ಶನಿವಾರ, ಜುಲೈ 7, 2018
ಶುಕ್ರವಾರ, ಜುಲೈ 6, 2018
ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ-ಬಳಕೆ
ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ-ಬಳಕೆ
ಬರಹ: ಕೂಡಂಡ ರವಿ, ಹೊದ್ದೂರು.
Pl watch my blogs
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...
Kaveri Dharshini : https://kaveridarashin.blogspot.com
ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗುತ್ತದೆ. ಆದರೆ, ಬಹುತೇಕ ಬೆಳೆಗಾರು ಮತ್ತು ಕೂಲಿ ಕಾರ್ಮಿಕರು ಬೋಡೋ ದ್ರಾವಣವನ್ನು ತಯಾರಿಸುವಲ್ಲಿ ಎಡುವುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ. ಬೋಡೋ ದ್ರಾವಣವನ್ನು ಸಮರ್ಪಕವಾಗಿ ತಯಾರಿಸಿದ್ದಲ್ಲಿ ಅದನ್ನು ಸಿಂಪಡಿಸುವುದು ವ್ಯರ್ಥವಾಗುತ್ತದೆ.
ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ್ರನಾಶಕ. ಆದರೆ , ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪರಣೆ ಕೈಗೂಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.
ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತ್ತ, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪರಣೆ ಮಾಡುವುದುಂಟು. ಪರಿಣಾಮ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿ.
ಮೈಲುತುತ್ತ ಅಂದರೆ ಶುದ್ದ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ, ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ಧವಾಗಿ ಕೆಲಸ ಮಡುತ್ತದೆ. ಘನಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣವನ್ನು ಸೇರಿಸಿ, ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಲಾಗುತ್ತದೆ. ಅದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೋ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೆÇೀಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜೊತೆಗೆ ಏಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಾಗ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬೋಡೋ ದ್ರಾವಣವನ್ನು ಅತ್ಯಂತ ಸಮರ್ಪಕವಾಗಿ ತಯಾರಿಸುವುದೂ ಪ್ರಮುಖ ಅಂಶ.
ಈ ಹಿನ್ನೆಲೆಯಲ್ಲಿ ಬೋರ್ಡೋ ದ್ರಾವಣದ ವೈಜ್ಞಾನಿಕ ತಯಾರಿಕೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಸಲಹೆಗಳನ್ನು ನೀಡಿದ್ದಾರೆ.
ಅನುಕೂಲಗಳು
• ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು ಹತೋಟಿ ಮಾಡಬಹುದು.
• ಈ ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೂರ ಮೈಯಲ್ಲಿ ಅಂಟಿಕೊಳ್ಳುವುದರಿಂದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು.
• ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು.
• ಸಿಂಪರಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ದುûಷ್ಪರಿಣಾಮಗಳು ತುಂಬಾ ಕಡಿಮೆ.
ತಯಾರಿಸಲು ಬೇಕಾದ ವಸ್ತುಗಳು
1. ಮೈಲುತುತ್ತ 1 ಕೆ.ಜಿ.
2. ಸುಣ್ಣ 1 ಕೆ.ಜಿ.
3. ನೀರು 100 ಲೀಟರ್
4. ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್.ಪೇಪರ್
5. 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್
6. 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್/ಬ್ಯಾರಲ್
ತಯಾರಿಕಾ ವಿಧಾನ :
• ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.
• ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು.
• ಕರಗಿದ 10 ಲೀಟರ್ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ಈಗ ಈ ಮಿಶ್ರಣವು ಶೇ. 1 ರ ಬೋರ್ಡೊ ದ್ರಾವಣವಾಗುತ್ತದೆ. ಇಂತಹ ಮಿಶ್ರಣ ತಿಳಿ ನೀಲಿ ಬಣ್ಣದಾಗಿರುತ್ತದೆ.
ದ್ರಾವಣದ ಪರೀಕ್ಷೆ
• ತಯಾರು ಮಾಡಿದ ಮಿಶ್ರಣವು ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುುಕ್ತವಾಗಿದ್ದು ಅದನ್ನು ಸಿಂಪರಣೆ ಮಾಡಿದ್ದಲ್ಲಿ ಬೆಳೆಗಳಿಗೆ ಹಾನಿಕಾರಕ. ಆದುದರಿಂದ ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದ್ದು ಸಿಂಪಡಣೆಗೆ ಸೂಕ್ತ ಎಂದು ತಿಳಿಯಬಹುದು.
• ಕೆಂಪು ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್ಮಸ್ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.
ಗಮನದಲ್ಲಿಡಬೇಕಾದ ಅಂಶಗಳು
• ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಮರದ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು.
• ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಾದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು.
• ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆ (ಕೀಟ) ನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು.
• ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು.
• ಹೆಚ್ಚು ಸುಣ್ಣ ಸೇರಿಸಿದರೆ ದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7 ಕ್ಕಿಂತ ಹೆಚ್ಚಾಗುವುದು ಹಾಗು ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂದ್ರನಾಶಕದ ಗುಣ ಕಡಿಮೆಯಾಗುತ್ತದೆ.
• ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು.
• ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪ್ರೇ ಸುಣ್ಣವನ್ನು ಉಪಯೋಗಿಸಬೇಕು.
• ಸಿಂಪರಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.
ದ್ರಾವಣದ ಬಳಕೆ
ಬೆಳೆಗಳು ಪ್ರಮುಖವಾದ ರೋಗಗಳು
ಅಡಿಕೆ - ಕೊಳೆರೋಗ, ಸುಳಿಕೊಳೆರೋಗ
ತೆಂಗು - ಸುಳಿ ಕೊಳೆರೋಗ, ಕಾಂಡದಿಂದ ರಸಸೋರುವ ರೋಗ
ಕಾಳು ಮೆಣಸು - ಶೀಘ್ರ ಸೊರಗು ರೋಗ, ಚಿಬ್ಬು ರೋಗ (ಕೊತ್ತು ಉದುರುವುದು)
ಶುಂಠಿ - ಗೆಡ್ಡೆ ಕೊಳೆರೋಗ, ಎಲೆ ಚುಕ್ಕೆ ರೋಗ
ಈ ರೀತಿ ವೈಜ್ಞಾನಿಕ ವಿಧಾನದಿಂದ ಬೋರ್ಡೊ ದ್ರಾವಣವನ್ನು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ರ ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು.
ಮಾಹಿತಿಗಾಗಿ ಸಂಪರ್ಕಿಸಿ
ಹಿರಿಯ ವಿಜ್ಞಾನಿ ಮತ್ತು ಮುಖ್ಯಸüರು, ಕೃಷಿ ವಿಜ್ಞಾನ ಕೇಂದ್ರ , ಗೋಣಿಕೊಪ್ಪಲು, ದೂರವಾಣಿ: 08274-247274
ಮಂಗಳವಾರ, ಜುಲೈ 3, 2018
ಭತ್ತದ ಬೀಜೋಪಚಾರ ಏಕೆ- ಹೇಗೆ ?
ಕೃಷಿ ಲೋಕ
ಭತ್ತದ ಬೀಜೋಪಚಾರ ಏಕೆ- ಹೇಗೆ ?
ಬರಹ: ಕೂಡಂಡ ರವಿ, ಹೊದ್ದೂರು.
ಭತ್ತವು ಕೊಡಗು ಜಿಲ್ಲೆಯ ಮುಖ್ಯ ಆಹಾರ ಬೆಳೆ. ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆಗಳಲ್ಲಿ ಮುಂಗಾರಿನಲ್ಲಿ ಬೀಳುವ ಮಳೆಯಾಶ್ರಯದಲ್ಲಿ ಬೆಳೆಯನ್ನು ತಗ್ಗು (ಬಯಲು) ಮಧ್ಯಮ (ಮಜಲು ಪ್ರದೇಶ) ಹಾಗೂ ತಗ್ಗಿನ ಕಣಿವೆ ಪ್ರದೇಶದ ಗದ್ದೆಗಳಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಭತ್ತದ ಪ್ರದೇಶವು ಕಡಿಮೆಯಾಗುತ್ತಿದೆ. ಭತ್ತದ ಇಳುವರಿಯಲ್ಲಿ ಕೂಡ ಇಳಿಮುಖವಾಗುತ್ತಿದೆ. ಭತ್ತವನ್ನು ಸಮಗ್ರ ಬೇಸಾಯ ಪದ್ಧತಿಯಡಿಯಲ್ಲಿ ಉತ್ಪಾದಕತೆyaನ್ನು ಹೆಚ್ಚಿಸುವುದರೊಂದಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಪ್ರಸ್ತುತ ವರ್ಷ ಜಿಲ್ಲೆಯಾದ್ಯಂತ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಭತ್ತದ ಕೃಷಿ ಸೇರಿದಂತೆ ವಿವಿಧ ಕೃಷಿಗಳಲ್ಲಿ ಬೀಜೋಪಚಾರವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಸರಿಯಾದ ಕ್ರಮವರಿತು ಬೀಜೋಪಚಾರ ಮಾಡುವುದರಿಂದ ಹಲವಾರು ರೋಗಗಳನ್ನು ಯಶಸ್ವಿಯಾಗಿ ತಡೆಯಲು ಸಾಧ್ಯವಿದೆ.
ರೋಗಗಳಿಂದ ರಕ್ಷಣೆ
ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದುಬತ್ತಿ ರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ, ಬಿತ್ತನೆ ಬೀಜ ಮತ್ತು ಇತರೆ ಮಾಧ್ಯಮಗಳಿಂದ ಬೀಜದ ಮುಖಾಂತರ ಪ್ರಸಾರವಾಗುತ್ತವೆ. ರೈತರಿಗೆ ಅಪಾರ ಆರ್ಥಿಕ ಹಾನಿಯನ್ನು ಉಂಟುಮಾಡುತ್ತವೆ. ರೈತರು ಅತಿ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಬೀಜದಿಂದ ಪ್ರಸಾರವಾಗುವ ಈ ರೋಗಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೀಜಗಳಿಗೆ, ಮೊಳಕೆಯೊಡೆಯುವ ಸಸಿಗಳಿಗೆ ಹಾಗೂ ಮುಂದಿನ ಸಸ್ಯ ಬೆಳವಣಿಗೆ ಹಂತದಲ್ಲಿ ಬರುವ ಅನೇಕ ರೋಗಗಳಿಂದ ರಕ್ಷಣೆ ಒದಗಿಸಬಹುದಾಗಿದೆ.ಬೀಜದಿಂದ ಪ್ರಸಾರವಾಗುವ ಅನೇಕ ರೋಗಗಳಲ್ಲಿ ಹಾನಿಕಾರಕ ರೋಗಾಣುಗಳಾದ ಶಿಲೀಂದ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜೊತೆಯಲ್ಲಿ ಇರುತ್ತವೆ. ಬೆಳೆಯ ವಿವಿಧ ಬೆಳವಣಿಗೆಯ ಹಂತಗಳÀಲ್ಲಿ ರೋಗವು ಉಲ್ಬಣಿಸಿ, ಬೆಳೆಯ ಹಾನಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ಭತ್ತದಲ್ಲಿ ಬೀಜೋಪಚಾರ ಕ್ರಮದ ಬಗ್ಗೆ ಮಾಹಿತಿ ನೀಡಿರುವರು. ಆದ್ದರಿಂದ ಜಿಲ್ಲೆಯ ರೈತರು ಈ ಕೆಳಗೆ ಸೂಚಿಸಿದ ವಿಧಾನವನ್ನು ಅನುಸರಿಸಿ, ಖರ್ಚನ್ನು ಕಡಿಮೆ ಮಾಡಬಹುದಾಗಿದೆ. ಬೆಳೆಯಲ್ಲಿ ಬರುವ ಅನೇಕ ರೋಗಗÀಳನ್ನು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಬಹುದು.
ಬೀಜೋಪಚಾರ ವಿಧಾನ
• ಪ್ರತೀ ಎಕರೆಗೆ ಶಿPAರಸ್ಸು ಮಾಡಿದ 25 ರಿಂದ 30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೊಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಿ.• ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2 ರಿಂದ 3 ಬಾರಿ ತಣ್ಣೀರಿನಲ್ಲಿ ತೊಳೆದು 24 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಿ.
• ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25 ರಿಂದ 30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂದ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ, ನೆರಳಿನಲ್ಲಿ ಒಣಗಿಸಿ.
• ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ, ಮೊಳಕೆಯೊಡೆಯಲು ಇಟ್ಟು, ನಂತರ ಸಸಿಮಡಿಗೆ ಉಪಯೋಗಿಸಿ.
ಗಮನಿಸಬೇಕಾದ ಅಂಶಗಳು
• ಶಿPÁರಸ್ಸು ಮಾಡಿದ ಶಿಲೀಂದ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ.
• ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಿ.
• ಎರಡು ಮೂರು ಶಿಲೀಂದ್ರನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡದಿರಿ.
• ಬೀಜೋಪಚಾರ ಮಾಡುವ ಸಂದರ್ಭ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್ಗಳನ್ನು ಬಳಸಿ .
ಹೆಚ್ಚಿನ ವಿವರಗಳಿಗೆ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ: 08274-247274 ಇವರನ್ನು ಸಂಪರ್ಕಿಸಬಹುದು.
ಭಾನುವಾರ, ಜೂನ್ 17, 2018
ಸೋಲಾರ್ ಕೀಟ ನಾಶಕ ಯಂತ್ರ ! Solar Insects Trap
ಸೋಲಾರ್ ಕೀಟ ನಾಶಕ ಯಂತ್ರದ ಮುಖ್ಯಾಂಶಗಳು.
* ಹಲವಾರು ಸಂಘ - ಸಂಸ್ಥೆಗಳು , ಕೃಷಿಗೆ ಸಂಬಂಧಿತ ವಿಶ್ವವಿದ್ಯಾಲಯಗಳು ಇದನ್ನು ಬಳಸುತ್ತಿವೆ. ಹಾಗೂ ರೈತರಿಗೆ ಬಳಸುವಂತೆ ಸಲಹೆ ನೀಡಿವೆ.
* ೫ ಜಿಲ್ಲೆಗಳಲ್ಲಿ ಆತ್ಮ ಯೋಜನೆಯಡಿ ರೈತರಿಗೆ ವಿತರಿಸಿವೆ.
* ಹಲವಾರು ಕೀಟ ಶಾಸ್ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.ಅವರೂ ಇದರ ಬಳಕೆದಾರರು.
* ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಬಳಸುತ್ತಿರುವರು.
* ಹೊರ ರಾಜ್ಯಗಳಿಗೂ ಸರಬರಾಜಾಗುತ್ತಿದೆ.
* ಎಲ್ಲಾ ರೀತಿಯ ಹೂವು, ಹಣ್ಣು, ತರಕಾರಿ ಮತ್ತು ಇತರ ಬೆಳೆಗಳನ್ನು ಬಾಧಿಸುವ ಕೀಟಗಳನ್ನು ನಿಯಂತ್ರಿಸುತ್ತದೆ.
* ಬೆಲೆ ತೀರಾ ಕಡಿಮೆ. ನಿರ್ವಹಣೆ , ಬಳಕೆ ಸುಲಭ.
* ಅಧಿಕ ಬಾಳಿಕೆ, ಪರಿಸರ ಸ್ನೇಹಿ.
* ಮಣ್ಣು- ಆಹಾರ ವಿಷವಾಗುವುದನ್ನು ತಪ್ಪಿಸುತ್ತದೆ.
* ಸಾವಿರಾರು ಮಂದಿ ಸಂತೃಪ್ತ ಗ್ರಾಹಕರು.
* ಅಂತರ್ ರಾಷ್ಟ್ರೀಯ ಗುಣಮಟ್ಟದ ಬಲ್ಬಗಳು.
* ತುಕ್ಕು, ನೀರು ನಿರೋಧಕ.
* ಸಾವಯುವ ಕೃಷಿಗೆ ಉತ್ತಮ ಜೋಡಿ.
* ಬೆಲೆ ಕೇವಲ ೪೮೭೫ ರೂಪಾಯಿಗಳು ಮಾತ್ರ. ( ಕರ್ನಾಟಕದಲ್ಲಿ)
* ೬ ತಿಂಗಳು ವಾರಂಟಿ, ಉಚಿತ ಸರ್ವಿಸ್.
* ರಾಜ್ಯದ ಹಲವಾರು ಕಡೆ ಅಧಿಕೃತ ಮಾರಾಟ ಮತ್ತು ಸೇವೆ ಲಭ್ಯ.
* ಹೆಚ್ಚಿನ ಮಾಹಿತಿಗಾಗಿ ಯಂತ್ರದ ಸಂಶೋಧಕರಾದ ಮೊಬೈಲ್ ೯೮೮೦೯೭೩೨೧೮ ಕರಿಬಸಪ್ಪ ಅವರನ್ನು ಸಂಪರ್ಕಿಸಿರಿ.
* ಎಲ್ಲಾ ತಾಲೂಕುಗಳಿಗೂ ಅಧಿಕೃತ ಮಾರಾಟಗಾರರು ಬೇಕಾಗಿದ್ದಾರೆ.
ಸೋಮವಾರ, ಜೂನ್ 11, 2018
ಹಣ ಖರ್ಚು ಹೇಗೆ ?
ಹಣ ಖರ್ಚು ಮಾಡುವುದು ಹೇಗೆ ?
ಬದುಕಿಗೆ ನೀತಿ ಪಾಠ
ಇವರಿಗೆ ಮಾರ್ಗದರ್ಶನ ನೀಡುವಂತಹ ಇತಿಹಾಸದ ಸುಪ್ರಸಿದ್ಧ ಕಥೆ ಇದೆ. ರಾಜಭೋಜನು ಒಮ್ಮೆ ನದಿಯ ತೀರದಲ್ಲಿ ವಿಹರಿಸುತ್ತಿದ್ದನು. ಅಲ್ಲಿ ತಲೆಯ ಮೇಲೆ ಕಟ್ಟಿಗೆಯ ಹೊರೆಯ ಹೊತ್ತು ಸಾಗುತ್ತಿದ್ದ ಒಬ್ಬ ವೃದ್ಧನು ಆತನಿಗೆ ಎದುರಾದನು. ಆತನ ಮೈ ಬೆವರಿ ತೊಯ್ದಿದಿದ್ದರೂ, ಪ್ರಸನ್ನನಾಗಿದ್ದನು. ರಾಜನು ಆತನನ್ನು ನೀನು ಯಾರು ? ಎಂದು ಪ್ರಶ್ನಿಸಿದನು. ರಾಜನ ಪರಿಚಯವಿಲ್ಲದ ವೃದ್ಧನು ನಾನು ಭೋಜರಾಜ ಎಂದು ಉತ್ತರಿಸಿದನು. ನಿನ್ನ ದಿನದ ಸಂಪಾದನೆಯೆಷ್ಟು ? ಎಂದು ರಾಜನು ಮತ್ತೆ ಪ್ರಶ್ನಿಸಿದ. ಆಗ ಕಟ್ಟಿಗೆ ಹೊರೆ ಹೊತ್ತಿದ್ದ ಕಾರ್ಮಿಕನು ನನ್ನ ದಿನದ ಸಂಪಾದನೆ 6 ಪೈಸೆಗಳು ಎಂದುತ್ತರಿಸಿದ. ಅದನ್ನು ನೀನು ಹೇಗೆ ಖಚರ್ು ಮಾಡುವೆ ? ಎಂದಾಗ ಆತ ಉತ್ತರಿಸಿದನು. ನಾನು ಒಂದು ಪೈಸೆ ಸಾಲಗಾರನಿಗೆ, ಒಂದು ಪೈಸೆ ನನ್ನ ಬಂಡವಾಳದ ಮಾಲೀಕರಿಗೆ, ಒಂದು ಪೈಸೆ ಮಂತ್ರಿಗೆ, ಒಂದು ಪೈಸೆ ಉಳಿತಾಯ ಖಾತೆಗೆ, ಒಂದು ಪೈಸೆ ಅತಿಥಿಗಳ ಸೇವೆಗೆ, ಒಂದು ಪೈಸೆಯನ್ನು ನನ್ನ ಸ್ವಂತದ ಖರ್ಚಿಗಾಗಿ ವಿನಿಯೋಗಿಸುವೆ ಎಂದನು.
ರಾಜನು ಸ್ವಲ್ಪ ವಿವರವಾಗಿ ಬಿಡಿಸಿ ಹೇಳಯ್ಯ ಎಂದನು. ಆಗ ಕಟ್ಟಿಗೆಯವನು ನನ್ನ ಮಾತಾ ಪಿತರೇ ನನ್ನ ಬಂಡವಾಳದ ಮಾಲೀಕರು. ಅವರು ನನ್ನ ಪಾಲನೆ ಪೋಷಣೆಗಾಗಿ ಸಾಕಷ್ಟು ವಿನಿಯೋಗ ಮಾಡಿದ್ದಾರೆ. ನನ್ನ ಪತ್ನಿಯೇ ನನ್ನ ಮಂತ್ರಿಯಾಗಿದ್ದು, ಯೋಗ್ಯ ಸಲಹೆ ನೀಡುವಳು. ಸಾಲಗಾರರೆಂದರೆ, ನನ್ನ ಮಕ್ಕಳು. ಅವರು ದೊಡ್ಡವರಾಗಿ ನನ್ನ ಋಣವನ್ನು ಸಂದಾಯ ಮಾಡಲಿದ್ದಾರೆ.
ರಾಜನು ನೀನೆಷ್ಟು ಉಳಿತಾಯ ಮಾಡಿರುವೆ ಎಂದಾಗ ಆ ವ್ಯಕ್ತಿ ಉತ್ತರಿಸಿದ. ತನ್ನ ಭವಿಷ್ಯತ್ತಿಗೆಂದು ಉಳಿಸುವವನು ಮಹಾ ಪೆದ್ದ. ಅನಿಶ್ಚಿತತೆಯಿಂದ ತುಂಬಿದ ಈ ಬದುಕಲಿನಲ್ಲಿ ಒಂದು ಪೈಸೆಯನ್ನು ನನ್ನ ಆ ಖಜಾನೆಯಲ್ಲಿ ಜಮಾ ಮಾಡುವೆ ಎಂದನು. ರಾಜನು ದಯವಿಟ್ಟು ಮುಂದುವರಿಸಿರಿ ಎಂದನು.
ಮುದುಕ ಮುಂದುವರಿಸಿದ ಒಂದು ಪೈಸೆ ಅತಿಥಿಗಳ ಸೇವೆಗಾಗಿ ಇರಿಸುತ್ತೇನೆ. ಗೃಹಸ್ಥನಾದುದರಿಂದ ಅತಿಥಿಗಳ ಸೇವೆ ನನ್ನ ಕರ್ತವ್ಯ. ಮತ್ತೊಂದು ಪೈಸೆಯನ್ನು ನನ್ನ ದೈನಂದಿನ ಖರ್ಚಿಗೆ ಮೀಸಲಿಡುತ್ತೇನೆ. ರಾಜ ಭೋಜನು ಶಹಬ್ಬಾಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದನು.
ಇದೊಂದು ಪುರಾತನ ಪುರಾಣದ ಕಥೆಯಾದರೂ, ಇದರಲ್ಲಿ ಗಳಿಕೆ ಮತ್ತು ಅದರ ಖರ್ಚಿನ ಬೃಹತ್
ಸಾರವೇ ಅಡಗಿದೆ. ನಾವೂ ಕೂಡಾ ನಮ್ಮ ಸಂಪಾದನೆಯ ಜೊತೆಗೆ ಖರ್ಚನ್ನು ಸೂಕ್ತ ಯೋಜನೆಯೊಂದಿಗೆ ರೂಪಿಸಿದಲ್ಲಿ ಬಾಳು ಬಂಗಾರವಾಗುವುದು. ಸಂಪಾದನೆಯು ಸದ್ವಿನಿಯೋಗವಾಗುವುದು. ಕಾಸು ಉಳಿಸುವುದೇ ಕಾಯಕ ಎಂದು ಕೊಂಡು ಕಾಸು- ಕಾಸಿಗೂ ಗಂಟು ಹಾಕುವವರೂ ತಮ್ಮೊಂದಿಗೆ ಪೈಸೆಯನ್ನೂ ತಮ್ಮೊಂದಿಗೆ ಒಯ್ಯಲಾರರು.
ಕಡು ಬಡವರಾದರೂ, ಶ್ರೇಷ್ಠ ಗುಣದ ವ್ಯಕ್ತಿಯನ್ನೇ ಆದರ್ಶವೆಂದು ಪಾಲಿಸುವವರು, ಜಗದಲ್ಲಿ ಆನೇಕರಿದ್ದಾರೆ. ಸಂಪತ್ತಿನ ಸದ್ವಿನಿಯೋಗವೇ ನಿಜವಾದ ಸಂಪತ್ತು. ಹಣ ಗಳಿಸುವುದು ಹೇಗೆ ಎಂದು ಹಲವು ಕಡೆ ಮಾಹಿತಿ ನಮಗೆ ಲಭ್ಯ. ಈ ವಿಚಾರದಲ್ಲಿ ಹಲವಾರು ಪುಸ್ತಕಗಳು ಹೊರ ಬಂದಿವೆ. ಆದರೆ, ಹಣವನ್ನು ಹೇಗೆ ಖರ್ಚು ಮಾಡುವುದು ಎಂಬ ಬಗ್ಗೆ ವಿವರಗಳು ಬಹುತೇಕ ಕಡೆಗಳಲ್ಲಿ ಅಲಭ್ಯ. ಅದರೆ, ಸದುಪಯೋಗ ಹೇಗೆ ಎಂದು ವಿವರಣೆ ನೀಡುವವರು ತೀರಾ ದುರ್ಲಭ ಅಲ್ಲವೇ ?
ಆಧಾರಿತ ಬರಹ : ಕೂಡಂಡ ರವಿ, ಹೊದ್ದೂರು.
ಗುರುವಾರ, ಜೂನ್ 7, 2018
ಯೂರಿಯಾದ ಬದಲು ಹಸಿರೆಲೆ ! Insted of Ureya We use Green Leaves.
ಯೂರಿಯಾ ಬದಲು ಹಸಿರೆಲೆ ....!
ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು.
Please watch and subscribe my Youtube channal: https://www.youtube.com/channel/UCw4dehXSFlG4sS9xYiRkjPA?view_as=subscriber
Pl watch my these blogs.
Kodagu Darshini : https://koodanda.blogspot.com/
Kodagu Darshini (Kodagina Antaranga):https://koodagudarshini.blogspot.com/
Kodagu a Wonder land :https://kodaguawonderland.blogspot.com/
ಬಹುತೇಕ ಮಂದಿ ಗೊಬ್ಬರ ಬಳಸದೇ ಕೃಷಿ ಸಾಧ್ಯವಿಲ್ಲ ಎಂದು ಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿ, ಸಾವಿರಾರು ರೂಪಾಯಿ ಪೋಲು ಮಾಡುತ್ತಾರೆ. ಇದರ ಬದಲು ಮಣ್ಣಿನ ಆರೋಗ್ಯ ಕಾಪಾಡಲು ನಿರಂತರವಾಗಿ ಉತ್ತಮ ಬೆಳೆ ತೆಗೆಯಲು ಹಸಿರೆಲೆ ಗೊಬ್ಬರ ಬಳಸಬಹುದು. ಈ ಬಗ್ಗೆ ಸಂಕ್ಷ ಪ್ತ ವಿವರ ಇಲ್ಲಿದೆ.
ಹಾಲುವಾಣದ ಹೂವು
ಲಭ್ಯವಿರುವ ಎಲ್ಲಾ ಮೂಲಗಳಿಂದ ಸಂಗ್ರಹಿಸಲಾದ ಎಲೆಗಳಿಂದ ತಯಾರಿಸಿದ ಜೈವಿಕ ಗೊಬ್ಬರಗಳು ಮತ್ತು ಮಣ್ಣಿನ ಅಗತ್ಯ ಸಸ್ಯ ಪೋಷಕಾಂಶಗಳನ್ನು ಪೂರೈಸಲು ಮತ್ತು ಆರೋಗ್ಯಕರ ರೀತಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಬೆಳೆಗಳನ್ನು ಬೆಳೆಸಲು ಬಳಸುವುದು ಇತ್ತೀಚಿನ ಪರಿಕಲ್ಪನೆ ಅಲ್ಲ .
ಹಾಲುವಾಣದ ಎಲೆ
ಶತಮಾನಗಳಿಂದ ಅನೇಕ ದಕ್ಷಿಣ ಏಷ್ಯಾದ ದೇಶಗಳಲ್ಲಿ ಬಳಸಲ್ಪಟ್ಟಿದೆ. ಹಸಿರೆಲೆ ಗೊಬ್ಬರವನ್ನು ವಿವಿಧ ಮರ, ಗಿಡಮೂಲಿಕೆಗಳು ಮತ್ತು ಪೊದೆಸಸ್ಯಗಳಿಂದ ಹಸಿರು ಎಲೆಗಳು ಮತ್ತು ಕೊಂಬೆಗಳ ಸಮರುವಿಕೆಯನ್ನು ಮತ್ತು ಸಂಗ್ರಹಣೆ ಎಂದು ವ್ಯಾಖ್ಯಾನಿಸಬಹುದು. ಅವುಗಳನ್ನು ಬೇರೆಡೆ ರಸಗೊಬ್ಬರಗಳಾಗಿ ಆಯಾ ಪ್ರದೇಶಗಳಲ್ಲಿ ಬೆಳೆಯುವ ಗಿಡಮೂಲಿಕೆಗಳು ಮತ್ತು ಪೊದೆಗಳು ಇತ್ಯಾದಿ. ಎಲೆಯ ಗೊಬ್ಬರವನ್ನು ಬಳಸುವುದು ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಆಡುಸೋಗೆ ಗಿಡ
ಹಸಿರೆಲೆ ಗೊಬ್ಬರ ಏಕೆ ?
ರಾಸಾಯನಿಕ ಗೊಬ್ಬರಗಳನ್ನು ಸಸ್ಯ ಬೆಳವಣಿಗೆಯ ಪೋಷಕಾಂಶವಾಗಿ ಬಳಸುವುದು ಮಣ್ಣಿನ ಚಿಕಿತ್ಸೆಗೆ ಉತ್ತಮವಾದ ಮಾರ್ಗವಲ್ಲ. ವಿಶ್ವದಾದ್ಯಂತ, ವಿಶೇಷವಾಗಿ ಮೂರನೇ ವಿಶ್ವ ರಾಷ್ಟ್ರಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿವೆ. ಬೃಹತ್ ಜಾಗತಿಕ ಜನಸಂಖ್ಯೆಯ ಹೆಚ್ಚುವರಿ ಆಹಾರ ಅವಶ್ಯಕತೆಗಳನ್ನು ಪೂರೈಸಲು ಇದನ್ನು ಬಳಸಲಾಗುವುದು.
ವಿವಿಧ ರಾಸಾಯನಿಕ ರಸಗೊಬ್ಬರಗಳ ಈ ವಿವೇಚನಾರಹಿತ ಬಳಕೆ ಅನೇಕ ಪರಿಸರ ಮತ್ತು ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ . ಅತ್ಯಂತ ಅಮೂಲ್ಯ ನೈಸರ್ಗಿಕ ಸಂಪನ್ಮೂಲ 'ಮಣ್ಣಿನ' ಶಾಶ್ವತ ಹಾನಿಯನ್ನು ಉಂಟುಮಾಡುತ್ತದೆ. ಈ ಭಯಾನಕ ರಾಸಾಯನಿಕವನ್ನು ಬಳಸದೆ ನಿಯಂತ್ರಿಸದಿದ್ದರೆ, ಒಂದು ನಿರ್ದಿಷ್ಟ ಅವಧಿಯ ನಂತರ ಮಣ್ಣಿನ ಉತ್ಪಾದನೆಯು ಲಭ್ಯವಾಗುವುದಿಲ್ಲ ಎಂದೂ ಹೇಳಲಾಗುತ್ತದೆ.
ಹೊಂಗೆಯ ಗಿಡ ಮತ್ತು ಕಾಯಿ
ಮುಂಬರುವ ಪೀಳಿಗೆಗೆ ಆರೋಗ್ಯಕರ ಮಣ್ಣಿನ ನಿರ್ವಹಣೆಗಾಗಿ ರಾಸಾಯನಿಕ ವ್ಯವಸ್ಥೆಗಳಿಂದ ಜೈವಿಕ ಗೊಬ್ಬರಗಳಿಗೆ ಕೃಷಿ ವ್ಯವಸ್ಥೆಯನ್ನು ಬದಲಾಯಿಸುವ ಸಮಯವಿದು.
ಹಸಿರು ಎಲೆಗಳ ಗೊಬ್ಬರವು ಉತ್ತಮವಾದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿರುವ ಸಸ್ಯ ಪೋಷಕಾಂಶಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.
ಹಸಿರೆಲೆ ಗೊಬ್ಬರವು ರಾಸಾಯನಿಕ ರಸಗೊಬ್ಬರಗಳನ್ನು ಬದಲಿಸಬಹುದು ಮತ್ತು ರಾಸಾಯನಿಕಗಳನ್ನು ತರಲು ಹಲವಾರು ಅಪಾಯಗಳಿಂದ ಜಗತ್ತನ್ನು ರಕ್ಷಿಸಬಹುದು.
ಅನುಕೂಲಗಳು
ರಾಸಾಯನಿಕ ರಸಗೊಬ್ಬರಗಳ ಬದಲಿಗೆ ಹಸಿರೆಲೆ ಗೊಬ್ಬರಗಳನ್ನು ಬಳಸುವುದರಿಂದ ಅನೇಕ ಲಾಭಗಳಿವೆ.
• ಸಸ್ಯಗಳಿಗೆ ಸಮತೋಲಿತ ಪೌಷ್ಟಿಕಾಂಶವನ್ನು ಖಚಿತಪಡಿಸುತ್ತವೆ ಮತ್ತು ಮಣ್ಣಿನ ಫಲವತ್ತತೆಯನ್ನು ಉತ್ತಮ ಮಟ್ಟದಲ್ಲಿ ಸುಧಾರಿಸುತ್ತವೆ.
ಇವು ನಿಧಾನಗತಿಯ ಬಿಡುಗಡೆ ಗೊಬ್ಬರವಾಗಿದ್ದು, ಅವುಗಳ ಬಳಿಕ ದೀರ್ಘಕಾಲದವರೆಗೆ ಸಸ್ಯ ಪೌಷ್ಟಿಕ ಮೂಲವಾಗಿ ವರ್ತಿಸುತ್ತವೆ.
• ಹಸಿರೆಲೆ ಗೊಬ್ಬರ ಬಳಸುವುದರಿಂದ ಮಣ್ಣಿನ ರಚನೆಯು ಮಹತ್ತರವಾಗಿ ಸುಧಾರಣೆಯಾಗಲಿದೆ.
ಬೇವಿನ ಗಿಡ
• ಹಸಿರೆಲೆ ಗೊಬ್ಬರವು ವಿವಿಧ ಮಣ್ಣಿನಲ್ಲಿರುವ ಹುಳ
– ಹುಪ್ಪಟೆಗಳಿಗೆ ಆಹಾರ ಪದಾರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಮಣ್ಣಿನ ಹುಳುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.
• ಇವು ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳನ್ನು ಉತ್ಪಾದಿಸುತ್ತವೆ.
• ಇವುಗಳು ನೀರು ಮತ್ತು ವಾಯುವಿನ ಗುಣಮಟ್ಟಕ್ಕೆ ಅಪಾಯ ಮಾಡಲಾರವು.
• ಹಸಿರೆಲೆ ಗೊಬ್ಬರವು ಮಣ್ಣಿನಲ್ಲಿ ವಿವಿಧ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಮಣ್ಣಿನ ಜೀವವೈವಿಧ್ಯತೆಯನ್ನು ಸುಧಾರಿಸುತ್ತದೆ.
• ಲವಣಯುಕ್ತ ಮಣ್ಣಿಗೆ ಮರು ಜೀವ ಪಡೆಯಲು
ಇವು ಉಪಯುಕ್ತವಾಗಿವೆ.
• ಹಸಿರೆಲೆಯಾಗಿ ಬಳಸಿದ ಮರಗಳ ಕಾಂಡಗಳನ್ನು ಇಂಧನವಾಗಿ ಬಳಸಲಾಗುತ್ತದೆ.
• ಇದರ ಬಳಕೆ
ತೀರಾ ಸುಲಭ, ಸರಳ ಅಗ್ಗವೂ ಹೌದು.
ಇದು ಸವೆತದಿಂದಾಗಿ ಮಣ್ಣಿನ ನಷ್ಟವನ್ನು ಕಡಿಮೆ ಮಾಡುತ್ತದೆ.
ಹಸಿರು ಗೊಬ್ಬರ ಬೆಳೆಗಳನ್ನು ಬೆಳೆಯುವುದರಿಂದ ಕಳೆ ಬೆಳವಣಿಗೆ ಮತ್ತು ಅವುಗಳ ಪ್ರಸರಣವನ್ನು ಕಡಿಮೆ . ಇದು ಬೆಳೆಗಳಿಗೆ ಬೇಕಾದ
ಸಮತೋಲಿತ ಪೌಷ್ಟಿಕಾಂಶವನ್ನು ನೀಡುತ್ತವೆ
ಗ್ಲಿರೀಸಿಡಿಯಾ ಗಿಡ
ಗ್ಲಿರೀಸಿಡಿಯಾ ಗಿಡ
ಮಣ್ಣಿನಲ್ಲಿ ಹಸಿರು ಗೊಬ್ಬರವನ್ನು ಸೇರಿಸುವ ಸಾವಯವ ರೈತರು ಸಾರಜನಕ, ಪೊಟ್ಯಾಸಿಯಮ್, ಫಾಸ್ಪರಸ್ ಮತ್ತು ಮಣ್ಣಿನ ಖನಿಜಗಳಂತಹ ಅಗತ್ಯ ಪೋಷಕಾಂಶಗಳ ಪೂರೈಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಹಸಿರು ಗೊಬ್ಬರಗಳು ಈ ಸಸ್ಯ ಪೋಷಕಾಂಶಗಳನ್ನು ಮಣ್ಣಿನಲ್ಲಿ ಸ್ವಯಂಚಾಲಿತವಾಗಿ ಬಿಡುಗಡೆ ಮಾಡುತ್ತವೆ.
ಗ್ಲಿರೀಸಿಡಿಯಾ ಗಿಡ
ಹಸಿರು ಎಲೆಯ ಗೊಬ್ಬರವನ್ನು ಉತ್ಪಾದಿಸಲು ಹಲವಾರು ಮರಗಳು ಮತ್ತು ಸಸ್ಯಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಆಡುಸೋಗೆ, ಹಾಲುವಾಣ ( ಪಾಲುವಾಣ ) ( ಹೊಂಗಾರೆ, ಪೊಂಗರೆ ) ಗ್ಲಿರಿಸಿಡಿಯಾ, ಹೊಂಗೆ , ಸುಬಾಬುಲ್, ಬೇವು ವೆಲ್ವೇಟ್ ಬೀನ್ಸ್ ಮತ್ತು ಕಳೆ ಸಸ್ಯಗಳಾದ ಪಾರ್ಥೆನಿಯಮ್ , ಲಂಟಾನಾ ......... ವ್ಯಾಪಕವಾಗಿ ಬಳಸಲಾಗುತ್ತದೆ. ಕೃಷಿ ಭೂಮಿಯಲ್ಲಿ ಸೆಣಬು, ಡಯಾಂಚ, ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆದು ಅದನ್ನು ಮಣ್ಣಿಗೆ ನೇರವಾಗಿ ಸೇರಿಸಬಹುದಾಗಿದೆ. ಇದನ್ನು ಕೊಳೆಯಿಸುವ ಅವಶ್ಯಕತೆ ಇಲ್ಲ. ಸೊಪ್ಪನ್ನು ನೇರವಾಗಿ ಜಮೀನಿನಲ್ಲಿ ಹರಡಿದರೆ ಸಾಕು. ಮಳೆಗಾಲ ಅರಂಭಕ್ಕೆ ಮುನ್ನಾ ಈ ಕಾರ್ಯ ಮಾಡುವುದು ಉತ್ತಮ.
ವಿವಿಧ ಮರಗಳು ಮತ್ತು ಸಸ್ಯಗಳನ್ನು ಜೀವಂತ ಬೇಲಿಗಳು ಅಥವಾ ಬಂಜರು ಭೂಮಿಯಲ್ಲಿ ಮರ ಗಿಡಗಳನ್ನು ಬೆಳೆಸಿ ಬಳಸಬಹುದು.
ಮಣ್ಣಿನಿಂದ ಹಸಿರು ಎಲೆಯ ಗೊಬ್ಬರಗಳ ಬಳಕೆಯು ಮಣ್ಣಿನ ತೇವಾಂಶವನ್ನು ಅವಲಂಬಿಸಿರುತ್ತದೆ. ಮಣ್ಣಿನಲ್ಲಿ ಈ ಗೊಬ್ಬರ ಬಳಸಲು ಸಾಕಷ್ಟು ತೇವಾಂಶವು ಅಗತ್ಯ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಲಾಗ್ ಇನ್ ಆಗಿ.
https://koodagudarshini.blogspot.com/2018/03/blog-post_24.html
---------------------------------------------------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)





















