ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ರೋಬಸ್ಟಾ ಕಾಫಿಗೆ ಕಾಂಡ ಕೊರಕದ ಬಾಧೆ ಕಾಣಿಸಿಕೊಂಡಿದೆ. ಇದನ್ನು ರಾಸಾಯನಿಕ ಬಳಕೆ ರಹಿತವಾಗಿ ಅತ್ಯಂತ ಸುಲಭವಾಗಿ ಹತೋಟಿ ಮಾಡಬಹುದು.
1. ಅರೇಬಿಕಾ ತೋಟಗಳಲ್ಲಿ ಕಾಫಿಯ ಕಾಂಡ ಕೊರಕಗಳನ್ನು ನಿಯಂತ್ರಿಸಲು ರೋಗ- ಕೀಟಬಾಧೆ ಗಿಡಗಳನ್ನು ಕಿತ್ತು ಸುಡಬೇಕು. ಕಾಫಿ ತೋಟದೊಳಗೆ ಓಡಾಡುತ್ತಿರುವವರಿಗೆ , ನುರಿತ ಕಾಮರ್ಿಕರು, ಬೆಳೆಗಾರರು ಇಂತಹ ಗಿಡಗಳನ್ನು ಅತ್ಯಂತ ಸುಲಭವಾಗಿ ಪತ್ತೆ ಹಚ್ಚಬಲ್ಲರು. ರೋಬಾಸ್ಟಾ ಕಾಫಿ ತೋಟ ಹೊಂದರುವ ರೈತರು ಈ ರೋಗ ಬಾಧೆಯು ತಮ್ಮ ತೋಟದಲ್ಲಿ ಇದೆಯೋ ಎಂದು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.
2. ಕಳೆಗುಂದಿದ, ಒಣಗುತ್ತಿರುವ, ಕಾಯಿ ಬಲಿಯದ ಗಿಡಗಳು ರೋಗಪೀಡಿತವಾದವು ಎಂದು ಪರಿಗಣಿಸಬಹುದು. ಇಂತಹ ಗಿಡಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಕ್ಕೆ ಸಾಗಿಸಿ. ಸುಟ್ಟುಹಾಕಿ. ಅಂದು ಕಿತ್ತ ಗಿಡಗಳನ್ನು ಆಯಾ ದಿನ ಸಂಜೆಯ ವೇಳೆಗೆ ಸುಡುವುದು ಉತ್ತಮ. ತಡ ಮಾಡಿದ್ದಲ್ಲಿ ಕಾಂಡದ ಒಳಗಿರುವ ಹುಳಗಳು ಬೇರೆಡೆಗೆ ಹಾರಿ ಮತ್ತೆ ಕಾಫಿ ಗಿಡಗಳಿಗೆ ತೊಂದರೆ ಕೊಡುವ ಸಾಧ್ಯತೆ ಹೆಚ್ಚು.
3. ಅರೇಬಿಕಾ ಕಾಫಿ ತೋಟದ ಮಧ್ಯೆ ರೋಬಾಸ್ಟಾ ಗಿಡಗಳಿದ್ದಲ್ಲಿ ಈ ಹುಳಗಳ ಬಾಧೆಯು ಹೆಚ್ಚು. ಅರೇಬಿಕಾ ಕಾಫಿ ಗಿಡಗಳನ್ನು ಸಾಮಾನ್ಯವಾಗಿ ಬಾಧಿಸುವ ಕೀಟಗಳು ಆ ತೋಟದಲ್ಲಿ ಅರೇಬಿಕಾ ಗಿಡಗಳಿದ್ದಲ್ಲಿ ಅವುಗಳನ್ನೇ ಬಾಧಿಸುತ್ತವೆ. ಈ ಹಿನ್ನೆಲೆಯಲ್ಲಿ ರೋಬಾಸ್ಟಾ ಗಿಡಗಳ ಮಧ್ಯೆ ನಿರಂತರವಾಗಿ ಅರೇಬಿಕಾ ಕಾಫಿ ಬೆಳೆಯುವುದು ಸೂಕ್ತ.
4. ಈ ಕಾಂಡ ಕೊರಕ ಕೀಟಗಳು ಏಪ್ರಿಲ್ , ಮೇ, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಸಂತಾನೋತ್ಪತಿ ಮಾಡುತ್ತವೆ. ಕಾಂಡದಿಂದ ಹೊರಬರುವ ಚಿಟ್ಟೆಯನ್ನು ಹೋಲುವ ಕೀಟವು ಹಾರಾಡುತ್ತವೆ. ಈ ಸಮಯದಲ್ಲಿ ಇವುಗಳನ್ನು ಅತ್ಯಂತ ಸುಲಭವಾಗಿ ಹತೋಟಿ ಮಾಡಬಹುದಾಗಿದೆ. ಮೇಲೆ ತಿಳಿಸಿದ ತಿಂಗಳಲ್ಲಿ ಕಾಫಿ ತೋಟಗಳಲ್ಲಿ ಸೋಲಾರ್ ಕೀಟ ನಾಶಕ ಯಂತ್ರವನ್ನು ಅಳವಡಿಸಬಹುದಾಗಿದೆ.
ಅಥವಾ ವಿದ್ಯುತ್ ದೀಪಗಳನ್ನು ಅಳವಡಿಸಿ, ಅದರ ಕೆಳಭಾಗದಲ್ಲಿ ನೀರಿರುವ ಬೇಸಿನ್ ಇಟ್ಟಲ್ಲಿ ಅದಕ್ಕೆ ಹುಳಗಳು ಬಂದು ಬೀಳುತ್ತವೆ. ಸೋಲಾರ್ ದೀಪಗಳನ್ನು ಬ್ಯಾಟರಿಯಿಂದ ಬಳಸುವ ಟಾಚರ್್, ರೀಚಾಜರ್್ ದೀಪಗಳನನು ಇದೇ ರೀತಿ ಬಳಸಿ ಎಲ್ಲಾ ಕೀಟಗಳನ್ನು ನಾಶ ಮಾಡಬಹುದು.
5. ಕಾಂಡ ಕೊರಕದ ಪತಂಗಗಳು ಸುಮಾರು 25- 35 ದಿನಗಳವರೆಗೆ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಮಾತ್ರ ಅವು ಕಾಂಡಗಳಿಂದ ಹೊರಬರುತ್ತವೆ. ಹೆಣ್ಣು ಕೀಟವು ಹೆಚ್ಚಾಗಿ ಬಿಸಿಲು ಬೀಳುವ ಸ್ಥಳವನ್ನು ಆರಿಸಿಕೊಂಡು ಅಲ್ಲಿ ಸುಮಾರು 20 ಮೊಟ್ಟೆಗಳನ್ನಿಟ್ಟು ಸಾಯುತ್ತವೆ. 9- 10 ದಿನಗಳಲ್ಲಿ ಮೊಟ್ಟೆ ಒಡೆದು ಹೊರಬರುವ ಲಾವರ್ಾವು ಕಾಫಿ ಗಿಡದ ಕೊಂಡ ಕೊರೆದು ಗಿಡಗಳ ಒಳ ಸೇರುತ್ತವೆ. ಒಳ ಸೇರಿದ ಕೀಟವನ್ನು ಕೊಲ್ಲುವ ಅವಕಾಶವೇ ಸಿಗದು ಎಂದು ಕೀಟ ಶಾಸ್ತ್ರಜ್ಞರು ಮಾಹಿತಿ ನೀಡಿರುವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ