ಭಾನುವಾರ, ಆಗಸ್ಟ್ 5, 2018



ರಾಸಾಯನಿಕ ರಹಿತ ರೋಬಸ್ಟಾ ಕಾಂಡ ಕೊರಕದ ಹತೋಟಿ ?



ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ರೋಬಸ್ಟಾ ಕಾಫಿಗೆ ಕಾಂಡ ಕೊರಕದ ಬಾಧೆ ಕಾಣಿಸಿಕೊಂಡಿದೆ. ಇದನ್ನು ರಾಸಾಯನಿಕ ಬಳಕೆ ರಹಿತವಾಗಿ ಅತ್ಯಂತ ಸುಲಭವಾಗಿ ಹತೋಟಿ ಮಾಡಬಹುದು. 1. ಅರೇಬಿಕಾ ತೋಟಗಳಲ್ಲಿ ಕಾಫಿಯ ಕಾಂಡ ಕೊರಕಗಳನ್ನು ನಿಯಂತ್ರಿಸಲು ರೋಗ- ಕೀಟಬಾಧೆ ಗಿಡಗಳನ್ನು ಕಿತ್ತು ಸುಡಬೇಕು. ಕಾಫಿ ತೋಟದೊಳಗೆ ಓಡಾಡುತ್ತಿರುವವರಿಗೆ , ನುರಿತ ಕಾಮರ್ಿಕರು, ಬೆಳೆಗಾರರು ಇಂತಹ ಗಿಡಗಳನ್ನು ಅತ್ಯಂತ ಸುಲಭವಾಗಿ ಪತ್ತೆ ಹಚ್ಚಬಲ್ಲರು. ರೋಬಾಸ್ಟಾ ಕಾಫಿ ತೋಟ ಹೊಂದರುವ ರೈತರು ಈ ರೋಗ ಬಾಧೆಯು ತಮ್ಮ ತೋಟದಲ್ಲಿ ಇದೆಯೋ ಎಂದು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. 2. ಕಳೆಗುಂದಿದ, ಒಣಗುತ್ತಿರುವ, ಕಾಯಿ ಬಲಿಯದ ಗಿಡಗಳು ರೋಗಪೀಡಿತವಾದವು ಎಂದು ಪರಿಗಣಿಸಬಹುದು. ಇಂತಹ ಗಿಡಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಕ್ಕೆ ಸಾಗಿಸಿ. ಸುಟ್ಟುಹಾಕಿ. ಅಂದು ಕಿತ್ತ ಗಿಡಗಳನ್ನು ಆಯಾ ದಿನ ಸಂಜೆಯ ವೇಳೆಗೆ ಸುಡುವುದು ಉತ್ತಮ. ತಡ ಮಾಡಿದ್ದಲ್ಲಿ ಕಾಂಡದ ಒಳಗಿರುವ ಹುಳಗಳು ಬೇರೆಡೆಗೆ ಹಾರಿ ಮತ್ತೆ ಕಾಫಿ ಗಿಡಗಳಿಗೆ ತೊಂದರೆ ಕೊಡುವ ಸಾಧ್ಯತೆ ಹೆಚ್ಚು. 3. ಅರೇಬಿಕಾ ಕಾಫಿ ತೋಟದ ಮಧ್ಯೆ ರೋಬಾಸ್ಟಾ ಗಿಡಗಳಿದ್ದಲ್ಲಿ ಈ ಹುಳಗಳ ಬಾಧೆಯು ಹೆಚ್ಚು. ಅರೇಬಿಕಾ ಕಾಫಿ ಗಿಡಗಳನ್ನು ಸಾಮಾನ್ಯವಾಗಿ ಬಾಧಿಸುವ ಕೀಟಗಳು ಆ ತೋಟದಲ್ಲಿ ಅರೇಬಿಕಾ ಗಿಡಗಳಿದ್ದಲ್ಲಿ ಅವುಗಳನ್ನೇ ಬಾಧಿಸುತ್ತವೆ. ಈ ಹಿನ್ನೆಲೆಯಲ್ಲಿ ರೋಬಾಸ್ಟಾ ಗಿಡಗಳ ಮಧ್ಯೆ ನಿರಂತರವಾಗಿ ಅರೇಬಿಕಾ ಕಾಫಿ ಬೆಳೆಯುವುದು ಸೂಕ್ತ. 4. ಈ ಕಾಂಡ ಕೊರಕ ಕೀಟಗಳು ಏಪ್ರಿಲ್ , ಮೇ, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಸಂತಾನೋತ್ಪತಿ ಮಾಡುತ್ತವೆ. ಕಾಂಡದಿಂದ ಹೊರಬರುವ ಚಿಟ್ಟೆಯನ್ನು ಹೋಲುವ ಕೀಟವು ಹಾರಾಡುತ್ತವೆ. ಈ ಸಮಯದಲ್ಲಿ ಇವುಗಳನ್ನು ಅತ್ಯಂತ ಸುಲಭವಾಗಿ ಹತೋಟಿ ಮಾಡಬಹುದಾಗಿದೆ. ಮೇಲೆ ತಿಳಿಸಿದ ತಿಂಗಳಲ್ಲಿ ಕಾಫಿ ತೋಟಗಳಲ್ಲಿ ಸೋಲಾರ್ ಕೀಟ ನಾಶಕ ಯಂತ್ರವನ್ನು ಅಳವಡಿಸಬಹುದಾಗಿದೆ. ಅಥವಾ ವಿದ್ಯುತ್ ದೀಪಗಳನ್ನು ಅಳವಡಿಸಿ, ಅದರ ಕೆಳಭಾಗದಲ್ಲಿ ನೀರಿರುವ ಬೇಸಿನ್ ಇಟ್ಟಲ್ಲಿ ಅದಕ್ಕೆ ಹುಳಗಳು ಬಂದು ಬೀಳುತ್ತವೆ. ಸೋಲಾರ್ ದೀಪಗಳನ್ನು ಬ್ಯಾಟರಿಯಿಂದ ಬಳಸುವ ಟಾಚರ್್, ರೀಚಾಜರ್್ ದೀಪಗಳನನು ಇದೇ ರೀತಿ ಬಳಸಿ ಎಲ್ಲಾ ಕೀಟಗಳನ್ನು ನಾಶ ಮಾಡಬಹುದು. 5. ಕಾಂಡ ಕೊರಕದ ಪತಂಗಗಳು ಸುಮಾರು 25- 35 ದಿನಗಳವರೆಗೆ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಮಾತ್ರ ಅವು ಕಾಂಡಗಳಿಂದ ಹೊರಬರುತ್ತವೆ. ಹೆಣ್ಣು ಕೀಟವು ಹೆಚ್ಚಾಗಿ ಬಿಸಿಲು ಬೀಳುವ ಸ್ಥಳವನ್ನು ಆರಿಸಿಕೊಂಡು ಅಲ್ಲಿ ಸುಮಾರು 20 ಮೊಟ್ಟೆಗಳನ್ನಿಟ್ಟು ಸಾಯುತ್ತವೆ. 9- 10 ದಿನಗಳಲ್ಲಿ ಮೊಟ್ಟೆ ಒಡೆದು ಹೊರಬರುವ ಲಾವರ್ಾವು ಕಾಫಿ ಗಿಡದ ಕೊಂಡ ಕೊರೆದು ಗಿಡಗಳ ಒಳ ಸೇರುತ್ತವೆ. ಒಳ ಸೇರಿದ ಕೀಟವನ್ನು ಕೊಲ್ಲುವ ಅವಕಾಶವೇ ಸಿಗದು ಎಂದು ಕೀಟ ಶಾಸ್ತ್ರಜ್ಞರು ಮಾಹಿತಿ ನೀಡಿರುವರು.

ಭಾನುವಾರ, ಜುಲೈ 22, 2018

ಸಾವಯವದ ಸಂಗ-ಖಚರ್ಿಗೆ ಭಂಗ....!

             ಸಾವಯವದ ಸಂಗ-ಖರ್ಿಗೆ ಭಂಗ....! 



                      ಸಚಿತ್ರ ಬರಹ: ಕೂಡಂಡ ರವಿ, ಹೊದ್ದೂರು. ಕೊಡಗು. 

ಸಾಕಷ್ಟು ರೈತಾಪಿ ವರ್ಗದವರು ಸಾವಿರಾರು ರೂಪಾಯಿ ಸಾಲ ಸೋಲ ಮಾಡಿ ರಾಸಾಯನಿಕ ಗೊಬ್ಬರವನ್ನು ವಿವಿಧ ಬೆಳೆಗಳಿಗೆ ಬಳಸುತ್ತಾರೆ. ಹೆಚ್ಚು ರಾಸಾಯನಿಕ ಗೊಬ್ಬರ ಸುರಿದು ಹೆಚ್ಚು ಇಳುವರಿಯನ್ನು ನಿರೀಕ್ಷಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ರೈತಾಪಿ ವರ್ಗದವರು ಕನಸು ನುಚ್ಚು ನೂರಾಗುವುದೇ ಹೆಚ್ಚು. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವವರು ಕೆಲವರು. ಅಂತಹ ಸಾಧರ ಮಾಹಿತಿ ಇಲ್ಲಿದೆ ನೋಡಿ.

 ಸಾವಯವ ಖಚರ್ು ಕಡಿಮೆ 

ಆದರೆ, ಬಿಜಾಪುರ ಬಳಿಯ ಮಹಾರಾಷ್ಟ್ರ ರಾಜ್ಯದ ಬುದ್ರಕ್ನ ಜಾಲಿಹಾಳ್ ನಿವಾಸಿ.  ಮೂಲತಃ ಆಂಧ್ರಪ್ರದೇಶದವರು.  ನಿವೃತ್ತ ವಾಯುಪಡೆಯ ಅಧಿಕಾರಿ.  ಕನ್ನಡಿಗ ರೈತ ಶ್ರೀನಿವಾಸ್ ರಾವ್ ಇದಕ್ಕೆ ಅಪವಾದ. ಇವರು ಸಾವಯುವ ಕೃಷಿಯನ್ನು ಕಳೆದ 5 ವರ್ಷಗಳಿಂದ ಮಾಡುತ್ತಿದ್ಧಾರೆ. ಕೃಷಿಗೆ ಅತ್ಯಂತ ಕಡಿಮೆ ಖಚರ್ು ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇದರಿಂದ ಲಾಭವೂ ಹೆಚ್ಚಾಗುತ್ತಿದೆಯಂತೆ ! ಇದಕ್ಕೆ ಪ್ರಮುಖ ಕಾರಣ ಖಚರ್ು ಕಡಿಮೆ.
ನಾರಾಯಣ ರೆಡ್ಡಿ ಸಲಹೆ 
ಇವರು 5 ವರ್ಷಗಳಿಂದ ಸಾವಯವ ಕೃಷಿಯತ್ತ ವಾಲಿದ್ದಾರೆ. ಮುನ್ನಾ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದರಂತೆ. ಅದರಿಂದ ಖಚರ್ು ಹೆಚ್ಚು,  ಮಣ್ಣಿನ ಮತ್ತು ಕೃಷಿ ಉತ್ಪನ್ನಗಳ ಬಳಕೆದಾರರ  ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುವುದನ್ನು ಮನಗಂಡರು. ಬಳಿಕ  ಶ್ರೀನಿವಾಸ್ ಸಾವಯವ ಪದ್ಧತಿಯಲ್ಲಿ 40 ವರ್ಷಗಳಿಂದ ಕೃಷಿ ಮಾಡುತ್ತಿರುವ ಬೆಂಗಳೂರಿನ ನಾರಾಯಣ್ ರೆಡ್ಡಿ ಅವರನ್ನು ಭೇಟಿ ಮಾಡಿದರು. ಅವರ ಆಶಯದಂತೆ, ಇವರೂ ಪ್ರಯತ್ನ ಮುಂದುವರಿಸಿದ್ದಾರೆ.

ಮಲೆನಾಡಿನ ದಿನದ ಮಳೆ - ವರ್ಷಕ್ಕೆ !
ಸುಮಾರು ಒಂದು ಏಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಹೊಂಡವನ್ನು ಇವರು ನಿಮರ್ಿಸಿಕೊಂಡಿದ್ದಾರೆ. ಇದು 22 ಅಡಿಗೂ ಅಧಿಕ ಆಳವಿದೆ. ಅದರಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.   ಕಾಡು,  ನೀರಿಲ್ಲದ ನಾಡಿನಲ್ಲಿ ಮಳೆ ತೀರಾ ಅಪೂರ್ವ, ಇಲ್ಲ ಕಡಿಮೆಯೇ. ಕೊಡಗು ಅಥವಾ ಮಲೆನಾಡು ಪ್ರದೇಶದಲ್ಲಿ ಒಂದು ದಿನಕ್ಕೆ ಬೀಳುವ ಮಳೆ ಇಲ್ಲಿ ಇಡೀ ವರ್ಷಕ್ಕೆ ಬರುತ್ತದೆಯಂತೆ !  ಇವರ ಬಳಿ ಮಳೆಮಾಪಕ ಇಲ್ಲದ ಕಾರಣ ನಿಖರವಾದ ಅಂಕಿ ಅಂಶಗಳು ಲಭ್ಯವಾಗಲಿಲ್ಲ.



ಮಿಶ್ರ ಬೆಳೆ ಪದ್ಧತಿ 
ತಮ್ಮ 18 ಏಕರೆ ಪ್ರದೇಶದಲ್ಲಿ ದಾಳಿಂಬೆ ಮತ್ತು ದ್ರಾಕ್ಷಿ ಪ್ರಮುಖ ಬೆಳೆಗಳು.  ಇವುಗಳ ಜೊತೆಗೆ ಅಲಸಂಡೆ, ಹೆಸರು, ನುಗ್ಗೆ, ಪಪ್ಪಾಯಿ, ತೊಗರಿ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿರುವರು. ಹೊಲದ ಬದುಗಳ ತುಂಬೆಲ್ಲಾ ಬೇವಿನ ಮರಗಳು ಮತ್ತು ಆನೆ ಹುಲ್ಲು. ವಿವಿಧ ಬೆಳೆಗಳಿಗೆ ಸಾವಯವ ಗೊಬ್ಬರ ಮತ್ತು ಜೀವಾಮೃತವನ್ನು ನಿರಂತರವಾಗಿ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಬರದ ಬೆಂಗಾಡಿನ ನಾಡಿನಲ್ಲಿ ಮಲೆನಾಡಿನಂತೆ ಹಸಿರು ನಳನಳಿಸುತ್ತಿದೆ.
ಕ್ರಿಮಿನಾಶಕಗಳ ಸಿಂಪಡಣೆಯೇ ಇಲ್ಲ !
ಹೊಲದಲ್ಲಿ ಕೀಟಗಳ ಹಾವಳಿ ತಡೆಗಾಗಿ 10 ಸೋಲಾರ್ ಕೀಟ ನಾಶಕ ಯಂತ್ರಗಳನ್ನು ಅಳವಡಿಸಿದ್ದಾರೆ. ಪರಿಣಾಮ ಇವರು ಯಾವುದೇ ಬೆಳೆಗಳಿಗೂ ಕೀಟನಾಶಕ ಸಿಂಪಡಣೆಯ ಶ್ರಮ, ಖಚರ್ು, ಮಣ್ಣಿನ ಆರೋಗ್ಯ ಹಾಳಾಗುವುದು ತಪ್ಪಿದೆ. 8 ಏಕರೆ ಪ್ರದೇಶದ ದ್ರಾಕ್ಷಿ ಬೆಳೆಗೆ ಕೇವಲ 4 , ಅದರಂತೆ ದಾಳಿಂಬೆ ಬೆಳೆಗೆ 4 ಸೋಲಾರ್ ಕೀಟನಾಶಕ ಯಂತ್ರಗಳನ್ನು ಬಳಸುತ್ತಿರುವರು. ಉಳಿದೆಡೆಗಳಲ್ಲಿ 2 ಸೋಲಾರ್ ಕೀಟನಾಶಕ ಯಂತ್ರಗಳಿವೆ.
ಜೀವಾಮೃತವೇ ಪ್ರಮುಖ ಆಧಾರ. 
ಇವರ ಎಲ್ಲಾ ಬೆಳೆಗಳಿಗೂ ಜೀವಾಮೃತವೇ ಪ್ರಮುಖ ಗೊಬ್ಬರ. ಕೃಷಿ ಹೊಂಡದ ಕೆಳ ಭಾಗದಲ್ಲಿ ಹೊಲದ ಮೇಲ್ಭಾಗದಲ್ಲಿ ಜೀವಾಮೃತ ತೊಟ್ಟಿ ಮತ್ತು ವಿತರಣಾ ಘಟಕವನ್ನು ನಿಮರ್ಿಸಿದ್ಧಾರೆ. ಅಲ್ಲಿಂದಲೇ ನೇರವಾಗಿ ನೀರಿನೊಡನೆ ಬೆರೆತ ಜೀವಾಮೃತವು ತೋಟದ ಮೂಲೆ ಮೂಲೆಗಳಲ್ಲಿರುವ ಗಿಡ, ಮರ, ಬಳ್ಳಿಗಳಿಗೆ ಪೂರೈಕೆಯಾಗುತ್ತದೆ. ಯಾಂತ್ರೀಕರಣದ ಮೂಲಕ ಜೀವಾಮೃತವನ್ನು ಕಲಸಲಾಗುತ್ತದೆ. ಜೀವಮೃತದ ಉಳಿಕೆಯನ್ನು ನೇರವಾಗಿ ಗೊಬ್ಬರವಾಗಿ ಪರಿವತರ್ಿಸಲು ಅನುವು ಮಾಡಲಾಗಿದೆ. ಇದರ ಪರಿಣಾಮವಾಗಿ ಒಣ ಪ್ರದೇಶವಾದ ಇಲ್ಲಿ ಹಸಿರು ನಗುನಗುತ್ತಿದೆ.
 ಕಳೆಯೇ ಗೊಬ್ಬರ
 ಇವರ ತೋಟದಲ್ಲಿ ಯಾವುದೇ ಕಳೆಯೂ ಇಲ್ಲ. ಅಂದರೇ, ಎಲ್ಲವೂ ಗೊಬ್ಬರವೇ . ಕಳೆಯನ್ನು ಗೊಬ್ಬರವಾಗಿ ಪರಿವತರ್ಿಸುವ ಕಲೆ ಇವರಿಗೆ ಸಿದ್ಧಿಸಿದೆ. ಅವರ ತೋಟದಲ್ಲಿ ಕೆಲವು ಪಾಥರ್ೆನಿಯಂ ಗಿಡಗಳಿದ್ದವು. ಅವನ್ನು ಕಂಡು ಇದು ಕಳೆಯಲ್ಲವೇ ? ಏಕೆ ಕೀಳುತ್ತಿಲ್ಲ ನೀವು ? ಎಂದೆ. ಅದೂ ಗೊಬ್ಬರವೇ. ವಿವಿಧ ಗಿಡ ಮರಗಳಿಂದ ಮಣ್ಣು ಹೊನ್ನಾಗುವುದು. ಎಲ್ಲವೂ ಮಣ್ಣನೊಂದಿಗೆ ಬೆರೆತು ಗೊಬ್ಬರವಾಗುತ್ತದೆ. ಎಂದರು.

 8 ಲಕ್ಷ  ಉಳಿತಾಯ
ಸಾವಯವ ಕೃಷಿ ಮಾಡುತ್ತಿರುವುದರಿಂದಾಗಿ ರಾಸಾಯನಿಕ ಗೊಬ್ಬರಗಳಿಗಾಗಿ ವೆಚ್ಚ ಮಾಡುತ್ತಿದ್ದ ಹಣ ವಾಷರ್ಿಕ ಸುಮಾರು 6 ರಿಂದ 8 ಲಕ್ಷ ಉಳಿತಾಯವಾಗಿದೆಯಂತೆ ! ಆದರೆ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ವಾಷರ್ಿಕ 80 ಲಕ್ಷ ಆದಾಯ ಬರುತ್ತಿತ್ತು. ಅದು ಈಗ 20 ಲಕ್ಷದಷ್ಟು ಕುಸಿದಿದೆ. ನಿಧಾನವಾಗಿ ಆದಾಯದ ಸರಾಸರಿ ಪ್ರತಿ ವರ್ಷವೂ ಏರುತ್ತಿದೆ. ಖಚರ್ು ಕಡಿಮೆಯಾಗುತ್ತಿದೆ ಎಂದು ಹೇಳುವಾಗ ಶ್ರೀನಿವಾಸ್ ಅವರ ಮೊಗದಲ್ಲಿ ಸಂತಸದ ಕಳೆ ಮಿನುಗುತ್ತಿತ್ತು.
ರಾಸಾಯನಿಕ ಮುಕ್ತ ಏಕೆ ? 
ಗಿಡಗಳಿಗೆ ರಾಸಯನಿಕ ಗೊಬ್ಬರ, ಕೀಟ ನಾಶಕ ಬಳಸುವುದರಿಂದ ಅದನ್ನು ಆಹಾರವಾಗಿ ಬಳಸುವವರಿಗೆ ವಿಷ ಉಣಿಸಿದಂತಾಗುತ್ತದೆ. ಇದರಿಂದ ಜನತೆಯನ್ನು ಪಾರು ಮಾಡಲು, ಮುಂದಿನ ಪೀಳಿಗೆಗಾಗಿ ಅರೋಗ್ಯವಂತ ಮಣ್ಣನ್ನು ಉಳಿಸಲು ತಾನು ಕೈಲಾದ ಶ್ರಮ ಪಡುತ್ತಿರುವೆನು ಎಂದು ಅವರು ನುಡಿದರು.
ಗ್ಲಿರೀಸಿಡಿಯಾ-ಹೊಂಗೆಗಳಲ್ಲಿ ಆಸಕ್ತಿ 

ಅಪಾರ ಪ್ರಮಾಣದಲ್ಲಿ ಅಲ್ಪ ಅವಧಿಯಲ್ಲಿ ಹಸಿರೆಲೆಗಳನ್ನು ನೀಡಬಲ್ಲ ಗ್ಲಿರೀಸೀಡಿಯಾ ಮತ್ತು ಹೊಂಗೆ ಮರವನ್ನು ಹೊಲಗಳ ಬದುಗಳಲ್ಲಿ ಬೆಲೆಯುವ ಆಸಕ್ತಿ ಇವರದ್ದು. ಒಮ್ಮೆ ಗ್ಲಿರೀಸಿಡಿಯಾ ಬೀಜಗಳನ್ನು ಅರಸುತ್ತಾ ಶಿರಸಿಗೂ ಹೋಗಿದ್ದರೂ, ಬೀಜಗಳೇ ಸಿಗಲಿಲ್ಲ ಎಂದು ಬೇಸರಿಸಿದರು.
ಯಾರಿಗಾದರೂ ಗ್ಲಿರೀಸಿಡಿಯಾ ಬೀಜ ಬೇಕಾದಲ್ಲಿ ಸಂಪಕರ್ಿಸಿ- 83101 30887


ಶ್ರೀನಿವಾಸ್ ಅವರ ಮೊಬೈಲ್ : 9880727880
                          9860359626.

ಶುಕ್ರವಾರ, ಜುಲೈ 20, 2018

First jack fruit town in India - ഇന്ത്യയിലെ ആദ്യ ജാക്ക് പഴം പട്ടണം

                             

                കേരളത്തിലെ ജനശക്തിയുള്ള നഗരം!




                             എഴുതപ്പെട്ടത്: രവി, ഹോധൂർ, കൊടുഡഗ്. Karnataka. 


ഉറവിടം കന്നഡയാണ്. ഇതിന് മലയാളം ട്രാൻസ്ലേറ്റ്റ്റ് ടു മലയാളം ആണ്. പിശകുകളുമായി സഹകരിക്കാൻ വായനക്കാർക്ക് അഭ്യർത്ഥിക്കുക



വിദേശ രാജ്യങ്ങളെ ശ്രദ്ധാപൂർവം പിടികൂടാനുള്ള പുതിയ പരിശ്രമങ്ങൾക്ക് കേരളം പ്രശസ്തമാണ്. മാർച്ച് 21 ന് കേരള സംസ്ഥാനമായി കേരള സംസ്ഥാനമായി ഔദ്യോഗികമായി പ്രഖ്യാപിക്കപ്പെട്ടു. പിന്നീട് പല പരീക്ഷണങ്ങളും പരിശ്രമങ്ങളും കേരളം തുറന്നു. ഒരു താല്പര്യം ഉണ്ടെങ്കിൽ അവസരങ്ങൾ നേടാൻ ബാങ്കിന്റെ ഒരു കഥയുണ്ട്.


ഉത്കണ്ഠ സഹകരണമാണ്
ഈ പരിശ്രമം ഇപ്പോൾ മുറ്റത്ത് നടക്കുന്നു. സാധ്യമാകുന്ന ഇടങ്ങളിൽ, ജായ്ഫ്രറ്റ് ഫെസ്റ്റിവലുകൾ സംഘടിപ്പിക്കാറുണ്ട്. അവളുടെ വഴി മഞ്ഞക്കരു വളരാൻ ഒരു പുതിയ ശൈലിയിൽ പ്രചോദനം. കൂടാതെ, ജനസംഖ്യക്ക് ജങ്ക് മൂല്യത്തിന് നൂതന അവസരങ്ങളുണ്ട്. പുതിയ കണ്ടെത്തലുകൾ പുരോഗമിക്കുകയാണ്. സഹകരണസംഘങ്ങളുടെ സഹകരണത്തോടെ സംസ്ഥാന സഹകരണ വകുപ്പ് വഴി ഈ സ്കീം നടപ്പിലാക്കുന്നതിനാണ് ഈ പദ്ധതി ലക്ഷ്യമിടുന്നത്. ഈ രീതിയിൽ ദശലക്ഷക്കണക്കിന് വൃക്ഷങ്ങൾ സംരക്ഷിക്കാൻ പദ്ധതിയിട്ടിരിക്കുന്ന ഈ പദ്ധതിയുടെ കീഴിൽ, നിൽക്കുന്നതും ഏറ്റവും കൂടുതൽ പ്രയോജനപ്രദവുമായ മരങ്ങൾ വളരുന്നതിനും ഇത് ഉദ്ദേശിക്കുന്നു.


ആദ്യത്തെ ജെക്ഫ്രറ്റ് ടൗൺ
സമാനമായി, സഹകരണ ബാങ്കായ പട്ടയ്ക്കോട്, ഒരു പുതിയ പദ്ധതി ആരംഭിച്ചു. പഞ്ചായത്ത് തലത്തിൽ 11 വാർഡുകളിലായി 5,000 ജായ്ഫ്രറ്റ് പ്ലാന്റുകൾ സ്ഥാപിക്കാനാണ് ഉദ്ദേശിക്കുന്നത്. അടുത്ത മൂന്ന് വർഷത്തിനുള്ളിൽ രാജ്യത്തെ ആദ്യത്തെ ജായ്ഫ്രറ്റ് ടൗൺ നിർമ്മിക്കാൻ സ്വപ്നം കാണുമെന്ന് കൊടകോഡ് കോ-ഓപ്പറേറ്റീവ് ബാങ്ക് ചെയർമാൻ സുബ്രഹ്മണ്യം പറഞ്ഞു.


ലോക പരിസ്ഥിതി ദിനവുമായി ജൂൺ 5 ന് പഞ്ചായത്ത് പ്രോഗ്രാം ആരംഭിച്ചു. 500 തൈകൾ വിതരണം ചെയ്തു. ജനസംഖ്യയ്ക്ക് തൈകൾ വിതരണം ചെയ്യുന്നിടത്തെല്ലാം, വിലക്കയറ്റ തോതിൽ സസ്യങ്ങളെ സ്വതന്ത്രമായി വിമോചിതരാക്കുന്നു. കുറച്ചു വർഷങ്ങളിൽ കശുവണ്ടി, തേങ്ങ, മഞ്ഞൾ തുടങ്ങിയ ഫലവൃക്ഷങ്ങൾ നിർമ്മിക്കാൻ തീരുമാനിച്ചു. ഇതുകൂടാതെ, പ്രത്യേക സിൻഡ്രോറ varica പലിശ തൈകൾ നൽകാൻ കഠിനമായി പ്രവർത്തിക്കുന്നു.




5 ആയിരം മരവും
സംസ്ഥാന സർക്കാരിന്റെ കണക്കുകൾ പ്രകാരം കേരളത്തിലെ ആയിരക്കണക്കിന് സഹകരണ സംഘങ്ങൾ വർഷാവർഷം പതിനായിരക്കണക്കിന് ജാക്ക്ഫ്രൂട് മരങ്ങൾ കൃഷിചെയ്യണം. ഓരോ വർഷവും 10 മരങ്ങൾ നട്ടുപിടിപ്പിക്കാൻ സർക്കാർ ഉത്തരവിട്ടിട്ടുണ്ട്. എന്നാൽ, പാലിക്കോട് നഗരത്തിലെ സഹകരണ ബാങ്ക് അയ്യായിരത്തോളം മരങ്ങൾ നട്ടുപിടിപ്പിക്കാൻ തീരുമാനിച്ചു. സേവിംഗിന് കുറഞ്ഞത് 50 രൂപ മാത്രമാണ്. കഴിഞ്ഞ വർഷം ഇതേ ബാങ്കുകൾ 3,000 കറിപ്രായക്കാർക്ക് വിതരണം ചെയ്തു. തദ്ദേശീയ ഗസ്സാർതൽമിലെ ഹൈസ്കൂൾ അദ്ധ്യാപകനായ അബ്ബിൻ നായരുടെ നേതൃത്വത്തിൽ പ്രാദേശിക വീടുശാലകളിൽ അവർ വിദ്യാഭ്യാസം നേടിയിരുന്നു. മൊത്തത്തിൽ, പരിസ്ഥിതി ബോധത്തിലൂടെ ജനങ്ങളെ കൂടുതൽ ആധികാരികമാക്കാനുള്ളതാണ് പദ്ധതിയുടെ പ്രധാന ലക്ഷ്യം.
കേരള സംസ്ഥാനത്ത് ആരംഭിച്ച ഈ പുതിയ സംരംഭത്തിൽ, നിരവധി സഹകരണ ബാങ്കുകൾ അവരുടെ കൃഷിക്ക് വേണ്ടി പല വിളകളും ശേഖരിക്കുന്നുണ്ട്. സിന്ധുര, മുണ്ടൻ, ടെൻബറി (തേൻ ജാക്ക്) എന്നിവയുടെ തൈകൾക്ക് പ്രത്യേക പ്രാധാന്യം നൽകുന്നത്, വരും ദിവസങ്ങളിൽ ചുവന്ന നിറത്തിലുള്ള പ്രത്യേകതകളാണ്. വിത്തുപോലുള്ളവ ഉൾപ്പെടെയുള്ള വിവിധ ഇനം വാഴത്തോട്ടങ്ങളും ജനങ്ങൾക്ക് വിതരണം ചെയ്യാനാണ് പദ്ധതി.
കേരളത്തിലെ പല പഞ്ചായത്തുകളുടെയും വരുമാനത്തിന്റെ പ്രധാന വരുമാനമാണ് പാലക്കാട്. ജാക്കറ്റ് ഉല്പന്നങ്ങൾ തയ്യാറാക്കുന്ന നൂറുകണക്കിന് കുടുംബങ്ങൾ ഉണ്ട്. ജായ്ഫ്രറ്റ്, ജാക്കഫ് ഉൽപ്പന്നങ്ങൾ എന്നിവ വാങ്ങുന്നവർ ഇവിടെ എത്താറുണ്ട്. അവരുടെ ആവശ്യങ്ങൾ നിറവേറ്റാൻ, കേരളത്തിൽ ജാക്ക് ഫ്രൂട്ട് ഉൽപ്പന്നങ്ങൾ തയ്യാറാക്കിയിട്ടുണ്ട്.
ജനങ്ങളുടെ അസാധാരണമായ പിന്തുണ

എല്ലാവരും ഈ പഞ്ചായത്ത് സംരംഭത്തെ പിന്തുണയ്ക്കുന്നു. പഞ്ചായത്തിലെ ഹൈസ്കൂൾ രപ്രറി സെൽഫ് സർവീസ് അസോസിയേഷന്റെ വിദ്യാസമ്പന്നരും വിദ്യാസമ്പന്നരുമായ ജനങ്ങളുടെ ക്യാമ്പസുകളിൽ നൂറുകണക്കിന് മഞ്ഞക്കരു പ്ലാൻറുകളുണ്ട്. പഞ്ചായത്ത് പരിധിയിൽ 500 അങ്കു പ്ലാൻറുകൾ നടാം. കഴിഞ്ഞ വർഷം അവരുടെ പരിസരത്തിൽ 500 ലധികം കറിയുപ്പുകൾ വിത്ത് നട്ടുപിടിപ്പിച്ചതിലൂടെ ഈ വിദ്യാർത്ഥി തനതായ പ്രവർത്തനം നടത്തിയിട്ടുണ്ട്.

അറക്കാടഡ് കോ-ഓപ്പറേറ്റീവ് ബാങ്കിന്റെ പ്രസിഡന്റ് സുബ്രഹ്മണ്യം


നടപ്പിലാക്കിയ ചുമതല

എൻ എസ് എസ് വിദ്യാർത്ഥികളുടെ പ്രകടനം കേരളത്തിലെ ഈ പദ്ധതി മറ്റുള്ളവർക്ക് അനുയോജ്യമാണ്. രാജ്യത്ത് എല്ലായിടത്തും ഇത്തരം സംസ്ഥാനങ്ങളിൽ അത്തരം പ്രവർത്തനങ്ങൾ സ്വമേധയാ ഉള്ളതായിരിക്കണം. സർക്കാർ, വനംവകുപ്പ്, സംഘ് സ്ഥാപനങ്ങൾ, ജനങ്ങളുടെ പരിസ്ഥിതി സ്നേഹികൾ എന്നിവ ഹൃദയപൂർവം സഹകരിക്കേണ്ടതാണ്. അപ്പോൾ മാത്രമേ നമ്മുടെ പരിസ്ഥിതി നിലനിൽക്കും. അടുത്ത തലമുറയെ നയിക്കും. ജനസംഖ്യയുടെ വരുമാനത്തെ ആശ്രയിച്ച്. മഞ്ഞക്കരുതും കീടനാശിനികളും കൂടാതെ മഞ്ഞക്കരുതായി വളരുന്നതിനാലാണ് ജനങ്ങളുടെ ആരോഗ്യം വർദ്ധിക്കുന്നത്. ബോധപൂർവ്വമുള്ള പൗരന്മാർ ഇതേക്കുറിച്ച് ചിന്തിക്കുകയും അവരുടെ മാതൃനഗരത്തിലും ഗ്രാമത്തിലും പട്ടണത്തിലും ഈ മാതൃകാ പദ്ധതി നടപ്പിലാക്കുകയും വേണം.



                       ഗസ്സാർലാട്ട്മൽ ഹൈസ്ക്കൂൾ അധ്യാപകനായ അബ്ബിൻ

ಬುಧವಾರ, ಜುಲೈ 11, 2018

ಅಡಿಕೆಗೆ ಅಪಾಯಕಾರಿ ಬೇರುಹುಳ-ನಿಯಂತ್ರಣ

 

                ಅಡಿಕೆಗೆ ಅಪಾಯಕಾರಿ ಬೇರುಹುಳ-ನಿಯಂತ್ರಣ

                                   ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು 


ಬಹುವಾರ್ಷಿಕ ಬೆಳೆಯಾದ ಅಡಿಕೆ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಬಹುತೇಕ ಬೆಳೆಗಾರರ ಬೆನ್ನೆಲುಬು. ಕರಾವಳಿ, ಮಲೆನಾಡು, ಬಯಲು ಸೀಮೆಯ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಸರ್ವೆ ಸಾಮಾನ್ಯವಾಗಿ ಬಹುತೇಕ ಬೆಳೆಗಳನ್ನು ಕಾಡುವಂತೆ, ಅಡಿಕೆ ಬೆಳೆಯನ್ನೂ ವಿವಿಧ ರೋಗಗಳು ಕಾಡುತ್ತವೆ. ಇವುಗಳಲ್ಲಿ ಪ್ರಮುಖವಾದವುಗಳು 2-3 ರೀತಿಯ ಕೀಟಗಳಿವೆ. ಅಡಿಕೆ ಬೆಳೆಗಾರರನ್ನು ಅಧಿಕವಾಗಿ ಚಿಂತೆಗೀಡು ಮಾಡಿರುವ ಬೇರುಹುಳಗಳ ಭಾಧೆ, ಕೊಳೆರೋಗ , ಹಳದಿ ಎಲೆ ರೋಗಗಳು ಹೆಚ್ಚಿನ ಪ್ರಮಾಣದ ಬೆಳೆಹಾನಿಗೆ ಪ್ರಮುಖ ಕಾರಣ ಎನ್ನಬಹುದಾಗಿದೆ.
ಬೇರುಹುಳಗಳ ಅಧಿಕ ಬಾಧೆಯಿಂದಾಗಿ ಅಡಿಕೆಯ ಇಳುವರಿಯು ತೀವ್ರ ಕುಸಿತ ಕಾಣುವಂತಾಗಿದೆ. ಇದು ಬೆಳೆಗಾರರ ಮೇಲೆಯೂ ಮಾರಕ ಪರಿಣಾಮ ಬೀರುತ್ತಿದೆ. ಎಲ್ಲಾ ಬೆಳೆಗಳಂತೆ ಅಡಿಕೆ ಬೆಳೆಗೂ ಬೇರುಗಳು ಅತ್ಯಂತ ಪ್ರಮುಖ ಅಂಗ. ಬೇರಿಗೆ ಹಾನಿಯಾದಲ್ಲಿ ಬೆಳೆಯು ವೃದ್ಧಿಯಾಗುವುದಾದರೂ ಹೇಗೆ ? ಆದರೆ, ಬಹುತೇಕ ಸಂದರ್ಭಗಳಲ್ಲಿ ಅಡಿಕೆ ಬೆಳೆಯ ಬೇರಿಗೆ ಹಾನಿಯಾಗಿದೆ ಎಂದು ಬೆಳೆಗಾರರಿಗೆ ತುಂಬಾ ತಡವಾಗಿ ತಿಳಿಯುತ್ತದೆ.


ಬೇರು ಹುಳಗಳ ಬಾಧೆ ಪತ್ತೆ ? 

ಅಡಿಕೆ ಗಿಡವು ಬೇರುಹುಳದ ಬಾಧೆಗೆ ಒಳಗಾಗಿದೆ ಎಂಬುವುದು ಮೇಲ್ನೋಟಕ್ಕೆ ಕಾಣÀಬರುವುದೇ ಇಲ್ಲ.
• ಅಡಿಕೆ ಗಿಡಗಳಲ್ಲಿ ಫಸಲು ನೀಡುವ “ ಹಿಂಗಾರ” ದ ಕೊರತೆಯೇ ಬೇರುಹುಳ ಬಾಧೆಯ ಪ್ರಮುಖ ಲಕ್ಷಣ.
• ಎಲೆಯು ಹಳದಿಯಾಗುವುದು, ಎಲೆಗಳು ಕಿರಿದಾಗುವುದು, ಎಲೆಗಳ ಸಂಖ್ಯೆಯು ಕ್ಷೀಣಿಸುವುದು ಈ ರೋಗದ ಮತ್ತೊಂದು ಲಕ್ಷಣ.
• ಅಡಿಕೆ ಗಿಡದ ಬೆಳವಣಿಗೆಯ ವೇಗವು ಕುಂಠಿತಗೊಳ್ಳುತ್ತವೆ. ಇದರ ಲಕ್ಷಣವಾಗಿ ಮರದಲ್ಲಿ ಗಿಣ್ಣುಗಳ ಅಂತರ ತೀರಾ ಕಡಿಮೆಯಾಗುವುದು.
• ಅಡಿಕೆ ಗಿಡ- ಮರದ ತುದಿ ಮೊನಚಾಗುವುದು ಕೂಡಾ ಈ ರೋಗದ ಲಕ್ಷಣವೆಂದು ಬೆಳೆಗಾರರು ಗಮನಿಸಬೇಕಾದ ಅಂಶ.

ಅಡಿಕೆ ಬೆಳೆಗಾರರನ್ನು ಆಪತ್ತಿನಿಂದ ಸಂರಕ್ಷಿಸಲು ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ. ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು,  ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಶಿವಮೊಗ್ಗದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ,  ಕಾಸರಗೋಡಿನಲ್ಲಿರುವ ಅಡಿಕೆ ಬೆಳೆಯ ಸಂಶೋಧನಾ ಕೇಂದ್ರದಂತಹ ಹಲವಾರು ಸಂಸ್ಥೆಗಳು ಮುಂಚೂಣಿಯಲ್ಲಿರುವ ಪ್ರಮುಖ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳ ನಿರಂತರ ಸಂಶೋಧನೆಗಳ ಫಲವಾಗಿ ಅಡಿಕೆ ಬೆಳೆಯನ್ನು ಕಾಡುವ “ಪ್ರಮುಖ ಶತ್ರು ಬೇರುಹುಳದ ಬಗ್ಗೆ ? “ ಎಂಬ ಬಗ್ಗೆ ಶಿವಮೊಗ್ಗದ ತೋಟಗಾರಿಕಾ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಲ್ಲೇಶ್ವರಸ್ವಾಮಿ ನೀಡಿದ ಮಾಹಿತಿ ಇಲ್ಲಿದೆ.

ಬೇರು ಹುಳಗಳ  ಪ್ರಭೇಧಗಳು ? 

ಅಡಿಕೆ ಬೆಳೆಗೆ ಅಧಿಕ ಮಳೆ ಬೀಳುವ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬೇರುಹುಳದ ಬಾಧೆ ಅಧಿಕ. ಇವುಗಳನ್ನು ಯಕೋಪ್ಲೋರೀಸ್ ಲೆಕೆಡೋಫೋರಾ, ಯುಕೋಫೋರೀಸ್ ಬರ್ಮಿಯಸ್ಟ್ರೀ, ಯುಕೋಫೋಲೀಸ್ ಪೋಮಿಯೋ ಫೋರಾ ಪ್ರಭೇಧಗಳೆಂದು ವಿಜ್ಞಾನಿಗಳು ವರ್ಗಿಕರಿಸಿ, ಹೆಸರಿಸಿದ್ದಾರೆ.
ಲ್ಯೋಕೋ ಪೋಲೀಸ್ ಕೋನಿಯೋ ಫೋರಾ ಎಂಬ ಪ್ರಭೇಧದ ಬೇರು ತಿನ್ನುವ ಹುಳಗಳು ಕರಾವಳಿ ಪ್ರದೇಶದಲ್ಲಿ ಕಾಣಬರುತ್ತಿದೆ. ಇದು ವರ್ಷದ ಜೀವನಚಕ್ರವನ್ನು ಹೊಂದಿದೆ. ಮಲೆನಾಡಿನಲ್ಲಿ ಕಂಡುಬರುವ ಬೇರು ತಿನ್ನುವ ಹುಳಗಳಿಗೆ ಲ್ಯೂಕೋಪೋಲೀಸ್ ಲೆಪಿಡೋಪೋರಾ , ಲ್ಯೋಕೋ ಪೋಲೀಸ್ ಬರ್ಮಿಸ್ಟ್ರಿ ಎಂದು ಹೆಸರಿವೆ.  ಇವು 2 ವರ್ಷಗಳ ಜೀವನ ಚಕ್ರವನ್ನು ಹೊಂದಿವೆ. ಈ ಹುಳಗಳು ಬಹುತೇಕ ಸಮಯ ಭೂಮಿಯೊಳಗೆ ಕಳೆಯುವುದರಿಂದ ಮಾನವನಿಗೆ ಇವುಗಳ ಇರುವಿಕೆ ಕಾಣಬರುವುದು ತೀರಾ ಕಡಿಮೆ. ಅಥವಾ ತಿಳಿಯುವುದೇ ಇಲ್ಲ ಎನ್ನಬಹುದಾಗಿದೆ. ಈ ಹುಳಗಳ ಬಾಧೆಗೆ ಒಳಗಾದ ಅಡಿಕೆ ತೋಟಗಳ ಮಾಲೀಕರು ಆರ್ಥಿಕ ಸಂಕಟಕ್ಕೆ ಸಿಲುಕುವುದಂತೂ ಖಚಿತ.

ಹಾರುವ ದುಂಬಿಗಳು

ಈ ರೀತಿಯ ಹುಳಗಳು ತಮ್ಮ ತೋಟವನ್ನು ಬಾಧಿಸುತ್ತಿವೆಯೋ ಎಂದು ಪತ್ತೆ ಹಚ್ಚುವುದು ಬೆಳೆಗಾರ ಪಾಲಿಗೆ ಸವಾಲಿನ ಕಾರ್ಯವೇ ಸರಿ. ಈ ಹುಳಗಳು (ದುಂಬಿಗಳು)  ಮಳೆಗಾಲದಲ್ಲಿ ಭೂಮಿಯಿಂದ ಹೊರಬರುತ್ತವೆ. ಇವು ಸಾಮಾನ್ಯವಾಗಿ ಅಡಿಕೆ ತೋಟದ ಅಂಚಿನಲ್ಲಿರುವ ಮರಗಳ ಮೇಲೆ, ಸಣ್ಣ- ಪುಟ್ಟ ಅಡಿಕೆ ಮರಗಳ ಮೇಲೆ ಕುಳಿತಿರುತ್ತವೆ. ಸಂಜೆ ವೇಳೆಯಲ್ಲಿ ಭೂಮಿಯಿಂದ ಹೊರಬಂದು ಇವು ತಮ್ಮ ಸಂಗಾತಿಗಳೊಡನೆ ಮಿಲನ ನಡೆಸಿ ಮತ್ತು ಬೆಳಗಾಗುವ ವೇಳೆಗೆ ಮತ್ತೆ ಭೂಮಿಯೊಳಗೆ ಸೇರುತ್ತವೆ ! ಹೆಣ್ಣು ದುಂಬಿಯು  ಮಣ್ಣಿನ ಮಡಿಕೆ ರಚಿಸಿ ಅದರಲ್ಲಿ ಬಿಳಿ ಬಣ್ಣದ ಮೊಟ್ಟೆಯನ್ನಿಡುತ್ತದೆ. ತನ್ನ ಜೀವಿತಾವಧಿಯಲ್ಲಿ ಮಣ್ಣಿನ ಸುಮಾರು 2 ಅಡಿಗಳ ಆಳದವರೆಗೂ ಹೋಗಿ ಸುಮಾರು 30 ಮೊಟ್ಟೆಗಳನ್ನು ಇಡುತ್ತವೆ. 15 ದಿನಗಳಲ್ಲಿ ಹೊರಬರುವ ಹುಳವು ಬಿಳಿ ಮತ್ತು ಕಂದು ಮೈಬಣ್ಣ ಹೊಂದಿರುತ್ತದೆ. 45 ದಿನಗಳಲ್ಲಿ ದ್ವಿತೀಯ ಹಂತ ತಲುಪುತ್ತವೆ. 75 ದಿನಗಳಲ್ಲಿ ಮೂರನೇ ಹಂತ ತಲಪುತ್ತವೆ. 14 ರಿಂದ 18 ತಿಂಗಳ ಕಾಲ ಜೀವಿಸುತ್ತದೆ, ಈ ಸಮಯದಲ್ಲಿ ಹುಳಗಳು ಬೇರಿಗೆ ತೊಂದರೆ ನೀಡುತ್ತದೆ. ಅಡಿಕೆ ಗಿಡಗಳ ಬೇರನ್ನೇ ತಿನ್ನಲಾರಂಭಿಸುತ್ತವೆ. ಮಳೆಗಾಲದಲ್ಲಿ ದುಂಬಿಯಾಗಿ ಹೊರ ಬಂದು ಹಾರಾಡುತ್ತವೆ.

 ಬೇರುಹುಳಗಳ ನಿರ್ವಹಣೆ ? 

• ಸೋಲಾರ್ ಕೀಟ ನಾಶಕ ಯಂತ್ರವನ್ನು ಪ್ರತಿ ಏಕರೆಗೆ ಒಂದರಂತೆ ಅಳವಡಿಸಿದ್ದಲ್ಲಿ ಇದರ ಸಂಪೂರ್ಣ ನಿಯಂತ್ರಣ ಸಾಧ್ಯ. ಆದರೆ, ಈ ಕ್ರಮವನ್ನು ಸಾಮೂಹಿಕವಾಗಿ ಬೆಳೆಗಾರರು ಬಳಸಿದ್ದಲ್ಲಿ ಇದರ ಹತೋಟಿ ಖಚಿತ. (ವಿವರಗಳಿಗೆ ಕರಿಬಸಪ್ಪ – ಮೊಬೈಲ್ – 9880973218 ಅವರನ್ನು ಸಂಪರ್ಕಿಸಿ)
ಸೋಲಾರ್ ಕೀಟ ನಾಶಕ ಯಂತ್ರ


• ಮುಸಂಜೆಯ ವೇಳೆ ಅಡಿಕೆ ತೋಟಗಳಲ್ಲಿ, ಅದರ ಅಕ್ಕ-ಪಕ್ಕಗಳ ಮರ-ಗಿಡಗಳ ಮೇಲೆ ಕುಳಿತಿರುತ್ತವೆ. ಈ ದುಂಬಿಗಳನ್ನು  ಟಾರ್ಛ್ ಬೆಳಕಿನ ಸಹಾಯದಿಂದ ಪತ್ತೆ ಮಾಡಿ.   ಕೈಯಿಂದ ಇಲ್ಲವೆ ಬಲೆಗಳನ್ನು ಬಳಸಿ ಹಿಡಿದು ಕೊಂದುಹಾಕಬೇಕು. ಇದು ಸುಲಭದ ಕಾರ್ಯವಂತೂ ಖಂಡಿತಾ ಅಲ್ಲ.
• ದುಂಬಿಯ ಕಾಟ ಹೆಚ್ಚಾಗಿರುವ ಸಮಯದಲ್ಲಿ (ಮಳೆಗಾಲದಲ್ಲಿ) ಅಡಿಕೆ ತೋಟವನ್ನು ಶುಚಿಯಾಗಿರಿಸಬೇಕು.ಇದರಿಂದ ದುಂಬಿಯ ಕಾಟವು ಬೆಳೆಗಾರರಿಗೆ ಕಂಡುಬರುವುದರಿಂದ ಇದರ ಹತೋಟಿ ಮಾಡುವುದು ಸುಲಭ.
• ಈ ದುಂಬಿಗಳು ಅಡಿಕೆ ತೋಟದಲ್ಲಿ ಬಿಲಮಾಡಿ ವಾಸಿಸುವುದರಿಂದ ಅಗತೆ ಮಾಡಿ ಇವುಗಳನ್ನು ನಾಶ ಪಡಿಬಹುದು. ಆದರೆ, ನೆನಪಿರಲಿ ಅಗತೆಯನ್ನು 2 ಅಡಿಗಿಂತಲೂ ಅಧಿಕ ಆಳದವರೆಗೆ ಮಾಡಬೇಕಾಗುತ್ತದೆ.
• ಅಡಿಕೆ ತೋಟದ ಅಗತೆಗೆ ಜುಲೈ ಎರಡನೇ ವಾರದಿಂದ ಆಗಸ್ಟ್ ಕೊನೆ ವಾರದವರೆಗೆ ಸೂಕ್ತ ಸಮಯ.

ಜೈವಿಕ ನಿಯಂತ್ರಣ

• ಅಡಿಕೆ ತೋಟ ಸಂಪೂರ್ಣ ತೋಯುವಂತೆ (ನೆನೆಯುವಂತೆ) ಜಂತುಹುಳದ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಿ. ಈ ಜಂತುಹುಳಗಳು ಮಣ್ಣಿನಲ್ಲಿರುವ ಬೇರು ಕೊರೆಯುವ ಹುಳಗಳ ಲಾರ್ವಾ (ಮರಿ)ಗಳ ದೇಹದೊಳಗೆ ಸೇರಿ ಅವುಗಳನ್ನು ತಿನ್ನುತ್ತವೆ.

ರಾಸಾಯನಿಕ ನಿಯಂತ್ರಣ

• ಮಳೆಗಾಲದ ಆರಂಭದ ದಿನಗಳಲ್ಲಿ ಅಡಿಕೆ ಮರಗಳ ಬುಡಗಳಿಗೆ ಹರಳು ಉಪ್ಪು ಹಾಕಿ ಹುಳಗಳನ್ನು ನಿಯಂತ್ರಿಸಬಹುದಾಗಿದೆ.

ಆಧಾರಿತ ಬರಹ

ಶುಕ್ರವಾರ, ಜುಲೈ 6, 2018

ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ-ಬಳಕೆ

ವೈಜ್ಞಾನಿಕ  ಬೋರ್ಡೊ ದ್ರಾವಣ ತಯಾರಿಕೆ-ಬಳಕೆ  


 ಬರಹ: ಕೂಡಂಡ ರವಿ, ಹೊದ್ದೂರು. 

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com





ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗುತ್ತದೆ. ಆದರೆ, ಬಹುತೇಕ ಬೆಳೆಗಾರು ಮತ್ತು ಕೂಲಿ ಕಾರ್ಮಿಕರು ಬೋಡೋ ದ್ರಾವಣವನ್ನು ತಯಾರಿಸುವಲ್ಲಿ ಎಡುವುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ.  ಬೋಡೋ ದ್ರಾವಣವನ್ನು  ಸಮರ್ಪಕವಾಗಿ ತಯಾರಿಸಿದ್ದಲ್ಲಿ ಅದನ್ನು ಸಿಂಪಡಿಸುವುದು ವ್ಯರ್ಥವಾಗುತ್ತದೆ.

ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ್ರನಾಶಕ. ಆದರೆ , ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ  ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪರಣೆ ಕೈಗೂಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.
ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತ್ತ, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪರಣೆ ಮಾಡುವುದುಂಟು. ಪರಿಣಾಮ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿ.
ಮೈಲುತುತ್ತ ಅಂದರೆ ಶುದ್ದ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ,  ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ಧವಾಗಿ ಕೆಲಸ ಮಡುತ್ತದೆ. ಘನಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣವನ್ನು ಸೇರಿಸಿ, ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಲಾಗುತ್ತದೆ. ಅದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೋ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೆÇೀಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜೊತೆಗೆ ಏಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಾಗ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬೋಡೋ ದ್ರಾವಣವನ್ನು ಅತ್ಯಂತ ಸಮರ್ಪಕವಾಗಿ ತಯಾರಿಸುವುದೂ ಪ್ರಮುಖ ಅಂಶ.
ಈ ಹಿನ್ನೆಲೆಯಲ್ಲಿ ಬೋರ್ಡೋ ದ್ರಾವಣದ ವೈಜ್ಞಾನಿಕ ತಯಾರಿಕೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಸಲಹೆಗಳನ್ನು ನೀಡಿದ್ದಾರೆ.



ಅನುಕೂಲಗಳು
• ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು ಹತೋಟಿ ಮಾಡಬಹುದು.
• ಈ ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೂರ ಮೈಯಲ್ಲಿ ಅಂಟಿಕೊಳ್ಳುವುದರಿಂದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು.
• ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು.
• ಸಿಂಪರಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ದುûಷ್ಪರಿಣಾಮಗಳು ತುಂಬಾ ಕಡಿಮೆ.


ತಯಾರಿಸಲು ಬೇಕಾದ ವಸ್ತುಗಳು
1. ಮೈಲುತುತ್ತ 1 ಕೆ.ಜಿ.
2. ಸುಣ್ಣ 1 ಕೆ.ಜಿ.
3. ನೀರು 100 ಲೀಟರ್
4. ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್.ಪೇಪರ್
5. 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್
6. 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್/ಬ್ಯಾರಲ್


ತಯಾರಿಕಾ ವಿಧಾನ :
• ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.
• ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‍ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು.
• ಕರಗಿದ 10 ಲೀಟರ್ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‍ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ಈಗ ಈ ಮಿಶ್ರಣವು ಶೇ. 1 ರ ಬೋರ್ಡೊ ದ್ರಾವಣವಾಗುತ್ತದೆ. ಇಂತಹ ಮಿಶ್ರಣ ತಿಳಿ ನೀಲಿ  ಬಣ್ಣದಾಗಿರುತ್ತದೆ.
ದ್ರಾವಣದ ಪರೀಕ್ಷೆ
• ತಯಾರು ಮಾಡಿದ ಮಿಶ್ರಣವು ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುುಕ್ತವಾಗಿದ್ದು ಅದನ್ನು ಸಿಂಪರಣೆ ಮಾಡಿದ್ದಲ್ಲಿ ಬೆಳೆಗಳಿಗೆ ಹಾನಿಕಾರಕ. ಆದುದರಿಂದ ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದ್ದು ಸಿಂಪಡಣೆಗೆ ಸೂಕ್ತ  ಎಂದು ತಿಳಿಯಬಹುದು.
• ಕೆಂಪು ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್‍ಮಸ್ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.

ಗಮನದಲ್ಲಿಡಬೇಕಾದ  ಅಂಶಗಳು
• ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಮರದ  ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು.
• ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು  ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಾದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು.
• ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆ (ಕೀಟ) ನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು.
• ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು.
• ಹೆಚ್ಚು ಸುಣ್ಣ ಸೇರಿಸಿದರೆ ದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7 ಕ್ಕಿಂತ ಹೆಚ್ಚಾಗುವುದು ಹಾಗು ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂದ್ರನಾಶಕದ ಗುಣ ಕಡಿಮೆಯಾಗುತ್ತದೆ.
• ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು.
• ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪ್ರೇ ಸುಣ್ಣವನ್ನು ಉಪಯೋಗಿಸಬೇಕು.
• ಸಿಂಪರಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.

ದ್ರಾವಣದ ಬಳಕೆ 

ಬೆಳೆಗಳು              ಪ್ರಮುಖವಾದ ರೋಗಗಳು 

ಅಡಿಕೆ - ಕೊಳೆರೋಗ, ಸುಳಿಕೊಳೆರೋಗ
ತೆಂಗು - ಸುಳಿ ಕೊಳೆರೋಗ, ಕಾಂಡದಿಂದ ರಸಸೋರುವ ರೋಗ
ಕಾಳು ಮೆಣಸು - ಶೀಘ್ರ ಸೊರಗು ರೋಗ, ಚಿಬ್ಬು ರೋಗ (ಕೊತ್ತು ಉದುರುವುದು)
ಶುಂಠಿ - ಗೆಡ್ಡೆ ಕೊಳೆರೋಗ, ಎಲೆ ಚುಕ್ಕೆ ರೋಗ
ಈ ರೀತಿ ವೈಜ್ಞಾನಿಕ ವಿಧಾನದಿಂದ ಬೋರ್ಡೊ ದ್ರಾವಣವನ್ನು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ರ ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು.

ಮಾಹಿತಿಗಾಗಿ ಸಂಪರ್ಕಿಸಿ

ಹಿರಿಯ ವಿಜ್ಞಾನಿ ಮತ್ತು ಮುಖ್ಯಸüರು, ಕೃಷಿ ವಿಜ್ಞಾನ ಕೇಂದ್ರ , ಗೋಣಿಕೊಪ್ಪಲು, ದೂರವಾಣಿ: 08274-247274

ಮಂಗಳವಾರ, ಜುಲೈ 3, 2018

ಭತ್ತದ ಬೀಜೋಪಚಾರ ಏಕೆ- ಹೇಗೆ ?

ಕೃಷಿ ಲೋಕ

                            ಭತ್ತದ ಬೀಜೋಪಚಾರ ಏಕೆ- ಹೇಗೆ ?


               ಬರಹ: ಕೂಡಂಡ ರವಿ, ಹೊದ್ದೂರು. 



ಭತ್ತವು ಕೊಡಗು ಜಿಲ್ಲೆಯ ಮುಖ್ಯ ಆಹಾರ ಬೆಳೆ. ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆಗಳಲ್ಲಿ ಮುಂಗಾರಿನಲ್ಲಿ ಬೀಳುವ ಮಳೆಯಾಶ್ರಯದಲ್ಲಿ ಬೆಳೆಯನ್ನು ತಗ್ಗು (ಬಯಲು) ಮಧ್ಯಮ (ಮಜಲು ಪ್ರದೇಶ) ಹಾಗೂ ತಗ್ಗಿನ   ಕಣಿವೆ ಪ್ರದೇಶದ ಗದ್ದೆಗಳಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಭತ್ತದ ಪ್ರದೇಶವು ಕಡಿಮೆಯಾಗುತ್ತಿದೆ.  ಭತ್ತದ ಇಳುವರಿಯಲ್ಲಿ ಕೂಡ ಇಳಿಮುಖವಾಗುತ್ತಿದೆ. ಭತ್ತವನ್ನು ಸಮಗ್ರ ಬೇಸಾಯ ಪದ್ಧತಿಯಡಿಯಲ್ಲಿ ಉತ್ಪಾದಕತೆyaನ್ನು ಹೆಚ್ಚಿಸುವುದರೊಂದಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.


ಪ್ರಸ್ತುತ ವರ್ಷ ಜಿಲ್ಲೆಯಾದ್ಯಂತ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಈಗಾಗಲೇ   ತೊಡಗಿಸಿಕೊಂಡಿದ್ದಾರೆ. ಭತ್ತದ ಕೃಷಿ ಸೇರಿದಂತೆ ವಿವಿಧ ಕೃಷಿಗಳಲ್ಲಿ ಬೀಜೋಪಚಾರವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಸರಿಯಾದ ಕ್ರಮವರಿತು ಬೀಜೋಪಚಾರ ಮಾಡುವುದರಿಂದ ಹಲವಾರು ರೋಗಗಳನ್ನು ಯಶಸ್ವಿಯಾಗಿ ತಡೆಯಲು ಸಾಧ್ಯವಿದೆ.

 ರೋಗಗಳಿಂದ ರಕ್ಷಣೆ 

ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದುಬತ್ತಿ ರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ, ಬಿತ್ತನೆ ಬೀಜ ಮತ್ತು ಇತರೆ ಮಾಧ್ಯಮಗಳಿಂದ ಬೀಜದ ಮುಖಾಂತರ ಪ್ರಸಾರವಾಗುತ್ತವೆ.  ರೈತರಿಗೆ ಅಪಾರ ಆರ್ಥಿಕ ಹಾನಿಯನ್ನು ಉಂಟುಮಾಡುತ್ತವೆ. ರೈತರು ಅತಿ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಬೀಜದಿಂದ ಪ್ರಸಾರವಾಗುವ ಈ ರೋಗಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೀಜಗಳಿಗೆ, ಮೊಳಕೆಯೊಡೆಯುವ ಸಸಿಗಳಿಗೆ ಹಾಗೂ ಮುಂದಿನ ಸಸ್ಯ ಬೆಳವಣಿಗೆ ಹಂತದಲ್ಲಿ ಬರುವ ಅನೇಕ ರೋಗಗಳಿಂದ ರಕ್ಷಣೆ ಒದಗಿಸಬಹುದಾಗಿದೆ.

ಬೀಜದಿಂದ ಪ್ರಸಾರವಾಗುವ ಅನೇಕ ರೋಗಗಳಲ್ಲಿ ಹಾನಿಕಾರಕ ರೋಗಾಣುಗಳಾದ ಶಿಲೀಂದ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜೊತೆಯಲ್ಲಿ ಇರುತ್ತವೆ.  ಬೆಳೆಯ ವಿವಿಧ ಬೆಳವಣಿಗೆಯ ಹಂತಗಳÀಲ್ಲಿ ರೋಗವು ಉಲ್ಬಣಿಸಿ,  ಬೆಳೆಯ ಹಾನಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು  ರೈತರಿಗೆ ಭತ್ತದಲ್ಲಿ ಬೀಜೋಪಚಾರ ಕ್ರಮದ ಬಗ್ಗೆ  ಮಾಹಿತಿ ನೀಡಿರುವರು. ಆದ್ದರಿಂದ ಜಿಲ್ಲೆಯ ರೈತರು ಈ ಕೆಳಗೆ ಸೂಚಿಸಿದ ವಿಧಾನವನ್ನು ಅನುಸರಿಸಿ, ಖರ್ಚನ್ನು ಕಡಿಮೆ ಮಾಡಬಹುದಾಗಿದೆ. ಬೆಳೆಯಲ್ಲಿ ಬರುವ ಅನೇಕ ರೋಗಗÀಳನ್ನು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಬಹುದು. 

 ಬೀಜೋಪಚಾರ  ವಿಧಾನ

• ಪ್ರತೀ ಎಕರೆಗೆ ಶಿPAರಸ್ಸು ಮಾಡಿದ 25 ರಿಂದ 30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೊಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಿ.
• ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2 ರಿಂದ 3 ಬಾರಿ ತಣ್ಣೀರಿನಲ್ಲಿ ತೊಳೆದು 24 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಿ. 
• ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25 ರಿಂದ 30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂದ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ,  ನೆರಳಿನಲ್ಲಿ ಒಣಗಿಸಿ.
• ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ,  ಮೊಳಕೆಯೊಡೆಯಲು ಇಟ್ಟು,  ನಂತರ ಸಸಿಮಡಿಗೆ ಉಪಯೋಗಿಸಿ.
ಗಮನಿಸಬೇಕಾದ ಅಂಶಗಳು
• ಶಿPÁರಸ್ಸು ಮಾಡಿದ ಶಿಲೀಂದ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ.
• ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಿ.
• ಎರಡು ಮೂರು ಶಿಲೀಂದ್ರನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡದಿರಿ.
• ಬೀಜೋಪಚಾರ ಮಾಡುವ ಸಂದರ್ಭ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್‍ಗಳನ್ನು ಬಳಸಿ .

ಹೆಚ್ಚಿನ ವಿವರಗಳಿಗೆ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ: 08274-247274 ಇವರನ್ನು ಸಂಪರ್ಕಿಸಬಹುದು.

ಭಾನುವಾರ, ಜೂನ್ 17, 2018

ಸೋಲಾರ್ ಕೀಟ ನಾಶಕ ಯಂತ್ರ ! Solar Insects Trap

ಸೋಲಾರ್ ಕೀಟ ನಾಶಕ ಯಂತ್ರದ ಮುಖ್ಯಾಂಶಗಳು.




* ಹಲವಾರು ಸಂಘ - ಸಂಸ್ಥೆಗಳು , ಕೃಷಿಗೆ ಸಂಬಂಧಿತ ವಿಶ್ವವಿದ್ಯಾಲಯಗಳು ಇದನ್ನು ಬಳಸುತ್ತಿವೆ. ಹಾಗೂ ರೈತರಿಗೆ  ಬಳಸುವಂತೆ ಸಲಹೆ ನೀಡಿವೆ.


* ೫ ಜಿಲ್ಲೆಗಳಲ್ಲಿ ಆತ್ಮ ಯೋಜನೆಯಡಿ ರೈತರಿಗೆ ವಿತರಿಸಿವೆ.
* ಹಲವಾರು ಕೀಟ ಶಾಸ್ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.ಅವರೂ ಇದರ ಬಳಕೆದಾರರು.
* ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಬಳಸುತ್ತಿರುವರು.
* ಹೊರ ರಾಜ್ಯಗಳಿಗೂ ಸರಬರಾಜಾಗುತ್ತಿದೆ.
* ಎಲ್ಲಾ ರೀತಿಯ ಹೂವು, ಹಣ್ಣು, ತರಕಾರಿ ಮತ್ತು ಇತರ ಬೆಳೆಗಳನ್ನು ಬಾಧಿಸುವ ಕೀಟಗಳನ್ನು ನಿಯಂತ್ರಿಸುತ್ತದೆ.
* ಬೆಲೆ ತೀರಾ ಕಡಿಮೆ. ನಿರ್ವಹಣೆ , ಬಳಕೆ ಸುಲಭ.
* ಅಧಿಕ ಬಾಳಿಕೆ, ಪರಿಸರ ಸ್ನೇಹಿ.
* ಮಣ್ಣು- ಆಹಾರ ವಿಷವಾಗುವುದನ್ನು ತಪ್ಪಿಸುತ್ತದೆ.
* ಸಾವಿರಾರು ಮಂದಿ‌ ಸಂತೃಪ್ತ ಗ್ರಾಹಕರು.
* ಅಂತರ್ ರಾಷ್ಟ್ರೀಯ ಗುಣಮಟ್ಟದ ಬಲ್ಬಗಳು.
* ತುಕ್ಕು, ನೀರು ನಿರೋಧಕ.
* ಸಾವಯುವ ಕೃಷಿಗೆ ಉತ್ತಮ ಜೋಡಿ.
* ಬೆಲೆ ಕೇವಲ ೪೮೭೫ ರೂಪಾಯಿಗಳು ಮಾತ್ರ. ( ಕರ್ನಾಟಕದಲ್ಲಿ)
* ೬ ತಿಂಗಳು ವಾರಂಟಿ, ಉಚಿತ ಸರ್ವಿಸ್.
* ರಾಜ್ಯದ ಹಲವಾರು ಕಡೆ ಅಧಿಕೃತ ಮಾರಾಟ ಮತ್ತು ಸೇವೆ ಲಭ್ಯ.
*  ಹೆಚ್ಚಿನ ಮಾಹಿತಿಗಾಗಿ ಯಂತ್ರದ ಸಂಶೋಧಕರಾದ  ಮೊಬೈಲ್    ೯೮೮೦೯೭೩೨೧೮ ಕರಿಬಸಪ್ಪ ಅವರನ್ನು ಸಂಪರ್ಕಿಸಿರಿ.
* ಎಲ್ಲಾ ತಾಲೂಕುಗಳಿಗೂ ಅಧಿಕೃತ ಮಾರಾಟಗಾರರು ಬೇಕಾಗಿದ್ದಾರೆ.

ಸೋಮವಾರ, ಜೂನ್ 11, 2018

ಹಣ ಖರ್ಚು ಹೇಗೆ ?

            ಹಣ  ಖರ್ಚು  ಮಾಡುವುದು ಹೇಗೆ ? 

                                    ಬದುಕಿಗೆ ನೀತಿ ಪಾಠ 


ಬದುಕನ್ನು ಸುಲಲಿತವಾಗಿ ಸಾಗಿಸಲು ಹಣ ಅಗತ್ಯ. ಇದನ್ನು ಹಲವರು ಹಲವಾರು ರೀತಿಯಲ್ಲಿ ಸಂಪಾದಿಸುವರು. ಆದರೆ, ಬಹುತೇಕ ಮಂದಿ ಇದನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಲು ತಿಳಿಯದೇ ಒದ್ದಾಡುವರು. ಬದುಕನ್ನು ಸುಸೂತ್ರವಾಗಿ ನಡೆಸಲು ಸಮರ್ಪಕ ಯೋಜನೆ ಮತ್ತು ದೂರದರ್ಶಿತ್ವ ಮತ್ತು ಸಾಕಷ್ಟು ಮುಂಜಾಗೂರಕತೆ ಅವಶ್ಯ. ಇವುಗಳಿದ್ದಲ್ಲಿ ಬದುಕಿನ ಸಾಫಲ್ಯತೆ ಸಾಧ್ಯ ಎಂಬುವುದನ್ನು ಅರಿಯದೇ ಬೇಜವಾಬ್ಧಾರಿಯಿಂದ ವರ್ತಿಸುವವರೂ  ಇದ್ದಾರೆ.


ಇವರಿಗೆ ಮಾರ್ಗದರ್ಶನ ನೀಡುವಂತಹ ಇತಿಹಾಸದ ಸುಪ್ರಸಿದ್ಧ ಕಥೆ ಇದೆ. ರಾಜಭೋಜನು ಒಮ್ಮೆ ನದಿಯ ತೀರದಲ್ಲಿ ವಿಹರಿಸುತ್ತಿದ್ದನು. ಅಲ್ಲಿ ತಲೆಯ ಮೇಲೆ ಕಟ್ಟಿಗೆಯ ಹೊರೆಯ ಹೊತ್ತು ಸಾಗುತ್ತಿದ್ದ ಒಬ್ಬ ವೃದ್ಧನು ಆತನಿಗೆ ಎದುರಾದನು. ಆತನ ಮೈ ಬೆವರಿ ತೊಯ್ದಿದಿದ್ದರೂ, ಪ್ರಸನ್ನನಾಗಿದ್ದನು. ರಾಜನು ಆತನನ್ನು  ನೀನು ಯಾರು ?  ಎಂದು ಪ್ರಶ್ನಿಸಿದನು. ರಾಜನ ಪರಿಚಯವಿಲ್ಲದ ವೃದ್ಧನು  ನಾನು ಭೋಜರಾಜ  ಎಂದು ಉತ್ತರಿಸಿದನು. ನಿನ್ನ ದಿನದ ಸಂಪಾದನೆಯೆಷ್ಟು ? ಎಂದು ರಾಜನು ಮತ್ತೆ ಪ್ರಶ್ನಿಸಿದ.  ಆಗ ಕಟ್ಟಿಗೆ ಹೊರೆ ಹೊತ್ತಿದ್ದ ಕಾರ್ಮಿಕನು ನನ್ನ ದಿನದ ಸಂಪಾದನೆ 6 ಪೈಸೆಗಳು  ಎಂದುತ್ತರಿಸಿದ. ಅದನ್ನು ನೀನು ಹೇಗೆ ಖಚರ್ು ಮಾಡುವೆ ? ಎಂದಾಗ ಆತ ಉತ್ತರಿಸಿದನು.  ನಾನು ಒಂದು ಪೈಸೆ ಸಾಲಗಾರನಿಗೆ, ಒಂದು ಪೈಸೆ ನನ್ನ ಬಂಡವಾಳದ ಮಾಲೀಕರಿಗೆ, ಒಂದು ಪೈಸೆ ಮಂತ್ರಿಗೆ, ಒಂದು ಪೈಸೆ ಉಳಿತಾಯ ಖಾತೆಗೆ, ಒಂದು ಪೈಸೆ ಅತಿಥಿಗಳ ಸೇವೆಗೆ, ಒಂದು ಪೈಸೆಯನ್ನು ನನ್ನ ಸ್ವಂತದ ಖರ್ಚಿಗಾಗಿ ವಿನಿಯೋಗಿಸುವೆ ಎಂದನು.

ರಾಜನು  ಸ್ವಲ್ಪ ವಿವರವಾಗಿ ಬಿಡಿಸಿ ಹೇಳಯ್ಯ  ಎಂದನು. ಆಗ ಕಟ್ಟಿಗೆಯವನು  ನನ್ನ ಮಾತಾ ಪಿತರೇ ನನ್ನ ಬಂಡವಾಳದ ಮಾಲೀಕರು. ಅವರು ನನ್ನ ಪಾಲನೆ ಪೋಷಣೆಗಾಗಿ ಸಾಕಷ್ಟು ವಿನಿಯೋಗ ಮಾಡಿದ್ದಾರೆ. ನನ್ನ ಪತ್ನಿಯೇ ನನ್ನ ಮಂತ್ರಿಯಾಗಿದ್ದು, ಯೋಗ್ಯ ಸಲಹೆ ನೀಡುವಳು. ಸಾಲಗಾರರೆಂದರೆ, ನನ್ನ ಮಕ್ಕಳು. ಅವರು ದೊಡ್ಡವರಾಗಿ ನನ್ನ ಋಣವನ್ನು ಸಂದಾಯ ಮಾಡಲಿದ್ದಾರೆ.
 ರಾಜನು  ನೀನೆಷ್ಟು ಉಳಿತಾಯ ಮಾಡಿರುವೆ  ಎಂದಾಗ ಆ ವ್ಯಕ್ತಿ  ಉತ್ತರಿಸಿದ. ತನ್ನ ಭವಿಷ್ಯತ್ತಿಗೆಂದು ಉಳಿಸುವವನು ಮಹಾ ಪೆದ್ದ.  ಅನಿಶ್ಚಿತತೆಯಿಂದ ತುಂಬಿದ ಈ ಬದುಕಲಿನಲ್ಲಿ ಒಂದು ಪೈಸೆಯನ್ನು ನನ್ನ ಆ ಖಜಾನೆಯಲ್ಲಿ ಜಮಾ ಮಾಡುವೆ ಎಂದನು. ರಾಜನು ದಯವಿಟ್ಟು ಮುಂದುವರಿಸಿರಿ  ಎಂದನು.
ಮುದುಕ ಮುಂದುವರಿಸಿದ  ಒಂದು ಪೈಸೆ ಅತಿಥಿಗಳ ಸೇವೆಗಾಗಿ ಇರಿಸುತ್ತೇನೆ. ಗೃಹಸ್ಥನಾದುದರಿಂದ ಅತಿಥಿಗಳ ಸೇವೆ ನನ್ನ ಕರ್ತವ್ಯ. ಮತ್ತೊಂದು ಪೈಸೆಯನ್ನು ನನ್ನ ದೈನಂದಿನ ಖರ್ಚಿಗೆ  ಮೀಸಲಿಡುತ್ತೇನೆ. ರಾಜ ಭೋಜನು  ಶಹಬ್ಬಾಸ್  ಎಂದು ಮೆಚ್ಚುಗೆ ವ್ಯಕ್ತಪಡಿಸಿದನು.



ಇದೊಂದು ಪುರಾತನ ಪುರಾಣದ ಕಥೆಯಾದರೂ, ಇದರಲ್ಲಿ ಗಳಿಕೆ ಮತ್ತು ಅದರ ಖರ್ಚಿನ ಬೃಹತ್
 ಸಾರವೇ ಅಡಗಿದೆ. ನಾವೂ ಕೂಡಾ ನಮ್ಮ ಸಂಪಾದನೆಯ ಜೊತೆಗೆ ಖರ್ಚನ್ನು ಸೂಕ್ತ ಯೋಜನೆಯೊಂದಿಗೆ ರೂಪಿಸಿದಲ್ಲಿ ಬಾಳು ಬಂಗಾರವಾಗುವುದು. ಸಂಪಾದನೆಯು ಸದ್ವಿನಿಯೋಗವಾಗುವುದು. ಕಾಸು ಉಳಿಸುವುದೇ ಕಾಯಕ ಎಂದು ಕೊಂಡು   ಕಾಸು- ಕಾಸಿಗೂ ಗಂಟು ಹಾಕುವವರೂ ತಮ್ಮೊಂದಿಗೆ ಪೈಸೆಯನ್ನೂ ತಮ್ಮೊಂದಿಗೆ ಒಯ್ಯಲಾರರು.

  ಕಡು ಬಡವರಾದರೂ, ಶ್ರೇಷ್ಠ ಗುಣದ ವ್ಯಕ್ತಿಯನ್ನೇ ಆದರ್ಶವೆಂದು ಪಾಲಿಸುವವರು, ಜಗದಲ್ಲಿ ಆನೇಕರಿದ್ದಾರೆ.   ಸಂಪತ್ತಿನ ಸದ್ವಿನಿಯೋಗವೇ ನಿಜವಾದ ಸಂಪತ್ತು.   ಹಣ ಗಳಿಸುವುದು ಹೇಗೆ  ಎಂದು ಹಲವು ಕಡೆ ಮಾಹಿತಿ ನಮಗೆ ಲಭ್ಯ.  ಈ ವಿಚಾರದಲ್ಲಿ ಹಲವಾರು ಪುಸ್ತಕಗಳು ಹೊರ ಬಂದಿವೆ. ಆದರೆ,  ಹಣವನ್ನು ಹೇಗೆ ಖರ್ಚು   ಮಾಡುವುದು ಎಂಬ ಬಗ್ಗೆ ವಿವರಗಳು ಬಹುತೇಕ ಕಡೆಗಳಲ್ಲಿ ಅಲಭ್ಯ. ಅದರೆ, ಸದುಪಯೋಗ ಹೇಗೆ ಎಂದು ವಿವರಣೆ ನೀಡುವವರು ತೀರಾ ದುರ್ಲಭ ಅಲ್ಲವೇ ?


 ಆಧಾರಿತ ಬರಹ : ಕೂಡಂಡ ರವಿ, ಹೊದ್ದೂರು.  

ಗುರುವಾರ, ಜೂನ್ 7, 2018

ಯೂರಿಯಾದ ಬದಲು ಹಸಿರೆಲೆ ! Insted of Ureya We use Green Leaves.


              

                            ಯೂರಿಯಾ ಬದಲು   ಹಸಿರೆಲೆ ....! 


                         ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು.  

 Please watch and subscribe my Youtube channal: https://www.youtube.com/channel/UCw4dehXSFlG4sS9xYiRkjPA?view_as=subscriber


Pl watch my  these blogs. 

Kodagu Darshini : https://koodanda.blogspot.com/


Kodagu Darshini (Kodagina Antaranga):https://koodagudarshini.blogspot.com/



ಬಹುತೇಕ ಮಂದಿ ಗೊಬ್ಬರ ಬಳಸದೇ ಕೃಷಿ ಸಾಧ್ಯವಿಲ್ಲ   ಎಂದು ಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿ, ಸಾವಿರಾರು ರೂಪಾಯಿ ಪೋಲು ಮಾಡುತ್ತಾರೆ. ಇದರ ಬದಲು ಮಣ್ಣಿನ  ಆರೋಗ್ಯ ಕಾಪಾಡಲು ನಿರಂತರವಾಗಿ ಉತ್ತಮ ಬೆಳೆ ತೆಗೆಯಲು ಹಸಿರೆಲೆ ಗೊಬ್ಬರ ಬಳಸಬಹುದು. ಈ ಬಗ್ಗೆ ಸಂಕ್ಷ ಪ್ತ ವಿವರ  ಇಲ್ಲಿದೆ. 


                                           ಹಾಲುವಾಣದ ಹೂವು 
 ಲಭ್ಯವಿರುವ ಎಲ್ಲಾ ಮೂಲಗಳಿಂದ ಸಂಗ್ರಹಿಸಲಾದ ಎಲೆಗಳಿಂದ ತಯಾರಿಸಿದ ಜೈವಿಕ ಗೊಬ್ಬರಗಳು ಮತ್ತು ಮಣ್ಣಿನ ಅಗತ್ಯ ಸಸ್ಯ ಪೋಷಕಾಂಶಗಳನ್ನು ಪೂರೈಸಲು ಮತ್ತು ಆರೋಗ್ಯಕರ ರೀತಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಬೆಳೆಗಳನ್ನು ಬೆಳೆಸಲು   ಬಳಸುವುದು ಇತ್ತೀಚಿನ ಪರಿಕಲ್ಪನೆ ಅಲ್ಲ .
                                             ಹಾಲುವಾಣದ  ಎಲೆ 
ಶತಮಾನಗಳಿಂದ ಅನೇಕ ದಕ್ಷಿಣ ಏಷ್ಯಾದ ದೇಶಗಳಲ್ಲಿ ಬಳಸಲ್ಪಟ್ಟಿದೆ.  ಹಸಿರೆಲೆ ಗೊಬ್ಬರವನ್ನು ವಿವಿಧ ಮರ, ಗಿಡಮೂಲಿಕೆಗಳು ಮತ್ತು ಪೊದೆಸಸ್ಯಗಳಿಂದ ಹಸಿರು ಎಲೆಗಳು ಮತ್ತು ಕೊಂಬೆಗಳ ಸಮರುವಿಕೆಯನ್ನು ಮತ್ತು ಸಂಗ್ರಹಣೆ ಎಂದು ವ್ಯಾಖ್ಯಾನಿಸಬಹುದು. ಅವುಗಳನ್ನು ಬೇರೆಡೆ ರಸಗೊಬ್ಬರಗಳಾಗಿ ಆಯಾ   ಪ್ರದೇಶಗಳಲ್ಲಿ ಬೆಳೆಯುವ ಗಿಡಮೂಲಿಕೆಗಳು ಮತ್ತು ಪೊದೆಗಳು ಇತ್ಯಾದಿ.  ಎಲೆಯ ಗೊಬ್ಬರವನ್ನು ಬಳಸುವುದು ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ  ಹೆಚ್ಚಾಗಿ ಕಂಡುಬರುತ್ತದೆ.


                                                ಆಡುಸೋಗೆ ಗಿಡ 

 ಹಸಿರೆಲೆ ಗೊಬ್ಬರ ಏಕೆ  ?

ರಾಸಾಯನಿಕ ಗೊಬ್ಬರಗಳನ್ನು ಸಸ್ಯ ಬೆಳವಣಿಗೆಯ  ಪೋಷಕಾಂಶವಾಗಿ ಬಳಸುವುದು ಮಣ್ಣಿನ ಚಿಕಿತ್ಸೆಗೆ ಉತ್ತಮವಾದ ಮಾರ್ಗವಲ್ಲ. ವಿಶ್ವದಾದ್ಯಂತ, ವಿಶೇಷವಾಗಿ ಮೂರನೇ ವಿಶ್ವ ರಾಷ್ಟ್ರಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿವೆ.  ಬೃಹತ್ ಜಾಗತಿಕ ಜನಸಂಖ್ಯೆಯ ಹೆಚ್ಚುವರಿ ಆಹಾರ ಅವಶ್ಯಕತೆಗಳನ್ನು  ಪೂರೈಸಲು ಇದನ್ನು ಬಳಸಲಾಗುವುದು.

ವಿವಿಧ ರಾಸಾಯನಿಕ ರಸಗೊಬ್ಬರಗಳ ಈ ವಿವೇಚನಾರಹಿತ ಬಳಕೆ ಅನೇಕ ಪರಿಸರ ಮತ್ತು ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ . ಅತ್ಯಂತ ಅಮೂಲ್ಯ ನೈಸರ್ಗಿಕ ಸಂಪನ್ಮೂಲ 'ಮಣ್ಣಿನ' ಶಾಶ್ವತ ಹಾನಿಯನ್ನು ಉಂಟುಮಾಡುತ್ತದೆ. ಈ ಭಯಾನಕ ರಾಸಾಯನಿಕವನ್ನು ಬಳಸದೆ ನಿಯಂತ್ರಿಸದಿದ್ದರೆ, ಒಂದು ನಿರ್ದಿಷ್ಟ ಅವಧಿಯ ನಂತರ ಮಣ್ಣಿನ ಉತ್ಪಾದನೆಯು ಲಭ್ಯವಾಗುವುದಿಲ್ಲ ಎಂದೂ ಹೇಳಲಾಗುತ್ತದೆ.

                                        ಹೊಂಗೆಯ ಗಿಡ ಮತ್ತು ಕಾಯಿ 

ಮುಂಬರುವ ಪೀಳಿಗೆಗೆ ಆರೋಗ್ಯಕರ ಮಣ್ಣಿನ ನಿರ್ವಹಣೆಗಾಗಿ ರಾಸಾಯನಿಕ ವ್ಯವಸ್ಥೆಗಳಿಂದ ಜೈವಿಕ ಗೊಬ್ಬರಗಳಿಗೆ ಕೃಷಿ ವ್ಯವಸ್ಥೆಯನ್ನು ಬದಲಾಯಿಸುವ ಸಮಯವಿದು.
ಹಸಿರು ಎಲೆಗಳ ಗೊಬ್ಬರವು ಉತ್ತಮವಾದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿರುವ ಸಸ್ಯ ಪೋಷಕಾಂಶಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.  
 ಹಸಿರೆಲೆ ಗೊಬ್ಬರವು ರಾಸಾಯನಿಕ ರಸಗೊಬ್ಬರಗಳನ್ನು ಬದಲಿಸಬಹುದು ಮತ್ತು ರಾಸಾಯನಿಕಗಳನ್ನು ತರಲು ಹಲವಾರು ಅಪಾಯಗಳಿಂದ ಜಗತ್ತನ್ನು ರಕ್ಷಿಸಬಹುದು.

ಅನುಕೂಲಗಳು

ರಾಸಾಯನಿಕ ರಸಗೊಬ್ಬರಗಳ ಬದಲಿಗೆ  ಹಸಿರೆಲೆ ಗೊಬ್ಬರಗಳನ್ನು ಬಳಸುವುದರಿಂದ  ಅನೇಕ  ಲಾಭಗಳಿವೆ.
• ಸಸ್ಯಗಳಿಗೆ ಸಮತೋಲಿತ ಪೌಷ್ಟಿಕಾಂಶವನ್ನು ಖಚಿತಪಡಿಸುತ್ತವೆ ಮತ್ತು ಮಣ್ಣಿನ ಫಲವತ್ತತೆಯನ್ನು ಉತ್ತಮ ಮಟ್ಟದಲ್ಲಿ ಸುಧಾರಿಸುತ್ತವೆ.
 ಇವು ನಿಧಾನಗತಿಯ ಬಿಡುಗಡೆ ಗೊಬ್ಬರವಾಗಿದ್ದು, ಅವುಗಳ ಬಳಿಕ ದೀರ್ಘಕಾಲದವರೆಗೆ ಸಸ್ಯ ಪೌಷ್ಟಿಕ ಮೂಲವಾಗಿ ವರ್ತಿಸುತ್ತವೆ.
•  ಹಸಿರೆಲೆ ಗೊಬ್ಬರ ಬಳಸುವುದರಿಂದ ಮಣ್ಣಿನ ರಚನೆಯು ಮಹತ್ತರವಾಗಿ ಸುಧಾರಣೆಯಾಗಲಿದೆ.
                                                        ಬೇವಿನ ಗಿಡ 
•  ಹಸಿರೆಲೆ ಗೊಬ್ಬರವು ವಿವಿಧ ಮಣ್ಣಿನಲ್ಲಿರುವ ಹುಳ – ಹುಪ್ಪಟೆಗಳಿಗೆ ಆಹಾರ ಪದಾರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಮಣ್ಣಿನ ಹುಳುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.
•  ಇವು ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳನ್ನು ಉತ್ಪಾದಿಸುತ್ತವೆ.
•  ಇವುಗಳು ನೀರು ಮತ್ತು ವಾಯುವಿನ  ಗುಣಮಟ್ಟಕ್ಕೆ ಅಪಾಯ ಮಾಡಲಾರವು.
• ಹಸಿರೆಲೆ ಗೊಬ್ಬರವು  ಮಣ್ಣಿನಲ್ಲಿ ವಿವಿಧ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಮಣ್ಣಿನ ಜೀವವೈವಿಧ್ಯತೆಯನ್ನು ಸುಧಾರಿಸುತ್ತದೆ.
• ಲವಣಯುಕ್ತ ಮಣ್ಣಿಗೆ ಮರು ಜೀವ ಪಡೆಯಲು  ಇವು  ಉಪಯುಕ್ತವಾಗಿವೆ.
•  ಹಸಿರೆಲೆಯಾಗಿ ಬಳಸಿದ ಮರಗಳ  ಕಾಂಡಗಳನ್ನು  ಇಂಧನವಾಗಿ ಬಳಸಲಾಗುತ್ತದೆ.
•  ಇದರ ಬಳಕೆ  ತೀರಾ ಸುಲಭ, ಸರಳ  ಅಗ್ಗವೂ ಹೌದು.

ಇದು ಸವೆತದಿಂದಾಗಿ ಮಣ್ಣಿನ ನಷ್ಟವನ್ನು ಕಡಿಮೆ ಮಾಡುತ್ತದೆ.
ಹಸಿರು ಗೊಬ್ಬರ ಬೆಳೆಗಳನ್ನು ಬೆಳೆಯುವುದರಿಂದ  ಕಳೆ ಬೆಳವಣಿಗೆ ಮತ್ತು ಅವುಗಳ ಪ್ರಸರಣವನ್ನು ಕಡಿಮೆ . ಇದು ಬೆಳೆಗಳಿಗೆ ಬೇಕಾದ  ಸಮತೋಲಿತ ಪೌಷ್ಟಿಕಾಂಶವನ್ನು ನೀಡುತ್ತವೆ


                                            ಗ್ಲಿರೀಸಿಡಿಯಾ ಗಿಡ 

ಮಣ್ಣಿನಲ್ಲಿ ಹಸಿರು ಗೊಬ್ಬರವನ್ನು ಸೇರಿಸುವ ಸಾವಯವ ರೈತರು ಸಾರಜನಕ, ಪೊಟ್ಯಾಸಿಯಮ್, ಫಾಸ್ಪರಸ್ ಮತ್ತು ಮಣ್ಣಿನ ಖನಿಜಗಳಂತಹ ಅಗತ್ಯ ಪೋಷಕಾಂಶಗಳ ಪೂರೈಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಹಸಿರು ಗೊಬ್ಬರಗಳು ಈ ಸಸ್ಯ ಪೋಷಕಾಂಶಗಳನ್ನು ಮಣ್ಣಿನಲ್ಲಿ ಸ್ವಯಂಚಾಲಿತವಾಗಿ ಬಿಡುಗಡೆ ಮಾಡುತ್ತವೆ.

                                           ಗ್ಲಿರೀಸಿಡಿಯಾ ಗಿಡ 

ಹಸಿರು ಎಲೆಯ ಗೊಬ್ಬರವನ್ನು ಉತ್ಪಾದಿಸಲು ಹಲವಾರು ಮರಗಳು ಮತ್ತು ಸಸ್ಯಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ   ಆಡುಸೋಗೆ,  ಹಾಲುವಾಣ ( ಪಾಲುವಾಣ ) ( ಹೊಂಗಾರೆ, ಪೊಂಗರೆ )  ಗ್ಲಿರಿಸಿಡಿಯಾ,  ಹೊಂಗೆ , ಸುಬಾಬುಲ್,  ಬೇವು ವೆಲ್ವೇಟ್ ಬೀನ್ಸ್  ಮತ್ತು  ಕಳೆ ಸಸ್ಯಗಳಾದ ಪಾರ್ಥೆನಿಯಮ್ , ಲಂಟಾನಾ ......... ವ್ಯಾಪಕವಾಗಿ ಬಳಸಲಾಗುತ್ತದೆ. ಕೃಷಿ ಭೂಮಿಯಲ್ಲಿ ಸೆಣಬು, ಡಯಾಂಚ, ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆದು ಅದನ್ನು ಮಣ್ಣಿಗೆ ನೇರವಾಗಿ ಸೇರಿಸಬಹುದಾಗಿದೆ. ಇದನ್ನು ಕೊಳೆಯಿಸುವ ಅವಶ್ಯಕತೆ ಇಲ್ಲ. ಸೊಪ್ಪನ್ನು ನೇರವಾಗಿ ಜಮೀನಿನಲ್ಲಿ ಹರಡಿದರೆ ಸಾಕು. ಮಳೆಗಾಲ ಅರಂಭಕ್ಕೆ ಮುನ್ನಾ ಈ ಕಾರ್ಯ ಮಾಡುವುದು ಉತ್ತಮ.

ವಿವಿಧ ಮರಗಳು ಮತ್ತು ಸಸ್ಯಗಳನ್ನು  ಜೀವಂತ  ಬೇಲಿಗಳು ಅಥವಾ ಬಂಜರು ಭೂಮಿಯಲ್ಲಿ  ಮರ ಗಿಡಗಳನ್ನು ಬೆಳೆಸಿ ಬಳಸಬಹುದು.
ಮಣ್ಣಿನಿಂದ ಹಸಿರು ಎಲೆಯ ಗೊಬ್ಬರಗಳ ಬಳಕೆಯು ಮಣ್ಣಿನ ತೇವಾಂಶವನ್ನು ಅವಲಂಬಿಸಿರುತ್ತದೆ. ಮಣ್ಣಿನಲ್ಲಿ ಈ ಗೊಬ್ಬರ ಬಳಸಲು ಸಾಕಷ್ಟು ತೇವಾಂಶವು ಅಗತ್ಯ.



 ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಲಾಗ್ ಇನ್ ಆಗಿ. 


https://koodagudarshini.blogspot.com/2018/03/blog-post_24.html



---------------------------------------------------------