ಹಣ ದೊರೆಯುತ್ತಿದೆ. ಇದೇ ಬಿದಿರನ್ನು ಪೀಠೋಪಕರಣ ಮಾಡಿ ಮಾರಾಟ ಮಾಡಿದ್ದಲ್ಲಿ ಅಪಾರ ಲಾಭವು ಬೆಳೆಗಾರರಿಗೆ ದೊರೆಯಬಹುದಾಗಿದೆ.
ಸಾಮಾನ್ಯರಿಗೆ ದುಬಾರಿ ಬೆಲೆಯ ಗುಣಮಟ್ಟದ ಮರಗಳ ಪೀಠೋಪಕರಣಗಳನ್ನು ಕೊಳ್ಳುವುದು ಕನಸಿನ ಮಾತಾಗಿದೆ. ಸರ್ವೆ ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಮಾರಾಟವಾಗುತ್ತಿರುವ ಸಿಂಗಾಪುರ ತೇಗದ ಮರದ ಸೋಫಾಸೆಟ್ಗೂ ಸುಮಾರು 20 ಸಾವಿರಕ್ಕೂ ಅಧಿಕ ಬೆಲೆ  ನೀಡಬೇಕಾದಂತಹ ಪರಿಸ್ಥಿತಿ ನಿಮರ್ಣವಾಗಿದೆ. ಅದೇ ಪೀಠೋಪಕರಣವನ್ನು ಬಿದಿರಿನಿಂದ ಮಾಡಿಸಿದ್ದಲ್ಲಿ ಅತೀ ಕಡಿಮೆ ವೆಚ್ಚವಾಗಲಿದೆ.
ನಮ್ಮಲ್ಲಿನ ಬಿದಿರು
ಕೊಡಗು ಜಿಲ್ಲೆಯ ಬಹುತೇಕ ಬೆಳೆಗಾರರು ತಮ್ಮ ತೋಟದ ಅನಾವಶ್ಯಕ ಸ್ಥಳದಲ್ಲಿ ಬಿದಿರಿನ ಪೊದೆಗಳನ್ನು ಬೆಳೆಸಿರುತ್ತಾರೆ. ಅವುಗಳಲ್ಲಿ ಬರ್ಮ ಬಿದಿರು , ಸಿಲೋನ್ ಬಿದಿರು, ಡೆಕೋರೇಶನ್ ಬಂಬು ಇತ್ಯಾದಿಗಳು ಸೇರಿವೆ.
ನಮ್ಮ ಜಿಲ್ಲೆಯ ಬಹುತೇಕ ಬೆಳೆಗಾರರಿಗೆ ಹತ್ತು ಹಲವು ಏಕರೆ ಖಾಲಿ ಜಾಗವೂ ಇದೆ. ಇವುಗಳನ್ನು ಬಿದಿರನ್ನು ಬೆಳಸಲು ಉಪಯೋಗಿಸಿ, ಅವುಗಳಿಂದ ಪೀಠೋಪಕರಣಗಳನ್ನು ಮಾಡಿಸಿ, ಮಾರಿದಲ್ಲಿ ಅಪಾರ ಹಣ ಗಳಿಕೆ ಸಾಧ್ಯ. ಈ ನಿಟ್ಟಿನಲ್ಲಿ ಕೊಡಗಿನ ಬೆಳೆಗಾರರು ಚಿಂತನ- ಮಂಥನ ನಡೆಸುವ ಅವಶ್ಯಕತೆ ಇದೆ.



ತೊಟ್ಟಿಲಿನಿಂದ ಚಟ್ಟದವರೆಗೆ 
ನಾವು ದಿನನಿತ್ಯದ ಬಹುತೇಕ ಕಾರ್ಯಗಳಲ್ಲಿ ಬಿದಿರನ್ನು ಅವಲಂಬಿಸುತ್ತಿದ್ದೇವೆ. ಇದೇ ಹಿನ್ನೆಲೆಯಲ್ಲಿ " ತೊಟ್ಟಿಲಿನಿಂದ ಚಟ್ಟದವರೆಗೆ ಬಿದಿರು"  ಎಂಬ ಮಾತೂ ಚಾಲ್ತಿಯಲ್ಲಿದೆ. ಆಧುನಿಕ ಜಗತ್ತಿನಲ್ಲಿ  ಪೀಠೋಪಕರಣಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ಉದ್ದೇಶಕ್ಕಾಗಿ ಬಹುತೇಕ ಎಲ್ಲೆಡೆಯೂ ವೈವಿಧ್ಯಮಯ ಬಿದಿರನ್ನು ಬಳಸಲಾಗುತ್ತಿದೆ. ಕೊಡಗಿನ  ಕೆಲ ಪ್ರಮುಖ ಪಟ್ಟಣಗಳಲ್ಲಿ ಅಸ್ಸಾಂನಿಂದ ತಂದು ತಯಾರಿಸಲಾದ ಬಿದಿರು-ಬೆತ್ತಗಳಿಂದಲೂ ಪೀಠೋಪಕರಣಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯ ಗ್ರಾಹಕರು ಮುಗಿಬಿದ್ದು ಅವುಗಳನ್ನು ಖರೀದಿಸುವುದು ಹಲವೆಡೆಗಳಲ್ಲಿ ಕಂಡುಬರುತ್ತಿತ್ತು. ಎಲ್ಲಿಂದಲೂ ತಂದ ಬಿದಿರಿನ ಪೀಠೋಪಕರಣಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸುವುದಕ್ಕಿಂತ ನಮ್ಮಲ್ಲಿ ದೊರೆಯುವ ಬಿದಿರಿನಿಂದ ಪೀಠೋಪಕರಣ ತಯಾರಿಸಿದ್ದಲ್ಲಿ ಜನತೆಗೆ ಅವು ಕಡಿಮೆ ಬೆಲೆಗೆ ದೊರೆಯಬಹುದಾಗಿದೆ. ಇದರಿಂದಾಗಿ ಸಹಸ್ರಾರು ಮಂದಿ ಉದ್ಯೋಗವು ದೊರೆತಿತು.
ಅಸ್ಸಾಂ ರಾಜ್ಯದಲ್ಲಿ ಬಿದಿರಿನಿಂದ ಸೋಫಾಸೆಟ್, ಮಂಚ, ದಿವಾನ್, ಗುಡಿಸಲು, ಕಪಾಟು, ಬಾರ್ಕೌಂಟರ್, ಡ್ರೆಸ್ಸಿಂಗ್ ಟೇಬಲ್, ಡೈನಿಂಗ್ ಸೆಟ್, ಅರಾಂ ಕುರ್ಛಿ , ಮರದ ಮನೆ, ಬಂಕರ್ ಬೆಡ್ ಇತ್ಯಾದಿಗಳನ್ನು ತಯಾರಿಸುತ್ತಾರೆ. ಕೊಡಗಿನಲ್ಲಿಯೂ ಈ ರೀತಿಯ ಪ್ರಯೋಗಗಳು ನಡೆಯಬೇಕಿದೆ.




ಶುಕ್ರವಾರ, ಫೆಬ್ರವರಿ 17, 2017

                            ಆನ್ಲೈನ್ನಲ್ಲಿ    ಆಕಾಶವಾಣಿ...!

                                                 ಬರಹ - ಕೂಡಂಡ ರವಿ



ತಂತ್ರಜ್ಞಾನವು ಕಾಲ-ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಗುತ್ತಿದೆ. ಅದಕ್ಕೆತಕ್ಕಂತೆ ಮಾಹಿತಿ, ಶಿಕ್ಷಣ, ಮನೋರಂಜನೆಯಕ್ಷೇತ್ರವೂ ಸಹಾ ವಿಸ್ತಾರವಾಗುತ್ತಿದೆ. ಹಿಂದೆಆರಂಭವಾದ ಟ್ರ್ಯಾನ್ಸಿಸ್ಟರ್ಗಳೆಂಬ ರೇಡಿಯೋಗಳಿಂದ ವಿವಿಧ ಕಾಲಘಟ್ಟಗಳಲ್ಲಿ ಸಾಗಿ ಇಂದು ಪುಟ್ಟ ಮೊಬೈಲ್ಗಳಲ್ಲಿಯೂ ಸಹಾ ಅದುತನ್ನ ಸ್ಥಾನವನ್ನು ಪಡೆದುಕೊಂಡಿದೆ.ಇದೀಗ ಸ್ಮಾಟ್ ಫೋನ್ , ಕಂಪ್ಯೂಟರ್  ಅಂತರ್ಜಾಲ ಸಂಪರ್ಕವಿರುವುದರಿಂದಎಲ್ಲಿ ಬೇಕಾದರೂ, ನೀವು ಆನ್ಲೈನ್ಆಕಾಶವಾಣಿಯ  ವಿವಿಧ ಕಾರ್ಯಕ್ರಮಗಳನ್ನು ಆಲಿಸಿ ಆನಂದಿಸಬಹುದಾಗಿದೆ.
ಇದಕ್ಕಾಗಿ ಏನು ಮಾಡಬೇಕು ?
ಸರ್ಚ್ ಇಂಜಿನ್ ತೆರೆದು  ಆನ್ಲೈನ್ ರೇಡಿಯೋ  ಸ್ಡಾಟ್ಇನ್  ಎಂದು   ಟೈಪ್ ಮಾಡಿ ಹುಡುಕಿ.  ಆಗ ಹೋಂ ಪೇಜ್ ತೆರೆದುಕೊಳ್ಳುತ್ತದೆ.ಈ ಪುಟದ ಮೇಲ್ಭಾಗದಲ್ಲಿ  ಆಂಗ್ಲಭಾಷೆಯ 'ಎ' ಯಿಂದ ಆರಂಭವಾಗಿ 'ಝೆಡ್'ವರೆಗೆ ಸರಣಿ ಪ್ರಕಾರ  ವಿವಿಧ ದೇಶಗಳ ರಾಷ್ಟ್ರಧ್ವಜಗಳು ಕಾಣಬರುತ್ತದೆ. ನೀವು ವಿದೇಶಗಳ ಆಕಾಶವಾಣಿ ಪ್ರಿಯರಾದಲ್ಲಿ  ಆಯಾಯ ದೇಶಗಳ ಧ್ವಜಗಳ ಮೇಲೆ ಕರ್ಸರ್ ತೆಗೆದು ಕೊಂಡು ಹೋದಲ್ಲಿ ಆಯಾ ದೇಶಗಳ  ಹೆಸರು  ಕಾಣಬರುತ್ತದೆ. ಉದಾಹರಣೆಗೆ  ಅಲ್ಜಿರಿಯಾದಿಂದ  ಆರಂಭಗೊಂಡು, ವಿವಿಧ ದೇಶಗಳ ಸಾವಿರಾರು   ಆಕಾಶವಾಣಿ ಕೇಂದ್ರಗಳು ಇಲ್ಲಿ ಲಭ್ಯ.ನಮ್ಮದೇಶದ    ಆಕಾಶವಾಣಿ ಕೇಂದ್ರಗಳು ಬೇಕಾದಲ್ಲಿ ನಮ್ಮ  ತ್ರಿವರ್ಣಧ್ವಜದ ಮೇಲೆ ಕ್ಲಿಕ್ ಮಾಡಿ.ರೇಡಿಯೋ ಸಿಟಿಯಿಂದ ಆರಂಭವಾಗಿ ಹತ್ತಾರು, ನೂರಾರು ಕೇಂದ್ರಗಳ ಹೆಸರುಗಳನ್ನು ಕಾಣಬಹುದು. ಹೆಸರಿನ ಮೇಲೆ ಕ್ಲಿಕ್ ಮಾಡಿದಲ್ಲಿ  ಆಯಾ  ಕೇಂದ್ರದ ಕಾರ್ಯಕ್ರಮಗಳನ್ನು ನಿರರ್ಗಳವಾಗಿ ಕೇಳಬಹುದು. ಜಾಹೀರಾತುಗಳು ತೀರಾ ಕಡಿಮೆ.


ವಿವಿಧ ಭಾಷೆಗಳ ಸಂಗಮ
ಇದರಲ್ಲಿ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ತಲಾ ಮೂರು ವಿಭಾಗಗಳಿವೆ.  ಉಳಿದಂತೆ  ಬಂಗಾಲಿ, ಗುಜರಾತಿ,ಕನ್ನಡ, ಮಲೆಯಾಳಂ, ಪಂಜಾಬಿ, ತಮಿಳು, ತೆಲುಗು ಭಾಷೆಗಳ ವೈವಿಧ್ಯಮಯ ಕಾರ್ಯಕ್ರಮಗಳನ್ನು ತಡೆರಹಿತವಾಗಿ  ಎಲ್ಲೆಂದರಲ್ಲಿ ಆಲಿಸಬಹುದಾಗಿದೆ. ಕನ್ನಡದಲ್ಲಿ  ರೇಡಿಯೋ  ಗಿರ್ಮಿಟ್, ರೇಡಿಯೋ ಸಿಟಿ ಫನ್ ಕಾ ಅಂಟೇನಾ, ರೇಡಿಯೋ ಸಿಟಿ ಕನ್ನಡ, ಕನ್ನಡ ರೇಡಿಯೋ-316 ಎಂಬ ಕೇಂದ್ರಗಳು ಮಾತ್ರ ಸದ್ಯಕ್ಕೆ ಲಭ್ಯ.
ಆದರೆ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಪ್ರಮಾಣದ ಕೇಂದ್ರಗಳು ಇಲ್ಲಿಗೆ ಸೇರ್ಪಡೆಗೊಂಡಿವೆ. ಬೆಂಗಾಲಿಯಲ್ಲಿ 8, ಗುಜರಾತಿಯಲ್ಲಿ 2 ಮಲೆಯಾಳಂನಲ್ಲಿ 20, ಪಂಜಾಬಿ- 29, ತೆಲುಗು ಭಾಷೆಗಳ 11 ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ.ಇದರಲ್ಲಿನ  ಎಲ್ಲಾ ಕೇಂದ್ರಗಳು ಎಫ್ಎಂ ಪ್ರೀಕ್ವಿನ್ಸಿ(ಪ್ರಿಕ್ವಿನಿ ಮಾಡುಲೈಶನ್)ಯಲ್ಲಿ  ಕಾರ್ಯ ನಿರ್ವಹಿಸುತ್ತಿರುವುದರಿಂದ ಬೇರೆ ಸದ್ದು ಗದ್ದಲಗಳು ಆನ್ಲೈನ್ ರೇಡಿಯೋಗಳಲ್ಲಿ ಕೇಳಿಬರುವುದಿಲ್ಲ. ಹಾಗಾದರೆ  ಇನ್ನೇಕೆ  ತಡ ನೀವೂ ಆನ್ಲೈನ್ನಲ್ಲಿ  ಆಕಾಶವಾಣಿಯನ್ನು ಆಲಿಸಿ.


ರೇಡಿಯೋ  ಗಾರ್ಡನ್ ಎಂಬ ಯ್ಯಾಪ್ನ್ಲ  ನಲ್ಲಿ  ವಿವಿಧ ಯ್ಯಾಪ್ಗಳಲ್ಲಿಯೂ ವಿಶ್ವದ  ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ರೇಡಿಯೋಗಾರ್ಡನ್ನಲ್ಲಿ ಮೈಸೂರಿನ ಪ್ಲಾನೆಟ್ರೇಡಿಯೋ ಸಿಟಿ ಡಾಟ್ ಕಾಂ, ಬೆಂಗಳೂರಿನ ರೇಡಿಯೋ ಪೈತ್, ರೇಡಿಯೋ ಸಿಟಿ ಇಂಟರ್ ನ್ಯಾಷನಲ್, ರೇಡಿಯೋ ಸಿಟಿ ಕನ್ನಡ, ರೇಡಿಯೋ ಸಿಟಿ ಲವ್, ರೇಡಿಯೋ ಸಿಟಿ ರಾಕ್, ರೇಡಿಯೋಗಿರ್ಮಿಟ್ ಕೇಂದ್ರಗಳ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ.






ಆಲ್ ಇಂಡಿಯಾ ರೇಡಿಯೋ 

ಬಹುಜನ ಹಿತಾಯ - ಬಹುಜನ ಸುಖಾಯ ಎಂಬ ಘೋಷಾವಾಕ್ಯದಡಿ ಪ್ರಸಾರವಾಗುತ್ತಿರುವ ಈ ಸರಕಾರಿ ಸಂಸ್ಥೆಯ ಕಾರ್ಯಕ್ರಮಗಳು ದೇಶದ 419 ಕೆಂದ್ರದ ಮೂಲಕ ಬಿತ್ತರವಾಗುತ್ತಿವೆ. ಇದುದೇಶದ ಶೇಕಡ 92 ಭಾಗವನ್ನುದೇಶದಜನತೆಯ 99.19 ಸರಾಸರಿಜನತೆಯನ್ನುತಲುಪುತ್ತಿದೆ.  23 ಭಾಷೆಗಳಲ್ಲಿ ಆಕಾಶವಾಣಿಯುತನ್ನಕಾರ್ಯಕ್ರಮವನ್ನು ಪ್ರಸಾರಿಸುತ್ತಿದೆ.ಇದರ ಕಾರ್ಯಕ್ರಮಗಳನ್ನು  ಆಲಿಸಬೇಕಾದಲ್ಲಿ
ಆಲ್ಇಂಡಿಯಾ  ರೇಡಿಯೋಡಾಟ್ಜಿಓವಿಡಾಟ್ಇನ್ಗೆ ಲಾಗ್ಇನ್ ಆಗಿ.





ಬೇಕಾದ ಕೇಂದ್ರಗಳನ್ನು ಕ್ಲಿಕ್ ಮಾಡಿ.ಇದರಲ್ಲಿ ಪ್ರಮುಖ ಕೇಂದ್ರಗಳ ಕಾರ್ಯಕ್ರಮಗಳನ್ನು ಸಲೀಸಾಗಿ ಆಲಿಸಬಹುದು.ರಾಗಂ, ಎಫ್ಎಂಗೋಲ್ಡ್-ದೆಹಲಿ, ಎಫ್ಎಂರೈನ್ ಬೋ-ದೆಹಲಿ, ಮುಂಬೈ ವಿವಿಧ ಭಾರತಿ,ಉದರ್ು, ಗುಜರಾತಿ, ಮಲೆಯಾಳಂ,  ಮರಾಠಿ, ಬಾಂಗ್ಲಾ, ತೆಲುಗುಕನ್ನಡ,  ಕಾರ್ಯಕ್ರಮಗಳನ್ನು ನೇರ ಪ್ರಸಾರದಲ್ಲಿಕೇಳಬಹುದು.ಮೊಬೈಲ್ ಅ್ಯಪ್ಗಳ ಮುಖಾಂತರವೂಆಕಾಶವಾಣಿ ಕಾರ್ಯಕ್ರಮಗಳನ್ನು ಸಲೀಸಾಗಿ ಆಲಿಸಬಹುದಾಗಿದೆ.
ಮಹಾಭಾರತ
1988ರಿಂದ ದೂರದರ್ಶನದಲ್ಲಿ ವೀಕ್ಷಕರಿಗೆ   ರಸದೌತಣ ನೀಡಿದ್ದ ಪೌರಾಣಿಕ     ಧಾರಾವಾಹಿಯ   ಧ್ವನಿಯನ್ನು ಸರಣಿರೂಪದಲ್ಲಿತನ್ನ ಶೋತೃಗಳಿಗೆ ನೀಡಲು     ಆಕಾಶವಾಣಿ ಸಜ್ಜಾಗಿದೆ.ಡಿಸೆಂಬರ್-19ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 11.30ರಿಂದ ಅರ್ಧಘಂಟೆಕಾಲ ಪ್ರಸಾರವಾಗುತ್ತಲಿದೆ.140 ಕಂತುಗಳಲ್ಲಿ ಪ್ರಸಾರವಾಗಲಿರುವ ಈ ಸರಣಿ 2017ರ ಜೂನ್ 30ರಂದು ಮುಕ್ತಾಯವಾಗಲಿದೆ.ಆನ್ಲೈನ್ಲ್ ರೇಡಿಯೋ ದಲ್ಲಿಯೂ  ಈ ಧ್ವನಿ ಮುದ್ರಿಕೆಯನ್ನು ಕೇಳಬಹುದು.ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿಯನ್ನು ಬಿ.ಆರ್.ಚೋಪ್ರಾ ನಿರ್ಮಿಸಿದ್ದರು. .ರವಿ ಚೋಪ್ರಾ ನಿದರ್ಶಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಈ ಲಿಂಕ್ನಲ್ಲಿ ರೇಡಿಯೋ ಗಾರ್ಡನ್ ಅನ್ನು ಕೇಳಬಹುದು . ವಿವಿಧ ಭಾಷೆಗಳ ಜೊತೆಗೆ ಕನ್ನಡದ ನಾನ್ ಸ್ಟಾಪ್ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ.

http://radio.garden/live/bengaluru/