ಕೊಡಗು ನೀವು ತಿಳಿಯದ ಸತ್ಯ ?!
ಬರಹ: ಕೂಡಂಡ ರವಿ, ಹೊದ್ದೂರು.
* ದುರಾಸೆಯೇ ಪ್ರಕೃತಿ ಮುನಿಯಲು ಕಾರಣವೇ '
* ಸ್ವಯಂ ನಿಯಂತ್ರಣಕ್ಕಾಗಿ ಪ್ರಕೃತಿ ಮುನಿಯಿತೇ ...!?
* ಇನ್ನಾದರೂ ಪಾಠ ಕಲಿತಾರೇಯೇ ! ?
Pl watch my blogs
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...
Kaveri Dharshini : https://kaveridarashin.blogspot.com
ಪ್ರಕೃತಿಯನ್ನು ತನ್ನ ಗುಲಾಮನನ್ನಾಗಿಸಲು ಬಯಸಿದ್ದೇ ಕೊಡಗಿನಲ್ಲಿ ನಡೆದ ಇತ್ತೀಚಿನ ದುರಂತಕ್ಕೆ ಪ್ರಮುಖ ಕಾರಣವೆಂದು ಕೆಲವರು ಅಭಿಪ್ರಾಯಿಸುತ್ತಿರುವರು. ದುರಾಸೆ ಎದುರು ಪ್ರಕೃತಿಮಾತೆಯ ಮೇಲಿನ ನಿರಂತರ ಅತ್ಯಾಚಾರ ಮಿತಿ ಮೀರಿದಂತೆ ಭಾಸವಾಗುತ್ತಿದೆ. ! ಇದಕ್ಕೆ ನಿಯಂತ್ರಣ ಹೇರಲೆಂದು ಮಾನವನೊಡನೆ ಪ್ರಕೃತಿ ಮುನಿಯಿತೇನೋ ? ಇದು 2017ರಲ್ಲಿ ಚಿಲಿಯಲ್ಲಿ ಸಂಭವಿಸಿದ ಭೂಕುಸಿತಕ್ಕೂ ಭೀಕರವಾಗಿದೆ ಎಂದು ಕೆಲವರ ಅಭಿಪ್ರಾಯ.
ಈ ದುರಂತವನ್ನು ಹಲವರು ಹಲವು ಬಗೆಗಳಲ್ಲಿ ವಿಶ್ಲೇಷಣೆ ಮಾಡುತ್ತಿರುವರು. ತಮ್ಮದೇ ಆದ ವ್ಯಾಖ್ಯೆಗಳನ್ನು ನೀಡುತ್ತಿರುವರು. ಬಹುತೇಕ ಮಂದಿ ಎಲ್ಲವೂ ಜನತೆಯದ್ದೇ ತಪ್ಪು ಎಂದೇ ಪ್ರತ್ಯೇಕವಾಗಿ, ಪರೋಕ್ಷವಾಗಿ ವಾದಿಸುತ್ತಿರುವರು. ಆದರೆ, ಇದರಲ್ಲಿ ಜನತೆಯೊಡನೆ ಸರಕಾರ, ಜನಪ್ರತಿನಿಧಿಗಳು, ಕೆಲ ಇಲಾಖೆಗಳ ಕೆಲವು ತಪ್ಪುಗಳು ಕಾಣಬರುತ್ತಿವೆ. ಇವುಗಳಲ್ಲಿ ಆಯ್ದವುಗಳನ್ನು ಜನತೆಯ ಮುಂದಿಡುವ ಪ್ರಯತ್ನ ನನ್ನದು.
ಬೆಟ್ಟಗಳ ಮೇಲೆ ನಿವೇಶನಗಳು !
ಹಿಂದಿನ ಕಾಲದಲ್ಲಿ ಹಲವಾರು ಮಂದಿ ಬೆಟ್ಟ ಪ್ರದೇಶಗಳ ತಪ್ಪಲಿನಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ಆದರೆ, ಕಾಲ ಬದಲಾದಂತೆ ಜನರ ವರ್ತನೆಯು ಬದಲಾಯಿತು. ಜನಸಂಖ್ಯೆಯು ಹೆಚ್ಚಾದಂತೆ ಸರಕಾರಗಳು ಬಡವರಿಗೆ ನಿವೇಶನ ಹಂಚುವ ಪ್ರಕ್ರಿಯೆಯತ್ತ ಆಸಕ್ತಿ ತೋರಲೇ ಇಲ್ಲ. ಬಡವರು ಬೆಟ್ಟಗಳ ಮೇಲೆ, ನದಿಯ ಅಂಚುಗಳನ್ನು ಯಾರದೋ ಕುಮ್ಮಕ್ಕಿನಿಂದ ಅತಿಕ್ರಮಿಸಲು ಆರಂಭಿಸಿದರು. ಪರಿಣಾಮ ಮಡಿಕೇರಿಯ ಇಂದಿರಾನಗರ, ಮಂಗಳಾದೇವಿ ನಗರಗಳ ವ್ಯಾಪ್ತಿಯು ದಿನೇ ದಿನೇ ಹೆಚ್ಚುತ್ತಾ ಬೆಟ್ಟಗಳ ಮೇಲೇರಲು ಆರಂಭವಾಯಿತು. ಖಾಸಗಿಯವರು ಬೆಟ್ಟಗಳನ್ನು ಅತಿಕ್ರಮಿಸುತ್ತಾ, ಅವುಗಳ ನೆತ್ತಿಯ ಮೇಲೆ ಐಷಾರಾಮಿ ಬಂಗಲೆ, ಹೊಟೇಲ್ಗಳನ್ನು ನಿಮರ್ಿಸಲಾರಂಭಿಸಿದರು. ದೊಡ್ಡಕುಳಗಳ ತಂಟೆಗೆ ಯಾರೂ ಹೋಗಲೇ ಇಲ್ಲ. ಬಡವರ ವೋಟ್ ಬ್ಯಾಂಕ್ನ ಆಸೆಗೆ ಬಿದ್ದ ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಗೆ ಸಾಥ್ ನೀಡಿದವೇ ಹೊರತು ಅಂಕುಶ ಬಿಗಿಯಲು ಶ್ರಮಿಸಲೇ ಇಲ್ಲ.
ತುಟ್ಟ ತುದಿಯಲ್ಲೂ ಮನೆ !
ಮಂಗಳದೇವಿ ನಗರದಲ್ಲಿ ಕೆಲವು ವರ್ಷಗಳ ಹಿಂದೆ ಬೆಟ್ಟ ಕುಸಿದು ಹಲವಾರು ಮನೆಗಳು ಮಡಿಕೇರಿ-ವೀರಾಜಪೇಟೆ ರಸ್ತೆಗೆ ಬಿದ್ದಿತ್ತು. ಕೆಲವು ವರ್ಷಗಳ ಹಿಂದೆ ವೀರಾಜಪೇಟೆ ತಾಲೂಕಿನ ಚೋಮಬೆಟ್ಟ (ಕುಂದ್). ಚೇರಂಬಾಣೆ ಸಮೀಪದ ಬೆಟ್ಟಗಳು ಕುಸಿದವು. ಆದರೂ, ನಮ್ಮ ಜನತೆ, ಆಳುವವರು, ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ದಿವ್ಯ ನಿರ್ಲಕ್ಷ್ಯ ತೋರಿದರು. ರಾಜಾಸೀಟ್ ಬಳಿ ಪುರಾತತ್ವ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಭಾರೀ ಕಟ್ಟಡಗಳು ನಿಮರ್ಾಣಗೊಂಡವು. ರಾಜಾಸೀಟ್ ಪಕ್ಕಕ್ಕೆ ಪುಟಾಣಿ ರೈಲಿನ ಆಗಮನದಿಂದ ಬೆಟ್ಟವನ್ನು ಕೊರೆಯಲಾಯಿತು. ಇದರ ಪಕ್ಕದಲ್ಲಿ ಇಂದಿರಾ ನಗರವೂ ಕೂಡಾ ಬೆಟ್ಟದ ಮೇಲ್ಭಾಗಕ್ಕೆ ವಿಸ್ತರಣೆಗೊಂಡವು. ಹಲವು ದೊಡ್ಡಕುಳಗಳು ಪ್ರಕೃತಿ ವೀಕ್ಷಣೆಯ ನೆಪದಿಂದ ಬೆಟ್ಟದ ಮೇಲೆ ನಿವೇಶನಗಳನ್ನು ಭಾರೀ ಬೆಲೆಗೆ ಖರೀದಿಸಿ, ಹೊಟೇಲ್ ನಿಮರ್ಿಸಿ, ಪ್ರವಾಸಿಗರಿಗೆ ಪ್ರಕೃತಿ ತೋರಿಸಿ ಹಣ ಗಳಿಕೆ ಆರಂಭಿಸಿದರು. ಮಡಿಕೇರಿ ನಗರದಲ್ಲಿ ಆಕ್ರಮವಾಗಿ ಹಲವಾರು ಬಹುಮಹಡಿ ಕಟ್ಟಡಗಳು ಕೆಲವರ ರಕ್ಷಣೆಯೊಂದಿಗೆ ನಿಮರ್ಾಣಗೊಂಡವು. ಬೆರಳೆಣಿಕೆಯ ಮಂದಿ ಇಂತಹ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರೂ, ಬಹುತೇಕ ಮಂದಿ ಅಧಿಕಾರಿ ಶಾಹಿಗಳು ಯಾರದೋ ಮುಲಾಜಿಗೆ ಬಿದ್ದು ಮೌನವಹಿಸಿದರು.
ನದಿ ಪಾತ್ರಗಳಲ್ಲಿಯೂ ಮನೆಗಳು
ಇದೇ ರೀತಿಯ ಸಮಸ್ಯೆಗಳು ಹಲವಾರು ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿಯೂ ಆರಂಭವಾಯಿತು. ರಾಜ್ಯ, ದೇಶ, ವಿದೇಶಗಳಿಂದಲೂ ಕೊಡಗಿಗೆ ಕಾಮರ್ಿಕರು, ಪ್ರವಾಸಿಗರು, ಉದ್ಯೋಗಿಗಳು ನಿರಂತರವಾಗಿ ಆಗಮಿಸುತ್ತಾರೆ. ಇಂತಹವರಲ್ಲಿ ಬಾಂಗ್ಲಾ ದೇಶಿಗರು, ರೋಹಿಂಗ್ಯಾಗಳು ಕೂಡಾ ಸೇರಿದ್ದಾರೆ. ಇವರು ಸ್ಥಳೀಯರೂ ಸೇರಿ ಪಂಚಾಯಿತಿ ಮಟ್ಟಗಳಲ್ಲಿ ಅನಧಿಕೃತವಾಗಿ ಕಾವೇರಿ ನದಿಯ ಅಂಚನ್ನೇ ಅತಿಕ್ರಮಿಸಲಾರಂಭಿಸಿದರು. ನಾಪೋಕ್ಲು ಸಮೀಪದ ಚೆರಿಯಪರಂಬು, ಸಿದ್ಧಾಪುರ ಸಮೀಪದ ಕರಡೀಗೋಡು, ಕುಶಾಲನಗರ ಇತ್ಯಾದಿ ಕಡೆಗಳಲ್ಲಿ ನದಿಪಾತ್ರದೊಳಗೆ ಗುಡಿಸಲು, ಮನೆಗಳನ್ನು ಅನಧಿಕೃತವಾಗಿ ನಿಮರ್ಿಸಲಾರಂಭಿಸಿದರು. ಕುಶಾಲನಗರದಲ್ಲಂತೂ ಕಾವೇರಿ ನದಿಯ ಅಂಚಿನ ಮನೆ ನಿವೇಶನಗಳು ಪ್ರತೀ ಸೆಂಟಿಗೆ ಸುಮಾರು 10ಲಕ್ಷ ರೂಪಾಯಿಗಳಿಗೆ ಬಿಸಿ ದೋಸೆಗಳಂತೆ ಬಿಕರಿಯಾದವು. ಹಲವಾರು ಕಡೆ ಅನಧಿಕೃತ ಲೇಔಟ್ಗಳು ಕೆಲವರ ಆಶ್ರೀವರ್ಾದದೊಂದಿಗೆ ನಿಮರ್ಾಣಗೊಂಡವು. ಅವುಗಳಿಗೆ ಸರಕಾರದಿಂದ ಅನಧಿಕೃತವಾಗಿ ಮೂಲಭೂತ ಸೌಕರ್ಯಗಳು ದೊರೆತವು. 'ರಿವರ್ ಬ್ಯಾಂಕ್' ವೋಟ್ ಬ್ಯಾಂಕ್ ಆಗಿ ಬದಲಾಯಿತು !
ನಿಯಮಾವಳಿಗಳು ಗಾಳಿಗೆ..
ಕಾನೂನಿ ಪ್ರಕಾರ ಯಾವುದೇ ನದಿ ಪಾತ್ರಗಳಲ್ಲಿ ನದಿಯ ಮಧ್ಯಭಾಗದಿಂದ ಕನಿಷ್ಠ 33 ಮೀಟರ್, ಗರಿಷ್ಠ ಪ್ರವಾಹ ಮಟ್ಟ ಅಂದರೆ, 500 ಮೀಟರ್ ದೂರದವರೆಗೆ ದಡದ ಇಕ್ಕೆಲಗಳಲ್ಲಿ ವಾಣಿಜ್ಯ ಕಟ್ಟಡ, ವಸತಿ ನಿಮರ್ಾಣದಂತಹ ಕಾರ್ಯಕ್ಕೆ ಬಳಸುವಂತಿಲ್ಲ. ಈ ಅಳತೆಯ ಭೂಮಿಯನ್ನು ಕೇವಲ ಕೃಷಿ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾಗಿದೆ. ಆದರೆ, ಕಾವೇರಿ ನದಿ ಪಾತ್ರ ಸೇರಿದಂತೆ ಬಹುತೇಕ ಕಡೆ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಈ ನಿಯಮದ ಬೇಷರತ್ ಉಲ್ಲಂಘನೆಯೇ ಕುಶಾಲನಗರ ಸೇರಿದಂತೆ ವಿವಿಧ ಕಡೆ ವಸತಿ ಪ್ರದೇಶಗಳು ಕಾವೇರಿ ಪ್ರವಾಹದಲ್ಲಿ ಮುಳುಗಲು ಏಕೈಕ ಕಾರಣ.
ಕೆಲವರು ಕಾವೇರಿ ನದಿ ಸೇರಿದಂತೆ ವಿವಿಧ ನದಿಯ ಅಂಚುಗಳಿಗೆ ಮಣ್ಣು ಸುರಿದು, ಅಲ್ಲಿ ಕಟ್ಟಡ ನಿಮರ್ಾಣದಂತಹ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಇಂತಹ ಕಡೆ (ಉದಾ: ಕುಶಾಲನಗರದ ನಿಸರ್ಗದ ಬಳಿ) ನದಿಯ ಪಾತ್ರದಲ್ಲಿ ಖಾಯಂ ಕಟ್ಟಡಗಳನ್ನು ನಿಮರ್ಿಸುವಂತಿಲ್ಲ. ಆದರೆ, ಕಾನೂನು ಬಾಹಿರವಾಗಿ ಅಲ್ಲಲ್ಲಿ ಕಟ್ಟಡವನ್ನು ಕೆಲವರ ಕೃಪಾಶರ್ೀದದೊಂದಿಗೆ ನಿಮರ್ಾಣವಾಗಿದೆ. ಈ ಕಟ್ಟಡಗಳು ಪ್ರವಾಹದಿಂದ ಹಾನಿಯಾಗಿದೆ. ಇಂತಹವರು ಸಹಾ ಇದೀಗ ನಾವು ಸಂತ್ರಸ್ಥರು ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವರು !
ಗಂಜೀ ಕೇಂದ್ರ ಎಂಬ 'ನುಂಗುತಾಣ'
ಪ್ರತೀವರ್ಷವೂ ಕಾವೇರಿನದಿ ಉಕ್ಕಿಹರಿವ ಸಂದರ್ಭ ಹಲವಾರು ಮನೆಗಳಿಗೆ ನೀರು ನುಗ್ಗುವುದು ಸವರ್ೇಸಾಮಾನ್ಯ. ನದಿಯೊಳಗೆ ಮನೆಗಳಿವೆಯಲ್ಲ. ಇಲ್ಲಿರುವವರನ್ನು ತಾತ್ಕಾಲಿಕವಾಗಿ ಗಂಜೀಕೇಂದ್ರಕ್ಕೆ ಕರೆತಲಾಗುತ್ತದೆ. ಬೆಟ್ಟದ ಮೇಲೆ ಮನೆ ಕಟ್ಟಿದವರಿಗೂ ಗಂಜಿಕೇಂದ್ರದಲ್ಲಿ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವ ಗೊಡವೆಗೆ ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಮುಂದಾಗಿಲ್ಲ. ಬಹುತೇಕ ಬಿಳಿಯಾನೆ ಗಳಿಗೆ ಗಂಜೀಕೇಂದ್ರವು ಹೊಟ್ಟೆಹೊರೆಯುವ ಕೇಂದ್ರವಾದಂತಿದೆ. ಇಂತಹ ಬಿಳಿಯಾನೆಗಳಿಗೆ ಲಕ್ಷಾಂತರ ರೂಪಾಯಿ ದಕ್ಕುತ್ತಿದೆ. ಜನತೆ ನಿರಾಶ್ರಿತರಾಗಿ, ನಿರ್ವಸಿತರಾದಷ್ಟು ಇಂತಹವರಿಗೆ ಲಾಭ ಅಧಿಕ !
ನಿವೇಶನ ವಿತರಣೆ ಏಕಿಲ್ಲ ?
ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ವಲಸಿಗರು ಕೊಡಗಿಗೆ ಆಗಮಿಸುತ್ತಾರೆ. ಇವರಲ್ಲಿ ಬಹುತೇಕ ಮಂದಿ ಇಲ್ಲಿಯೇ ತಳವೂರುವರು. ಸ್ಥಳೀಯರು ಸೇರಿದಂತೆ ವಲಸಿಗರಿಗೆ ನಿವೇಶನ ನೀಡುವ ಪ್ರಯತ್ನವನ್ನು ಈವರೆಗೆ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಮಾಡಲೇ ಇಲ್ಲ. ವಲಸಿಗರನ್ನು ಜಿಲ್ಲೆಯಿಂದ ಹೊರದಬ್ಬುವುದನ್ನು ಬಿಟ್ಟು ಅವರಿಗೆ ರತ್ನಗಂಬಳಿ ಹಾಸಿ ಸ್ವಾಗತ ಬಯಸಲಾಗುತ್ತಿದೆ. ಕೆಲವು ಸಂಘಟನೆಗಳು ಈ ಬಗ್ಗೆ ಆಡಳಿತ ವರ್ಗ, ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿ ಸೋತವು. ಇವರ ನಿರ್ಲಕ್ಷ್ಯದ ಪರಿಣಾಮವಾಗಿಯೇ ಬಡವರು, ನದಿತಟ, ಬೆಟ್ಟ ಗುಡ್ಡಗಳ ಮೇಲೆ ಆಶ್ರಯ ಪಡೆದಿರುವರು. ಪ್ರವಾಹ, ಭೂಕುಸಿತಕ್ಕೆ ಸಿಲುಕಿ ನಲುಗಿರುವವರಲ್ಲಿ ಇವರ ಸರಾಸರಿ 60-80 !
ಪ್ರವಾಸಿಗರ ಸುನಾಮಿ !
1996ರಲ್ಲಿ ಭಾರತ ದೇಶದ ಮೇಲೆ ಭೀಕರ ಸುನಾಮಿ ಅಪ್ಪಳಿಸಿತ್ತು. ಬಳಿಕ ಕರಾವಳಿ ಪ್ರದೇಶಗಳಿಗೆ ತೆರಳುತ್ತಿದ್ದ ಪ್ರವಾಸಿರು ಸುನಾಮಿಯ ರೂಪದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಸುರಕ್ಷಿತ ಪ್ರದೇಶಗಳತ್ತ ದಾಂಗುಡಿ ಇಡಲಾರಂಭಿಸಿದರು. ಅವರ ಲೆಕ್ಕಾಚಾರದಲ್ಲಿ ಕೊಡಗು 'ಸುರಕ್ಷಿತ' ತಾಣವಾಗಿತ್ತು ! (ಈಗ ಅದು ಹುಸಿಯಾಗಿದೆ ! ?) ಸುಮಾರು 12-13ವರ್ಷಗಳ ಕಾಲ ಕೊಡಗಿನಲ್ಲಿ ಪ್ರವಾಸೋದ್ಯಮ ವಿಜೃಂಭಿಸಿತ್ತು. ಈ ಸಮಯದಲ್ಲಿ ಕೊಡಗಿನಲ್ಲಿ ಅವ್ಯಾಹತವಾಗಿ ಹೋಂಸ್ಟೇಗಳು ಹುಟ್ಟಿಕೊಂಡವು. ಇಡೀ ಕೊಡಗು ಪ್ರವಾಸೋದ್ಯಮ ಕೇಂದ್ರವಾಯಿತು.ಕೊಡಗಿನ ಹೆಸರಾಂತ ದೇಗುಲಗಳೂ ಪ್ರವಾಸಿಕೇಂದ್ರಗಳಾದವು ! ? ಅದಕ್ಕೆ ತಕ್ಕಂತೆ ಕೊಡಗು ಬದಲಾವಣೆಯಾಗುತ್ತಾ ಸಾಗಿತು. ಅಂಕೆ ಇಲ್ಲದ ಹೋಂಸ್ಟೇಗಳಿಗೆ ಕಾನೂನು ಜಾರಿಯಾಗಲೇ ಇಲ್ಲ. ಜಿಲ್ಲಾಡಳಿತ ಹಲವು ಬಾರಿ ಹೋಂಸ್ಟೇಗಳ ನೋಂದಣಿಗೆ ಆದೇಶ ನೀಡಿದರೂ, ಕಾನೂನು ಕ್ರಮಕ್ಕೆ ಮುಂದಾಗಲೇ ಇಲ್ಲ. ಆದೇಶವು ಕೇವಲ ನಾಮಾಕಾವಸ್ಥೆಗೆ ಮೀಸಲಾಯಿತು.
ಬ್ರಿಟಿಷರ ಕಾನೂನು ಜಾರಿ !
ಕೊಡಗು ಜಿಲ್ಲೆ ಬ್ರಿಟಿಷರ ಆಡಳಿತದಲ್ಲಿ ಇನ್ನೂ ಇದೆಯೋ ಎಂಬ ಸ್ಥಿತಿ ಇದೆ. ಕೊಡಗು ಜಿಲ್ಲೆಯಲ್ಲಿ 1865 ಭೂ ಕಂದಾಯ ನೀತಿ ಇನ್ನೂ ಜಾರಿಯಲ್ಲಿದೆ. ಇದಕ್ಕೆ ಕಾರಣ ನಮ್ಮ ಆಡಳಿತ ಶಾಹಿಗಳು, ಮತ್ತು ಜನಪ್ರತಿನಿಧಿಗಳು. ಕನರ್ಾಟಕ ರಾಜ್ಯದಲ್ಲಿ ಕೊಡಗು ಇದೆಯೋ ಎಂಬ ಸಂಶಯ ಜನತೆಯನ್ನು ಕಾಡುತ್ತಿದೆ. ಇಡೀ ಕನರ್ಾಟಕಕ್ಕೆ ಅನ್ವಯವಾಗುವ ಕಾನೂನು ಇಲ್ಲಿಗೆ ಅನ್ವಯ ಆಗುವುದಿಲ್ಲವಂತೆ ? 1964 ರ ಭೂ ಕಂದಾಯ ಕಾನೂನು ಇಡೀ ಕನರ್ಾಟಕಕ್ಕೆ ಅನ್ವಯ ಆಗುತ್ತಿದೆ. ಅದರ ಪ್ರಕಾರ ಆಯಾ ಜಮೀನಿನ ಮೇಲೆ ಅದರ ಮಾಲೀಕನಿಗೆ ಸಂಪೂರ್ಣ ಅಧಿಕಾರವಿದೆ. ಆದರೆ, ಕೊಡಗಿನಲ್ಲಿ ಇಲ್ಲವಂತೆ !
ಕೊಡಗು ಎಲ್ಲಿದೆ ? !
ಹಾಗಾದಲ್ಲಿ ಕೊಡಗು ಕನರ್ಾಟಕದಲ್ಲಿ ಇಲ್ಲವೇ ? ಕೊಡಗು ಇರುವ ರಾಜ್ಯ, ದೇಶ ಅದಾವುದು ? ! ಇದು ನಮ್ಮ ರಾಜ್ಯದ ಬಹುತೇಕ ಜನತೆಗೆ ತಿಳಿಯದ ಕಟು ಸತ್ಯ. ಇದರಿಂದಾಗಿಯೇ ಇಲ್ಲಿನ ಜನತೆಗೆ ತಮ್ಮ ಜಮೀನಿನ ಅಧಿಕೃತ ದಾಖಲೆಗಳೆ ಸಿಗುತ್ತಿಲ್ಲ. ದಾಖಲೆಗಳೆ ಇಲ್ಲದಿರುವುದರಿಂದ ಹೋಂಸ್ಟೇಯಂತಹ ವಾಣಿಜ್ಯದ ವ್ಯವಹಾರಗಳಿಗೆ ಜನತೆ ಪರವಾನಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ರಾಜ್ಯ ಸರಕಾರ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳ ತೆರಿಗೆಯಿಂದ ವಂಚಿತವಾಗುತ್ತಿದೆ ! ಇದನ್ನೇ ದಾಳವಾಗಿ ಬಳಸಿಕೊಂಡ ಕೆಲವರು ತಮಗೆ ಇಷ್ಟಬಂದ ಕಡೆ, ನದಿಯ ಅಂಚುಗಳಲ್ಲಿ, ಬೆಟ್ಟದ ನೆತ್ತಿಯ ಮೇಲೆ ಅನಧಿಕೃತ ಹೋಂಸ್ಟೇ ನಿಮರ್ಿಸಿದರು. ಅಲ್ಲಿಗೂ ರಸ್ತೆ ಸಂಪರ್ಕ ಬೇಕಾಯಿತು. ಅವೈಜ್ಞಾನಿಕವಾಗಿ ಬೇಕಾದ ಕಡೆ ಬೃಹತ್ ಯಂತ್ರ ಬಳಸಿ ರಸ್ತೆ ನಿಮರ್ಾಣವು ಅವ್ಯಾಹತವಾಗಿ ನಡೆಯಿತು. ಯಾವ ಪರಿಸರ ಪ್ರೇಮಿಯೂ ಈ ಬಗ್ಗೆ ಸೊಲ್ಲೆತ್ತಲಿಲ್ಲ ! ನೀರಿಗಾಗಿ ಬೆಟ್ಟದ ತುದಿಗಳಲ್ಲಿ ಬೋರ್ವೆಲ್ ಕೊರೆದರು. ಮನಸೋ ಇಚ್ಛೇ ಭೂ ಪರಿವರ್ತನೆಯಾಯಿತು. ಆಹಾರ ಧಾನ್ಯಗಳನ್ನು ಬೆಳೆಯುವ ಫಲವತ್ತಾದ ಭೂಮಿಯು ನಿರಾಂತಕವಾಗಿ ವಾಣಿಜ್ಯ ಬೆಳೆಗಳ ಪ್ರದೇಶವಾಯಿತು. ಹಲವಾರು ಕಡೆ ಗದ್ದೆಗಳು ನಿವೇಶನಗಳಾಗಿ ಬದಲಾದವು. ಇದಕ್ಕೆ ಅಂಕುಶ ಹಾಕುವ ಕಾನೂನು ಬರಲೇ ಇಲ್ಲ. ಇದು ಕೊಡಗಿನ ಭೂ ಕುಸಿತಕ್ಕೆ ಪ್ರಬಲ ಕಾರಣಗಳಲ್ಲಿ ಒಂದಾಗಿದೆ ಎನ್ನಬಹುದು.
ಬೀಟೆ ಮರದ ಸೌದೆ !
1865ರ ಭೂ ಕಂದಾಯ ಕಾಯಿದೆಯಂತೆ ಭೂ ಮಾಲೀಕರಿಗೆ ಮರದ ಮಾಲೀಕತ್ವವಿಲ್ಲ. ಪರಿಣಾಮ ಕೋಟ್ಯಾಂತರ ರೂಪಾಯಿ ಮೌಲ್ಯದ ಉತ್ಕೃಷ್ಟ ಮರಗಳು ಸೌದೆಗಾಗಿ ಬಳಕೆಯಾಗುತ್ತಿವೆ. ಇದರಲ್ಲಿ ಅಪಾರ ಬೆಲೆ ಬಾಳುವ ಬೀಟೆ ಮರಗಳಂತಹ ದುಬಾರಿ ಬೆಲೆಯ ಮರಗಳೂ ಸೇರಿವೆೆ ಎಂದು ವಿಷಾದದಿಂದ ಹೇಳಬೇಕಾಗಿದೆ. ಸ್ಥಳೀಯ ಜನತೆ ಮರದಿಂದ ಮಾಡಿದ ಪೀಠೋಪಕರಣ ಮಾಡಿಸುವಂತಿಲ್ಲ. ತಮ್ಮ ಜಮೀನಿನಲ್ಲಿರುವ ಮರಗಳಿಂದ ಮನೆ ಕಟ್ಟಿಕೊಳ್ಳುವಂತಿಲ್ಲ. ಮರ ಕಡಿತಲೆಯ ಪರವಾನಿಗಾಗಿ ಸಾಮಾನ್ಯ ರೈತ ಅರಣ್ಯ ಇಲಾಖಾ ಸಿಬ್ಬಂದಿ-ಅಧಿಕಾರಿಗಳಿಗೆ ಸಹಸ್ರಾರು ರೂಪಾಯಿಗಳ ಲಂಚ ನೀಡಬೇಕಿದೆ. ಜೀವಮಾನ ಬಹುಪಾಲು ಅಮೂಲ್ಯ ಸಮಯವನ್ನು ತಮ್ಮ ಜಮೀನಿನ ದಾಖಲೆ ಸರಿಪಡಿಸಲು, ಮರ ಕಡಿತಲೆಗೆ ಪರವಾನಿಗೆ ಪಡೆಯಲು ವ್ಯಯಿಸಬೇಕಾಗಿದೆ. 1964ರ ಭೂ ಕಂದಾಯ ಕಾನೂನು ಕೊಡಗಿನಲ್ಲಿ ಸಮರ್ಪಕ ಅನುಷ್ಠಾನವಾದಲ್ಲಿ ಜನತೆ ವೈವಿಧ್ಯಮಯ ಮರಗಳನ್ನು ಬೆಳೆಸಲು, ಬಳಸಲು ಆಸಕ್ತಿ ತೋರುವ ಸಾಧ್ಯತೆಗಳಿವೆ.
ಅರಣ್ಯ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳಿಗೆ ಈ ಮೇಲಿರುವ ನಿಯಮಾವಳಿಗಳು ಅನ್ವಯವಾಗುತ್ತಿಲ್ಲ. ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಜಿಲ್ಲೆಗೆ ಬರುವ ಹೊರ ಜಿಲ್ಲೆ, ರಾಜ್ಯದ ಸಿಬ್ಬಂದಿವರ್ಗ ಉನ್ನತ ಮಟ್ಟದ ಅಧಿಕಾರಿಯಾಗಿ ಇಲ್ಲಿಂದ ವಗರ್ಾವಣೆಯಾಗುವ ಸಮಯದಲ್ಲಿ ಕೋಟ್ಯಾಂತರ ರೂಪಾಯಿಗಳ ಮೌಲ್ಯದ ಲೋಡುಗಟ್ಟಲೆ ಪೀಠೋಪಕರಣಗಳನ್ನು ಇಲ್ಲಿಂದ ಒಯ್ಯುತ್ತಿರುವರು ! ?
ಬತ್ತುತ್ತಿರುವ ಜೀವನದಿಗಳು !
ಇದರಿಂದ ನೊಂದ ಬಹುತೇಕ ರೈತರು ತಮ್ಮ ಮನಸಾಕ್ಷಿಗೆ ವಿರುದ್ಧವಾಗಿ ಪರವಾನಿಗೆ ರಹಿತವಾಗಿ ಕಡಿಯುವಂತಹ 20 ಜಾತಿಯ ಮರಗಳನ್ನು ಬೆಳೆಯುತ್ತಿದ್ದಾರೆ. ಉದಾ: ಸಿಲ್ವರ್ ಓಕ್, ಆಕೇಶಿಯಾ, ಸುಬಾಬುಲ್, ಹಾಲುವಾಣ, ಗಾಳಿಮರ, ಬಿದಿರು........ ಮುಂತಾದವನ್ನು ಬೆಳೆದು ಮಾರುತ್ತಿದ್ದಾರೆ. ಇದರಿಂದಾಗಿ ಪ್ರಕೃತಿಯಲ್ಲಿ ಜೀವವೈವಿಧ್ಯಕ್ಕೆ ಕಾರಣವಾಗಬೇಕಾದ ವೈವಿಧ್ಯಮಯ ಮರಗಿಡಗಳು ಕಾಣಬೇಕಾದ ಕಡೆ ಏಕ ಜಾತಿಯ(ಸಿಲ್ವರ್ ಓಕ್) ಮರಗಳೇ ಹೆಚ್ಚಾಗಿ ಕಾಣಬರುತ್ತಿವೆ. ಪರಿಣಾಮ ಪಾಕೃತಿಕ ಸಮತೋಲನ ತಪ್ಪುತ್ತಿದೆ. ಇಂತಹ ಹತ್ತಾರು ಕಾರಣಗಳಿಂದ ಭೂಮಿಯಲ್ಲಿನ ನೀರು ಇಂಗುವಿಕೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸುತ್ತಿದೆ. ಪರಿಣಾಮ ಬೇಸಿಗೆಯಲ್ಲಿ ಬತ್ತುತಿದ್ದ ಜೀವನದಿಗಳು ಸೆಪ್ಟೆಂಬರ್ ತಿಂಗಳಲ್ಲಿ ಬರಿದಾಗುವ ಸ್ಥಿತಿ ನಿಮರ್ಾಣವಾಗಿದೆ. ಈ ಪ್ರಕ್ರಿಯೆಯು 2012 ರಿಂದಲೇ ಆರಂಭವಾಗಿದೆ. ಅದರೂ, ಜನತೆ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಸಿಲ್ವರ್ ಓಕ್-ಇಲಾಖೆಯ ಸಾಥ್
ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕಾದ ಅರಣ್ಯ ಇಲಾಖೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿಗೆ ಮಾರಕವಾದ ಸಿಲ್ವರ್ ಓಕ್ ಮರಗಳನ್ನೆ ಅಧಿಕವಾಗಿ ಬೆಳೆಯುವತ್ತ ಜನತೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ. ಅರಣ್ಯ ಇಲಾಖೆಯ ಬಹುತೇಕ ಎಲ್ಲಾ ಸಸ್ಯಕ್ಷೇತ್ರಗಳಲ್ಲಿಯೂ ಪ್ರತೀ ವರ್ಷ ಲಕ್ಷಾಂತರ ಸಿಲ್ವರ್ ಓಕ್ ಗಿಡಗಳನ್ನು ಬೆಳೆಸಲಾಗುತ್ತದೆ. ಆ ಗಿಡಗಳಿಗೂ ಸಬ್ಸಿಡಿ ನೀಡಿ ಕೇವಲ 1ರೂಪಾಯಿಗೆ ಪ್ರತಿ ಗಿಡವನ್ನು ವಿತರಿಸಲಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಗೆ ಧಾರಾಳವಾಗಿ ಸಿಗುವ ಸಿಲ್ವರ್ ಓಕ್ ಗಿಡಗಳನ್ನೇ ಕೃಷಿಕರು ಅತ್ಯಧಿಕ ಪ್ರಮಾಣದಲ್ಲಿ ತಮ್ಮ ಜಮೀನಿನಲ್ಲಿ ಬೆಳೆಸುವತ್ತ ಆಸಕ್ತಿ ತೋರುತ್ತಿರುವರು. ಕೊಡಗಿನಲ್ಲಿ ಸಸ್ಯವೈವಿಧ್ಯ ನಾಶ ಮಾಡುವಲ್ಲಿ ಅರಣ್ಯ ಇಲಾಖೆಯ ಪಾತ್ರವೂ ಪ್ರಮುಖವಾಗಿದೆ ಎಂದು ಧಾರಾಳವಾಗಿ ಹೇಳಬಹುದು.ಬದಲಿಯಾಗಿ ಅರಣ್ಯ ಇಲಾಖೆ ಸಿಲ್ವರ್ ಓಕ್ ಬೆಳೆಸುವುದನ್ನು ನಿಲ್ಲಿಸಲು ಆಡಳಿತಶಾಹಿಗಳು ಆದೇಶ ನೀಡಲಿಲ್ಲ. ಬಹುಶ್ಯ ಬೆಳೆದರೂ, ಅದಕ್ಕೆ ಸರಕಾರಿ ಸಹಾಯಧನ ನಿಲ್ಲಿಸುವಂತೆ ನಾಮಾಕಾವಸ್ಥೆಗೂ ನಿದರ್ೇಶನ ನೀಡಲೂ ಇಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಕಾಡು ಜಾತಿಯ ಮರಗಳಿಗೆ ಮಾತ್ರ ಸರಕಾರದ ಸಹಾಯಧನ ದೊರೆಯಬೇಕು. ಸಿಲ್ವರ್ ಓಕ್ ಸಸಿಗಳನ್ನು ಸರಕಾರಿ ಸಸ್ಯಕ್ಷೇತ್ರಗಳಲ್ಲಿ ಬೆಳೆಯುವದನ್ನು ನಿಷೇಧಿಸಬೇಕಿದೆ.
ಮಾಪನ ಕೇಂದ್ರ ಸ್ತಬ್ಧ
ಹಾರಂಗಿ ಜಲಾಶಯದ ಸಮೀಪ ಹಿಂದೆ ಭೂಕಂಪನ ಮಾಪಕ ಕೇಂದ್ರವಿತ್ತು. ಅದು ಸ್ತಬ್ಧವಾಗಿತ್ತು. ಇದು ಕಾರ್ಯ ನಿರ್ವಹಿಸಿದ್ದಲ್ಲಿ ಕೊಡಗಿನಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ನಡೆಯುವ ಭೂ ಕಂಪನಗಳ ದಾಖಲಾತಿಯಾಗುತ್ತಿತ್ತು. ಆದರೆ, ಈ ಕೇಂದ್ರ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಭೂಕಂಪನದ ದಾಖಲಾತಿ ನಡೆಯಲಿಲ್ಲ. ಜಲಪ್ರಳಯದ ಸಮಯದಲ್ಲಿ ಭೂಕಂಪನವಾಗಿತ್ತೇ ಎಂಬ ಬಗ್ಗೆ ದಾಖಲೆಯೇ ಅಲಭ್ಯವಾಗಿದೆ. ಇದೀಗ ಜಿಲ್ಲಾಡಳಿತದ ಪ್ರಸ್ತಾವನೆ ಮೇರೆಗೆ ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ಇಂತಹ ವಿನೂತನ ಕೇಂದ್ರ ಸ್ಥಾಪನೆಯಾಗಿದೆ.
ಜಲಾಶಯವೋ ಕೆರೆಯೋ !
ಜಲಾಶಯ ನಿಮರ್ಾಣವಾಗಿ 5-6 ದಶಕಗಳು ಕಳೆದರೂ, ಹೂಳು ತೆಗೆಯದ ಹಾರಂಗಿ ಜಲಾಶಯವು ಕೆರೆಯಂತಾಗಿದೆ. ಪರಿಣಾಮ ಜಲಾಶಯ ತುಂಬಿದಾಗ ಹಿನ್ನೀರು ಬಹುದೂರದವರೆಗೂ ವ್ಯಾಪಿಸಿತ್ತು. ಹಾರಂಗಿ ಜಲಾಶಯ ನಿಮರ್ಾಣವಾದ ಬಳಿಕ ಈವರೆಗೂ ಜಲಾಶಯದ ಹೂಳು ಯಾರೂ ಆಸಕ್ತಿ ತೋರಲೇ ಇಲ್ಲ. ಇದರಿಂದಾಗಿ ಆ ಭಾಗದಲ್ಲಿ ಅಧಿಕ ತೇವಾಂಶದಿಂದಾಗಿ ಶೇಕಡಾ 95 ಭೂಪ್ರದೇಶ, ಬೆಟ್ಟ-ಗುಡ್ಡಗಳು ಕುಸಿದಿರಬಹುದಾದ ಸಾಧ್ಯತೆಗಳಿವೆ. ಕಾಲ-ಕಾಲಕ್ಕೆ ಜಲಾಶಯ ಹೂಳು ತೆಗೆದಿದ್ದಲ್ಲಿ ಈ ಅನಾಹುತದ ಪರಿಣಾಮ, ಭೀಕರತೆ ಕೊಂಚ ಕಡಿಮೆಯಾಗುತ್ತಿತೇನೋ !? ಮಿತಿ ಮೀರಿದ ಭೂ ಪರಿವರ್ತನೆಯಿಂದಾಗಿ ಈ ಭಾಗದ ಲವಣಾಂಶಯುಕ್ತ ನೀರು ಹಾರಂಗಿ ಜಲಾಶಯ ಸೇರಿ, ಕ್ರೈಸ್ಟ್ಗೇಟ್ ಮೂಲಕ ನದಿಗೆ ಸೇರುತ್ತಿತ್ತು.
ಕಾಡಾನೆಗಳ ಸಂಚಾರ-ಕೃಷಿಗೆ ಸಂಚಕಾರ
ಕೊಡಗಿನ ಬಹುತೇಕ ಕಡೆ ವರ್ಷದ ಎಲ್ಲಾ ದಿನಗಳಲ್ಲಿಯೂ ಕಾಡಾನೆಗಳ ಹಾವಳಿ ನಿರಂತರವಾಗಿರುತ್ತದೆ. ಅವುಗಳಿಗೆ ಅಭಯಾರಣ್ಯ, ಮೀಸಲು ಅರಣ್ಯಗಳಲ್ಲಿ ನೀರು, ಆಹಾರದ ಅಭಾವ ತಲೆದೋರಿದೆ. ಅವು ಆಹಾರ, ನೀರನ್ನು ಅರಸುತ್ತಾ, ವಲಸೆ ಹೋಗುತಾ, ಬೆಳೆಗಾರರ ತೋಟವನ್ನೇ ಆಶ್ರಯತಾಣವಾಗಿಸಿಕೊಳ್ಳುತ್ತಿವೆ. ಪ್ರತೀವರ್ಷವೂ ಕನಿಷ್ಠ 5-10 ಮಂದಿಯನ್ನು ಬಲಿ ತೆಗೆದುಕೊಳ್ಳುತ್ತವೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುವುದು ವಿರಾಳತೀವಿರಳ. ಪರಿಹಾರ ದೊರೆತರೂ, ನೆಪ ಮಾತ್ರಕ್ಕೆ ಸೀಮಿತ. ನೈಸಗರ್ಿಕ ವಿಕೋಪಗಳಿಂದ ಹಾನಿಯಾದಲ್ಲಿ ಪ್ರತೀ ಅಡಿಕೆ ಗಿಡಕ್ಕೆ ಬರೇ 1.70 ರೂಪಾಯಿ, ಪ್ರತೀ ಕಾಫಿ ಗಿಡಕ್ಕೆ 10 ರೂಪಾಯಿ ಎಂದು ಸರಕಾರ ಇತ್ತೀಚೆಗೆ ನಿಗದಿಪಡಿಸಿದೆ. ಈ ಸಮಸ್ಯೆಗಳಿಂದ ಮುಕ್ತವಾಗಲು ಕೊಡಗಿನ ಕಾಡಾನೆ ಹಾವಳಿ ಪೀಡಿತ ಗ್ರಾಮಗಳ ಜನತೆ ಕೃಷಿಯಿಂದ ವಿಮುಕ್ತಿ ಪಡೆಯಲು ಬಯಸುತ್ತಿದ್ದಾರೆ. ಇಲ್ಲ ನಾಮಾಕಾವಸ್ಥೆಗಾಗಿ ಕೃಷಿ ಮಾಡಿ, ಕಾಡಾನೆಗಳಿಂದ ನಷ್ಟವಾಗದ ಕಾಳುಮೆಣಸು, ಬಟರ್ ಪ್ರೂಟ್ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವತ್ತ ಆಸಕ್ತಿ ತೋರುತ್ತಿರುವರು. ಇದಕ್ಕೆ ಆಧಾರ ಮರವಾಗಿ ಬಹುತೇಕ ಕಡೆ ಸಿಲ್ವರ್ ಓಕ್ ಮರಗಳನ್ನು ಬೆಳೆಯುತ್ತಿರುವರು. ಹಲವಾರು ಕಡೆ ಸಹಸ್ರಾರು ಏಕರೆ ಭತ್ತ ಬೆಳೆಯುವ ಗದ್ದೆಗಳು ಈ ಸಮಸ್ಯೆಯಿಂದಾಗಿ ಪಾಳು ಬಿದ್ದಿವೆ. ಕಾಡಾನೆ ಹಾವಳಿ ತಡೆಯಲು ಸರಕಾರ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದಿರುವುದೇ ಸಮಸ್ಯೆ ಉಲ್ಭಣವಾಗಲು ಮೂಲ ಕಾರಣ. ಕಾಡಾನೆ ಸಮಸ್ಯೆಯಿಂದ ಕೊಡಗು ಮುಕ್ತಿ ಹೊಂದಿದ್ದಲ್ಲಿ ಮಾತ್ರ ಕೃಷಿಕರು ನಿರಾಂತಕವಾಗಿ ಬಿದಿರು, ಭತ್ತ, ಬಾಳೆ, ತೆಂಗು, ಕಂಗನ್ನು ಬೆಳೆಯಬಲ್ಲರು. ಅಂತಹ ದಿನಗಳು ಬರುವುದಾದರೂ ಎಂದು ? ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ಸರಕಾರ, ಜನಪ್ರತಿನಿಧಿಗಳು, ಇಲಾಖೆಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಕಾಡಿಗೆ ಅಟ್ಟುವ ನಾಟಕ-ಕಾಯಕ !
ಕೊಡಗಿನಲ್ಲಿ ಕಾಡಾನೆಗಳೇ ಇಲ್ಲ. ಎಲ್ಲವೂ ನಾಡಾನೆಗಳು ! ಅವುಗಳಿಗೆ ಜನತೆಯ, ಪಟಾಕಿಗಳ ಭಯವಿಲ್ಲ. ಇವುಗಳು ಕಾಡಿನಲ್ಲಿ ಇರುವುದೇ ಇಲ್ಲ. ನಮ್ಮ ಅಭಯಾರಣ್ಯಗಳಲ್ಲಿ ಬಿದಿರು ನಾಶವಾಗಿ ಹಲವಾರು ವರ್ಷಗಳೇ ಕಳೆದವು. ಅಲ್ಲಿ ಮತ್ತೆ ಬಿದಿರು ನೆಡುವ ಕಾರ್ಯಕ್ಕೆ ಅರಣ್ಯ ಇಲಾಖಾಧಿಕಾರಿಗಳು ಈವರೆಗೆ ಆಸಕ್ತಿ ತೋರಲೇ ಇಲ್ಲ. ಬಹುತೇಕ ಅಭಯಾರಣ್ಯಗಳು, ಮೀಸಲು ಅರಣ್ಯಗಳಲ್ಲಿ ಅನಧಿಕೃತವಾಗಿ ತೇಗದ ನೆಡುತೋಪುಗಳು ತಲೆ ಎತ್ತುತ್ತಲಿವೆ. ಈ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಪರಿಣಾಮ ಕಾಡುಪ್ರಾಣಿಗಳಿಗೆ ಅಲ್ಲಿ ಆಹಾರದ ಕೊರತೆ ಎದುರಾಗಿದೆ. ಆಹಾರ ಹುಡುಕುತ್ತಾ ಬರುವ ಕಾಡಾನೆಗಳು ಕಾಫಿ ತೋಟಗಳಲ್ಲಿಯೇ ವಾಸಿಸುತ್ತವೆ. ಅವುಗಳನ್ನು ಕಾಡಿಗೆ ಅಟ್ಟುವ ನಾಟಕವನ್ನು ಅರಣ್ಯ ಇಲಾಖೆ ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡುತ್ತಿದೆ.
ಪಾರಂಪರಿಕ ಕೃಷಿಗೆ ತಿಲಾಂಜಲಿ ?
ಈ ನಾಟಕಕ್ಕಾಗಿ ಪ್ರತೀವರ್ಷವೂ ಲಕ್ಷಾಂತರ ರೂಪಾಯಿ ಅನುದಾನ ಇಲಾಖೆಗೆ ದೊರೆಯುತ್ತದೆ. ಆನೆಗಳನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಿದಾಗ ಉಂಟಾಗುವ ಅಪಾರ ಹಾನಿ ಬೆಳೆಗಾರನಿಗೆ, ಅನುದಾನ ಇಲಾಖೆಗೆ ! ? ಕಡಿತಲೆಗೆ ಪರವಾನಿಗೆ ಇರುವ ಮರಗಳನ್ನು ಬೆಳೆದಲ್ಲಿ ಬೆಳೆಗಾರನಿಗೆ ನಷ್ಟವಾಗುವುದಿಲ್ಲ. ಕೆಲವು ವರ್ಷಗಳ ಬಳಿಕ ಆತನಿಗೆ ಆದಾಯದ ಖಾತ್ರಿಯೂ ಇದೆ. ಇದರಿಂದಾಗಿ ಹಲವು ಬೆಳೆಗಾರರು ಈ ವಿಭಿನ್ನ ಕ್ರಮದ ಮೂಲಕ ಪಾರಂಪರಿಕ ಕೃಷಿಯಿಂದ ವಿಮುಖರಾಗುತ್ತಿರುವರು. ಹಲವರು ಸಾಂಪ್ರದಾಯಿಕ ಏಲಕ್ಕಿ ತೋಟಗಳನ್ನು ಕಾಫಿ ತೋಟಗಳಾಗಿ ಪರಿವತರ್ಿಸಿದರು. ಕಾಫಿಗೆ ಮುಕ್ತ ಮಾರುಕಟ್ಟೆ, ಬೆಲೆಯ ಏರಿಕೆ ಪರಿಣಾಮ ಮರಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಯಿತು. ಹಲವು ಕಡೆ ಭತ್ತದ ಗದ್ದೆಗಳನ್ನು ತೋಟಗಾರಿಕಾ ಬೆಳೆಗಳಿಗೆ ಬದಲಾದವು. ಹಲವಾರು ಕಡೆ ಶುಂಠಿ ಕೃಷಿಯು ಅವ್ಯಾಹತವಾಗಿ ಮುಂದುವರಿಯಿತು. ಪರಿಣಾಮ ಪರಿಸರ ಸಮತೋಲನ ತಪ್ಪಿ ಹೋಯಿತು.
ಮಿತಿಮೀರಿದ ರಾಸಾಯನಿಕ ಬಳಕೆ
ಜಿಲ್ಲೆಯ ಕೃಷಿಕರು ಅರಿತೋ ಅರಿಯದೆಯೋ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವರು. ಇದು ಕೆಲವೊಮ್ಮೆ ಮಿತಿ ಮೀರುವುದುಂಟು. ಜಿಲ್ಲೆಯ ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳು ಕೃಷಿಕರಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವಂತೆ ಸಲಹೆ ನೀಡುತ್ತಿರುವುದು ಇದಕ್ಕೆ ಕಾರಣ. ಕೃಷಿಗೆ ಬಳಸಲು ಯೋಗ್ಯವಾದ ಸಾವಯವ ಮತ್ತು ಜೈವಿಕ ಗೊಬ್ಬರಗಳಿವೆ. ಅದೇ ರೀತಿ ಜೈವಿಕವಾಗಿ ರೋಗನಿಯಂತ್ರಕಗಳಿವೆ. ಈ ಬಗ್ಗೆ ಯಾವ ಇಲಾಖಾಧಿಕಾರಿಗಳು ಜನತೆ ಸಕಾಲಿಕವಾಗಿ ಮಾಹಿತಿ ನೀಡುತ್ತಿಲ್ಲ. ಪರಿಣಾಮ ಇವುಗಳ ಲಭ್ಯತೆಯ ಬಗ್ಗೆ ಕೃಷಿಕರಿಗೆ ಮಾಹಿತಿಯು ಲಭ್ಯವಿಲ್ಲ. ಸರಕಾರವು ಜೈವಿಕ, ಸಾವಯುವ ಗೊಬ್ಬರಗಳಿಗೆ ಸಹಾಯಧನವನ್ನು ಹೆಚ್ಚಾಗಿ ನೀಡುತ್ತಿಲ್ಲ. ಈ ಹತ್ತು ಹಲವು ಕಾರಣಗಳಿಂದಾಗಿ ಕೃಷಿಕರು ನಿಯಮಿತವಾಗಿ ರಾಸಾಯನಿಕ ಗೊಬ್ಬರ ಕೀಟನಾಶಕಗಳನ್ನು ಮಿತಿ ಮೀರಿ ಬಳಸುತ್ತಿರುವರು. ಪರಿಣಾಮ ಪರಿಸರ ಅಸಮತೋಲನವು ಕಾಣಬರುತ್ತಿದೆ. ಇದು ಪಾರಿಸಾರಿಕ ಜೀವಿಗಳ ನಾಶಕ್ಕೆ , ಮಣ್ಣು, ನೀರು, ಆಹಾರಗಳ ಕಲುಶಿತಕ್ಕೆ ಕಾರಣವಾಗಿದೆ. ಪರಿಸರವೆಂದು ಹಾಡಿ ಹೊಗಳುವವರು ಈ ಬಗ್ಗೆ ಚಕಾರವೆತ್ತದಿರುವುದು ವಿಷಾದನೀಯ ಅಂಶ.
ಸರಕಾರದಿಂದಲೇ ಮರಗಳ ವಿನಾಶ ?!
ಕೊಡಗಿನಲ್ಲಿ ಕೆಲವು ವರ್ಷಗಳ ಹಿಂದೆ ಬಿರುನಾಣಿ, ಚೇಲಾವರ, ಕಕ್ಕಬೆ, ಯವಕಪಾಡಿ, ನಾಲಡಿ, ಅಯ್ಯಂಗೇರಿ ಸೇರಿದಂತೆ ವಿವಿಧೆಡೆ ಬೃಹತ್ ಪ್ರಮಾಣದ ಮರಗಳ ಲೂಟಿಯಾಗಿತ್ತು. ಈ ಬಗ್ಗೆ 1980-90 ದಶಕದಲ್ಲಿ ಲೋಕಸಭೆಯಲ್ಲೂ ಚಚರ್ೆಯಾಗಿತ್ತು. ಇತ್ತೀಚೆಗೆ ಹೈಟೆನ್ಷನ್ ವಿದ್ಯುತ್ ಲೈನ್ ನೆಪದಲ್ಲಿ ಅದೂ ಅಭಯಾರಣ್ಯದಲ್ಲಿದ್ದ ಸಾವಿರಾರು ಹೆಮ್ಮರಗಳು, ಲಕ್ಷಾಂತರ ಮರಗಿಡಗಳು ಧರೆಗೆ ಉರುಳಿದವು. ಅಭಯಾರಣ್ಯದಲ್ಲಿ ಮರಗಳಿಗೆ ಅಭಯವಿಲ್ಲದಾಯಿತು. ಇರುವ ಕಿರು ರಸ್ತೆಯನ್ನೇ ಸಕಾಲಿಕವಾಗಿ ದುರಸ್ತಿ ಮಾಡಲು ಆಗುತ್ತಿಲ್ಲ. ಅಂತಹದ್ದರಲ್ಲಿ ಆ ಇಲಾಖೆಯು ಹೆದ್ದಾರಿ ವಿಸ್ತರಣೆಯ ನೆಪದಲ್ಲಿ ಶತಮಾನದಷ್ಟು ಪುರಾತನ ಸಾವಿರಾರು ಹೆಮ್ಮರಗಳನ್ನು ಅನಗತ್ಯವಾಗಿ ಕಡಿದು ಉರುಳಿಸಿತ್ತು. ಆದರೂ, ರಸ್ತೆ ವಿಸ್ತರಣೆ ಆಗಲೇ ಇಲ್ಲ ! ಈ ಮರಗಳು ಕೇರಳಕ್ಕೆ ಸಾಗಾಟವಾಯಿತು. ಅದೇ ವೀರಾಜಪೇಟೆಯಿಂದ ಮಡಿಕೇರಿಗೆ ಸಾಗುವ ವಿದ್ಯುತ್ ಲೈನ್ ದಶಕಗಳು ಕಳೆದರೂ ಇನ್ನೂ ಪೂರ್ಣಗೊಳ್ಳದಿರಲು ಅರಣ್ಯ ಇಲಾಖೆಯ ದ್ವಿಮುಖ ಧೋರಣೆಯೇ ಪ್ರಮುಖ ಕಾರಣ ! ತನ್ನ ಜಮೀನಿನಲ್ಲಿ ಬೆಳೆದ ಮರಗಳನ್ನು ತನ್ನ ಉಪಯೋಗಕ್ಕೆ ಬಳಸಲು ಅನುಮತಿ ನೀಡಲು ಹಿಂದೇಟು ಹಾಕುವ ಇಲಾಖೆ, ಸರಕಾರ, ಜಿಲ್ಲಾಡಳಿತ ಅಭಯಾರಣ್ಯಗಳಲ್ಲಿ, ರಸ್ತೆ ಬದಿಯ ಮರಗಳನ್ನು ಕಡಿಯುವ ಬಗ್ಗೆ ತನ್ನ ಸಹಮತ ವ್ಯಕ್ತಪಡಿಸಿತ್ತು. ಇದು ಆ ಇಲಾಖೆಯ ಕುಟಿಲ ನೀತಿಗೆ ತಾಜಾ ಉದಾಹರಣೆ . ಆದರೆ, ಇತ್ತೀಚೆಗೆ ಬೆಂಗಳೂರಿನ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಖಾಸಗಿ ಟಿ.ವಿ ವಾಹಿನಿಯ ಸಂದರ್ಶನದಲ್ಲಿ ಕೊಡಗಿನಲ್ಲಿ 50 ಸಾವಿರಕ್ಕೂ ಅಧಿಕ ಮರಗಳು ಸ್ಥಳೀಯರಿಂದ ನಾಶವಾಗಿವೆ ಎಂಬ ಬೇಜವ್ಧಾರಿಯುತವಾಗಿ ಆರೋಪಿಸಿದ್ದರು. ಈ ಬಗ್ಗೆ ಯಾರೂ ಸೊಲ್ಲೆತ್ತಲಿಲ್ಲ !
ಅರಣ್ಯ ಇಲಾಖೆಯ ವತಿಯಿಂದ ಬೆಳೆಸಲಾಗುವ ಕೇವಲ ಎರಡು ಸಸ್ಯಕ್ಷೇತ್ರಗಳಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸಿ ರೈತರಿಗೆ ವಿತರಿಸಲಾಗುತ್ತಿದೆ. ಇಂತಹ ಹಲವಾರು ನರ್ಸರಿಗಳು ಕೊಡಗಿನಲ್ಲಿವೆ. ಆದರೂ, ಕೆಲವರು ಕೊಡಗಿನಲ್ಲಿ ಮರಗಳನ್ನು ಕಡಿಯುತ್ತಿರುವ ಬಗ್ಗೆ, ಮಾತ್ರ ಕೆಲವರು ಉಲ್ಲೇಖಿಸುತ್ತಿರುವುದು ಖಂಡನೀಯ.
ಲಕ್ಷಾಂತರ ಬಟರ್ಪ್ರೂಟ್ ಗಿಡಗಳು
ನಾಲ್ಕಾರು ವರ್ಷಗಳಿಂದ ಬಟರ್ಪ್ರೂಟ್ಗೆ ವಿಪರೀತ ಬೇಡಿಕೆ ಏರಿದೆ. ಬಹುತೇಕ ಕೃಷಿಕರು ಸುಲಭದಲ್ಲಿ ಹಣ ಗಳಿಸಲು ಬಟರ್ಪ್ರೂಟ್ ಹಣ್ಣಿನ ಗಿಡಗಳನ್ನು ಎಲ್ಲಾ ಕಡೆ ನೆಡುತ್ತಿದ್ದಾರೆ. ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಆವರಣದ ಸಸ್ಯಕ್ಷೇತ್ರದಲ್ಲಿಯೇ ಸಾವಿರಾರು ಗಿಡಗಳು ಮಾರಾಟವಾಗುತ್ತಿವೆ. ಸಾವಿರಾರು ಖಾಸಗಿ ಸಸ್ಯಕ್ಷೇತ್ರಗಳು ಸಹಾ ಈ ಗಿಡಗಳನ್ನು ಬೆಳೆದು ಜಿಲ್ಲೆಯ ಬೆಳೆಗಾರರಿಗೆ ಮಾರಾಟ ಮಾಡುತ್ತಿವೆ. ತಮಿಳುನಾಡಿನ ತಾಂಡಿಗುಡಿ ಎಂಬಲ್ಲಿಂದಲೂ ಲಕ್ಷಾಂತರ ಸಸಿಗಳು ಕೊಡಗಿಗೆ ಪ್ರತೀವರ್ಷವೂ ಬರುತ್ತಿದೆ. ಇಲ್ಲಿನ ಕೃಷಿಕರು ಲಕ್ಷಾಂತರ ಗಿಡಗಳನ್ನು ನೆಡುತ್ತಿರುವರು. ಆದರೂ, ಕೆಲವರು ಕೊಡಗಿನಲ್ಲಿ ಪರಿಸರ ನಾಶವಾಗಿದೆ. ಕಾಡು ನಾಶವಾಗಿದೆ. ಮರಗಳನ್ನು ಬೆಳೆಯುತ್ತಿಲ್ಲ ಎಂದು ಜನತೆಗೆ ತಪ್ಪು ಮಾಹಿತಿ ನೀಡಲು ಶ್ರಮಿಸುತ್ತಿದ್ದಾರೆ ! ? ಇವರಿಗೆ ಲಕ್ಷಾಂತರ ಗಿಡಗಳನ್ನು ನೆಡುತ್ತಿರುವುದು ಕಾಣದಿರುವುದನ್ನು ಜಾಣ ಕುರುಡು ಎನ್ನಬಹುದೇನೋ !?
ಅವೈಜ್ಞಾನಿಕ ಹೆದ್ದಾರಿ ವಿಸ್ತರಣೆ
ಕುಶಾಲನಗರದಿಂದ ಸಂಪಾಜೆಯವರೆಗೆ ಜಿಲ್ಲೆಯಲ್ಲಿ ಸಾಗುವ ಹೆದ್ಧಾರಿಯು ಬಹುತೇಕ ಕಡೆ ಕಡಿದಾದ ಬೆಟ್ಟದ ಅಂಚಿನಲ್ಲಿಯೇ ಸಾಗುತ್ತದೆ. ಇದು ಕೆಲವು ವರ್ಷಗಳ ಹಿಂದೆ ತೀರಾ ಕಿರಿದಾಗಿತ್ತು. ಈ ಹೆದ್ದಾರಿಯನ್ನು ಬೆಟ್ಟ ಗುಡ್ಡಗಳಿಲ್ಲದ, ಅಥವಾ ಕಡಿಮೆ ಬೆಟ್ಟಗಳಿರುವ ಕಡೆ ಬದಲಾಯಿಸುವ ಹಲವಾರು ಅವಕಾಶಗಳಿದ್ದವು. (ಈಗಲೂ ಇವೆ.)ಮಡಿಕೇರಿಯನ್ನು ಸಂಪಕರ್ಿಸದೇ ಬೇರೇ ಕಡೆ ರಸ್ತೆ ಮಾಡಬಹುದಿತ್ತು. ಅದನ್ನು ಸರಕಾರ, ಜನಪ್ರತಿನಿಧಿಗಳು, ಅಧಿಕಾರಿವರ್ಗ ಕಡೆಗಣಿಸಿತ್ತು. ಪಯರ್ಾಯ ಮಾರ್ಗಗಳತ್ತ ಚಿಂತನ-ಮಂಥನ ನಡೆಸಲೇ ಇಲ್ಲ. ಗುಡ್ಡಗಳನ್ನು ಕತ್ತರಿಸುವ ಮುನ್ನಾ ಭೂವಿಜ್ಞಾನಿಗಳ, ಸ್ಥಳೀಯರ ಅಭಿಪ್ರಾಯಗಳನ್ನು ಕ್ರೋಡಿಕರಣ ಮಾಡಲೇ ಇಲ್ಲ. ಗುಡ್ಡ ಬೆಟ್ಟವನ್ನು ಮನಸೋ ಇಚ್ಛೇ ಅವೈಜ್ಞಾನಿಕವಾಗಿ ಕತ್ತರಿಸಿ, ಹೆದ್ದಾರಿಯನ್ನು ಯಂತ್ರೋಪಕರಣ ಬಳಸಿ ವಿಸ್ತರಿಸಿತ್ತು. ಮಳೆ ಹೆಚ್ಚಾದಲ್ಲಿ ಪರಿಸ್ಥಿತಿ ಏನಾಗಬಹುದು ಎಂಬ ಚಿಂತನೆ ಯಾರತ್ತಲೂ ಸುಳಿಯಲೇ ಇಲ್ಲ. ! ಗಂಡಾಗುಂಡಿ ಮಾಡಿಯಾದರೂ, ಗಡಿಗೆ ತುಪ್ಪ ತಿನ್ನಬೇಕು ಎಂಬ ಆತುರತೆ ಕೆಲವರಲ್ಲಿ ಇರುವಂತೆ ಭಾಸವಾಗುತ್ತಿತ್ತು. ಅದರ ಪ್ರತಿಫಲ ಇಂದು ಕಾಣುವಂತಾಗಿದೆ.
ಅಧಿಕ ವಾಹನಗಳ ದಟ್ಟಣೆ
ಈ ರಸ್ತೆಯು ಭಾರೀ ವಾಹನಗಳ ಭಾರವನ್ನು ತಡೆಯಬಹುದೇ ಎಂದೂ ವೈಜ್ಞಾನಿಕವಾಗಿ ಅಂದಾಜಿಸಲಿಲ್ಲ. ! ಹಲವಾರು ವರ್ಷಗಳಿಂದ ನಿರಂತರವಾಗಿ ಪದೇ ಪದೇ ಚಾಮರ್ಾಡಿಘಾಟ್ನ ರಸ್ತೆಗಳು ಮುಚ್ಚಲ್ಪಡುತ್ತಿದೆ. ಆ ಹೆದ್ದಾರಿಗಾಗಿ ಸಾಗಬೇಕಾದ ಭಾರೀ ವಾಹನಗಳು ಕೊಡಗಿಗಾಗಿ ಸಾಗುತ್ತವೆ. ವಾಹನಗಳ ದಟ್ಟಣೆಯು ಕೆಲವು ರಸ್ತೆಗಳಿಗೆ ಮಾತ್ರ ಸೀಮಿತವಾಗುತ್ತವೆ. ಇದರ ಒತ್ತಡ ತಡೆಯಲು ಕೊಡಗಿನ ರಸ್ತೆಗಳಿಗೆ ಸಾಧ್ಯವಾಗಲಿಲ್ಲ. ಇದು ರಸ್ತೆಯ ಬದಿಯ ಗುಡ್ಡ ಬೆಟ್ಟಗಳು ಕುಸಿಯಲು ಮೂಲ ಕಾರಣವಾಗಿರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ! ಈ ರಸ್ತೆಗಾಗಿ ಸಾಗುವ ಅಧಿಕ ಭಾರ ಹೊತ್ತ ವಾಹನಗಳ ಓಡಾಟವನ್ನು ಇಲಾಖಾಧಿಕಾರಿಗಳು ನಿರ್ಬಂಧಿಸಲೇ ಇಲ್ಲ ! ?
ತಡೆಗೋಡೆಗಳೇ ಇಲ್ಲ !
ಈ ಭಾಗದಲ್ಲಿ ಎಲ್ಲಿಯೂ, ಮಣ್ಣು ತೆಗೆದ ಮತ್ತು ಹಾಕಿದ ಕಡೆಗಳಲ್ಲಿ ತಡೆಗೋಡೆ, ಆಧಾರ ಗೋಡೆಗಳನ್ನು ನಿಮರ್ಿಸುವ ಗೊಡವೆಗೆ ಹೋಗಲಿಲ್ಲ ! ಕೆಲವು ಕಡೆ ಕಬ್ಬಿಣದ ಪಟ್ಟಿಯನ್ನು ರಸ್ತೆಯ ಅಂಚಿಗೆ ನೆಪ ಮಾತ್ರಕ್ಕೆ ಅಳವಡಿಸಲಾಗಿದೆ. ಬೆಟ್ಟವನ್ನು 45 ಡಿಗ್ರಿ ಕೋನಕ್ಕಿಂತ ಕಡಿಮೆ ವಾರೆಯಾಗಿ ತೆಗೆಯುವ ಬದಲು ನೇರವಾಗಿ ಕತ್ತರಿಸಲಾಯಿತು. ತೀರಾ ಕಿರಿದಾದ ಚರಂಡಿಯನ್ನು ನಿಮರ್ಿಸಲಾಯಿತು. ಈ ರಸ್ತೆಯ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕೊಚ್ಚಿಹೋಯಿತು. ಕೆಲವೆಡೆ ಕಿಲೋ ಮೀಟರ್ ದೂರಕ್ಕೆ ಮೋರಿ ನಿಮರ್ಿಸಲಾಯಿತು ! ರಸ್ತೆ ವಿಸ್ತರಣೆ ಮಾಡಿದ ಮಣ್ಣನ್ನು ಗುತ್ತಿಗೆದಾರರಿಗೆ ಅನುಕೂಲವಾಗುವ ಕಡೆ ಸುರಿಯಲಾಯಿತು. ಅಂತಹ ಕಡೆ ಹೆಚ್ಚಾಗಿ ಭೂಕುಸಿತ ಸಂಭವಿಸಿರುವ ದೃಶ್ಯಾವಳಿಗಳನ್ನು ನಾವಿಂದು ಕಾಣುತ್ತಿರುವೆವು.
ಹುಲ್ಲುಗಾವಲು ನಾಶ
ಕೆಲವು ಸ್ಥಳೀಯರು, ಪ್ರವಾಸಿಗರೊಡಗೂಡಿ ಜಿಲ್ಲೆಯ ಹಲವು ಕಡೆ ಹುಲುಸಾಗಿ ಬೆಳೆದಿದ್ದ ಹುಲ್ಲುಗಾವಲಿಗೆ ಬೇಸಿಗೆಯಲ್ಲಿ ಬೆಂಕಿ ಹಾಕಿದ್ದರು. ಇದು ತಡಿಯಂಡ ಮೋಳ್, ಇಗ್ಗುತಪ್ಪ ಬೆಟ್ಟ, ಕೋಟೆಬೆಟ್ಟ ಮುಂತಾದ ಕಡೆ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಹಲವರು ಬೆಟ್ಟಗಳಿಗೆ ಬೆಂಕಿ ಇಟ್ಟು ಮೋಜುಮಸ್ತಿ ಮಾಡಿದರು. ಮಡಿಕೇರಿ ನಗರ ವ್ಯಾಪ್ತಿಯ ಹಲವು ಕಡೆ ಇಂತಹ ಕುಚೇಷ್ಟೆಗೆ ಕುರುಚಲು ಕಾಡು, ತರಗೆಲೆ, ಜರಿಗಿಡಗಳು ಭಸ್ಮವಾಗುತ್ತಿವೆ. ಇದು ನೀರಿನ ಇಂಗುವಿಕೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿತು. ಮೇಲ್ಮುಖವಾಗಿ ತನ್ನ ಹರಿವಿನ ವೇಗ ಹೆಚ್ಚಲು ಕಾರಣವಾಯಿತು. ಇದರ ಪರಿಣಾಮ ಬೆಟ್ಟದಂಚು ಕ್ರಮೇಣ ಕುಸಿಯಲು ಪರೋಕ್ಷ ಕಾರಣವಾಯಿತು.
ಅಕ್ರಮ ಮರಳು ಗಣಿಗಾರಿಕೆ
ಮರಳು ಗಣಿಗಾರಿಕೆ ಕೊಡಗಿನ ಪ್ರಮುಖ ಸಮಸ್ಯೆಗಳಲ್ಲಿ ಪ್ರಧಾನ ಪಾತ್ರ ವಹಿಸಿದೆ. ಇದು ಹಲವಾರು ದಶಕಗಳಿಂದ ಉಲ್ಭಣಿಸುತ್ತಿರುವ ಸಮಸ್ಯೆ ! ಕೆಲವರಿಗೆ ಮಾತ್ರ ಆಯ್ದ ಸ್ಥಳಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತದೆ. ಅದರ ಪ್ರಕಾರ ಮರಳನ್ನು ನಿಗದಿತ ಪ್ರದೇಶದಲ್ಲಿ ಸಂಗ್ರಹಿಸಿ ಬೇಕಾದವರಿಗೆ ಮಾರಾಟ ಮಾಡಬೇಕಿದೆ. ಆದರೆ...
ಈ ಪ್ರಕ್ರಿಯೆಯು ಕಾನೂನು ಬಾಹಿರವಾಗಿ ನಡೆಯುತ್ತಿದೆ. ಜನಸಾಮಾನ್ಯರಿಗೆ ಮರಳು ಸಿಗುತ್ತಿಲ್ಲ. ಪರಿಣಾಮ ಎಲ್ಲೆಲ್ಲೂ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತೀವರ್ಷವೂ ಒಂದೆರಡು ಮಾನವ ಜೀವಗಳನ್ನು ಬಲಿ ಪಡೆಯುತ್ತದೆ. ಇದನ್ನು ಸರಕಾರ ನಿಯಂತ್ರಿಸುತ್ತಿಲ್ಲ. ಯಾಂತ್ರಿಕೃತವಾಗಿ, ಕಾನೂನು ಬಾಹಿರವಾಗಿ ಮರಳು ತೆಗೆಯುತ್ತಿರುವುದರಿಂದ ನದಿಯಂಚು ಕುಸಿಯುತ್ತಿದೆ. ಸಮೀಪದ ಬೆಟ್ಟ-ಗುಡ್ಡಗಳು ಕುಸಿದು ನದಿ ಸೇರುತ್ತಿದೆ. ನದಿಯ ಆಳ ಪ್ರತೀವರ್ಷವೂ ಹೆಚ್ಚಾಗುತ್ತಿದೆ. ಮರಳಿನ ಸಮಸ್ಯೆಯ ಪರಿಣಾಮ ಬಡವರು ಮನೆಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಸರಕಾರದ ವಸತಿ ಯೋಜನೆಗಳು ಸಕಾಲಿಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇವೆಲ್ಲವೂ ಮೂಗಿನಡಿಯಲ್ಲಿಯೇ ನಡೆಯುತ್ತಿದ್ದರೂ, ಇಲಾಖಾಧಿಕಾರಿಗಳು ಮಾಮೂಲಿ ಪಡೆದು ಮೌನಕ್ಕೆ ಶರಣಾಗಿರುವರು. ಮಿನರಲ್ ಸ್ಯಾಂಡ್ಗೂ ಅಕ್ರಮ ಮರಳಿಗಿಂತಲೂ ಅಧಿಕ ಬೆಲೆ ! ? ಇಲಾಖಾಧಿಕಾರಿ-ಸಿಬ್ಬಂದಿಗಳು ದಂಧೆಕೋರರನ್ನು ಬಿಟ್ಟು ಬಡವರಿಂದಲೂ ಎಂಜಿಲು ಕಾಸು ಕಸಿಯುತ್ತಿದ್ದಾರೆ ? ಕೆಲವು ಕಡೆ ಅರಣ್ಯ ಪ್ರದೇಶದಲ್ಲಿಯೂ ಕಲ್ಲುಗಣಿಗಾರಿಕೆ ನಡೆಯುತ್ತಿದೆ !
ಹವಮಾನ ಇಲಾಖೆಯ ಸವಿನಿದ್ದೆ ! ?
ಕೊಡಗು ಜಿಲ್ಲೆಯಲ್ಲಿ ಬಹುಶ್ಯ ಅಗುಂಬೆಗಿಂತಲೂ ಅಧಿಕ ಮಳೆ ಸುರಿಯುತ್ತಿದೆ. ಜಿಲ್ಲೆಯ ಬಿರುನಾಣಿ, ತಲೆಪೂಕೊಳ, ಚೇಲಾವರ, ನಾಲಡಿ, ತಲಕಾವೇರಿ, ಕರ್ತಕುಂದ್(ಕಪ್ಪುಬೆಟ್ಟ) ಪುಷ್ಪಗಿರಿಯ ತಪ್ಪಲು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತದೆ. ಸರಾಸರಿ ಸುಮಾರು ವಾಷರ್ಿಕ 300 ಇಂಚು ! (ಆಸುಪಾಸು). ಈ ವಿಚಾರ ಬಹುತೇಕ ಮಂದಿಗೆ ತಿಳಿದಿಲ್ಲ. ಇದು ಸರಕಾರಿ ದಾಖಲೆಗಳಲ್ಲಿ ಇನ್ನೂ ನಮೂದಿತವಾಗಿಲ್ಲ. ಆಗುಂಬೆಗಿಂತಲೂ ಅಧಿಕ ಮಳೆ ಕೊಡಗಿನಲ್ಲಿ ಬೀಳುತ್ತಿದೆ. ಆದರೂ, ಅದು ಸ್ವಾತಂತ್ರ್ಯಾ ನಂತರವೂ ದಾಖಲೀಕರಣಗೊಂಡಿಲ್ಲ. ಎಂತಹಾ ನಾಚಿಕೆಗೇಡು ? ! ಇನ್ನೂ ಬ್ರಿಟಿಷರ ಕಾಲದಲ್ಲಿ ಮಾಡಲಾದ ದಾಖಲೆಯನ್ನೇ ನಾವು ಅಪ್ಪಿ-ಒಪ್ಪಿಕೊಂಡಿದ್ದೇವೆ. ಮಳೆ ಕಡಿಮೆಯಾಗುತ್ತಿದೆ ಎಂದೂ ಕೆಲವರು ಬೊಬ್ಬಿರಿಯುತ್ತಿದ್ದಾರೆ ! ತಮಿಳುನಾಡಿನಿಂದ ಕೊಡಗಿಗೆ ಹವಾಮಾನ ಸಂಬಂಧಿತ ವರದಿ ಪ್ರತಿ 2-3 ದಿನಗಳಿಗೊಮ್ಮೆ ಮೊಬೈಲ್ ಫೋನ್ಗಳಿಗೆ ಬರುತ್ತಿದೆ. ಆದರೆ, ಕನರ್ಾಟಕದಲ್ಲಿ.. ! ಶತಮಾನದ ಮಹಾಮಳೆಯ ಮುನ್ಸೂಚನೆ ನೀಡದ ಹವಾಮಾನ ಇಲಾಖೆಯ 'ಶಿಶಿರ ನಿದ್ದೆಯ' ಬಗ್ಗೆ ಏನು ಹೇಳಬೇಕು ? ಇಂತಹ ಇಲಾಖೆಯಿಂದ ಶ್ರೀಸಾಮಾನ್ಯನಿಗೆ, ರೈತನಿಗೆ ದೊರಕುವ ಲಾಭವಾದರೂ ಏನು ಎಂಬುವುದನ್ನು ಎಲ್ಲರೂ ಪ್ರಶ್ನಿಸಬೇಕಿದೆ.
ನಾಮಕಾವಸ್ಥೆಗಾಗಿ ಮಳೆಮಾಪನ !?
ಕೆಲವು ಕಡೆ ಡಿಜಿಟಲ್ ಮಳೆಮಾಪನ ಕೇಂದ್ರಗಳನ್ನು ಕೆಲವು ಏಜೆನ್ಸಿಗಳವರು ಸ್ಥಾಪಿಸಿದ್ದಾರೆ. ಆದರೆ, ಅವುಗಳು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇನ್ನೂ ಸ್ಥಾಪನೆಯಾಗಿಯೇ ಇಲ್ಲ ! ಹೀಗಾದಲ್ಲಿ ಮಳೆಯ ನಿಖರ ಅಂಕಿ-ಅಂಶಗಳು ದೊರೆಯುವುದಾರೂ ಹೇಗೆ ? ಕೆಲವಡೆ ನಾಮಾಕಾವಸ್ಥೆಗಾಗಿ ಸ್ಥಾಪನೆಯಾಗಿವೆ. (ಉದಾಹರಣೆಗಾಗಿ: ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಹುಣಸೆಮರದ ಕೆಳಗೆ ಡಿಜಿಟಲ್ ಮಳೆ ಮಾಪನ ಕೇಂದ್ರವನ್ನು ಸ್ಥಾಪಿಸಲಾಗಿದೆ !)
ಈ ವರ್ಷ ಮಳೆಯು ಕೇವಲ ಒಂದರೆಡು ದಿನಗಳಲ್ಲಿ ಭಾರೀ ಮಳೆ, ಜಲಪ್ರಳಯ, ಮೇಘಸ್ಫೋಟ ಸಂಭವಿಸಿತ್ತು. ನಮ್ಮಲ್ಲಿ ಅತ್ಯಾಧುನಿಕ ವಿಶೇಷ ವ್ಯವಸ್ಥೆಗಳು ಇದ್ದರೂ, ವಿಜ್ಞಾನ ಮುಂದುವರಿದಿದ್ದರೂ, ಯಾವ ಇಲಾಖೆಯು ಈ ಕುರಿತು ಮುನ್ನೆಚ್ಚರಿಕೆ ನೀಡಲೇ ಇಲ್ಲ. ಹಾಗಾದಲ್ಲಿ ಹವಾಮಾನ ಇಲಾಖೆಯು ಇರುವುದಾದರೂ ಏತಕ್ಕೆ !? ಇಂತಹ ಆಧುನಿಕ, ವೈಜ್ಞಾನಿಕ ವ್ಯವಸ್ಥೆಗಳಿಂದ ಜನತೆ ಆಗುವ ಲಾಭವಾದರೂ ಏನು ?
ಮಳೆಯ ಮರುಕಳಿಕೆ ?
ಹಿರಿಯರ ಮಾಹಿತಿಯ ಪ್ರಕಾರ, 1924, 1964ರ ವರ್ಷ ಕೊಡಗಿನಲ್ಲಿ ಮಹಾ ಮಳೆ ಸುರಿದಿತ್ತು. ಅದೂ ಸರಾಸರಿ 40 ವರ್ಷದ ಆಸುಪಾಸಿನಲ್ಲಿ. ಅದನ್ನು ಕೆಲವರು ಕಳೆದ ಕೆಲ ವರ್ಷಗಳಿಂದ ನಿರೀಕ್ಷಿಸಿದ್ದರು. ಆದರೆ, ಅದನ್ನು ಎದುರಿಸುವ ಯಾವ ಸಿದ್ಧತೆಯನ್ನು ಪ್ರಕೃತಿ ವಿಕೋಪ ಕೇಂದ್ರದ ಅಧಿಕಾರಿಗಳು ಮಾಡಲೇ ಇಲ್ಲ. ಈ ಬಗ್ಗೆ ಮನ್ಸೂಚನೆ ನೀಡಿದ್ದಲ್ಲಿ ಕನಿಷ್ಠ ಪಕ್ಷ ಪ್ರಾಣ ಹಾನಿಯನ್ನಾದರೂ ಕಡಿಮೆಗೊಳಿಸಬಹುದಿತ್ತು.
ಕಸ್ತೂರಿರಂಗನ್ ವರದಿ
"ಕೋಟೆ ಕೊಳ್ಳೆ ಹೋದ ಬಳಿಕ ದಿಡ್ಡಿ ಬಾಗಿಲು ಹಾಕಿದರು "ಎಂಬಂತೆ ಎಲ್ಲವೂ ಮುಗಿದ ಬಳಿಕ ಈ ವರದಿಗಳ ವಿಚಾರ ಮಾಧ್ಯಮಗಳಲ್ಲಿ ಅನಗತ್ಯವಾಗಿ ಪ್ರಸ್ತಾಪವಾಗುತ್ತಿದೆ. ಹಲವು ಹೊರ ಜಿಲ್ಲೆ, ರಾಜ್ಯದ ಮಾಧ್ಯಮಗಳವರು ಯಾರದ್ದೋ ಆಮಿಷಗಳಿಗೆ ಒಳಗಾಗಿ ಇದನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದೆನಿಸುತ್ತಿದೆ. ಅದರಲ್ಲಿ ಬಹುತೇಕ ಕಪೋಲಕಲ್ಪಿತ ಸುದ್ದಿಗಳು ! ಯಾವುದೇ ವರದಿಗಳು ಜಾರಿಯಾಗಬೇಕಾದಲ್ಲಿ ಅದರ ವಿವರ-ವಿಚಾರ ಜನತೆಗೆ ಸುಸ್ಪಷ್ಟವಾಗಿ ಜನತೆಗೆ ತಿಳಿದಿರಬೇಕು. ಅದನ್ನು ಸ್ಥಳೀಯ ಭಾಷೆಗಳಲ್ಲಿ ಸ್ಥಳೀಯ ಮಾಧ್ಯಮಗಳ ಮೂಲಕ ಜನತೆಗೆ ತಲುಪಿಸಬೇಕು. ಆದರೆ, ಹಲವರು ಈ ಸಂದರ್ಭದಲ್ಲಿ ಪ್ರಸ್ತಾಪಿಸುತ್ತಿರುವ ಈ ಎರಡು ವರದಿಗಳ ವಿಚಾರ ಎಷ್ಟು ಮಂದಿಗೆ ತಿಳಿದಿದೆ ! ? ಜನತೆಯನ್ನು ಕತ್ತಲಲ್ಲಿಟ್ಟು ಇಂತಹ ವರದಿಗಳನ್ನು ಪ್ರಸ್ತಾಪಿಸುತ್ತಿರುವುದಾರೂ ಏತಕ್ಕೆ ? ಈ ವರದಿಗಳ ಜಾರಿಯಿಂದ ಜನತೆಗಾಗುವ ಲಾಭಗಳ ಬಗ್ಗೆ ವಿವರಣೆಯನ್ನಾದರೂ ನೀಡಬಹುದಲ್ಲಾ ?
ಹೀಗೆ ಸಮಸ್ಯೆಗಳ ಸರಪಳಿಯು ಸಾಗುತ್ತಿದೆ. ಇದರಲ್ಲಿ ಆಡಳಿತಶಾಹಿಗಳ ನಿರ್ಲಕ್ಷ್ಯತನ, ಅಧಿಕಾರಿ, ಜನಪ್ರತಿನಿಧಿಗಳ, ಜನತೆಯ ಬೇಜವಾಬ್ಧಾರಿ ಎದ್ದು ಕಾಣುತ್ತದೆ. ಆದರೂ, ಹಲವು ಮಾಧ್ಯಮಗಳು ಎಲ್ಲವೂ ಜನತೆಯದ್ದೇ ತಪ್ಪು ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಗುತ್ತದೆ. ಇದು ನಾಚಿಕೆಗೇಡಿನ ವಿಚಾರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ