ಬುಧವಾರ, ನವೆಂಬರ್ 21, 2018

ನೀರಿಲ್ಲ, ನೆರಳಿಲ್ಲ...! No Shade, No Water.... ! ?


ನೀರಿಲ್ಲ, ನೆರಳಿಲ್ಲ...!
ಒಣಗಿ ಕರಕಲಾಗುತ್ತಿರುವ ಪ್ರಯಾಣಿಕರು !
ಕೇಳುವವರಾರಯ್ಯ ನಮ್ಮ ಗೋಳು ? 


ತಲೆ ಸುಡುವ ಬಿಸಿಲು, ನೀರಿಲ್ಲ, ನೆರಳಿಲ್ಲ. ನಿಂತು ಕೈ ಕಾಲು ಸೋತು ಸುಣ್ಣವಾದರೂ, ಕುಳಿತು ವಿಶ್ರಮಿಸಲು ಆಸನಗಳಿಲ್ಲ. ಬಸ್ಸುಗಳು ಹತ್ತಲೂ ನಿಗದಿತ ಸ್ಥಳವೇ ಇಲ್ಲ. ಪ್ರಯಾಣಿಕರ ಪರದಾಟ. ಹಿರಿಯ ನಾಗರಿಕರ, ಮಹಿಳೆಯರ ಗೋಳಾಟ, ಪುಟ್ಟ ಮಕ್ಕಳನ್ನು ಕಂಕುಳಲ್ಲಿರಿಸಿ ತಲೆಯ ಮೇಲೆ ಸೆರಗನ್ನು ಹಾಕಿ ಬಸ್ಸಿಗಾಗಿ ಕಾಯುವ ಮಹಿಳೆಯರ ಗೋಳನ್ನು ಕೇಳುವವರಾರು ?
ಈ ದೃಶ್ಯವನ್ನು ಕಂಡೂ ಕಾಣದಂತೆ ಸಾಗುವವರು ಬಹುತೇಕ ಮಂದಿ. ಕೆಲವರು ಅವರ ದಯನೀಯ ಸ್ಥಿತಿಗೆ ಮರುಗುವವರು. ಖಾಸಗಿ ಬಸ್ಸ್ ನಿಲ್ದಾಣದ ಗೋಳನ್ನು ಹೇಳಲೂ ಆಗದೇ ಅನುಭವಿಸಲೂ ಆಗದೇ ತಮ್ಮ ಕಾಯಕವನ್ನು ಮಾಡುತ್ತಿರುವ ಸಿಬ್ಬಂದಿ ವರ್ಗ !

ಇದು ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಸದ್ಯದ ಪರಿಸ್ಥಿತಿ. ಯಾರಿಗೂ ಇಲ್ಲಿ ಬಿಸಿಲಿನ ಝಳದಲ್ಲಿ ಒಣಗಿ ಕರಕಲಾಗುತ್ತಿರುವ ಪ್ರಯಾಣಿಕರ ಗೋಳನ್ನಂತೂ ನೋಡುವುದು ಅಸಾಧ್ಯ. ಖಾಸಗಿ ಬಸ್ ನಿಲ್ದಾಣದಲ್ಲಿ ಭೂ ಕುಸಿತ ನಡೆದು ಹಲವಾರು ತಿಂಗಳುಗಳೇ ಕಳೆದವು. ಕಟ್ಟಡದ ತೆರವು, ಭೂ ಕುಸಿತದಿಂದ ಬಿದ್ದ ಮಣ್ಣನ್ನು ತೆರವು ಮಾಡಲಾಗಿದೆ. ಖಾಸಗಿ ಬಸ್ಸುಗಳು ಇಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿವೆ. ಇಲ್ಲಿಂದಲೇ ಬಹುತೇಕ ಪ್ರಯಾಣಿಕರು ಬಸ್ಸನ್ನೇರುತ್ತಾರೆ. ಆದರೆ,...

ಕನಿಷ್ಠ ಮೂಲಭೂತ ಸೌಕರ್ಯವಿಲ್ಲ !

ಜಿಲ್ಲಾ ಕೇಂದ್ರವಾದ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದಲ್ಲಿ ಕನಿಷ್ಠಪಕ್ಷ ಇರಬೇಕಾದ ಮೂಲಭೂತ ಸೌಕರ್ಯಗಳೇ ಇಲ್ಲ ! ? ಪ್ರಯಾಣಿಕರಿಗೆ ಕುಡಿಯಲು ಶುದ್ಧ ನೀರು, ನೆರಳು, ಶೌಚಾಲಯ ಮುಂತಾದ ವ್ಯವಸ್ಥೆ ಕಲ್ಪಿಸುವುದು ನಗರ ಸಭೆಯ ಮತ್ತು ಜಿಲ್ಲಾಡಳಿತದ ಹೊಣೆ. ಇದಾವುದನ್ನು ಮಾಡದೆ ಸರಕಾರವು ಬಸ್ಗೆ ತೆರಿಗೆ ಕಟ್ಟಿಸಿಕೊಳ್ಳುತ್ತಿದೆ. ಜಿಲ್ಲೆಯ ಹಲವಾರು ಸ್ಥಳಗಳಲ್ಲಿ (ಮೂನರ್ಾಡು, ನಾಪೋಕ್ಲು) ರಸ್ತೆಯಲ್ಲಿಯೇ ಬಸ್ಸುಗಳು ನಿಲ್ಲುತ್ತವೆ. ಇದಕ್ಕೆ ಬಸ್ಸು ನಿಲ್ದಾಣವೆಂಬ ಹೆಸರಿದೆ. ಈಗ ಈ ಸಾಲಿಗೆ ಮಡಿಕೇರಿ ಜಿಲ್ಲಾ ಕೇಂದ್ರವು ವಿನೂತನ ಸೇರ್ಪಡೆ. ಪ್ರತೀ ದಿನವೂ ಈ ನಿಲ್ಧಾಣಕ್ಕೆ ಸಾವಿರಾರು ಪ್ರಯಾಣಿಕರು ಬರುತ್ತಾರೆ, ಹೋಗುತ್ತಾರೆ. ಅದೇ ರೀತಿ ಸಾವಿರಾರು ವಿದ್ಯಾಥರ್ಿಗಳು. ಇವರಿಗೆಲ್ಲಾ ಕನಿಷ್ಠ ಸೌಕರ್ಯ ಒದಗಿಸಬೇಕೆಂಬ ಕಾಳಜಿಯೂ ನಮ್ಮ ಜನಪ್ರತಿನಿಧಿಗಳಿಗೆ ,  ಅಧಿಕಾರಿ ವರ್ಗದವರಿಗೂ ಇಲ್ಲ. ಕೆಲ ಮಾಧ್ಯಮಗಳಲ್ಲಿ ಈ ವಿಚಾರ ಪ್ರಸ್ತಾಪವಾದರೂ ಇವರ ದಪ್ಪ ಚರ್ಮಕ್ಕೆ ಅದು ನಾಟಿದಂತೆ ಇಲ್ಲ.

ಆಟಕ್ಕುಂಟು, ಲೆಕ್ಕಕ್ಕಿಲ್ಲ  ! 

ನಮಗೆ ಎಷ್ಟೊಂದು ಜನಪ್ರತಿನಿಧಿಗಳು , ಅಧಿಕಾರಿಗಳು...!?
 ಸಂಸದರು, ಶಾಸಕರು,  ಜಿಲ್ಲಾಡಳಿತ, ನಗರಸಭೆ, ಮಡಿಕೇರಿ ಅಭಿವೃದ್ಧಿ ಪ್ರಾಧಿಕಾರ... ಎಲ್ಲರೂ ಇದ್ದಾರೆ. ಸಾಕಷ್ಟು ಸಂಖ್ಯೆಯ ಅಧಿಕಾರಿಗಳೂ ಇದ್ದಾರೆ. ಇವರಿಗೆಲ್ಲಾ ಏನಾಗಿದೆ ? ತೀವ್ರ ನಿರ್ಲಕ್ಷ್ಯ ?  ಇವರೆಲ್ಲಾ ಇರುವುದೇ ಜನತೆಯ ಸೇವೆ ಮಾಡಲು.  ಜನತೆ ಆರಿಸಿದ ಕೆಲಸಗಾರರು ಇವರು . ಆದರೆ, ಎಲ್ಲರಿಗೂ ಅಧಿಕಾರ ಬೇಕು. ಕೆಲಸ ಮಾಡಲು ಮಾಡಿಸಲು ಬಹುತೇಕ ಮಂದಿಗೆ ಆಸಕ್ತಿ ಇಲ್ಲ. ಕಾಳಜಿ ಇಲ್ಲ. ಇಚ್ಛಾಶಕ್ತಿಯಂತೂ ಮೊದಲೇ ಇಲ್ಲ.
ಸ್ಥಳೀಯ ಆಡಳಿತವು , ಅಂದರೆ, ಮಡಿಕೇರಿ ನಗರಸಭೆ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ, ಅದು ಜಾಣಮೌನಕ್ಕೆ ಶರಣಾಗಿದೆ.
ಇದೇ ವಿಚಾರವನ್ನು ಕೆಲ ಮಾಧ್ಯಮದವರು ಪ್ರಸ್ತಾಪಿಸಿದ್ದರೂ, ಅದನ್ನು ಪರಿಗಣಿಸದೇ ಜಾಣ ಮೌನಕ್ಕೆ ಶರಣಾಗಿರುವುದು ಖಂಡನೀಯ.



ಅನುಮತಿ ನೀಡುತ್ತಿಲ್ಲ. 

ಜನತೆಯ ಸಂಕಟ ಕಂಡು ಕೆಲವು ಖಾಸಗಿ ಸಂಘ- ಸಂಸ್ಥೆಗಳು ಇಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿಮರ್ಾಣಕ್ಕೆ ಮುಂದಾಗಿವೆಯಂತೆ. ಆದರೂ, ನಮ್ಮ ಆಡಳಿತ ಮತ್ತು ಆಧಿಕಾರಿ ವರ್ಗ ಇದಕ್ಕೆ ಅನುಮತಿಯನ್ನೇ ನೀಡಲು ನಿರಾಕರಿಸಿವೆಯಂತೆ. ಹಾಗಾದಲ್ಲಿ ಇವರೆಲ್ಲಾ ಇರುವುದು ಜನತೆಯ ಒಳಿತಿಗಾಗಿಯೋ, ಅವರನ್ನು ಹಿಂಸೆಗೆ ಸಿಲುಕಿಸಲೇ ಎಂಬ ಸಂಶಯ ಯಾರಾಗಿದರೂ ಬರಲೇ ಬೇಕಲ್ಲ !?


ತಮಗೂ ಈ ಕಾರ್ಯ ಮಾಡುವ ಯೋಗ್ಯತೆ ಇಲ್ಲ. ಮಾಡುವವರಿಗೂ ಬಿಡುವುದಿಲ್ಲ ಅಂದರೆ, ಏನರ್ಥ ! 


ಹವಾನಿಯಂತ್ರಿತ ಕಛೇರಿಯಲ್ಲಿ ಕುಳಿತು ಎದ್ದು ದಿನದೂಡೀ ಸಂಬಳ, ದಿನಭತ್ಯೆ ಎಣಿಸುವ ಜನಪ್ರತಿನಿಧಿಗಳೇ, ಅಧಿಕಾರಿಗಳೇ ನೀವು ನಿಮ್ಮ ಕುಟುಂಬದ ಸದಸ್ಯರೊಡನೆ ಬಂದು ಖಾಸಗಿ ಬಸ್ ನಿಲ್ಧಾಣದಲ್ಲಿ ಒಂದೆರಡು ಘಂಟೆ ಕಾಲ ಬಸ್ಗಾಗಿ ಕಾಯಿರಿ. ಆಗ ನಿಮಗೂ ಅರಿವಾದೀತು ಜನತೆ ಸಂಕಟ ಏನೆಂದು ? ಕುಡಿಯುಲು ನೀರಿಲ್ಲದೇ, ಬಿಸಿಲನ್ನು ಎದುರಿಸುವುದು ಹೇಗೆಂದು ತಿಳಿಯಲಿ ನಿಮಗೆ. 

https://www.youtube.com/watch?v=zIoZ8hwAZxA

ಮಂಗಳವಾರ, ನವೆಂಬರ್ 13, 2018

ನಿಮ್ಮೂರಿಗೂ ಕ್ಯಾನ್ಸರ್ ಟ್ರೆನ್...! ? - Cancer Train in your native !?


ಕೃಷಿಲೋಕ

 ನಿಮ್ಮೂರಿಗೂ ಬಂದೀತು ಕ್ಯಾನ್ಸರ್ ಟ್ರೆನ್...! ?


ಬರಹ: ಕೂಡಂಡ ರವಿ, ಹೊದ್ದೂರು.
ಮೊಬೈಲ್: 9686547124


ಸಾಮಾನ್ಯವಾಗಿ ಭಾರತದಲ್ಲಿ ಓಡಾಡುವ ಬಹುತೇಕ ರೈಲುಗಳಿಗೆ ವೈಶಿಟ್ಯಯಪೂರ್ಣವಾದ ಹೆಸರಿವೆ. ಆದರೆ, ವಾಡಿಕೆಯಾಗಿ ಕ್ಯಾನ್ಸರ್ ಟೈನ್ಕರೆಯಲ್ಪಡುವ ರೈಲು ಭಾರತದಲ್ಲಿ ಓಡಾಡುತ್ತದೆ. ಇದು ಹಲವರಿಗೆ ಅಚ್ಚರಿಯೇನಿಸಿದರೂ ಸತ್ಯ ! ಇದು ಪಂಜಾಬಿನಿಂದ ರಾಜಾಸ್ಥಾನದ ಬಿಕನೀರ್ ಪಟ್ಟಣಕ್ಕೆ ಸಾಗುತ್ತಿದೆ. ಈ ರೈಲು ಪ್ರತಿದಿನದ ತನ್ನ ಯಾತ್ರೆಯಲ್ಲಿ ಕನಿಷ್ಠ ೫೦-೭೦ಕ್ಕೂ ಅಧಿಕ ರೋಗಿಗಳನ್ನು ಹೊತ್ತೊಯ್ಯುತ್ತದೆ.  ರೈಲು ಭಟಿಂಡಾದಿಂದ ಬಿಕನೀರ್‌ವರೆಗಿನ ೩೨೬ ಕಿಲೋ ಮೀಟರ್ ಕ್ರಮಿಸುವುದು.

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com







ಮಿತಿಮೀರಿದ ಕೀಟನಾಶಕ 
೧೯೬೦-೭೦ದಶಕಗಳಲ್ಲಿ ಹಸಿರು ಕ್ರಾಂತಿಯ ಪರಿಣಾಮ ಪಂಜಾಬ್ ರಾಜ್ಯವೂ ಸಹಾ ಇದರ ಭಾಗವಾಗಿ ಸೇರ್ಪಡೆಗೊಂಡಿತ್ತು. ಹಸಿವಿನಿಂದ ಹೊರಬರಲು, ಅಧಿಕ ಇಳುವರಿಯ ಏಕೈಕ ಕನಸು ಹೊತ್ತಿದ್ದರು. ಇದರಿಂದಾಗಿ  ಅಂದಿನ ರೈತರು ಅರಿತೋ ಅರಿಯದೆಯೋ ಮನಬಂದಂತೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಭೂಮಿಗೆ ಸುರಿದರು. ಅದಕ್ಕೆ ತಕ್ಕ ಬೆಲೆಯನ್ನು ಅಲ್ಲಿನ ರೈತಾಪಿ ಕುಟುಂಬಗಳು ಇದೀಗ ತೆರುವಂತಾಗಿರುವುದು ವಿಪರ್ಯಾಸವೇ ಸರಿ.

ಪಂಜಾಬ್ ರಾಜ್ಯವು ದೇಶದ ವಿಸ್ತಾರದಲ್ಲಿ ಶೇಕಡಾ ೨ಪಾಲು ಪ್ರದೇಶವನ್ನು ಹೊಂದಿದೆ. ರಾಜ್ಯವು ಬಹುತೇಕವಾಗಿ ಕೃಷಿಯನ್ನೆ ಅವಲಂಬಿಸಿದೆ. ಇದು ದೇಶದಲ್ಲಿ ಬಳಕೆಯಾಗುವ ಶೇಕಡಾ ೧೫ ರಿಂದ ೨೦ ಶೇಕಡಾ ಕ್ರಿಮಿನಾಶಕಗಳನ್ನು ಬಳಸುತ್ತಿದೆಯಂತೆ ! ಪರಿಣಾಮ ಇಲ್ಲಿನ ಜನತೆಯ ಆಹಾರದಲ್ಲಿ ಯಥೇಚ್ಛವಾಗಿ ಕ್ರಿಮಿನಾಶಕಗಳು ಸೇರ್ಪಡೆಯಾಗುತ್ತಿವೆ. ಅಲ್ಲಿನ ನೆಲ-ಜಲ ಪೂರ್ಣವಾಗಿ ವಿಷಮಯವಾಗಿವೆ.  ಇವು ಮಾರಕವಾದ ಕ್ಯಾನ್ಸರ್ ಕಾಯಿಲೆಗೂ ಕಾರಣವಾಗುತ್ತಿವೆ. ಇಲ್ಲಿನ ಜನತೆಯ ಆರೋಗ್ಯವು ಈ ಕಾರಣದಿಂದಾಗಿ ಪ್ರತಿವರ್ಷವೂ ಕ್ಷಿಣಿಸುತ್ತಿದೆ.

ಪಂಜಾಬಿನ ರೈತ ಜರ್ನೆಲ್ ಸಿಂಗ್ ಜನತೆಯ ಆರೋಗ್ಯದ ಮೇಲೆ ರಾಸಾಯನಿಕಗಳ ಪರಿಣಾಮವನ್ನು ಗುರುತಿಸಿದರು.ಅವರ ಕುಟುಂಬದಲ್ಲಿಯೇ ೭ ಮಂದಿಯ ಮೇಲೆ ಕ್ಯಾನ್ಸರ್ ಧಾಳಿ ನಡೆಸಿತ್ತು. ಇವರಲ್ಲಿ ಮೂವರು ಅಸು ನೀಗಿದರು. ಈ ಕುರಿತು ಅಧ್ಯಯನ ಮಾಡುವಂತೆ ಅವರು ಕೃಷಿ ಸಂಶೋಧಕರನ್ನು ಪ್ರೆರೇಪಿಸಿದರು. ಮಿತಿಮೀರಿದ ರಾಸಾಯನಿಕಗಳ ಬಳಕೆಯಿಂದಾಗಿ ರಾಜ್ಯದಲ್ಲಿದ್ದ ನವಿಲುಗಳ ಸಂತತಿಯೇ ನಾಶವಾಯಿತು. ಜನತೆ ಕ್ರಿಮಿನಾಶಕ ಬಳಕೆಯನ್ನು ಸುರಕ್ಷಿತವಾಗಿ ಬಳಸುತ್ತಿಲ್ಲ ಎಂಬುವುದನ್ನು ಅವರು ಮನಗಂಡರು.



ಅಸಮರ್ಪಕ ಬಳಕೆ
ಪ್ರತೀ ಕ್ರಿಮಿನಾಶಕ ಡಬ್ಬಿ, ಪೊಟ್ಟಣಗಳ ಮೇಲೆ ಅದನ್ನು ಬಳಸುವ ವಿಧಾನ, ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ಇರುತ್ತದೆ. ಹಲವಾರು ಬಾರಿ ಇದರೊಂದಿಗೆ ಕರಪತ್ರವೂ ಇರುತ್ತದೆ.ಇದನ್ನು ಓದಿ ಸರಿಯಾಗಿ ಬಳಸಿದ್ದಲ್ಲಿ ಮುಂದೆ ಅಗಬಹುದಾದ ಅಪಾಯವು ತಪ್ಪುತ್ತದೆ. ಅಥವಾ ಕೊಂಚ ಇಳಿಮುಖವಾಗುತ್ತದೆ. ಆದರೆ, ಬಹುತೇಕ ರೈತರು ಅನಕ್ಷರಸ್ಥರಾಗಿರುವರು. ಕೆಲವರಿಗೆ ದೃಷ್ಟಿ ಮಂದವಾಗಿರುವುದರಿಂದ  ಅತೀ ಸಣ್ಣ ಅಕ್ಷರಗಳಲ್ಲ್ಲಿರುವ ಕರಪತ್ರಗಳನ್ನು ಓದುವ ಗೋಜಿಗೆ ಹೋಗುವುದೇ ಇಲ್ಲ ! ಹಲವರು ಇದನ್ನು ಓದಿದ್ದರೂ, ಅಪಾಯವಾಗುವ ಬಗ್ಗೆ ಮಾಹಿತಿ ಇದ್ದರೂ, ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕ್ರಿಮಿನಾಶಕಗಳ ಬಳಕೆಗೆ ನಿಗದಿತ ಮಿತಿಯೂ ಇರುತ್ತದೆ. ಆದರೆ, ಬಹುತೇಕ ರೈತರು ತಮ್ಮ ಹೊಲದಲ್ಲಿನ ಕೀಟ ಬೇಗನೇ ಹತೋಟಿಗೆ ಬರುತ್ತದೆ ಎಂಬ ಭ್ರಮೆಯಲ್ಲಿ ಮುಳುಗಿ ಸೂಚಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಅವುಗಳನ್ನು ಬಳಸುವರು. ಕ್ರಿಮಿನಾಶಕ ಬಳಕೆ ಮಾಡುವಾಗ ಬೇಕಾಗುವ ರಕ್ಷಣಾ ಬಟ್ಟೆ- ಕೈಕಾಲು ಕವಚ, ಮುಖಕವಚಗಳನ್ನು ಬಳಸುವುದಿಲ್ಲ. ಪರಿಣಾಮವಾಗಿ ಕ್ರಿಮಿನಾಶಕ ಸಿಂಪಡಿಸುವ ಕಾರ್ಮಿಕರು ಬೇಗನೇ ಕಾಯಿಲೆಗೆ ಬಲಿಯಾಗುವರು. ಹಲವರು ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಕ್ರಿಮಿನಾಶಕ ಸಿಂಪಡಿಸುವರು. ಪರಿಣಾಮ ಇವು ಮೂಗು, ಬಾಯಿಗಳ ಮೂಲಕ ಮಾನವನ ದೇಹವನ್ನು ಸಲೀಸಾಗಿ ಸೇರುತ್ತವೆ. ಅಧಿಕ ಪ್ರಮಾಣದ ಕೀಟನಾಶಕಗಳ ಬಳಕೆಯಿಂದಾಗಿ ಮಕ್ಕಳ ನೆನಪಿನ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿವೆ ಎಂದು ಅಧ್ಯಯನಗಳು  ಸಾಬೀತುಪಡಿಸಿವೆ. ಪಂಜಾಬಿನ ಜನಸಂಖ್ಯೆಯ ಶೇಕಡಾ ೬೦ ಭಾಗ ಕ್ಯಾನ್ಸರ್ ಪೀಡಿತರು. ಇವರಲ್ಲಿ  ಅಬಾಲ ವೃದ್ಧರೂ ಸೇರಿದ್ದಾರೆ.


ತಜ್ಞರ ಅಭಿಪ್ರಾಯಗಳು
ವಿಪರೀತ ರಸಗೊಬ್ಬರ, ಕೀಟನಾಶಕ ಬಳಕೆಯ ಪರಿಣಾಮ ಕುಡಿಯುವ ನೀರು-ಆಹಾರ ವಸ್ತುಗಳು ವಿಷಕಾರಿಯಾಗಿದೆ. ಪರಿಣಾಮ ಹಲವರು ಕುಡಿಯಲು ಫಿಲ್ಟರ್ ನೀರು ಬಳಸುತ್ತಿರುವರು. ಪಂಜಾಬಿನಲ್ಲಿ ಭಾರೀ ಪ್ರಮಾಣದಲ್ಲಿ ಕೀಟ ನಿಯಂತ್ರಕಗಳಾಗಿ ಸಾಕಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ನೀರಿನ ಮತ್ತು ಆಹಾರ ಉತ್ಪಾದನೆಯ ಮೇಲೆ  ಪರಿಣಾಮ ಬೀರಿದೆ ಎಂದು ಕೃಷಿ ತಜ್ಞ ಡಾ. ಹೆಚ್. ಎಸ್. ಚಾಹಲ್ ತಿಳಿಸಿರುವರು.  ಚಂಡೀಘಡದ ಫೋಸ್ಟ್ ಗ್ರಾಜುಯೇಟ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಸಂಸ್ಥೆಯು ನಡೆಸಿದ ಸರ್ವೆಯ ಪ್ರಕಾರ ಇಲ್ಲಿ ಕ್ಯಾನ್ಸರ್‌ನಿಂದಾಗಿ ಸಾಯುವವರ ಸಂಖ್ಯೆ ವಾರ್ಷಿಕ ೫೧ನ್ನು  ದಾಟಿದೆ ! ೨೦೦೭ರ ಸ್ಟೆಟ್  ಆಫ್ ಎನ್ವರ್‌ಮೆಂಟ್ ವರದಿಯ ಪ್ರಕಾರ ಪಂಜಾಬಿನ ಮಾಲ್ವಾದಲ್ಲಿ  ರಾಜ್ಯದ ಶೇಕಡಾ ೭೫ ಕೀಟನಾಶಕಗಳನ್ನು ಬಳಸಲಾಗುತ್ತದೆ. ಇದು ಹಲವಾರು ಸಮಸ್ಯೆಗಳಿಗೆ ಮೂಲ ಕಾರಣವೆನ್ನುವರು. ಕೀಟನಾಶಕಗಳು ಆಹಾರದ ಸರಪಳಿಯನ್ನು ಪ್ರವೇಶಿಸಿರುವುದನ್ನು ಸಂಶೋಧನೆಗಳು ದೃಡೀಕರಿಸಿವೆ ಎಂದು ಓಸ್ವಾಲ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ಸತೀಶ್ ಜೈನ್ ಆಭಿಪ್ರಾಯ .ರಾಸಾಯನಿಕ ಗೊಬ್ಬರದ ಬಳಕೆಯಿಂದ ಇಳುವರಿ ಕುಸಿತದ ವಿಚಾರವನ್ನು  ಮಾಜಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸಹಾ ಪ್ರಸ್ತಾಪಿಸಿದ್ದರು.

ಪಂಜಾಬ್ ಸರಕಾರವು ಕ್ಯಾನ್ಸರ್‌ನ ಗುಣ ಲಕ್ಷಣಗಳುಳ್ಳ ರೋಗಿಗಳ ಗಣತಿ ಮಾಡಲು ಇತ್ತಿಚೆಗೆ ಆರಂಭಿಸಿದೆ. ಅಂಕಿಅಂಶ ತಜ್ಞ ಅಜಯ್ ಶರ್ಮರ ಪ್ರಕಾರ ವಾರ್ಷಿಕ ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗುತ್ತಿರುವರು.  ಪಂಜಾಬ್ ರಾಜ್ಯ ಸರಕಾರದ ವರದಿಯ ಪ್ರಕಾರ ಅಲ್ಲಿ ಪ್ರತಿದಿನವೂ ಸರಾಸರಿ ೧೮ ಮಂದಿ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ !


 ರೈಲು ಆಯಸ್ಕಾಂತದಂತೆ !
ಈ ರೈಲು ರಾತ್ರಿ ಪಯಣವನ್ನು ಮುಂದುವರಿಸುತ್ತದೆ. ಇದು ಕೀಟನಾಶಕಮತ್ತು ಕ್ಯಾನ್ಸರ್  ವಿರೋಧಿ ಹೋರಾಟಗಾರನ್ನು , ದೇಶ- ವಿದೇಶಿ ಪತ್ರಕರ್ತರನ್ನು  ರೈಲು ಅಸ್ಕಾಂತದಂತೆ ಆಕರ್ಷಿಸುತ್ತದೆ. ರೈಲಿನ ಪೋಸ್ಟರ್, ಬ್ಯಾನರ್‌ಗಳು, ವಿಡಿಯೋಗಳು ಹಲವಾರು ಅಂತರ್ ರಾಷ್ಟಿಯ ಸಮ್ಮೆಳನಗಳಲ್ಲಿ ಪ್ರಚಾರಗೊಂಡಿದೆ. ರೈಲಿನಲ್ಲಿ ಕಳೆದ ೫ ವರ್ಷಗಳಿಂದ ಪಯಣಿಸುತ್ತಿರುವ ರೋಗಿಗಳ ಸಂಖ್ಯೆಯು ಗಣನೀಯವಾಗಿ ಏರುತ್ತಲೇ ಇದೆ. ಈ ರೈಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಪ್ರಯಾಣವು ಉಚಿತ. ರೋಗಿಯ ಜೊತೆ ಪ್ರಯಾಣಿಸುವ ಇಬ್ಬರು ಸಹಾಯಕರಿಗೆ ಶೇಕಡಾ ೭೫ರಷ್ಟು ರಿಯಾಯಿತಿಯೂ ಲಭ್ಯವಿದೆ. ಪಂಜಾಬಿನ ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಯು ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಗಳು ರಾಜಾಸ್ಥಾನದ ಬಿಕನೀರ್‌ಗೆ ಚಿಕಿತ್ಸೆಗಾಗಿ ತೆರಳುವರು.  ಬಿಕನೀರ್‌ನಲ್ಲಿ ಆಹಾರ ಮತ್ತು ವಸತಿಯೂ ಪಂಜಾಬಿಗಿಂತಲೂ ತೀರಾ ಕಡಿಮೆ ವೆಚ್ಚದ್ದಾಗಿದೆ. ರಾಜಾಸ್ಥಾನದ ಬಿಕನೇರ್‌ನ ಆಚಾರ್ಯ ತುಳಿಸಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎಂಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರು. ರೈಲಿನಲ್ಲಿ ಸೂಕ್ತ ಸೌಲಭ್ಯವಿಲ್ಲದೆ, ರೋಗಿಗಳು ಮರದ ಬೆಂಚುಗಳಲ್ಲಿ, ನೆಲದಲ್ಲಿ ಮಲಗಿ ಪಯಣಿಸುವರು. ಈ ರೈಲು ರೋಗಿಗಳಿಗೆ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುವ ಏಕೈಕ ಸ್ಥಳವಾಗಿದೆ.


ಇಳುವರಿ ಹೆಚ್ಚಳ-ಭ್ರಮೆ !
ಪಂಜಾಬಿನ ಹತ್ತಿ ಬೆಳೆ ಭಾರೀ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತದೆ. ಕ್ಯಾನ್ಸರ್ ರೈಲಿನಲ್ಲಿ ಸಾಗುವ ಬಹುತೇಕ ರೋಗಿಗಳು ತಮ್ಮ ರೋಗಕ್ಕೆ ಮಿತಿ ಮೀರಿದ ಕೀಟನಾಶಕಗಳ ಬಳಕೆ ಎಂಬುವುದನ್ನು ಒಪ್ಪಿಕೊಳ್ಳುವರು ! ನಾನು ಬೆಳೆದ ಹತ್ತಿಗೆ ವಿವಿಧ ಕೀಟನಾಶಕಗಳನ್ನು ೧೦ ಬಾರಿ, ತರಕಾರಿಗಳಿಗೆ ವಾರಕ್ಕೆ ಒಂದೆರೆಡು ಬಾರಿ ಸಿಂಪಡಿಸಿರುವುದಾಗಿ ೬೩ ವರ್ಷದ ರೈತ ಬಲ್ದೆವ್ ಸಿಂಗ್ ತಿಳಿಸಿದರು.ಕೀಟನಾಶಕಗಳ ಮಿತಿಮೀರಿದ ಬಳಕೆಯು ಕ್ಯಾನ್ಸರ್‌ಗೆ ಕಾರಣ ಎಂಬುದು ನನಗೆ ತಿಳಿದಿದೆ. ಆದರೆ, ಕೀಟನಾಶಕಗಳ ಬಳಕೆಯಿಂದ ಇಳುವರಿ ಹೆಚ್ಚುತ್ತದೆ ಎಂದು ಅದನ್ನು ಸಿಂಪಡಿಸುವೆ ಎಂದು ಅವರು ನುಡಿದರು.

 ದೇಶ-ವಿದೇಶಗಳ ದೃಷ್ಟಿಯಲ್ಲಿ ಪಂಜಾಬ್ ಸಿರಿವಂತ ರಾಜ್ಯ. ಆದರೆ, ಅಲ್ಲಿನ ಬಡ ಜನತೆ ತಮ್ಮನ್ನು ಕ್ಯಾನ್ಸರ್ ನಿಂದ ಉಳಿಸಿಕೊಳ್ಳಲು ಪಕ್ಕದ ರಾಜಾಸ್ಥಾನಕ್ಕೆ ಪ್ರಯಾಣಿಸುವುದು ವಿಪರ್ಯಾಸವೇ ಸರಿ. ಈ ರೈಲಿನಲ್ಲಿ ಪಂಜಾಬಿನ ಮಾನ್ಸ, ಸಂಗ್ರೂರ್, ಭಟಿಂಡಾ, ಫರಿದ್ಕೊಟ್ , ಮೋಗಾ, ಮುಂತಾದ ಪ್ರದೇಶಗಳ ಸಣ್ಣ ಮತ್ತು ಅತೀ ಸಣ್ಣ ರೈತಾಪಿ ಕುಟುಂಬದ ರೋಗಿಗಳು ಪಯಾಣಿಸುವರು. ಇವರಲ್ಲಿ ಬಹುತೇಕ ಎಲ್ಲರೂ ಕಲುಶಿತ ನೀರನ್ನು ನೇರವಾಗಿ ಬಳಸುವರು.. ೧೯೭೦ರ ದಶಕದಲ್ಲಿ ಆರಂಭವಾದ ಹಸಿರು ಕ್ರಾಂತಿಯ ಯಶಸ್ಸು ಪಂಜಾಬಿನ ಜನತೆಯ ಉಸಿರನ್ನೆ ಕಿತ್ತುಕೊಂಡಿದೆ ಎಂದು ಅಲ್ಲಿನ ಜನತೆ ದೂರುತ್ತಿದ್ದಾರೆ.



ಅಪಾಯ ಕಟ್ಟಿಟ್ಟ ಬುತ್ತಿ.
ಇದರ ಅಪಾಯಗಳ ಬಗ್ಗೆ ಬಹುತೇಕ ಮಾಧ್ಯಮಗಳು ಮೌನವಹಿಸಿವೆ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಇವುಗಳ ವಿಚಾರವನ್ನು ಇನ್ನೂ ಪ್ರಸ್ತಾಪಿಸಿಯೇ ಇಲ್ಲ.  ದೂರದ ಹಿರೋಶಿಮಾ-ನಾಗಸಾಕಿಯ ಅಣುಬಾಂಬಿನ ದುಷ್ಪರಿಣಾಮಗಳ ಬಗ್ಗೆ ತಿಳಿದಿರುವ ನಾವು, ನಮ್ಮ ಮಕ್ಕಳು ಮಧ್ಯಪ್ರದೇಶದ ಯೂನಿಯನ್ ಕಾರ್ಬೈಡ್ ಸಂತ್ರಸ್ತರ, ಕ್ಯಾನ್ಸರ್ ರೈಲಿನ  ಬಗ್ಗೆ ಸುಸ್ಪಷ್ಟವಾಗಿ ತಿಳಿದಿಲ್ಲ ! ಬಹುತೇಕವಾಗಿ ಕ್ಯಾನ್ಸರ್ ಬರಲು ತಂಬಾಕೇ ಕಾರಣವೆಂದು ಬಿಂಬಿಸಿ ಜನತೆಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಕ್ರಿಮಿನಾಶಕ ಬಳಕೆಯೂ ಇದಕ್ಕೆ ಕಾರಣವೆಂಬುದನ್ನು ಉದ್ದೆಶಪೂರ್ವಕವಾಗಿ  ಹಲವಾರು ಕಡೆ ಮುಚ್ಚಿ ಹಾಕಲಾಗುತ್ತಿದೆ. ಹಲವರು ಕ್ರಿಮಿನಾಶಕಗಳ ಡಬ್ಬಿ ಮತ್ತು ಪೊಟ್ಟಣಗಳನ್ನು ಮರು ಬಳಕೆ ಮಾಡುವರು. ಇದರಲ್ಲಿ ಆಹಾರ ಮತ್ತು ನೀರನ್ನು ಸಹಾ ಸಂಗ್ರಹಿಸುವರು.  ಕ್ರಿಮಿನಾಶಕ ಬಳಸುವಾಗ ಕೈಕಾಲು ತೊಳೆಯದೇ ಊಟ ಮಾಡುವರು. ಪಾನೀಯ ಸೇವಿಸುವರು. ಧೂಮಪಾನ ಮಾಡುವರು. ಇದರ ಪರಿಣಾಮ ದಿಡೀರ್ ಗೋಚರವಾಗದಿದ್ದರೂ, ಕಾಲಾನುಕ್ರಮೇಣ ಮಾನವನ ಶರೀರಕ್ಕೆ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ.



 ಕೊನೆಹನಿ: ಮುಂಬರುವ ದಿನಗಳಲ್ಲಾದರೂ ನಾವು ರಾಸಾಯನಿಕ ಕೀಟನಾಶಕಗಳನ್ನು ಬಳಸದಿರೋಣ. ಬಳಸಿದರೂ, ಹಿತಮಿತವಾಗಿ ಬಳಸೋಣ. ನಮ್ಮ ಊರಿಗೆ ಕ್ಯಾನ್ಸರ್ ರೈಲು ಬರುವುದನ್ನು ತಡೆಯೋಣವೇ ?

https://www.youtube.com/watch?v=zIoZ8hwAZxA






ಶನಿವಾರ, ಅಕ್ಟೋಬರ್ 6, 2018

ಉಚಿತ ಸಿರಿಧಾನ್ಯಗಳ ಬೀಜ ವಿತರಣೆ

ಪ್ರಕೃತಿ ಪರಿಸರ 

ಉಚಿತ  ಸಿರಿಧಾನ್ಯಗಳ ಬೀಜ ವಿತರಣೆ

 ಬರಹ: ಕೂಡಂಡ ರವಿ, ಹೊದ್ದೂರು. 


ಸಿರಿಧಾನ್ಯದ ಬೀಜಗಳನ್ನು ಉಚಿತವಾಗಿ  ಆಸಕ್ತರಿಗೆ  ನೀಡಲು ಹಾಸನ ಜಿಲ್ಲೆಯ ಅರಕಲಗೋಡಿನ  ಕಾರಂಜಿ ಟ್ರಸ್ಟ್ ಸಂಸ್ಥೆಯು ಮುಂದೆ ಬಂದಿದೆ.   ಸಂಸ್ಥೆಯು ಪ್ರೀತಿ'ಸಿರಿ' ಕಾರ್ಯಕ್ರಮದ ಮೂಲಕ ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರಲೆ, ರೊಟ್ಟಿ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ ಮುಂತಾದ ಬೀಜಗಳನ್ನು ನೀಡಲಿರುವರು. ಅವುಗಳನ್ನು ಬೆಳೆದು ಸಿರಿಧಾನ್ಯಗಳ ಪರಿಚಯದ ಜೊತೆಗೆ ಅವುಗಳ ಮಹತ್ವಗಳ ಬಗ್ಗೆ ಮಾಹಿತಿ,  ಅವುಗಳನ್ನು ಹಕ್ಕಿಗಳಿಗೆ ಆಹಾರವಾಗಿ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ಧೇಶವಾಗಿದೆ.

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com




ಪಕ್ಷಿಗಳ ಪ್ರೀತಿ
ನಮ್ಮ ಪರಿಸರದಲ್ಲಿ ಹಕ್ಕಿಗಳು ಅವಿಭಾಜ್ಯ ಅಂಗವಾಗಿವೆ. ಅವುಗಳು ಪರಿಸರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಸಮೀಕ್ಷಾ ಮಾಹಿತಿಯ ಪ್ರಕಾರ  ಸದ್ಯ ಭೂಮಿಯ ಮೇಲಿರುವ ಪಕ್ಷಿಗಳಲ್ಲಿ 70%ದಷ್ಟು ತಿನ್ನಲು ಸಾಕಿರುವ ಕೋಳಿಗಳೇ ! ಇನ್ನುಳಿದ 30%ದಷ್ಟು ಮಾತ್ರ ಹತ್ತು ಸಾವಿರಕ್ಕೂ ಮಿಗಿಲಾಪಕ್ಷಿಗಳ ಮಹತ್ವ ನೋಡಿದರೆ ನಮಗೆ ಜೀವ ವೈವಿಧ್ಯತೆಯ ಮಹತ್ವ ಅರಿವಾಗುವುದು !  ಪಕ್ಷಿಗಳು ಬೀಜ ಪ್ರಸರಣೆ ಮಾಡುತ್ತವೆ. ಬೆಳೆಗಳಲ್ಲಿ ಕೀಟ ನಿಯಂತ್ರಿಸುತ್ತವೆ.  ಪರಾಗಸ್ಪರ್ಶ ಮಾಡುತ್ತವೆ.  ಪಕ್ಷಿಗಳ ಹಿಕ್ಕೆ ಒಳ್ಳೆಯ ಗೊಬ್ಬರ, ಪ್ರಕೃತಿಯಲ್ಲಿ ಸಮತೋಲನ ಕಾಪಾಡುತ್ತವೆ, ಮನುಷ್ಯನ ಎಷ್ಟೋ ಸಂಶೋಧನೆಗಳಿಗೆ ಪಕ್ಷಿಗಳೇ ಪ್ರೇರಣೆಯಾಗಿವೆಯಂತೆ !
ಕೈಗಾರೀಕರಣ, ನಗರೀಕರಣ, ಅರಣ್ಯನಾಶ, ರಾಸಾಯನಿಕ ಕೃಷಿ, ನೀರಿನ ಮೂಲಗಳ ನಾಶ, ಆಹಾರದ ಕೊರತೆ, ಆಧುನಿಕ ತಂತ್ರಜ್ಞಾನ, ಕಾಡ್ಗಿಚ್ಚು, ಅಕ್ರಮ ಬೇಟೆಗಾರಿಕೆ,  ಪ್ರಾಕೃತಿಕ ವಿಕೋಪಗಳು ನಮ್ಮ ಅಮೂಲ್ಯ ಪಕ್ಷಿ ಸಂಪತ್ತನ್ನು ನಾಶ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎನ್ನಬಹುದು. ನಿಧಾನವಾಗಿ ಪಕ್ಷಿ ಸಂಕುಲ ಕರಗುತ್ತಿರುವುದು ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಗಿವೆ.
ಇಂಪಾದ  ಹಕ್ಕಿಗಳ ಚಿಲಿಪಿಲಿ ಕಲರವ ಮನಸ್ಸಿಗೂ, ಹೃದಯಕೂ ಹಿತವೆನಿಸುತ್ತಿದೆ. ಹಲವಾರು ಕಣ್ಣುಗಳು ಹಕ್ಕಿಗಳನ್ನು ನೋಡಲು  ಕಾತರಿಸಿವೆ..! ನಮ್ಮಗಳ 'ಪ್ರಕೃತಿ ಇರುವುದೇ ಮನುಷ್ಯನ ಸುಖ ಜೀವನಕ್ಕಾಗಿ' ಎಂಬ ಅಹಂನಿಂದ  ಪರಿಸರವು ತನ್ನ ಸಮತೋಲನವನ್ನು ಕಳೆದು ಕೊಳ್ಳುತ್ತಿದೆ. ಇದಕ್ಕೆ ಹಕ್ಕಿಗಳ ನಾಶವೂ ಪ್ರಬಲ ಕಾರಣವಾಗಿರಲೂಬಹುದು.
 ಧಾನ್ಯಗಳ ಬಿತ್ತೋಣ ಬನ್ನಿ
ಸರಿ ! ಈಗ ಚಿಂತೆ, ವ್ಯಥೆ, ಆರೋಪಗಳನ್ನು ಬದಿಗಿಡೋಣ! ಹಕ್ಕಿಗಳಿಗಾಗಿ ನಾವೆಲ್ಲರೂ ಸೇರಿ ಏನಾದರೂ ಮಾಡೋಣ. ಈಗಾಗಲೇ ಬಿಸಿಲಿನ  ಝಳ  ಜೋರಾಗಿದೆ. ಮುಂದೆ ಭೀಕರ ಬೇಸಿಗೆ ದಿನಗಳಿವೆ. ನಾವು ಈಗ ಸ್ವಲ್ಪ ಎಚ್ಚರಗೊಂಡು ನಮ್ಮ ಮನೆಯಂಗಳದಲ್ಲಿ ಪಕ್ಷಿಗಳಿಗೆಂದು ನವಣೆ, ಸಾಮೆ, ಸಜ್ಜೆ, ಕೊರಲೆ ಮೊದಲಾದ ಸಿರಿಧಾನ್ಯಗಳನ್ನ, ಸೂರ್ಯಕಾಂತಿಯನ್ನ ಬಿತ್ತೋಣ ! ಕುಡಿಯಲು ನೀರಿಡೋಣ ! ಹೀಗೇ ಮಾಡುವುದರಿಂದ ಹಸಿವು ಮತ್ತು ಬಾಯಾರಿಕೆಯಿಂದ ಸಾಯೋ ಎಷ್ಟೊ ಪಕ್ಷಿಗಳ ಪ್ರಾಣ ಉಳಿಸಬಹುದು !  ಈ ಉದ್ಧೇಶದಿಂದಲೇ ಸಿರಿಧಾನ್ಯದ ಬೀಜಗಳನ್ನು ಉಚಿತವಾಗಿ  ಆಸಕ್ತರಿಗೆ  ನೀಡಲು ಹಾಸನ ಜಿಲ್ಲೆಯ ಅರಕಲಗೋಡಿನ  ಕಾರಂಜಿ ಟ್ರಸ್ಟ್ ಸಂಸ್ಥೆಯು ಮುಂದೆ ಬಂದಿದೆ !  ಸಂಸ್ಥೆಯು ಪ್ರೀತಿ'ಸಿರಿ'ಯ ಮೂಲಕ ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರಲೆ, ರೊಟ್ಟಿ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ ಮುಂತಾದ ಬೀಜಗಳನ್ನು ನೀಡಲಿರುವರು.
ಸಿರಿಧಾನ್ಯದಿಂದ ಲಾಭ 
ಸಿರಿಧಾನ್ಯ ಬಿತ್ತುವುದರಿಂದ ಅವುಗಳ ಮಹತ್ವವು ಮಕ್ಕಳಿಗೆ,  ಹಿರಿಯರಿಗೆ ತಿಳಿಯಲಿದೆ. ಈ ಧಾನ್ಯಗಳು ಹಲವಾರು ಕಾಯಿಲೆಗಳಿಗೆ ದಿವ್ಯೌಷಧಿಯೂ ಹೌದು. ಅತ್ಯಂತ ಕಡಿಮೆ ನೀರಿನಲ್ಲಿ ಮನೆಯಂಗಳವನ್ನು ಹಸಿರಾಗಿಸಬಹುದು. ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಬೇಸಿಗೆಯಲ್ಲಿ ಮನೆಯಂಗಳವು ಹಸಿರಾಗಿದ್ದು, ಮನೆಯ ತಂಪಾಗಿರುವುದು. ಸೂರ್ಯಕಾಂತಿ ಹೂವು ಅರಳಿ ಮನಕ್ಕೆ ಮುದ ನೀಡಲಿದೆ. ಮಿಗಿಲಾಗಿ ಮನೆಯಂಗಳದಲ್ಲಿ ಗುಬ್ಬಚ್ಚಿ, ಗಿಜುಗ, ಗಿಳಿ, ಪಾರಿವಾಳ ಮೊದಲಾದ ನಿಸರ್ಗ ಸಂಗೀತ ವಿದ್ವಾಂಸರಿಂದ ಮನಮೋಹಕ ಸಂಗೀತ ಕಛೇರಿಯನ್ನು ಮನೆಯಂಗಳದಲ್ಲಿ ಕಾಣಬಹುದು. ಕೇಳಬಹುದು.
ಬನ್ನಿ, ಪ್ರಕೃತಿ ಪ್ರೀತಿ ಸಿರಿಯನ್ನು ಪುಟಾಣಿ ಮಕ್ಕಳ  ಮನದಲ್ಲಿ ಬಿತ್ತಲು ಇದು ಸುವಣರ್ಾವಕಾಶ. ನಮ್ಮ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿ. ಅವರಿಗೂ ಹಕ್ಕಿಗಳ ಮಹತ್ವದ ಅರಿವು ಅನ್ನು ನೀಡಬಹುದು. ಹಕ್ಕಿಗಳಿಗೆ ಆಹಾರವಾಗುವ ಸಿರಿಧಾನ್ಯಗಳನ್ನು ಶಾಲಾ ಕಾಲೇಜು, ಮನೆ, ಮಠ, ಮಂದಿರ, ಮಸೀದಿ ಚಚರ್್ಗಳ ಅಂಗಳದಲ್ಲಿ ಬೆಳೆಯೋಣ ಬನ್ನಿ.  ಈ ಮಹತ್ಕಾರ್ಯಕ್ಕೆ ಪುಟಾಣಿಗಳನ್ನೂ ಪ್ರೇರೇಪಿಸೋಣ, ಹಕ್ಕಿಗಳ ಚಿಲಿಪಿಲಿ ದನಿಗೆ ಕಿವಿಯಾಗೋಣ ಬನ್ನಿ. ಇದು ವೈಶಿಷ್ಟ್ಯಪೂರ್ಣ ಕಾರ್ಯವಾಗಿದ್ದು, ಸಂಸ್ಥೆಯು ಫಲಾಪೇಕ್ಷೆಯಿಲ್ಲದೇ ಇದಕ್ಕೆ ಮುಂದಾಗಿದೆ. ಈ ಕೆಲಸವು ಅನುಕರಣನೀಯ, ಅಭಿನಂದನೀಯ ಎಂಬುವುದರಲ್ಲಿ ಎರಡು ಮಾತಿಲ್ಲ. ಇಂತಹ ಕಾರ್ಯಗಳಿಗೆ ನಾವು-ನೀವು ಕೈಜೋಡಿಸೋಣ. ಮುಂದಿನ ಪೀಳಿಗೆಗೆ ಹಕ್ಕಿಗಳ ಮಹತ್ವವನ್ನು ಸಾರಿ ಹೇಳೋಣ. ಅವುಗಳನ್ನು ಉಳಿಸಲು ಕೈಲಾದ ಪ್ರಯತ್ನ ಮಾಡೋಣ. 

ಸಿರಿಧಾನ್ಯಗಳನ್ನು ತಮ್ಮ ಶಾಲಾ ಕಾಲೇಜುಗಳ ವಿದ್ಯಾಥರ್ಿಗಳಿಗೆ, ಸಾರ್ವಜನಿಕರಿಗೆ ಪರಿಚಯಿಸಿ, ಅವುಗಳನ್ನು ಬಿತ್ತಿ ಬೆಳೆಯಲು ಬಯಸುವವರು, ಸಂಘ-ಸಂಸ್ಥೆಗಳು ತಮ್ಮ ವಿಳಾಸವನ್ನು 8792605846, 9591066583 ವಾಟ್ಸಾಪ್ ಸಂಖ್ಯೆಗಳಿಗೆ ಸಂದೇಶ ರವಾನಿಸಬಹುದು. 








ೆ.

ಗುರುವಾರ, ಅಕ್ಟೋಬರ್ 4, 2018

'ಕರುಣೆಯ ಗೋಡೆ '. . . !


 'ಕರುಣೆಯ ಗೋಡೆ '. . . ! 

   ನಿಮಗೆ ಅಗತ್ಯವಿಲ್ಲವಾದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ


  ಸಚಿತ್ರ ಬರಹ: ಕೂಡಂಡ ರವಿ, ಹೊದ್ದೂರು. 


ಕೆಲವರಿಗೆ ದೇವರು ಸಾಕಷ್ಟು ಕೊಟ್ಟಿದ್ದಾನೆ-ಕೊಡುತ್ತಿದ್ದಾನೆ.  ಇನ್ನೂ ಕೆಲವರಿಗೆ ಬೇಕಾದದನ್ನು ಕೊಡದೇ ಬಡವರನ್ನಾಗಿ ಮಾಡಿದ್ದಾನೆ. ಉಳ್ಳವರು ವಿವಿಧ ರೀತಿಯ ಬಟ್ಟೆ ಬರೆ ತೊಡುತ್ತಾರೆ. ವೈವಿಧ್ಯಮಯ ನಮೂನೆಗಳ ಚಪ್ಪಲಿ, ಶೂ ಧರಿಸುತ್ತಾರೆ. ಕೆಲವೇ ದಿನಗಳಲ್ಲಿ ಇಂತಹ ವಸ್ತು ವಗೈರೆಗಳ ಬದಲು ಹೊಸ ನಮೂನೆಗಳು ಮಾರುಕಟ್ಟೆಗೆ ಕಾಲಿಡುತ್ತವೆ.  ಪರಿಣಾಮ ಆಗ ತಾನೇ ಅತ್ಯಾಸೆಯಿಂದ  ಕೊಂಡು ತಂದ ಬಟ್ಟೆ ಬರೆ, ಚಪ್ಪಲಿ, ಶೂಗಳು ಬಳಕೆಯಾಗದೇ ಮೂಲೆಗುಂಪಾಗುತ್ತವೆ.  ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ಬಟ್ಟೆ ಬರೆಗಳು ತೀರಾ ಕಿರಿದಾಗಿ ಬಳಕೆಗೆ ಅನರ್ಹವಾಗುತ್ತವೆ. ಇಂತಹ ವಸ್ತುಗಳನ್ನು ಬಡವರಿಗೆ ವಿತರಿಸಿದರೆ ಹೇಗೆ ? ಎಂಬ ಮುಂದಾಲೋಚನೆಯಿಂದ ಮೂನರ್ಾಡಿನಲ್ಲಿ ವಿನೂತನ ಮಳಿಗೆಯು ಸದ್ದಿಲ್ಲದೆ ಕಾಯರ್ಾರಂಭ ಮಾಡಿದೆ.
ಘೋಷವಾಕ್ಯವೇನು ?
ನಿಮಗೆ ಅಗತ್ಯವಿಲ್ಲವಾದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ ಎಂಬುದು  ಈ ಸಂಸ್ಥೆಯ ಘೋಷ ವಾಕ್ಯವಾಗಿದೆ. ಮೂನರ್ಾಡಿನ ಉದ್ಯಮಿ, ಬೆಳೆಗಾರ ಬಡುವಂಡ ಕನ್ನು ಅರುಣ್ ಈ ಜನಸ್ನೇಹಿ ಕಾರ್ಯಕ್ಕೆ ಕೈಹಾಕಿದ ಛಲಗಾತಿ. ಬಡವರಿಗಾಗಿ ಏನಾದರೂ ಹೊಸತನ್ನು ಮಾಡಬೇಕು ಎಂದು ಸದಾ ಚಿಂತನೆಯಲ್ಲಿರುವ ಅವರಿಗೆ ಈ ಆಲೋಚನೆ ಮೂಡಿದ್ದೇ ತಡ, ತಕ್ಷಣ ಕಾರ್ಯ ಪ್ರವೃತ್ತರಾದರು.  ಮೈಸೂರಿನಲ್ಲಿರುವ ಈ ಮಾದರಿಯ ಕೇಂದ್ರವೇ  ಮೂನರ್ಾಡಿನಲ್ಲಿ  ಕರುಣೆಯ ಗೋಡೆ ೆ ಎಂಬ ಸಂಸ್ಥೆ ಸ್ಥಾಪಿಸಲು ಪ್ರೇರಣೆಯಾಯಿತು ಎಂದು  ಕನ್ನು ವಿವರವಿತ್ತರು.  ಈ ಬಗ್ಗೆ ತಮ್ಮ  ವಲಯದ ಗೆಳೆಯ-ಗೆಳತಿಯರಲ್ಲಿ ತಮ್ಮ ವಿಭಿನ್ನ ಆಲೋಚನೆಗಳನ್ನು ಅರುಹಿದರು.  ತಮ್ಮ ಬಳಿ ಇರುವ  ಆಪ್ತರಿಗೆ ಈ ಬಗ್ಗೆ ತಿಳಿಸಿದಾಗ ಅವರಿಂದಲೂ ಅಪಾರ ಪ್ರಶಂಸೆಗಳು ವ್ಯಕ್ತವಾದವಂತೆ . ಅವರು ಸಹಾ ಕರುಣೆಯ ಗೋಡೆಗೆ ತಮ್ಮ ಸಹಕಾರ ನೀಡುವ ಇಂಗಿತ ವ್ಯಕ್ತಪಡಿಸಿದಂತೆ. ಅದರಂತೆಯೇ, ಮೂನರ್ಾಡಿನ ಅಯ್ಯಪ್ಪ ದೇಗುಲದ ಬಳಿ ಇರುವ ಪೆಟ್ರೋಲಿಯಂ ಪಂಪ್ನ ಆವರಣದಲ್ಲಿ ಪುಟ್ಟ ಗೂಡಂಗಡಿಯನ್ನು ನಿಮರ್ಿಸಿದರು. ತರಾತುರಿಯಲ್ಲಿ ಈ ವಿನೂತನ ಶೈಲಿಯ ಮಳಿಗೆಯನ್ನು ಆರಂಭಿಸಿಯೇ ಬಿಟ್ಟರು. ಜಿಲ್ಲಾ ವಿಕಲ ಚೇತನರ ಸಂಘದ  ಅಧ್ಯಕ್ಷ ಜೆ. ಎ. ಮಹೇಶ್ವರ ಸಂಸ್ಥೆಯನ್ನು ಉದ್ಘಾಟಿಸಿದರು.
 ನೀವೂ ಸಹಾಯ ಹಸ್ತ ಚಾಚಿ
ಸದ್ಯಕ್ಕೆ ಈ ಮಳಿಗೆಯಲ್ಲಿ ಬಡವರಿಗಾಗಿ ಉತ್ತಮ ಗುಣಮಟ್ಟದ ಒಗೆದು ಇಸ್ತ್ರಿ ಮಾಡಿದ ಶುಭ್ರವಾದ ಬಟ್ಟೆಬರೆಗಳನ್ನು ಮತ್ತು ಚೆನ್ನಾಗಿರುವ (ಇನ್ನೂ ಸ್ವಲ್ಪ ಸಮಯ ಬಡವರು ಬಳಸಲು ಯೋಗ್ಯವಾದ )ಪಾದರಕ್ಷೆಗಳನ್ನು ಸಂಗ್ರಹಿಸಲಾಗುತ್ತಿದೆ. ಬಳಸದೇ ಇರುವ, ಮನೆಗಳಲ್ಲಿ ಮೂಲೆ ಸೇರಿದ ಉತ್ತಮ ಗುಣಮಟ್ಟದ  ಸ್ವೆಟ್ಟರ್, ಕಂಬಳಿ, ಕಾಲುಡುಗೆ,  ಶಾಲಾ ಸಮವಸ್ತ್ರಗಳು,  ಬಟ್ಟೆ ಬರೆ, ಚಪ್ಪಲಿ, ಶೂಗಳನ್ನು ತಂದು ಕೊಡಲು ಮನವಿ ಮಾಡಿದರು. ಅವರ ಮನವಿಗೆ ಸಕಾಲಿಕವಾಗಿ ಸ್ಪಂದಿಸಿದ ಸಹೃದಯಿಗಳು ಬಡವರಿಗಾಗಿ ತಾವು ಬಳಸಿದ, ವಸ್ತುಗಳನ್ನು ಉದಾರವಾಗಿ ನೀಡುತ್ತಿದ್ದಾರೆ.  ಇಲ್ಲಿಗೆ ಜಾತಿ, ಧರ್ಮ, ಮತ ಲಿಂಗ ಬೇಧವಿಲ್ಲದೆ ಎಲ್ಲರೂ ವಸ್ತು ವಗೈರೆಗಳನ್ನು ತಂದು ಕೊಡಬಹುದು. ಅದರಂತೆ,  ನೈಜ ಅವಶ್ಯಕತೆ ಇರುವವರು (ಸೀಮಿತ ಪ್ರಮಾಣದಲಿ)್ಲ  ಇಲ್ಲಿಂದ ತಮಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ.  ಬೇರೆಯವರು  ಸಂತೋಷದಿಂದ ಧರಿಸಲು ಯೋಗ್ಯವಿರುವಂತಹ  ಗುಣಮಟ್ಟದ ವಸ್ತುಗಳನ್ನೇ ಇಲ್ಲಿಗೆ ನೀಡಬಹುದು.  ಹರಿದ, ತೇಪೆ ಹಾಕಿದ , ಬಣ್ಣಗೆಟ್ಟ, ಕಳೆಗುಂದಿದ ವಸ್ತು ವಗೈರೆಗಳನ್ನು ಇಲ್ಲಿ ಸ್ವೀಕರಿಸಲಾಗುವುದಿಲ್ಲ.  ದಾನಿಗಳು ಅಪೇಕ್ಷೆ ಪಟ್ಟಲ್ಲಿ ತಮ್ಮ ಹೆಸರನ್ನು ಸಂಸ್ಥೆಯಲ್ಲಿರುವ ಪುಸ್ತಕದಲ್ಲಿ ನಮೂದಿಸಬಹುದು. ಇದರಿಂದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಅನುಕೂಲವಾಗಲಿದೆ ಎಂಬುದು ಸಂಸ್ಥೆ ಸ್ಥಾಪಕರ ಅಭಿಪ್ರಾಯ.  ಬಟ್ಟೆ ಬರೆ ಮತ್ತು ಇತರ ವಸ್ತುಗಳು ಅಪಾರ ಪ್ರಮಾಣದಲ್ಲಿ ಸಂಗ್ರಹವಾದಲ್ಲಿ  ಜಿಲ್ಲೆಯ ಇತರ ಸ್ವಯಂ ಸೇವಾಸಂಸ್ಥೆಗಳಿಗೆ ಅವುಗಳನ್ನು ನೀಡುವ ಮನೋಭಿಲಾಶೆಯನ್ನು ಕನ್ನು ವ್ಯಕ್ತಪಡಿಸಿದ್ದಾರೆ. ವಿನೂತನ ಪರಿಕಲ್ಪನೆಯ ಸಂಸ್ಥೆಗೆ ಜಿಲ್ಲೆಯ ದಾನಿಗಳು ಸಂಸ್ಥೆಗೆ ತಮ್ಮ ಕೈಲಾದ ನೆರವು ನೀಡಿದಲ್ಲಿ ಇವರ ಪರಿಶ್ರಮ ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ.
 ಮುಗುಳ್ನಗೆಯೇ ಪ್ರೇರಣೆ
ಇದರೊಂದಿಗೆ, ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ಕನ್ನು ಅಪ್ಪಚ್ಚು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಇವರು ತಮ್ಮಲ್ಲಿ ದುಡಿಯುತ್ತಿರುವ ಕಾಮರ್ಿಕರ ಮಕ್ಕಳಿಗೆ ಪ್ರತಿ ದಿನವೂ ಉಚಿತವಾಗಿ ಮನೆಪಾಠವನ್ನು ಹೇಳಿಕೊಡುತ್ತಾರೆ. ಹಲವರು ಇವರ ಬಳಿ  ಬಡವರು ಮಕ್ಕಳ ವಿದ್ಯಾಭ್ಯಾಸಕ್ಕೆ, ಅನಾರೋಗ್ಯ ಪೀಡಿತರು ಚಿಕಿತ್ಸೆಗಾಗಿ ಹಣವನ್ನು ಪಡೆದು ಕೊಳ್ಳುತ್ತಾರೆ. ತಾವು ಧನ ಸಹಾಯ ಮಾಡಿ ತನ್ಮೂಲಕ ವಿದ್ಯಾಭ್ಯಾಸ ಅತ್ಯುತ್ತಮ ಸಾಧನೆ ಮಾಡಿ, ಉದ್ಯೋಗ ಪಡೆದವರ ವಿವರ ನೀಡುವಾಗ ಕನ್ನು ಅವರು ಭಾವುಕರಾಗುತ್ತಾರೆ. ಬಡವರು ಸಹಾಯ ಪಡೆದ ಬಳಿಕ ಅವರ ಮೊಗದಲ್ಲಿ ಮೂಡುವ ಮುಗುಳ್ನಗುವೇ ಇವರ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಮೂಲ ಪ್ರೇರಣೆಯಂತೆ !  ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಿಬೇಕು. ಸ್ಥಳೀಯ ಬಡವರನ್ನು ಮೊದಲು ಬಡತನದಿಂದ ಮೇಲೆತ್ತಲು ಸಂಘಸಂಸ್ಥೆಗಳೊಂದಿಗೆ ಉಳ್ಳವರು ಶ್ರಮಿಸಿದರೆ ಸಮಾಜದ ಸುದಾರಣೆ ಸಾಧ್ಯ.  ಎಲ್ಲದಕ್ಕೂ ಸರಕಾರವನ್ನು ಕಾಯುತ್ತಾ ಕೂಡುವ ಬದಲು ಸ್ವಸ್ಥ ಸಮಾಜಕ್ಕಾಗಿ ನಮ್ಮ ಕಿರು ಕಾಣಿಕೆ ನೀಡಬೇಕು.  ಸಹಾಯ ಮಾಡುವ ಹಸ್ತಗಳು ಪೂಜಿಸುವ ತುಟಿಗಳಿಗಂತಲೂ ಶ್ರೇಷ್ಠ ಎಂಬುವುದು ಇವರ  ದೃಡ ನಿಲುವು. ಬಡಬಗ್ಗರ ನೆರವಿನ ಮಹತ್ವಾಕಾಂಕ್ಷೆ ಹೊತ್ತ ಇವರ ಸೇವೆ ಅನುಕರಣನೀಯ, ಅಭಿನಂದನೀಯ. ಇವರ ಸಮಾಜ ಸೇವಾ ಕಾರ್ಯಕ್ಕೆ ಪತಿ ಅರುಣ್ ಅಪ್ಪಚ್ಚು ಅವರ ಪ್ರೋತ್ಸಾಹವೂ ಇದೆ.

 ನಮ್ಮ ದೇಶ ಸೇರಿದಂತೆ ವಿದೇಶಗಳಲ್ಲಿ ಅಂತರಾಷ್ಟ್ರೀಯ ವ್ಯಾಪ್ತಿಂ ಸೇವಾಸಂಘಗಳಿವೆ. ಇವುಗಳಲ್ಲಿ ರೋಟರಿ ಮತ್ತು ಲಯನ್ಸ್ ಕ್ಲಬ್ಗಳು ಪ್ರಮುಖ ಸ್ಥಾನ ಪಡೆದಿವೆ.
ಆದರೆ, ಇವು ತಮ್ಮ ಸದಸ್ಯತ್ವ ಹೊಂದಿರುವ ಅತೀ ಬಡತನದ ಹೊಂದಿರುವ ದೇಶಗಳಿಗೆ ಸಹಾಯ ಹಸ್ತ ಚಾಚುತ್ತದೆ. ನಿಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಬಡವರು ಇದ್ದಾರೆ. ಅವರು ನಮ್ಮ ನೆರೆಹೊರೆಗಳಲ್ಲಿ, ನಮ್ಮ ಊರಿನಲ್ಲಿ ಇದ್ದಾರೆ.  ನಾವು ಅವರಿಗೆ ಮೊದಲು ಸಹಾಯ ಮಾಡೋಣ. ಬಳಿಕ ದೂರದ ದೇಶಗಳಲ್ಲಿರುವ ಬಡವರಿಗೆ ಸಹಾಯ ಮಾಡೋಣ ಅಲ್ಲವೇ ? ಅದು ಬಿಟ್ಟು ನಮ್ಮ ನೆರೆಹೊರೆಯವರು ಹರಿದ , ಮೈಕೈ ಕಾಣುವಂತಹ ಬಟ್ಟೆ ಧರಿಸುತ್ತಿರುವರು,. ಅವರಿಗೆ ನಾವು ಸಹಾಯ ಮಾಡದೇ ದೂರದ ದೇಶಗಲ್ಲಿ ಇರುವ ಬಡವರಿಗೆ ಸಹಾಯ ಮಾಡುವ ಔಚಿತ್ಯವಾದರೂ ಏನು ? ನಮ್ಮ ಸುತ್ತಮುತ್ತಲಿರುವ ಬಡವರು ನಿಮ್ಮ ಬಳಿ ಬಂದು ನಮ್ಮಲ್ಲಿ ಬಟ್ಟೆ ಇಲ್ಲ. ಧರಿಸಲು ಹಳೆ ಬಟ್ಟೆ ಕೊಡಿ. ಹೊಸ ಬಟ್ಟೆ ಖರೀದಿಸಿ ಕೊಡಿ ಎಂದು ಕೇಳುವುದೇನೂ ಇಲ್ಲ. ನಮ್ಮಲ್ಲಿ ಬಹುತೇಕ ಮಂದಿಗೆ ವಿಪರೀತ ಸ್ವಾಭಿಮಾನ.
ಅಂತಹ ಬಡವರಿಗೆ ಈ ರೀತಿಯ ಕೇಂದ್ರಗಳು ಉಪಯೋಗವಾಗಲಿದೆ. ನೀವು ಸಿರವಂತರಾಗಿದ್ದು, ನಿಮಗೆ ಬಡವರಿಗೆ, ಬಟ್ಟೆ ಬರೆ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುವುದಾದಲ್ಲಿ ಈ ಯೋಜನೆ ಉತ್ತಮವೆನಿಸಲಿದೆ.

ನೀವು ಮುಕ್ತವಾಗಿ ಮನಸ್ಸು ಮಾಡಿ. ಬಡವರಿಗೆ ಸಹಾಯ ಹಸ್ತ ಚಾಚಿ. ಕೊಟ್ಟದ್ದು ತನಗೆ, ಮುಚ್ಚಿಟ್ಟದ್ದು ಪರರಿಗೆ. ಕೊಟ್ಟಿದ್ದು ಕೆಟ್ಟಿತೆನ್ನೆಬೇಡ...

ಮಂಗಳವಾರ, ಸೆಪ್ಟೆಂಬರ್ 25, 2018

ಕೊಡಗು ನೀವು ತಿಳಿಯದ ಸತ್ಯ‌ ? !



              ಕೊಡಗು ನೀವು ತಿಳಿಯದ‌ ಸತ್ಯ ?!

                                        ಬರಹ: ಕೂಡಂಡ ರವಿ, ಹೊದ್ದೂರು.



*  ದುರಾಸೆಯೇ ಪ್ರಕೃತಿ ಮುನಿಯಲು ಕಾರಣವೇ '
* ಸ್ವಯಂ ನಿಯಂತ್ರಣಕ್ಕಾಗಿ ಪ್ರಕೃತಿ ಮುನಿಯಿತೇ ...!?
                                                       * ಇನ್ನಾದರೂ ಪಾಠ ಕಲಿತಾರೇಯೇ  ! ?


Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com


ಪ್ರಕೃತಿಯನ್ನು ತನ್ನ ಗುಲಾಮನನ್ನಾಗಿಸಲು ಬಯಸಿದ್ದೇ ಕೊಡಗಿನಲ್ಲಿ ನಡೆದ ಇತ್ತೀಚಿನ ದುರಂತಕ್ಕೆ ಪ್ರಮುಖ ಕಾರಣವೆಂದು ಕೆಲವರು ಅಭಿಪ್ರಾಯಿಸುತ್ತಿರುವರು.  ದುರಾಸೆ ಎದುರು ಪ್ರಕೃತಿಮಾತೆಯ ಮೇಲಿನ ನಿರಂತರ ಅತ್ಯಾಚಾರ ಮಿತಿ ಮೀರಿದಂತೆ ಭಾಸವಾಗುತ್ತಿದೆ. !  ಇದಕ್ಕೆ ನಿಯಂತ್ರಣ ಹೇರಲೆಂದು ಮಾನವನೊಡನೆ ಪ್ರಕೃತಿ ಮುನಿಯಿತೇನೋ ? ಇದು 2017ರಲ್ಲಿ ಚಿಲಿಯಲ್ಲಿ ಸಂಭವಿಸಿದ ಭೂಕುಸಿತಕ್ಕೂ ಭೀಕರವಾಗಿದೆ ಎಂದು ಕೆಲವರ ಅಭಿಪ್ರಾಯ.
 ಈ ದುರಂತವನ್ನು ಹಲವರು ಹಲವು ಬಗೆಗಳಲ್ಲಿ ವಿಶ್ಲೇಷಣೆ ಮಾಡುತ್ತಿರುವರು. ತಮ್ಮದೇ ಆದ ವ್ಯಾಖ್ಯೆಗಳನ್ನು ನೀಡುತ್ತಿರುವರು. ಬಹುತೇಕ ಮಂದಿ ಎಲ್ಲವೂ ಜನತೆಯದ್ದೇ ತಪ್ಪು ಎಂದೇ ಪ್ರತ್ಯೇಕವಾಗಿ, ಪರೋಕ್ಷವಾಗಿ ವಾದಿಸುತ್ತಿರುವರು. ಆದರೆ, ಇದರಲ್ಲಿ  ಜನತೆಯೊಡನೆ  ಸರಕಾರ, ಜನಪ್ರತಿನಿಧಿಗಳು,  ಕೆಲ ಇಲಾಖೆಗಳ  ಕೆಲವು ತಪ್ಪುಗಳು ಕಾಣಬರುತ್ತಿವೆ. ಇವುಗಳಲ್ಲಿ ಆಯ್ದವುಗಳನ್ನು  ಜನತೆಯ ಮುಂದಿಡುವ ಪ್ರಯತ್ನ ನನ್ನದು.


ಬೆಟ್ಟಗಳ ಮೇಲೆ ನಿವೇಶನಗಳು !
ಹಿಂದಿನ ಕಾಲದಲ್ಲಿ ಹಲವಾರು ಮಂದಿ ಬೆಟ್ಟ ಪ್ರದೇಶಗಳ ತಪ್ಪಲಿನಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ಆದರೆ, ಕಾಲ ಬದಲಾದಂತೆ ಜನರ ವರ್ತನೆಯು ಬದಲಾಯಿತು. ಜನಸಂಖ್ಯೆಯು ಹೆಚ್ಚಾದಂತೆ ಸರಕಾರಗಳು ಬಡವರಿಗೆ ನಿವೇಶನ ಹಂಚುವ ಪ್ರಕ್ರಿಯೆಯತ್ತ ಆಸಕ್ತಿ ತೋರಲೇ ಇಲ್ಲ. ಬಡವರು ಬೆಟ್ಟಗಳ ಮೇಲೆ, ನದಿಯ ಅಂಚುಗಳನ್ನು ಯಾರದೋ ಕುಮ್ಮಕ್ಕಿನಿಂದ ಅತಿಕ್ರಮಿಸಲು ಆರಂಭಿಸಿದರು. ಪರಿಣಾಮ ಮಡಿಕೇರಿಯ ಇಂದಿರಾನಗರ, ಮಂಗಳಾದೇವಿ ನಗರಗಳ ವ್ಯಾಪ್ತಿಯು ದಿನೇ ದಿನೇ ಹೆಚ್ಚುತ್ತಾ ಬೆಟ್ಟಗಳ ಮೇಲೇರಲು ಆರಂಭವಾಯಿತು. ಖಾಸಗಿಯವರು ಬೆಟ್ಟಗಳನ್ನು ಅತಿಕ್ರಮಿಸುತ್ತಾ, ಅವುಗಳ ನೆತ್ತಿಯ ಮೇಲೆ ಐಷಾರಾಮಿ ಬಂಗಲೆ, ಹೊಟೇಲ್ಗಳನ್ನು ನಿಮರ್ಿಸಲಾರಂಭಿಸಿದರು. ದೊಡ್ಡಕುಳಗಳ ತಂಟೆಗೆ ಯಾರೂ ಹೋಗಲೇ ಇಲ್ಲ. ಬಡವರ ವೋಟ್ ಬ್ಯಾಂಕ್ನ ಆಸೆಗೆ ಬಿದ್ದ ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಗೆ ಸಾಥ್ ನೀಡಿದವೇ ಹೊರತು ಅಂಕುಶ ಬಿಗಿಯಲು ಶ್ರಮಿಸಲೇ ಇಲ್ಲ.

ತುಟ್ಟ ತುದಿಯಲ್ಲೂ ಮನೆ !
ಮಂಗಳದೇವಿ ನಗರದಲ್ಲಿ ಕೆಲವು ವರ್ಷಗಳ ಹಿಂದೆ ಬೆಟ್ಟ ಕುಸಿದು ಹಲವಾರು ಮನೆಗಳು ಮಡಿಕೇರಿ-ವೀರಾಜಪೇಟೆ ರಸ್ತೆಗೆ ಬಿದ್ದಿತ್ತು. ಕೆಲವು ವರ್ಷಗಳ ಹಿಂದೆ ವೀರಾಜಪೇಟೆ ತಾಲೂಕಿನ ಚೋಮಬೆಟ್ಟ (ಕುಂದ್).  ಚೇರಂಬಾಣೆ ಸಮೀಪದ  ಬೆಟ್ಟಗಳು ಕುಸಿದವು. ಆದರೂ, ನಮ್ಮ ಜನತೆ,  ಆಳುವವರು, ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ದಿವ್ಯ ನಿರ್ಲಕ್ಷ್ಯ ತೋರಿದರು. ರಾಜಾಸೀಟ್ ಬಳಿ ಪುರಾತತ್ವ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಭಾರೀ ಕಟ್ಟಡಗಳು ನಿಮರ್ಾಣಗೊಂಡವು. ರಾಜಾಸೀಟ್ ಪಕ್ಕಕ್ಕೆ ಪುಟಾಣಿ ರೈಲಿನ ಆಗಮನದಿಂದ ಬೆಟ್ಟವನ್ನು ಕೊರೆಯಲಾಯಿತು. ಇದರ ಪಕ್ಕದಲ್ಲಿ ಇಂದಿರಾ ನಗರವೂ ಕೂಡಾ ಬೆಟ್ಟದ ಮೇಲ್ಭಾಗಕ್ಕೆ ವಿಸ್ತರಣೆಗೊಂಡವು. ಹಲವು ದೊಡ್ಡಕುಳಗಳು ಪ್ರಕೃತಿ ವೀಕ್ಷಣೆಯ ನೆಪದಿಂದ ಬೆಟ್ಟದ ಮೇಲೆ ನಿವೇಶನಗಳನ್ನು ಭಾರೀ ಬೆಲೆಗೆ ಖರೀದಿಸಿ, ಹೊಟೇಲ್ ನಿಮರ್ಿಸಿ, ಪ್ರವಾಸಿಗರಿಗೆ ಪ್ರಕೃತಿ ತೋರಿಸಿ ಹಣ ಗಳಿಕೆ ಆರಂಭಿಸಿದರು. ಮಡಿಕೇರಿ ನಗರದಲ್ಲಿ ಆಕ್ರಮವಾಗಿ ಹಲವಾರು ಬಹುಮಹಡಿ ಕಟ್ಟಡಗಳು ಕೆಲವರ ರಕ್ಷಣೆಯೊಂದಿಗೆ ನಿಮರ್ಾಣಗೊಂಡವು. ಬೆರಳೆಣಿಕೆಯ ಮಂದಿ ಇಂತಹ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರೂ, ಬಹುತೇಕ ಮಂದಿ ಅಧಿಕಾರಿ ಶಾಹಿಗಳು ಯಾರದೋ ಮುಲಾಜಿಗೆ ಬಿದ್ದು ಮೌನವಹಿಸಿದರು.

 ನದಿ ಪಾತ್ರಗಳಲ್ಲಿಯೂ ಮನೆಗಳು
ಇದೇ ರೀತಿಯ ಸಮಸ್ಯೆಗಳು ಹಲವಾರು ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿಯೂ ಆರಂಭವಾಯಿತು. ರಾಜ್ಯ, ದೇಶ, ವಿದೇಶಗಳಿಂದಲೂ ಕೊಡಗಿಗೆ ಕಾಮರ್ಿಕರು, ಪ್ರವಾಸಿಗರು, ಉದ್ಯೋಗಿಗಳು ನಿರಂತರವಾಗಿ ಆಗಮಿಸುತ್ತಾರೆ. ಇಂತಹವರಲ್ಲಿ ಬಾಂಗ್ಲಾ ದೇಶಿಗರು, ರೋಹಿಂಗ್ಯಾಗಳು ಕೂಡಾ ಸೇರಿದ್ದಾರೆ. ಇವರು ಸ್ಥಳೀಯರೂ ಸೇರಿ  ಪಂಚಾಯಿತಿ ಮಟ್ಟಗಳಲ್ಲಿ ಅನಧಿಕೃತವಾಗಿ ಕಾವೇರಿ ನದಿಯ ಅಂಚನ್ನೇ ಅತಿಕ್ರಮಿಸಲಾರಂಭಿಸಿದರು. ನಾಪೋಕ್ಲು ಸಮೀಪದ ಚೆರಿಯಪರಂಬು, ಸಿದ್ಧಾಪುರ ಸಮೀಪದ ಕರಡೀಗೋಡು, ಕುಶಾಲನಗರ ಇತ್ಯಾದಿ ಕಡೆಗಳಲ್ಲಿ ನದಿಪಾತ್ರದೊಳಗೆ ಗುಡಿಸಲು, ಮನೆಗಳನ್ನು ಅನಧಿಕೃತವಾಗಿ ನಿಮರ್ಿಸಲಾರಂಭಿಸಿದರು. ಕುಶಾಲನಗರದಲ್ಲಂತೂ ಕಾವೇರಿ ನದಿಯ ಅಂಚಿನ ಮನೆ ನಿವೇಶನಗಳು ಪ್ರತೀ ಸೆಂಟಿಗೆ ಸುಮಾರು 10ಲಕ್ಷ ರೂಪಾಯಿಗಳಿಗೆ ಬಿಸಿ ದೋಸೆಗಳಂತೆ ಬಿಕರಿಯಾದವು. ಹಲವಾರು ಕಡೆ ಅನಧಿಕೃತ ಲೇಔಟ್ಗಳು ಕೆಲವರ ಆಶ್ರೀವರ್ಾದದೊಂದಿಗೆ ನಿಮರ್ಾಣಗೊಂಡವು. ಅವುಗಳಿಗೆ ಸರಕಾರದಿಂದ ಅನಧಿಕೃತವಾಗಿ ಮೂಲಭೂತ ಸೌಕರ್ಯಗಳು ದೊರೆತವು. 'ರಿವರ್ ಬ್ಯಾಂಕ್'   ವೋಟ್ ಬ್ಯಾಂಕ್  ಆಗಿ ಬದಲಾಯಿತು !




ನಿಯಮಾವಳಿಗಳು ಗಾಳಿಗೆ..
 ಕಾನೂನಿ ಪ್ರಕಾರ ಯಾವುದೇ ನದಿ ಪಾತ್ರಗಳಲ್ಲಿ ನದಿಯ ಮಧ್ಯಭಾಗದಿಂದ  ಕನಿಷ್ಠ 33 ಮೀಟರ್, ಗರಿಷ್ಠ ಪ್ರವಾಹ ಮಟ್ಟ ಅಂದರೆ, 500 ಮೀಟರ್ ದೂರದವರೆಗೆ ದಡದ ಇಕ್ಕೆಲಗಳಲ್ಲಿ ವಾಣಿಜ್ಯ ಕಟ್ಟಡ, ವಸತಿ ನಿಮರ್ಾಣದಂತಹ ಕಾರ್ಯಕ್ಕೆ ಬಳಸುವಂತಿಲ್ಲ.   ಈ ಅಳತೆಯ ಭೂಮಿಯನ್ನು ಕೇವಲ ಕೃಷಿ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾಗಿದೆ. ಆದರೆ, ಕಾವೇರಿ ನದಿ ಪಾತ್ರ ಸೇರಿದಂತೆ ಬಹುತೇಕ ಕಡೆ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಈ ನಿಯಮದ ಬೇಷರತ್ ಉಲ್ಲಂಘನೆಯೇ ಕುಶಾಲನಗರ ಸೇರಿದಂತೆ ವಿವಿಧ ಕಡೆ ವಸತಿ ಪ್ರದೇಶಗಳು ಕಾವೇರಿ ಪ್ರವಾಹದಲ್ಲಿ ಮುಳುಗಲು ಏಕೈಕ ಕಾರಣ.
ಕೆಲವರು ಕಾವೇರಿ ನದಿ ಸೇರಿದಂತೆ ವಿವಿಧ ನದಿಯ ಅಂಚುಗಳಿಗೆ ಮಣ್ಣು ಸುರಿದು, ಅಲ್ಲಿ ಕಟ್ಟಡ ನಿಮರ್ಾಣದಂತಹ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಇಂತಹ ಕಡೆ (ಉದಾ: ಕುಶಾಲನಗರದ ನಿಸರ್ಗದ ಬಳಿ) ನದಿಯ ಪಾತ್ರದಲ್ಲಿ ಖಾಯಂ ಕಟ್ಟಡಗಳನ್ನು ನಿಮರ್ಿಸುವಂತಿಲ್ಲ. ಆದರೆ, ಕಾನೂನು ಬಾಹಿರವಾಗಿ ಅಲ್ಲಲ್ಲಿ ಕಟ್ಟಡವನ್ನು ಕೆಲವರ ಕೃಪಾಶರ್ೀದದೊಂದಿಗೆ ನಿಮರ್ಾಣವಾಗಿದೆ. ಈ ಕಟ್ಟಡಗಳು ಪ್ರವಾಹದಿಂದ ಹಾನಿಯಾಗಿದೆ. ಇಂತಹವರು ಸಹಾ ಇದೀಗ ನಾವು ಸಂತ್ರಸ್ಥರು ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವರು !




ಗಂಜೀ ಕೇಂದ್ರ ಎಂಬ 'ನುಂಗುತಾಣ'
ಪ್ರತೀವರ್ಷವೂ ಕಾವೇರಿನದಿ ಉಕ್ಕಿಹರಿವ ಸಂದರ್ಭ ಹಲವಾರು ಮನೆಗಳಿಗೆ ನೀರು ನುಗ್ಗುವುದು ಸವರ್ೇಸಾಮಾನ್ಯ. ನದಿಯೊಳಗೆ ಮನೆಗಳಿವೆಯಲ್ಲ. ಇಲ್ಲಿರುವವರನ್ನು ತಾತ್ಕಾಲಿಕವಾಗಿ ಗಂಜೀಕೇಂದ್ರಕ್ಕೆ ಕರೆತಲಾಗುತ್ತದೆ. ಬೆಟ್ಟದ ಮೇಲೆ ಮನೆ ಕಟ್ಟಿದವರಿಗೂ ಗಂಜಿಕೇಂದ್ರದಲ್ಲಿ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ.  ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವ ಗೊಡವೆಗೆ ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಮುಂದಾಗಿಲ್ಲ. ಬಹುತೇಕ ಬಿಳಿಯಾನೆ ಗಳಿಗೆ ಗಂಜೀಕೇಂದ್ರವು ಹೊಟ್ಟೆಹೊರೆಯುವ ಕೇಂದ್ರವಾದಂತಿದೆ. ಇಂತಹ ಬಿಳಿಯಾನೆಗಳಿಗೆ ಲಕ್ಷಾಂತರ ರೂಪಾಯಿ ದಕ್ಕುತ್ತಿದೆ. ಜನತೆ ನಿರಾಶ್ರಿತರಾಗಿ, ನಿರ್ವಸಿತರಾದಷ್ಟು ಇಂತಹವರಿಗೆ ಲಾಭ ಅಧಿಕ !


ನಿವೇಶನ ವಿತರಣೆ ಏಕಿಲ್ಲ ?
ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ವಲಸಿಗರು ಕೊಡಗಿಗೆ ಆಗಮಿಸುತ್ತಾರೆ. ಇವರಲ್ಲಿ ಬಹುತೇಕ ಮಂದಿ ಇಲ್ಲಿಯೇ ತಳವೂರುವರು. ಸ್ಥಳೀಯರು ಸೇರಿದಂತೆ ವಲಸಿಗರಿಗೆ ನಿವೇಶನ ನೀಡುವ ಪ್ರಯತ್ನವನ್ನು ಈವರೆಗೆ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಮಾಡಲೇ ಇಲ್ಲ. ವಲಸಿಗರನ್ನು  ಜಿಲ್ಲೆಯಿಂದ ಹೊರದಬ್ಬುವುದನ್ನು ಬಿಟ್ಟು ಅವರಿಗೆ ರತ್ನಗಂಬಳಿ ಹಾಸಿ ಸ್ವಾಗತ ಬಯಸಲಾಗುತ್ತಿದೆ. ಕೆಲವು ಸಂಘಟನೆಗಳು ಈ ಬಗ್ಗೆ ಆಡಳಿತ ವರ್ಗ, ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿ ಸೋತವು. ಇವರ ನಿರ್ಲಕ್ಷ್ಯದ ಪರಿಣಾಮವಾಗಿಯೇ ಬಡವರು, ನದಿತಟ, ಬೆಟ್ಟ ಗುಡ್ಡಗಳ ಮೇಲೆ ಆಶ್ರಯ ಪಡೆದಿರುವರು. ಪ್ರವಾಹ, ಭೂಕುಸಿತಕ್ಕೆ ಸಿಲುಕಿ ನಲುಗಿರುವವರಲ್ಲಿ  ಇವರ  ಸರಾಸರಿ 60-80 ! 


ಪ್ರವಾಸಿಗರ ಸುನಾಮಿ !
1996ರಲ್ಲಿ ಭಾರತ ದೇಶದ ಮೇಲೆ ಭೀಕರ ಸುನಾಮಿ ಅಪ್ಪಳಿಸಿತ್ತು. ಬಳಿಕ ಕರಾವಳಿ ಪ್ರದೇಶಗಳಿಗೆ ತೆರಳುತ್ತಿದ್ದ ಪ್ರವಾಸಿರು ಸುನಾಮಿಯ ರೂಪದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಸುರಕ್ಷಿತ ಪ್ರದೇಶಗಳತ್ತ ದಾಂಗುಡಿ ಇಡಲಾರಂಭಿಸಿದರು. ಅವರ ಲೆಕ್ಕಾಚಾರದಲ್ಲಿ ಕೊಡಗು 'ಸುರಕ್ಷಿತ' ತಾಣವಾಗಿತ್ತು ! (ಈಗ ಅದು ಹುಸಿಯಾಗಿದೆ ! ?) ಸುಮಾರು 12-13ವರ್ಷಗಳ ಕಾಲ ಕೊಡಗಿನಲ್ಲಿ ಪ್ರವಾಸೋದ್ಯಮ ವಿಜೃಂಭಿಸಿತ್ತು. ಈ ಸಮಯದಲ್ಲಿ ಕೊಡಗಿನಲ್ಲಿ ಅವ್ಯಾಹತವಾಗಿ ಹೋಂಸ್ಟೇಗಳು ಹುಟ್ಟಿಕೊಂಡವು. ಇಡೀ ಕೊಡಗು ಪ್ರವಾಸೋದ್ಯಮ ಕೇಂದ್ರವಾಯಿತು.ಕೊಡಗಿನ  ಹೆಸರಾಂತ ದೇಗುಲಗಳೂ ಪ್ರವಾಸಿಕೇಂದ್ರಗಳಾದವು ! ? ಅದಕ್ಕೆ ತಕ್ಕಂತೆ ಕೊಡಗು ಬದಲಾವಣೆಯಾಗುತ್ತಾ ಸಾಗಿತು. ಅಂಕೆ ಇಲ್ಲದ ಹೋಂಸ್ಟೇಗಳಿಗೆ ಕಾನೂನು ಜಾರಿಯಾಗಲೇ ಇಲ್ಲ. ಜಿಲ್ಲಾಡಳಿತ ಹಲವು ಬಾರಿ ಹೋಂಸ್ಟೇಗಳ ನೋಂದಣಿಗೆ ಆದೇಶ ನೀಡಿದರೂ, ಕಾನೂನು ಕ್ರಮಕ್ಕೆ ಮುಂದಾಗಲೇ ಇಲ್ಲ. ಆದೇಶವು ಕೇವಲ ನಾಮಾಕಾವಸ್ಥೆಗೆ ಮೀಸಲಾಯಿತು.

ಬ್ರಿಟಿಷರ ಕಾನೂನು ಜಾರಿ ! 
ಕೊಡಗು ಜಿಲ್ಲೆ ಬ್ರಿಟಿಷರ ಆಡಳಿತದಲ್ಲಿ ಇನ್ನೂ ಇದೆಯೋ ಎಂಬ ಸ್ಥಿತಿ ಇದೆ. ಕೊಡಗು ಜಿಲ್ಲೆಯಲ್ಲಿ 1865 ಭೂ ಕಂದಾಯ ನೀತಿ ಇನ್ನೂ ಜಾರಿಯಲ್ಲಿದೆ. ಇದಕ್ಕೆ ಕಾರಣ ನಮ್ಮ ಆಡಳಿತ ಶಾಹಿಗಳು, ಮತ್ತು ಜನಪ್ರತಿನಿಧಿಗಳು. ಕನರ್ಾಟಕ ರಾಜ್ಯದಲ್ಲಿ ಕೊಡಗು ಇದೆಯೋ  ಎಂಬ ಸಂಶಯ ಜನತೆಯನ್ನು ಕಾಡುತ್ತಿದೆ. ಇಡೀ ಕನರ್ಾಟಕಕ್ಕೆ ಅನ್ವಯವಾಗುವ ಕಾನೂನು ಇಲ್ಲಿಗೆ ಅನ್ವಯ ಆಗುವುದಿಲ್ಲವಂತೆ ? 1964 ರ ಭೂ ಕಂದಾಯ ಕಾನೂನು ಇಡೀ ಕನರ್ಾಟಕಕ್ಕೆ ಅನ್ವಯ ಆಗುತ್ತಿದೆ. ಅದರ ಪ್ರಕಾರ ಆಯಾ ಜಮೀನಿನ ಮೇಲೆ ಅದರ ಮಾಲೀಕನಿಗೆ ಸಂಪೂರ್ಣ ಅಧಿಕಾರವಿದೆ. ಆದರೆ, ಕೊಡಗಿನಲ್ಲಿ ಇಲ್ಲವಂತೆ !

ಕೊಡಗು ಎಲ್ಲಿದೆ ? !
ಹಾಗಾದಲ್ಲಿ ಕೊಡಗು ಕನರ್ಾಟಕದಲ್ಲಿ ಇಲ್ಲವೇ ? ಕೊಡಗು ಇರುವ ರಾಜ್ಯ, ದೇಶ ಅದಾವುದು ? ! ಇದು ನಮ್ಮ ರಾಜ್ಯದ ಬಹುತೇಕ ಜನತೆಗೆ ತಿಳಿಯದ ಕಟು ಸತ್ಯ. ಇದರಿಂದಾಗಿಯೇ ಇಲ್ಲಿನ ಜನತೆಗೆ ತಮ್ಮ ಜಮೀನಿನ ಅಧಿಕೃತ ದಾಖಲೆಗಳೆ ಸಿಗುತ್ತಿಲ್ಲ. ದಾಖಲೆಗಳೆ ಇಲ್ಲದಿರುವುದರಿಂದ ಹೋಂಸ್ಟೇಯಂತಹ ವಾಣಿಜ್ಯದ ವ್ಯವಹಾರಗಳಿಗೆ ಜನತೆ ಪರವಾನಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ರಾಜ್ಯ ಸರಕಾರ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳ ತೆರಿಗೆಯಿಂದ ವಂಚಿತವಾಗುತ್ತಿದೆ ! ಇದನ್ನೇ ದಾಳವಾಗಿ ಬಳಸಿಕೊಂಡ ಕೆಲವರು ತಮಗೆ ಇಷ್ಟಬಂದ ಕಡೆ, ನದಿಯ ಅಂಚುಗಳಲ್ಲಿ, ಬೆಟ್ಟದ ನೆತ್ತಿಯ ಮೇಲೆ ಅನಧಿಕೃತ ಹೋಂಸ್ಟೇ ನಿಮರ್ಿಸಿದರು. ಅಲ್ಲಿಗೂ ರಸ್ತೆ ಸಂಪರ್ಕ ಬೇಕಾಯಿತು.  ಅವೈಜ್ಞಾನಿಕವಾಗಿ ಬೇಕಾದ ಕಡೆ ಬೃಹತ್ ಯಂತ್ರ ಬಳಸಿ ರಸ್ತೆ ನಿಮರ್ಾಣವು ಅವ್ಯಾಹತವಾಗಿ ನಡೆಯಿತು. ಯಾವ ಪರಿಸರ ಪ್ರೇಮಿಯೂ ಈ ಬಗ್ಗೆ ಸೊಲ್ಲೆತ್ತಲಿಲ್ಲ ! ನೀರಿಗಾಗಿ ಬೆಟ್ಟದ ತುದಿಗಳಲ್ಲಿ ಬೋರ್ವೆಲ್ ಕೊರೆದರು. ಮನಸೋ ಇಚ್ಛೇ ಭೂ ಪರಿವರ್ತನೆಯಾಯಿತು.  ಆಹಾರ ಧಾನ್ಯಗಳನ್ನು ಬೆಳೆಯುವ ಫಲವತ್ತಾದ ಭೂಮಿಯು ನಿರಾಂತಕವಾಗಿ ವಾಣಿಜ್ಯ ಬೆಳೆಗಳ ಪ್ರದೇಶವಾಯಿತು. ಹಲವಾರು ಕಡೆ ಗದ್ದೆಗಳು ನಿವೇಶನಗಳಾಗಿ ಬದಲಾದವು. ಇದಕ್ಕೆ ಅಂಕುಶ ಹಾಕುವ ಕಾನೂನು ಬರಲೇ ಇಲ್ಲ. ಇದು ಕೊಡಗಿನ ಭೂ ಕುಸಿತಕ್ಕೆ ಪ್ರಬಲ ಕಾರಣಗಳಲ್ಲಿ ಒಂದಾಗಿದೆ ಎನ್ನಬಹುದು.

ಬೀಟೆ ಮರದ ಸೌದೆ !
1865ರ ಭೂ ಕಂದಾಯ ಕಾಯಿದೆಯಂತೆ ಭೂ ಮಾಲೀಕರಿಗೆ ಮರದ ಮಾಲೀಕತ್ವವಿಲ್ಲ. ಪರಿಣಾಮ ಕೋಟ್ಯಾಂತರ ರೂಪಾಯಿ ಮೌಲ್ಯದ  ಉತ್ಕೃಷ್ಟ ಮರಗಳು ಸೌದೆಗಾಗಿ ಬಳಕೆಯಾಗುತ್ತಿವೆ. ಇದರಲ್ಲಿ  ಅಪಾರ ಬೆಲೆ ಬಾಳುವ  ಬೀಟೆ ಮರಗಳಂತಹ ದುಬಾರಿ ಬೆಲೆಯ ಮರಗಳೂ ಸೇರಿವೆೆ ಎಂದು ವಿಷಾದದಿಂದ ಹೇಳಬೇಕಾಗಿದೆ. ಸ್ಥಳೀಯ ಜನತೆ ಮರದಿಂದ ಮಾಡಿದ ಪೀಠೋಪಕರಣ ಮಾಡಿಸುವಂತಿಲ್ಲ. ತಮ್ಮ ಜಮೀನಿನಲ್ಲಿರುವ ಮರಗಳಿಂದ ಮನೆ ಕಟ್ಟಿಕೊಳ್ಳುವಂತಿಲ್ಲ. ಮರ ಕಡಿತಲೆಯ ಪರವಾನಿಗಾಗಿ ಸಾಮಾನ್ಯ ರೈತ ಅರಣ್ಯ ಇಲಾಖಾ ಸಿಬ್ಬಂದಿ-ಅಧಿಕಾರಿಗಳಿಗೆ ಸಹಸ್ರಾರು ರೂಪಾಯಿಗಳ ಲಂಚ ನೀಡಬೇಕಿದೆ. ಜೀವಮಾನ ಬಹುಪಾಲು ಅಮೂಲ್ಯ ಸಮಯವನ್ನು ತಮ್ಮ ಜಮೀನಿನ ದಾಖಲೆ ಸರಿಪಡಿಸಲು, ಮರ ಕಡಿತಲೆಗೆ ಪರವಾನಿಗೆ ಪಡೆಯಲು ವ್ಯಯಿಸಬೇಕಾಗಿದೆ. 1964ರ ಭೂ ಕಂದಾಯ ಕಾನೂನು ಕೊಡಗಿನಲ್ಲಿ ಸಮರ್ಪಕ ಅನುಷ್ಠಾನವಾದಲ್ಲಿ ಜನತೆ ವೈವಿಧ್ಯಮಯ ಮರಗಳನ್ನು ಬೆಳೆಸಲು, ಬಳಸಲು ಆಸಕ್ತಿ ತೋರುವ ಸಾಧ್ಯತೆಗಳಿವೆ.
 ಅರಣ್ಯ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳಿಗೆ ಈ  ಮೇಲಿರುವ ನಿಯಮಾವಳಿಗಳು ಅನ್ವಯವಾಗುತ್ತಿಲ್ಲ. ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಜಿಲ್ಲೆಗೆ ಬರುವ ಹೊರ ಜಿಲ್ಲೆ, ರಾಜ್ಯದ ಸಿಬ್ಬಂದಿವರ್ಗ ಉನ್ನತ ಮಟ್ಟದ ಅಧಿಕಾರಿಯಾಗಿ ಇಲ್ಲಿಂದ ವಗರ್ಾವಣೆಯಾಗುವ ಸಮಯದಲ್ಲಿ ಕೋಟ್ಯಾಂತರ ರೂಪಾಯಿಗಳ ಮೌಲ್ಯದ ಲೋಡುಗಟ್ಟಲೆ ಪೀಠೋಪಕರಣಗಳನ್ನು ಇಲ್ಲಿಂದ ಒಯ್ಯುತ್ತಿರುವರು ! ?

ಬತ್ತುತ್ತಿರುವ ಜೀವನದಿಗಳು !
ಇದರಿಂದ ನೊಂದ ಬಹುತೇಕ ರೈತರು ತಮ್ಮ ಮನಸಾಕ್ಷಿಗೆ ವಿರುದ್ಧವಾಗಿ ಪರವಾನಿಗೆ ರಹಿತವಾಗಿ ಕಡಿಯುವಂತಹ 20 ಜಾತಿಯ ಮರಗಳನ್ನು ಬೆಳೆಯುತ್ತಿದ್ದಾರೆ. ಉದಾ: ಸಿಲ್ವರ್ ಓಕ್, ಆಕೇಶಿಯಾ, ಸುಬಾಬುಲ್, ಹಾಲುವಾಣ, ಗಾಳಿಮರ, ಬಿದಿರು........ ಮುಂತಾದವನ್ನು ಬೆಳೆದು ಮಾರುತ್ತಿದ್ದಾರೆ. ಇದರಿಂದಾಗಿ ಪ್ರಕೃತಿಯಲ್ಲಿ ಜೀವವೈವಿಧ್ಯಕ್ಕೆ ಕಾರಣವಾಗಬೇಕಾದ ವೈವಿಧ್ಯಮಯ ಮರಗಿಡಗಳು  ಕಾಣಬೇಕಾದ ಕಡೆ ಏಕ ಜಾತಿಯ(ಸಿಲ್ವರ್ ಓಕ್) ಮರಗಳೇ ಹೆಚ್ಚಾಗಿ ಕಾಣಬರುತ್ತಿವೆ. ಪರಿಣಾಮ ಪಾಕೃತಿಕ ಸಮತೋಲನ ತಪ್ಪುತ್ತಿದೆ. ಇಂತಹ ಹತ್ತಾರು ಕಾರಣಗಳಿಂದ ಭೂಮಿಯಲ್ಲಿನ ನೀರು ಇಂಗುವಿಕೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸುತ್ತಿದೆ. ಪರಿಣಾಮ ಬೇಸಿಗೆಯಲ್ಲಿ ಬತ್ತುತಿದ್ದ ಜೀವನದಿಗಳು ಸೆಪ್ಟೆಂಬರ್ ತಿಂಗಳಲ್ಲಿ ಬರಿದಾಗುವ ಸ್ಥಿತಿ ನಿಮರ್ಾಣವಾಗಿದೆ. ಈ ಪ್ರಕ್ರಿಯೆಯು 2012 ರಿಂದಲೇ ಆರಂಭವಾಗಿದೆ. ಅದರೂ, ಜನತೆ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಸಿಲ್ವರ್ ಓಕ್-ಇಲಾಖೆಯ ಸಾಥ್
ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕಾದ ಅರಣ್ಯ ಇಲಾಖೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿಗೆ ಮಾರಕವಾದ ಸಿಲ್ವರ್ ಓಕ್ ಮರಗಳನ್ನೆ ಅಧಿಕವಾಗಿ ಬೆಳೆಯುವತ್ತ ಜನತೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ. ಅರಣ್ಯ ಇಲಾಖೆಯ ಬಹುತೇಕ ಎಲ್ಲಾ ಸಸ್ಯಕ್ಷೇತ್ರಗಳಲ್ಲಿಯೂ ಪ್ರತೀ ವರ್ಷ ಲಕ್ಷಾಂತರ ಸಿಲ್ವರ್ ಓಕ್ ಗಿಡಗಳನ್ನು ಬೆಳೆಸಲಾಗುತ್ತದೆ. ಆ ಗಿಡಗಳಿಗೂ ಸಬ್ಸಿಡಿ ನೀಡಿ ಕೇವಲ 1ರೂಪಾಯಿಗೆ ಪ್ರತಿ ಗಿಡವನ್ನು ವಿತರಿಸಲಾಗುತ್ತಿದೆ.  ಅತ್ಯಂತ ಕಡಿಮೆ ಬೆಲೆಗೆ ಧಾರಾಳವಾಗಿ ಸಿಗುವ ಸಿಲ್ವರ್ ಓಕ್ ಗಿಡಗಳನ್ನೇ ಕೃಷಿಕರು ಅತ್ಯಧಿಕ ಪ್ರಮಾಣದಲ್ಲಿ ತಮ್ಮ ಜಮೀನಿನಲ್ಲಿ ಬೆಳೆಸುವತ್ತ ಆಸಕ್ತಿ ತೋರುತ್ತಿರುವರು. ಕೊಡಗಿನಲ್ಲಿ ಸಸ್ಯವೈವಿಧ್ಯ ನಾಶ ಮಾಡುವಲ್ಲಿ ಅರಣ್ಯ ಇಲಾಖೆಯ ಪಾತ್ರವೂ ಪ್ರಮುಖವಾಗಿದೆ ಎಂದು ಧಾರಾಳವಾಗಿ ಹೇಳಬಹುದು.ಬದಲಿಯಾಗಿ ಅರಣ್ಯ ಇಲಾಖೆ ಸಿಲ್ವರ್ ಓಕ್ ಬೆಳೆಸುವುದನ್ನು ನಿಲ್ಲಿಸಲು ಆಡಳಿತಶಾಹಿಗಳು ಆದೇಶ ನೀಡಲಿಲ್ಲ. ಬಹುಶ್ಯ ಬೆಳೆದರೂ, ಅದಕ್ಕೆ ಸರಕಾರಿ ಸಹಾಯಧನ ನಿಲ್ಲಿಸುವಂತೆ ನಾಮಾಕಾವಸ್ಥೆಗೂ ನಿದರ್ೇಶನ ನೀಡಲೂ ಇಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಕಾಡು ಜಾತಿಯ ಮರಗಳಿಗೆ ಮಾತ್ರ ಸರಕಾರದ ಸಹಾಯಧನ ದೊರೆಯಬೇಕು. ಸಿಲ್ವರ್ ಓಕ್ ಸಸಿಗಳನ್ನು ಸರಕಾರಿ ಸಸ್ಯಕ್ಷೇತ್ರಗಳಲ್ಲಿ ಬೆಳೆಯುವದನ್ನು ನಿಷೇಧಿಸಬೇಕಿದೆ. 

ಮಾಪನ ಕೇಂದ್ರ ಸ್ತಬ್ಧ
ಹಾರಂಗಿ ಜಲಾಶಯದ ಸಮೀಪ ಹಿಂದೆ ಭೂಕಂಪನ ಮಾಪಕ ಕೇಂದ್ರವಿತ್ತು. ಅದು ಸ್ತಬ್ಧವಾಗಿತ್ತು. ಇದು ಕಾರ್ಯ ನಿರ್ವಹಿಸಿದ್ದಲ್ಲಿ ಕೊಡಗಿನಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ನಡೆಯುವ ಭೂ ಕಂಪನಗಳ ದಾಖಲಾತಿಯಾಗುತ್ತಿತ್ತು. ಆದರೆ, ಈ ಕೇಂದ್ರ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಭೂಕಂಪನದ ದಾಖಲಾತಿ ನಡೆಯಲಿಲ್ಲ.  ಜಲಪ್ರಳಯದ ಸಮಯದಲ್ಲಿ ಭೂಕಂಪನವಾಗಿತ್ತೇ ಎಂಬ ಬಗ್ಗೆ ದಾಖಲೆಯೇ ಅಲಭ್ಯವಾಗಿದೆ. ಇದೀಗ ಜಿಲ್ಲಾಡಳಿತದ ಪ್ರಸ್ತಾವನೆ ಮೇರೆಗೆ ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ಇಂತಹ ವಿನೂತನ ಕೇಂದ್ರ ಸ್ಥಾಪನೆಯಾಗಿದೆ.

 ಜಲಾಶಯವೋ ಕೆರೆಯೋ   !
ಜಲಾಶಯ ನಿಮರ್ಾಣವಾಗಿ 5-6 ದಶಕಗಳು ಕಳೆದರೂ, ಹೂಳು ತೆಗೆಯದ ಹಾರಂಗಿ ಜಲಾಶಯವು ಕೆರೆಯಂತಾಗಿದೆ. ಪರಿಣಾಮ ಜಲಾಶಯ ತುಂಬಿದಾಗ ಹಿನ್ನೀರು ಬಹುದೂರದವರೆಗೂ ವ್ಯಾಪಿಸಿತ್ತು. ಹಾರಂಗಿ ಜಲಾಶಯ ನಿಮರ್ಾಣವಾದ ಬಳಿಕ ಈವರೆಗೂ ಜಲಾಶಯದ ಹೂಳು ಯಾರೂ ಆಸಕ್ತಿ ತೋರಲೇ ಇಲ್ಲ. ಇದರಿಂದಾಗಿ ಆ ಭಾಗದಲ್ಲಿ ಅಧಿಕ ತೇವಾಂಶದಿಂದಾಗಿ  ಶೇಕಡಾ 95 ಭೂಪ್ರದೇಶ, ಬೆಟ್ಟ-ಗುಡ್ಡಗಳು ಕುಸಿದಿರಬಹುದಾದ ಸಾಧ್ಯತೆಗಳಿವೆ. ಕಾಲ-ಕಾಲಕ್ಕೆ ಜಲಾಶಯ ಹೂಳು ತೆಗೆದಿದ್ದಲ್ಲಿ ಈ ಅನಾಹುತದ ಪರಿಣಾಮ,  ಭೀಕರತೆ ಕೊಂಚ ಕಡಿಮೆಯಾಗುತ್ತಿತೇನೋ !? ಮಿತಿ ಮೀರಿದ ಭೂ ಪರಿವರ್ತನೆಯಿಂದಾಗಿ ಈ ಭಾಗದ ಲವಣಾಂಶಯುಕ್ತ ನೀರು ಹಾರಂಗಿ ಜಲಾಶಯ ಸೇರಿ,  ಕ್ರೈಸ್ಟ್ಗೇಟ್ ಮೂಲಕ ನದಿಗೆ ಸೇರುತ್ತಿತ್ತು. 

ಕಾಡಾನೆಗಳ ಸಂಚಾರ-ಕೃಷಿಗೆ ಸಂಚಕಾರ
ಕೊಡಗಿನ ಬಹುತೇಕ ಕಡೆ ವರ್ಷದ ಎಲ್ಲಾ ದಿನಗಳಲ್ಲಿಯೂ ಕಾಡಾನೆಗಳ ಹಾವಳಿ ನಿರಂತರವಾಗಿರುತ್ತದೆ. ಅವುಗಳಿಗೆ ಅಭಯಾರಣ್ಯ, ಮೀಸಲು ಅರಣ್ಯಗಳಲ್ಲಿ ನೀರು, ಆಹಾರದ ಅಭಾವ ತಲೆದೋರಿದೆ. ಅವು ಆಹಾರ, ನೀರನ್ನು ಅರಸುತ್ತಾ, ವಲಸೆ ಹೋಗುತಾ,  ಬೆಳೆಗಾರರ ತೋಟವನ್ನೇ ಆಶ್ರಯತಾಣವಾಗಿಸಿಕೊಳ್ಳುತ್ತಿವೆ. ಪ್ರತೀವರ್ಷವೂ ಕನಿಷ್ಠ 5-10 ಮಂದಿಯನ್ನು ಬಲಿ ತೆಗೆದುಕೊಳ್ಳುತ್ತವೆ.  ಈ ಬಗ್ಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುವುದು ವಿರಾಳತೀವಿರಳ. ಪರಿಹಾರ ದೊರೆತರೂ,  ನೆಪ ಮಾತ್ರಕ್ಕೆ ಸೀಮಿತ. ನೈಸಗರ್ಿಕ ವಿಕೋಪಗಳಿಂದ  ಹಾನಿಯಾದಲ್ಲಿ ಪ್ರತೀ ಅಡಿಕೆ ಗಿಡಕ್ಕೆ ಬರೇ 1.70 ರೂಪಾಯಿ, ಪ್ರತೀ ಕಾಫಿ ಗಿಡಕ್ಕೆ 10 ರೂಪಾಯಿ ಎಂದು ಸರಕಾರ ಇತ್ತೀಚೆಗೆ ನಿಗದಿಪಡಿಸಿದೆ. ಈ ಸಮಸ್ಯೆಗಳಿಂದ ಮುಕ್ತವಾಗಲು ಕೊಡಗಿನ ಕಾಡಾನೆ  ಹಾವಳಿ ಪೀಡಿತ ಗ್ರಾಮಗಳ ಜನತೆ ಕೃಷಿಯಿಂದ ವಿಮುಕ್ತಿ ಪಡೆಯಲು ಬಯಸುತ್ತಿದ್ದಾರೆ. ಇಲ್ಲ ನಾಮಾಕಾವಸ್ಥೆಗಾಗಿ ಕೃಷಿ ಮಾಡಿ, ಕಾಡಾನೆಗಳಿಂದ ನಷ್ಟವಾಗದ ಕಾಳುಮೆಣಸು, ಬಟರ್ ಪ್ರೂಟ್  ಸೇರಿದಂತೆ ಇತರ ಬೆಳೆಗಳನ್ನು  ಬೆಳೆಯುವತ್ತ ಆಸಕ್ತಿ ತೋರುತ್ತಿರುವರು. ಇದಕ್ಕೆ ಆಧಾರ ಮರವಾಗಿ ಬಹುತೇಕ ಕಡೆ ಸಿಲ್ವರ್ ಓಕ್ ಮರಗಳನ್ನು ಬೆಳೆಯುತ್ತಿರುವರು. ಹಲವಾರು ಕಡೆ ಸಹಸ್ರಾರು ಏಕರೆ ಭತ್ತ ಬೆಳೆಯುವ ಗದ್ದೆಗಳು ಈ ಸಮಸ್ಯೆಯಿಂದಾಗಿ ಪಾಳು ಬಿದ್ದಿವೆ. ಕಾಡಾನೆ ಹಾವಳಿ ತಡೆಯಲು ಸರಕಾರ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದಿರುವುದೇ ಸಮಸ್ಯೆ ಉಲ್ಭಣವಾಗಲು ಮೂಲ  ಕಾರಣ. ಕಾಡಾನೆ ಸಮಸ್ಯೆಯಿಂದ ಕೊಡಗು ಮುಕ್ತಿ ಹೊಂದಿದ್ದಲ್ಲಿ ಮಾತ್ರ  ಕೃಷಿಕರು ನಿರಾಂತಕವಾಗಿ ಬಿದಿರು, ಭತ್ತ, ಬಾಳೆ, ತೆಂಗು, ಕಂಗನ್ನು ಬೆಳೆಯಬಲ್ಲರು. ಅಂತಹ ದಿನಗಳು ಬರುವುದಾದರೂ ಎಂದು ? ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ಸರಕಾರ, ಜನಪ್ರತಿನಿಧಿಗಳು, ಇಲಾಖೆಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಕಾಡಿಗೆ ಅಟ್ಟುವ ನಾಟಕ-ಕಾಯಕ  !
ಕೊಡಗಿನಲ್ಲಿ ಕಾಡಾನೆಗಳೇ ಇಲ್ಲ. ಎಲ್ಲವೂ ನಾಡಾನೆಗಳು ! ಅವುಗಳಿಗೆ ಜನತೆಯ, ಪಟಾಕಿಗಳ ಭಯವಿಲ್ಲ. ಇವುಗಳು ಕಾಡಿನಲ್ಲಿ ಇರುವುದೇ ಇಲ್ಲ. ನಮ್ಮ ಅಭಯಾರಣ್ಯಗಳಲ್ಲಿ ಬಿದಿರು ನಾಶವಾಗಿ ಹಲವಾರು ವರ್ಷಗಳೇ ಕಳೆದವು. ಅಲ್ಲಿ ಮತ್ತೆ ಬಿದಿರು ನೆಡುವ ಕಾರ್ಯಕ್ಕೆ ಅರಣ್ಯ ಇಲಾಖಾಧಿಕಾರಿಗಳು ಈವರೆಗೆ ಆಸಕ್ತಿ ತೋರಲೇ ಇಲ್ಲ. ಬಹುತೇಕ ಅಭಯಾರಣ್ಯಗಳು, ಮೀಸಲು ಅರಣ್ಯಗಳಲ್ಲಿ ಅನಧಿಕೃತವಾಗಿ ತೇಗದ ನೆಡುತೋಪುಗಳು ತಲೆ ಎತ್ತುತ್ತಲಿವೆ. ಈ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಪರಿಣಾಮ ಕಾಡುಪ್ರಾಣಿಗಳಿಗೆ ಅಲ್ಲಿ ಆಹಾರದ ಕೊರತೆ ಎದುರಾಗಿದೆ. ಆಹಾರ ಹುಡುಕುತ್ತಾ ಬರುವ ಕಾಡಾನೆಗಳು ಕಾಫಿ ತೋಟಗಳಲ್ಲಿಯೇ ವಾಸಿಸುತ್ತವೆ. ಅವುಗಳನ್ನು ಕಾಡಿಗೆ ಅಟ್ಟುವ ನಾಟಕವನ್ನು ಅರಣ್ಯ ಇಲಾಖೆ ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡುತ್ತಿದೆ. 

ಪಾರಂಪರಿಕ ಕೃಷಿಗೆ ತಿಲಾಂಜಲಿ ?
ಈ ನಾಟಕಕ್ಕಾಗಿ ಪ್ರತೀವರ್ಷವೂ ಲಕ್ಷಾಂತರ ರೂಪಾಯಿ ಅನುದಾನ ಇಲಾಖೆಗೆ ದೊರೆಯುತ್ತದೆ. ಆನೆಗಳನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಿದಾಗ ಉಂಟಾಗುವ ಅಪಾರ ಹಾನಿ ಬೆಳೆಗಾರನಿಗೆ,  ಅನುದಾನ ಇಲಾಖೆಗೆ ! ? ಕಡಿತಲೆಗೆ ಪರವಾನಿಗೆ ಇರುವ ಮರಗಳನ್ನು ಬೆಳೆದಲ್ಲಿ ಬೆಳೆಗಾರನಿಗೆ ನಷ್ಟವಾಗುವುದಿಲ್ಲ. ಕೆಲವು ವರ್ಷಗಳ ಬಳಿಕ ಆತನಿಗೆ ಆದಾಯದ ಖಾತ್ರಿಯೂ ಇದೆ.  ಇದರಿಂದಾಗಿ ಹಲವು ಬೆಳೆಗಾರರು ಈ ವಿಭಿನ್ನ ಕ್ರಮದ ಮೂಲಕ ಪಾರಂಪರಿಕ ಕೃಷಿಯಿಂದ  ವಿಮುಖರಾಗುತ್ತಿರುವರು. ಹಲವರು ಸಾಂಪ್ರದಾಯಿಕ ಏಲಕ್ಕಿ ತೋಟಗಳನ್ನು ಕಾಫಿ ತೋಟಗಳಾಗಿ ಪರಿವತರ್ಿಸಿದರು. ಕಾಫಿಗೆ ಮುಕ್ತ ಮಾರುಕಟ್ಟೆ, ಬೆಲೆಯ ಏರಿಕೆ ಪರಿಣಾಮ ಮರಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಯಿತು. ಹಲವು ಕಡೆ ಭತ್ತದ ಗದ್ದೆಗಳನ್ನು ತೋಟಗಾರಿಕಾ ಬೆಳೆಗಳಿಗೆ ಬದಲಾದವು.  ಹಲವಾರು ಕಡೆ ಶುಂಠಿ ಕೃಷಿಯು ಅವ್ಯಾಹತವಾಗಿ ಮುಂದುವರಿಯಿತು. ಪರಿಣಾಮ ಪರಿಸರ ಸಮತೋಲನ ತಪ್ಪಿ ಹೋಯಿತು.

 ಮಿತಿಮೀರಿದ ರಾಸಾಯನಿಕ ಬಳಕೆ
 ಜಿಲ್ಲೆಯ ಕೃಷಿಕರು  ಅರಿತೋ ಅರಿಯದೆಯೋ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವರು. ಇದು ಕೆಲವೊಮ್ಮೆ ಮಿತಿ ಮೀರುವುದುಂಟು. ಜಿಲ್ಲೆಯ ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳು ಕೃಷಿಕರಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವಂತೆ ಸಲಹೆ ನೀಡುತ್ತಿರುವುದು ಇದಕ್ಕೆ ಕಾರಣ. ಕೃಷಿಗೆ ಬಳಸಲು ಯೋಗ್ಯವಾದ ಸಾವಯವ ಮತ್ತು ಜೈವಿಕ ಗೊಬ್ಬರಗಳಿವೆ. ಅದೇ ರೀತಿ ಜೈವಿಕವಾಗಿ ರೋಗನಿಯಂತ್ರಕಗಳಿವೆ. ಈ ಬಗ್ಗೆ ಯಾವ ಇಲಾಖಾಧಿಕಾರಿಗಳು ಜನತೆ ಸಕಾಲಿಕವಾಗಿ ಮಾಹಿತಿ ನೀಡುತ್ತಿಲ್ಲ. ಪರಿಣಾಮ ಇವುಗಳ ಲಭ್ಯತೆಯ ಬಗ್ಗೆ ಕೃಷಿಕರಿಗೆ ಮಾಹಿತಿಯು ಲಭ್ಯವಿಲ್ಲ. ಸರಕಾರವು ಜೈವಿಕ, ಸಾವಯುವ ಗೊಬ್ಬರಗಳಿಗೆ ಸಹಾಯಧನವನ್ನು ಹೆಚ್ಚಾಗಿ ನೀಡುತ್ತಿಲ್ಲ. ಈ ಹತ್ತು ಹಲವು ಕಾರಣಗಳಿಂದಾಗಿ ಕೃಷಿಕರು ನಿಯಮಿತವಾಗಿ ರಾಸಾಯನಿಕ ಗೊಬ್ಬರ ಕೀಟನಾಶಕಗಳನ್ನು ಮಿತಿ ಮೀರಿ ಬಳಸುತ್ತಿರುವರು. ಪರಿಣಾಮ ಪರಿಸರ ಅಸಮತೋಲನವು ಕಾಣಬರುತ್ತಿದೆ. ಇದು ಪಾರಿಸಾರಿಕ ಜೀವಿಗಳ ನಾಶಕ್ಕೆ , ಮಣ್ಣು, ನೀರು, ಆಹಾರಗಳ ಕಲುಶಿತಕ್ಕೆ ಕಾರಣವಾಗಿದೆ. ಪರಿಸರವೆಂದು ಹಾಡಿ ಹೊಗಳುವವರು ಈ ಬಗ್ಗೆ ಚಕಾರವೆತ್ತದಿರುವುದು ವಿಷಾದನೀಯ ಅಂಶ. 

 ಸರಕಾರದಿಂದಲೇ ಮರಗಳ ವಿನಾಶ ?!
ಕೊಡಗಿನಲ್ಲಿ ಕೆಲವು ವರ್ಷಗಳ ಹಿಂದೆ ಬಿರುನಾಣಿ, ಚೇಲಾವರ, ಕಕ್ಕಬೆ, ಯವಕಪಾಡಿ, ನಾಲಡಿ, ಅಯ್ಯಂಗೇರಿ ಸೇರಿದಂತೆ ವಿವಿಧೆಡೆ ಬೃಹತ್ ಪ್ರಮಾಣದ ಮರಗಳ ಲೂಟಿಯಾಗಿತ್ತು. ಈ ಬಗ್ಗೆ 1980-90 ದಶಕದಲ್ಲಿ ಲೋಕಸಭೆಯಲ್ಲೂ ಚಚರ್ೆಯಾಗಿತ್ತು. ಇತ್ತೀಚೆಗೆ ಹೈಟೆನ್ಷನ್ ವಿದ್ಯುತ್ ಲೈನ್ ನೆಪದಲ್ಲಿ ಅದೂ ಅಭಯಾರಣ್ಯದಲ್ಲಿದ್ದ ಸಾವಿರಾರು ಹೆಮ್ಮರಗಳು, ಲಕ್ಷಾಂತರ ಮರಗಿಡಗಳು ಧರೆಗೆ ಉರುಳಿದವು.  ಅಭಯಾರಣ್ಯದಲ್ಲಿ ಮರಗಳಿಗೆ ಅಭಯವಿಲ್ಲದಾಯಿತು.  ಇರುವ  ಕಿರು ರಸ್ತೆಯನ್ನೇ  ಸಕಾಲಿಕವಾಗಿ ದುರಸ್ತಿ ಮಾಡಲು ಆಗುತ್ತಿಲ್ಲ.  ಅಂತಹದ್ದರಲ್ಲಿ ಆ  ಇಲಾಖೆಯು ಹೆದ್ದಾರಿ ವಿಸ್ತರಣೆಯ ನೆಪದಲ್ಲಿ ಶತಮಾನದಷ್ಟು ಪುರಾತನ  ಸಾವಿರಾರು ಹೆಮ್ಮರಗಳನ್ನು ಅನಗತ್ಯವಾಗಿ ಕಡಿದು ಉರುಳಿಸಿತ್ತು.  ಆದರೂ, ರಸ್ತೆ ವಿಸ್ತರಣೆ ಆಗಲೇ ಇಲ್ಲ !  ಈ ಮರಗಳು ಕೇರಳಕ್ಕೆ ಸಾಗಾಟವಾಯಿತು.  ಅದೇ ವೀರಾಜಪೇಟೆಯಿಂದ ಮಡಿಕೇರಿಗೆ ಸಾಗುವ ವಿದ್ಯುತ್ ಲೈನ್ ದಶಕಗಳು ಕಳೆದರೂ ಇನ್ನೂ ಪೂರ್ಣಗೊಳ್ಳದಿರಲು ಅರಣ್ಯ ಇಲಾಖೆಯ ದ್ವಿಮುಖ ಧೋರಣೆಯೇ ಪ್ರಮುಖ ಕಾರಣ ! ತನ್ನ ಜಮೀನಿನಲ್ಲಿ ಬೆಳೆದ ಮರಗಳನ್ನು ತನ್ನ ಉಪಯೋಗಕ್ಕೆ ಬಳಸಲು  ಅನುಮತಿ ನೀಡಲು ಹಿಂದೇಟು ಹಾಕುವ ಇಲಾಖೆ, ಸರಕಾರ, ಜಿಲ್ಲಾಡಳಿತ ಅಭಯಾರಣ್ಯಗಳಲ್ಲಿ, ರಸ್ತೆ ಬದಿಯ ಮರಗಳನ್ನು ಕಡಿಯುವ ಬಗ್ಗೆ ತನ್ನ ಸಹಮತ ವ್ಯಕ್ತಪಡಿಸಿತ್ತು. ಇದು ಆ ಇಲಾಖೆಯ ಕುಟಿಲ ನೀತಿಗೆ ತಾಜಾ ಉದಾಹರಣೆ .  ಆದರೆ, ಇತ್ತೀಚೆಗೆ ಬೆಂಗಳೂರಿನ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ  ಖಾಸಗಿ ಟಿ.ವಿ ವಾಹಿನಿಯ  ಸಂದರ್ಶನದಲ್ಲಿ ಕೊಡಗಿನಲ್ಲಿ 50 ಸಾವಿರಕ್ಕೂ ಅಧಿಕ ಮರಗಳು ಸ್ಥಳೀಯರಿಂದ ನಾಶವಾಗಿವೆ ಎಂಬ ಬೇಜವ್ಧಾರಿಯುತವಾಗಿ ಆರೋಪಿಸಿದ್ದರು. ಈ ಬಗ್ಗೆ ಯಾರೂ ಸೊಲ್ಲೆತ್ತಲಿಲ್ಲ !
ಅರಣ್ಯ ಇಲಾಖೆಯ ವತಿಯಿಂದ ಬೆಳೆಸಲಾಗುವ ಕೇವಲ ಎರಡು ಸಸ್ಯಕ್ಷೇತ್ರಗಳಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸಿ ರೈತರಿಗೆ ವಿತರಿಸಲಾಗುತ್ತಿದೆ. ಇಂತಹ ಹಲವಾರು ನರ್ಸರಿಗಳು ಕೊಡಗಿನಲ್ಲಿವೆ. ಆದರೂ, ಕೆಲವರು ಕೊಡಗಿನಲ್ಲಿ ಮರಗಳನ್ನು ಕಡಿಯುತ್ತಿರುವ ಬಗ್ಗೆ, ಮಾತ್ರ ಕೆಲವರು ಉಲ್ಲೇಖಿಸುತ್ತಿರುವುದು ಖಂಡನೀಯ.

ಲಕ್ಷಾಂತರ ಬಟರ್ಪ್ರೂಟ್ ಗಿಡಗಳು
ನಾಲ್ಕಾರು ವರ್ಷಗಳಿಂದ ಬಟರ್ಪ್ರೂಟ್ಗೆ ವಿಪರೀತ ಬೇಡಿಕೆ ಏರಿದೆ. ಬಹುತೇಕ ಕೃಷಿಕರು ಸುಲಭದಲ್ಲಿ ಹಣ ಗಳಿಸಲು ಬಟರ್ಪ್ರೂಟ್ ಹಣ್ಣಿನ ಗಿಡಗಳನ್ನು ಎಲ್ಲಾ ಕಡೆ ನೆಡುತ್ತಿದ್ದಾರೆ. ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಆವರಣದ ಸಸ್ಯಕ್ಷೇತ್ರದಲ್ಲಿಯೇ ಸಾವಿರಾರು ಗಿಡಗಳು ಮಾರಾಟವಾಗುತ್ತಿವೆ. ಸಾವಿರಾರು ಖಾಸಗಿ ಸಸ್ಯಕ್ಷೇತ್ರಗಳು ಸಹಾ ಈ ಗಿಡಗಳನ್ನು ಬೆಳೆದು ಜಿಲ್ಲೆಯ ಬೆಳೆಗಾರರಿಗೆ ಮಾರಾಟ ಮಾಡುತ್ತಿವೆ. ತಮಿಳುನಾಡಿನ ತಾಂಡಿಗುಡಿ ಎಂಬಲ್ಲಿಂದಲೂ ಲಕ್ಷಾಂತರ ಸಸಿಗಳು ಕೊಡಗಿಗೆ ಪ್ರತೀವರ್ಷವೂ ಬರುತ್ತಿದೆ. ಇಲ್ಲಿನ ಕೃಷಿಕರು ಲಕ್ಷಾಂತರ ಗಿಡಗಳನ್ನು ನೆಡುತ್ತಿರುವರು. ಆದರೂ, ಕೆಲವರು ಕೊಡಗಿನಲ್ಲಿ ಪರಿಸರ ನಾಶವಾಗಿದೆ. ಕಾಡು ನಾಶವಾಗಿದೆ. ಮರಗಳನ್ನು ಬೆಳೆಯುತ್ತಿಲ್ಲ ಎಂದು ಜನತೆಗೆ ತಪ್ಪು ಮಾಹಿತಿ ನೀಡಲು ಶ್ರಮಿಸುತ್ತಿದ್ದಾರೆ ! ? ಇವರಿಗೆ ಲಕ್ಷಾಂತರ ಗಿಡಗಳನ್ನು ನೆಡುತ್ತಿರುವುದು ಕಾಣದಿರುವುದನ್ನು ಜಾಣ ಕುರುಡು ಎನ್ನಬಹುದೇನೋ !?

ಅವೈಜ್ಞಾನಿಕ ಹೆದ್ದಾರಿ ವಿಸ್ತರಣೆ
ಕುಶಾಲನಗರದಿಂದ ಸಂಪಾಜೆಯವರೆಗೆ ಜಿಲ್ಲೆಯಲ್ಲಿ ಸಾಗುವ ಹೆದ್ಧಾರಿಯು ಬಹುತೇಕ ಕಡೆ ಕಡಿದಾದ ಬೆಟ್ಟದ ಅಂಚಿನಲ್ಲಿಯೇ ಸಾಗುತ್ತದೆ. ಇದು ಕೆಲವು ವರ್ಷಗಳ ಹಿಂದೆ ತೀರಾ ಕಿರಿದಾಗಿತ್ತು. ಈ ಹೆದ್ದಾರಿಯನ್ನು ಬೆಟ್ಟ ಗುಡ್ಡಗಳಿಲ್ಲದ, ಅಥವಾ ಕಡಿಮೆ ಬೆಟ್ಟಗಳಿರುವ  ಕಡೆ ಬದಲಾಯಿಸುವ ಹಲವಾರು ಅವಕಾಶಗಳಿದ್ದವು. (ಈಗಲೂ ಇವೆ.)ಮಡಿಕೇರಿಯನ್ನು ಸಂಪಕರ್ಿಸದೇ ಬೇರೇ ಕಡೆ  ರಸ್ತೆ ಮಾಡಬಹುದಿತ್ತು. ಅದನ್ನು ಸರಕಾರ, ಜನಪ್ರತಿನಿಧಿಗಳು, ಅಧಿಕಾರಿವರ್ಗ  ಕಡೆಗಣಿಸಿತ್ತು. ಪಯರ್ಾಯ ಮಾರ್ಗಗಳತ್ತ  ಚಿಂತನ-ಮಂಥನ ನಡೆಸಲೇ ಇಲ್ಲ. ಗುಡ್ಡಗಳನ್ನು ಕತ್ತರಿಸುವ ಮುನ್ನಾ ಭೂವಿಜ್ಞಾನಿಗಳ, ಸ್ಥಳೀಯರ  ಅಭಿಪ್ರಾಯಗಳನ್ನು ಕ್ರೋಡಿಕರಣ ಮಾಡಲೇ ಇಲ್ಲ.  ಗುಡ್ಡ ಬೆಟ್ಟವನ್ನು ಮನಸೋ ಇಚ್ಛೇ ಅವೈಜ್ಞಾನಿಕವಾಗಿ ಕತ್ತರಿಸಿ, ಹೆದ್ದಾರಿಯನ್ನು ಯಂತ್ರೋಪಕರಣ ಬಳಸಿ ವಿಸ್ತರಿಸಿತ್ತು. ಮಳೆ ಹೆಚ್ಚಾದಲ್ಲಿ ಪರಿಸ್ಥಿತಿ ಏನಾಗಬಹುದು ಎಂಬ ಚಿಂತನೆ ಯಾರತ್ತಲೂ ಸುಳಿಯಲೇ ಇಲ್ಲ. ! ಗಂಡಾಗುಂಡಿ ಮಾಡಿಯಾದರೂ, ಗಡಿಗೆ ತುಪ್ಪ ತಿನ್ನಬೇಕು ಎಂಬ ಆತುರತೆ ಕೆಲವರಲ್ಲಿ ಇರುವಂತೆ ಭಾಸವಾಗುತ್ತಿತ್ತು. ಅದರ ಪ್ರತಿಫಲ ಇಂದು ಕಾಣುವಂತಾಗಿದೆ. 

ಅಧಿಕ ವಾಹನಗಳ ದಟ್ಟಣೆ
ಈ ರಸ್ತೆಯು ಭಾರೀ ವಾಹನಗಳ ಭಾರವನ್ನು ತಡೆಯಬಹುದೇ ಎಂದೂ ವೈಜ್ಞಾನಿಕವಾಗಿ ಅಂದಾಜಿಸಲಿಲ್ಲ. !   ಹಲವಾರು ವರ್ಷಗಳಿಂದ ನಿರಂತರವಾಗಿ ಪದೇ ಪದೇ ಚಾಮರ್ಾಡಿಘಾಟ್ನ ರಸ್ತೆಗಳು ಮುಚ್ಚಲ್ಪಡುತ್ತಿದೆ. ಆ ಹೆದ್ದಾರಿಗಾಗಿ ಸಾಗಬೇಕಾದ ಭಾರೀ ವಾಹನಗಳು ಕೊಡಗಿಗಾಗಿ ಸಾಗುತ್ತವೆ. ವಾಹನಗಳ ದಟ್ಟಣೆಯು ಕೆಲವು ರಸ್ತೆಗಳಿಗೆ ಮಾತ್ರ ಸೀಮಿತವಾಗುತ್ತವೆ. ಇದರ ಒತ್ತಡ ತಡೆಯಲು ಕೊಡಗಿನ ರಸ್ತೆಗಳಿಗೆ ಸಾಧ್ಯವಾಗಲಿಲ್ಲ. ಇದು ರಸ್ತೆಯ ಬದಿಯ ಗುಡ್ಡ ಬೆಟ್ಟಗಳು ಕುಸಿಯಲು ಮೂಲ ಕಾರಣವಾಗಿರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. !  ಈ ರಸ್ತೆಗಾಗಿ ಸಾಗುವ ಅಧಿಕ ಭಾರ ಹೊತ್ತ ವಾಹನಗಳ ಓಡಾಟವನ್ನು ಇಲಾಖಾಧಿಕಾರಿಗಳು ನಿರ್ಬಂಧಿಸಲೇ ಇಲ್ಲ ! ?

ತಡೆಗೋಡೆಗಳೇ ಇಲ್ಲ !
ಈ ಭಾಗದಲ್ಲಿ ಎಲ್ಲಿಯೂ, ಮಣ್ಣು ತೆಗೆದ ಮತ್ತು ಹಾಕಿದ ಕಡೆಗಳಲ್ಲಿ ತಡೆಗೋಡೆ, ಆಧಾರ ಗೋಡೆಗಳನ್ನು ನಿಮರ್ಿಸುವ ಗೊಡವೆಗೆ ಹೋಗಲಿಲ್ಲ !  ಕೆಲವು ಕಡೆ ಕಬ್ಬಿಣದ ಪಟ್ಟಿಯನ್ನು ರಸ್ತೆಯ ಅಂಚಿಗೆ ನೆಪ ಮಾತ್ರಕ್ಕೆ  ಅಳವಡಿಸಲಾಗಿದೆ.  ಬೆಟ್ಟವನ್ನು 45 ಡಿಗ್ರಿ ಕೋನಕ್ಕಿಂತ ಕಡಿಮೆ ವಾರೆಯಾಗಿ ತೆಗೆಯುವ ಬದಲು ನೇರವಾಗಿ ಕತ್ತರಿಸಲಾಯಿತು. ತೀರಾ ಕಿರಿದಾದ ಚರಂಡಿಯನ್ನು ನಿಮರ್ಿಸಲಾಯಿತು. ಈ ರಸ್ತೆಯ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕೊಚ್ಚಿಹೋಯಿತು. ಕೆಲವೆಡೆ ಕಿಲೋ ಮೀಟರ್ ದೂರಕ್ಕೆ ಮೋರಿ ನಿಮರ್ಿಸಲಾಯಿತು ! ರಸ್ತೆ ವಿಸ್ತರಣೆ ಮಾಡಿದ ಮಣ್ಣನ್ನು ಗುತ್ತಿಗೆದಾರರಿಗೆ ಅನುಕೂಲವಾಗುವ ಕಡೆ ಸುರಿಯಲಾಯಿತು. ಅಂತಹ ಕಡೆ ಹೆಚ್ಚಾಗಿ ಭೂಕುಸಿತ ಸಂಭವಿಸಿರುವ ದೃಶ್ಯಾವಳಿಗಳನ್ನು ನಾವಿಂದು ಕಾಣುತ್ತಿರುವೆವು.

ಹುಲ್ಲುಗಾವಲು ನಾಶ
ಕೆಲವು ಸ್ಥಳೀಯರು, ಪ್ರವಾಸಿಗರೊಡಗೂಡಿ ಜಿಲ್ಲೆಯ ಹಲವು ಕಡೆ ಹುಲುಸಾಗಿ ಬೆಳೆದಿದ್ದ ಹುಲ್ಲುಗಾವಲಿಗೆ ಬೇಸಿಗೆಯಲ್ಲಿ ಬೆಂಕಿ ಹಾಕಿದ್ದರು. ಇದು ತಡಿಯಂಡ ಮೋಳ್, ಇಗ್ಗುತಪ್ಪ ಬೆಟ್ಟ, ಕೋಟೆಬೆಟ್ಟ ಮುಂತಾದ ಕಡೆ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಹಲವರು  ಬೆಟ್ಟಗಳಿಗೆ ಬೆಂಕಿ ಇಟ್ಟು ಮೋಜುಮಸ್ತಿ ಮಾಡಿದರು. ಮಡಿಕೇರಿ ನಗರ ವ್ಯಾಪ್ತಿಯ ಹಲವು ಕಡೆ  ಇಂತಹ ಕುಚೇಷ್ಟೆಗೆ ಕುರುಚಲು ಕಾಡು, ತರಗೆಲೆ, ಜರಿಗಿಡಗಳು ಭಸ್ಮವಾಗುತ್ತಿವೆ.  ಇದು ನೀರಿನ ಇಂಗುವಿಕೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿತು.  ಮೇಲ್ಮುಖವಾಗಿ ತನ್ನ ಹರಿವಿನ ವೇಗ ಹೆಚ್ಚಲು ಕಾರಣವಾಯಿತು. ಇದರ ಪರಿಣಾಮ ಬೆಟ್ಟದಂಚು ಕ್ರಮೇಣ ಕುಸಿಯಲು ಪರೋಕ್ಷ ಕಾರಣವಾಯಿತು.

 ಅಕ್ರಮ ಮರಳು ಗಣಿಗಾರಿಕೆ
ಮರಳು ಗಣಿಗಾರಿಕೆ ಕೊಡಗಿನ ಪ್ರಮುಖ ಸಮಸ್ಯೆಗಳಲ್ಲಿ ಪ್ರಧಾನ ಪಾತ್ರ ವಹಿಸಿದೆ.  ಇದು ಹಲವಾರು ದಶಕಗಳಿಂದ ಉಲ್ಭಣಿಸುತ್ತಿರುವ ಸಮಸ್ಯೆ ! ಕೆಲವರಿಗೆ ಮಾತ್ರ ಆಯ್ದ ಸ್ಥಳಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತದೆ. ಅದರ ಪ್ರಕಾರ ಮರಳನ್ನು ನಿಗದಿತ ಪ್ರದೇಶದಲ್ಲಿ ಸಂಗ್ರಹಿಸಿ ಬೇಕಾದವರಿಗೆ ಮಾರಾಟ ಮಾಡಬೇಕಿದೆ. ಆದರೆ...
ಈ ಪ್ರಕ್ರಿಯೆಯು ಕಾನೂನು ಬಾಹಿರವಾಗಿ ನಡೆಯುತ್ತಿದೆ. ಜನಸಾಮಾನ್ಯರಿಗೆ ಮರಳು ಸಿಗುತ್ತಿಲ್ಲ. ಪರಿಣಾಮ ಎಲ್ಲೆಲ್ಲೂ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತೀವರ್ಷವೂ ಒಂದೆರಡು ಮಾನವ ಜೀವಗಳನ್ನು ಬಲಿ ಪಡೆಯುತ್ತದೆ. ಇದನ್ನು ಸರಕಾರ ನಿಯಂತ್ರಿಸುತ್ತಿಲ್ಲ.  ಯಾಂತ್ರಿಕೃತವಾಗಿ, ಕಾನೂನು ಬಾಹಿರವಾಗಿ ಮರಳು ತೆಗೆಯುತ್ತಿರುವುದರಿಂದ ನದಿಯಂಚು ಕುಸಿಯುತ್ತಿದೆ. ಸಮೀಪದ ಬೆಟ್ಟ-ಗುಡ್ಡಗಳು ಕುಸಿದು ನದಿ ಸೇರುತ್ತಿದೆ.   ನದಿಯ ಆಳ ಪ್ರತೀವರ್ಷವೂ ಹೆಚ್ಚಾಗುತ್ತಿದೆ. ಮರಳಿನ ಸಮಸ್ಯೆಯ ಪರಿಣಾಮ ಬಡವರು ಮನೆಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಸರಕಾರದ ವಸತಿ ಯೋಜನೆಗಳು ಸಕಾಲಿಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇವೆಲ್ಲವೂ ಮೂಗಿನಡಿಯಲ್ಲಿಯೇ ನಡೆಯುತ್ತಿದ್ದರೂ, ಇಲಾಖಾಧಿಕಾರಿಗಳು ಮಾಮೂಲಿ ಪಡೆದು ಮೌನಕ್ಕೆ ಶರಣಾಗಿರುವರು. ಮಿನರಲ್ ಸ್ಯಾಂಡ್ಗೂ  ಅಕ್ರಮ ಮರಳಿಗಿಂತಲೂ ಅಧಿಕ ಬೆಲೆ ! ?  ಇಲಾಖಾಧಿಕಾರಿ-ಸಿಬ್ಬಂದಿಗಳು ದಂಧೆಕೋರರನ್ನು ಬಿಟ್ಟು ಬಡವರಿಂದಲೂ ಎಂಜಿಲು ಕಾಸು ಕಸಿಯುತ್ತಿದ್ದಾರೆ ? ಕೆಲವು ಕಡೆ ಅರಣ್ಯ ಪ್ರದೇಶದಲ್ಲಿಯೂ ಕಲ್ಲುಗಣಿಗಾರಿಕೆ ನಡೆಯುತ್ತಿದೆ !

ಹವಮಾನ ಇಲಾಖೆಯ ಸವಿನಿದ್ದೆ ! ?
 ಕೊಡಗು ಜಿಲ್ಲೆಯಲ್ಲಿ ಬಹುಶ್ಯ ಅಗುಂಬೆಗಿಂತಲೂ ಅಧಿಕ ಮಳೆ ಸುರಿಯುತ್ತಿದೆ. ಜಿಲ್ಲೆಯ  ಬಿರುನಾಣಿ,  ತಲೆಪೂಕೊಳ, ಚೇಲಾವರ, ನಾಲಡಿ, ತಲಕಾವೇರಿ, ಕರ್ತಕುಂದ್(ಕಪ್ಪುಬೆಟ್ಟ) ಪುಷ್ಪಗಿರಿಯ ತಪ್ಪಲು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತದೆ. ಸರಾಸರಿ ಸುಮಾರು ವಾಷರ್ಿಕ 300 ಇಂಚು ! (ಆಸುಪಾಸು).  ಈ ವಿಚಾರ ಬಹುತೇಕ ಮಂದಿಗೆ ತಿಳಿದಿಲ್ಲ. ಇದು ಸರಕಾರಿ ದಾಖಲೆಗಳಲ್ಲಿ  ಇನ್ನೂ ನಮೂದಿತವಾಗಿಲ್ಲ. ಆಗುಂಬೆಗಿಂತಲೂ ಅಧಿಕ ಮಳೆ ಕೊಡಗಿನಲ್ಲಿ ಬೀಳುತ್ತಿದೆ. ಆದರೂ, ಅದು ಸ್ವಾತಂತ್ರ್ಯಾ ನಂತರವೂ ದಾಖಲೀಕರಣಗೊಂಡಿಲ್ಲ. ಎಂತಹಾ ನಾಚಿಕೆಗೇಡು ? !  ಇನ್ನೂ ಬ್ರಿಟಿಷರ ಕಾಲದಲ್ಲಿ ಮಾಡಲಾದ ದಾಖಲೆಯನ್ನೇ ನಾವು ಅಪ್ಪಿ-ಒಪ್ಪಿಕೊಂಡಿದ್ದೇವೆ. ಮಳೆ ಕಡಿಮೆಯಾಗುತ್ತಿದೆ ಎಂದೂ ಕೆಲವರು ಬೊಬ್ಬಿರಿಯುತ್ತಿದ್ದಾರೆ ! ತಮಿಳುನಾಡಿನಿಂದ  ಕೊಡಗಿಗೆ ಹವಾಮಾನ ಸಂಬಂಧಿತ ವರದಿ ಪ್ರತಿ 2-3 ದಿನಗಳಿಗೊಮ್ಮೆ ಮೊಬೈಲ್ ಫೋನ್ಗಳಿಗೆ ಬರುತ್ತಿದೆ. ಆದರೆ, ಕನರ್ಾಟಕದಲ್ಲಿ.. ! ಶತಮಾನದ ಮಹಾಮಳೆಯ ಮುನ್ಸೂಚನೆ ನೀಡದ ಹವಾಮಾನ ಇಲಾಖೆಯ 'ಶಿಶಿರ ನಿದ್ದೆಯ' ಬಗ್ಗೆ ಏನು ಹೇಳಬೇಕು ? ಇಂತಹ ಇಲಾಖೆಯಿಂದ  ಶ್ರೀಸಾಮಾನ್ಯನಿಗೆ, ರೈತನಿಗೆ ದೊರಕುವ ಲಾಭವಾದರೂ ಏನು ಎಂಬುವುದನ್ನು  ಎಲ್ಲರೂ ಪ್ರಶ್ನಿಸಬೇಕಿದೆ.

 ನಾಮಕಾವಸ್ಥೆಗಾಗಿ ಮಳೆಮಾಪನ !?
ಕೆಲವು ಕಡೆ ಡಿಜಿಟಲ್ ಮಳೆಮಾಪನ ಕೇಂದ್ರಗಳನ್ನು ಕೆಲವು ಏಜೆನ್ಸಿಗಳವರು ಸ್ಥಾಪಿಸಿದ್ದಾರೆ. ಆದರೆ, ಅವುಗಳು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇನ್ನೂ ಸ್ಥಾಪನೆಯಾಗಿಯೇ ಇಲ್ಲ ! ಹೀಗಾದಲ್ಲಿ ಮಳೆಯ ನಿಖರ ಅಂಕಿ-ಅಂಶಗಳು ದೊರೆಯುವುದಾರೂ ಹೇಗೆ ? ಕೆಲವಡೆ ನಾಮಾಕಾವಸ್ಥೆಗಾಗಿ ಸ್ಥಾಪನೆಯಾಗಿವೆ. (ಉದಾಹರಣೆಗಾಗಿ: ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಹುಣಸೆಮರದ ಕೆಳಗೆ ಡಿಜಿಟಲ್ ಮಳೆ ಮಾಪನ ಕೇಂದ್ರವನ್ನು ಸ್ಥಾಪಿಸಲಾಗಿದೆ !)
ಈ ವರ್ಷ ಮಳೆಯು ಕೇವಲ ಒಂದರೆಡು ದಿನಗಳಲ್ಲಿ ಭಾರೀ ಮಳೆ, ಜಲಪ್ರಳಯ, ಮೇಘಸ್ಫೋಟ ಸಂಭವಿಸಿತ್ತು. ನಮ್ಮಲ್ಲಿ ಅತ್ಯಾಧುನಿಕ ವಿಶೇಷ ವ್ಯವಸ್ಥೆಗಳು ಇದ್ದರೂ,  ವಿಜ್ಞಾನ ಮುಂದುವರಿದಿದ್ದರೂ, ಯಾವ ಇಲಾಖೆಯು ಈ ಕುರಿತು ಮುನ್ನೆಚ್ಚರಿಕೆ ನೀಡಲೇ ಇಲ್ಲ. ಹಾಗಾದಲ್ಲಿ ಹವಾಮಾನ ಇಲಾಖೆಯು ಇರುವುದಾದರೂ ಏತಕ್ಕೆ !?  ಇಂತಹ ಆಧುನಿಕ, ವೈಜ್ಞಾನಿಕ ವ್ಯವಸ್ಥೆಗಳಿಂದ ಜನತೆ ಆಗುವ ಲಾಭವಾದರೂ ಏನು ?

ಮಳೆಯ ಮರುಕಳಿಕೆ ?
ಹಿರಿಯರ ಮಾಹಿತಿಯ ಪ್ರಕಾರ, 1924, 1964ರ ವರ್ಷ ಕೊಡಗಿನಲ್ಲಿ ಮಹಾ ಮಳೆ ಸುರಿದಿತ್ತು. ಅದೂ ಸರಾಸರಿ 40 ವರ್ಷದ ಆಸುಪಾಸಿನಲ್ಲಿ. ಅದನ್ನು ಕೆಲವರು ಕಳೆದ  ಕೆಲ ವರ್ಷಗಳಿಂದ ನಿರೀಕ್ಷಿಸಿದ್ದರು. ಆದರೆ, ಅದನ್ನು ಎದುರಿಸುವ ಯಾವ ಸಿದ್ಧತೆಯನ್ನು ಪ್ರಕೃತಿ ವಿಕೋಪ ಕೇಂದ್ರದ ಅಧಿಕಾರಿಗಳು ಮಾಡಲೇ ಇಲ್ಲ. ಈ ಬಗ್ಗೆ ಮನ್ಸೂಚನೆ ನೀಡಿದ್ದಲ್ಲಿ ಕನಿಷ್ಠ ಪಕ್ಷ ಪ್ರಾಣ ಹಾನಿಯನ್ನಾದರೂ ಕಡಿಮೆಗೊಳಿಸಬಹುದಿತ್ತು. 

ಕಸ್ತೂರಿರಂಗನ್ ವರದಿ
"ಕೋಟೆ ಕೊಳ್ಳೆ ಹೋದ ಬಳಿಕ ದಿಡ್ಡಿ ಬಾಗಿಲು ಹಾಕಿದರು "ಎಂಬಂತೆ ಎಲ್ಲವೂ ಮುಗಿದ ಬಳಿಕ ಈ ವರದಿಗಳ ವಿಚಾರ ಮಾಧ್ಯಮಗಳಲ್ಲಿ ಅನಗತ್ಯವಾಗಿ ಪ್ರಸ್ತಾಪವಾಗುತ್ತಿದೆ. ಹಲವು ಹೊರ ಜಿಲ್ಲೆ, ರಾಜ್ಯದ ಮಾಧ್ಯಮಗಳವರು ಯಾರದ್ದೋ  ಆಮಿಷಗಳಿಗೆ ಒಳಗಾಗಿ ಇದನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದೆನಿಸುತ್ತಿದೆ. ಅದರಲ್ಲಿ ಬಹುತೇಕ ಕಪೋಲಕಲ್ಪಿತ ಸುದ್ದಿಗಳು ! ಯಾವುದೇ ವರದಿಗಳು ಜಾರಿಯಾಗಬೇಕಾದಲ್ಲಿ ಅದರ ವಿವರ-ವಿಚಾರ ಜನತೆಗೆ ಸುಸ್ಪಷ್ಟವಾಗಿ ಜನತೆಗೆ ತಿಳಿದಿರಬೇಕು. ಅದನ್ನು ಸ್ಥಳೀಯ ಭಾಷೆಗಳಲ್ಲಿ ಸ್ಥಳೀಯ ಮಾಧ್ಯಮಗಳ ಮೂಲಕ ಜನತೆಗೆ ತಲುಪಿಸಬೇಕು.  ಆದರೆ, ಹಲವರು ಈ ಸಂದರ್ಭದಲ್ಲಿ ಪ್ರಸ್ತಾಪಿಸುತ್ತಿರುವ ಈ ಎರಡು ವರದಿಗಳ ವಿಚಾರ ಎಷ್ಟು ಮಂದಿಗೆ ತಿಳಿದಿದೆ ! ? ಜನತೆಯನ್ನು ಕತ್ತಲಲ್ಲಿಟ್ಟು ಇಂತಹ ವರದಿಗಳನ್ನು ಪ್ರಸ್ತಾಪಿಸುತ್ತಿರುವುದಾರೂ ಏತಕ್ಕೆ ? ಈ ವರದಿಗಳ ಜಾರಿಯಿಂದ ಜನತೆಗಾಗುವ ಲಾಭಗಳ ಬಗ್ಗೆ ವಿವರಣೆಯನ್ನಾದರೂ ನೀಡಬಹುದಲ್ಲಾ ?

ಹೀಗೆ ಸಮಸ್ಯೆಗಳ ಸರಪಳಿಯು ಸಾಗುತ್ತಿದೆ. ಇದರಲ್ಲಿ ಆಡಳಿತಶಾಹಿಗಳ ನಿರ್ಲಕ್ಷ್ಯತನ, ಅಧಿಕಾರಿ, ಜನಪ್ರತಿನಿಧಿಗಳ, ಜನತೆಯ ಬೇಜವಾಬ್ಧಾರಿ ಎದ್ದು ಕಾಣುತ್ತದೆ. ಆದರೂ, ಹಲವು ಮಾಧ್ಯಮಗಳು ಎಲ್ಲವೂ ಜನತೆಯದ್ದೇ ತಪ್ಪು ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಗುತ್ತದೆ. ಇದು ನಾಚಿಕೆಗೇಡಿನ ವಿಚಾರ.







 






ಭಾನುವಾರ, ಆಗಸ್ಟ್ 5, 2018



ರಾಸಾಯನಿಕ ರಹಿತ ರೋಬಸ್ಟಾ ಕಾಂಡ ಕೊರಕದ ಹತೋಟಿ ?



ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ರೋಬಸ್ಟಾ ಕಾಫಿಗೆ ಕಾಂಡ ಕೊರಕದ ಬಾಧೆ ಕಾಣಿಸಿಕೊಂಡಿದೆ. ಇದನ್ನು ರಾಸಾಯನಿಕ ಬಳಕೆ ರಹಿತವಾಗಿ ಅತ್ಯಂತ ಸುಲಭವಾಗಿ ಹತೋಟಿ ಮಾಡಬಹುದು. 1. ಅರೇಬಿಕಾ ತೋಟಗಳಲ್ಲಿ ಕಾಫಿಯ ಕಾಂಡ ಕೊರಕಗಳನ್ನು ನಿಯಂತ್ರಿಸಲು ರೋಗ- ಕೀಟಬಾಧೆ ಗಿಡಗಳನ್ನು ಕಿತ್ತು ಸುಡಬೇಕು. ಕಾಫಿ ತೋಟದೊಳಗೆ ಓಡಾಡುತ್ತಿರುವವರಿಗೆ , ನುರಿತ ಕಾಮರ್ಿಕರು, ಬೆಳೆಗಾರರು ಇಂತಹ ಗಿಡಗಳನ್ನು ಅತ್ಯಂತ ಸುಲಭವಾಗಿ ಪತ್ತೆ ಹಚ್ಚಬಲ್ಲರು. ರೋಬಾಸ್ಟಾ ಕಾಫಿ ತೋಟ ಹೊಂದರುವ ರೈತರು ಈ ರೋಗ ಬಾಧೆಯು ತಮ್ಮ ತೋಟದಲ್ಲಿ ಇದೆಯೋ ಎಂದು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. 2. ಕಳೆಗುಂದಿದ, ಒಣಗುತ್ತಿರುವ, ಕಾಯಿ ಬಲಿಯದ ಗಿಡಗಳು ರೋಗಪೀಡಿತವಾದವು ಎಂದು ಪರಿಗಣಿಸಬಹುದು. ಇಂತಹ ಗಿಡಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಕ್ಕೆ ಸಾಗಿಸಿ. ಸುಟ್ಟುಹಾಕಿ. ಅಂದು ಕಿತ್ತ ಗಿಡಗಳನ್ನು ಆಯಾ ದಿನ ಸಂಜೆಯ ವೇಳೆಗೆ ಸುಡುವುದು ಉತ್ತಮ. ತಡ ಮಾಡಿದ್ದಲ್ಲಿ ಕಾಂಡದ ಒಳಗಿರುವ ಹುಳಗಳು ಬೇರೆಡೆಗೆ ಹಾರಿ ಮತ್ತೆ ಕಾಫಿ ಗಿಡಗಳಿಗೆ ತೊಂದರೆ ಕೊಡುವ ಸಾಧ್ಯತೆ ಹೆಚ್ಚು. 3. ಅರೇಬಿಕಾ ಕಾಫಿ ತೋಟದ ಮಧ್ಯೆ ರೋಬಾಸ್ಟಾ ಗಿಡಗಳಿದ್ದಲ್ಲಿ ಈ ಹುಳಗಳ ಬಾಧೆಯು ಹೆಚ್ಚು. ಅರೇಬಿಕಾ ಕಾಫಿ ಗಿಡಗಳನ್ನು ಸಾಮಾನ್ಯವಾಗಿ ಬಾಧಿಸುವ ಕೀಟಗಳು ಆ ತೋಟದಲ್ಲಿ ಅರೇಬಿಕಾ ಗಿಡಗಳಿದ್ದಲ್ಲಿ ಅವುಗಳನ್ನೇ ಬಾಧಿಸುತ್ತವೆ. ಈ ಹಿನ್ನೆಲೆಯಲ್ಲಿ ರೋಬಾಸ್ಟಾ ಗಿಡಗಳ ಮಧ್ಯೆ ನಿರಂತರವಾಗಿ ಅರೇಬಿಕಾ ಕಾಫಿ ಬೆಳೆಯುವುದು ಸೂಕ್ತ. 4. ಈ ಕಾಂಡ ಕೊರಕ ಕೀಟಗಳು ಏಪ್ರಿಲ್ , ಮೇ, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಸಂತಾನೋತ್ಪತಿ ಮಾಡುತ್ತವೆ. ಕಾಂಡದಿಂದ ಹೊರಬರುವ ಚಿಟ್ಟೆಯನ್ನು ಹೋಲುವ ಕೀಟವು ಹಾರಾಡುತ್ತವೆ. ಈ ಸಮಯದಲ್ಲಿ ಇವುಗಳನ್ನು ಅತ್ಯಂತ ಸುಲಭವಾಗಿ ಹತೋಟಿ ಮಾಡಬಹುದಾಗಿದೆ. ಮೇಲೆ ತಿಳಿಸಿದ ತಿಂಗಳಲ್ಲಿ ಕಾಫಿ ತೋಟಗಳಲ್ಲಿ ಸೋಲಾರ್ ಕೀಟ ನಾಶಕ ಯಂತ್ರವನ್ನು ಅಳವಡಿಸಬಹುದಾಗಿದೆ. ಅಥವಾ ವಿದ್ಯುತ್ ದೀಪಗಳನ್ನು ಅಳವಡಿಸಿ, ಅದರ ಕೆಳಭಾಗದಲ್ಲಿ ನೀರಿರುವ ಬೇಸಿನ್ ಇಟ್ಟಲ್ಲಿ ಅದಕ್ಕೆ ಹುಳಗಳು ಬಂದು ಬೀಳುತ್ತವೆ. ಸೋಲಾರ್ ದೀಪಗಳನ್ನು ಬ್ಯಾಟರಿಯಿಂದ ಬಳಸುವ ಟಾಚರ್್, ರೀಚಾಜರ್್ ದೀಪಗಳನನು ಇದೇ ರೀತಿ ಬಳಸಿ ಎಲ್ಲಾ ಕೀಟಗಳನ್ನು ನಾಶ ಮಾಡಬಹುದು. 5. ಕಾಂಡ ಕೊರಕದ ಪತಂಗಗಳು ಸುಮಾರು 25- 35 ದಿನಗಳವರೆಗೆ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಮಾತ್ರ ಅವು ಕಾಂಡಗಳಿಂದ ಹೊರಬರುತ್ತವೆ. ಹೆಣ್ಣು ಕೀಟವು ಹೆಚ್ಚಾಗಿ ಬಿಸಿಲು ಬೀಳುವ ಸ್ಥಳವನ್ನು ಆರಿಸಿಕೊಂಡು ಅಲ್ಲಿ ಸುಮಾರು 20 ಮೊಟ್ಟೆಗಳನ್ನಿಟ್ಟು ಸಾಯುತ್ತವೆ. 9- 10 ದಿನಗಳಲ್ಲಿ ಮೊಟ್ಟೆ ಒಡೆದು ಹೊರಬರುವ ಲಾವರ್ಾವು ಕಾಫಿ ಗಿಡದ ಕೊಂಡ ಕೊರೆದು ಗಿಡಗಳ ಒಳ ಸೇರುತ್ತವೆ. ಒಳ ಸೇರಿದ ಕೀಟವನ್ನು ಕೊಲ್ಲುವ ಅವಕಾಶವೇ ಸಿಗದು ಎಂದು ಕೀಟ ಶಾಸ್ತ್ರಜ್ಞರು ಮಾಹಿತಿ ನೀಡಿರುವರು.

ಭಾನುವಾರ, ಜುಲೈ 22, 2018

ಸಾವಯವದ ಸಂಗ-ಖಚರ್ಿಗೆ ಭಂಗ....!

             ಸಾವಯವದ ಸಂಗ-ಖರ್ಿಗೆ ಭಂಗ....! 



                      ಸಚಿತ್ರ ಬರಹ: ಕೂಡಂಡ ರವಿ, ಹೊದ್ದೂರು. ಕೊಡಗು. 

ಸಾಕಷ್ಟು ರೈತಾಪಿ ವರ್ಗದವರು ಸಾವಿರಾರು ರೂಪಾಯಿ ಸಾಲ ಸೋಲ ಮಾಡಿ ರಾಸಾಯನಿಕ ಗೊಬ್ಬರವನ್ನು ವಿವಿಧ ಬೆಳೆಗಳಿಗೆ ಬಳಸುತ್ತಾರೆ. ಹೆಚ್ಚು ರಾಸಾಯನಿಕ ಗೊಬ್ಬರ ಸುರಿದು ಹೆಚ್ಚು ಇಳುವರಿಯನ್ನು ನಿರೀಕ್ಷಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ರೈತಾಪಿ ವರ್ಗದವರು ಕನಸು ನುಚ್ಚು ನೂರಾಗುವುದೇ ಹೆಚ್ಚು. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವವರು ಕೆಲವರು. ಅಂತಹ ಸಾಧರ ಮಾಹಿತಿ ಇಲ್ಲಿದೆ ನೋಡಿ.

 ಸಾವಯವ ಖಚರ್ು ಕಡಿಮೆ 

ಆದರೆ, ಬಿಜಾಪುರ ಬಳಿಯ ಮಹಾರಾಷ್ಟ್ರ ರಾಜ್ಯದ ಬುದ್ರಕ್ನ ಜಾಲಿಹಾಳ್ ನಿವಾಸಿ.  ಮೂಲತಃ ಆಂಧ್ರಪ್ರದೇಶದವರು.  ನಿವೃತ್ತ ವಾಯುಪಡೆಯ ಅಧಿಕಾರಿ.  ಕನ್ನಡಿಗ ರೈತ ಶ್ರೀನಿವಾಸ್ ರಾವ್ ಇದಕ್ಕೆ ಅಪವಾದ. ಇವರು ಸಾವಯುವ ಕೃಷಿಯನ್ನು ಕಳೆದ 5 ವರ್ಷಗಳಿಂದ ಮಾಡುತ್ತಿದ್ಧಾರೆ. ಕೃಷಿಗೆ ಅತ್ಯಂತ ಕಡಿಮೆ ಖಚರ್ು ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇದರಿಂದ ಲಾಭವೂ ಹೆಚ್ಚಾಗುತ್ತಿದೆಯಂತೆ ! ಇದಕ್ಕೆ ಪ್ರಮುಖ ಕಾರಣ ಖಚರ್ು ಕಡಿಮೆ.
ನಾರಾಯಣ ರೆಡ್ಡಿ ಸಲಹೆ 
ಇವರು 5 ವರ್ಷಗಳಿಂದ ಸಾವಯವ ಕೃಷಿಯತ್ತ ವಾಲಿದ್ದಾರೆ. ಮುನ್ನಾ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದರಂತೆ. ಅದರಿಂದ ಖಚರ್ು ಹೆಚ್ಚು,  ಮಣ್ಣಿನ ಮತ್ತು ಕೃಷಿ ಉತ್ಪನ್ನಗಳ ಬಳಕೆದಾರರ  ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುವುದನ್ನು ಮನಗಂಡರು. ಬಳಿಕ  ಶ್ರೀನಿವಾಸ್ ಸಾವಯವ ಪದ್ಧತಿಯಲ್ಲಿ 40 ವರ್ಷಗಳಿಂದ ಕೃಷಿ ಮಾಡುತ್ತಿರುವ ಬೆಂಗಳೂರಿನ ನಾರಾಯಣ್ ರೆಡ್ಡಿ ಅವರನ್ನು ಭೇಟಿ ಮಾಡಿದರು. ಅವರ ಆಶಯದಂತೆ, ಇವರೂ ಪ್ರಯತ್ನ ಮುಂದುವರಿಸಿದ್ದಾರೆ.

ಮಲೆನಾಡಿನ ದಿನದ ಮಳೆ - ವರ್ಷಕ್ಕೆ !
ಸುಮಾರು ಒಂದು ಏಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಹೊಂಡವನ್ನು ಇವರು ನಿಮರ್ಿಸಿಕೊಂಡಿದ್ದಾರೆ. ಇದು 22 ಅಡಿಗೂ ಅಧಿಕ ಆಳವಿದೆ. ಅದರಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.   ಕಾಡು,  ನೀರಿಲ್ಲದ ನಾಡಿನಲ್ಲಿ ಮಳೆ ತೀರಾ ಅಪೂರ್ವ, ಇಲ್ಲ ಕಡಿಮೆಯೇ. ಕೊಡಗು ಅಥವಾ ಮಲೆನಾಡು ಪ್ರದೇಶದಲ್ಲಿ ಒಂದು ದಿನಕ್ಕೆ ಬೀಳುವ ಮಳೆ ಇಲ್ಲಿ ಇಡೀ ವರ್ಷಕ್ಕೆ ಬರುತ್ತದೆಯಂತೆ !  ಇವರ ಬಳಿ ಮಳೆಮಾಪಕ ಇಲ್ಲದ ಕಾರಣ ನಿಖರವಾದ ಅಂಕಿ ಅಂಶಗಳು ಲಭ್ಯವಾಗಲಿಲ್ಲ.



ಮಿಶ್ರ ಬೆಳೆ ಪದ್ಧತಿ 
ತಮ್ಮ 18 ಏಕರೆ ಪ್ರದೇಶದಲ್ಲಿ ದಾಳಿಂಬೆ ಮತ್ತು ದ್ರಾಕ್ಷಿ ಪ್ರಮುಖ ಬೆಳೆಗಳು.  ಇವುಗಳ ಜೊತೆಗೆ ಅಲಸಂಡೆ, ಹೆಸರು, ನುಗ್ಗೆ, ಪಪ್ಪಾಯಿ, ತೊಗರಿ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿರುವರು. ಹೊಲದ ಬದುಗಳ ತುಂಬೆಲ್ಲಾ ಬೇವಿನ ಮರಗಳು ಮತ್ತು ಆನೆ ಹುಲ್ಲು. ವಿವಿಧ ಬೆಳೆಗಳಿಗೆ ಸಾವಯವ ಗೊಬ್ಬರ ಮತ್ತು ಜೀವಾಮೃತವನ್ನು ನಿರಂತರವಾಗಿ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಬರದ ಬೆಂಗಾಡಿನ ನಾಡಿನಲ್ಲಿ ಮಲೆನಾಡಿನಂತೆ ಹಸಿರು ನಳನಳಿಸುತ್ತಿದೆ.
ಕ್ರಿಮಿನಾಶಕಗಳ ಸಿಂಪಡಣೆಯೇ ಇಲ್ಲ !
ಹೊಲದಲ್ಲಿ ಕೀಟಗಳ ಹಾವಳಿ ತಡೆಗಾಗಿ 10 ಸೋಲಾರ್ ಕೀಟ ನಾಶಕ ಯಂತ್ರಗಳನ್ನು ಅಳವಡಿಸಿದ್ದಾರೆ. ಪರಿಣಾಮ ಇವರು ಯಾವುದೇ ಬೆಳೆಗಳಿಗೂ ಕೀಟನಾಶಕ ಸಿಂಪಡಣೆಯ ಶ್ರಮ, ಖಚರ್ು, ಮಣ್ಣಿನ ಆರೋಗ್ಯ ಹಾಳಾಗುವುದು ತಪ್ಪಿದೆ. 8 ಏಕರೆ ಪ್ರದೇಶದ ದ್ರಾಕ್ಷಿ ಬೆಳೆಗೆ ಕೇವಲ 4 , ಅದರಂತೆ ದಾಳಿಂಬೆ ಬೆಳೆಗೆ 4 ಸೋಲಾರ್ ಕೀಟನಾಶಕ ಯಂತ್ರಗಳನ್ನು ಬಳಸುತ್ತಿರುವರು. ಉಳಿದೆಡೆಗಳಲ್ಲಿ 2 ಸೋಲಾರ್ ಕೀಟನಾಶಕ ಯಂತ್ರಗಳಿವೆ.
ಜೀವಾಮೃತವೇ ಪ್ರಮುಖ ಆಧಾರ. 
ಇವರ ಎಲ್ಲಾ ಬೆಳೆಗಳಿಗೂ ಜೀವಾಮೃತವೇ ಪ್ರಮುಖ ಗೊಬ್ಬರ. ಕೃಷಿ ಹೊಂಡದ ಕೆಳ ಭಾಗದಲ್ಲಿ ಹೊಲದ ಮೇಲ್ಭಾಗದಲ್ಲಿ ಜೀವಾಮೃತ ತೊಟ್ಟಿ ಮತ್ತು ವಿತರಣಾ ಘಟಕವನ್ನು ನಿಮರ್ಿಸಿದ್ಧಾರೆ. ಅಲ್ಲಿಂದಲೇ ನೇರವಾಗಿ ನೀರಿನೊಡನೆ ಬೆರೆತ ಜೀವಾಮೃತವು ತೋಟದ ಮೂಲೆ ಮೂಲೆಗಳಲ್ಲಿರುವ ಗಿಡ, ಮರ, ಬಳ್ಳಿಗಳಿಗೆ ಪೂರೈಕೆಯಾಗುತ್ತದೆ. ಯಾಂತ್ರೀಕರಣದ ಮೂಲಕ ಜೀವಾಮೃತವನ್ನು ಕಲಸಲಾಗುತ್ತದೆ. ಜೀವಮೃತದ ಉಳಿಕೆಯನ್ನು ನೇರವಾಗಿ ಗೊಬ್ಬರವಾಗಿ ಪರಿವತರ್ಿಸಲು ಅನುವು ಮಾಡಲಾಗಿದೆ. ಇದರ ಪರಿಣಾಮವಾಗಿ ಒಣ ಪ್ರದೇಶವಾದ ಇಲ್ಲಿ ಹಸಿರು ನಗುನಗುತ್ತಿದೆ.
 ಕಳೆಯೇ ಗೊಬ್ಬರ
 ಇವರ ತೋಟದಲ್ಲಿ ಯಾವುದೇ ಕಳೆಯೂ ಇಲ್ಲ. ಅಂದರೇ, ಎಲ್ಲವೂ ಗೊಬ್ಬರವೇ . ಕಳೆಯನ್ನು ಗೊಬ್ಬರವಾಗಿ ಪರಿವತರ್ಿಸುವ ಕಲೆ ಇವರಿಗೆ ಸಿದ್ಧಿಸಿದೆ. ಅವರ ತೋಟದಲ್ಲಿ ಕೆಲವು ಪಾಥರ್ೆನಿಯಂ ಗಿಡಗಳಿದ್ದವು. ಅವನ್ನು ಕಂಡು ಇದು ಕಳೆಯಲ್ಲವೇ ? ಏಕೆ ಕೀಳುತ್ತಿಲ್ಲ ನೀವು ? ಎಂದೆ. ಅದೂ ಗೊಬ್ಬರವೇ. ವಿವಿಧ ಗಿಡ ಮರಗಳಿಂದ ಮಣ್ಣು ಹೊನ್ನಾಗುವುದು. ಎಲ್ಲವೂ ಮಣ್ಣನೊಂದಿಗೆ ಬೆರೆತು ಗೊಬ್ಬರವಾಗುತ್ತದೆ. ಎಂದರು.

 8 ಲಕ್ಷ  ಉಳಿತಾಯ
ಸಾವಯವ ಕೃಷಿ ಮಾಡುತ್ತಿರುವುದರಿಂದಾಗಿ ರಾಸಾಯನಿಕ ಗೊಬ್ಬರಗಳಿಗಾಗಿ ವೆಚ್ಚ ಮಾಡುತ್ತಿದ್ದ ಹಣ ವಾಷರ್ಿಕ ಸುಮಾರು 6 ರಿಂದ 8 ಲಕ್ಷ ಉಳಿತಾಯವಾಗಿದೆಯಂತೆ ! ಆದರೆ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ವಾಷರ್ಿಕ 80 ಲಕ್ಷ ಆದಾಯ ಬರುತ್ತಿತ್ತು. ಅದು ಈಗ 20 ಲಕ್ಷದಷ್ಟು ಕುಸಿದಿದೆ. ನಿಧಾನವಾಗಿ ಆದಾಯದ ಸರಾಸರಿ ಪ್ರತಿ ವರ್ಷವೂ ಏರುತ್ತಿದೆ. ಖಚರ್ು ಕಡಿಮೆಯಾಗುತ್ತಿದೆ ಎಂದು ಹೇಳುವಾಗ ಶ್ರೀನಿವಾಸ್ ಅವರ ಮೊಗದಲ್ಲಿ ಸಂತಸದ ಕಳೆ ಮಿನುಗುತ್ತಿತ್ತು.
ರಾಸಾಯನಿಕ ಮುಕ್ತ ಏಕೆ ? 
ಗಿಡಗಳಿಗೆ ರಾಸಯನಿಕ ಗೊಬ್ಬರ, ಕೀಟ ನಾಶಕ ಬಳಸುವುದರಿಂದ ಅದನ್ನು ಆಹಾರವಾಗಿ ಬಳಸುವವರಿಗೆ ವಿಷ ಉಣಿಸಿದಂತಾಗುತ್ತದೆ. ಇದರಿಂದ ಜನತೆಯನ್ನು ಪಾರು ಮಾಡಲು, ಮುಂದಿನ ಪೀಳಿಗೆಗಾಗಿ ಅರೋಗ್ಯವಂತ ಮಣ್ಣನ್ನು ಉಳಿಸಲು ತಾನು ಕೈಲಾದ ಶ್ರಮ ಪಡುತ್ತಿರುವೆನು ಎಂದು ಅವರು ನುಡಿದರು.
ಗ್ಲಿರೀಸಿಡಿಯಾ-ಹೊಂಗೆಗಳಲ್ಲಿ ಆಸಕ್ತಿ 

ಅಪಾರ ಪ್ರಮಾಣದಲ್ಲಿ ಅಲ್ಪ ಅವಧಿಯಲ್ಲಿ ಹಸಿರೆಲೆಗಳನ್ನು ನೀಡಬಲ್ಲ ಗ್ಲಿರೀಸೀಡಿಯಾ ಮತ್ತು ಹೊಂಗೆ ಮರವನ್ನು ಹೊಲಗಳ ಬದುಗಳಲ್ಲಿ ಬೆಲೆಯುವ ಆಸಕ್ತಿ ಇವರದ್ದು. ಒಮ್ಮೆ ಗ್ಲಿರೀಸಿಡಿಯಾ ಬೀಜಗಳನ್ನು ಅರಸುತ್ತಾ ಶಿರಸಿಗೂ ಹೋಗಿದ್ದರೂ, ಬೀಜಗಳೇ ಸಿಗಲಿಲ್ಲ ಎಂದು ಬೇಸರಿಸಿದರು.
ಯಾರಿಗಾದರೂ ಗ್ಲಿರೀಸಿಡಿಯಾ ಬೀಜ ಬೇಕಾದಲ್ಲಿ ಸಂಪಕರ್ಿಸಿ- 83101 30887


ಶ್ರೀನಿವಾಸ್ ಅವರ ಮೊಬೈಲ್ : 9880727880
                          9860359626.

ಶುಕ್ರವಾರ, ಜುಲೈ 20, 2018

First jack fruit town in India - ഇന്ത്യയിലെ ആദ്യ ജാക്ക് പഴം പട്ടണം

                             

                കേരളത്തിലെ ജനശക്തിയുള്ള നഗരം!




                             എഴുതപ്പെട്ടത്: രവി, ഹോധൂർ, കൊടുഡഗ്. Karnataka. 


ഉറവിടം കന്നഡയാണ്. ഇതിന് മലയാളം ട്രാൻസ്ലേറ്റ്റ്റ് ടു മലയാളം ആണ്. പിശകുകളുമായി സഹകരിക്കാൻ വായനക്കാർക്ക് അഭ്യർത്ഥിക്കുക



വിദേശ രാജ്യങ്ങളെ ശ്രദ്ധാപൂർവം പിടികൂടാനുള്ള പുതിയ പരിശ്രമങ്ങൾക്ക് കേരളം പ്രശസ്തമാണ്. മാർച്ച് 21 ന് കേരള സംസ്ഥാനമായി കേരള സംസ്ഥാനമായി ഔദ്യോഗികമായി പ്രഖ്യാപിക്കപ്പെട്ടു. പിന്നീട് പല പരീക്ഷണങ്ങളും പരിശ്രമങ്ങളും കേരളം തുറന്നു. ഒരു താല്പര്യം ഉണ്ടെങ്കിൽ അവസരങ്ങൾ നേടാൻ ബാങ്കിന്റെ ഒരു കഥയുണ്ട്.


ഉത്കണ്ഠ സഹകരണമാണ്
ഈ പരിശ്രമം ഇപ്പോൾ മുറ്റത്ത് നടക്കുന്നു. സാധ്യമാകുന്ന ഇടങ്ങളിൽ, ജായ്ഫ്രറ്റ് ഫെസ്റ്റിവലുകൾ സംഘടിപ്പിക്കാറുണ്ട്. അവളുടെ വഴി മഞ്ഞക്കരു വളരാൻ ഒരു പുതിയ ശൈലിയിൽ പ്രചോദനം. കൂടാതെ, ജനസംഖ്യക്ക് ജങ്ക് മൂല്യത്തിന് നൂതന അവസരങ്ങളുണ്ട്. പുതിയ കണ്ടെത്തലുകൾ പുരോഗമിക്കുകയാണ്. സഹകരണസംഘങ്ങളുടെ സഹകരണത്തോടെ സംസ്ഥാന സഹകരണ വകുപ്പ് വഴി ഈ സ്കീം നടപ്പിലാക്കുന്നതിനാണ് ഈ പദ്ധതി ലക്ഷ്യമിടുന്നത്. ഈ രീതിയിൽ ദശലക്ഷക്കണക്കിന് വൃക്ഷങ്ങൾ സംരക്ഷിക്കാൻ പദ്ധതിയിട്ടിരിക്കുന്ന ഈ പദ്ധതിയുടെ കീഴിൽ, നിൽക്കുന്നതും ഏറ്റവും കൂടുതൽ പ്രയോജനപ്രദവുമായ മരങ്ങൾ വളരുന്നതിനും ഇത് ഉദ്ദേശിക്കുന്നു.


ആദ്യത്തെ ജെക്ഫ്രറ്റ് ടൗൺ
സമാനമായി, സഹകരണ ബാങ്കായ പട്ടയ്ക്കോട്, ഒരു പുതിയ പദ്ധതി ആരംഭിച്ചു. പഞ്ചായത്ത് തലത്തിൽ 11 വാർഡുകളിലായി 5,000 ജായ്ഫ്രറ്റ് പ്ലാന്റുകൾ സ്ഥാപിക്കാനാണ് ഉദ്ദേശിക്കുന്നത്. അടുത്ത മൂന്ന് വർഷത്തിനുള്ളിൽ രാജ്യത്തെ ആദ്യത്തെ ജായ്ഫ്രറ്റ് ടൗൺ നിർമ്മിക്കാൻ സ്വപ്നം കാണുമെന്ന് കൊടകോഡ് കോ-ഓപ്പറേറ്റീവ് ബാങ്ക് ചെയർമാൻ സുബ്രഹ്മണ്യം പറഞ്ഞു.


ലോക പരിസ്ഥിതി ദിനവുമായി ജൂൺ 5 ന് പഞ്ചായത്ത് പ്രോഗ്രാം ആരംഭിച്ചു. 500 തൈകൾ വിതരണം ചെയ്തു. ജനസംഖ്യയ്ക്ക് തൈകൾ വിതരണം ചെയ്യുന്നിടത്തെല്ലാം, വിലക്കയറ്റ തോതിൽ സസ്യങ്ങളെ സ്വതന്ത്രമായി വിമോചിതരാക്കുന്നു. കുറച്ചു വർഷങ്ങളിൽ കശുവണ്ടി, തേങ്ങ, മഞ്ഞൾ തുടങ്ങിയ ഫലവൃക്ഷങ്ങൾ നിർമ്മിക്കാൻ തീരുമാനിച്ചു. ഇതുകൂടാതെ, പ്രത്യേക സിൻഡ്രോറ varica പലിശ തൈകൾ നൽകാൻ കഠിനമായി പ്രവർത്തിക്കുന്നു.




5 ആയിരം മരവും
സംസ്ഥാന സർക്കാരിന്റെ കണക്കുകൾ പ്രകാരം കേരളത്തിലെ ആയിരക്കണക്കിന് സഹകരണ സംഘങ്ങൾ വർഷാവർഷം പതിനായിരക്കണക്കിന് ജാക്ക്ഫ്രൂട് മരങ്ങൾ കൃഷിചെയ്യണം. ഓരോ വർഷവും 10 മരങ്ങൾ നട്ടുപിടിപ്പിക്കാൻ സർക്കാർ ഉത്തരവിട്ടിട്ടുണ്ട്. എന്നാൽ, പാലിക്കോട് നഗരത്തിലെ സഹകരണ ബാങ്ക് അയ്യായിരത്തോളം മരങ്ങൾ നട്ടുപിടിപ്പിക്കാൻ തീരുമാനിച്ചു. സേവിംഗിന് കുറഞ്ഞത് 50 രൂപ മാത്രമാണ്. കഴിഞ്ഞ വർഷം ഇതേ ബാങ്കുകൾ 3,000 കറിപ്രായക്കാർക്ക് വിതരണം ചെയ്തു. തദ്ദേശീയ ഗസ്സാർതൽമിലെ ഹൈസ്കൂൾ അദ്ധ്യാപകനായ അബ്ബിൻ നായരുടെ നേതൃത്വത്തിൽ പ്രാദേശിക വീടുശാലകളിൽ അവർ വിദ്യാഭ്യാസം നേടിയിരുന്നു. മൊത്തത്തിൽ, പരിസ്ഥിതി ബോധത്തിലൂടെ ജനങ്ങളെ കൂടുതൽ ആധികാരികമാക്കാനുള്ളതാണ് പദ്ധതിയുടെ പ്രധാന ലക്ഷ്യം.
കേരള സംസ്ഥാനത്ത് ആരംഭിച്ച ഈ പുതിയ സംരംഭത്തിൽ, നിരവധി സഹകരണ ബാങ്കുകൾ അവരുടെ കൃഷിക്ക് വേണ്ടി പല വിളകളും ശേഖരിക്കുന്നുണ്ട്. സിന്ധുര, മുണ്ടൻ, ടെൻബറി (തേൻ ജാക്ക്) എന്നിവയുടെ തൈകൾക്ക് പ്രത്യേക പ്രാധാന്യം നൽകുന്നത്, വരും ദിവസങ്ങളിൽ ചുവന്ന നിറത്തിലുള്ള പ്രത്യേകതകളാണ്. വിത്തുപോലുള്ളവ ഉൾപ്പെടെയുള്ള വിവിധ ഇനം വാഴത്തോട്ടങ്ങളും ജനങ്ങൾക്ക് വിതരണം ചെയ്യാനാണ് പദ്ധതി.
കേരളത്തിലെ പല പഞ്ചായത്തുകളുടെയും വരുമാനത്തിന്റെ പ്രധാന വരുമാനമാണ് പാലക്കാട്. ജാക്കറ്റ് ഉല്പന്നങ്ങൾ തയ്യാറാക്കുന്ന നൂറുകണക്കിന് കുടുംബങ്ങൾ ഉണ്ട്. ജായ്ഫ്രറ്റ്, ജാക്കഫ് ഉൽപ്പന്നങ്ങൾ എന്നിവ വാങ്ങുന്നവർ ഇവിടെ എത്താറുണ്ട്. അവരുടെ ആവശ്യങ്ങൾ നിറവേറ്റാൻ, കേരളത്തിൽ ജാക്ക് ഫ്രൂട്ട് ഉൽപ്പന്നങ്ങൾ തയ്യാറാക്കിയിട്ടുണ്ട്.
ജനങ്ങളുടെ അസാധാരണമായ പിന്തുണ

എല്ലാവരും ഈ പഞ്ചായത്ത് സംരംഭത്തെ പിന്തുണയ്ക്കുന്നു. പഞ്ചായത്തിലെ ഹൈസ്കൂൾ രപ്രറി സെൽഫ് സർവീസ് അസോസിയേഷന്റെ വിദ്യാസമ്പന്നരും വിദ്യാസമ്പന്നരുമായ ജനങ്ങളുടെ ക്യാമ്പസുകളിൽ നൂറുകണക്കിന് മഞ്ഞക്കരു പ്ലാൻറുകളുണ്ട്. പഞ്ചായത്ത് പരിധിയിൽ 500 അങ്കു പ്ലാൻറുകൾ നടാം. കഴിഞ്ഞ വർഷം അവരുടെ പരിസരത്തിൽ 500 ലധികം കറിയുപ്പുകൾ വിത്ത് നട്ടുപിടിപ്പിച്ചതിലൂടെ ഈ വിദ്യാർത്ഥി തനതായ പ്രവർത്തനം നടത്തിയിട്ടുണ്ട്.

അറക്കാടഡ് കോ-ഓപ്പറേറ്റീവ് ബാങ്കിന്റെ പ്രസിഡന്റ് സുബ്രഹ്മണ്യം


നടപ്പിലാക്കിയ ചുമതല

എൻ എസ് എസ് വിദ്യാർത്ഥികളുടെ പ്രകടനം കേരളത്തിലെ ഈ പദ്ധതി മറ്റുള്ളവർക്ക് അനുയോജ്യമാണ്. രാജ്യത്ത് എല്ലായിടത്തും ഇത്തരം സംസ്ഥാനങ്ങളിൽ അത്തരം പ്രവർത്തനങ്ങൾ സ്വമേധയാ ഉള്ളതായിരിക്കണം. സർക്കാർ, വനംവകുപ്പ്, സംഘ് സ്ഥാപനങ്ങൾ, ജനങ്ങളുടെ പരിസ്ഥിതി സ്നേഹികൾ എന്നിവ ഹൃദയപൂർവം സഹകരിക്കേണ്ടതാണ്. അപ്പോൾ മാത്രമേ നമ്മുടെ പരിസ്ഥിതി നിലനിൽക്കും. അടുത്ത തലമുറയെ നയിക്കും. ജനസംഖ്യയുടെ വരുമാനത്തെ ആശ്രയിച്ച്. മഞ്ഞക്കരുതും കീടനാശിനികളും കൂടാതെ മഞ്ഞക്കരുതായി വളരുന്നതിനാലാണ് ജനങ്ങളുടെ ആരോഗ്യം വർദ്ധിക്കുന്നത്. ബോധപൂർവ്വമുള്ള പൗരന്മാർ ഇതേക്കുറിച്ച് ചിന്തിക്കുകയും അവരുടെ മാതൃനഗരത്തിലും ഗ്രാമത്തിലും പട്ടണത്തിലും ഈ മാതൃകാ പദ്ധതി നടപ്പിലാക്കുകയും വേണം.



                       ഗസ്സാർലാട്ട്മൽ ഹൈസ്ക്കൂൾ അധ്യാപകനായ അബ്ബിൻ